Tag: cinema

  • ಕೆಡಿ ಸೆಟ್‌ನಲ್ಲಿ ಕಿಚ್ಚ ಸುದೀಪ್: ಕೆಡಿ ವರ್ಸಸ್ ವಿಲನ್

    ಕೆಡಿ ಸೆಟ್‌ನಲ್ಲಿ ಕಿಚ್ಚ ಸುದೀಪ್: ಕೆಡಿ ವರ್ಸಸ್ ವಿಲನ್

    ಧ್ರುವ ಸರ್ಜಾ (Dhruva Sarja) ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಭರ್ಜರಿಯಾಗಿ ಶೂಟಿಂಗ್ ಮಾಡುತ್ತಿರುವ ಸಿನಿಮಾ ಕೆಡಿ. ಈ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ (Kichcha Sudeep) ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈ ಬಗ್ಗೆ ಕಿಚ್ಚ ಸುದೀಪ್ ಅವರನ್ನ ಕೇಳಿದಾಗ್ಲೂ ಸಣ್ಣ ಸ್ಮೈಲ್ ಕೊಟ್ಟು ವಿಷ್ಯ ಬದಲಾಯಿಸಿದ್ದರು. ಆ ಎಲ್ಲಾ ಪ್ರಶ್ನೆಗಳಿಗೂ, ಅಂತೆ ಕಂತೆಗೂ ಈಗ ಉತ್ತರ ಸಿಕ್ಕಿದೆ.

    ಕೆಡಿ ಸಿನಿಮಾದ (KD Cinema) ಅತಿಥಿ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ಸೆಟ್‌ನಲ್ಲಿ ಧ್ರುವ ಸರ್ಜಾ ಜೊತೆಗಿನ ಫೋಟೋಗಳು ಈಗ ವೈರಲ್ ಆಗಿವೆ. ಸಿನಿಮಾದಲ್ಲಿ ಸುದೀಪ್ ಪಾತ್ರವೇನು..? ಯಾವ ರೀತಿಯಾದ ಪಾತ್ರ ಎನ್ನುವ ಬಗ್ಗೆ ಚಿತ್ರತಂಡ ಸದ್ಯದಲ್ಲಿಯೇ ಮಾಹಿತಿ ಹಂಚಿಕೊಳ್ಳಲಿದೆ. ಸದ್ಯ ಕಿಚ್ಚ ಸುದೀಪ್ ಕೆಡಿ ಸಿನಿಮಾದಲ್ಲಿ ನಟಿಸಿರುವ ಪಾತ್ರದ ಬಗ್ಗೆ ಕೌತುಕತೆ ಮೂಡಿಸಿದೆ.

    ಪ್ರೇಮ್ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿ ಬರಲಿದ್ದು, ಇದೇ ವರ್ಷದಲ್ಲಿ ಸಿನಿಮಾವನ್ನ ತೆರೆಗೆ ತರುವ ಪ್ಲ್ಯಾನ್‌ನಲ್ಲಿದೆ ಚಿತ್ರತಂಡ. ವಿಲನ್ ಸಿನಿಮಾದ ನಂತರ ಮತ್ತೆ ಪ್ರೇಮ್ ಜೊತೆ ಕೆಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅತಿಥಿ ಪಾತ್ರ ನಿಭಾಯಿಸಿದ್ದಾರೆ. ಸದ್ಯದಲ್ಲಿಯೇ ಕಿಚ್ಚನ ಪಾತ್ರ ಪರಿಚಯವಾಗಲಿದೆಯಂತೆ.‌

  • ಪತ್ರ ಬರೆದು ಅಭಿಮಾನಿಗಳಿಗೆ ಶಾಕ್ ಕೊಟ್ಟ ಅನುಷ್ಕಾ ಶೆಟ್ಟಿ!

    ಪತ್ರ ಬರೆದು ಅಭಿಮಾನಿಗಳಿಗೆ ಶಾಕ್ ಕೊಟ್ಟ ಅನುಷ್ಕಾ ಶೆಟ್ಟಿ!

    ತ್ತೀಚೆಗಷ್ಟೇ ಘಾಟಿ ಸಿನಿಮಾದ (Ghaati Movie) ಮೂಲಕ ಸೌಂಡ್ ಮಾಡಿದ್ದ ಅನುಷ್ಕಾ ಶೆಟ್ಟಿ (Anushka Shetty) ಇದೀಗ ಸೋಶಿಯಲ್ ಮೀಡಿಯಾ ಫಾಲೋವರ್ಸ್‍ಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಿಂದ (Social Media) ದೂರಾಗುವ ಬಗ್ಗೆ ಹ್ಯಾಂಡ್‍ರೈಟ್ ಲೆಟರ್ ಬರೆದಿದ್ದು, ಕಾರಣ ಏನು ಅನ್ನೋದನ್ನೂ ಅವರೇ ಹಂಚಿಕೊಂಡಿದ್ದಾರೆ.

    ಬೇರೆ ನಟಿಯರಿಗೆ ಹೋಲಿಸಿದರೆ ಅನುಷ್ಕಾ ಶೆಟ್ಟಿ ಸೋಶಿಯಲ್ ಮೀಡಿಯಾಗಳಿಂದ ಅಂತರ ಕಾಯ್ದುಕೊಂಡೇ ಬಂದವರು. ಸಿನಿಮಾಗೆ ಸಂಬಂಧಪಟ್ಟ ಮಾಹಿತಿಯನ್ನಷ್ಟೇ ಆಗಾಗ ಹಂಚಿಕೊಳ್ಳುತ್ತಿದ್ದರು. ವೈಯಕ್ತಿಕ ಪೋಸ್ಟ್ ಹಾಕುವುದು ವಿರಳಾತಿವಿರಳ. ಇದೀಗ ಸೋಶಿಯಲ್ ಮೀಡಿಯಾದಿಂದ ದೂರಾಗುವ ಕುರಿತು ಮಾಹಿತಿ ಹಂಚಿಕೊಂಡಿರುವ ಅನುಷ್ಕಾ “ಸೋಶಿಯಲ್ ಮೀಡಿಯಾದಿಂದ ಸ್ವಲ್ಪ ದೂರ ಸರಿಯುತ್ತಿದ್ದೇನೆ. ಮೊಬೈಲ್ ಸ್ಕ್ರೋಲಿಂಗ್ ಹೊರತಾಗಿಯೂ ಜಗತ್ತಿನ ಜೊತೆ ಸಂಪರ್ಕ ಸಾಧಿಸಬೇಕಾಗಿದೆ.” ಶೀಘ್ರದಲ್ಲೇ ಮತ್ತೆ ನಿಮ್ಮೊಂದಿಗೆ ಸೇರಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಸೊಸೆಗೆ ವರದಕ್ಷಿಣೆ ಕಿರುಕುಳ ಆರೋಪ – ಎಸ್.ನಾರಾಯಣ್, ಪತ್ನಿ, ಪುತ್ರನಿಗೆ ನೋಟಿಸ್

