Tag: cinema

  • ರೋಗ್ ನಾಯಕಿ ಆಂಜೆಲಾ ಸುಳ್ಳು ಹೇಳ್ತಿದ್ದಾರೆ ಎಂದ ಹೃತಿಕ್

    ರೋಗ್ ನಾಯಕಿ ಆಂಜೆಲಾ ಸುಳ್ಳು ಹೇಳ್ತಿದ್ದಾರೆ ಎಂದ ಹೃತಿಕ್

    ಮುಂಬೈ: ರೋಗ್ ಚಿತ್ರದ ನಾಯಕಿ ಆಂಜೆಲಾ ಕ್ರಿಸ್ಲಿಂಕಿ ಸುಳ್ಳು ಹೇಳ್ತಿದ್ದಾರೆಂದು ಬಾಲಿವುಡ್ ನಟ ಹೃತಿಕ್ ರೋಷನ್ ಟ್ವೀಟ್ ಮಾಡಿದ್ದಾರೆ.

    ಇತ್ತೀಚೆಗಷ್ಟೆ ಬಿಡುಗಡೆಯಾದ ರೋಗ್ ಚಿತ್ರದಲ್ಲಿ ಅಭಿನಯಿಸಿದ್ದ ಆಂಜೆಲಾ ಕ್ರಿಸ್ಲಿಂಕಿ ಈ ಹಿಂದೆ ಹೃತಿಕ್ ರೋಷನ್ ಜೊತೆ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ರು. ಇತ್ತೀಚೆಗೆ ಪತ್ರಿಕೆಯೊಂದರ ಸಂದರ್ಶನದಲ್ಲಿ ಆಂಜೆಲಾ, ಹೃತಿಕ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ರು.

    ಆಂಜೆಲಾ ಹೇಳಿದ ಮಾತುಗಳನ್ನ ಕೇಳಿದ್ರೆ ಆಕೆ ಹಾಗೂ ಹೃತಿಕ್ ನಡುವೆ ವಿಶೇಷ ಬಾಂಧವ್ಯವಿದೆ ಎಂಬಂತಿದ್ದು, ಆಕೆಯನ್ನು ಕೈಟ್ಸ್ ಚಿತ್ರದ ನಾಯಕಿ ಬಾರ್ಬಾರಾ ಮೋರಿಯೊಂದಿಗೆ ಹೋಲಿಸಿ ಲೇಖನ ಪ್ರಕಟವಾಗಿತ್ತು. ಈ ಹಿಂದೆ ಬಾರ್ಬಾರಾ ಹಾಗೂ ಹೃತಿಕ್ ಮಧ್ಯೆ ಕುಚ್‍ಕುಚ್ ಇದೆ ಎಂಬ ವಂದಂತಿಗಳು ಹರಿದಾಡಿತ್ತು.

    ಇಂದು ಬೆಳಿಗ್ಗೆ ಪತ್ರಿಕೆ ಓದಿದ ಹೃತಿಕ್, ಅದರ ಸ್ಕ್ರೀನ್‍ಶಾಟ್ ತೆಗೆದು ಮೈ ಡಿಯರ್ ಲೇಡಿ, ಯಾರಮ್ಮಾ ನೀನು? ಯಾಕೆ ಸುಳ್ಳು ಹೇಳ್ತಿದ್ಯಾ ಅಂತ ಟ್ವೀಟ್ ಮಾಡಿದ್ದಾರೆ.

    ಸಂದರ್ಶನದಲ್ಲಿ ಆಂಜೆಲಾ ಹೇಳಿದ್ದೇನು?: ಹೃತಿಕ್ ರೋಷನ್ ಜೊತೆ ಮೊದಲ ಬಾರಿಗೆ ಜಾಹಿರಾತೊಂದಕ್ಕಾಗಿ ಕೆಲಸ ಮಾಡುವಾಗ ನನಗೆ ಅವರ ಮೇಲೆ ಕ್ರಶ್ ಆಗಿತ್ತು. ಅವರು ಕೆಲಸದಲ್ಲಿ ನನಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ನನಗೆ ನಟನೆಯ ಬಗ್ಗೆ ಟಿಪ್ಸ್ ನೀಡುತ್ತಿದ್ದರು. ನಾನು ಹೃತಿಕ್ ಅವರಲ್ಲಿ ಒಬ್ಬ ಗುರು ಹಾಗೂ ಗೆಳೆಯನನ್ನು ಕಂಡುಕೊಂಡಿದ್ದೇನೆ ಅಂತ ಹೇಳಿದ್ದಾರೆ.

