Tag: cinema

  • ಅನುಷ್ಕಾ ಶೆಟ್ಟಿ ಚಿತ್ರಕ್ಕೆ ಯಶ್ ತಾಯಿ ಪುಷ್ಪಾ ವಿತರಕಿ

    ಅನುಷ್ಕಾ ಶೆಟ್ಟಿ ಚಿತ್ರಕ್ಕೆ ಯಶ್ ತಾಯಿ ಪುಷ್ಪಾ ವಿತರಕಿ

    ಕೊತ್ತಲವಾಡಿ (Kothalavadi) ಚಿತ್ರದ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗ ಪ್ರವೇಶಿಸಿದ ರಾಕಿಂಗ್ ಸ್ಟಾರ್ ಯಶ್ (Yash) ಅವರ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arun Kumar) ಈಗ ವಿತರಣಾ ವಲಯಕ್ಕೆ ಅಡಿಯಿಟ್ಟಿದ್ದಾರೆ. ಯಶ್ ತಾಯಿಯ ಈ ನಡೆಯು ಸಿನಿ ಪ್ರಿಯರಿಗೆ ಅಚ್ಚರಿ ತಂದಿದೆ. ಒಂದೇ ಒಂದು ಸಿನಿಮಾ ಮಾಡಿರೋ ಪುಷ್ಪಾ, ವಿತರಣೆ ಹೇಗೆ ಮಾಡ್ತಾರೆ ಅನ್ನೋ ಕುತೂಹಲ ಕೂಡ ಮೂಡಿದೆ.

    PA ಪ್ರೊಡಕ್ಷನ್ಸ್ ಲಾಂಛನದಲ್ಲಿ ಥ್ರೂ ಶ್ರೀಧರ್ ಕೃಪಾ ಕಂಬೈನ್ಸ್ ಮೂಲಕ ಇದೇ ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ (Anushka Shetty) ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಘಾಟಿ (Ghaati) ಚಿತ್ರವನ್ನು ಪುಷ್ಪ ಅರುಣ್ ಕುಮಾರ್ ಅವರು ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 5 ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

    ಫಾಟಿ ಚಿತ್ರದ ಮೂಲಕ ಸಿನಿಮಾ ವಿತರಣೆ ಆರಂಭಿಸುತ್ತಿದ್ದೇವೆ. ಮುಂದೆ ಕೂಡ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳನ್ನು PA ಪ್ರೊಡಕ್ಷನ್ಸ್ ಮೂಲಕ ವಿತರಣೆ ಮಾಡುತ್ತೇವೆ. ಚಿತ್ರ ನಿರ್ಮಾಣಕ್ಕೆ ಬಂದಾಗ ತಾವು ತೋರಿದ ಪ್ರೀತಿಗೆ ಅನಂತ ಧನ್ಯವಾದ. ಈಗ ವಿತರಕಿಯಾಗಿ ಹೊಸ ಹೆಜ್ಜೆ ಇಡುತ್ತಿದ್ದೇನೆ. ತಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಪುಷ್ಪ ಅರುಣ್ ಕುಮಾರ್ ತಿಳಿಸಿದ್ದಾರೆ.

  • ಕೊಹ್ಲಿಯಿಂದ ಫೋಟೋಗೆ ಲೈಕ್ ಗಿಟ್ಟಿಸಿಕೊಂಡ ಹಾಲ್ಗೆನ್ನೆ ಬ್ಯೂಟಿಯ ಫಸ್ಟ್ ರಿಯಾಕ್ಷನ್

    ಕೊಹ್ಲಿಯಿಂದ ಫೋಟೋಗೆ ಲೈಕ್ ಗಿಟ್ಟಿಸಿಕೊಂಡ ಹಾಲ್ಗೆನ್ನೆ ಬ್ಯೂಟಿಯ ಫಸ್ಟ್ ರಿಯಾಕ್ಷನ್

    ವನೀತ್ ಕೌರ್.. (Avneet Kaur) ಈಕೆ ಹೇಳಿಕೊಳ್ಳುವಂಥಹ ಹಿಟ್ ಸಿನಿಮಾ ಕೊಟ್ಟ ನಟಿಯಲ್ಲ. ಆದರೆ ಡಾನ್ಸ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿರುವ ಪಂಜಾಬ್ ಬ್ಯೂಟಿ. ಹಾಲ್ಗೆನ್ನೆಯ ಈ ಚೆಲುವೆ ರಾತ್ರೋರಾತ್ರಿ ಹೆಡ್‌ಲೈನ್ಸ್ ಸುದ್ದಿ ಆಗ್ತಾರೆ. ಕಾರಣ ಈಕೆಯ ಇನ್‌ಸ್ಟಾ ಫೋಟೋಗೆ ವಿರಾಟ್ ಕೊಹ್ಲಿ (Virat Kohli) ಅಫಿಷಿಯಲ್ ಐಡಿಯಿಂದ ಲೈಕ್ ಬಂದಿರುತ್ತೆ.

