Tag: cinema

  • ಸಹಿ ಫೋರ್ಜರಿ ಮಾಡಿ ಯೂಟ್ಯೂಬ್, ಒಟಿಟಿಗೆ ವಿಷ್ಣುವರ್ಧನ್ ಅಭಿನಯದ ಸಿನಿಮಾ ಹಂಚಿಕೆ – ನಿರ್ಮಾಪಕಿಯಿಂದ ದೂರು

    ಸಹಿ ಫೋರ್ಜರಿ ಮಾಡಿ ಯೂಟ್ಯೂಬ್, ಒಟಿಟಿಗೆ ವಿಷ್ಣುವರ್ಧನ್ ಅಭಿನಯದ ಸಿನಿಮಾ ಹಂಚಿಕೆ – ನಿರ್ಮಾಪಕಿಯಿಂದ ದೂರು

    ಬೆಂಗಳೂರು: ನಿರ್ಮಾಪಕಿಯ ಅನುಮತಿ ಪಡೆಯದೆ ನಕಲಿ ಸಹಿ ಮಾಡಿ ನಟ ವಿಷ್ಣುವರ್ಧನ್ (Vishnuvardhan) ಅಭಿನಯದ ʻಗಂಡುಗಲಿ ರಾಮʼ (Gandugali Rama) ಸಿನಿಮಾ (Cinema) ಸೇರಿ 3 ಚಿತ್ರಗಳನ್ನು ಯೂಟ್ಯೂಬ್, ಒಟಿಟಿ ಇನ್ನಿತರ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್‌ಗೆ ಹಂಚಿಕೆ ಮಾಡಲಾಗಿದೆ.

    ಕಿಡಿಗೇಡಿಗಳ ಕೃತ್ಯದಿಂದ ಕೋಟಿ ಕೋಟಿ ನಷ್ಟ ಅನುಭವಿಸುರುವ ಖ್ಯಾತ ನಿರ್ಮಾಪಕಿ ಲಕ್ಷ್ಮೀ ವೆಂಕಟೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ಸಹಿಯನ್ನು ನಕಲಿ ಮಾಡಿ ಹಣ ನೀಡಿ ಚಿತ್ರ ಖರೀದಿಸಿರುವಂತೆ ದಾಖಲೆ ಸೃಷ್ಟಿ ಮಾಡಿದ್ದಾರೆ. ಆರೋಪಿಗಳಿಂದ ಒಂದು ಕೋಟಿ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ತಿಂಡಿ ತಿನ್ನಲೂ ಒಂದು ಗಂಟೆ ಬೇಕಿತ್ತು, ಆತ್ಮಹತ್ಯೆ ಯೋಚನೆ ಬಂದಿತ್ತು – ಜೀವನದಲ್ಲಿ ಕಾಡಿದ ನರರೋಗದ ಬಗ್ಗೆ ಸಲ್ಮಾನ್ ಖಾನ್ ಮಾತು

    ಡಾ.ವಿಷ್ಣುವರ್ಧನ್ ನಟನೆಯ 1983 ರಲ್ಲಿ ತೆರೆಕಂಡ ʻಗಂಡುಗಲಿ ರಾಮʼ ಚಿತ್ರ ಲಕ್ಷ್ಮಿ ವೆಂಕಟೇಶ್ ಮಾಲೀಕತ್ವದ ಮಮತಾ ಮೂವೀಸ್ ಬ್ಯಾನರ್‌ ಅಡಿ ನಿರ್ಮಾಣಗೊಂಡಿತ್ತು. ಅದರ ಜೊತೆ ನಟ ಅಶೋಕ್, ಆರತಿ ನಟನೆಯ 1981ರ ʻಗಣೇಶ ಮಹಿಮೆʼ ಚಿತ್ರ ಸೇರಿದಂತೆ 3 ಚಿತ್ರಗಳನ್ನು ಖರೀದಿ ಮಾಡಿರೋದಾಗಿ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ನಿರ್ಮಾಪಕಿ ಆರೋಪಿಸಿದ್ದಾರೆ. ಸದ್ಯ ಅವರು ತಮ್ಮ ಬ್ಯಾನರ್‌ನಿಂದ ಚಿತ್ರ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದಾರೆ.

    ಲಕ್ಷ್ಮಿ ವೆಂಕಟೇಶ್ ಅವರ ಹೆಸರಿನಲ್ಲಿ ನಕಲಿ ವಿಳಾಸ, ನಕಲಿ ಚೆಕ್ ಸೃಷ್ಟಿ ಮಾಡಿ, ನಂತರ ಚಿತ್ರ ಮಾರಾಟ ಮಾಡಲಾಗಿದೆ. ಎ.ಎನ್ ಜಗದೀಶ್ , ಪುರುಷೋತ್ತಮ್, ರಸೂಲ್ ಎಂಬುವವರು ತಮಗೆ ಈ ರೀತಿ ಮೋಸ ಮಾಡಿದ್ದಾರೆ. ಚಿತ್ರಗಳನ್ನ ಏಜೆಂಟರ ಮೂಲಕ ಮಾರಾಟ ಮಾಡಲು ಮುಂದಾದಾಗ ವಿಚಾರ ಬಯಲಾಗಿದೆ ಎಂದು ನಿರ್ಮಾಪಕಿ ಆರೋಪಿಸಿದ್ದಾರೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: 3ನೇ ಮಗುವಿನ ತಾಯಿಯಾದ ಖ್ಯಾತ ಸಿಂಗರ್ ರಿಹಾನಾ

  • ಕಾಂತಾರ ಚಾಪ್ಟರ್-1 ಅಡ್ವಾನ್ಸ್ ಬುಕ್ಕಿಂಗ್ ಓಪನ್ಸ್‌ಗೆ ಮುಹೂರ್ತ ಫಿಕ್ಸ್!