    ಅವರು ನನ್ನನ್ನು ಮರೆತುಬಿಟ್ಟಿರ್ತಾರೆ ಅಂತ ಅಂದುಕೊಂಡಿದ್ದೆ. ಅವರೊಬ್ಬ ಸ್ಟಾರ್, ಸಾಕಷ್ಟು ಮಾಡೆಲ್‍ಗಳ ಜೊತೆ ಜಾಹಿರಾತು ಚಿತ್ರೀಕರಣ ಮಾಡಿರ್ತಾರೆ. ಆದ್ರೆ ಅವರು ನನಗೆ ಕರೆ ಮಾಡಿ ನಮ್ಮ ಎಲ್ಲಾ ಸಂಭಾಷಣೆಯನ್ನೂ ನೆನಪಿಸಿಕೊಂಡ್ರು. ನಮ್ಮ ತಂದೆ ಸ್ಪೇನ್‍ನ ವೆಲೆಂಸಿಯಾದವರು ಎಂಬುದನ್ನೂ ನೆನಪಿಟ್ಟಿದ್ದರು. ಅಲ್ಲದೆ ನನ್ನ ಕಣ್ಣಿನ ಬಣ್ಣ ಒರಿಜಿನಲ್ಲಾ? ಅಂತ ತಮಾಷೆ ಮಾಡಿದ್ರು. ನಾನು ದಕ್ಷಿಣದಲ್ಲಿ ಚಿತ್ರವೊಂದನ್ನು ಒಪ್ಪಿಕೊಂಡಾಗ ಅದರ ನಿರ್ದೇಶಕರ ಬಗ್ಗೆ ವಿಚಾರಿಸಿ ನಾನು ಈ ಸಿನಿಮಾದಿಂದ ದೊಡ್ಡ ಮಟ್ಟಕ್ಕೆ ಹೋಗ್ತೀನಿ ಎಂದಿದ್ದರು. ನಾನು ಅವರನ್ನು ಗುರುವಿನಂತೆ ನೋಡ್ತೀನಿ. ನನ್ನ ರೋಗ್ ಸಿನಿಮಾದ ಟ್ರೇಲರ್ ಮತ್ತು ಫಸ್ಟ್ ಲುಕ್ ಅವರಿಗೆ ತೋರಿಸಿದ್ದೆ. ಅವರು ಅದನ್ನು ತುಂಬಾ ಇಷ್ಟಪಟ್ಟಿದ್ದರು ಎಂದೆಲ್ಲಾ ಆಂಜೆಲಾ ಸಂದರ್ಶನದಲ್ಲಿ ಹೇಳಿದ್ದಾರೆ.

    ಆಂಜೆಲಾ ಈವರೆಗೆ ದಕ್ಷಿಣದಲ್ಲಿ ಜ್ಯೋತಿ ಲಕ್ಷ್ಮೀ, ಸೈಜ್ ಝೀರೋ ಮತ್ತು ಕನ್ನಡದ ರೋಗ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  • ಅಯ್ಯಪ್ಪ ಮಾಲೆ ಧರಿಸಿದ ಸ್ಯಾಂಡಲ್‍ವುಡ್ ಚಕ್ರವರ್ತಿ ದರ್ಶನ್

    ಅಯ್ಯಪ್ಪ ಮಾಲೆ ಧರಿಸಿದ ಸ್ಯಾಂಡಲ್‍ವುಡ್ ಚಕ್ರವರ್ತಿ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಮಾಲಾಧಾರಿಯಾಗಿದ್ದಾರೆ. ಕಳೆದ ಆರೇಳು ವರ್ಷಗಳಿಂದ ನಟ ದರ್ಶನ್ ಶಬರಿಮಲೆಗೆ ಹೋಗುತ್ತಿದ್ದು ಪ್ರತಿ ವರ್ಷವೂ ದರ್ಶನ್ ಶ್ರೀರಾಮಪುರ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಾಲೆ ಹಾಕಿ, ಒಂದು ವಾರಗಳ ಕಾಲ ಮಾಲಾಧಾರಿಯಾಗಿದ್ದು ನಂತರ ಶಬರಿಮಲೆಗೆ ತೆರಳೋದು ವಾಡಿಕೆ.

    ಇಂದು ಬೆಳಗ್ಗೆ 7.30ರ ವೇಳೆಗೆ ದರ್ಶನ್, ಶ್ರೀರಾಮಪುರದ ಅಯ್ಯಪ್ಪಸ್ವಾಮಿ ಮಂದಿರಕ್ಕೆ ತೆರಳಿ ಪೂಜೆ ಮಾಡಿಸಿ ಮಾಲೆ ಧರಿಸಿದ್ರು. ಈ ಬಾರಿ ಸುಮಾರು 35 ಜನರ ತಂಡ ದರ್ಶನ್ ಜೊತೆ ಶಬರಿಮಲೆಗೆ ತೆರಳುತ್ತಿದೆ.

    ದರ್ಶನ್ ಆಪ್ತರು, ಸಿನಿಮಾ ಸಹೋದ್ಯೋಗಿಗಳು ಸೇರಿದಂತೆ ಅನೇಕರು ದರ್ಶನ್ ಜೊತೆಯಲ್ಲಿರ್ತಾರೆ. ದರ್ಶನ್ ಸಹೋದರ ದಿನಕರ್, ನಿರ್ದೇಶಕ ಹೆಚ್ ವಾಸು, ನಿರ್ದೇಶಕ ಶಿವಮಣಿ, ಎಂಡಿ ಶ್ರೀಧರ್ ಸೇರಿದಂತೆ ಅನೇಕರು ದರ್ಶನ್ ಜೊತೆ ಇಂದು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ರು. ನಿರ್ದೇಶಕ ಎಂ ಡಿ ಶ್ರೀಧರ್ ಮಗ ಈ ಬಾರಿ ಕನ್ನಿಸ್ವಾಮಿಯಾಗಿ ಹೋಗುತ್ತಿದ್ದಾರೆ.

    ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

    ಏಪ್ರಿಲ್ 6 ರಂದು ಇರುಮುಡಿ ಪೂಜೆ ನಡೆಸಿ ಅಂದೇ ಶಬರಿಮಲೆಗೆ ದರ್ಶನ್ ಪ್ರಯಾಣ ಬೆಳೆಸಲಿದ್ದಾರೆ. ಏಪ್ರಿಲ್ 8ರ ಮುಂಜಾನೆ ವಾಪಸ್ಸಾಗಲಿದ್ದಾರೆ.