    ಸಿಕ್ಕಾಪಟ್ಟೆ ಟ್ರೋಲ್ ಆದ ಬಳಿಕ ವಿರಾಟ್ ಪ್ರತಿಕ್ರಿಯಿಸಿ, ಇದು ಅವರ ಇನ್‌ಸ್ಟಾಗ್ರಾಂ ಹ್ಯಾಂಡಲ್ ಮಾಡುವ ವ್ಯಕ್ತಿಯ ಆಕ್ಸಿಡೆಂಟಲ್ ಕರಾಮತ್ ಅನ್ನೋದಾಗಿ ಸ್ಪಷ್ಟಪಡಿದ್ರು. ಆದರೆ ಈ ಆಕ್ಸಿಡೆಂಟ್ ಪ್ರಕ್ರಿಯೆಯ ಲಾಭ ಪಡೆದುಕೊಂಡಿದ್ದ ನಟಿ ಅವನೀತ್ ಕೌರ್. 4 ತಿಂಗಳ ಹಿಂದೆ ನಡೆದ ಆ ಘಟನೆ ಬಗ್ಗೆ ಫಸ್ಟ್‌ ರಿಯಾಕ್ಷನ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಮದರಾಸಿ ಟ್ರೈಲರ್‌ ರಿಲೀಸ್ – ಮಾಸ್ ಲುಕ್‌ನಲ್ಲಿ ಶಿವಕಾರ್ತಿಕೇಯನ್

    ತನ್ನ ಮುಂದಿನ ಚಿತ್ರ `ಲವ್ ಇನ್ ವಿಯೆಟ್ನಾಂʼ ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ನಿಮ್ಮ ಫೋಟೋಗೆ ಲೈಕ್‌ ಕೊಡ್ತಾರಲ್ಲ ಎಂಬ ಪ್ರಶ್ನೆಗೆ ನಾಚಿಕೆಯಿಂದಲೇ, ಮಿಲ್ತಾ ರಹೇ ಪ್ಯಾರ್, ಬಸ್. ಔರ್ ಕ್ಯಾ ಬೋಲೂ ಮೈʼ(ಪ್ರೀತಿ ಸಿಗ್ತಾನೆ ಇರುತ್ತೆ, ಇನ್ನೇನು ಹೇಳಲಿ) ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಮಂಗಳಾಪುರಂ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಗೌತಮಿ ನಾಯಕಿ

    ಒಟ್ನಲ್ಲಿ ಎಲ್ಲರಿಗೂ ಒಂದ್ ಟೈಂ ಬರುತ್ತೆ ಅಂತಾರಲ್ಲ ಹಾಗೆ ಅವನೀತ್ ಕೌರ್‌ಗೆ ಲಕ್ ಬಂದಿದೆ. ಆದರೆ ವಿರಾಟ್ ಕೊಹ್ಲಿ ಇನ್‌ಸ್ಟಾ ಮ್ಯಾನೇಜರ್ ಮಾಡಿರುವ ಎಡವಟ್ಟಿನಿಂದ ಕೊಹ್ಲಿ ಮೇಲೆ ಅನುಮಾನ ಪಡುವಂತಾಯ್ತು. ಅನುಮಾನದ ಬೆಂಕಿಯಲ್ಲಿ ಲಾಭ ಪಡೆದುಕೊಂಡಿದ್ದು ಮಾತ್ರ ಈ ಮಾದಕ ನಟಿ ಅವನೀತ್ ಕೌರ್.

  • ಮದರಾಸಿ ಟ್ರೈಲರ್‌ ರಿಲೀಸ್ – ಮಾಸ್ ಲುಕ್‌ನಲ್ಲಿ ಶಿವಕಾರ್ತಿಕೇಯನ್

    ಮದರಾಸಿ ಟ್ರೈಲರ್‌ ರಿಲೀಸ್ – ಮಾಸ್ ಲುಕ್‌ನಲ್ಲಿ ಶಿವಕಾರ್ತಿಕೇಯನ್

    ಮರನ್ ಸೂಪರ್ ಸಕ್ಸಸ್ ಬಳಿಕ ಶಿವಕಾರ್ತಿಕೇಯನ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಮದರಾಸಿ (Madharaasi). ಎ.ಆರ್ ಮುರುಗದಾಸ್ (A R Murugadas) ನಿರ್ದೇಶನದ ಈ ಚಿತ್ರದ ಟ್ರೈಲರ್‌ ರಿಲೀಸ್ ಆಗಿದೆ.

    ಆಕ್ಷನ್ ಪ್ಯಾಕ್ಡ್ ಟ್ರೈಲರ್‌ನಲ್ಲಿ ಶಿವಕಾರ್ತಿಕೇಯನ್ (Sivakarthikeyan) ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ ಉದ್ದಕ್ಕೂ ಬಂದೂಕು ಮತ್ತು ಸ್ಫೋಟದ ಸದ್ದೇ ಜೋರಾಗಿದೆ. ಕನ್ನಡತಿ ರುಕ್ಮಿಣಿ ವಸಂತ್ (Rukmini Vasanth), ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ಸಾಥ್ ಕೊಟ್ಟಿದ್ದಾರೆ. ಇದನ್ನೂ ಓದಿ: ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು

    ಪ್ರೀತಿ ಜೊತೆ ದ್ವೇಷ, ಪ್ರತೀಕಾರದ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೈಲರ್‌ ಕಟ್ ಮಾಡಲಾಗಿದೆ. ಕನ್ನಡದಲ್ಲಿಯೂ ಟ್ರೈಲರ್‌ ಬಿಡುಗಡೆಯಾಗಿದೆ. ವಿದ್ಯುತ್ ಜಮ್ವಾಲ್, ಬಿಜು ಮೆನನ್, ಶಬೀರ್ ಕಲ್ಲರಕ್ಕಲ್, ವಿಕ್ರಾಂತ್ ತಾರಾಬಳಗದಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.

