Tag: cinema

  • ಎಚ್‍ಡಿಕೆ ಆಯ್ತು, ಈಗ ಬಿಎಸ್‍ವೈ ಬಗ್ಗೆಯೂ ಬರಲಿದೆ ಸಿನಿಮಾ! ಸಿನಿಮಾ ಹೆಸರೇನು?

    ಎಚ್‍ಡಿಕೆ ಆಯ್ತು, ಈಗ ಬಿಎಸ್‍ವೈ ಬಗ್ಗೆಯೂ ಬರಲಿದೆ ಸಿನಿಮಾ! ಸಿನಿಮಾ ಹೆಸರೇನು?

    ಮಂಡ್ಯ: ಮಾಜಿ ಮುಖ್ಯಮಂತ್ರಿ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಜೀವನಾಧಾರಿತ ಚಿತ್ರ ನಿರ್ಮಾಣದ ಸುದ್ದಿಯ ನಂತ್ರ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕುರಿತ ಚಿತ್ರವೂ ಕೂಡ ನಿರ್ಮಾಣವಾಗಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

    ಎಚ್‍ಡಿಕೆ ಅವರ 20 ತಿಂಗಳ ಅಧಿಕಾರ ಕುರಿತು ಭೂಮಿಪುತ್ರ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಆದ್ರೆ ಈ ಸಿನಿಮಾದಲ್ಲಿ ನೈಜತೆ ಇರುವುದಿಲ್ಲ. ನಾವೂ ಕೂಡ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಜೀವನ ಕುರಿತ ಚಿತ್ರ ನಿರ್ಮಿಸುತ್ತೇವೆ. ಈಗಾಗಲೇ ಈ ಸಂಬಂಧ ನಮ್ಮ ಕಾರ್ಯಕರ್ತರು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ ಎಂದು ಮಾಜಿ ಸಂಸದೆ, ಬಿಜೆಪಿ ನಾಯಕಿ ತೇಜಸ್ವಿನಿ ಹೇಳಿದ್ದಾರೆ.

    ಕಾರ್ಯಕರ್ತರು ಒಂದು ಲಕ್ಷ ರೂ. ನಂತೆ ಹಣ ಸಂಗ್ರಹಿಸಿ ಚಿತ್ರ ನಿರ್ಮಿಸೋಣ, ಆ ಚಿತ್ರದ ನಿರ್ದೇಶನವನ್ನು ನಾನೇ ಮಾಡ್ಬೇಕು ಅನ್ನೋ ಆಸೆಯನ್ನು ನಮ್ಮ ಕಾರ್ಯಕರ್ತರು ವ್ಯಕ್ತಪಡಿಸ್ತಿದ್ದಾರೆ. ಚಿತ್ರದಲ್ಲಿ 20 ತಿಂಗಳ ಅಧಿಕಾರವಧಿಯಲ್ಲಿ ಏನೆಲ್ಲಾ ಆಯಿತು ಅನ್ನೋದನ್ನ ತೋರಿಸ್ತಿವಿ. ನಿಜವಾದ ಭೂಮಿ ಪುತ್ರದ ಜನಕ ಯಡಿಯೂರಪ್ಪ. ನಮ್ಮ ಸಿನಿಮಾಕ್ಕೆ ‘ನೇಗಿಲಯೋಗಿ ಬಿಎಸ್‍ವೈ’ ಅಥವಾ ‘ಭೂಮಿಪುತ್ರನ ಜನಕ ಬಿಎಸ್‍ವೈ’ ಅಂತಾ ಹೆಸರಿಡ್ತೀವಿ ಎಂದು ತೇಜಿಸ್ವಿನಿ ತಿಳಿಸಿದರು.

    ಇನ್ನು ಜಂತಕಲ್ ಪ್ರಕರಣದಲ್ಲಿ ಎಚ್ಡಿಕೆ ವಿಚಾರಣೆ ನಡೆಸಿರುವ ಸಂಬಂಧ ಪ್ರತಿಕ್ರಿಯಿಸಿದ ತೇಜಸ್ವಿನಿ, ಕುಮಾರಸ್ವಾಮಿ ಪ್ರಶ್ನಾತೀತರು ಅಲ್ಲ, ಪರಿಶುದ್ಧರೂ ಅಲ್ಲ. ತಮ್ಮ ಮೇಲೆ ಆರೋಪ ಬಂದಾಗ ರಾಜಕೀಯ ದುರುದ್ದೇಶ ಅನ್ನೋ ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಅವ್ರ ಮೇಲೆ ಆರೋಪ ಬಂದಾಗ ಯಾವ ರೀತಿ ಮಾತನಾಡಿದ್ರು. ಕುಮಾರಸ್ವಾಮಿ ಮುಗ್ಧ ರೈತರನ್ನ ನಂಬಿಸುವ ಕೆಲಸ ಮಾಡ್ತಿದ್ದಾರೆ. ಜಂತಕಲ್ ಪ್ರಕರಣದಲ್ಲಿ ತಪ್ಪು ಮಾಡಿದ್ರೆ ಕುಮಾರಸ್ವಾಮಿ ಅವ್ರಿಗೆ ಶಿಕ್ಷೆಯಾಗಲಿ, ನಿರ್ದೋಷಿಯಾಗಿದ್ರೆ ಅಗ್ನಿಪರೀಕ್ಷೆಯಿಂದ ಹೊರಬರಲಿ ಅಂದ್ರು.