    ಸಾಮಾನ್ಯವಾಗಿ ಅನುಷ್ಕಾ ಸಿನಿಮಾದ ಹೊರತಾಗಿ ಹೆಚ್ಚು ಸುದ್ದಿಯಾಗೋದಿಲ್ಲ. ಇದೀಗ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದೂ ಅಪರೂಪವಾಗಿದೆ. ಮತ್ತೆ ಪ್ರಭಾಸ್ ಜೊತೆ ಜೋಡಿಯಾಗಿ ನಟಿಸುವ ಸುದ್ದಿ ಕೇಳಿಬರುತ್ತಿದೆ. ಆದರೆ ಅಂಥಹ ಯಾವ ಪ್ರಾಜೆಕ್ಟ್ ಕೂಡ ಮುನ್ನಲೆಗೆ ಬಂದಿಲ್ಲ. ಇದೀಗ ಸೋಶಿಯಲ್ ಮೀಡಿಯಾದಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುವ ನಿರ್ಧಾರವನ್ನು ಅವರು ಘೋಷಿಸಿದ್ದಾರೆ. ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

  • ವಿನಯ್ ಜೊತೆ ರಮ್ಯಾ ಸುತ್ತಾಟ ಎಂದವರಿಗೆ ತಿರುಗೇಟು ಕೊಟ್ಟ ಮೋಹಕತಾರೆ

    ವಿನಯ್ ಜೊತೆ ರಮ್ಯಾ ಸುತ್ತಾಟ ಎಂದವರಿಗೆ ತಿರುಗೇಟು ಕೊಟ್ಟ ಮೋಹಕತಾರೆ

    ಮೋಹಕತಾರೆ ನಟಿ ರಮ್ಯಾ (Ramya) ಅಮೆರಿಕದಲ್ಲಿ ಫುಲ್ ಮಸ್ತಿ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ನಡೆಯುವ ನಾವಿಕ ಕಾರ್ಯಕ್ರಮಕ್ಕೆ ಈ ಬಾರಿ ನಟಿ ರಮ್ಯಾ ಅತಿಥಿಯಾಗಿ ಹೋಗಿದ್ದಾರೆ. ಸಮಾರಂಭದ ಬಿಡುವಿನ ವೇಳೆ ಅಮೆರಿಕದ (America) ಬ್ಯೂಟಿಫುಲ್ ಲೊಕೇಶನ್‌ನಲ್ಲಿ ಸುತ್ತಾಟ ನಡೆಸಿದ್ದಾರೆ. ಈ ಬಾರಿಯ ನಾವಿಕ ಸಮಾರಂಭಕ್ಕೆ ರಮ್ಯಾ ಜೊತೆ ನಟ ವಿನಯ್ ರಾಜ್‌ಕುಮಾರ್ (Vinay Rajkumar) ಕೂಡ ಹೋಗಿದ್ದಾರೆ. ವಿಶೇಷ ಅಂದ್ರೆ ಪುನೀತ್ ರಾಜ್‌ಕುಮಾರ್ ಕಿರಿಯ ಪುತ್ರಿ ವಂದಿತಾ ಕೂಡಾ ಇವರ ಜೊತೆಗಿದ್ದಾರೆ.

    ಅಮೆರಿಕದಲ್ಲಿ ಮೂವರೂ ಎಂಜಾಯ್ ಮಾಡ್ತಿರುವ ಫೋಟೋಗಳನ್ನ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡ್ಕೊಂಡಿದ್ದು, ಫೋಟೋಗಳ ಜೊತೆಗೆ ಅದಕ್ಕೆ ಕ್ಯಾಪ್ಷನ್ ಹಾಕಿರುವ ರಮ್ಯಾ `ನಾನು ಹಾಗೂ ಬೆಸ್ಟ್ ಕಂಪನಿ’ ಎಂದು ವಿನಯ್ ರಾಜ್‌ಕುಮಾರ್ ಮತ್ತು ವಂದಿತಾ ಪುನೀತ್ ರಾಜ್‌ಕುಮಾರ್ ಹೆಸರನ್ನು ಮೆನ್ಷನ್ ಮಾಡಿದ್ದಾರೆ. ರಮ್ಯಾ ಹಂಚಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ್ದವು. ನಟಿ ರಮ್ಯಾ ಫೋಟೋಗಳಿಗೆ ಹಲವರು ಡೇಟಿಂಗ್‌ನಲ್ಲಿ ಇದ್ದಾರೆ ಎಂದು ಬರೆದುಕೊಂಡಿದ್ದರು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

    ತಮ್ಮ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ರಮ್ಯಾ `ನೀವು ತುಂಬಾ ತಮಾಷೆ ಮಾಡುತ್ತಿದ್ದೀರಾ.. ನನಗೆ ಸಹೋದರ ಸಮಾನರು ವಿನಯ್ ರಾಜ್‌ಕುಮಾರ್. ನಿಮ್ಮ ಕಲ್ಪನೆ, ಮಾತುಗಳಿಗೆ ಹಿಡಿತವಿರಲಿ’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರಮ್ಯಾ ವಿನಯ್ ರಾಜ್‌ಕುಮಾರ್ ಚಿಕ್ಕಪ್ಪ ಹಾಗೂ ದೊಡ್ಡಪ್ಪ ಅವರ ಜೊತೆಗೆ ಸಿನಿಮಾಗಳಲ್ಲಿ ನಾಯಕಿಯಾಗಿ ಪಾತ್ರವನ್ನ ಮಾಡಿದ್ದಾರೆ. ಅವರಿಬ್ಬರ ಮಧ್ಯೆ ಡೇಟಿಂಗ್ ಎನ್ನುವ ಯೋಚನೆ ಮಾಡುವವರಿಗೆ ಖಡಕ್ ರಿಪ್ಲೈ ಕೊಟ್ಟಿದ್ದಾರೆ ನಟಿ ರಮ್ಯಾ.

  • ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ದೈಜಿ ಟೀಸರ್

    ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ದೈಜಿ ಟೀಸರ್

    ಮ್ಮ ಅಮೋಘ ಅಭಿನಯದಿಂದ ಜನಮನಗೆದ್ದಿರುವ ನಟ ರಮೇಶ್ ಅರವಿಂದ್ (Ramesh Aravind) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ ದೈಜಿ (Daiji) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ತಮ್ಮ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟೀಸರ್ (Teaser) ಬಿಡುಗಡೆ ನಂತರ ದೈಜಿ ಚಿತ್ರತಂಡದವರು ಮಾಧ್ಯಮದವರ ಜೊತೆಗೆ ಮಾತನಾಡಿದರು.

    ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ನಿರ್ಮಾಪಕ ರವಿ ಕಶ್ಯಪ್, ಹತ್ತು ವರ್ಷಗಳ ಹಿಂದೆ ನಾನು, ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಈ ಚಿತ್ರದ ಬಗ್ಗೆ ಹೇಳಿದ್ದೆ. ಈಗ ಕಾಲ ಕೂಡಿ ಬಂದಿದೆ. ಇದು ವಿದೇಶದಲ್ಲಿ ನಾನು ಕಂಡಿರುವ ನೈಜ ಘಟನೆ ಆಧರಿತ ಚಿತ್ರ. ಇದನ್ನು ನಾನು ಅಂದುಕೊಂಡಂತೆ ತೆರೆಗೆ ತಂದಿರುವ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಧನ್ಯವಾದ. ಇನ್ನೂ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇಲ್ಲದಂತೆ ಮೂಡಿಬಂದಿರುವ ನಮ್ಮ ದೈಜಿ ಚಿತ್ರವನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ತರುತ್ತೇವೆ ಎಂದರು.

    ಸಂಖ್ಯಾಶಾಸ್ತ್ರದ ಪ್ರಕಾರ ಮೂರು ಅಂಕಿಗೂ, ನನಗೂ ಹಾಗೂ ಈ ಚಿತ್ರಕ್ಕೂ ನಂಟಿದೆ. ಹೇಗೆಂದರೆ, ಇದು ನನ್ನ ನಿರ್ದೇಶನದಲ್ಲಿ ರಮೇಶ್ ಅರವಿಂದ್ ಅವರು ನಾಯಕರಾಗಿ ನಟಿಸಿರುವ ಮೂರನೇ ಸಿನಿಮಾ. ನಟಿ ರಾಧಿಕಾ ನಾರಾಯಣ್ ಅವರ ಜೊತೆಗೂ ಮೂರನೇ ಸಿನಿಮಾ. ನನ್ನ ಹಾಗೂ ನಿರ್ಮಾಪಕರ ಮೂರನೇ ಕಾಂಬಿನೇಶನ್ ನ ಚಿತ್ರವೂ ಹೌದು.(ಒಂದು ಕಿರುಚಿತ್ರ). ಹೇಗೆ ಮೂರರ ನಂಟನ್ನು ಸಾಕಷ್ಟು ಉದಾಹರಿಸಬಲ್ಲೆ. ನಿರ್ಮಾಪಕರು ವಿದೇಶದಲ್ಲಿ ತಾವು ಕಂಡ ನೈಜ ಘಟನೆಯನ್ನು ನನಗೆ ಹೇಳಿದರು. ಅವರು ಹೇಳಿದ ಈ ಕಥೆಯೇ ಈ ಚಿತ್ರಕ್ಕೆ ಸ್ಪೂರ್ತಿ. ನಂತರ ಈ ಕಥೆಗೆ ರಮೇಶ್ ಅರವಿಂದ್ ಅವರೆ ಸೂಕ್ತ ಎನಿಸಿ, ಅವರಿಗೆ ಕಥೆ ಹೇಳಿದಾಗ, ಅವರು ನಟಿಸಲು ಒಪ್ಪಿಕೊಂಡಿದ್ದು ಬಹಳ ಖುಷಿಯಾಯಿತು. ಸೂರ್ಯ ಎಂಬ ಪಾತ್ರದಲ್ಲಿ ರಮೇಶ್ ಅವರು ಕಾಣಿಸಿಕೊಂಡಿದ್ದಾರೆ. ರಾಧಿಕಾ ನಾರಾಯಣ್ ಅವರು ಭೂಮಿ ಪಾತ್ರದಲ್ಲಿ ಹಾಗೂ ರಮೇಶ್ ಅವರ ತಮ್ಮನಾಗಿ ನಟ ದಿಗಂತ್ ಗಗನ್ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ದೈಜಿ ಎಂದರೆ ಪ್ರೇತಾತ್ಮಗಳ ದೈವ ಎಂದರ್ಥ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಟ್ರೇಲರ್ ಸಹ ಬರಲಿದ್ದು, ವರ್ಷದ ಕೊನೆ ಅಥವಾ ನೂತನ ವರ್ಷದ ಆರಂಭಕ್ಕೆ ದೈಜಿ ನಿಮ್ಮ ಮುಂದೆ ಬರಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದರು. ಇದನ್ನೂ ಓದಿ:  ಅಮೆರಿಕದಲ್ಲಿ ವಿನಯ್ & ವಂದಿತಾ ಜೊತೆ ರಮ್ಯಾ ಸುತ್ತಾಟ

     