  • ಟಾಕ್ಸಿಕ್ ಭರ್ಜರಿ ಆ್ಯಕ್ಷನ್ ಶುರು, ಹಾಲಿವುಡ್‌ನಿಂದ ಬಂದ್ರು ಜೆಜೆ ಪೆರ‍್ರಿ

    ಟಾಕ್ಸಿಕ್ ಭರ್ಜರಿ ಆ್ಯಕ್ಷನ್ ಶುರು, ಹಾಲಿವುಡ್‌ನಿಂದ ಬಂದ್ರು ಜೆಜೆ ಪೆರ‍್ರಿ

    ಶ್ (Yash) ನಟಿಸಿ ನಿರ್ಮಿಸುತ್ತಿರುವ ಗ್ಲೋಬಲ್ ಚಿತ್ರ ಟಾಕ್ಸಿಕ್ (Toxic Cinema) ತಂಡ ಸಾಹಸ ಚಿತ್ರೀಕರಣವನ್ನು ಪ್ರಾರಂಭಿಸಿದೆ. ವಿಶೇಷ ಅಂದ್ರೆ ವಿಶ್ವಶ್ರೇಷ್ಠ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಜೆಜೆ ಪೆರ‍್ರಿ (JJ Perry) ಈ ಚಿತ್ರಕ್ಕಾಗಿ ಮೊದಲ ಬಾರಿ ಭಾರತಕ್ಕೆ ಬಂದಿದ್ದಾರೆ.

    ಮುಂಬೈನಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಏಕಕಾಲದಲ್ಲಿ ತಯಾರಾಗ್ತಿರುವ ಚಿತ್ರವಿದು. ನಟ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಜೆಜೆ ಪೆರ‍್ರಿ ವರ್ಕಿಂಗ್‌ಸ್ಕಿಲ್‌  ರಿವೀಲ್ ಆಗಿದೆ.

    ಲೆಜೆಂಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ‍್ರಿ ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ಸ್ ಟೀಮ್ ಜೊತೆಗೂಡಿ ಕೆಲಸ ಮಾಡ್ತಿರೋದೇ ಇಲ್ಲಿನ ವಿಶೇಷ. ಭಾರತೀಯರನ್ನೇ ಬಳಸಿಕೊಂಡು ಹಿಂದಿನ ಸ್ಟಂಟ್ಸ್‌ಗಳಿಗಿಂತ ವಿಭಿನ್ನ ಪ್ರಯೋಗ ಮಾಡಲಿದ್ದಾರಂತೆ ಜೆಜೆ ಪೆರ‍್ರಿ. ಭರ್ತಿ 45 ದಿನಗಳ ಕಾಲ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ನೂತನ ದಾಖಲೆ ಬರೆಯಲಿದೆ ಟಾಕ್ಸಿಕ್. ಹಾಲಿವುಡ್‌ಗೆ ಸೆಡ್ಡು ಹೊಡೆಯುವಂತಹ ಸ್ಟಂಟ್ಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ ರಾಕಿಂಗ್ ಸ್ಟಾರ್ ಹಾಗೂ ಯಶ್ ಗೀತು ಮೋಹನ್ ದಾಸ್ ತಂಡ. ಯಶ್ ಒಡೆತನದ ಮಾನ್‌ಸ್ಟರ್ ಮೈಂಡ್ ಹಾಗೂ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಬಿಗ್ ಬಜೆಟ್ ಸಿನಿಮಾ ಟಾಕ್ಸಿಕ್.

  • ರಂಗಭೂಮಿ ಕಲಾವಿದ ಕೆಜಿಎಫ್‌ ನಟ ದಿನೇಶ್ ಮಂಗಳೂರು ನಿಧನ

    ರಂಗಭೂಮಿ ಕಲಾವಿದ ಕೆಜಿಎಫ್‌ ನಟ ದಿನೇಶ್ ಮಂಗಳೂರು ನಿಧನ

    ಬೆಂಗಳೂರು: ರಂಗಭೂಮಿ ಕಲಾವಿದ, ಚಿತ್ರ ನಟ, ಕಲಾ ನಿರ್ದೆಶಕರಾಗಿದ್ದ ದಿನೇಶ್ ಮಂಗಳೂರು (Dinesh Mangaluru) ನಿಧನರಾಗಿದ್ದಾರೆ.

    ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ನಟರಾಗಿದ್ದ ದಿನೇಶ್ ಮಂಗಳೂರು ಇಂದು ಬೆಳಗಿನ ಜಾವ ಕುಂದಾಪುರದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕನ್ನಡ ಸಿನಿಮಾ ಹಾಡಿನಲ್ಲಿ ಹೀರೋಯಿನ್ ಹೊಕ್ಕಳಿನ ಮೇಲೆ ಹಣ್ಣಿನ ಸಲಾಡ್ ಮಾಡಲಾಗುತ್ತಿತ್ತು: `ಆ’ ನಟಿಯ ಹೇಳಿದ್ಯಾರಿಗೆ?

    ಒಂದು ವರ್ಷದಿಂದ ಅನಾರೋಗ್ಯದಿಂದ ಇವರು ಬಳಲುತ್ತಿದ್ದರು. ಇಂದು ಸಂಜೆ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದ್ದು, ನಾಳೆ ಸುಮನಹಳ್ಳಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

    ರಿಕ್ಕಿ, ಉಳಿದವರು ಕಂಡಂತೆ, ಕೆಜಿಎಫ್ ಚಾಪ್ಟರ್‌ 1, ಕೆಜಿಎಫ್‌ ಚಾಪ್ಟರ್‌ 2, 777 ಚಾರ್ಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ದಿನೇಶ್ ಮಂಗಳೂರು ಅಭಿನಯಿಸಿದ್ದರು.