    https://youtu.be/-bBtCl1blGw

     

     

  • ಕುಟುಂಬ ಸಮೇತರಾಗಿ ರಾಯರ ದರ್ಶನ ಪಡೆದ ರಾಜಮೌಳಿ

    ಕುಟುಂಬ ಸಮೇತರಾಗಿ ರಾಯರ ದರ್ಶನ ಪಡೆದ ರಾಜಮೌಳಿ

    ರಾಯಚೂರು: ಬಾಹುಬಲಿ ಸಿನಿಮಾದ ಯಶಸ್ವಿ ನಿರ್ದೇಶಕ ರಾಜಮೌಳಿ ಅವರು ಕುಟುಂಬ ಹಾಗೂ ಚಿತ್ರತಂಡ ಸಮೇತರಾಗಿ ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು.

    ತಂದೆ ವಿಜಯೇಂದ್ರ ಪ್ರಸಾದ್, ತಾಯಿ, ಪತ್ನಿ ಹಾಗೂ ಮಗಳೊಂದಿಗೆ ಮಂತ್ರಾಲಯಕ್ಕೆ ಆಗಮಿಸಿದ್ದ ರಾಜಮೌಳಿ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾಯರ ದರ್ಶನ ಪಡೆದು ಪುನೀತರಾದ್ರು. ಈ ವೇಳೆ ಮಂತ್ರಾಲಯ ಮಠದ ಆಡಳಿತ ಮಂಡಳಿ ರಾಜಮೌಳಿ ಹಾಗು ಅವರ ಪತ್ನಿಗೆ ಸನ್ಮಾನಿಸಿದರು.

    ಇದನ್ನೂ ಓದಿಬಳ್ಳಾರಿಯಲ್ಲಿ ಬಾಹುಬಲಿ ಚಿತ್ರ ವೀಕ್ಷಿಸಿದ ರಾಜಮೌಳಿ

    ಬಾಹುಬಲಿ ಸಿನಿಮಾಕ್ಕೆ ಕಥೆ ಬರೆದು ಚಿತ್ರದ ಯಶಸ್ಸಿಗೆ ಪ್ರಮುಖ ಪಾತ್ರವಹಿಸಿರುವ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಠದ ಪ್ರಾಂಗಣದಲ್ಲಿ ರಾಯರ ಮೂಲ ವೃಂದಾವನ ಸುತ್ತ ಪ್ರದಕ್ಷಿಣೆ ಹಾಕಿ ರಾಯರ ಆಶೀರ್ವಾದ ಪಡೆದರು. ಏಪ್ರಿಲ್ 28ರಂದು ತೆರೆಕಂಡ ಬಾಹುಬಲಿ-2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸುನಾಮಿ: ಒಟ್ಟು ಐದು ದಿನದಲ್ಲಿ ಎಷ್ಟು ಕಲೆಕ್ಷನ್ ಆಗಿದೆ?

    https://www.youtube.com/watch?v=L65zi8EL5eY&feature=youtu.be

     

  • ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ಕಿಚ್ಚನ ಕಲರವ – ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ವಿಜಯಪತಾಕೆ

    ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ಕಿಚ್ಚನ ಕಲರವ – ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ವಿಜಯಪತಾಕೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಲಂಡನ್‍ನಲ್ಲಿ ನಡೆದ ಕಾರ್ಪೋರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ಭಾಗವಹಿಸಿ ವಿಜಯಪತಾಕೆ ಹಾರಿಸಿದ್ದಾರೆ.

    ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನಲ್ಲಿ ತಂಡವನ್ನ ಮುನ್ನಡೆಸಿದ್ದ ಸುದೀಪ್‍ಗೆ ಮೇ 11ರಂದು ಕ್ರಿಕೆಟ್ ಕಾಶಿ ಲಾಡ್ರ್ಸ್ ಮೈದಾನದಲ್ಲಿ ಕ್ರಿಕೆಟ್ ಆಡುವ ಅವಾಕಶ ಸಿಕ್ಕಿತ್ತು. ಸುದೀಪ್ ಈ ಟೂರ್ನಿಯಲ್ಲಿ ಭಾಗವಹಿಸುವುದು ಮಾತ್ರವಲ್ಲ ಅಂತಿಮ ಪಂದ್ಯದಲ್ಲಿ ವಿಜಯ ಸಾಧಿಸಿದ್ದಾರೆ. ವಿಶ್ವದ ಸ್ಟಾರ್ ಕ್ರಿಕೆಟಿಗರ ಸಹಿ ಇರುವ ಬ್ಯಾಟ್ ಉಡುಗೊರೆಯಾಗಿ ಪಡೆದಿದ್ದಾರೆ.

    ಮೈದಾನದಲ್ಲಿ ಕ್ರಿಕೆಟ್ ಆಡುವ ಅವಕಾಶ ಸಿಕ್ಕಿದ್ದಕ್ಕೆ, ಬೃಹತ್ ಎಲ್‍ಇಡಿ ಮೇಲೆ ತಮ್ಮ ಫೋಟೋ ಕಾಣಿಸಿಕೊಂಡಿದ್ದಕ್ಕೆ ಹಾಗೂ ಶ್ರೇಷ್ಠ ಆಟಗಾರರನ್ನ ಭೇಟಿ ಮಾಡಿದ ಕ್ಷಣಗಳ ಬಗ್ಗೆ ಸಂತಸ ಹಂಚಿಕೊಂಡಿರೋ ಕಿಚ್ಚಮ ಇದಕ್ಕೆ ಕಾರಣವಾಗಿರೋ ಎಲ್ಲರಿಗೂ ನನ್ನ ಧನ್ಯವಾದ ಅಂತ ಟ್ವಿಟರ್‍ನಲ್ಲಿ ಬರೆದುಕೊಂಡಿದ್ದಾರೆ.

  • ಕಾಮುಕರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಶೃತಿ ಹರಿಹರನ್

    ಕಾಮುಕರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಶೃತಿ ಹರಿಹರನ್

    ಬೆಂಗಳೂರು: ಸಿನಿಮಾ ನಟಿಯರ ವಿಚಾರದಲ್ಲಿ ವಿಕೃತಿಗೈಯ್ಯುತ್ತಿರುವವರ ವಿರುದ್ಧ ನಟಿ ಶೃತಿ ಹರಿಹರನ್ ಹೋರಾಟಕ್ಕಿಳಿದಿದ್ದಾರೆ.

    ಮಹಿಳೆಯರ ಅಶ್ಲೀಲ ಫೋಟೋಗಳಿಗೆ ತಮ್ಮ ಫೋಟೋಗಳನ್ನು ಅಂಟಿಸಿ ಇಂಟರ್‍ನೆಟ್‍ನಲ್ಲಿ ಹರಿಬಿಟ್ಟಿರುವ ವಿಕೃತ ಕಾಮಿಗಳ ವಿರುದ್ಧ ಶೃತಿ ಹರಿಹರನ್ ಪೊಲೀಸರಿಗೆ ದೂರು ನೀಡಿದ್ದಾರೆ. ಗುರುವಾರದಂದು ನಟಿ ಶೃತಿ ಹರಿಹರನ್ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಕ್ರೈಂಗೆ ದೂರು ನೀಡಿದ್ರು. ಮಹಿಳೆಯ ಮಾನ ರಕ್ಷಣೆ ಮಾಡುವಂತೆ ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ರು.

    ಇದೇ ರೀತಿ ಹಲವಾರು ನಟಿಯರ ಫೋಟೋಗಳಿಗೆ ವಿಕೃತಿಗೈದು ಇಂಟರ್‍ನೆಟ್‍ನಲ್ಲಿ ಹಾಕಿದ್ದು ಈ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಶೃತಿ ಹರಿಹರನ್ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.

  • ಇಂದು ತೆರೆಗೆ ಅಪ್ಪಳಿಸಲಿದೆ ಮಾಸ್ತಿಗುಡಿ

    ಇಂದು ತೆರೆಗೆ ಅಪ್ಪಳಿಸಲಿದೆ ಮಾಸ್ತಿಗುಡಿ

    ಬೆಂಗಳೂರು: ಬಹು ನಿರೀಕ್ಷಿತ ಮಾಸ್ತಿಗುಡಿ ಸಿನಿಮಾ ಇವತ್ತು ತೆರೆಗೆ ಅಪ್ಪಳಿಸುತ್ತಿದೆ. ನಟ ದುನಿಯಾ ವಿಜಿ ಅಭಿಯನದ ಚಿತ್ರದಲ್ಲಿ ಕೀರ್ತಿ ಕರಬಂಧ ಮತ್ತು ಅಮೂಲ್ಯ ನಟಿಸುತ್ತಿದ್ದಾರೆ.

    ನವೆಂಬರ್ 7ರಂದು ಮಾಗಡಿಯ ತಿಪ್ಪಗೊಂಡನಹಳ್ಳಿ ನಡೆದಿದ್ದ ಕ್ಮೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ವೇಳೆ ದುರಂತ ಸಂಭವಿಸಿತ್ತು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಮತ್ತು ರಾಘವ ಉದಯ್ ಜಲಸಮಾಧಿಯಾಗಿದ್ದರು. ಸಿನಿಮಾಕ್ಕೆ ನಾಗಶೇಖರ್ ನಿರ್ದೇಶನವಿದ್ದು ಸುಂದರ್ ಪಿ ಗೌಡ ನಿರ್ಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಬಾಹುಬಲಿ ಹೊಡೆತ ಮಾಸ್ತಿಗುಡಿಗೂ ಬಿದ್ದಿದೆ. ಬಾಹುಬಲಿ ಶೋದಿಂದಾಗಿ ಮಾಸ್ತಿಗುಡಿಗೆ ಮಲ್ಟಿಪ್ಲೆಕ್ಸ್ ಥಿಯೇಟರ್‍ಗಳಲ್ಲಿ ಜಾಗ ಸಿಗ್ತಿಲ್ಲ. ಈ ಬಗ್ಗೆ ಫಿಲ್ಮ್ ಚೇಂಬರ್‍ಗೂ ದೂರು ನೀಡಲಾಗಿದೆ.

