Tag: Cinema Sandalwood

  • ತುಪ್ಪದ ಬೆಡಗಿ ರಾಗಿಣಿಯ ನ್ಯೂ ಫೋಟೋಶೂಟ್

    ತುಪ್ಪದ ಬೆಡಗಿ ರಾಗಿಣಿಯ ನ್ಯೂ ಫೋಟೋಶೂಟ್

    ಸೌಂದರ್ಯದ ಜೊತೆ ಪ್ರತಿಭೆಯಿರೋ ಸ್ಯಾಂಡಲ್‌ವುಡ್ ಮುದ್ದು ನಟಿ ರಾಗಿಣಿ ದ್ವಿವೇದಿ, ಕಿಚ್ಚ ಸುದೀಪ್‌ಗೆ ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ರು. ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಕಲರ್‌ಫುಲ್ ಫೋಟೋಶೂಟ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಸದ್ಯ ರಾಗಿಣಿ ನಯಾ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ.

    `ತುಪ್ಪ ಬೇಕಾ ತುಪ್ಪ’ ಅಂತಾ ಗಂಡ್ ಹೈಕ್ಳ ಹಾರ್ಟಿಗೆ ಲಗ್ಗೆಯಿಟ್ಟ ಸುಂದರಿ ರಾಗಿಣಿ ಮತ್ತೆ ಸಿನಿಮಾಗಳತ್ತ ಆಕ್ಟೀವ್ ಆಗಿದ್ದಾರೆ. ರಾಗಿಣಿ ಲಿಸ್ಟ್ನಲ್ಲಿ ಕೈತುಂಬಾ ಚಿತ್ರಗಳಿವೆ. ಶೂಟಿಂಗ್ ಮಧ್ಯೆ ಸ್ವಲ್ಪ ಫ್ರೀ ಮಾಡಿಕೊಂಡು, ಇದೀಗ ನಟಿ ಬೋಲ್ಡ್ ಲುಕ್ಕಿನಲ್ಲಿ ಕಣ್ಣು ಕುಕ್ಕುವಂತೆ ಫೋಟೋಶೂಟ್ ಮಾಡಿಸಿದ್ದಾರೆ.

    ಕಲರ್‌ಫುಲ್ ಲುಕ್ಕಿನಲ್ಲಿ ಬೋಲ್ಡ್ ಅವತಾರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಗಿಣಿ ನ್ಯೂ ಲುಕ್ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ:‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    View this post on Instagram

     

    A post shared by Ragini dwivedi (@rraginidwivedi)

    ಸದ್ಯ ರಾಗಿಣಿ ಕೈಯಲ್ಲಿ `ಸಾರಿ ಕರ್ಮ ರಿಟನ್ಸ್’, `ಒನ್ ಟು ಒನ್’,`ಜಾನಿವಾಕರ್’, ಮತ್ತು `ಕರ್ವ 3′ ಚಿತ್ರಗಳಿವೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ರಾಗಿಣಿ ನಟನೆಯ ಚಿತ್ರಗಳಿಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

  • ಅಪ್ಪು ನೆನಪಿನಲ್ಲಿ ಧೀರೇನ್ ರಾಮ್‌ಕುಮಾರ್: ಅಪ್ಪು ಭಾವಚಿತ್ರವಿರೋ ಹೆಡ್‌ಪೋನ್ ವಿಡಿಯೋ ವೈರಲ್

    ಅಪ್ಪು ನೆನಪಿನಲ್ಲಿ ಧೀರೇನ್ ರಾಮ್‌ಕುಮಾರ್: ಅಪ್ಪು ಭಾವಚಿತ್ರವಿರೋ ಹೆಡ್‌ಪೋನ್ ವಿಡಿಯೋ ವೈರಲ್

    ಸ್ಯಾಂಡಲ್‌ವುಡ್ ನಟ ಧೀರೇನ್ ರಾಮ್‌ಕುಮಾರ್ ಅಭಿನಯದ `ಶಿವ 143′ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರದ ಸಾಂಗ್ಸ್, ಟ್ರೇಲರ್‌ನಿಂದ ಅಣ್ಣಾವ್ರ ಮೊಮ್ಮಗ ಸಿನಿಪ್ರಿಯರನ್ನ ಇಂಪ್ರೈಸ್ ಮಾಡಿದ್ದಾರೆ. ಸದ್ಯ ಅಪ್ಪು ನೆನಪಿನಲ್ಲಿರೋ ಧೀರೇನ್ ರಾಮ್‌ಕುಮಾರ್, ಪುನೀತ್ ಫೋಟೋಯಿರೋ ಹೆಡ್ ಫೋನ್ ಧರಿಸಿರುವ ಫೋಟೋ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ.