  • ಡಾಲಿ ಹುಟ್ಟುಹಬ್ಬಕ್ಕೆ ಜಿಂಗೋ ಲುಕ್ ಪೋಸ್ಟರ್ ರಿಲೀಸ್

    ಡಾಲಿ ಹುಟ್ಟುಹಬ್ಬಕ್ಕೆ ಜಿಂಗೋ ಲುಕ್ ಪೋಸ್ಟರ್ ರಿಲೀಸ್

    ಡಾಲಿ ಪಿಚ್ಚರ್ಸ್ ಮತ್ತು ತ್ರಿಶೂಲ್ ವಿಜನರಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ (Dolly Dhananjay) ಅಭಿನಯದ ಜಿಂಗೋ (Jingo) ಚಿತ್ರದ ಸೆಕೆಂಡ್ ಲುಕ್ ಪೋಸ್ಟರ್ ಅನ್ನು ನಟ ಧನಂಜಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಬಿಡುಗಡೆಯಾದ ಚಿತ್ರದ ಅನೌನ್ಸ್ಮೆಂಟ್ ವಿಡಿಯೋಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಚರ್ಚೆಯನ್ನು ಸೃಷ್ಟಿಸಿತು, ಡಾಲಿ ಧನಂಜಯ ಅವರ ಜಿಂಗೋ ಮೋನೋಲಾಗ್ ಮತ್ತು ಅದರ ಜೊತೆಗಿನ ಸಂಗೀತ ನರ ನರ ಜಿಂಗೋ ಜನರ ಮೆಚ್ಚುಗೆ ಪಡೆಯಿತು.

    ಪ್ರೇಕ್ಷಕರ ಅಗಾಧ ಪ್ರತಿಕ್ರಿಯೆಯಿಂದ ಉತ್ಸಾಹಗೊಂಡ ಚಿತ್ರ ನಿರ್ಮಾಪಕರು ಕಥೆಯ ವ್ಯಾಪ್ತಿ ಮತ್ತು ಚಿತ್ರದ ಕ್ಯಾನ್ವಾಸ್ ಅನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ. ಸಣ್ಣ ಪಟ್ಟಣದ ಕಥೆಯಾಗಿ ಆರಂಭವಾದದ್ದು ಇದೀಗ ಚಿತ್ರ ತನ್ನ ಕ್ಯಾನ್ವಾಸ್ ಅನ್ನು ವಿಸ್ತರಿಸಿಕೊಂಡಿದ್ದು ಒಂದು ಅಪ್ಪಟ ದೊಡ್ಡ ಪರದೆ ವೀಕ್ಷಣೆಗೆ ಸರಿಹೊಂದುವಂತೆ ದೃಶ್ಯಾವಳಿಗಳನ್ನು ಹೆಣೆಯಲಾಗಿದೆ.  ಇದನ್ನೂ ಓದಿ: ದರ್ಶನ್ ಬಳ್ಳಾರಿ ಜರ್ನಿ – ಆ.30ರಂದು ಅರ್ಜಿ ವಿಚಾರಣೆ

    ನಮಗೆ ಸಿಕ್ಕ ಪ್ರತಿಕ್ರಿಯೆ ನಮ್ಮನ್ನು ದೊಡ್ಡದಾಗಿ ಯೋಚಿಸಲು ಪ್ರೇರೇಪಿಸಿದೆ. 2026ರಲ್ಲಿ ವೀಕ್ಷಕರಿಗೆ ವಿಶಿಷ್ಟ ಚಿತ್ರರಂಗದ ಅನುಭವವನ್ನು ನೀಡುತ್ತದೆ. ಪೊಲಿಟಿಕಲ್ ಸಟೈರ್, ಕಾಮಿಡಿ, ಆಕ್ಷನ್, ಥ್ರಿಲ್ಲರ್ ಎಲ್ಲ ಅಂಶಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ಅತ್ಯುತ್ತಮ ಮನರಂಜನೆ ಕೊಡಬೇಕು ಎಂಬುದೇ ನಮ್ಮ ಗುರಿ. ಸದ್ಯ ಕನ್ನಡ, ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಅತ್ಯುತ್ತಮ ನಟರ ತಾರಾ ಬಳಗವಿರುತ್ತದೆ ಎಂದು ನಿರ್ಮಾಣ ತಂಡ ತಿಳಿಸಿದೆ. ಇದನ್ನೂ ಓದಿ: ಯಶ್ ತಾಯಿ ಪುಷ್ಪಗೆ ದೀಪಿಕಾ ದಾಸ್ ತಿರುಗೇಟು: ಪುಷ್ಪಮ್ಮ ಹೇಳಿದ್ದೇನು?

    ಈಗ ಬಿಡುಗಡೆಯಾಗಿರುವ ಪೋಸ್ಟರ್ ಅಲ್ಲಿ ತುಂಬಾ ವಿವರಗಳಿವೆ. ಮೇಲ್ನೋಟಕ್ಕೆ ಒಂದು ಫನ್ ಪೋಸ್ಟರ್ ಥರ ಕಾಣುತ್ತೆ, ಸೂಕ್ಷ್ಮವಾಗಿ ನೋಡುತ್ತಾ ಹೋದಂತೆ ತೆರೆದುಕೊಳ್ಳುತ್ತೆ. ಸಿನಿಮಾ ಕೂಡ ಇದೇ ಇರುತ್ತದೆ. ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಇದರಲ್ಲಿ Takeaway ಗಳಿರುತ್ತದೆ, ಒಟ್ಟಿನಲ್ಲಿ 2026 ಕ್ಕೆ ಒಂದು ಮಜಾ ಚಿತ್ರಕ್ಕೆ ಪ್ರೇಕ್ಷಕರು ಸಜ್ಜಾಗಲಿ ಎನ್ನುತ್ತಾರೆ ನಿರ್ದೇಶಕ ಶಶಾಂಕ್ ಸೋಗಾಲ್.