    ಕಾಂತಾರ ಚಾಪ್ಟರ್-1 ಅಡ್ವಾನ್ಸ್ ಬುಕ್ಕಿಂಗ್ ಓಪನ್ಸ್‌ಗೆ ಮುಹೂರ್ತ ಫಿಕ್ಸ್!

    ಹುನಿರೀಕ್ಷಿತ ಕಾಂತಾರ ಚಾಪ್ಟರ್-1 (Kantara Chapter-1) ಸಿನಿಮಾ ಇದೇ ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿ ನಿಂತಿದೆ. ಈ ಚಿತ್ರದ ಮೇಲೆ ವಿಶ್ವದಾದ್ಯಂತ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಬಗ್ಗೆ ಹೊಂಬಾಳೆ ಸಂಸ್ಥೆ ಸಿಹಿಸುದ್ದಿ ನೀಡಿದೆ. ಇದೇ ಸೆ.26 ರ ಮಧ್ಯಾಹ್ನ 12:29 ರಿಂದ ಕರ್ನಾಟಕದ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ (Advance Booking) ಓಪನ್ ಆಗಲಿದೆ.

    ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್-1 ಸಿನಿಮಾ ಟ್ರೈಲರ್‌ ರಿಲೀಸ್ ಮಾಡಿದೆ. ಸಿನಿಮಾದ ಟ್ರೈಲರ್‌ ನೋಡಿ ಈಗಾಗ್ಲೇ ಭಕ್ತಗಣ ಸಂಭ್ರಮಿಸಿದೆ. ಕಾಂತಾರ ದೃಶ್ಯಕಾವ್ಯದ ವೈಭವ ನೋಡಿ ಕುಣಿದು ಕುಪ್ಪಳಿಸೋಕೆ ಕಾದು ಕುಳಿತಿದೆ ಅಭಿಮಾನಿ ಬಳಗ. ಇನ್ನೊಂದು ವಾರವಷ್ಟೇ ಬಾಕಿ ಇರುವ ಬೆನ್ನಲ್ಲೇ ಹೊಂಬಾಳೆ ಸಂಸ್ಥೆ ನೀಡಿರುವ ಖುಷಿ ಸಮಾಚಾರಕ್ಕೆ ಅಭಿಮಾನಿಗಳು ಅಡ್ವಾನ್ಸ್ ಆಗಿ ಬುಕಿಂಗ್ ಮಾಡೋಕೆ ಸಿದ್ಧರಾಗಿದ್ದಾರೆ.

    ಕಾಂತಾರ ಸಿನಿಮಾ ದಾಖಲೆಯನ್ನ ಮಾಡಿತ್ತು. ಇದೀಗ ಪ್ರೀಕ್ವೆಲ್ ತೆರೆಗೆ ಬರುತ್ತಿದ್ದು, ಸಿನಿಮಾ ತೆರೆಗೆ ಬರುವ ಮುಂಚೆಯೇ ಕೋಟಿ ಕೋಟಿ ಕಲೆಹಾಕಿದೆ. ಇನ್ನು ಅಡ್ವಾನ್ಸ್ ಬುಕ್ಕಿಂಗ್‌ನಲ್ಲೂ ದಾಖಲೆಯನ್ನ ಸೃಷ್ಟಿಸುವ ನಿರೀಕ್ಷೆಗಳಿವೆ. `ಕಾಂತಾರ’ ಜಗತ್ತನ್ನ ಕಣ್ತುಂಬಿಕೊಳ್ಳಲು ಕ್ಯೂರಿಯಾಸಿಟಿಯಿಂದ ಕಾಯ್ತಿದ್ದ ಅಭಿಮಾನಿಗಳಿಗೆ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲು ಟೈಂ ಫಿಕ್ಸ್ ಮಾಡಲಾಗಿದೆ.

    ಸದ್ಯ ಕರ್ನಾಟಕದ ಅಡ್ವಾನ್ಸ್ ಬುಕ್ಕಿಂಗ್‌ಗೆ ದಿನ ಮತ್ತು ಟೈಂ ನಿಗದಿಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಒಂದೊಂದೆ ರಾಜ್ಯದ ಅಪ್‌ಡೇಟ್‌ಗಳು ಸಿಗಲಿದೆ.

  • ಖ್ಯಾತ ನಟ ಮೋಹನ್ ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

    ಖ್ಯಾತ ನಟ ಮೋಹನ್ ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

    ಲಯಾಳಂನ (Malayalam) ಖ್ಯಾತ ನಟ ಮೋಹನ್ ಲಾಲ್‌ಗೆ (Mohanlal) ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು (Dadasaheb Phalke Award) ಘೋಷಿಸಲಾಗಿದೆ. ಸೆ.23 ರಂದು ನಡೆಯಲಿರುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೋಹನ್ ಲಾಲ್‌ಗೆ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಘೋಷಿಸಿದೆ.

    ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್, ಮಲಯಾಳಂ ಮಾತ್ರವೇ ಅಲ್ಲದೆ ಭಾರತದ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಭಾಜನರಾದ ಮಲಯಾಳಂ ಚಿತ್ರರಂಗದ ಎರಡನೇ ಕಲಾವಿದರು ಮೋಹನ್ ಲಾಲ್. 2004ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ನೀಡಲಾಗಿತ್ತು. ಮೋಹನ್ ಲಾಲ್ ಸಿನಿಮಾ ರಂಗಕ್ಕೆ ಸಲ್ಲಿಸಿರುವ ಅಭೂತಪೂರ್ವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

    2024ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮಿಥುನ್ ಚಕ್ರವರ್ತಿ ಅವರಿಗೆ ನೀಡಿ ಗೌರವಿಸಲಾಗಿತ್ತು. 2019ರಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನೀಡಲಾಗಿತ್ತು. ಇದೀಗ 2023ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ದಕ್ಷಿಣದ ಮತ್ತೊಬ್ಬ ಸೂಪರ್ ಸ್ಟಾರ್ ಆಗಿರುವ ಹಾಗೂ ಅತ್ಯದ್ಭುತ ನಟರಾಗಿರುವ ಮೋಹನ್ ಲಾಲ್ ಅವರಿಗೆ ಘೋಷಿಸಲಾಗಿದೆ. ಮೋಹನ್ ಲಾಲ್ ಅವರು ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಆಗಿರುವುದಕ್ಕೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಮೋಹನ್ ಲಾಲ್ ಅವರಿಗೆ ಶುಭಾಶಯ ಕೋರಿದ್ದಾರೆ.

    ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಮೋಹನ್ ಲಾಲ್ ಅವರ ಸಿನಿಮೀಯ ಪ್ರಯಾಣವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಗೌರವಿಸಲಾಗುತ್ತಿದೆ ಎಂದು ತಿಳಿಸಿದೆ.

    ಮೋಹನ್ ಲಾಲ್ ಅವರು ಕಳೆದ 45 ವರ್ಷಗಳಿಂದಲೂ ಸಿನಿಮಾ ರಂಗದಲ್ಲಿದ್ದಾರೆ. ಆರಂಭದ ಸುಮಾರು 25 ಸಿನಿಮಾಗಳಲ್ಲಿ ಮೋಹನ್ ಲಾಲ್ ವಿಲನ್ ಪಾತ್ರಗಳಲ್ಲಿಯೇ ನಟಿಸಿದರು. ಮೋಹನ್ ಲಾಲ್ ವಿಲನ್ ಆಗಿ ಜನಪ್ರಿಯರಾದ ಬಳಿಕ 1984ರಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ಆ ಸಿನಿಮಾ ಹಿಟ್ ಆಗುವ ಮೂಲಕ ಮೋಹನ್‌ ಲಾಲ್ ನಾಯಕನಾಗಿಯೇ ಮುಂದುವರೆದರು. 1980 ರಿಂದ ಈ ವರೆಗೆ ಮೋಹನ್ ಲಾಲ್ ಅವರು 400 ಸಿನಿಮಾಗಳಲ್ಲಿ ನಟಿಸಿದ್ದಾರೆ. 1986ರಲ್ಲಿ ಒಂದೇ ವರ್ಷದಲ್ಲಿ 36 ಸಿನಿಮಾಗಳಲ್ಲಿ ಮೋಹನ್ ಲಾಲ್ ನಟಿಸಿದ್ದರು.

  • ಅರ್ಜುನ್ ಸರ್ಜಾ ನಟನೆಯ ಮಫ್ತಿ ಪೊಲೀಸ್ ಸಿನಿಮಾದ ಟೀಸರ್ ರಿಲೀಸ್

    ಅರ್ಜುನ್ ಸರ್ಜಾ ನಟನೆಯ ಮಫ್ತಿ ಪೊಲೀಸ್ ಸಿನಿಮಾದ ಟೀಸರ್ ರಿಲೀಸ್

    ಕ್ಷನ್ ಕಿಂಗ್ ಅರ್ಜುನ್ ಮತ್ತು ಐಶ್ವರ್ಯ ರಾಜೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮಫ್ತಿ ಪೊಲೀಸ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಜಿ.ಎಸ್. ಆರ್ಟ್ಸ್ ನಿರ್ಮಿಸಿರುವ ಈ ಚಿತ್ರವನ್ನು ನಿರ್ಮಾಪಕ ಜಿ. ಅರುಲ್ ಕುಮಾರ್ ಪ್ರಸ್ತುತಪಡಿಸಿದ್ದಾರೆ. ದಿನೇಶ್ ಲೆಟ್ಚುಮನನ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ.

    ಮಫ್ತಿ ಪೊಲೀಸ್ ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈ ಚಿತ್ರದ ಮೂಲಕ ಕಾನೂನನ್ನು ನ್ಯಾಯದಿಂದ ಮೀರಿಸಬಹುದು, ನ್ಯಾಯವನ್ನು ನೀತಿಯಿಂದ ಮೀರಿಸಬಹುದು. ಆದರೆ ಅಂತಿಮ ಲೆಕ್ಕಾಚಾರದಲ್ಲಿ ನೀತಿ ಮಾತ್ರ ಗೆಲ್ಲುತ್ತದೆ ಎಂಬ ಎಳೆ ಇಟ್ಕೊಂಡು ಸಿನಿಮಾ ಮಾಡಲಾಗಿದೆ.