  • ಸ್ಯಾಂಡಲ್‍ವುಡ್‍ನಲ್ಲಿಂದು ಡಬಲ್ ಧಮಾಕ – ಮನಸು ಮಲ್ಲಿಗೆ, ರೋಗ್ ಸಿನಿಮಾ ತೆರೆಗೆ

    ಸ್ಯಾಂಡಲ್‍ವುಡ್‍ನಲ್ಲಿಂದು ಡಬಲ್ ಧಮಾಕ – ಮನಸು ಮಲ್ಲಿಗೆ, ರೋಗ್ ಸಿನಿಮಾ ತೆರೆಗೆ

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್‍ನಲ್ಲಿ ಎರಡು ಭರ್ಜರಿ ಚಿತ್ರಗಳು ರಿಲೀಸ್ ಆಗ್ತಿವೆ. ದೇಶದ ಚಿತ್ರಪ್ರೇಮಿಗಳ ಮನಗೆದ್ದ ಮರಾಠಿಯ ಸೈರಾಟ್ ಚಿತ್ರ ಕನ್ನಡದಲ್ಲಿ ಮನಸು ಮಲ್ಲಿಗೆಯಾಗಿ ಇವತ್ತು ರಿಲೀಸ್ ಆಗಲಿದೆ.

    ಕಳೆದ ವರ್ಷ ಮರಾಠಿ ಚಿತ್ರರಂಗವನ್ನ ಇಡೀ ಭಾರತೀಯ ಚಿತ್ರಪ್ರೇಮಿಗಳು ನೋಡುವಂತೆ ಮಾಡಿದ್ದ ಸಿನಿಮಾ ಸೈರಾಟ್. ಮರಾಠಿ ಚಿತ್ರರಂಗದಲ್ಲಿಯೇ ಮೊದಲ ಬಾರಿಗೆ ನೂರು ಕೋಟಿ ರೂ. ಸಂಪಾದಿಸಿತ್ತು. ಈಗ ಆ ಮರಾಠಿಯ ಮುದ್ದಾದ ಪ್ರೇಮಕಾವ್ಯ ಕನ್ನಡದಲ್ಲಿ ಮನಸು ಮಲ್ಲಿಗೆ ಎಂಬ ಹೆಸರಿನಲ್ಲಿ ಅರಳಲಿದೆ. ಕಲಾಸಾಮ್ರಾಟ್ ಎಸ್.ನಾರಾಯಣ್ ಕಲ್ಪನೆಯಲ್ಲಿ ಮನಸು ಮಲ್ಲಿಗೆ ಅರಳುತ್ತಿದೆ. ಮರಾಠಿಯ ಸೈರಾಟ್ ಚಿತ್ರದಲ್ಲಿ ಅಭಿನಯಿಸಿದ್ದ ರಿಂಕು ರಾಜ್‍ಗುರು ನಾಯಕಿಯಾಗಿ ಇಲ್ಲೂ ಮುಂದುವರೆದಿದ್ದಾರೆ. ನಿಶಾಂತ್ ಹೊಸ ನಾಯಕರಾಗಿದ್ದಾರೆ. ಮನಸು ಮಲ್ಲಿಗೆ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ.

    ಇನ್ನು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ 15 ವರ್ಷಗಳ ನಂತರ ರೋಗ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಬಂದಿದ್ದಾರೆ. ಹೊಸ ಹೀರೋಗಳನ್ನ ಸಿನಿ ಇಂಡಸ್ಟ್ರಿಗೆ ಪರಿಚಯ ಮಾಡೋದ್ರಲ್ಲಿ ನಿಸ್ಸೀಮರಾದ ಪೂರಿ ಜಗನ್ನಾಥ್, ಇದೀಗ ಹೊಸ ಪ್ರತಿಭೆ ಇಶಾನ್‍ರನ್ನ ಟಾಲಿವುಡ್ ಮತ್ತು ಸ್ಯಾಂಡಲ್‍ವುಡ್‍ಗೆ ಪರಿಚಯಿಸುತ್ತಿದ್ದಾರೆ. ಎರಡು ವಿಭಿನ್ನ ಶೇಡ್‍ನಲ್ಲಿ ಇಶಾನ್ ಕಾಣಿಸ್ಕೊಳ್ಳುತ್ತಿದ್ದು ಇಶಾನ್‍ಗೆ ಮನ್ನಾರಾ ಛೋಪ್ರಾ ಮತ್ತು ಆಂಜೆಲಾ ನಾಯಕಿಯರು. ಸಿ.ಆರ್.ಮನೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  • ಮೊಗ್ಗಿನ ಮನಸಿನ ಹುಡ್ಗಿಯ ಮುದ್ದಾದ ಫೋಟೋ ಶೂಟ್!

    ಮೊಗ್ಗಿನ ಮನಸಿನ ಹುಡ್ಗಿಯ ಮುದ್ದಾದ ಫೋಟೋ ಶೂಟ್!

    – ಪಡ್ಡೆ ಹುಡ್ಗರ ಶುಭರಾತ್ರಿಯಲ್ಲೂ ಕಾಡಲಿದ್ದಾರೆ ಶುಭಾ ಪೂಂಜಾ
    – ಸೀರೆಯಲ್ಲಿ ಕಂಗೊಳಿಸ್ತಿದ್ದಾರೆ ಶುಭಾಪೂಂಜಾ
    – ಲಂಗ ದಾವಣಿಗೂ ಸೈ, ಬಿಕಿನಿಗೂ ಜೈ