  • ತಮಿಳುನಾಡಲ್ಲಿ ವಿಜಯ್ ದಳಪತಿ ರಣಕಹಳೆ

    ತಮಿಳುನಾಡಲ್ಲಿ ವಿಜಯ್ ದಳಪತಿ ರಣಕಹಳೆ

    ಳಪತಿ ವಿಜಯ್ ತಮಿಳುನಾಡಿನಲ್ಲಿ (Tamil Nadu) ರಣಕಹಳೆ ಊದಿದ್ದಾರೆ. 2026ರ ಚುನಾವಣೆಗಾಗಿ (Election) ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದ್ದು, ಮಧುರೈನಲ್ಲಿ ಟಿವಿಕೆ ಪಕ್ಷದ ಸಮಾವೇಶಕ್ಕೆ ಹರಿದು ಬಂದ ಜನಸಾಗರ ನೋಡಿ ನಟ ವಿಜಯ್ (Vijay) ಭಾವುಕರಾಗಿದ್ದಾರೆ.

    ಜನ ನಾಯಗನ್ (Jana Nayagan) ಸಿನಿಮಾ ಮುಗಿಸಿ ರಾಜಕೀಯ ರಣರಂಗದಲ್ಲಿ ಸೆಣಸಾಡಲು ಪಣ ತೊಟ್ಟು ನಿಂತಿದ್ದಾರೆ. ವಿಜಯ್ ದಳಪತಿ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ ಪೂರ್ತಿಯಾಗಿ ರಾಜಕೀಯ ರಂಗದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಈಗಾಗಲೇ ಘೋಷಿಸಿದ್ದಾರೆ. ವಿಜಯ್ ತಮ್ಮ ಕೊನೆಯ ಸಿನಿಮಾ ಜನ ನಾಯಗನ್ ಮುಗಿಸಿ ಕಂಪ್ಲೀಟ್ ಆಗಿ ರಾಜಕೀಯದಲ್ಲೇ ತೊಡಗಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು

    ಸದ್ಯ ತಮ್ಮ ಕೊನೆಯ ಸಿನಿಮಾ ಜನ ನಾಯಗನ್ ಚಿತ್ರದ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ವಿಜಯ್ ದಳಪತಿ ಸದ್ಯದಲ್ಲಿಯೇ ಸಿನಿಮಾದ ಶೂಟಿಂಗ್ ಮುಗಿಸಿಕೊಡಲಿದ್ದಾರೆ. ಅಂದಹಾಗೆ ಜನ ನಾಯಗನ್ ಚಿತ್ರ 2026ರ ಸಂಕ್ರಾಂತಿಗೆ ಅಭಿಮಾನಿಗಳ ಮುಂದೆ ದರ್ಶನ ನೀಡಲಿದೆ. ಈ ನಿಟ್ಟಿನಲ್ಲಿ ಒಂದು ಕಡೆ ಸಿನಿಮಾ ತಂಡ ತಯಾರಿಯನ್ನ ಮಾಡಿಕೊಂಡಿದೆ. ಇದರ ಜೊತೆ ಜೊತೆಗೆ ತಮ್ಮ ಪಕ್ಷ ಕಟ್ಟುವ ಕಾರ್ಯದಲ್ಲಿ ವಿಜಯ್ ಸದಾ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಮಧುರೈನ ಸಮಾವೇಶದಲ್ಲಿ ವಿಜಯ್ ಗುಡುಗಿಗೆ ತಮಿಳುನಾಡು ರಾಜಕೀಯ ಕ್ಷೇತ್ರದಲ್ಲಿ ಕಂಪನ ಶುರುವಾಗಿದೆ.

    ಮಧುರೈನಲ್ಲಿ ನಡೆದ ಸಮಾವೇಶಕ್ಕೆ ಜನ ಸಾಗರವೇ ಹರಿದು ಬಂದಿದೆ. ವಿಜಯ್ ವೇದಿಕೆ ಮೇಲೆ ಆಡಿದ ಒಂದೊಂದು ಮಾತಿಗೆ ವಿಜಯ್ ಅಭಿಮಾನಿ ಬಳಗ ಹಾಗೂ ತಮಿಳು ನಾಡಿನ ಜನ ರಣಕೇಕೆ ಹಾಕಿ ಕುಣಿದಿದೆ. 234 ಕ್ಷೇತ್ರದಲ್ಲೂ ನಾನೇ ಸ್ಪರ್ಧಿಸಿದ ಹಾಗೆ ಎನ್ನುವ ಮಾತಿಗೆ ಸಮ್ಮತ ನೀಡಿದ್ದಾರೆ ತಮಿಳುನಾಡಿನ ಜನ. ವಿಜಯ್ ದಳಪತಿ ಸಿನಿಮಾರಂಗದಿಂದ ರಾಜಕೀಯ ರಂಗಕ್ಕೆ ಪ್ರವೇಶ ಮಾಡಲು ಸಖತ್ ರೆಸ್ಪಾನ್ಸ್ ಸಿಕ್ತಿದೆ. ಅಲ್ಲದೇ ತಮ್ಮ ನಾಯಕನ ಮೂಲಕ ಮತ್ತಷ್ಟು ಅಭಿವೃದ್ದಿ ಹಾಗೂ ಬದಲಾವಣೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ ಜನ.