    ಬೆಂಗಳೂರಿನ ಗೌಡನ ಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಮಾಸ್ತಿಗುಡಿ ಸಿನಿಮಾ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದ್ದು, ಸಿನಿಮಾ ನೋಡಲು ಉದಯ್ ತಂದೆ ವೆಂಕಟೇಶ್, ತಾಯಿ ಕೌಸಲ್ಯ ಮತ್ತು ಉದಯ್ ಸಹೋದರ ಬಂದಿದ್ದಾರೆ. ಇದೇ ವೇಳೆ ಮಾತನಾಡಿದ ಉದಯ್ ತಂದೆ-ತಾಯಿ, ಉದಯ್ ಅಭಿನಯದ ಕೊನೆ ಸಿನಿಮಾ ಇದು. ಹಾಗಾಗಿ ಚಿತ್ರಮಂದಿರದಲ್ಲಿ ನೋಡೋಕೆ ಬಂದ್ವಿ ಅಂದ್ರು. ಇನ್ನು ಕ್ಲೈಮ್ಯಾಕ್ಸ್ ದುರಂತದಲ್ಲಿ ಬಲಿಯಾದ ಅನಿಲ್ ಮತ್ತು ವಿಜಯ್ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಹಣಕಾಸು ನೆರವು ನೀಡಿದೆ ಮಾಸ್ತಿ ಚಿತ್ರತಂಡ.

    ಇದನ್ನೂ ಓದಿ: ಯಾಕೆ ನಮಗೆ ಥಿಯೇಟರ್ ಕೊಡಲ್ಲ ನಾವು ನೋಡ್ತಿವಿ: ಮಲ್ಟಿಪ್ಲೆಕ್ಸ್ ಗಳ ವಿರುದ್ಧ ದುನಿಯಾ ವಿಜಿ ಆಕ್ರೋಶ

     

     

  • ವೈರಲ್ ಆಗಿದೆ ಶಿವಗಾಮಿ, ಕಟ್ಟಪ್ಪ ನಡುವಿನ ರೊಮ್ಯಾನ್ಸ್ ವಿಡಿಯೋ!

    ವೈರಲ್ ಆಗಿದೆ ಶಿವಗಾಮಿ, ಕಟ್ಟಪ್ಪ ನಡುವಿನ ರೊಮ್ಯಾನ್ಸ್ ವಿಡಿಯೋ!

    ಬೆಂಗಳೂರು: ಮಾಹಿಷ್ಮತಿ ಸಾಮ್ರಾಜ್ಯದ ರಾಜಮಾತಾ ಶಿವಗಾಮಿ ಮತ್ತು ಅಂಗರಕ್ಷಕ ಕಟ್ಟಪ್ಪ ನಡುವಿನ ರೊಮ್ಯಾಂಟಿಕ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಹೌದು, ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಿದ್ದ ನಟಿ ರಮ್ಯಾಕೃಷ್ಣ ಮತ್ತು ಕಟ್ಟಪ್ಪ ಪಾತ್ರ ನಿರ್ವಹಿಸಿದ ಸತ್ಯರಾಜ್ ಇಬ್ಬರೂ ಜಾಹೀರಾತಿನಲ್ಲಿ ಸತಿ-ಪತಿಗಳಾಗಿ ಕಾಣಿಸಿಕೊಂಡಿದ್ದರೆ. ದೃಶ್ಯದಲ್ಲಿ ಇವರಿಬ್ಬರ ಕೋಳಿ ಜಗಳ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ವೀಡಿಯೋ ವೈರಲ್ ಆಗಿದ್ದೇಕೆ?:
    ಇತ್ತೀಚಿಗೆ ತೆರೆಕಂಡ ಬಾಹುಬಲಿ-2 ಸಿನಿಮಾ ಪೌರಾಣಿಕ ಕಥೆಯುಳ್ಳ ಸಿನಿಮಾ. ಚಿತ್ರದಲ್ಲಿ ಕಾಸ್ಟ್ಯೂಮ್ ಎಲ್ಲವೂ ರಾಜಮನೆತನದ ಶೈಲಿಯಲ್ಲಿದೆ. ಅಂತೆಯೇ ಈ ಜಾಹೀರಾತಿನಲ್ಲಿ ರಮ್ಯಾಕೃಷ್ಣ ಮತ್ತು ಸತ್ಯರಾಜ್ ಪೌರಾಣಿಕ ಪಾತ್ರಧಾರಿಗಳ ಉಡುಗೆ-ತೊಡುಗೆ ಕೂಡ ರಾಜಶೈಲಿಯಲ್ಲಿದೆ. ಜಾಹೀರಾತು ಸೆಟ್‍ನ್ನು ಸಹ ಬಾಹುಬಲಿ ಸಿನಿಮಾದ ಸೆಟ್ ಹಾಗೆ ನಿರ್ಮಿಸಿದ್ದರಿಂದ ವೀಡಿಯೋ ವೈರಲ್ ಆಗಿದೆ.

    ಇದೊಂದು ಬಟ್ಟೆ ಜವಳಿ ಶೋರೂಂ ಒಂದರ ಜಾಹೀರಾತಾಗಿದ್ದು, ಕೋಪಗೊಂಡ ಪತ್ನಿಯನ್ನು ಮನವೊಲಿಸಲು ಪತಿ ಸೀರೆ ನೀಡಿ ಇಂಪ್ರೆಸ್ ಮಾಡುವ ವೀಡಿಯೋ ಇದಾಗಿದೆ.

    ಇದನ್ನೂ ಓದಿ: ಪ್ರಭಾಸ್, ರಾಣಾ, ಅನುಷ್ಕಾ, ತಮನ್ನಾ, ರಮ್ಯಕೃಷ್ಣಗೆ ಎಷ್ಟು ಸಂಭಾವನೆ ಸಿಕ್ಕಿದೆ?