    ಪವರ್ ಪ್ಯಾಕ್ಡ್ ಟೀಸರ್ ನಲ್ಲಿ ಅರ್ಜುನ್ ಸರ್ಜಾ ಭರ್ಜರಿ ಆಕ್ಷನ್ಸ್ ಮೂಲಕ ಅಬ್ಬರಿಸಿದ್ದಾರೆ. ಐಶ್ವರ್ಯಾ ರಾಜೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಅಭಿರಾಮಿ, ರಾಮ್ಕುಮಾರ್, ಜಿ.ಕೆ. ರೆಡ್ಡಿ, ಪಿ.ಎಲ್. ತೇನಪ್ಪನ್, ಲೋಗು, ಬರಹಗಾರ-ನಟ ವೇಲಾ ರಾಮಮೂರ್ತಿ, ತಂಗದುರೈ, ಪ್ರಾಂಕ್ಸ್ಟರ್ ರಾಹುಲ್, ಒ.ಎ.ಕೆ. ಸುಂದರ್ ಸೇರಿದಂತೆ ಹಲವರು ನಟಿಸಿದ್ದಾರೆ.

    ಸರವಣನ್ ಅಭಿಮನ್ಯು ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಆಶಿವಗನ್ ಸಂಗೀತ ನೀಡಿದ್ದಾರೆ. ಲಾರೆನ್ಸ್ ಕಿಶೋರ್ ಸಂಕಲನ ಚಿತ್ರಕ್ಕಿದೆ. ಚಿತ್ರದ ಆಡಿಯೋ, ಟ್ರೇಲರ್ ಮತ್ತು ಸಿನಿಮಾ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಚಿತ್ರತಂಡ ಘೋಷಿಸಲಿದೆ. ಮಫ್ತಿ ಪೊಲೀಸ್ ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

  • ಶೂಟಿಂಗ್ ವೇಳೆ ಅವಘಡ – ಜೂ.ಎನ್‍ಟಿಆರ್‌ಗೆ ಗಾಯ

    ಶೂಟಿಂಗ್ ವೇಳೆ ಅವಘಡ – ಜೂ.ಎನ್‍ಟಿಆರ್‌ಗೆ ಗಾಯ

    ಚಿತ್ರೀಕರಣದ ವೇಳೆ ಟಾಲಿವುಡ್ (Tollywood) ಸ್ಟಾರ್ ನಟ ಜೂ.ಎನ್‍ಟಿಆರ್‌ (Jr NTR) ಗಾಯವಾಗಿದ್ದು, ಅವರನ್ನು ಆಸ್ಪತ್ರೆ ಸೇರಿಸಲಾಗಿದೆ. ವಿಷಯ ತಿಳಿದ ಅಭಿಮಾನಿಗಳು ಆಸ್ಪತ್ರೆ ಮುಂದೆ ದೌಡಾಯಿಸಿದ್ದಾರೆ.

    ಹೈದ್ರಾಬಾದ್‍ನಲ್ಲಿ (Hyderabad) ಜಾಹೀರಾತುವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಈ ಅವಘಡ ನಡೆದಿದೆ. ಚಿತ್ರೀಕರಣದ ವೇಳೆ ನೆಲದ ಮೇಲೆ ಸ್ಲಿಪ್ ಆಗಿ ಬಿದ್ದಿದ್ದು, ಕಾಲಿಗೆ ಬಲವಾಗಿ ಪೆಟ್ಟಾಗಿದ್ದು ಮೂಳೆ ಮುರಿತವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ದಿಶಾ ಪಟಾನಿ ಮನೆ ಮುಂದೆ ಗುಂಡಿನ ದಾಳಿ – ಆರೋಪಿಗೆ ಗುಂಡೇಟು ನೀಡಿ ಬಂಧಿಸಿದ ಪೊಲೀಸರು

    ಹೈದ್ರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೂ.ಎನ್‍ಟಿಆರ್‍ಗೆ ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿ ಸೂಚಿಸಿದ್ದಾರೆ. ಮೂಳೆಗೆ ಪೆಟ್ಟಾಗಿರುವುದರಿಂದ ಕೆಲವು ದಿನ ಚಿತ್ರೀಕರಣದಲ್ಲಿ ಭಾಗಿಯಾಗದೇ ಅವರು ವಿಶ್ರಾಂತಿ ಪಡೆಯಬೇಕಾಗಿದೆ.

    ತಮ್ಮ ನೆಚ್ಚಿನ ನಟ ಆಸ್ಪತ್ರೆಗೆ ಸೇರಿರುವ ವಿಷಯ ತಿಳಿದು ಅಭಿಮಾನಿಗಳು ಆಸ್ಪತ್ರೆ ಎದುರು ಜಮಾಯಿಸಿದ್ರು. ಕೂಡಲೇ ಆಸ್ಪತ್ರೆ ವೈದ್ಯರು ಹೆಲ್ತ್ ಬುಲಿಟಿನ್ ರಿಲೀಸ್ ಮಾಡಿ ಜೂ.ಎನ್‍ಟಿಆರ್ ಆರೋಗ್ಯವಾಗಿರುವುದನ್ನ ಖಚಿತಪಡಿಸಿದ್ದಾರೆ. ಚಿಕಿತ್ಸೆ ಮುಂದುವರಿದಿದ್ದು, ವಿಶ್ರಾಂತಿ ಬಳಿಕ ಅವರು ಗುಣಮುಖರಾಗುವ ಭರವಸೆಯನ್ನು ವೈದ್ಯರು ನೀಡಿದ್ದಾರೆ.

    ತಮ್ಮ ನೆಚ್ಚಿನ ನಟ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ತಿರುಪತಿ ಸೇರಿದಂತೆ ಪ್ರಮುಖ ದೇವಾಲಯಗಳ ಎದುರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಮಂತಾ ಸಿನಿಮಾ ಆಫರ್‌ಗೆ ನಾಗಾರ್ಜುನ ಫ್ಯಾಮಿಲಿ ಅಡ್ಡಗಾಲು?