    ಹುಟ್ಟು – ಸಾವು ಬಾಳಿನಲ್ಲಿ ಎರಡು ಕೊನೆಗಳು ಎಂಬ ಸಾಲಿದೆ. ಆದರೆ ಇವೆರಡರ ಮಧ್ಯೆ ಏನಿದೆ? ಇವೆರಡರ ಮಧ್ಯೆ ಪ್ರೀತಿ ಇದೆ. ಒಂದು ವೇಳೆ ಸಾವೇ ಕೊನೆಯಾಗದಿದ್ದರೆ ಏನಿರುತ್ತದೆ? ಅದರ ಆಚೆಗೆ ಒಂದು ದುಷ್ಟ ಶಕ್ತಿ ಇರುತ್ತದೆ. ಆ ಶಕ್ತಿ ಈ ಪ್ರೀತಿಯನ್ನು ಹೊತ್ತುಕೊಂಡು ಹೊಗುತ್ತದೆ. ಇದೇ ನಾವು ಸಾಮಾನ್ಯ ಹಾರರ್ ಚಿತ್ರಗಳಲ್ಲಿ ಕಾಣುವುದು. ಆದರೆ ನಿರ್ದೇಶಕ ಆಕಾಶ್ ಶ್ರೀವತ್ಸ ಈ ರೀತಿಯ ಹಾರಾರ್ ಸಿನಿಮಾ ಮಾಡಿಲ್ಲ. ಈವರೆಗೂ ನಾನು ಸಾಕಷ್ಟು ಹಾರರ್ ಸಿನಿಮಾ ನೋಡಿದ್ದೇನೆ. ಆದರೆ ಈ ರೀತಿ ಕಥೆ ನಾನು ನೋಡಿಲ್ಲ. ಅಂತಹ ಚಿತ್ರ ಮಾಡಿದ್ದಾರೆ ನಿರ್ದೇಶಕ ವತ್ಸ ಅವರು. ನಾನು ಬಾಲಚಂದರ್ ಅವರಂತಹ ಹೆಸರಾಂತ ನಿರ್ದೇಶಕರ ಜೊತೆಗೆ ಹತ್ತು ಸಿನಿಮಾ ಮಾಡಿದ್ದೇನೆ. ಮುಂದೆ ವತ್ಸ ಅವರ ಜೊತೆಗೂ ಇದೇ ರೀತಿ ಮಾಡುತ್ತೇನೆ. ಇನ್ನೂ, ನಿರ್ಮಾಪಕ ರವಿ ಕಶ್ಯಪ್ ಅವರ ಸಿನಿಮಾ ಪ್ರೀತಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ರಾಧಿಕಾ ನಾರಾಯಣ್ ಅವರಂತೂ ಮಹಾನಟಿ. ದಿಗಂತ್ ಅವರ ಲವಲವಿಕೆ ನನಗೆ ಬಹಳ ಇಷ್ಟ. ಈ ಚಿತ್ರದಲ್ಲಿ ವಿದೇಶದ ಪ್ರಸಿದ್ದ ಕಲಾವಿದರೊಂದಿಗೂ ನಟಿಸಿದ್ದೇನೆ. ಆದಷ್ಟು ಬೇಗ ದೈಜಿ ಚಿತ್ರವನ್ನು ತೆರೆಯ ಮೇಲೆ ನೋಡಲು ಕಾತುರನಾಗಿದ್ದೇನೆ ಎಂದು ರಮೇಶ್ ಅರವಿಂದ್ ಹೇಳಿದರು.

    ಭೂಮಿ ಪಾತ್ರದಲ್ಲಿ ನಟಿಸಿರುವುದಾಗಿ ನಟಿ ರಾಧಿಕಾ ನಾರಾಯಣ್ ಹಾಗೂ ಗಗನ್ ಪಾತ್ರದಲ್ಲಿ ಅಭಿನಯಿಸಿರುವಿದಾಗಿ ದಿಗಂತ್ ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ಬಿ.ಎಂ.ಗಿರಿರಾಜ್, ಬರಹಗಾರ ಅಭಿಜಿತ್ ಹಾಗೂ ಕಾಸ್ಟಿಂಗ್ ಡೈರೆಕ್ಟರ್ ಸುನಯನ ಸುರೇಶ್ ಮುಂತಾದರ ದೈಜಿ ಬಗ್ಗೆ ಮಾತನಾಡಿದರು. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಕಲನವಿರುವ ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಅವರೆ ಸಂಕಲನ ಕಾರ್ಯ ಮಾಡಿದ್ದಾರೆ.

  • ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್

    ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್

    ಹಿರಿಯ ನಟ ರಮೇಶ್ ಅರವಿಂದ್ (Ramesh Aravind) ಅಭಿನಯದ 106ನೇ ಸಿನಿಮಾ ದೈಜಿ (Daiji) ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್ ರಿಲೀಸ್ ಇವೆಂಟ್ ಬಳಿಕ ನಟ ರಮೇಶ್ ಅರವಿಂದ್ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ ಹಿರಿಯ ನಟ ಸಾಹಸಸಿಂಹ ವಿಷ್ಣುವರ್ಧನ್ (Actor Vishnuvardhan) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಬಗ್ಗೆ ಹಾಗೂ ಸಮಾಧಿ ನೆಲಸಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ವಿಷ್ಣು ಸರ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೀನಿ. ಅವರಿಗೆ ಡಾಕ್ಟರೇಟ್ ಬಂದಾಗ ನಾನು ಹೇಳಿದ್ದು ಒಂದೇ. ಅವರಿಗೆ ಡಾಕ್ಟರೇಟ್ ಕೊಡೋಕೆ ಒಂದು ಕಾರಣವಲ್ಲ, ನೂರು ಕಾರಣಗಳಿವೆ ಎಂದಿದ್ದೆ. ನೂರು ಸಿನಿಮಾ ಮಾಡಿದ ಅವರಿಗೆ ನೂರು ಕಾರಣ ಇವೆ. ಅವರ ಕೆಲಸಗಳು, ಅವರು ಮಾಡಿದ ಯೋಚನೆಗಳು ನಮಗೆ ಮುಖ್ಯ. ಅವರ ಸ್ಮಾರಕ ಅನ್ನೋದು ಅಭಿಮಾನಿಗಳಿಗೆ ಸಾಮೂಹಿಕ ನೆನಪು. ಅಲ್ಲಿ ಆಗಲ್ಲ ಅಂದಾಗ ಸರ್ಕಾರ ಮೈಸೂರಿನಲ್ಲಿ ಪರ್ಫೆಕ್ಟ್ ಆಗಿ ಮಾಡಿಕೊಟ್ಟಿದೆ. ಮತ್ತೆ ಸ್ಮಾರಕ ಸಿಗುತ್ತೆ ಅಂತಾ ಕೇಳಿಪಟ್ಟೆ. ಏನಾದರೂ ಆಗಲಿ ಗಂಭೀರವಾಗಿ ಆಗಲಿ. ವಿಷ್ಣು ಸರ್ ಅಂದ್ರೆ ಗಾಂಭೀರ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ವಿಷ ಕೊಡಿ ಎಂದ ದರ್ಶನ್: ರಮೇಶ್ ಅರವಿಂದ್ ಹೇಳಿದ್ದೇನು?