    ಇದನ್ನೂ ಓದಿ: ಒಂದು ಸಾವಿರ ಕೋಟಿ ಕ್ಲಬ್ ಸೇರಿದ ಬಾಹುಬಲಿ: ಯಾವ ದಿನ ಎಷ್ಟು ಕೋಟಿ ರೂ. ಕಲೆಕ್ಷನ್ ಆಗಿತ್ತು?

    https://www.youtube.com/watch?v=eowa5h4RqYY

  • ದೊಡ್ಮನೆಯ ಕುಡಿ ನಟ ವಿನಯ್ ರಾಜ್‍ಕುಮಾರ್‍ಗೆ ಇಂದು ಹುಟ್ಟು ಹಬ್ಬದ ಸಂಭ್ರಮ

    ದೊಡ್ಮನೆಯ ಕುಡಿ ನಟ ವಿನಯ್ ರಾಜ್‍ಕುಮಾರ್‍ಗೆ ಇಂದು ಹುಟ್ಟು ಹಬ್ಬದ ಸಂಭ್ರಮ

    ಬೆಂಗಳೂರು: ರಾಜ್ ಕುಟುಂಬದ ಕುಡಿ ವಿನಯ್ ರಾಜ್‍ಕುಮಾರ್ ಅವರಿಗೆ 28ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ತಂದೆ ರಾಘವೇಂದ್ರ ರಾಜ್‍ಕುಮಾರ್, ತಾಯಿ ಹಾಗೂ ಅಭಿಮಾನಿಗಳೊಂದಿಗೆ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡರು.

    ಇಂದು ಬೆಳಗ್ಗೆ ಕುಟುಂಬ ಸಮೇತರಾಗಿ ಬಂದ ವಿನಯ್ ರಾಜ್‍ಕುಮಾರ್ ಡಾ. ರಾಜ್ ಕುಮಾರ್ ಅವರ ಸಮಾಧಿಗೆ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ತಂದೆ-ತಾಯಿಯ ಆಶೀರ್ವಾದವನ್ನು ಪಡೆದಿದ್ದೇನೆ. ನನಗೆ ದೇವರು ಅಂದ್ರೆ ನಮ್ಮ ತಾತ. ನಾವುಗಳು ಸಿನಿಮಾ ರಂಗಕ್ಕೆ ಬರುವುದಕ್ಕೆ ಅವರೇ ಕಾರಣ. ಇವಾಗ ಎರಡು ಸಿನಿಮಾಗಳು ತೆರೆಕಂಡಿವೆ. ಈ ವರ್ಷ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅವುಗಳ ಹೆಸರು ಇನ್ನು ಫೈನಲ್ ಆಗಿಲ್ಲ. ನಮ್ಮ ತಾತನ ಕಾಲದಿಂದಲೂ ಅಭಿಮಾನಿಗಳು ಇಲ್ಲಿಗೆ ಬರ್ತಾರೆ. ಅವರ ಪ್ರೀತಿ ಅಭಿಮಾನಕ್ಕೆ ಧನ್ಯವಾದ ಎಂದು ವಿನಯ್ ರಾಜ್‍ಕುಮಾರ್ ಹೇಳಿದರು.

    ಸಿದ್ದಾರ್ಥ ಸಿನಿಮಾ ಮೂಲಕ ಸ್ಯಾಂಡಲ್‍ವುಡ್ ಅಂಗಳಕ್ಕೆ ಕಾಲಿಟ್ಟಿರುವ ದೊಡ್ಮನೆಯ ಕುಡಿ ವಿನಯ್ ರಾಜ್‍ಕುಮರ್ ಅತ್ಯಂತ ಸಂತೋಷದೊಂದಿಗೆ ತಮ್ಮ ಹುಟುಹಬ್ಬವನ್ನು ಆಚರಿಸಿಕೊಂಡರು.

     

  • ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರದ ಟೀಸರ್ ಬಿಡುಗಡೆ

    ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರದ ಟೀಸರ್ ಬಿಡುಗಡೆ

    ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರದ ಫಸ್ಟ್ ಟೀಸರ್ ಲಾಂಚ್ ಆಗಿದೆ.

    1962ರಲ್ಲಿ ಭಾರತ-ಚೀನಾ ನಡುವೆ ನಡೆದ ಯುದ್ಧದ ಸಂದರ್ಭದ ಕಥೆ ಇದಾಗಿದ್ದು ನಿರ್ದೇಶಕ ಕಬೀರ್ ಖಾನ್ ಕಲ್ಪನೆಯಲ್ಲಿ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಒಬ್ಬ ಪೆದ್ದನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಬಿಡುಗಡೆಯಾಗಿ ಕೆಲವೇ ಗಂಟೆಯಲ್ಲಿ 30ಲಕ್ಷಕ್ಕೂ ಹೆಚ್ಚಿ ಬಾರಿ ವೀಕ್ಷಣೆಯಾಗಿದೆ.