    ಬೆಂಗಳೂರು: ಮೊಗ್ಗಿನ ಮನಸ್ಸಿನ ಬೆಡಗಿ ನಟಿ ಶುಭಾ ಪೂಂಜಾ ಹೊಸ ಲುಕ್‍ನಲ್ಲಿ ನಿಮ್ಮುಂದೆ ಎಂಟ್ರಿ ಆಗೋಕೆ ರೆಡಿಯಾಗಿದ್ದಾರೆ. ಪಡ್ಡೆಗಳ ಹಾರ್ಟ್ ಬೀಟ್ ಜಾಸ್ತಿ ಮಾಡಲು, ಅವರು ಹಾಟ್ ಹಾಟ್ ಕಾಸ್ಟ್ಯೂಮ್‍ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಸಜ್ಜಾಗಿದ್ದಾರೆ. ಶುಭಾರನ್ನು ಬಿಕಿನಿಯಲ್ಲಿ ನೋಡುವ ಅವರ ಅಭಿಮಾನಿಗಳ ಆಸೆಗೆ ಅವರು ತಥಾಸ್ತು ಎಂದಿದ್ದಾರೆ.

    ನಟಿಮಣಿಯರು ಆಗಾಗ ಲುಕ್ ಚೇಂಜ್ ಮಾಡಿಸ್ಕೊಂಡು ಫೋಟೋ ಶೂಟ್ ಮಾಡಿಸ್ತಾನೆ ಇರ್ತಾರೆ. ಮೊದಲೇ ಹೆಣ್ಮಕ್ಕಳಿಗೂ ಕ್ಯಾಮರಾಗೂ ಏನೋ ಒಂದು ನಂಟು. ಕ್ಯಾಮರಾ ಕಂಡ್ರೆ ಸಾಕು ಸೈಡಿಗೆ ವಾಲಿಕೊಂಡು ತುಟಿ ಅಂಚಿನಲ್ಲಿ ಸ್ಮೈಲ್ ಕೊಡುತ್ತಾ ಪೋಸ್ ಕೊಡ್ತಾರೆ. ಸದ್ಯಕ್ಕೆ ಮೊಗ್ಗಿನ ಮನಸ್ಸಿನ ಹುಡುಗಿ ಕೂಡ ಇದೇ ಕೆಲಸ ಮಾಡಿದ್ದಾರೆ.

    ಶುಭಾ ಪೂಂಜಾ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಪದಾರ್ಪಣೆ ಮಾಡಿ, ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ಗ್ಲಾಮರ್ ಮೂಲಕ ಪಡ್ಡೆಗಳ ಹಾರ್ಟ್ ಬೀಟ್ ಹೆಚ್ಚಿಸಿದವರು. ತುಂಬಾ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿರುವ ಈ ನಟಿ ಈಗ ತಮ್ಮ ಫೋಟೋ ಶೂಟ್ ಕೂಡ ಅಷ್ಟೇ ಬೋಲ್ಡ್ ಆಗಿ ಮಾಡಿಸಿದ್ದಾರೆ.

                                             

    ಬಿಡದಿ ಬಳಿಯ ಒಂದು ರೆಸಾರ್ಟ್‍ನಲ್ಲಿ ಶುಭಾ ತಮ್ಮ ಫೋಟೋಶೂಟ್ ಮಾಡಿಸಿದ್ದಾರೆ. ಇದು ಯಾವ ಸಿನಿಮಾಗಾಗಿ ಅಲ್ಲ, ಯಾಕಂದ್ರೆ ಶುಭಾ ಆಗಾಗ ಫೋಟೋಶೂಟ್ ಮಾಡಿಸ್ತಾನೆ ಇರ್ತಾರಂತೆ. ಆದ್ರೆ ಈಗ ಮೊದಲ ಬಾರಿಗೆ ಬಿಕಿನಿ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ.

    ಐದಾರು ಕಾಸ್ಟ್ಯೂಮ್‍ನಲ್ಲಿ, ಬೇರೆ ಬೇರೆ ಭಂಗಿಗಳಲ್ಲಿ, ಬಿಕಿನಿ ಜೊತೆಗೆ ಸೀರೆಯನ್ನು ಉಟ್ಟುಕೊಂಡು ಕ್ಯಾಮರಾಗೆ ಚೆಂದವಾಗಿ ಪೋಸ್ ನೀಡಿದ್ದಾರೆ ಶುಭಾಪೂಂಜಾ.

    ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಶುಭಾ ಬ್ಯುಸಿಯಾಗಿದ್ದು, ಇವರ ಫೋಟೋ ಶೂಟ್ ನೋಡಿದ್ಮೇಲೆ ಇನ್ನಷ್ಟು ಆಫರ್‍ಗಳು ಇವರನ್ನು ಹುಡುಕಿ ಬಂದ್ರು ಆಶ್ಚರ್ಯವಿಲ್ಲ. ಎಂಥಹ ಪಾತ್ರಕ್ಕಾದರೂ ಸೈ ಎನ್ನುವ ಈ ಬೋಲ್ಡ್ ನಟಿ, ಇನ್ನಷ್ಟು ಒಳ್ಳೊಳ್ಳೆಯ ಪಾತ್ರಗಳ ಮೂಲಕ ಸಿನಿರಸಿಕರ ಮನರಂಜನೆಯ ದಾಹವನ್ನು ತಣಿಸಲಿ ಎನ್ನುವುದು ಎಲ್ಲರ ಆಸೆ.

