Tag: cinema

  • ಮಾಧ್ಯಮಗಳಲ್ಲಿ ಕ್ಷಮೆ ಕೇಳಿದ ಹುಚ್ಚ ವೆಂಕಟ್

    ಮಾಧ್ಯಮಗಳಲ್ಲಿ ಕ್ಷಮೆ ಕೇಳಿದ ಹುಚ್ಚ ವೆಂಕಟ್

    ಬೆಂಗಳೂರು: ಇಂದು ಫಿಲ್ಮ್ ಚೇಂಬರ್‍ನಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಟ ಹುಚ್ಚವೆಂಕಟ್ ಮಾಧ್ಯಮಗಳ ಜೊತೆ ಕ್ಷಮೆ ಕೇಳಿದ್ದಾರೆ.

    ಶುಕ್ರವಾರ ಹುಚ್ಚವೆಂಕಟ್ ಅಭಿನಯದ ‘ಪೊರ್ಕಿ ಹುಚ್ಚವೆಂಕಟ್’ ಸಿನಿಮಾ ಬಿಡುಗಡೆಯಾಗಿತ್ತು. ಪತ್ರಿಕೆಯೊಂದು ಸಿನಿಮಾ ವಿಮರ್ಷೆಯನ್ನು ಪ್ರಕಟಿಸಿತ್ತು. ಈ ವಿಮರ್ಷೆಗೆ ಹುಚ್ಚ ವೆಂಕಟ್ ಕಿಡಿಕಾರಿದ್ದರು.

    ಈ ವಿಚಾರದ ಬಗ್ಗೆ ಫಿಲ್ಮ್ ಚೇಂಬರ್‍ನಲ್ಲಿ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹುಚ್ಚವೆಂಕಟ್ ಮಾಧ್ಯಮಗಗಳ ಜೊತೆ ವಾಗ್ವಾದಕ್ಕಿಳಿದರು. ಹುಚ್ಚ ವೆಂಕಟ್ ಮತ್ತು ಮಾಧ್ಯಮದವರ ನಡುವೆ ಮಾತಿನ ಚಕಮಕಿ ನಡೆದು ಹುಚ್ಚ ವೆಂಕಟ್ ಆವೇಶಭರಿತರಾಗಿ ವಿಮರ್ಶೆ ಮಾಡಲು ನಿವ್ಯಾರು, ವಿಮರ್ಶೆ ಮಾಡಲು ನಿಮಗೆ ಅಧಿಕಾರ ಕೊಟ್ಟವರ್ಯಾರು, ಅದನ್ನು ಜನರು ತಿರ್ಮಾನ ಮಾಡುತ್ತಾರೆ ಎಂದು ಮಾಧ್ಯಮದವರ ಮೇಲೆಯೇ ಸಿಟ್ಟಾದರು.

    ಇದನ್ನೂ ಓದಿ: ಪ್ಲೀಸ್ ಒಂದು ದಿನ ಹೌಸ್‍ಫುಲ್ ಮಾಡಿ: ಗಳಗಳನೇ ಅಳುತ್ತಾ ಕನ್ನಡಿಗರನ್ನು ಬೇಡಿಕೊಂಡ ಹುಚ್ಚ ವೆಂಕಟ್

    ರಾಜ್ಯದ ಮುಖ್ಯಮಂತ್ರಿಗಳು 50 ಸಾವಿರ ರೂ. ಖರ್ಚು ಮಾಡಿ ತೆಲಗು ಸಿನಿಮಾ ನೋಡುತ್ತಾರೆ. ಕನ್ನಡ ಚಿತ್ರಗಳನ್ನು ನೋಡಲಿ. ನನ್ನಿಂದ ತಪ್ಪಾಗಿದಲ್ಲಿ ಕ್ಷಮೆ ಇರಲಿ. ನಿಮಗೆ ಬರೆಯೋ ಅಧಿಕಾರ ಇದೆ. ಆದರೆ ವಿಮರ್ಷೆ ಮಾಡೋ ಆಗಿಲ್ಲ. ಸಿನಿಮಾ ಇಷ್ಟ ಇಲ್ಲ ಅಂದ್ರೆ ಸಿನಿಮಾ ನೋಡಲು ಬರಬೇಡಿ ಎಂದು ವೆಂಕಟ್ ಮಾಧ್ಯಮಗಳಿಗೆ ಹೇಳಿದರು.

    ಈ ಸಮಸ್ಯೆಗಳನ್ನ ಮುಂದುವರೆಸಿಕೊಂಡು ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ. ಹೀಗಾಗಿ ವೆಂಕಟ್ ಹತ್ರ ಮಾತಾಡಿ ಕೊನೆ ಮಾಡುವಂತೆ ಹೇಳಿದ್ದೇನೆ. ಅದಕ್ಕೂ ಅವರೂ ಒಪ್ಪಿ ಬಂದಿದ್ದಾರೆ ಎಂದು ಸಾ.ರಾ.ಗೋವಿಂದು ಮಾಧ್ಯಮಗಳಿಗೆ ತಿಳಿಸಿದರು.