  • ಕಾಂತಾರದಿಂದ ಗುಡ್ ನ್ಯೂಸ್ : ಟ್ರೇಲರ್ ರಿಲೀಸ್ ಡೇಟ್ ಫಿಕ್ಸ್

    ಕಾಂತಾರದಿಂದ ಗುಡ್ ನ್ಯೂಸ್ : ಟ್ರೇಲರ್ ರಿಲೀಸ್ ಡೇಟ್ ಫಿಕ್ಸ್

    ಹು ನಿರೀಕ್ಷಿತ ‘ಕಾಂತಾರ ಅಧ್ಯಾಯ 1’ (Kantara: Chapter 1) ಸಿನಿಮಾದ ಟ್ರೇಲರ್ (Trailer) ಇದೇ ಸೆಪ್ಟೆಂಬರ್ 22, 2025 ರಂದು ಮಧ್ಯಾಹ್ನ 12:40ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂಸ್ (Hombale Films) ಇಂದು ಘೋಷಿಸಿದೆ. ಈ ಚಿತ್ರವು ಅಕ್ಟೋಬರ್ 2, 2025 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ.

    ರಿಷಬ್ ಶೆಟ್ಟಿ (Rishab Shetty) ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವು, ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿದೆ. ಕರಾವಳಿ ಕರ್ನಾಟಕದ ಅತೀಂದ್ರಿಯ ಲೋಕವನ್ನು ಅನಾವರಣಗೊಳಿಸುವ ಈ ಚಿತ್ರವು, ಪುರಾಣ, ಭಕ್ತಿ ಮತ್ತು ಅದೃಷ್ಟದ ನಡುವಿನ ಪೌರಾಣಿಕ ಕಥೆಯನ್ನು ಹೇಳುತ್ತದೆ. ಇದನ್ನೂ ಓದಿ: ಟಾಕ್ಸಿಕ್‌ ಫೈನಲ್‌ ಶೂಟಿಂಗ್‌ ಮುನ್ನ ಲಂಡನ್‌ಗೆ ಹಾರಿದ ಯಶ್!

    ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ, ಛಾಯಾಗ್ರಾಹಕ ಅರವಿಂದ್ ಎಸ್. ಕಶ್ಯಪ್ ಅವರ ದೃಶ್ಯ ವೈಭವ ಮತ್ತು ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ಅವರ ವಿಶಿಷ್ಟ ಕಲಾಕೃತಿಗಳು ಚಿತ್ರಕ್ಕೆ ಮೆರುಗು ನೀಡಲಿವೆ.

    ರಿಷಬ್ ಶೆಟ್ಟಿ, ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ ಅಧ್ಯಾಯ 1’ ಚಿತ್ರವು ಕಲೆ, ಭಕ್ತಿ ಮತ್ತು ಶಕ್ತಿಯನ್ನು ಒಳಗೊಂಡಿದ್ದು, ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ.

  • ಆಪ್ತಮಿತ್ರ ದುರ್ಘಟನೆ ನೆನಪಿಸಿಕೊಂಡ ರಮೇಶ್ ಅರವಿಂದ್

    ಆಪ್ತಮಿತ್ರ ದುರ್ಘಟನೆ ನೆನಪಿಸಿಕೊಂಡ ರಮೇಶ್ ಅರವಿಂದ್

    ಟ, ನಿರ್ದೇಶಕ ಹಾಗೂ ನಿರೂಪಕ ರಮೇಶ ಅರವಿಂದ್ (Ramesh Aravind) 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದೈಜಿ ಸಿನಿಮಾದ (Daiji Cinema) ಟೀಸರ್ ಕೂಡಾ ರಿಲೀಸ್ ಆಗಿದೆ. ಈ ವೇಳೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ನಟ ವಿಷ್ಣುವರ್ಧನ್ (Vishnuvardhan) ಅವರ ಜೊತೆಗಿನ ದಿನಗಳು ಹಾಗೂ ಅವರಿಗೆ ಸಲ್ಲಬೇಕಾದ ಗೌರವಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಜೊತೆಗೆ ಆಪ್ತಮಿತ್ರ-3 ಸಿನಿಮಾ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

    ಆಪ್ತಮಿತ್ರ (Apthamitra) ಸಿನಿಮಾವನ್ನ ಮಾಡಿಯಾದ್ಮೇಲೆ ಒಂದು ದುರ್ಘಟನೆ ನಡೆಯಿತು. ಇದಾದ ಬಳಿಕ ಆಪ್ತರಕ್ಷಕ ಅಂದ್ರೆ ಆಪ್ತಮಿತ್ರ ಸಿನಿಮಾದ ಭಾಗ-2 ಸಿನಿಮಾ ರಿಲೀಸ್ ನಂತರ ಮತ್ತೊಂದು ಆಘಾತವೇ ನಡೆದುಹೋಯ್ತು. ಕಾಕತಾಳಿಯವೋ ಅಥವಾ ಆಕಸ್ಮಿಕವೋ ಇವೆರಡು ಘಟನೆ ನಡೆದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಆಪ್ತಮಿತ್ರ ಸಿರೀಸ್ ಅಂದ್ರೆ ಕೊಂಚ ಹಿಂಜರಿಕೆ ಉಂಟಾಗಿದೆ. ಇದು ಕಲಾವಿದರಿಗೂ ಸಹ ಆಘಾತ, ಆತಂಕವನ್ನ ಸೃಷ್ಟಿಸಿದೆ. ಹೀಗಾಗಿ ಆಪ್ತಮಿತ್ರ ಪಾರ್ಟ್-3 ಬರುತ್ತಾ ಎನ್ನುವ ಹಲವಾರು ಪ್ರಶ್ನೆಗಳು ಆಗಾಗ ಕೇಳಿ ಬರುತ್ತಿವೆ. ಇದನ್ನೂ ಓದಿ: ಉಪೇಂದ್ರ ದಂಪತಿ ಫೋನ್ ಹ್ಯಾಕ್ ಸೈಬರ್ ವಂಚಕರು ದೋಚಿದ್ದೆಷ್ಟು ಹಣ?