  • ಪವರ್ ಸ್ಟಾರ್ ಪುನೀತ್‍ಗೆ 42ನೇ ಹುಟ್ಟುಹಬ್ಬದ ಸಂಭ್ರಮ

    ಪವರ್ ಸ್ಟಾರ್ ಪುನೀತ್‍ಗೆ 42ನೇ ಹುಟ್ಟುಹಬ್ಬದ ಸಂಭ್ರಮ

    – ರಾಜಕುಮಾರ ಚಿತ್ರತಂಡದಿಂದ ಸಾಂಗ್ ಟೀಸರ್ ಗಿಫ್ಟ್
    – ದಾವಣಗೆರೆಯಲ್ಲಿ ಅಪ್ಪುಗಾಗಿ ಪುಟ್ಟ ಅಭಿಮಾನಿ ಕಣ್ಣೀರು

    ಬೆಂಗಳೂರು/ದಾವಣಗೆರೆ : ಇವತ್ತು ಸ್ಯಾಂಡಲ್‍ವುಡ್‍ನ ರಾಜರತ್ನ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 42ನೇ ಜನ್ಮದಿನ. ರಾತ್ರಿಯಿಂದಲೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಅಪ್ಪು ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.

    ದೊಡ್ಮನೆ ಹುಡುಗನ ಹುಟ್ಟುಹಬ್ಬದ ಖುಷಿಯಲ್ಲಿ ರಾಜಕುಮಾರ ಚಿತ್ರತಂಡ ಚಿತ್ರದ ಸಾಂಗ್ ಟೀಸರ್‍ವೊಂದನ್ನು ಅಭಿಮಾನಿಗಳಿಗೆ ಗಿಫ್ಟ್ ಆಗಿ ನೀಡಿದೆ.

    ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಳಸಾಲ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟ ಬಾಲಕಿ ಪ್ರೀತಿಗೆ ಎರಡು ಕಿಡ್ನಿ ಫೇಲ್ಯೂರ್ ಆಗಿದೆ. ಅಪ್ಪನ ಇಸ್ತ್ರಿ ವೃತ್ತಿಯೇ ಬದುಕಿಗೆ ಆಧಾರ. ಚಿಕಿತ್ಸೆ ಸಿಗದಿದ್ರೆ ಪ್ರೀತಿ ಹೆಚ್ಚು ದಿನ ಬದುಕೋದಿಲ್ಲ ಎಂಬಂತಾಗಿದೆ. ಒಮ್ಮೆ ತನ್ನ ನೆಚ್ಚಿನ ಹೀರೋ ಪುನೀತ್‍ರನ್ನ ನೋಡ್ಬೇಕು, ಅವರೊಂದಿಗೆ ಮಾತಾಡ್ಬೇಕು, ಕೈ ಕುಲುಕಿ ಥ್ಯಾಂಕ್ಸ್ ಹೇಳ್ಬೇಕು ಅನ್ನೋದು ಈ ಬಾಲಕಿಯ ಆಸೆ.

  • ದರ್ಶನ್, ಸುದೀಪ್ ಜಗಳದಲ್ಲಿ ಅಂಬರೀಶ್ ಮಧ್ಯಸ್ಥಿಕೆ? ಸುಮಲತಾ ಹೀಗೆ ಹೇಳಿದ್ರು

    ದರ್ಶನ್, ಸುದೀಪ್ ಜಗಳದಲ್ಲಿ ಅಂಬರೀಶ್ ಮಧ್ಯಸ್ಥಿಕೆ? ಸುಮಲತಾ ಹೀಗೆ ಹೇಳಿದ್ರು

    ಬೆಂಗಳೂರು: ದರ್ಶನ್ ಮತ್ತು ಸುದೀಪ್ ನಡುವಿನ ಟ್ವಿಟರ್ ವಾರ್ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿರುವುದು ಸುಳ್ಳಲ್ಲ. ಆದ್ರೆ ಇವರಿಬ್ಬರ ಸಮಸ್ಯೆ ಬಗೆಹರಿಸಲು ಹಿರಿಯ ನಟ ಅಂಬರೀಷ್ ಮಧ್ಯಸ್ಥಿಕೆ ವಹಿಸಬೇಕು ಎಂದು ಅಭಿಮಾನಿಗಳು ಆಶಿಸಿದ್ದಾರೆ.

    ಈ ಬಗ್ಗೆ ಸುಮಲತಾ ಅಂಬರೀಶ್ ಅವರಿಗೆ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದು, ದರ್ಶನ್ ಮತ್ತು ಸುದೀಪ್ ನಡುವಿನ ಸಮಸ್ಯೆಯನ್ನು ಬಗೆಹರಿಸುವಂತೆ ಅಂಬರೀಶ್ ಅವರಿಗೆ ಹೇಳಿ ಎಂದು ಕೇಳಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರೋ ಸುಮಲತಾ, ದರ್ಶನ್ ಮತ್ತು ಸುದೀಪ್ ಇಬ್ಬರೂ ಪ್ರಬುದ್ಧರು. ಅವರೇ ನಿರ್ಧಾರ ಮಾಡಿದ್ದಾರೆ. ತಪ್ಪೋ ಸರಿಯೋ ಅದನ್ನು ಗೌರವಿಸಿ ಮುಂದೆ ಹೋಗೋಣ ಅಂತ ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್ ಮೂಲಕ ದರ್ಶನ್ ಸುದೀಪ್ ವಿಷಯದಲ್ಲಿ ಅಂಬರೀಶ್ ರಾಜಿಸಂಧಾನ ಇರಲ್ಲ ಅನ್ನೋದನ್ನ ಪರೋಕ್ಷವಾಗಿ ಹೇಳಿದಂತಾಗಿದೆ.