    ಅಣ್ಣಾವ್ರ ಮೊಮ್ಮಗ ಧೀರೇನ್‌ಗೆ ಅಪ್ಪು ಜೊತೆ ಒಡನಾಟವಿತ್ತು. ಈ ಹಿಂದೆ ಪುನೀತ್ ಅಣ್ಣಾವ್ರ ನೆನಪಿಗಾಗಿ ನೀ ಕಂಗಳ ಬಿಸಿಯ ಹನಿಗಳು ಅಂತಾ ಅಪ್ಪಾಜಿಗಾಗಿ ಹಾಡಿದ್ರು. ಆ ಹಾಡಿನಲ್ಲಿ ಅಪ್ಪು ಧರಿಸಿರುವ ಹೆಡ್‌ಫೋನ್ ಅಣ್ಣಾವ್ರ ಭಾವಚಿತ್ರವಿತ್ತು. ಈಗ ಅದೇ ರೀತಿ ನಟ ಧೀರೇನ್ ಧರಿಸಿರುವ ಹೆಡ್‌ಪೋನ್‌ನಲ್ಲಿ ಅಪ್ಪು ಫೋಟೋವಿದ್ದು, ಸಧ್ಯ ಈ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಇದನ್ನೂ ಓದಿ:ಬಣ್ಣದ ಲೋಕದಲ್ಲಿ `ಏಕ್ ಲವ್ ಯಾ’ ನಟಿ ರೀಷ್ಮಾ ಮಿಂಚಿಂಗ್

     

    View this post on Instagram

     

    A post shared by Dheeren Ramkumar (@dheerenrk)

    ಪುನೀತ್ ಫೋಟೋಯಿರೋ ಹೆಡ್ ಫೋನ್ ಧರಿಸಿರುವ ಧೀರೇನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಸೂರ್ಯನೊಬ್ಬ ಚಂದ್ರನೊಬ್ಬ, ಈ ರಾಜನೂ ಒಬ್ಬ ಎಂದು ಬರೆದು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಬಿಮಾನಿಗಳು ಖುಷಿಪಟ್ಟಿದ್ದಾರೆ.

  • ಬಣ್ಣದ ಲೋಕದಲ್ಲಿ `ಏಕ್ ಲವ್ ಯಾ’ ನಟಿ ರೀಷ್ಮಾ ಮಿಂಚಿಂಗ್

    ಬಣ್ಣದ ಲೋಕದಲ್ಲಿ `ಏಕ್ ಲವ್ ಯಾ’ ನಟಿ ರೀಷ್ಮಾ ಮಿಂಚಿಂಗ್

    ಸೌಂದರ್ಯದ ಜೊತೆ ಪ್ರತಿಭೆಯಿರೋ ಮತ್ತೊರ್ವ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. `ಏಕ್ ಲವ್ ಯಾ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ಕೊಡಗಿನ ಕುವರಿ ರೀಷ್ಮಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

    ನಿರ್ದೇಶಕ ಪ್ರೇಮ್ ಗರಡಿಯಲ್ಲಿ ಪಳಗಿದ ಪ್ರತಿಭಾವಂತ ನಟಿ ರೀಷ್ಮಾ ನಾಣಯ್ಯ, ನಟಿಸಿರೋ ಮೊದಲ ಚಿತ್ರದಲ್ಲೇ ತಾನೆಂತಹ ನಟಿ ಅನ್ನೋದನ್ನ ಪ್ರೂವ್ ಮಾಡಿದ್ರು. ಈ ಚಿತ್ರದ ಅನಿತಾ ಪಾತ್ರಧಾರಿಯಾಗಿ ಸೈ ಎನಿಸಿಕೊಂಡರು. ಈಗ ರೀಷ್ಮಾಗಾಗಿ ಒಳ್ಳೊಳ್ಳೆ ಪಾತ್ರಗಳು ಅರಸಿ ಬರುತ್ತಿವೆ.