    ಆಪ್ತಮಿತ್ರ ಸಿನಿಮಾದ ಪಾರ್ಟ್-3 ಸ್ಕಿಪ್ಟ್‌ ಬಂದಿದೆಯಾ..? ಬಂದರೆ ಸಿನಿಮಾ ಮಾಡುತ್ತಿರಾ ಎನ್ನುವ ಪ್ರಶ್ನೆಗೆ ನಟ ರಮೇಶ್ ಅರವಿಂದ್ ಪ್ರತಿಕ್ರಿಯೆ ನೀಡಿದ್ದಾರೆ. `ನನ್ನ ಪ್ರಕಾರ ಅದೊಂದು ಸಬ್ಜೆಕ್ಟ್, ಅದೊಂದು ಸ್ಕಿçÃನ್, ಅದೊಂದು ಪಿಕ್ಸಿಯಸ್ ಕ್ಯಾರೆಕ್ಟರ್ ನಾಗವಲ್ಲಿ ಅನ್ನೋದು. ಆದರೆ ಆಪ್ತರಕ್ಷಕ ಮಾಡುವ ವೇಳೆ ಅಂತಹದೊಂದು ಕಥೆ ಬಂದಿತ್ತು. ಆಪ್ತಮಿತ್ರ, ಆಪ್ತರಕ್ಷಕ ಆದ್ಮೇಲೆ ನಾನು ಮಾಡ್ತಿರುವ ಹಾರರ್ ಸಿನಿಮಾ ದೈಜಿನೇ’ ಎಂದು ಹೇಳಿದ್ದಾರೆ.

  • ನಾನು ಸತ್ತರೆ ನಂದಕಿಶೋರ್, ಸಾರಾ ಗೋವಿಂದು ಕಾರಣ – ವೀಡಿಯೋ ಹರಿಬಿಟ್ಟ ಶಬರೀಶ್ ಶೆಟ್ಟಿ

    ನಾನು ಸತ್ತರೆ ನಂದಕಿಶೋರ್, ಸಾರಾ ಗೋವಿಂದು ಕಾರಣ – ವೀಡಿಯೋ ಹರಿಬಿಟ್ಟ ಶಬರೀಶ್ ಶೆಟ್ಟಿ

    ಸ್ಯಾಂಡಲ್‍ವುಡ್‍ನ (Sandalwood) ಯುವನಟ ಶಬರೀಶ್ ಶೆಟ್ಟಿ ಆಘಾತಕಾರಿ ವೀಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಸಹಾಯಕತೆಯಿಂದ ವೀಡಿಯೋ ಮಾಡಿ ನಾನು ಸತ್ತರೆ ಅದಕ್ಕೆ ಕಾರಣ ನಿರ್ದೇಶಕ ನಂದಕೀಶೋರ್ (Nanda Kishore) ಹಾಗೂ ಸಾರಾ ಗೋವಿಂದು (Sa Ra Govindu) ಎಂದಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ನಿರ್ದೇಶಕ ನಂದಕೀಶೋರ್ ಮೇಲೆ 22 ಲಕ್ಷ ರೂ. ವಂಚಿಸಿದ ಆರೋಪ ಮಾಡಿದ್ದರು.

    ನಿರ್ದೇಶಕ ನಂದಕೀಶೋರ್ ಮೇಲೆ ವಂಚನೆ ಆರೋಪ (Fraud Case) ಮಾಡಿದ್ದ ನಟ ಶಬರೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರು. ಬಳಿಕ ಫಿಲ್ಮ್ ಚೇಂಬರ್ ವತಿಯಿಂದ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಯುವನಟ ಶಬರೀಶ್‍ಗೆ ಕರೆಮಾಡಿ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಹಣ ವಾಪಸ್ ಕೊಡಿಸುತ್ತೇನೆ ದುಡಕಬೇಡ ಎಂದಿದ್ದರಂತೆ. ಸಾರಾ ಗೋವಿಂದು ಕೊಟ್ಟ ಸಮಯ ಮುಗಿದ ಬಳಿಕ ಶಬರೀಶ್ ಕರೆ ಮಾಡಿ ವಿಚಾರಿಸಿದಾಗ ಏನ್ ಬೇಕಾದ್ರೂ ಮಾಡಿಕೊಳ್ಳಿ ಎಂಬ ಉತ್ತರ ಬಂದಿದ್ದಕ್ಕೆ ನೊಂದ ಯುವನಟ ಇದೀಗ ವೀಡಿಯೋ ರೆಕಾರ್ಡ್ ಮಾಡಿ ನಡೆದಿರುವ ಘಟನೆ ವಿವರಿಸಿದ್ದಾರೆ. ಇದನ್ನೂ ಓದಿ: ರೆಟ್ರೋ ಲುಕ್‌ನಲ್ಲಿ ಮಿಂಚಿದ ಶಿವಣ್ಣ, ಡಾಲಿ