     ಇದನ್ನೂ ಓದಿ: 200 ರೂ. ಫಿಕ್ಸ್ ಮಾಡಿ 1050 ರೂ. ತೆತ್ತು ಬಾಹುಬಲಿ ವೀಕ್ಷಿಸಿದ ಸಿಎಂ: ವಿಡಿಯೋ ನೋಡಿ

  • ಡಾ.ರಾಜ್‍ಕುಮಾರ್ ಮಣ್ಣಿನ ಪುತ್ಥಳಿ ನಿರ್ಮಾಣ: ಶಿವಣ್ಣ ಅಭಿಮಾನಿಗಳಿಗೆ ಹೇಳಿದ್ದು ಹೀಗೆ!

    ಡಾ.ರಾಜ್‍ಕುಮಾರ್ ಮಣ್ಣಿನ ಪುತ್ಥಳಿ ನಿರ್ಮಾಣ: ಶಿವಣ್ಣ ಅಭಿಮಾನಿಗಳಿಗೆ ಹೇಳಿದ್ದು ಹೀಗೆ!

    ಬೆಂಗಳೂರು: ವರನಟ ಡಾ. ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ 6 ಅಡಿ ಮಣ್ಣಿನ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಶಿವರಾಜ್‍ಕುಮಾರ್ ಮಾತ್ರ ಪುತ್ಥಳಿ ನಿರ್ಮಾಣ ಮಾಡುವುದು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ರಾಜ್ ಅವರ ಮಣ್ಣಿನ ಮೂರ್ತಿ ನಿರ್ಮಾಣ ಮಾಡಿ ಅದಕ್ಕೆ ಪೂಜೆ ಮಾಡಿ ಕೆರೆಗೆ ವಿಸರ್ಜನೆ ಮಾಡಲು ದೊಡ್ಮನೆಯ ಅಭಿಮಾನಿಗಳು ಮುಂದಾಗಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮಣ್ಣಿನ ಪುತ್ಥಳಿಕೆಯನ್ನು ಕೆರೆಯಲ್ಲಿ ವಿಸರ್ಜನೆ ಮಾಡುವುದರಿಂದ ಪರಿಸರ ಮಾಲಿನ್ಯ ಮತ್ತು ಜಲಚರಗಳಿಗೆ ಹಾನಿ ಉಂಟಾಗುತ್ತದೆ ಎಂದು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸ್ತಿದ್ದಾರೆ.

    ಶಿವಣ್ಣ ಹೇಳಿದ್ದು ಹೀಗೆ:
    ಅಪ್ಪಾಜಿಯ ಬಗ್ಗೆ ಜನರಿಗೆ ತುಂಬಾ ಅಭಿಮಾನವಿದೆ. ಅಪ್ಪಾಜಿ ಬದುಕಿದ್ದೇ ಅಭಿಮಾನಿಗಳಿಗೋಸ್ಕರ, ಅಪ್ಪಾಜಿ ಅವರು ನಾನು ಸತ್ತ ಮೇಲೆ ನನ್ನ ಹೂಳಲು ಜಾಗ ವೇಸ್ಟ್ ಮಾಡಬೇಡಿ. ಆ ಜಾಗವನ್ನು ಯಾರಿಗಾದ್ರೂ ಕೊಡಿ ಎಂದು ಹೇಳಿದ್ದರು. ಅಭಿಮಾನಿಗಳು ಏನೇ ಮಾಡಿದ್ರೂ ಅಪ್ಪಾಜಿಯ ಆಸೆ, ಆಕಾಂಕ್ಷೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡ್ಬೇಕು. ಅಭಿಮಾನಿಗಳ ಅಭಿಮಾನದಿಂದ ಯಾರಿಗೂ ತೊಂದರೆ ಆಗಬಾರದು. ಗಣಪತಿಯನ್ನು ಪೂಜೆ ಮಾಡಿ, ವಿಸರ್ಜನೆ ಮಾಡ್ತಿವಿ. ಅಪ್ಪಾಜಿಯೇ ಮನೆಯಲ್ಲಿ ಗಣಪತಿಯನ್ನು ಪೂಜೆ ಮಾಡುತ್ತಿದ್ದರು. ಅಪ್ಪಾಜಿಯನ್ನು ಗಣಪತಿ ದೇವರಿಗೆ ಹೋಲಿಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಶಿವಣ್ಣ ಮನವಿ ಮಾಡಿಕೊಂಡರು.

    ಅಪ್ಪಾಜಿಯ ಪುತ್ಥಳಿ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ಅಪ್ಪಾಜಿಯ ಪುತ್ಥಳಿಗಳು ಸಾಕಷ್ಟಿವೆ. ಅಪ್ಪಾಜಿಯನ್ನು ಅಭಿಮಾನಿಗಳು ಮನುಷ್ಯನ ರೂಪದಲ್ಲಿ ನೋಡುವುದು ಒಳ್ಳೇಯದು. ದೇವರ ರೂಪದಲ್ಲಿ ಬೇಡ. ಪರಿಸರ ನಮಗೆ ಮುಖ್ಯ. ಹಾಗಾಗಿ ಅದನ್ನು ನಾವು ಕಾಪಾಡಬೇಕು. ದಯವಿಟ್ಟು ಅಪ್ಪಾಜಿಯ ಮಣ್ಣಿನ ಪುತ್ಥಳಿ ನಿರ್ಮಾಣ ಬೇಡ. ಅಪ್ಪಾಜಿಯ ಮೂರ್ತಿ ನಿರ್ಮಾಣ ಮಾಡುವುದರಿಂದ ಇನ್ನೊಬ್ಬರಿಗೆ ತೊಂದರೆ ಆಗುವಂತಿದ್ದರೆ ಅದು ಖಂಡಿತ ಬೇಡ ಎಂದು ಶಿವಣ್ಣ ಹೇಳಿದರು.