    ಸದ್ಯ ನಂದಕಿಶೋರ್ ನಿರ್ದೇಶನದ `ರಾಣಾ’ ಚಿತ್ರದಲ್ಲಿ ಶ್ರೇಯಸ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಜೊತೆ ಲವ್‌ಸ್ಟೋರಿಯಿರೋ ರಾಣಾಗೆ ಜೋಡಿಯಾಗಿ ಸಾಥ್ ನೀಡಿದ್ದಾರೆ. ಇನ್ನು ಆ ದಿನಗಳು ಚೇತನ್ ನಟನೆಯ ʻಮಾರ್ಗʼ ಚಿತ್ರದಲ್ಲೂ ರೀಷ್ಮಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಕೆಲವು ಪ್ರಾಜೆಕ್ಟ್ ಮಾತುಕತೆಯಲ್ಲಿದೆ. ಈ ಎರಡು ಚಿತ್ರಗಳಲ್ಲೂ ವಿಭಿನ್ನ ಪಾತ್ರದ ಮೂಲಕ ಕೊಡಗಿ ಬೆಡಗಿ ರೀಷ್ಮಾ ರಂಜಿಸೋದು ಗ್ಯಾರೆಂಟಿ. ಇದನ್ನು ಓದಿ:ದೇಹಾಕಾರದಲ್ಲಿ ನನಗೂ ಸಮಸ್ಯೆ ಇವೆ, ಬಾಡಿ ಶೇಮಿಂಗ್ ಬಗ್ಗೆ ಶಾಂಕಿಗ್ ಸುದ್ದಿ ಕೊಟ್ಟ ವೈಷ್ಣವಿ

    ಇನ್ನು ಸಾಮಾಜಿಕ ಜಾಲತಾಣದಲ್ಲೂ `ಏಕ್ ಲವ್ ಯಾ’ ನಟಿಯ ಫೀವರ್ ಜೋರಾಗಿದೆ. ಸಿನಿಮಾ ವಿಷ್ಯ ಮಾತ್ರವಲ್ಲದೇ ಕಲರ್‌ಫುಲ್ ಅವತಾರದಲ್ಲಿ ಬೋಲ್ಡ್ ಲುಕ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸದ್ಯ ಈ ಫೋಟೋಗಳು ಪಡ್ಡೆ ಹೈಕ್ಳ ಹಾರ್ಟ್ ಫೇವರೇಟ್ ಆಗಿದೆ. ನೆಚ್ಚಿನ ನಟಿ ರೀಷ್ಮಾಳ ಮುಂಬರುವ ಚಿತ್ರಕ್ಕಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

  • ನನ್ನ ಬಂದು ಹೀರೋ ಆಗು ಅಂತಾ ಯಾರೂ ಕರೆಯಲಿಲ್ಲ: ರಾಕಿಂಗ್ ಸ್ಟಾರ್ ಯಶ್

    ನನ್ನ ಬಂದು ಹೀರೋ ಆಗು ಅಂತಾ ಯಾರೂ ಕರೆಯಲಿಲ್ಲ: ರಾಕಿಂಗ್ ಸ್ಟಾರ್ ಯಶ್

    ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲ ವಿಶ್ವದ ಮೂಲೆ ಮೂಲೆನಲ್ಲೂ ಯಶ್ ಮೇನಿಯಾ ಶುರುವಾಗಿದೆ. `ಕೆಜಿಎಫ್’ ಸ್ಟಾರ್ ಆಗೋಕು ಮುಂಚೆ ಯಶ್ ನಡೆದು ಬಂದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಕಠಿಣ ಶ್ರಮ, ಅವಮಾನ, ಛಲದಿಂದಲೇ ಯಶ್ ಮುನ್ನುಗಿದ್ದಾರೆ. ನನ್ನ ಯಾರು ಕರೆದು ಹೀರೋ ಮಾಡಲಿಲ್ಲ ಅಂತಾ ತೆರೆ ಹಿಂದಿನ ಅಸಲಿ ಕಥೆಯನ್ನ ಪಬ್ಲಿಕ್ ಟಿವಿ ಎಕ್ಸಕ್ಲೂಸಿವ್ ಸಂದರ್ಶನದಲ್ಲಿ ನಟ ಯಶ್ ಮಾತಾನಾಡಿದ್ದಾರೆ.

    ನನ್ನ ಬಂದು ಹೀರೋ ಆಗು ಅಂತಾ ಯಾರು ಕರೆಯಲಿಲ್ಲ. ಆಕ್ಟರ್‌ ಆದ ಮೇಲೆ ಕೆಲವು ಇರುತ್ತೆ. ಇವ್ರು ಹೀಗೆ ಇರಬೇಕು,ಇದೇ ರೀತಿ ಜೀವನ ನಡೆಸಬೇಕು. ನಾನು ಕಲಾವಿದನಾಗಬೇಕು ಅಂತಾ ಬಂದ ಮೇಲೆ ನನ್ನ ವಯಕ್ತಿಕ ಜೀವನ ಕೂಡ ಪಬ್ಲಿಕ್ ಆಗಿರುತ್ತೆ, ಎಲ್ಲವನ್ನು ಅಭಿಮಾನಿಗಳು ಜಡ್ಜ್ ಮಾಡುತ್ತಾರೆ. ಇದನ್ನು ಓದಿ:EXCLUSIVE INTERVIEW- ಕೆಜಿಎಫ್ 2 ಸಿನಿಮಾ ಯಾಕೆ ನೋಡ್ಬೇಕು? : ಯಶ್ ಕೊಟ್ಟ ಉತ್ತರ ಹೀಗಿದೆ