  • ಬಾಹುಬಲಿ-2 ಟ್ರೇಲರ್ ಬಿಡುಗಡೆಗೆ ಫಿಕ್ಸ್ ಆಯ್ತು ಮುಹೂರ್ತ

    ಬಾಹುಬಲಿ-2 ಟ್ರೇಲರ್ ಬಿಡುಗಡೆಗೆ ಫಿಕ್ಸ್ ಆಯ್ತು ಮುಹೂರ್ತ

    ಹೈದ್ರಾಬಾದ್: ದೇಶದ ಬಹುನಿರೀಕ್ಷಿತ ಚಿತ್ರ ಬಾಹುಬಲಿ-2 ಸಿನಿಮಾದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳು ಅಂದ್ರೆ ಮಾರ್ಚ್ 16ರಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ರಾಜಮೌಳಿ ಆಂಡ್ ಟೀಂ ರೆಡಿಯಾಗಿದೆ.

    ಮಾರ್ಚ್ 16 ರಂದು ಆಂಧ್ರಪ್ರದೇಶ ಹಾಗು ತೆಲಂಗಾಣ ರಾಜ್ಯಗಳ ಚಿತ್ರಮಂದಿರಗಳಲ್ಲಿ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಬೆಳಗ್ಗೆ 9 ಗಂಟೆಯಿಂದ 10 ಗಂಟೆ ಸಮಯದ ಮಧ್ಯದಲ್ಲಿ ಟ್ರೇಲರ್‍ನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು. ಇನ್ನೂ ಟ್ರೇಲರ್‍ನ್ನು ಅದೇ ದಿನ ಸಂಜೆ 5 ಗಂಟೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ರಿಲೀಸ್ ಮಾಡಲಾಗುತ್ತದೆ.

    ಇದನ್ನೂ ಓದಿ: ಬಾಹಬಲಿಯನ್ನು ಕೊಂದಿದ್ದು ಯಾಕೆ? ಕೊನೆಗೂ ಉತ್ತರ ಹೇಳಿದ ಕಟ್ಟಪ್ಪ!

    ಬಾಹುಬಾಲಿಯ ಮೊದಲ ಭಾಗದ ಟ್ರೇಲರ್‍ನ ಪ್ರಾಮುಖ್ಯತೆಯನ್ನು ಇದಕ್ಕೂ ನೀಡಲಾಗಿದೆ. ಮೊದಲ ಭಾಗದ ಚಿತ್ರದ ಟ್ರೇಲರ್‍ಗೆ ಬಳಸಿದ ತಂತ್ರಜ್ಞಾನ ಮತ್ತು ಫ್ಯಾಶನ್ ಈ ಟ್ರೇಲರ್‍ನಲ್ಲಿ ಬಳಸಿದ್ದೇವೆ ಎಂದು ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

    ಬಾಹುಬಲಿ-2 ಪ್ರಭಾಸ್, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್ ಮುಂತಾದ ದೊಡ್ಡ ತಾರಾಗಣವನ್ನು ಚಿತ್ರತ ಹೊಂದಿದೆ. ಬಾಹುಬಲಿ-2 ತೆಲಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಪ್ರಿಲ್ 28 ರಂದು ತೆರೆಕಾಣಲಿದೆ.

    ಇದನ್ನೂ ಓದಿ: ಮೋದಿ ಜೊತೆ ಬಾಹುಬಲಿ ಚಿತ್ರವನ್ನು ನೋಡಲಿದ್ದಾರಾ ಇಂಗ್ಲೆಂಡಿನ ರಾಣಿ?

     

  • `ರಾಜಕುಮಾರ’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

    `ರಾಜಕುಮಾರ’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

    ಬೆಂಗಳೂರು: ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ರಾಜಕುಮಾರ ಚಿತ್ರದ ಮೇಕಿಂಗ್ ವೀಡಿಯೋ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದೆ.

    ಚಿತ್ರದ ಶೂಟಿಂಗ್ ಹೇಗೆ ನಡೆದಿದೆ, ಪುನೀತ್ ರಾಜ್‍ಕುಮಾರ್ ಎಷ್ಟು ಸಿಂಪಲ್ ಎನ್ನುವುದನ್ನ ಈ ಮೇಕಿಂಗ್ ವೀಡಿಯೋ ಸಾರುತ್ತದೆ. ಈ ಮೇಕಿಂಗ್ ನ ಮತ್ತೊಂದು ವಿಶೇಷ ಅಂದ್ರೆ ಶೂಟಿಂಗ್ ಸೆಟ್‍ಗೆ ಕಿಚ್ಚ ಸುದೀಪ್, ನಟ ಯಶ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಸೇರಿದಂತೆ ಅನೇಕ ಗಣ್ಯರು ಬಂದಿರುವುದನ್ನ ತೋರಿಸಲಾಗಿದೆ.

    ಪವರ್ ಸ್ಟಾರ್ ಅಭಿನಯದ ರಾಜಕುಮಾರ ಚಿತ್ರದಲ್ಲಿ ಪುನೀತ್‍ಗೆ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಂತೋಷ್ ಆನಂದರಾಮ್ ನಿರ್ದೇಶನವಿದ್ದು, ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ. ಆಕ್ಷನ್ ಮತ್ತು ರೋಮ್ಯಾಂಟಿಕ್ ಕಥೆಯುಳ್ಳ ರಾಜಕುಮಾರ ಚಿತ್ರ ಇದೇ ತಿಂಗಳು 24 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

  • ಕಿಚ್ಚ- ದಚ್ಚು ವೈಮನಸ್ಸಿಗೆ ಅಭಿಮಾನಿಗಳು ಏನಂತಾರೆ?

    ಕಿಚ್ಚ- ದಚ್ಚು ವೈಮನಸ್ಸಿಗೆ ಅಭಿಮಾನಿಗಳು ಏನಂತಾರೆ?

    ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿರೋದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ನಾನು ದರ್ಶನ್ ಅಭಿಮಾನಿ, ಮೆಜೆಸ್ಟೆಕ್, ಕರಿಯಾ, ಇಂದ್ರ ಎಲ್ಲಾ ಸಿನಿಮಾ ನೋಡಿದ್ದೀನಿ. ಅವರ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬಾರದು. ಕಮೆಂಟ್ ಮಾಡಬಾರದು. ಮಾತನಾಡಿದ್ರೆ ಅಭಿಮಾನಿಗಳು ಸುಮ್ಮನಿರಲ್ಲಾ. ಸ್ಟ್ರೈಕ್ ಮಾಡ್ತೀವಿ. ಅವರಿಬ್ಬರೂ ಒಟ್ಟಿಗೆ ಬೆಳೆಯಬೇಕು. ಕನ್ನಡ ಇಂಡಸ್ಟ್ರಿ ನ ಬೆಳೆಸಬೇಕು. ದರ್ಶನ್‍ಗೋಸ್ಕರ ಪ್ರಾಣ ಬೇಕಾದ್ರೂ ಕೊಡ್ತೀವಿ ಅಂತ ನಂದೀಶ್ ಎಂಬ ಅಭಿಮಾನಿಯೊಬ್ಬರು ಹೇಳಿದ್ದಾರೆ.

    ಪ್ರತಿ ಸಾರಿ ಕನ್ನಡ ಫಿಲಂ ರಿಲೀಸ್ ಆದಾಗಲೂ ನಾವು ಹೀರೋಗಳ ಮುಖ ನೋಡಿಕೊಂಡು ಫಿಲಂ ನೋಡಲ್ಲ. ಕನ್ನಡ ಸಿನಿಮಾ ಉದ್ಯಮ ಬೆಳೆಯಬೇಕು ಎಂಬ ಭಾವನೆಯಿಂದ ಫಿಲಂ ನೋಡ್ತೇವೆ. ದರ್ಶನ್ ಸುದೀಪ್ ಮಧ್ಯೆ ಏನೇ ವೈಮನಸ್ಯ ಇದ್ರೂ ಅವರು ಮರೆಯಬೇಕು. ಕನ್ನಡ ಇಂಡಸ್ಟ್ರಿಗೆ ಕೆಟ್ಟ ಹೆಸರು ತರುವ ಬದಲು ಕನ್ನಡ ಇಂಡಸ್ಟ್ರಿ ಬೆಳೆಸುವ ಕಡೆ ಗಮನ ಹರಿಸಬೇಕು. ಸ್ನೇಹ ಅಂದ್ಮೇಲೆ ಸಣ್ಣ ಪುಟ್ಟ ಜಗಳ ಕಾಮನ್. ವಿರಸ ಇದ್ದೇ ಇರುತ್ತೆ. ಅದನ್ನೆಲ್ಲ ಮರೆಯಬೇಕು ಎಂದು ಕೇಳಿಕೊಳ್ಳುತ್ತೇವೆ. ಪ್ರತಿ ಸಿನಿಮಾ ರಿಲೀಸ್ ಆದಾಗಲೂ ನಾವು ನೋಡ್ತೇವೆ. ನಾವು ಕನ್ನಡ ಅಭಿಮಾನಿಗಳು. ಕನ್ನಡ ಸಿನಿಮಾ ಯಾವುದೇ ರಿಲೀಸ್ ಆದ್ರೂ ನೋಡ್ತೇವೆ. ಇವರಿಬ್ಬರ ಸ್ನೇಹ ಎಲ್ಲಾ ಯುವಕರಿಗೆ ಪ್ರೇರಣೆ. ಹಾಗಿದ್ದವರು ಅದೇ ರೀತಿ ಮತ್ತೆ ಸ್ನೇಹವನ್ನು ಮುಂದುವರಿಸಬೇಕು ಅಂತ ಮತ್ತೊಬ್ಬ ಅಭಿಮಾನಿ ನಂದನ್ ಹೇಳಿದ್ದಾರೆ.

    ಕನ್ನಡ ಚಲನಚಿತ್ರ ರಂಗದ ನಟರಾದ ದರ್ಶನ್ ಹಾಗೂ ಕಿಚ್ಚ ಸುದೀಪ್ ದೋಸ್ತಿಯ ಬ್ರೆಕ್ ವಿಚಾರದ ಬಗ್ಗೆ ದಾವಣಗೆರೆ ಜಿಲ್ಲೆಯಲ್ಲಿ ದರ್ಶನ್ ಅಭಿಮಾನಿಗಳಿಗೆ ಒಂದು ರೀತಿ ಆತಂಕ ಮೂಡಿದೆ. ದರ್ಶನ್ ಹಾಗೂ ಸುದೀಪ್ ನಡುವಿನ ದೋಸ್ತಿ ಕೊನೆಯವರೆಗೂ ಚೆನ್ನಾಗಿರಬೇಕು. ಇಬ್ಬರು ನಟರು ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    ದರ್ಶನ್ ಹಾಗೂ ಸುದೀಪ್ ನಡುವಿನ ದೊಸ್ತಿ ಮುರಿದು ಬೀಳಬಾರದು. ಅವರ ನಡುವಿನ ಸ್ನೇಹ ಗಟ್ಟಿಯಾಗಬೇಕು. ಎರಡು ದೇಹ ಒಂದೇ ಮನಸ್ಸುಳ್ಳವರಾಗಿ ಕನ್ನಡ ಚಿತ್ರರಂಗವನ್ನು ಮುನ್ನೆಡಿಸಿಕೊಂಡು ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಗದಗನಲ್ಲಿ ಸುದೀಪ್ ಅಭಿಮಾನಿಗಳು ಎಂದು ಹೇಳಿದರು.