    ವಿಜಯ್ ದಳಪತಿ ತಮ್ಮ ಸಿನಿಮಾ ಮೂಲಕ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅವರ ಅಭಿಮಾನಿ ಬಳಗ ಹಾಗೂ ಅವರ ಮೇಲಿನ ಅಭಿಮಾನ ಮತ್ತೊಮ್ಮೆ ಪ್ರೂವ್ ಆಗಿದೆ. ಮಧುರೈನ ಸಮಾವೇಶಕ್ಕೆ ಲಕ್ಷಾಂತರ ಜನ ಸೇರಿದ್ದಾರೆ. ಈ ಅಪಾರ ಜನಸಂಖ್ಯೆಯನ್ನ ನೋಡಿ ವೇದಿಕೆ ಮೇಲೆ ವಿಜಯ್ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಈ ವೇಳೆ ತಮಿಳುನಾಡಿನ ಜನರಿಗೆ ಕೆಲವೊಂದಿಷ್ಟು ಮಾತುಗಳನ್ನ ಕೊಟ್ಟಿದ್ದಾರೆ. ತಮ್ಮ ಪಕ್ಷ ಸ್ವತಂತ್ರವಾಗಿರಲಿದೆ ಯಾವುದೇ ಪಕ್ಷದೊಂದಿದೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

  • ಪ್ರಶಾಂತ್ ನೀಲ್ ವಿಸ್ಮಯ ಲೋಕ – 15 ಕೋಟಿ ವೆಚ್ಚದ ಸೆಟ್

    ಪ್ರಶಾಂತ್ ನೀಲ್ ವಿಸ್ಮಯ ಲೋಕ – 15 ಕೋಟಿ ವೆಚ್ಚದ ಸೆಟ್

    ಸ್ಟಾರ್ ಇಮೇಜ್ ಇರುವ ಸ್ಟಾರ್ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ (PrashanthNeel) ಚಿತ್ರ ಮಾಡ್ತಿದ್ದಾರೆ ಅಂದ್ರೆ ಅದು ನೂರು ಕೋಟಿ ಬಜೆಟ್ ಮೀರುವುದಂತೂ ನಿಶ್ಚಿತ. ಇದೀಗ ಪ್ರಶಾಂತ್ ನೀಲ್ ಅಡ್ಡದಿಂದ ನಯಾ ನ್ಯೂಸ್ ಬಂದಿದೆ. ಮುಂಬರುವ ಚಿತ್ರಕ್ಕಾಗಿ ಪ್ರಶಾಂತ್ ನೀಲ್ 15 ಕೋಟಿ ರೂ. ವೆಚ್ಚದಲ್ಲಿ ಕೃತಕ ಮನೆ ಅಂದರೆ ಸೆಟ್ ಅನ್ನ ನಿರ್ಮಿಸಿದ್ದಾರಂತೆ.

    ಬರೋಬ್ಬರಿ 15 ಕೋಟಿ ರೂ. ವೆಚ್ಚ ಅಂದ್ರೆ ಯೋಚಿಸಿ ಆ ಸೆಟ್ ಹೇಗಿರಬೇಡ. ಇಷ್ಟು ದುಡ್ಡಿನಲ್ಲಿ ಸೈಟ್ ಖರೀದಿಸಿ ಮನೆಯನ್ನೇ ಕಟ್ಟಿಸಿಕೊಳ್ಳಬಹುದಿತ್ತು. ಹೀಗಿರುವಾಗ ಸೆಟ್‌ಗಾಗಿ ಇಷ್ಟೊಂದು ಕೋಟಿ ಖರ್ಚು ಮಾಡಬೇಕಾ ಎಂದು ಆಶ್ಚರ್ಯವಾಗೋದು ಖಂಡಿತ. ಆದರೆ ಪ್ರಶಾಂತ್ ನೀಲ್ ಇಷ್ಟ ಪಡುವ ಮ್ಯಾಜಿಕಲ್ ಲೋಕವೇ ಬೇರೆ. ಅವರ ಕಲ್ಪನಾ ಲಹರಿಗೆ ತಕ್ಕಂತೆ ಬಣ್ಣ, ಅದಕ್ಕೆ ತಕ್ಕಂತೆ ಸಲಕರಣೆ ಹಾಗೂ ವಿಂಗಡನೆ ನೈಜ ಬೆಳಕು ಇರಬೇಕು. ಇದೇ ಕಾರಣಕ್ಕೆ ಮುಂಬರುವ ಜೂ.ಎನ್‌ಟಿಆರ್ ಚಿತ್ರಕ್ಕಾಗಿ ಹೈದ್ರಾಬಾದ್‌ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಒಂದು ಮನೆಯ ಸೆಟ್ ನಿರ್ಮಿಸಲಾಗಿದೆ.

    ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ (JR.NTR) ನಟನೆಯ ಈ ಚಿತ್ರಕ್ಕೆ `ಡ್ರ್ಯಾಗನ್’ (Dragon) ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೆಲ ಭಾಗಗಳಲ್ಲಿ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆದಿದೆ. ಇದೀಗ ಎರಡನೇ ಶೆಡ್ಯೂಲ್ ಚಿತ್ರೀಕರಣಕ್ಕಾಗಿ ನಾಯಕನ ಪಾತ್ರದಲ್ಲಿ ಬರುವ ಮನೆಗಾಗಿ ಇಷ್ಟೊಂದು ಬಿಗ್ ಬಜೆಟ್‌ನಲ್ಲಿ ಸೆಟ್ ಹಾಕಲಾಗಿದೆ.