    ಈ ರೀತಿ ಪ್ರತಿಮೆಗಳನ್ನು ಮಾಡೋದ್ರಿಂದ ಪರಿಸರ ಹಾಳಾಗುತ್ತೆ. ಉಳಿದ ಕಲಾವಿದರ ಅಭಿಮಾನಿಗಳು ಈ ಟ್ರೆಂಡ್ ಶುರು ಮಾಡಿದ್ರೆ ಪರಿಸರ ನಾಶವಾಗುತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

    https://youtu.be/IsuH0NIoeqs

     

  • ಪಠ್ಯ ಪುಸ್ತಕದಲ್ಲಿ ಇನ್ಮುಂದೆ ‘ರಾಜ್’ ಕಂಪು

    ಪಠ್ಯ ಪುಸ್ತಕದಲ್ಲಿ ಇನ್ಮುಂದೆ ‘ರಾಜ್’ ಕಂಪು

    ಬೆಂಗಳೂರು: ರಾಜ್ಯ ಪಠ್ಯ ಪುಸ್ತಕದಲ್ಲಿ ಇನ್ಮುಂದೆ ಡಾ. ರಾಜ್ ಕುಮಾರ್ ಕುರಿತಾದ ಪಠ್ಯ ಇರಲಿದೆ. ಈ ವರ್ಷದಿಂದಲೇ ಶಾಲೆಯ ಮಕ್ಕಳು ರಾಜ್‍ಕುಮಾರ್ ಜೀವನ ಚರಿತ್ರೆಯನ್ನ ಓದಲಿದ್ದಾರೆ.

    6ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ಡಾ. ರಾಜ್ ಕುಮಾರ್ ಜೀವನ ಚರಿತ್ರೆಯ ಪಠ್ಯ ಅಳವಡಿಕೆ ಮಾಡಲಾಗುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವೇಳೆಯೆ ರಾಜ್ ಕುಮಾರ್ ಕುರಿತಾದ ಪಠ್ಯ ಅಳವಡಿಸಲಾಗುತ್ತಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಕಮಿಟಿಯಿಂದ ಈಗಾಗಲೇ ರಾಜ್ ಜೀವನದ ಪಠ್ಯ ಸೇರ್ಪಡೆಯಾಗಿದೆ.

    ರಾಜ್ ಕುಮಾರ್ ಹುಟ್ಟು, ಬಾಲ್ಯ, ರಂಗಭೂಮಿ, ಸಿನಿಮಾ ಕ್ಷೇತ್ರದ ಸಂಪೂರ್ಣ ಸಾಧನೆಯ ಮಾಹಿತಿಯುಳ್ಳ ಪಠ್ಯ ಇರಲಿದೆ. 6 ಪುಟಗಳ ರಾಜ್ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಪತ್ರಕರ್ತ ದೊಡ್ಡ ಹುಲ್ಲೂರು ರುಕ್ಕೋಜಿ ಅವರು ಬರೆದಿರುವ ಪುಸ್ತಕದ ವಿಚಾರಗಳನ್ನ ಆಯ್ಕೆ ಮಾಡಿ ಪಠ್ಯ ರಚನೆ ಮಾಡಲಾಗಿದ್ದು, ಈ ವರ್ಷದಿಂದಲೇ ರಾಜ್ ಪಠ್ಯವನ್ನ ಮಕ್ಕಳು ಅಧ್ಯಯನ ಮಾಡಲಿದ್ದಾರೆ.

            

  • ಅಭಿಮಾನಿಗಳ ಗಮನ ಸೆಳೆಯುತ್ತಿದೆ ಸುದೀಪ್, ರಮ್ಯಾ ಮಾತುಗಳು

    ಅಭಿಮಾನಿಗಳ ಗಮನ ಸೆಳೆಯುತ್ತಿದೆ ಸುದೀಪ್, ರಮ್ಯಾ ಮಾತುಗಳು

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿಟ್ ಪೇರ್ ಲಿಸ್ಟ್ ಗಳಲ್ಲಿ ಒಂದಾಗಿರುವ ಸುದೀಪ್ ರಮ್ಯಾ ಜೋಡಿ ಈಗ ಟ್ವಿಟರ್‍ನಲ್ಲಿ ಒಬ್ಬರನ್ನೊಬ್ಬರು ಮಾತಾಡಿಕೊಂಡಿದ್ದಾರೆ.

    ಅಭಿ ಚಿತ್ರ ರಿಲೀಸ್ ಆಗಿ ಇಂದಿಗೆ 14 ವರ್ಷ. ಹೀಗಾಗಿ ಈ ಚಿತ್ರದ ಮೂಲಕ ಎಂಟ್ರಿ ಕೊಟ್ಟ ರಮ್ಯಾಗೆ ಸುದೀಪ್ ಟ್ವಿಟ್ಟರ್ ಮೂಲಕ 14 ವರ್ಷದ ಚಿತ್ರದ ಜರ್ನಿಗೆ ಶುಭಾಷಯ ಕೋರಿದ್ದಾರೆ.