    ವಿಷ್ಣುವರ್ಧನ್ ಅವರೊಟ್ಟಿಗೆ ಸಿನಿಮಾ ಮಾಡಿರುವ ನಟ ರಮೇಶ್ ಅರವಿಂದ್, ಸಾಹಸ ಸಿಂಹ ಅವರ ಬಗ್ಗೆ ಹಲವಾರು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ದಿನವೇ ತಮ್ಮ ನಟನೆಯ `ದೈಜಿ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

  • ದರ್ಶನ್ ಆ ನಿರ್ಧಾರ ಮಾಡ್ತಾರೆ ಅಂದ್ರೆ ಅದೆಷ್ಟು ನೊಂದಿರಬೇಡ: ಆಪ್ತ ತರುಣ್ ಸುಧೀರ್ ಬೇಸರ

    ದರ್ಶನ್ ಆ ನಿರ್ಧಾರ ಮಾಡ್ತಾರೆ ಅಂದ್ರೆ ಅದೆಷ್ಟು ನೊಂದಿರಬೇಡ: ಆಪ್ತ ತರುಣ್ ಸುಧೀರ್ ಬೇಸರ

    ಕೊಲೆ ಆರೋಪಿ, ನಟ ದರ್ಶನ್ ಈ ಸಲ ಕೋರ್ಟ್‌ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ವೇಳೆ ಜಡ್ಜ್ ಮುಂದೆ ವಿಷ ಕೇಳಿ ಆಶ್ಚರ್ಯಕ್ಕೀಡುಮಾಡಿದ್ದರು. ದರ್ಶನ್ ನಡೆ ಆಪ್ತರಿಗೆ ಆಶ್ಚರ್ಯ ಉಂಟು ಮಾಡಿದೆ. ಹೀಗಾಗಿ ದರ್ಶನ್ ಸ್ಥಿತಿಗೆ ಮರುಕ ವ್ಯಕ್ತಪಡಿಸುತ್ತಿದೆ ಅವರ ಆಪ್ತ ಬಳಗ. ಇದೀಗ ನಿರ್ದೇಶಕ ತರುಣ್ ಸುಧೀರ್ ಮಾತನಾಡಿ ದರ್ಶನ್ ತುಂಬಾ ಸ್ಟ್ರಾಂಗ್ ವ್ಯಕ್ತಿತ್ವದವರು. ಅಂಥವರೇ ಹೀಗೆ ವಿಷ ಕೇಳ್ತಾರೆ ಅಂದ್ರೆ ಅವರು ಎಷ್ಟು ನೊಂದಿರಬೇಡ ಎಂದಿದ್ದಾರೆ.

    ದರ್ಶನ್ ಜೊತೆ ಈಗಾಗ್ಲೇ ಸಿನಿಮಾ ಮಾಡುವುದರ ಜೊತೆ ಆಪ್ತ ವಲಯದಲ್ಲಿದ್ದವರು ನಿರ್ದೇಶಕ ತರುಣ್ ಸುಧೀರ್. ಇದೀಗ ದರ್ಶನ್ ಸ್ಥಿತಿಗೆ ಬೇಸರವ್ಯಕ್ತಪಡಿಸಿ ಮಾತನಾಡಿರುವ ತರುಣ್, ದರ್ಶನ್ ಈ ಸ್ಥಿತಿ ತಮಗೆ ನೋವು ತಂದಿದೆ ಎಂದಿದ್ದಾರೆ. ದರ್ಶನ್ ತುಂಬಾ ಸ್ಟ್ರಾಂಗ್ ಇರೋವ್ರು, ಅವರೇ ಹೀಗೆ ಯೋಚನೆ ಮಾಡ್ತಾರೆ ಅಂದ್ರೆ ಅಲ್ಲಿ ಅವರಿಗೆ ಎಷ್ಟು ಕಷ್ಟ ಆಗಿರಬೇಡ, ಅವರೆಷ್ಟು ನೊಂದಿರಬೇಡ. ದರ್ಶನ್ ಆಪಾದಿತ ಅಷ್ಟೇ, ಅಪರಾಧಿ ಅಲ್ಲ. ಬೇಸಿಕ್ ಅವಶ್ಯಕತೆಗಳನ್ನ ಪೂರೈಸಬೇಕು. ನಾನು ಚೌಕ ಸಿನಿಮಾಕ್ಕಾಗಿ ಸಾಕಷ್ಟು ದಿನಗಳ ಕಾಲ ಜೈಲ್‌ನಲ್ಲೇ ಚಿತ್ರೀಕರಣ ಮಾಡಿದ್ದೇನೆ. ಅಲ್ಲಿ ಹೇಗಿರುತ್ತೆ ಅಂತ ನೋಡಿದ್ದೀನಿ. ಅಲ್ಲಿ ಎಲ್ಲಾ ಪ್ರಿಸನರ್ಸ್‌ಗೆ ಅವರದ್ದೇ ಆದ ಫೆಸಿಲಿಟಿ ಕೊಡಲೇಬೇಕು ಅಂತ ಹ್ಯೂಮನ್ ರೈಟ್ಸ್ ಕಡೆಯಿಂದ ಇದೆ. ಅದನ್ನ ಯಾರೂ ಕಿತ್ತುಕೊಳ್ಳೋದಕ್ಕಾಗಲ್ಲ. ಅದನ್ನೂ ಮೀರಿ ಏನೋ ಆಗಿದೆ ಅಂದ್ರೆ ನನಗೂ ಅದು ನೋವು ತಂದುಕೊಡುತ್ತಿದೆ ಎಂದಿದ್ದಾರೆ ತರುಣ್ ಸುಧೀರ್.

    ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾಗಿರುವ ಕಾರಣಕ್ಕೆ ದರ್ಶನ್ ಮತ್ತೆ ಜೈಲಲ್ಲಿದ್ದಾರೆ. ಕಳೆದ ಬಾರಿ ದರ್ಶನ್‌ಗೆ ರಾಜಾತಿಥ್ಯ ಪಡೆದುಕೊಂಡಿದ್ದಕ್ಕೆ ಈ ಸಲ ಅವರ ಮೇಲೆ ಭಾರಿ ನಿಗಾ ಇಡಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಮಂಗಳವಾರ ಸೆಷನ್ಸ್ ಕೋರ್ಟ್‌ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ದರ್ಶನ್, ನ್ಯಾಯಾಧೀಶರ ಮುಂದೆ ತಮಗೆ ವಿಷ ಕೊಡುವಂತೆ ಆದೇಶ ಮಾಡಿ ಎಂದು ಅಳಲು ತೋಡಿಕೊಂಡಿದ್ದರು. ನನ್ನ ಬಟ್ಟೆಗಳು ಕೊಳಕಾಗಿದೆ. ಫಂಗಸ್ ಆಗಿದೆ, ಹೀಗಾಗಿ ವಿಷ ಕೊಡಲು ಆದೇಶಿಸಿ ಎಂದು ಕೇಳಿಕೊಂಡಿದ್ದರು. ಈ ವಿಚಾರಕ್ಕೆ ದರ್ಶನ್ ಆಪ್ತರು ಬೇಸರಿಸಿಕೊಂಡಿದ್ದಾರೆ.

  • ಕರಾವಳಿಯ ಮತ್ತೊಂದು ಕಥನ `ದಿಂಸೋಲ್’ ಪೋಸ್ಟರ್ ರಿಲೀಸ್

    ಕರಾವಳಿಯ ಮತ್ತೊಂದು ಕಥನ `ದಿಂಸೋಲ್’ ಪೋಸ್ಟರ್ ರಿಲೀಸ್

    ‘ದಿಂಸೋಲ್’ ಹೀಗೊಂದು ವಿಭಿನ್ನ ಟೈಟಲ್‌ನ ಅದ್ದೂರಿ ಸಿನಿಮಾ ರೆಡಿಯಾಗುತ್ತಿದೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಿನಿಮಾದ ಭರ್ಜರಿ ಪೋಸ್ಟರ್ ರಿಲೀಸ್ ಆಗಿತ್ತು. ಇದೀಗ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಖತ್ ಇಂಟ್ರೆಸ್ಟಿಂಗ್ ಆಗಿದೆ. ನಾಗೇಂದ್ರ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ದಿಂಸೋಲ್ ಕರಾವಳಿಯ ಸಂಸ್ಕೃತಿ ಬಗ್ಗೆ ಇರುವ ಸಿನಿಮಾವಾಗಿದೆ. ಈಗಾಗಲೇ ಕರಾವಳಿ ಸಂಸ್ಕೃತಿಯ ಸೊಡಗನ್ನು ಸಾರುವ ಅನೇಕ ಸಿನಿಮಾಗಳು ಬರ್ತಿವೆ. ಇದೀಗ ದಿಂಸೋಲ್ ಕೂಡ ಅದೇ ಲಿಸ್ಟ್‌ಗೆ ಸೇರಿಕೊಂಡಿದೆ.

    ದಿಂಸೋಲ್ ರಥಾಕಿರಣ್ ನಾಯನಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ. ನಾಯಕಿಯಾಗಿ ಶಿವಾನಿ ರೈ ನಟಿಸುತ್ತಿದ್ದಾರೆ. ಈ ಮೊದಲು ಅಭಿರಾಮಚಂದ್ರ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ದಿಂಸೋಲ್ ಮೂಲಕ ಒಂದಾಗಿ ತೆರೆಮೇಲೆ ಬರುತ್ತಿದ್ದಾರೆ. ಇನ್ನೂ ಸಿನಿಮಾದ ಪ್ರಮುಖ ಪಾತ್ರದಲ್ಲಿ ರಾಕೇಶ್ ಅಡಿಗ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ಮಾನಸಿ ಸುಧೀರ್, ಕಿರುತೆರೆ ನಟಿ ಅಮೃತಾ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.ಇದನ್ನೂ ಓದಿ: ಪಡ್ಡೆಗಳ ನಿದ್ದೆ ಕದ್ದ ಹಾಟ್ ಬ್ಯೂಟಿ ಜ್ಯೋತಿ ರೈ – ಕಾಮೆಂಟ್ಸ್‌ ಸೆಕ್ಷನ್‌ ಆಫ್‌ ಮಾಡಿದ್ದೇಕೆ?

    ದಿಂಸೋಲ್ ಎಂದರೆ ಕರಾವಳಿ ಭಾಗದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಅಚರಣೆಯಾಗಿದೆ. ಕರಾವಳಿಯ ಎಲ್ಲಾ ಸಂಸ್ಕೃತಿಯನ್ನು ಈ ಸಿನಿಮಾದ ಮೂಲಕ ದೃಶ್ಯ ರೂಪಕ್ಕೆ ತರುತ್ತಿದ್ದಾರೆ ನಿರ್ದೇಶಕ ನಾಗೇಂದ್ರ ಗಾಣಿಗ. ಮೊದಲ ಪೋಸ್ಟರ್ ಕೂಡ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ದೇವಿ ರಕ್ತೇಶ್ವರಿ ಇರುವ ಮೋಷನ್ ಪೋಸ್ಟರ್ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ..ಅಲ್ಲದೆ ಈ ಸಿನಿಮಾ ದೇವರ ಬಗ್ಗೆ ಇದೆ ಎನ್ನುವುದು ಈ ಪೋಸ್ಟರ್ ನೋಡಿದ್ರೆ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

    ಸದ್ಯ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಶೂಟಿಂಗ್ ಪ್ರಾರಂಭ ಮಾಡಲಿದೆ. ಕರಾವಳಿಯ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಈ ಚಿತ್ರ ಸಚಿನ್ ವಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಚಿತ್ರಕ್ಕೆ ಸಂದೀಪ್ ವಲ್ಲೂರಿ ಅವರ ಕ್ಯಾಮರಾ ವರ್ಕ್ ಇದೆ, ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ.ಇದನ್ನೂ ಓದಿ: BBK12 | ಬಿಗ್‌ಬಾಸ್‌ಗೆ ಹೋಗ್ತಾರಾ ಸುಧಾರಾಣಿ – ʻಯಾರ್‌ ಹೇಳಿದ್ದುʼ?