    ನಿರ್ದೇಶಕ ನಂದಕಿಶೋರ್ ಮೇಲೆ 22 ಲಕ್ಷ ರೂ. ವಂಚನೆ ಆರೋಪ ಮಾಡಿದ್ದ ಶಬರೀಶ್ ಶೆಟ್ಟಿ. ಫಿಲ್ಮ್ ಚೇಂಬರ್‍ಗೆ ದೂರು ಕೊಟ್ಟಿದ್ದರು. ಬಳಿಕ ಸಾಲಪಡೆದ ನಂದಕಿಶೋರ್ ಸಂಪರ್ಕ ಮಾಡಲು ಆಗದೆ ಅಸಹಾಯಕರಾಗಿದ್ದೇನೆ ಎಂದಿದ್ದಾರೆ. ಬಳಿಕ ಶಬರೀಶ್‍ಗೆ ಕರೆ ಮಾಡಿದ್ದ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ, ನಂದಕಿಶೋರ್ ಪರವಾಗಿ ಸಂಧಾನ ಮಾಡೋದಾಗಿ ಹೇಳಿದ್ದರಂತೆ. ಸಾರಾ ಗೋವಿಂದ್ ಮಾತು ಕೇಳಿ ಪೊಲೀಸರಿಗೆ ದೂರು ಕೊಡುವ ನಿರ್ಧಾರವನ್ನ ಕೈ ಬಿಟ್ಟಿದ್ದ ಅವರು, 2 ತಿಂಗಳಾದ್ರೂ ಸಂಧಾನ ಆಗದೇ ಇದ್ದಾಗ ಮತ್ತೆ ಸಾರಾ ಗೋವಿಂದ್‍ಗೆ ಕರೆ ಮಾಡಿದ್ದಾರೆ. ಈ ವೇಳೆ ನಿನ್ನ ಕೈಯಿಂದ ಏನ್ ಮಾಡೋಕೆ ಆಗತ್ತೋ ಮಾಡ್ಕೋ ಅಂದ್ರಂತೆ. ಇತ್ತ ಹಣವೂ ಬಾರದೇ, ಅತ್ತ ಸಂಧಾನವೂ ನಡೆಯದೇ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾರೆ.

    ನಾನೇನಾದರೂ ಸೂಸೈಡ್ ಮಾಡಿಕೊಂಡರೆ ಅದಕ್ಕೇ ನೇರ ಹೊಣೆ ನಂದಕಿಶೋರ್ ಮತ್ತು ಸಾರಾ ಗೋವಿಂದ್ ಎಂದು ಆರೋಪಿಸಿ ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ ಶಬರೀಶ್ ಶೆಟ್ಟಿ. ಇದನ್ನೂ ಓದಿ: ಕೋರ್ಟ್ ಆದೇಶಿಸಿದ್ರೂ ಹಾಸಿಗೆ, ದಿಂಬು ಒದಗಿಸಿಲ್ಲ – ಮತ್ತೆ ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು

  • ರೆಬೆಲ್ ಸ್ಟಾರ್ ಅಂಬರೀಶ್‌ಗೂ `ಕರ್ನಾಟಕ ರತ್ನ’ ನೀಡುವಂತೆ ಮನವಿ

    ರೆಬೆಲ್ ಸ್ಟಾರ್ ಅಂಬರೀಶ್‌ಗೂ `ಕರ್ನಾಟಕ ರತ್ನ’ ನೀಡುವಂತೆ ಮನವಿ

    ಸಿನಿಮಾ ಹಾಗೂ ರಾಜಕೀಯದಲ್ಲಿ ಅಜಾತಶತ್ರುವಾಗಿ ಬೆಳೆದು ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟ ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಅವರಿಗೂ `ಕರ್ನಾಟಕ ರತ್ನ’ (Karnataka Ratna) ಪುರಸ್ಕಾರ ನೀಡುವಂತೆ ಅಭಿಮಾನಿಗಳು ಹಾಗೂ ಹಿರಿಯ ನಟಿ ತಾರಾ (Actress Tara) ಮನವಿ ಮಾಡಿದ್ದಾರೆ.

    ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರನ್ನ ಭೇಟಿಯಾಗಿ ನಟಿ ತಾರಾ ಅನುರಾಧ ಮನವಿ ಪತ್ರ ಕೊಟ್ಟಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದಲ್ಲದೇ ಕಲಿಯುಗದ ಕರ್ಣ ಎಂದು ಕರೆಸಿಕೊಳ್ಳುವ ಜನಮೆಚ್ಚಿದ ಕಲಾವಿದ ಅಂಬರೀಶ್. ಚಿತ್ರರಂಗಕ್ಕೆ ಹಿರಿಯಣ್ಣನಂತಿದ್ದರು, ರಾಜಕೀಯದಲ್ಲಿದ್ದರೂ ಪಕ್ಷಗಳ ಬೇದಭಾವವಿಲ್ಲದೆ ಸರ್ವರಿಗೂ ಇಷ್ಟವಾಗುವ ಸಜ್ಜನ ರಾಜಕಾರಣಿಯಾಗಿದ್ದರು.

    ಸಾಮಾಜಿಕ ಸೇವೆಯಲ್ಲಿ ಹೆಸರು ಮಾಡಿರುವ ಈ ಕಲಾವಿದನಿಗೆ ತಕ್ಕ ಗೌರವ ಕೊಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕೇಳಿಕೊಂಡಿದ್ದರು. ಇತ್ತೀಚೆಗೆ ಡಾ.ವಿಷ್ಣುವರ್ಧನ್ ಹಾಗೂ ಬಿ.ಸರೋಜಾದೇವಿಯವರಿಗೆ ಸರ್ಕಾರ `ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು.