    ಅದಕ್ಕೆ ಪ್ರತಿಯಾಗಿ ರಮ್ಯಾ ಧನ್ಯವಾದ ಸುದೀಪ್, ಒಬ್ಬ ಸಹನಟನಾಗಿ ನೀವು ಅದ್ಭುತ ನೆನಪುಗಳನ್ನ ಕೊಟ್ಟಿದ್ದೀರಾ ಅಂತ ಬರೆದುಕೊಂಡಿದ್ದಾರೆ. ಇವರಿಬ್ಬರ ಈ ಟ್ವಿಟರ್ ಮಾತುಕಥೆ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ನಾಲ್ಕು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದ ರಮ್ಯಾ ಮತ್ತು ಸುದೀಪ್ ಕಿಚ್ಚ ಹುಚ್ಚ ಚಿತ್ರದ ನಂತ್ರ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ರಮ್ಯಾ ಮತ್ತು ಸುದೀಪ್ ನಡುವೆ ಸಂಬಂಧ ಸರಿಯೇನಿಲ್ಲ ಅನ್ನೋ ಮಾತುಗಳು ಸ್ಯಾಂಡಲ್‍ವುಡ್‍ನಲ್ಲಿ ಹರಿದಾಡುತಿತ್ತು. ಆದರೆ ರಮ್ಯಾಗೆ ಈಗ ಶುಭಾಶಯ ಹೇಳುವುದರ ಮೂಲಕ ಸುದೀಪ್ ಈ ಎಲ್ಲ ಅಂತೆ ಕಂತೆ ಸುದ್ದಿಗಳಿಗೆ ತೆರೆಎಳೆದಿದ್ದಾರೆ.

    ಜಸ್ಟ್ ಮಾತ್ ಮಾತಲ್ಲಿ, ರಂಗ ಎಸ್‍ಎಸ್‍ಎಲ್‍ಸಿ, ಮುಸ್ಸಂಜೆಯ ಮಾತು, ಕಿಚ್ಚ ಹುಚ್ಚ ಚಿತ್ರದಲ್ಲಿ ಸುದೀಪ್, ರಮ್ಯಾ ಜೊತೆಯಾಗಿ ನಟಿಸಿದ್ದರು.

    ಪ್ರತಿಷ್ಟಿತ ವಜ್ರೇಶ್ವರಿ ಕಂಬೈನ್ಸ್ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟ ರಮ್ಯಾ, ರಾಜ್ ಕುಟುಂಬಕ್ಕೆ ತೀರಾ ಆಪ್ತರು. ಈ ಕಾರಣಕ್ಕಾಗಿ ಅಪ್ಪು ಜೊತೆ ಮೂರು ಸಿನಿಮಾಗಳಲ್ಲಿ ನಟಿಸುವ ಅವಕಾಶ ರಮ್ಯಾಗೆ ಮಾತ್ರ ಸಿಕ್ಕಿದೆ. ಮೂಲ ಹೆಸರು ದಿವ್ಯ ಸ್ಪಂದನ ಆಗಿದ್ರೂ ಚಿತ್ರರಂಗಕ್ಕೆ ರಮ್ಯಾ ಅಂತ ನಾಮಕರಣ ಮಾಡಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಪರಿಚಯಿಸಿದ್ದರು.

    ಅಭಿ ಚಿತ್ರದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ರಮ್ಯಾ ಮುಂದೆ ದಶಕಗಳ ಕಾಲ ಸ್ಯಾಂಡಲ್‍ವುಡ್ ಕ್ವೀನ್ ಆಗಿ ಮೆರೆದಿದ್ದರು. ರಾಜಕೀಯಕ್ಕೆ ಸೇರಿದ ಮೇಲೆ ರಮ್ಯಾ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದಾರೆ.

    ಇದನ್ನೂ ಓದಿ: ದರ್ಶನ್ ಜೊತೆ ಸಿನಿಮಾ ಮಾಡ್ತೀರಾ: ಅಭಿಮಾನಿಯ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದು ಹೀಗೆ

    https://twitter.com/pp66281/status/856762474665783296

  • ಮಾರಾಟಕ್ಕಿದೆ `ಕಿರಿಕ್ ಪಾರ್ಟಿ’ಯ `ಕಾಂಟೆಸ್ಸಾ ಕಾರ್’!

    ಮಾರಾಟಕ್ಕಿದೆ `ಕಿರಿಕ್ ಪಾರ್ಟಿ’ಯ `ಕಾಂಟೆಸ್ಸಾ ಕಾರ್’!

    ಬೆಂಗಳೂರು: ಕನ್ನಡದಲ್ಲಿ ಹಣ, ಕೀರ್ತಿ ಅಂತಾ ಸಖತ್ ಸುದ್ದಿ ಮಾಡಿದ ಸಿನಿಮಾ ಕಿರಿಕ್ ಪಾರ್ಟಿ. ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರದಲ್ಲಿ ನಾಯಕ ನಟನ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಮಿಂಚಿದ್ದರೆ, ನಾಯಕಿಯಾಗಿ ರಶ್ಮಿಕಾ ಮಂದಣ್ಣ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದಾರೆ.