    ಪ್ರತಿಯೊಂದರಲ್ಲೂ ಪರ್ಟಿಕ್ಯುಲರ್ ಇರುವ ಪ್ರಶಾಂತ್ ನೀಲ್, ನಾಯಕನ ಪಾತ್ರಕ್ಕೆ ಬೇಕಾದ ಸೆಟ್ ಮನೆಯ ವಿನ್ಯಾಸವನ್ನೂ ಹೇಳಿ ಮಾಡಿಸಿದ್ದಾರಂತೆ. ಇಲ್ಲಿಯೇ ಎರಡನೇ ಶೆಡ್ಯೂಲ್ ಶೂಟಿಂಗ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇದೇ ಭಾಗದಲ್ಲಿ ನಟಿ ರುಕ್ಮಿಣಿ ವಸಂತ್ ಕೂಡ ಜಾಯಿನ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವುದರ ಕುರಿತೂ ಚಿತ್ರತಂಡದಿಂದ ಅಧಿಕೃತ ಘೋಷಣೆ ಇಂದಿಗೂ ಹೊರಬಂದಿಲ್ಲ.

    15 ಕೋಟಿ ರೂ. ವೆಚ್ಚದಲ್ಲಿ ಸೆಟ್ ನಿರ್ಮಿಸಿದ ಪ್ರೊಡಕ್ಷನ್ ಕಂಪನಿ ಯಾವುದು ಗೊತ್ತೇ? ಅದುವೇ ಮೈತ್ರಿ ಮೂವಿ ಮೇಕರ್ಸ್. ಇದೇ ಬ್ಯಾನರ್ ಹಿಂದೆ ಅದ್ಧೂರಿ ಪುಷ್ಪ ಸಿರೀಸ್‌ಗಳನ್ನ ನಿರ್ಮಿಸಿತ್ತು. ಪುಷ್ಪ ಮುಂದಿನ ಸೀಕ್ವೆಲ್ ಆರಂಭವಾಗೋದ್ರ ಮಧ್ಯದ ಗ್ಯಾಪ್‌ನಲ್ಲಿ ಡ್ರ್ಯಾಗನ್ ಚಿತ್ರವನ್ನು ತರುತ್ತಿದೆ ಈ ಸಂಸ್ಥೆ. ಅಂದಹಾಗೆ ಈ ಚಿತ್ರ 250 ಕೋಟಿ ರೂ. ಬಜೆಟ್‌ನ ಚಿತ್ರ ಎನ್ನಲಾಗುತ್ತಿದೆ. ಇದೀಗ 15 ಕೋಟಿ ಮನೆಯೇ ಆಶ್ಚರ್ಯ ಮೂಡಿಸುತ್ತಿದೆ. ಮುಂದೆ ಇನ್ನೆಷ್ಟು ಅದ್ಭುತ ಕಥೆಗಳು ಕಿವಿಗೆ ಬೀಳುತ್ತವೋ ಎಂದು ಕಾದು ನೋಡ್ಬೇಕಿದೆ.

  • ಬರ್ತ್‌ ಡೇ ಸೆಲೆಬ್ರೇಷನ್ – ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟ ಡಾಲಿ ಧನಂಜಯ್!

    ಬರ್ತ್‌ ಡೇ ಸೆಲೆಬ್ರೇಷನ್ – ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟ ಡಾಲಿ ಧನಂಜಯ್!

    ಸ್ಟಾರ್ ನಟರು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಇಷ್ಟಪಡೋದುಂಟು. ಆದರೆ ಕೆಲವು ಮುಖ್ಯ ಕಾರಣಕ್ಕೆ ಸ್ಟಾರ್‌ಗಳು ಅಭಿಮಾನಿಗಳೊಂದಿಗೆ (Fans) ಹುಟ್ಟುಹಬ್ಬ ಆಚರಿಸಿಕೊಳ್ಳೋದನ್ನ ಮಿಸ್ ಮಾಡ್ಕೊಳ್ತಾರೆ. ಇದೀಗ ಡಾಲಿ ಧನಂಜಯ್ (Daali Dhananjay) ಕೂಡ ಈ ಬಾರಿ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕಾರಣವನ್ನೂ ತಿಳಿಸಿದ್ದಾರೆ ನಟ ರಾಕ್ಷಸ ಧನಂಜಯ್.

     

    View this post on Instagram

     

    A post shared by Daali Dhananjaya (@dhananjaya_ka) 

    ಆಗಸ್ಟ್ 23ಕ್ಕೆ ಧನಂಜಯ್ ಹುಟ್ಟುಹಬ್ಬ (Birthday) ಆಚರಿಸಿಕೊಳ್ತಿದ್ದಾರೆ. ಆದರೆ ಈ ಬಾರಿ ಧನಂಜಯ್ ಅಭಿಮಾನಿಗಳೊಂದು ಆಚರಿಸಿಕೊಳ್ತಿಲ್ಲ. ಕೆಲಸದ ನಿಮಿತ್ತ ಹೊರಗಡೆ ಹೋಗುವ ಕಾರಣಕ್ಕೆ ಸಂಭ್ರಮಾಚರಣೆಯನ್ನ ನಿಮ್ಮೊಂದಿಗೆ ಮಾಡುತ್ತಿಲ್ಲ ಎಂದಿದ್ದಾರೆ ಡಾಲಿ. ಅಂದಹಾಗೆ ಇದೀಗ ಧನಂಜಯ್ ಐತಿಹಾಸಿಕ ಹಲಗಲಿ (Halagali) ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.