    ಇಬ್ಬರು ನಟರ ನಡುವಿನ ಮನಸ್ತಾಪ ಶೀಘ್ರವಾಗಿ ದೂರವಾಗಲಿ. ಇಬ್ಬರ ಜಗಳದಿಂದ ಕನ್ನಡ ಫಿಲಂ ಇಂಡಸ್ಟ್ರಿಗೆ ನಷ್ಟವಾಗುತ್ತದೆ. ಸುದೀಪ್ ಮತ್ತು ದರ್ಶನ್ ತಮ್ಮ ಜಗಳ ಮರೆತು ಮತ್ತೆ ಒಂದಾಗಬೇಕು ಎಂದು ಉಡುಪಿಯಲ್ಲಿ ಅಭಿಮಾನಿಗಳು ತಿಳಿಸಿದ್ದಾರೆ.

    ಭಾನುವಾರ ಅಭಿಮಾನಿಯೊಬ್ರು ಸುದೀಪ್‍ಗೆ ಟ್ವೀಟರ್‍ನಲ್ಲಿ ನೀವು ಮತ್ತು ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ತುಂಬಾ ದಿನಗಳಾಗಿವೆ. ನಿಮ್ಮಿಬ್ಬರನ್ನ ಮತ್ತೆ ಒಟ್ಟಾಗಿ ನೋಡಲು ಬಯಸುತ್ತೇವೆ ಅಂತ ಟ್ವೀಟ್ ಮಾಡಿದ್ದರು. ಇದಕ್ಕೆ ಸುದೀಪ್ ಹೆಚ್ಚಿಗೆ ಏನೂ ಹೇಳದೆ ಸ್ಮೈಲಿ ಕೊಟ್ಟಿದ್ದಾರೆ.

     

  • ದರ್ಶನ್-ಸುದೀಪ್ ನಡುವಿನ ಮುನಿಸು ಇಂದಿನದ್ದಲ್ಲ- ಒಂದೂವರೆ ವರ್ಷದ ಹಿಂದೆಯೂ ನಡೆದಿತ್ತು ಕೋಲ್ಡ್ ವಾರ್

    ದರ್ಶನ್-ಸುದೀಪ್ ನಡುವಿನ ಮುನಿಸು ಇಂದಿನದ್ದಲ್ಲ- ಒಂದೂವರೆ ವರ್ಷದ ಹಿಂದೆಯೂ ನಡೆದಿತ್ತು ಕೋಲ್ಡ್ ವಾರ್

    ಬೆಂಗಳೂರು: ನಟ ಸುದೀಪ್ ಮತ್ತು ದರ್ಶನ್ ಮಧ್ಯೆ ಮನಸ್ತಾಪ ಬಂದಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಬ್ಬರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೋಲ್ಡ್ ವಾರ್ ನಡೆದಿತ್ತು.

    ಒಂದೆರಡು ವರ್ಷಗಳ ಹಿಂದೆ ದರ್ಶನ್ ಮತ್ತು ಸುದೀಪ್ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡ್ತಿದ್ರು. ಆದ್ರೆ ದರ್ಶನ್ ಸುದೀಪ್ ಅವರನ್ನ ಅನ್‍ಫಾಲೋ ಮಾಡಿದ್ರು. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ ಅಭಿಮಾನಿಗಳು ಕೇಳಿದ್ದರು.

    ಅಲ್ಲದೆ ಬರೋಬ್ಬರಿ ಒಂದೂವರೆ ವರ್ಷದ ಹಿಂದೆಯೇ ದೋಸ್ತಿಗಳು ಮಾತು ಬಿಟ್ಟಿದ್ದರು. ಒಂದೂವರೆ ವರ್ಷದಿಂದ ಇಬ್ಬರ ಮಧ್ಯೆ ಮಾತಿಲ್ಲ, ಕಥೆಯಿಲ್ಲ, ಫೋನ್ ಕೂಡ ಇಲ್ಲ ಎಂದು ಹೇಳಲಾಗಿದೆ. ದರ್ಶನ್ ಹುಟ್ಟುಹಬ್ಬಕ್ಕೆ ಮಾತ್ರ ಸುದೀಪ್ ಟ್ವೀಟ್ ಮಡುವ ಮೂಲಕ ವಿಶ್ ಮಾಡಿದ್ರು.

    ಇದನ್ನೂ ಓದಿ: ಸುದೀಪ್ ಅವರ ಈ ಮಾತಿನಿಂದ ದರ್ಶನ್ ಮನಸ್ಸಿಗೆ ಘಾಸಿ!

    ಇದನ್ನೂ ಓದಿ: ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?

    ಇದನ್ನೂ ಓದಿ: ದರ್ಶನ್-ಸುದೀಪ್ ವೈಮನಸ್ಸು ಹಿಂದೆ ದೊಡ್ಡ ಕಥೆಯಿದೆ-ಬುಲೆಟ್ ಪ್ರಕಾಶ್

    ಇದನ್ನೂ ಓದಿ: ಇಷ್ಟೆಲ್ಲಾ ಟ್ವೀಟ್ ಮಾಡಿದ್ದು ನಾನೇ, ಖಾತೆ ಹ್ಯಾಕ್ ಆಗಿಲ್ಲ: ದರ್ಶನ್

    ಇದನ್ನೂ ಓದಿ: ದರ್ಶನ್ ಸಿನಿ ಲೈಫ್ ಬದಲಿಸಿದ `ಮೆಜೆಸ್ಟಿಕ್’