    ಈ ಸಿನಿಮಾದಲ್ಲಿ ನಾಯಕ- ನಾಯಕಿಯಷ್ಟೇ ಮತ್ತೊಂದು ವಸ್ತು ಜನರ ಗಮನಸೆಳೆದಿದ್ದು, ಅದು ನಾಯಕ ನಟ ರಕ್ಷಿತ್ ಶೆಟ್ಟಿ ಓಡಿಸೋ ಓಪನ್ ಕಾರ್. ಪೋಸ್ಟರ್ ನಿಂದ ಹಿಡಿದು, ಹಾಡುಗಳಲ್ಲೂ ಈ ಕಾರು ಬಂದು ಹೋಗುತ್ತದೆ. ಈ ಹಳದಿ ಕಾಂಟೆಸ್ಸಾ ಕಾರನ್ನು ಇದೀಗ ಹರಾಜು ಹಾಕಲಾಗುತ್ತಿದೆಯಂತೆ.

    ಸಿನಿಮಾದಲ್ಲಿ ಆ ಕಾರನ್ನು 4-5 ಮಂದಿ ಸ್ನೇಹಿತರು ಹಣ ಶೇರ್ ಮಾಡಿ ಖರೀದಿ ಮಾಡಿರುತ್ತಾರೆ. ನಂತ್ರ ನಾಯಕ ಕರ್ಣ ಆ ಕಾರನ್ನು ತನ್ನದಾಗಿ ಮಾಡ್ಕೊಂಡು ಕಡೆಯಲ್ಲಿ ಹರಾಜು ಮಾಡಿ, ಬಡ ಹುಡುಗಿಗೆ ಹಣ ನೀಡ್ತಾನೆ. ಇದೀಗ ಚಿತ್ರತಂಡವೂ ಕೂಡ ಅದೇ ಕೆಲಸಕ್ಕೆ ಕೈ ಹಾಕಿದೆ. ಸಮಾಜ ಸೇವೆಯ ಉದ್ದೇಶಕ್ಕಾಗಿಯೇ ನಿರ್ದೇಶಕ ರಿಷಬ್ ಶೆಟ್ಟಿ ಕಾರನ್ನು ಮಾರಾಟ ಮಾಡಲು ತಯಾರಿ ನಡೆಸಿದ್ದಾರಂತೆ. ಅದಕ್ಕಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ `ಕಿರಿಕ್ ಕಾರಿ’ಗಾಗಿ ಅಂತಾ ಪ್ರತ್ಯೇಕ ಪೇಜ್ ಕೂಡ ಓಪನ್ ಆಗಿದೆ.

    ಸಮಾಜದ ಏಳಿಗಾಗಿ ಸಿನಿಮಾದಲ್ಲಿ ಬಳಸಿದ ಕಾರು ಮಾರಾಟ ಮಾಡಿರುವುದು ಒಂದು ಶ್ಲಾಘನೀಯ ಕಾರ್ಯವಾಗಿದೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಚೇತನ್ ಚಂದ್ರ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಚೇತನ್ ಚಂದ್ರ

    ಶಿವಮೊಗ್ಗ: ಪ್ರೇಮಿಸಂ ಚಿತ್ರದ ನಾಯಕ ಚೇತನ್ ಚಂದ್ರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ರಚನಾ ಹೆಗಡೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಇರುವ ಭದ್ರಕಾಳಿ ಕಲ್ಯಾಣ ಮಂಟಪದಲ್ಲಿ ನಡೆದ ಇವರ ಮದುವೆಗೆ ಎರಡೂ ಕುಟುಂಬಗಳ ಬಂಧುಗಳು ಹಾಗೂ ಸ್ನೇಹಿತರು ಸಾಕ್ಷಿಯಾದ್ರು. ಪಿಯುಸಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಚೇತನ್ ಚಂದ್ರ ಬಳಿಕ ನಟ ಯಶ್‍ರೊಂದಿಗೆ ರಾಜಧಾನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಹುಚ್ಚುಡುಗ್ರು, ಕುಂಭರಾಶಿ, ಪ್ಲಸ್, ಜಾತ್ರೆ, ಪ್ರೇಮಿಸಂ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದರು.

    ಚೇತನ್ ಚಂದ್ರ- ರಚನಾ ಹೆಗಡೆ ಪ್ರೀತಿಗೆ ಎರಡೂ ಕುಟುಂಬಗಳು ಒಪ್ಪಿಗೆ ನೀಡಿದ್ದವು. ಈ ಹಿನ್ನಲೆಯಲ್ಲಿ ಕುಟುಂಬದ ಹಿರಿಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ನಡೆಯಿತು.

     

  • ಭಗೀರಥನಾದ್ರು, ಈಗ ಮೇವು ಪೂರೈಕೆಗೆ ಯಶೋಮಾರ್ಗ ಪ್ಲಾನ್

    ಭಗೀರಥನಾದ್ರು, ಈಗ ಮೇವು ಪೂರೈಕೆಗೆ ಯಶೋಮಾರ್ಗ ಪ್ಲಾನ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ಯಶೋಮಾರ್ಗದ ಮೂಲಕ ಹಲವು ಸಮಾಜಮುಖಿ ಕೆಲಸಗಳನ್ನ ಮಾಡ್ತಿದ್ದಾರೆ. ಸದ್ಯ ಯಶ್ ಮತ್ತೊಂದು ರೈತಪರ ಕಾಳಜಿಯ ಕೆಲಸಕ್ಕೆ ಕೈ ಹಾಕಿದ್ದಾರೆ.