  • ಮತ್ತೆ ಹೀರೋ ಆದ ಚಿಕ್ಕಣ್ಣ: ಮಹೇಶ್ ಕುಮಾರ್ ನಿರ್ದೇಶನದ ಚಿತ್ರ

    ಮತ್ತೆ ಹೀರೋ ಆದ ಚಿಕ್ಕಣ್ಣ: ಮಹೇಶ್ ಕುಮಾರ್ ನಿರ್ದೇಶನದ ಚಿತ್ರ

    ಳೆದ ವರ್ಷದ ಸೂಪರ್ ಹಿಟ್ ಸಿನಿಮಾಗಳ ಪೈಕಿ ‘ಉಪಾಧ್ಯಕ್ಷ’ ಕೂಡ ಒಂದು. ಚಿಕ್ಕಣ್ಣ (Chikkanna) ನಾಯಕನಟರಾಗಿ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಅದಾದ ಬಳಿಕ ಸಖತ್ ಚ್ಯೂಸಿಯಾಗಿರುವ ಚಿಕ್ಕಣ್ಣ, ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಕೇಳಿ ಕೆಲವೊಂದನ್ನು ಮಾತ್ರ ಫೈನಲ್ ಮಾಡುತ್ತಿದ್ದಾರೆ.

    ಸದ್ಯ ಲಕ್ಷ್ಮಿ ಪುತ್ರ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಚಿಕ್ಕಣ್ಣ, ಅದಾದ ಬಳಿಕ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈವರೆಗೂ ಮಾಡಿರದ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರುವ ಅವರು, ವಿಭಿನ್ನ ಕಥಾಹಂದರದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇಸಿ ಸೊಗಡಿನ ಈ ಸಿನಿಮಾಕ್ಕೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಯೋಗ್ಯ ಹಾಗೂ ಮದಗಜ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿರುವ ಮಹೇಶ್, ಸದ್ಯ ಅಯೋಗ್ಯ 2 ಚಿತ್ರದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ. ಇದೀಗ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಮೂರನೇ ಸಿನಿಮಾಕ್ಕೆ ಮಹೇಶ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಮಹೇಶ್ ಕುಮಾರ್ ನಿರ್ದೇಶನದ ನಾಲ್ಕನೇ ಸಿನಿಮಾ.

    ವಿನೋದ್ ಪ್ರಭಾಕರ್ ನಟನೆಯ ಫೈಟರ್ ಚಿತ್ರವನ್ನು ನಿರ್ಮಿಸಿದ್ದ ಸೋಮಶೇಖರ್ ಕಟ್ಟಿಗೇನಹಳ್ಳಿ ಅವರ ನಿರ್ಮಾಣದಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಚಿತ್ರದ ಮುಹೂರ್ತ ಅಕ್ಟೋಬರ್’ನಲ್ಲಿ ನೆರವೇರಲಿದ್ದು, ಅದೇ ದಿನ ಶೀರ್ಷಿಕೆ ಸಹ ಅನಾವರಣಗೊಳ್ಳಲಿದೆ.

    ಆಕಾಶ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಸೋಮಶೇಖರ್ ಕಟ್ಟಿಗೇನಹಳ್ಳಿ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ವಿ.ಹರಿಕೃಷ್ಣ ಸಂಗೀತ, ಸುಧಾಕರ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಾಸ್ತಿ, ರಘು ನಿಡುವಳ್ಳಿ ಹಾಗೂ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಮೋಹನ್ ಬಿ ಕೆರೆ ಕಲಾ ನಿರ್ದೇಶನ ಈ ಚಿತ್ರಕ್ಕಿದ್ದು, ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಮಾಹಿತಿಯನ್ನು ಶೀಘ್ರದಲ್ಲೇ ಚಿತ್ರತಂಡ ಹಂಚಿಕೊಳ್ಳಲಿದೆ.

  • ಕಾಂತಾರ ಚಾಪ್ಟರ್ 1 – ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಬಿಡುಗಡೆಗೆ ಸಿದ್ಧ

    ಕಾಂತಾರ ಚಾಪ್ಟರ್ 1 – ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಬಿಡುಗಡೆಗೆ ಸಿದ್ಧ

    ಹುನಿರೀಕ್ಷಿತ ಚಲನಚಿತ್ರ ಕಾಂತಾರ ಚಾಪ್ಟರ್ 1 (Kantara Chapter 1), ಇದೇ ಅಕ್ಟೋಬರ್ 2 ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ರಿಷಬ್ ಶೆಟ್ಟಿ (Rishab Shetty) ಅವರು ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

    ಆಸ್ಟ್ರೇಲಿಯಾ (Australia) ಮತ್ತು ನ್ಯೂಜಿಲೆಂಡ್‌ನಲ್ಲಿನ (New Zealand) ವೀಕ್ಷಕರಿಗಾಗಿ ಈ ಚಿತ್ರವನ್ನು ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ವಿತರಿಸಲಿದ್ದು, ಅಲ್ಲಿನ ಸಿನಿಪ್ರಿಯರು ಈ ದೈವಿಕ ಕಥೆಯನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಮಿನಿ ಫ್ರಾಕ್ ಧರಿಸಿ ರಂಗೀಲಾರೆ ಎಂದು ಕುಣಿದ ಊರ್ಮಿಳಾ

    ಜಾಗತಿಕವಾಗಿ ಮೆಚ್ಚುಗೆ ಗಳಿಸಿದ್ದ ಕಾಂತಾರ (2022) ಚಿತ್ರದ ಪ್ರಿಕ್ವೆಲ್ ಆಗಿರುವ ಈ ಸಿನಿಮಾ, ನಮ್ಮ ಸಂಸ್ಕೃತಿ, ಜಾನಪದ ಮತ್ತು ಆಧ್ಯಾತ್ಮಿಕತೆಯ ಬೇರುಗಳನ್ನು ಮತ್ತಷ್ಟು ಆಳವಾಗಿ ಪರಿಚಯಿಸಲಿದೆ.

    ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವು ಭಾರತೀಯ ಹಾಗೂ ಜಾಗತಿಕ ಸಿನಿಪ್ರಿಯರಿಗೆ ಒಂದು ಅದ್ಭುತ ಅನುಭವ ನೀಡಲಿದೆ. ಕಾಲಾತೀತ ಕಥೆಗಳನ್ನು ಸೃಷ್ಟಿಸುವ ಹೊಂಬಾಳೆ ಫಿಲ್ಮ್ಸ್ನ ದೂರದೃಷ್ಟಿಯ ಭಾಗವಾಗಿರುವ ಕಾಂತಾರ ಚಾಪ್ಟರ್ 1, ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

  • ಫೀನಿಕ್ಸ್ ಸಿನಿಮಾದ ಕಥೆ ದರ್ಶನ್ ಅವರಿಗೆ ಮಾಡಿದ್ದು: ಓಂ ಪ್ರಕಾಶ್ ರಾವ್ ಸ್ಫೋಟಕ ಮಾತು

    ಫೀನಿಕ್ಸ್ ಸಿನಿಮಾದ ಕಥೆ ದರ್ಶನ್ ಅವರಿಗೆ ಮಾಡಿದ್ದು: ಓಂ ಪ್ರಕಾಶ್ ರಾವ್ ಸ್ಫೋಟಕ ಮಾತು

    ಓಂ ಪ್ರಕಾಶ್ ರಾವ್ (Om Prakash Rao) ನಿರ್ದೇಶನದ ಫೀನಿಕ್ಸ್ ಸಿನಿಮಾದ (Phoenix Movie) ಕೊನೆಯ ದಿನದ ಶೂಟಿಂಗ್ ಅನ್ನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಯ್ತು. ನಿರ್ದೇಶಕ ಓಂ ಪ್ರಕಾಶ್ ರಾವ್, ನಟಿ ನಿಮಿಕಾ ರತ್ನಾಕರ್, ಖಡಕ್ ವಿಲನ್ ಪಾತ್ರದಲ್ಲಿ ನಟಿಸಿದ ಪ್ರಸನ್ನ ಸೇರಿದಂತೆ ಇಡೀ ಚಿತ್ರತಂಡ ಶೂಟಿಂಗ್‌ನಲ್ಲಿ ಭಾಗಿಯಾಗಿತ್ತು. ಕೊನೆ ದಿನದ ಶೂಟಿಂಗ್ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದೆ ಚಿತ್ರತಂಡ. ಈ ವೇಳೆ ಮಾತನಾಡಿದ ನಿರ್ದೇಶಕ ಓಂ ಪ್ರಕಾಶ್ ರಾವ್ ಸಾಕಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

    ಫೀನಿಕ್ಸ್ ಚಿತ್ರದ ಶೂಟಿಂಗ್ ವೇಳೆ ದರ್ಶನ್ ಬಗ್ಗೆ ಮಾತಾಡಿದ ಓಂ ಪ್ರಕಾಶ್ ರಾವ್. `ದರ್ಶನ್‌ಗಾಗಿ ಈ ಸಿನಿಮಾ ರೆಡಿ ಮಾಡಿದ್ದೆ, ಕಾರಣಾಂತರಗಳಿಂದ ಆಗಲಿಲ್ಲ. ದರ್ಶನ್ ಯಾವತ್ತೂ ನನ್ನ ಹತ್ರ ಕಥೆ ಕೇಳಿಲ್ಲ, ಕೇಳೋದು ಇಲ್ಲ. ಅಯ್ಯ ಸಿನಿಮಾ ಹಿಟ್ ಆಯಿತು ಅವತ್ತಿನಿಂದ ನನ್ನ ಮೇಲೆ ನಂಬಿಕೆ ದರ್ಶನ್ ಅವರಿಗೆ. ಏನ್ ಕಾಸ್ಟ್ಯೂಮ್, ಯಾವಾಗ ಶೂಟಿಂಗ್ ಅಷ್ಟೇ ಕೇಳುತ್ತಿದ್ದರು ದರ್ಶನ್. ದರ್ಶನ್‌ದು ತುಂಬಾ ಸೈಲೆಂಟ್ ಕ್ಯಾರೆಕ್ಟರ್, ಹಾರ್ಟ್ ಇಂದ ಒಳ್ಳೆ ವ್ಯಕ್ತಿ. ವಿಧಿ ಆಟವೋ ಗೊತ್ತಿಲ್ಲ ದರ್ಶನ್ ಜೈಲಲ್ಲಿರೋದು ಬೇಜಾರಾಗುತ್ತೆ’ ಎಂದು ಹೇಳಿದ್ದಾರೆ.

    ಎರಡು ಫ್ಲಾಪ್ ಸಿನಿಮಾ ಕೊಟ್ಟಿರುವ ನಿರ್ದೇಶಕ ಓಂ ಪ್ರಕಾಶ್ ಅವರ 49ನೇ ಸಿನಿಮಾ ಫೀನಿಕ್ಸ್ ಆಗಿದ್ದು, ಮತ್ತೆ ಫೀನಿಕ್ಸ್ ಹಕ್ಕಿಯಂತೆ ಚಿತ್ರರಂಗದಲ್ಲಿ ಎದ್ದು ನಿಲ್ಲುತ್ತಾರಾ ಕಾದು ನೋಡ್ಬೇಕು. ಇದರ ಜೊತೆಗೆ ತಮ್ಮ 50ನೇ ಸಿನಿಮಾಗೂ ತಯಾರಿಯನ್ನ ಮಾಡಿಕೊಳ್ಳುತ್ತಿರುವ ಓಂ ಪ್ರಕಾಶ್ ಸದ್ಯದಲ್ಲಿಯೇ ಆ ಬಗ್ಗೆ ಅಪ್‌ಡೇಟ್ ನೀಡಲಿದ್ದಾರೆ.