    ಸಲ್ಮಾನ್ ಖಾನ್ ಕೂಡ ಟೀಸರನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ನಿರ್ದೇಶಕ ಕರಣ್ ಜೋಹರ್, ನಟಿಯರಾದ ಅಥಿಯಾ ಶೆಟ್ಟಿ, ದಿಯಾ ಮಿರ್ಜ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಹಾಗೂ ಸಿನಿರಸಿಕರು ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಜೂನ್ 23ಕ್ಕೆ `ಟ್ಯೂಬ್‍ಲೈಟ್’ ಚಿತ್ರ ವಿಶ್ವಾದ್ಯಂತ ಬೆಳ್ಳಿಪರದೆ ಮೇಲೆ ಬೆಳಗಲಿದೆ.

  • ಕತ್ರಿಗುಪ್ಪೆ ಕಟ್ಟಿಂಗ್ ಶಾಪ್ ಚಿತ್ರದ ನಿರ್ದೇಶಕ ಪ್ರಖ್ಯಾತ್ ಅರೆಸ್ಟ್

    ಕತ್ರಿಗುಪ್ಪೆ ಕಟ್ಟಿಂಗ್ ಶಾಪ್ ಚಿತ್ರದ ನಿರ್ದೇಶಕ ಪ್ರಖ್ಯಾತ್ ಅರೆಸ್ಟ್

    ಬೆಂಗಳೂರು: ಸ್ನೇಹಿತನಿಂದ ಮನೆ ಪಡೆದು ಆಡಿಷನ್ ಹೆಸರಲ್ಲಿ ಹುಡುಗಿಯರ ಅಡ್ಡೆ ಮಾಡಿಕೊಂಡಿದ್ದ ಕತ್ರಿಗುಪ್ಪೆ ಕಟ್ಟಿಂಗ್ ಶಾಪ್ ಸಿನಿಮಾ ನಿದೇರ್ಶಕನನ್ನು ಬಂಧಿಸಲಾಗಿದೆ.

    ಪ್ರಖ್ಯಾತ್ ಅಲಿಯಾಸ್ ಅಂತೋಣಿ ಪೌನ್ಸಿ ಬಂಧಿತ ನಿರ್ದೇಶಕ. ಸ್ನೇಹಿತ ಪುರುಷೋತ್ತಮ್‍ನಿಂದ ಮನೆ ಪಡೆದಿದ್ದ ಪ್ರಖ್ಯಾತ್ ಅದನ್ನೇ ಹುಡುಗಿಯರ ಅಡ್ಡೆ ಮಾಡಿಕೊಂಡಿದ್ದ. ಇದನ್ನ ಗಮನಿಸಿದ ಪುರುಷೋತ್ತಮ್ ಮನೆ ಖಾಲಿ ಮಾಡುವಂತೆ ಹೇಳಿದ್ರು. ಆಗ ಪ್ರಖ್ಯಾತ್ ಕೆಲ ರೌಡಿಗಳಿಂದ ಪುರುಷೋತ್ತಮ್‍ಗೆ ಬೆದರಿಕೆ ಹಾಕಿಸಿದ್ದ.

    ಈ ಬಗ್ಗೆ ಪುರುಷೋತ್ತಮ್‍ರಿಂದ ದೂರು ಪಡೆದಿದ್ದ ವಿಜಯನಗರ ಪೊಲೀಸರು ಇದೀಗ ಆರೋಪಿ ಪ್ರಖ್ಯಾತ್‍ನನ್ನು ಬಂಧಿಸಿದ್ದಾರೆ.

  • ಮಲ್ಟಿಪ್ಲೆಕ್ಸ್ ಗಳಲ್ಲಿ ಇದೀಗ ಏಕರೂಪ ದರ- ಮನರಂಜನಾ ತೆರಿಗೆ ಸೇರಿ ಒಂದು ಟಿಕೆಟ್‍ಗೆ ಇಷ್ಟು ಬೆಲೆ

    ಮಲ್ಟಿಪ್ಲೆಕ್ಸ್ ಗಳಲ್ಲಿ ಇದೀಗ ಏಕರೂಪ ದರ- ಮನರಂಜನಾ ತೆರಿಗೆ ಸೇರಿ ಒಂದು ಟಿಕೆಟ್‍ಗೆ ಇಷ್ಟು ಬೆಲೆ

    ಬೆಂಗಳೂರು: ಮಲ್ಟಿಪ್ಲೆಕ್ಸ್ ಗಳ ಲೂಟಿಗೆ ಕೊನೆಗೂ ಕಡಿವಾಣ ಬಿದ್ದಿದೆ. ಸಿನಿಮಾ ಟಿಕೆಟ್‍ಗೆ ಸರ್ಕಾರ ಗರಿಷ್ಠ ಬೆಲೆ ನಿಗದಿಪಡಿಸಿದ್ದು, ಈ ಆದೇಶ ಮಂಗಳವಾರದಿಂದಲೇ ಜಾರಿಗೆ ಬಂದಿದ್ದರೂ ಮನರಂಜನಾ ತೆರಿಗೆ ಸೇರಿ ಟಿಕೆಟ್ ಬೆಲೆ ಎಷ್ಟಿರಲಿದೆ ಎಂಬ ಗೊಂದಲವಿತ್ತು. ಈಗ ಆ ಗೊಂದಲಕ್ಕೆ ಬ್ರೇಕ್ ಬಿದ್ದಿದೆ.