    ಇದರ ಬೆನ್ನಲ್ಲೇ ಮರಣೋತ್ತರ `ಕರ್ನಾಟಕ ರತ್ನ’ ಗೌರವವನ್ನ ರೆಬೆಲ್ ಸ್ಟಾರ್ ಅಂಬರೀಶ್‌ಗೂ ಕೊಡುವಂತೆ ಒತ್ತಾಯ ಕೇಳಿಬಂದಿದೆ. ಅಭಿಮಾನಿಗಳು ಹಾಗೂ ಚಿತ್ರರಂಗದ ಪರವಾಗಿ ಹಿರಿಯ ನಟಿ ತಾರಾ ಅನುರಾಧ, ಡಿಸಿಎಂ ಬಳಿ ಮನವಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಯಾವ ನಿರ್ಧಾರಕ್ಕೆ ಬರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

  • ಶೀಘ್ರದಲ್ಲೇ ತೆರೆಗೆ ಬರಲಿದ್ದೇವೆ – `ಕೆಡಿ’ ಚಿತ್ರತಂಡದಿಂದ ಫಾನ್ಸ್‌ಗೆ ಗುಡ್‌ನ್ಯೂಸ್

    ಶೀಘ್ರದಲ್ಲೇ ತೆರೆಗೆ ಬರಲಿದ್ದೇವೆ – `ಕೆಡಿ’ ಚಿತ್ರತಂಡದಿಂದ ಫಾನ್ಸ್‌ಗೆ ಗುಡ್‌ನ್ಯೂಸ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಹಾಗೂ ಪ್ರೇಮ್ (Orem) ಕಾಂಬಿನೇಷನ್‌ನ `ಕೆಡಿ’ (KD) ಚಿತ್ರತಂಡವು ಫಾನ್ಸ್‌ಗೆ ಗುಡ್‌ನ್ಯೂಸ್ ನೀಡಿದೆ. ದಿಢೀರ್ ಸಿನಿಮಾ ಶೂಟಿಂಗ್ ಮುಕ್ತಾಯವಾಗಿರುವ ಸುದ್ದಿ ಅನೌನ್ಸ್ ಮಾಡಿರುವ ಟೀಮ್ ಶೀಘ್ರದಲ್ಲೇ ತೆರೆಗೆ ಬರ್ತೀವಿ ಎಂಬ ಲೇಟೆಸ್ಟ್ ಸುದ್ದಿಯನ್ನ ವೀಡಿಯೋ ಮಾಡಿ ಘೋಷಣೆ ಮಾಡಿದೆ.

    ಶೂಟಿಂಗ್ ಅಡ್ಡದಿಂದ ಸಿನಿಮಾ ತಂತ್ರಜ್ಞರ ಜೊತೆಗೂಡಿ ಧ್ರುವ ಸರ್ಜಾ ವೀಡಿಯೋ ಮೂಲಕ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿರೋದನ್ನ ಘೋಷಿಸಿದ್ದಾರೆ. ಈ ವೀಡಿಯೋವನ್ನ ನಿರ್ದೇಶಕ ಪ್ರೇಮ್ ಇನ್ಸ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಗೋಲ್ಡನ್ ಕ್ವೀನ್ ಅಮೂಲ್ಯ ಕಮ್‌ಬ್ಯಾಕ್

    ಶನಿವಾರವಷ್ಟೇ ಕೆಡಿ ಚಿತ್ರತಂಡ ಸುದೀಪ್ ಎಂಟ್ರಿಯನ್ನ ರಿವೀಲ್ ಮಾಡಿತ್ತು. ಅಭಿಮಾನಿಗಳಿಗೆ ಇದು ಸಪ್ರೈಸ್‌ ಆಗಿತ್ತು. ಈ ವಿಷಯ ಅರಗಿಸಿಕೊಳ್ಳುವಷ್ಟರಲ್ಲೇ ಶೂಟಿಂಗ್ ಕಂಪ್ಲೀಟ್ ಆಗಿರುವ ಮಾಹಿತಿ ಕೊಟ್ಟಿದೆ ಚಿತ್ರತಂಡ. ಇಷ್ಟೇ ಅಲ್ಲದೆ ಶೀಘ್ರದಲ್ಲೇ ತೆರೆಗೆ ಬರಲಿದ್ದೇವೆ ಅನ್ನೋದಾಗಿ ಘೋಷಿಸಿದೆ.

    ಅಂದಹಾಗೆ ಕೆಡಿ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರುವ ಪ್ರಯತ್ನದಲ್ಲಿದೆ ಎಂಬ ಸುದ್ದಿ ಇತ್ತು. ಅದಕ್ಕೀಗ ರೆಕ್ಕೆಪುಕ್ಕ ಬಂದಿದೆ. ಈಗಾಗ್ಲೇ ಡಿಸೆಂಬರ್‌ನಲ್ಲಿ ಮೂವರು ಬಿಗ್ ಸ್ಟಾರ್‌ಗಳ ಸಿನಿಮಾಗಳು ಸರತಿಯಲ್ಲಿ ನಿಂತಾಗಿದೆ. ಇದೀಗ `ಕೆಡಿ’ ಸಿನಿಮಾ ಎಲ್ಲಿ ಜಾಗ ಮಾಡಿಕೊಳ್ಳುತ್ತೆ ಅನ್ನೋದೇ ಲೆಕ್ಕಾಚಾರಕ್ಕೆ ಸಿಗದ ವಿಷಯ.