    ಮೇವಿನ ಕೊರತೆಯಿಂದ ಬಳಲ್ತಿರೋ ಜಾನುವಾರುಗಳಿಗೆ ಮೇವು ಒದಗಿಸುವ ಕಾರ್ಯಕ್ಕೆ ಯಶ್ ಕೈ ಜೋಡಿಸಿದ್ದಾರೆ. ಕೊಳ್ಳೆಗಾಲ ಸಮೀಪದ ಮಲೆಮಹದೇಶ್ವರ ಬೆಟ್ಟ ಹಾಗೂ ಅಲ್ಲಿನ ಹಲವು ಪ್ರದೇಶಗಳಿಗೆ ತೆರೆಳಿ ಅಲ್ಲಿ ಜಾನುವಾರುಗಳಿಗೆ ಆಗ್ತಿದ್ದ ಮೇವಿನ ಸಮಸ್ಯೆ ಬಗ್ಗೆ ಆದ ಮಾಧ್ಯಮದ ವರದಿ ಹಾಗು ವಿಡಿಯೋ ನೊಡಿದ್ದಾರೆ. ಸದ್ಯ ಮೇವಿನ ಸಮಸ್ಯೆ ನಿವಾರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲಿನ ಗೋವುಗಳಿಗೆ ಒದಗಿಸುತ್ತಿರುವ ಮೇವು ಸಾಲದಾಗಿದ್ದು ಯಶ್ ಈ ಕುರಿತು ಸಂಸದ ದೃವನಾರಾಯಣ್ ಹಾಗೂ ಎ ಮಂಜು ಜೊತೆ ಮಾತನಾಡಿದ್ದಾರೆ.

    ಇದನ್ನೂ ಓದಿ: ಕೊಪ್ಪಳದಲ್ಲಿ ಯಶೋಮಾರ್ಗದ ಫಲ- ಬತ್ತಿ ಹೋಗಿದ್ದ ಕೆರೆಯಲ್ಲಿ ಉಕ್ಕುತ್ತಿದೆ ಜೀವ

    ಸದ್ಯ ಯಶೋಮಾರ್ಗ ಫೌಂಡೇಷನ್ ಮೂಲಕ ಹಲವು ರೈತಪರ ಕಾರ್ಯಕ್ಕೆ ಮುಂದಾಗಿರೋ ಯಶ್ ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಅಲ್ಲಿನ ಜಾನುವಾರುಗಳಿಗೆ ಮೇವಿನ ತೊಂದರೆ ನಿವಾರಣೆಯಾಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದೇನೆ ಅಂತ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

     

  • ಚಿತ್ತಾರದ ಬೆಡಗಿ ಅಮೂಲ್ಯ ಮದುವೆ ಆಮಂತ್ರಣ ಪತ್ರಿಕೆ ರೆಡಿ

    ಚಿತ್ತಾರದ ಬೆಡಗಿ ಅಮೂಲ್ಯ ಮದುವೆ ಆಮಂತ್ರಣ ಪತ್ರಿಕೆ ರೆಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಮದುವೆಗೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಉದ್ಯಮಿ ಜಗದೀಶ್ ಆರ್ ಚಂದ್ರ ಅವರ ಜೊತೆ ಸಪ್ತಪದಿ ತುಳಿಯೋಕೆ ಚೆಲುವಿನ ಚಿತ್ತಾರದ ಬೆಡಗಿ ರೆಡಿಯಾಗಿದ್ದಾರೆ.

    ಇದನ್ನೂ ಓದಿ: ಮದುವೆಯಾದ ಬಳಿಕ ಚಿತ್ರದಲ್ಲಿ ನಟನೆ ಮಾಡ್ತೀರಾ: ಅಮೂಲ್ಯ ಉತ್ತರ ಇದು
    ಮೇ 12 ರಂದು ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಮದುವೆ ನಡೆಯಲಿದೆ. ಕುಟುಂಬಸ್ಥುರು ಹಾಗೂ ತೀರಾ ಆಪ್ತರಿಗಷ್ಟೇ ಮದುವೆಗೆ ಆಹ್ವಾನಿಸಲಾಗಿದ್ದು ಇದೀಗ ವಿವಾಹದ ಆಮಂತ್ರಣ ಪತ್ರಿಕೆ ರೆಡಿಯಾಗಿದೆ. ಈ ಆಮಂತ್ರಣ ಪತ್ರಿಕೆಯನ್ನ ಈಗಾಗ್ಲೇ ಜಗದೀಶ್ ಕುಟುಂಬ ತಮ್ಮ ಆಪ್ತರಿಗೆ ಬಂದು ಮಿತ್ರರಿಗೆ ಹಂಚುತ್ತಿದ್ದಾರೆ.

    ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

    ಮಾರ್ಚ್ 6ರಂದು ಬೆಂಗಳೂರಿನ ಶ್ರೀ ಸಾಯಿ ಪ್ಯಾಲೇಸ್‍ನಲ್ಲಿ ಅಮೂಲ್ಯ ಹಾಗೂ ಜಗದೀಶ್ ಅವರ ನಿಶ್ಚಿತಾರ್ಥ ನೆರವೇರಿತ್ತು. ಅಮೂಲ್ಯ ಕೈ ಹಿಡಿಯಲಿರುವ ಜಗದೀಶ್ ಮಾಜಿ ಕಾರ್ಪೋರೇಟರ್ ಮಗ. ಲಂಡನ್‍ನಲ್ಲಿ ಎಂಬಿಎ ಮಾಡಿದ್ದು ಬೆಂಗಳೂರಿನ ಆರ್ ಆರ್ ನಗರ ನಿವಾಸಿಯಾಗಿದ್ದಾರೆ.

  • ಶೃತಿಹರಿಹರನ್, ಅಚ್ಯುತ್ ಕುಮಾರ್‍ಗೆ ಅತ್ಯುತ್ತಮ ನಟಿ-ನಟ ಪ್ರಶಸ್ತಿ: ಪೂರ್ಣ ಪಟ್ಟಿ ಇಲ್ಲಿದೆ

    ಶೃತಿಹರಿಹರನ್, ಅಚ್ಯುತ್ ಕುಮಾರ್‍ಗೆ ಅತ್ಯುತ್ತಮ ನಟಿ-ನಟ ಪ್ರಶಸ್ತಿ: ಪೂರ್ಣ ಪಟ್ಟಿ ಇಲ್ಲಿದೆ

    ಬೆಂಗಳೂರು: 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಕವಿತಾ ಲಂಕೇಶ್ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಸಿಎಂಗೆ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಸಲ್ಲಿಕೆಯಾಗಿದೆ. ಏಪ್ರಿಲ್ 24ರಂದು ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ದಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

    ಅಮರಾವತಿ ಚಿತ್ರಕ್ಕಾಗಿ ಅಚ್ಯುತ್‍ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಬ್ಯೂಟಿಫುಲ್ ಮನಸುಗಳು ಚಿತ್ರಕ್ಕಾಗಿ ಶೃತಿ ಹರಿಹರನ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 126 ಚಿತ್ರಗಳಲ್ಲಿ ಅಮರಾವತಿ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನ ಗಿಟ್ಟಿಸಿಕೊಂಡಿದೆ.

    2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪೂರ್ಣ ಪಟ್ಟಿ

    * ಅತ್ಯುತ್ತಮ ನಟ – ಅಚ್ಯುತ್‍ಕುಮಾರ್ (ಅಮರಾವತಿ)
    * ಅತ್ಯುತ್ತಮ ನಟಿ – ಶೃತಿ ಹರಿಹರನ್ (ಬ್ಯೂಟಿಫುಲ್ ಮನಸುಗಳು)
    * ಮೊದಲ ಅತ್ಯುತ್ತಮ ಚಿತ್ರ – ಅಮರಾವತಿ
    * ದ್ವಿತೀಯ ಅತ್ಯುತ್ತಮ ಚಿತ್ರ – ರೈಲ್ವೇ ಚಿಲ್ಡ್ರನ್
    * ತೃತೀಯ ಅತ್ಯುತ್ತಮ ಚಿತ್ರ- ಅಂತರ್ಜಲ

    * ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ- ಮೂಡ್ಲ ಸೀಮೆಯಲಿ
    * ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ- ಕಿರಿಕ್ ಪಾರ್ಟಿ
    * ಅತ್ಯುತ್ತಮ ಮಕ್ಕಳ ಚಿತ್ರ – ಜೀರ್ ಜಿಂಬೆ
    * ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಚಿತ್ರ- ಮದಿಪು (ತುಳು ಭಾಷೆ)
    * ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ- ರಾಮ ರಾಮಾ ರೇ

    * ಅತ್ಯುತ್ತಮ ಪೋಷಕ ನಟ – ನವೀನ್ ಡಿ ಪಡೀಲ್ (ಕುಡ್ಲ ಕೆಫೆ)
    * ಅತ್ಯುತ್ತಮ ಪೋಷಕ ನಟಿ – ಅಕ್ಷತಾ ಪಾಂಡವಪುರ (ಪಲ್ಲಟ)
    * ಅತ್ಯುತ್ತಮ ಕಥೆ – ನಂದಿತಾ ಯಾದವ್ (ರಾಜು ಎದೆಗೆ ಬಿದ್ದ ಅಕ್ಷರ)
    * ಅತ್ಯುತ್ತಮ ಚಿತ್ರಕಥೆ – ಅರವಿಂದ ಶಾಸ್ತ್ರಿ(ಕಹಿ)
    * ಅತ್ಯುತ್ತಮ ಸಂಭಾಷಣೆ – ಬಿಎಂ ಗಿರಿಧರ್ (ಅಮರಾವತಿ)

    * ಅತ್ಯುತ್ತಮ ಛಾಯಾಗ್ರಹಣ- ಶೇಖರ್ ಚಂದ್ರ (ಮುಂಗಾರು ಮಳೆ 2)
    * ಅತ್ಯುತ್ತಮ ಸಂಗೀತ ನಿರ್ದೇಶಕ- ಎಂಆರ್ ಚರಣ್ ರಾಜ್ (ಜೀರ್ ಜಿಂಬೆ)
    * ಅತ್ಯುತ್ತಮ ಸಂಕಲನ – ಸಿ. ರವಿಚಂದ್ರನ್ (ಮಮ್ಮಿ)
    * ಅತ್ಯುತ್ತಮ ಬಾಲನಟ – ಮಾ. ಮನೋಹರ್ ಕೆ (ರೈಲ್ವೆ ಚಿಲ್ಡ್ರನ್)
    * ಅತುತ್ತಮ ಬಾಲನಟಿ – ಬೇಬಿ ಸಿರಿವಾನಳ್ಳಿ (ಜೀರ್‍ಜಿಂಬೆ)
    * ಅತ್ಯುತ್ತಮ ಬಾಲನಟಿ – ಬೇಬಿ ರೇವತಿ (ಬೇಟಿ)