    ಸರ್ಕಾರದ ಆದೇಶಿಸಿರುವಂತೆ ಒಂದು ಟಿಕೆಟ್‍ಗೆ 200 ರೂ. ದರದ ಜೊತೆಗೆ 64 ರೂ. ಮನರಂಜನಾ ತೆರಿಗೆ ನಿಗದಿ ಮಾಡಲಾಗಿದೆ. ಬೆಂಗಳೂರಿನ ಬಿನ್ನಿಮಿಲ್ ಬಳಿ ಇರುವ ಇಟಿಎ ಮಾಲ್, ಮನರಂಜನಾ ತೆರಿಗೆ ವಿಧಿಸಿ ಟಿಕೆಟ್ ಮಾರಾಟ ಮಾಡ್ತಿದೆ. ಇಟಿಎ ಮಾಲ್‍ನಲ್ಲಿ ಸಿನಿಮಾದ ಒಂದು ಟಿಕೆಟ್‍ಗೆ 264 ರೂಪಾಯಿ ನಿಗದಿ ಮಾಡಲಾಗಿದೆ. ಬುಧವಾರದಂದು ಇದೇ ಮಾಲ್ ಒಂದು ಟಿಕೆಟ್‍ಗೆ 350 ರೂಪಾಯಿ ನಿಗದಿ ಮಾಡಿತ್ತು. ಅಲ್ಲದೆ ಇನ್ನೂ ಅನೇಕ ಮಾಲ್‍ಗಳಲ್ಲಿ ಗೋಲ್ಡ್ ಕ್ಲಾಸ್ ಹೊರತುಪಡಿಸಿ ಉಳಿದ ಟಿಕೆಟ್‍ಗೆ 264 ರೂ. ನಗದಿ ಮಾಡಲಾಗಿದೆ.

    ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಟಿಕೆಟ್ ದರ 200 ರೂ. ಫಿಕ್ಸ್ ಆಗಿದ್ದು, ಮಂಗಳವಾರದಂದೇ ಅಧಿಕೃತ ಆದೇಶ ಜಾರಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯಿಂದ ಆದೇಶ ಪ್ರಕಟವಾಗಿದ್ದು, ಎಲ್ಲ ಭಾಷೆಯ ಚಿತ್ರಗಳಿಗೆ ಇದು ಅನ್ವಯವಾಗಲಿದೆ.

    ಆದೇಶದಲ್ಲಿ ಏನಿದೆ?
    ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಚಿತ್ರವನ್ನು ಒಂದು ಪರದೆಯಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 7.30 ರವರೆಗಿನ ಪ್ರಮುಖ ಅವಧಿಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉಲ್ಲೇಖಿಸಲಾಗಿದೆ.

    ಐ-ಮ್ಯಾಕ್ಸ್, 4ಡಿಎಕ್ಸ್ ಚಿತ್ರಮಂದಿರಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಜೊತೆಗೆ ಗೋಲ್ಡ್ ಕ್ಲಾಸ್ ಗೂ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ಪ್ರತಿ ಚಿತ್ರಮಂದಿರದಲ್ಲೂ ಗೋಲ್ಡ್ ಕ್ಲಾಸ್ ಶೇ.10 ರಷ್ಟು ಸೀಟುಗಳನ್ನು ಮೀರಬಾರದು ಎನ್ನುವ ಅಂಶ ಆದೇಶದಲ್ಲಿದೆ.

    ಸಿಎಂ ಸಿದ್ದರಾಮಯ್ಯ ಸೋಮವಾರ ಯಶವಂತಪುರದಲ್ಲಿರುವ ಒರಾಯನ್ ಮಾಲ್‍ನಲ್ಲಿ 1050 ರೂ. ನೀಡಿ ಬಾಹುಬಲಿ ಸಿನಿಮಾ ವೀಕ್ಷಿಸಿದ್ದರು. ಬಜೆಟ್ ನಲ್ಲಿ 200 ರೂ. ಗರಿಷ್ಟ ದರ ನಿಗದಿ ಪಡಿಸಿ 1050 ರೂ. ನೀಡಿ ಟಿಕೆಟ್ ಖರೀದಿ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಜೆಟ್ ನಲ್ಲಿ ನೀವೇ ಗರಿಷ್ಟ ದರ ಫಿಕ್ಸ್ ಮಾಡಿ ದುಬಾರಿ ಟಿಕೆಟ್ ನೀಡಿ ಸಿನಿಮಾ ವೀಕ್ಷಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು. ಜನರ ಮತ್ತು ಮಾಧ್ಯಮಗಳಿಂದ ಟೀಕೆ ಜಾಸ್ತಿಯಾಗುತ್ತಿದ್ದಂತೆ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಅಧಿಕೃತವಾಗಿ ಈ ಆದೇಶವನ್ನು ಪ್ರಕಟಿಸಿದೆ.