    ಇನ್ನು 666 ಸಿನಿಮಾದಲ್ಲಿ ಶೂಟಿಂಗ್ ನಿಮಿತ್ತ ಬೇರೆ ಊರಿನಲ್ಲಿ ಇರುವ ಸಾಧ್ಯತೆ ಇದೆ. ಹೀಗಾಗಿ ಧನಂಜಯ್ ಈ ಬಾರಿ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಈ ಬಾರಿ ಬಹುತೇಕ ಸ್ಟಾರ್‌ಗಳು ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಅವರ ಸಾಲಿಗೆ ಇದೀಗ ಡಾಲಿ ಧನಂಜಯ್ ಕೂಡ ಸೇರಿದ್ದಾರೆ.

  • ಕೈಯ್ಯಾರೆ ಮಣ್ಣಿನ ಮಡಿಕೆ ಮಾಡಿದ ಕಾಂತಾರ ಕನಕವತಿ ರುಕ್ಮಿಣಿ ವಸಂತ್

    ಕೈಯ್ಯಾರೆ ಮಣ್ಣಿನ ಮಡಿಕೆ ಮಾಡಿದ ಕಾಂತಾರ ಕನಕವತಿ ರುಕ್ಮಿಣಿ ವಸಂತ್

    ದಿನದಿಂದ ದಿನಕ್ಕೆ ಸಪ್ತಸಾಗರದಾಚೆ ಎಲ್ಲೋ ಪುಟ್ಟಿಯ ಖ್ಯಾತಿ ಹೆಚ್ಚುತ್ತಿದೆ. ರುಕ್ಮಿಣಿ ವಸಂತ್ (Rukmini Vasanth) ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಬಹುಭಾಷೆಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರುಕ್ಮಿಣಿ ವಸಂತ್ ಇದೀಗ ಜೇಡಿ ಮಣ್ಣಿನಿಂದ ಮಡಿಕೆ ಮಾಡಿದ್ದಾರೆ.

    ಮಣ್ಣು ಹಿಡಿದು ತಾವೇ ಕೈಯ್ಯಾರೆ ಮಡಿಕೆ ಅಚ್ಚಿನಲ್ಲಿ ಮಣ್ಣು ಹಾಕಿ ಅದಕ್ಕೊಂದು ಹಾರ್ಟ್‌ಶೇಪ್ ಕೊಟ್ಟಿದ್ದಾರೆ. ಸುಂದರವಾದ ಬೌಲ್ ಸಿದ್ಧಪಡಿಸಿದ್ದಾರೆ. ಸತತ ಪ್ರಯತ್ನದ ಬಳಿಕ ಮಡಿಕೆ ತಯಾರಾದಂತಿದೆ. ಹೀಗಾಗಿ ಆ ವೀಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರುಕ್ಮಿಣಿ ವಸಂತ್ ಅದಕ್ಕೊಂದು ಅರ್ಥಪೂರ್ಣ ಕ್ಯಾಪ್ಷನ್ ಕೊಟ್ಟಿದ್ದಾರೆ. `ನಿಧಾನವಾಗಿ ಸಿಗುವ ಹರ್ಷ ಹೀಗೆ ಸುಂದರವಾಗಿ ಇರುತ್ತದೆ ಅಲ್ಲವೇ’ ಎಂದಿದ್ದಾರೆ.

    ವಿಶೇಷ ಮಣ್ಣಿನಿಂದ ರುಕ್ಮಿಣಿ ತಾವೇ ಕೈಯಾರೆ ಮಾಡಿಕೊಂಡಿರುವ ಮಡಿಕೆಯು ಬಳಸಲು ಯೋಗ್ಯವೋ ಇಲ್ಲವೋ, ಆದರೆ ನೋಡಲು ಅದ್ಭುತವಾಗಿದೆ. ಮಣ್ಣು ತಂದು ತಾವೇ ಕುಳಿತು ಸಿದ್ಧಮಾಡಿ ಅದನ್ನ ಬಾಕ್ಸ್ನಲ್ಲಿ ಪ್ಯಾಕ್ ಮಾಡುವವರೆಗೂ ಸಂಪೂರ್ಣ ವೀಡಿಯೋವನ್ನ ರುಕ್ಮಿಣಿ ಶೇರ್ ಮಾಡಿದ್ದಾರೆ. ಇದೀಗ ಸ್ಟಾರ್ ನಟರ ಚಿತ್ರಗಳ ನಾಯಕಿಯಾಗಿರುವ ರುಕ್ಮಿಣಿ ಕಾಂತಾರ 1 ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಟಾಕ್ಸಿಕ್ ಚಿತ್ರದಲ್ಲೂ ನಟಿಸಿರುವ ವದಂತಿ ಇದೆ. ಒಟ್ಟಿನಲ್ಲಿ ಅರ್ಥಪೂರ್ಣ ಸಂದೇಶದ ಜೊತೆ ಸರಳ ವೀಡಿಯೋಗಳ ಮೂಲಕವೇ ರುಕ್ಮಿಣಿ ವಸಂತ್ ಜನಮೆಚ್ಚುಗೆ ಪಡೆದ ನಟಿ.