    * ಅತ್ಯುತ್ತಮ ಕಲಾ ನಿರ್ದೇಶನ- ಶಶಿಧರ ಅಡಪ (ಉಪ್ಪಿನ ಕಾಗದ)
    * ಅತ್ಯುತ್ತಮ ಗೀತ ರಚನೆ- ಕಾರ್ತಿಕ್ ಸರಗೂಡು (ಜೀರ್ ಜಿಂಬೆ ಚಿತ್ರದ ದೊರೆ ಓ ದೊರೆ ಹಾಡಿಗಾಗಿ)
    * ಅತ್ಯುತ್ತಮ ಗಾಯಕ – ವಿಜಯ್ ಪ್ರಕಾಶ್ – ಬ್ಯೂಟಿಫುಲ್ ಮನಸುಗಳು ಚಿತ್ರದ ನಮ್ಮೂರಲ್ಲಿ ಚಳಿಗಾಲದಲ್ಲಿ ಹಾಡಿಗಾಗಿ)
    * ಅತ್ಯುತ್ತಮ ಗಾಯಕಿ ಸಂಗೀತಾ ರವೀಂದ್ರನಾಥ್ (ಜಲ್ಸಾ ಚಿತ್ರದ ನನ್ನೆದೆ ಬೀದಿಗೆ ಹಾಡಿಗಾಗಿ)

    ತೀರ್ಪುಗಾರರ ವಿಶೇಷ ಪ್ರಶಸ್ತಿ
    * ವಸ್ತ್ರಾಲಂಕಾರ- ಚಿನ್ಮಯ್ (ಸಂತೆಯಲ್ಲಿ ನಿಂತ ಕಬೀರ ಚಿತ್ರಕ್ಕೆ)
    * ಅತ್ಯುತ್ತಮ ನಿರ್ಮಾಣ ನಿರ್ವಾಹಕ- ಕೆವಿ ಮಂಜಯ್ಯ (ಮುಂಗಾರು ಮಳೆ-2 ಚಿತ್ರಕ್ಕೆ)

    https://www.youtube.com/watch?v=nCiVjcjDmRk

     

  • ವಿಡಿಯೋ: ಕಾಲ್ನಡಿಗೆಯಲ್ಲಿ ಶಬರಿಮಲೆ ಬೆಟ್ಟ ಹತ್ತುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

    ವಿಡಿಯೋ: ಕಾಲ್ನಡಿಗೆಯಲ್ಲಿ ಶಬರಿಮಲೆ ಬೆಟ್ಟ ಹತ್ತುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

    ಬೆಂಗಳೂರು: ಮಾರ್ಚ್ 31ರಂದು ಅಯ್ಯಪ್ಪ ಮಾಲೆ ಧರಿಸಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಗುರುವಾರದಂದು ಇರುಮುಡಿ ಹೊತ್ತು ಶಬರಿಮಲೆಗೆ ತೆರಳಿದ್ದರು. ಇಂದು ಕಾಲ್ನಡಿಗೆಯಲ್ಲಿ ಶಬರಿಮಲೆ ಬೆಟ್ಟವನ್ನ ಹತ್ತಿ ದೇವರ ದರ್ಶನವನ್ನು ಪಡೆಯಲಿದ್ದಾರೆ.

    ಕಳೆದ 6 ವರ್ಷದಿಂದ ದರ್ಶನ್ ಶಬರಿಮಲೆ ಯಾತ್ರೆಯನ್ನ ಮಾಡಿಕೊಂಡು ಬರುತ್ತಿದ್ದಾರೆ. ಈ ವರ್ಷವು ಕೂಡ ಮಲಾಧಾರಿಯಾಗಿ ಕಠಿಣ ವ್ರತ ಕೈಗೊಂಡು ಅಯ್ಯಪ್ಪನ ದರ್ಶನ ಮಾಡುತ್ತಿದ್ದಾರೆ.

    ದರ್ಶನ್ ಜೊತೆ ಸಹೋದರ ದಿನಕರ್ ತೂಗುದೀಪ್, ನಿರ್ದೇಶಕರಾದ ಶಿವಮಣಿ, ಎಂ.ಡಿ ಶ್ರೀಧರ್, ಹೆಚ್. ವಾಸು, ದರ್ಶನ್ ಸ್ನೇಹಿತರು ಸೇರಿದಂತೆ 36 ಮಂದಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ತೆರಳಿದ್ದಾರೆ. ಭಾನುವಾರ ಬೆಳಗ್ಗೆ ಶಬರಿಮಲೆ ಯಾತ್ರೆ ಮುಗಿಸಿ ದರ್ಶನ್ ವಾಪಸ್ಸಾಗಲಿದ್ದಾರೆ.

    https://www.youtube.com/watch?v=JOAsX2npLGg