    ಇದನ್ನೂ ಓದಿ: 1050 ರೂ. ಕೊಟ್ಟು ಬಾಹುಬಲಿ ಚಿತ್ರ ವೀಕ್ಷಣೆ – ಸಿಎಂ ವಿರುದ್ಧ ವಿಜಯಪ್ರಸಾದ್ ಗರಂ

    ಏಪ್ರಿಲ್ 26 ರಂದು 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ಮುಂದೆ ಟಿಕೆಟ್ ದರ 200 ರೂ. ನಿಗದಿಪಡಿಸುವುದರ ಜೊತೆ ಮಲ್ಟಿಪ್ಲೆಕ್ಸ್ ಗಳಲ್ಲಿ ದಿನಕ್ಕೆ 2 ಶೋಗಳನ್ನು ಕನ್ನಡ ಚಿತ್ರ ಪ್ರದರ್ಶಿಸಲು ನಾಳೆ ಅಥವಾ ನಾಡಿದ್ದು ಸರ್ಕಾರಿ ಆದೇಶ ಮಾಡಲಾಗುವುದು. ಹಾಗೆಯೇ, ಪ್ರೈಮ್ ಸಮಯದಲ್ಲಿ ಕನ್ನಡ ಚಿತ್ರಗಳಿಗಾಗಿ ಎರಡು ಶೋಗಳನ್ನ ಮೀಸಲಿಡಬೇಕು ಎಂದು ಕೂಡ ಆದೇಶಿಸುವುದಾಗಿ ತಿಳಿಸಿದ್ದರು.

    ಸಿಎಂ ಈ ಹೇಳಿಕೆಯ ಬಳಿಕ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಏ. 26ರಂದು ಫಿಲಂ ಚೇಂಬರ್ ನಲ್ಲಿ ಸುದ್ದಿಗೋಷ್ಠಿ ನಡೆಸಿ, ಬಜೆಟ್‍ನಲ್ಲಿ ಘೋಷಣೆಯಾಗಿರುವ ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರ 200 ರೂ.ಗೆ ನಿಗದಿ ಪಡಿಸಿರುವ ಆದೇಶ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಮಂಗಳವಾರ ರಾತ್ರಿ ಸಹಿ ಮಾಡಿದ್ದಾರೆ. ಗುರುವಾರ ಈ ಪತ್ರ ವಾಣಿಜ್ಯ ಮಂಡಳಿಗೆ ತಲುಪಲಿದೆ. ಪತ್ರ ಬಂದ ತಕ್ಷಣವೇ ಏಕರೂಪ ದರ ಜಾರಿಯಾಗಲಿದೆ ಎಂದು ತಿಳಿಸಿದ್ದರು. ಆದರೆ ಇವರಿಬ್ಬರು ಹೇಳಿಕೆ ನೀಡಿದ್ದರೆ ವಿನಾಃ ಆದೇಶ ಮಾತ್ರ ಜಾರಿಯಾಗಿರಲಿಲ್ಲ.

    ದರ ಕಡಿಮೆಯಾಗಿದ್ದು ಯಾಕೆ?: 
    ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಮಾಲೀಕರು ಸಿನಿಮಾಗೆ ಹೆಚ್ಚು ದರದ ಟಿಕೆಟ್ ನಿಗದಿ ಮಾಡುವ ಕಾರಣ ಜನ ಥಿಯೇಟರ್ ಗಳಿಗೆ ಬರುತ್ತಿಲ್ಲ. ಒಂದೊಂದು ಮಾಲ್ ನಲ್ಲಿ ಬೇರೆ ಬೇರೆ ರೀತಿಯ ದರವಿದೆ. ಹೀಗಾಗಿ ಟಿಕೆಟ್ ದರವನ್ನು ಕಡಿಮೆ ಮಾಡಿ ಏಕರೂಪದ ದರವನ್ನು ತರಬೇಕು ಎಂದು ಆಗ್ರಹಿಸಿ ಜನ ಮತ್ತು ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಕಳೆದ ವರ್ಷ ಆಂದೋಲನವನ್ನು ನಡೆಸಿದ್ದರು. ತಮಿಳುನಾಡಿನಲ್ಲಿ ಗರಿಷ್ಠ 120 ರೂ. ಟಿಕೆಟ್, ಆಂಧ್ರಪ್ರದೇಶದಲ್ಲಿ ಗರಿಷ್ಠ 150 ರೂ. ನಿಗದಿಯಾಗಿರುವಾಗ ನಮ್ಮಲ್ಲಿ ಯಾಕೆ ದರವನ್ನು ನಿಗದಿ ಮಾಡಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

    ಒತ್ತಡ ಜಾಸ್ತಿ ಆಗುತ್ತಿದ್ದಂತೆ ಸರ್ಕಾರ ಈ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಗಿರೀಶ್ ಕಾಸರವಳ್ಳಿ, ಭಾರತಿ ವಿಷ್ಣುವರ್ಧನ್, ರಾಘವೇಂದ್ರ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಭಾಷಾ, ಜಯಮಾಲ, ಥಾಮಸ್ ಡಿಸೋಜಾ, ಕೆ ವಿ ಚಂದ್ರಶೇಖರ್ ಮತ್ತು ಗಂಗಾಧರ್ ಮೊದಲಿಯಾರ್ ಅವರುಗಳನ್ನು ಒಳಗೊಂಡ 17 ಜನರ ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಟಿಕೆಟ್ ದರಕ್ಕೆ ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು ಹಾಗೂ ಪ್ರೈಮ್ ಟೈಂನಲ್ಲಿ ಪ್ರತಿ ಮಲ್ಟಿಪ್ಲೆಕ್ಸ್ ನಲ್ಲಿ ಎರಡು ಕನ್ನಡ ಸಿನೆಮಾಗಳನ್ನು ಕಡ್ಡಾಯವಾಗಿ ತೋರಿಸಲು ನಿಯಮ ಹೇರುವಂತೆ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ಈಗ ಮುಂದಾಗಿದೆ.