    ನಾವು ಅಣ್ಣಾವ್ರು ಹುಟ್ಟಿರೋ ನಾಡಲ್ಲಿ ಇರೋದು, ನಾವು ಅವರಿಗೆ 10% ಕಂಪೇರ್ ಮಾಡೋಕೆ ಆಗಲ್ಲ. ನಾನು ಅಣ್ಣಾವ್ರರಷ್ಟು ಸಿಂಪಲ್ ಆಗಿ ಬದುಕುತ್ತಿನಿ ಅಂತಾಲ್ಲ. ನುಗ್ಗಬೇಕು, ಮನುಷ್ಯ ಒಂಥರಾ ಸ್ಟ್ರಾಂಗ್‌ ಆಗಿ ಇರಬೇಕು. ನನ್ನತನ ನನ್ನ ಯೋಚನೆ ಇಟ್ಕೊಂಡು ಹೇಗೆ ಕೆಲಸ ಮಾಡಬಹುದು ಅಂತಾ ಹೆಜ್ಜೆ ಇಡೋದರ ಕುರಿತು ನಟ ಯಶ್ ಪಬ್ಲಿಕ್ ಟಿವಿ ಜೊತೆ ಮಾತಾನಾಡಿದ್ದಾರೆ.

     

  • ರಾಕಿಭಾಯ್ `ಕೆಜಿಎಫ್ 2′ ಚಿತ್ರಕ್ಕಾಗಿ 100 ಟಿಕೆಟ್ ಬುಕ್ ಮಾಡಿದ ಮುಂಬೈನ ಯಶ್ ಫ್ಯಾನ್

    ರಾಕಿಭಾಯ್ `ಕೆಜಿಎಫ್ 2′ ಚಿತ್ರಕ್ಕಾಗಿ 100 ಟಿಕೆಟ್ ಬುಕ್ ಮಾಡಿದ ಮುಂಬೈನ ಯಶ್ ಫ್ಯಾನ್

    ಲ್ಲೆಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್ 2′ ಚಿತ್ರದ ಹಾವಳಿ ಜೋರಾಗಿದೆ. ಚಿತ್ರದ ಟ್ರೇಲರ್ ಮೂಲಕನೇ ದಾಖಲೆ ಬರೆದಿರೋ `ಕೆಜಿಎಫ್ 2′ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಯಶ್ ನಟನೆಯ ಬಹುನಿರೀಕ್ಷಿತ `ಕೆಜಿಎಫ್ 2′ ಇದೇ ಏಪ್ರಿಲ್ 14ಕ್ಕೆ ತೆರೆಗೆ ಅಬ್ಬರಿಸಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದೆಲ್ಲಡೆ ಚಿತ್ರ ರಿಲೀಸ್ ಆಗುತ್ತಿದೆ.

    ಈಗಾಗಲೇ `ಕೆಜಿಎಫ್ 2′ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಯುಎಸ್‌ಎನಲ್ಲಿ ಒಂದು ದಿನ ಮುಂಚೆನೇ ಪ್ರೀಮಿಯರ್ ಶೋ ಹಾಕಲಾಗಿದೆ. ಇದಕ್ಕಿನ್ನೂ 6 ದಿನಗಳಷ್ಟೇ ಬಾಕಿಯಿದೆ. ಫಸ್ಟ್ ಡೇ ಫಸ್ಟ್ ಶೋ `ಕೆಜಿಎಫ್ 2′ ಚಿತ್ರವನ್ನ ನೋಡಬೇಕು ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡಲಾಗಿದೆ.

    ವಿಶ್ವದೆಲ್ಲಡೆ ಕಾಯ್ತಿರೋ ರಾಕಿಭಾಯ್ ಸಿನಿಮಾಗಾಗಿ ಮುಂಬೈನ ಯಶ್ ಅಭಿಮಾನಿಯೊಬ್ಬ ಬರೋಬ್ಬರಿ 100 ಟಿಕೆಟ್ ಖರೀದಿಸಿ ಅಚ್ಚರಿ ಮೂಡಿಸಿದ್ದಾನೆ. ಈ ಮುನ್ನ ಈತ ಭಾಯಿಜಾನ್ ಸಲ್ಮಾನ್ ಖಾನ್ ಸಿನಿಮಾಗೆ 100 ಟಿಕೆಟ್ ಖರೀದಿಸಿದರಂತೆ. ಈಗ ಫಸ್ಟ್ ಟೈಮ್ ಸೌತ್ ಸಿನಿಮಾದ ಹೀರೋ ಯಶ್ ಸಿನಿಮಾಗೆ 100 ಟಿಕೆಟ್ ಬುಕ್ ಮಾಡಿದ್ದಾರೆ. ಇದನ್ನು ಓದಿ: ಸೆಂಚ್ಯುರಿ ಸ್ಟಾರ್ ಶಿವರಾಜ್‌ಕುಮಾರ್ ಚಿತ್ರಕ್ಕೆ ಶ್ರೀನಿ ನಿರ್ದೇಶನ

    ಇನ್ನು ನ್ಯಾಷನಲ್ ಸ್ಟಾರ್ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಜತೆಯಾಗಿದ್ದು, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟರ್ ಲುಕ್, ಹಾಡುಗಳ ಮೂಲಕ ಮೋಡಿ ಮಾಡುತ್ತಿರುವ `ಕೆಜಿಎಫ್ 2′ ಸಿನಿಮಾ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • `ಪುಕ್ಸಟ್ಟೆ ಲೈಫು’ ನಿರ್ಮಾಪಕನ ಹೊಸ ಚಿತ್ರದಲ್ಲಿ `ಗಿಲ್ಕಿ’ ನಟಿ ಚೈತ್ರಾ ಆಚಾರ್

    `ಪುಕ್ಸಟ್ಟೆ ಲೈಫು’ ನಿರ್ಮಾಪಕನ ಹೊಸ ಚಿತ್ರದಲ್ಲಿ `ಗಿಲ್ಕಿ’ ನಟಿ ಚೈತ್ರಾ ಆಚಾರ್

    ಣ್ಣದ ಲೋಕದಲ್ಲಿ ದಿನ ಕಳೆದಂತೆ ಹೊಸ ಹೊಸ ನಾಯಕಿಯರ ಪರಿಚಯವಾಗ್ತಿದೆ. ಆದ್ರೆ ಪ್ರತಿಭೆಯ ಜೊತೆಗೆ ಅದೃಷ್ಟ ಇದ್ದವರು ಮಾತ್ರ ಇಲ್ಲಿ ಗಟ್ಟಿಯಾಗಿ ನೆಲೆಯೂರ್ತಾರೆ. ಈ ಸಾಲಿನಲ್ಲಿ ಪ್ರತಿಭಾನ್ವಿತ ನಟಿ ಚೈತ್ರಾ ಆಚಾರ್ ಕೂಡ ಒಬ್ಬರು.

    ಈಗಾಗಲೇ ಮಹಿರಾ, ಗಿಲ್ಕಿ, ತಲೆದಂಡ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ವಿಶೇಷ ಪಾತ್ರಗಳ ಮೂಲಕ ಮೋಡಿ ಮಾಡಿರೋ ನಟಿ ಚೈತ್ರಾ ಈಗ `ಅಕಟಕಟ’ ಸಿನಿಮಾದಲ್ಲಿ ನಾಯಕಿಯಾಗಿ  ಕಾಣಿಸಿಕೊಳ್ತಿದ್ದಾರೆ..

     

    ಈ ಹಿಂದೆ `ಪುಕ್ಸಟ್ಟೆ ಲೈಫು’ ಚಿತ್ರ ನಿರ್ಮಾಣ ಮಾಡಿದ್ದ ನಾಗರಾಜ್ ಸೋಮಯಾಜಿ ಇದೀಗ `ಅಕಟಕಟ’ ಚಿತ್ರದ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. `ಅಕಟಕಟ’ ಸಿನಿಮಾದಲ್ಲಿ ಜಾನಕಿ ಎಂಬ ಚೈತ್ರಾ ಆಚಾರ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಚಿತ್ರದ ನಾಯಕಿಯ ಲುಕ್‌ನ್ನ ಚಿತ್ರತಂಡ ಇದೀಗ ರಿವೀಲ್ ಮಾಡಿದೆ. ಸದಾ ಖುಷಿ ಖುಷಿಯಿಂದ ಜೀವನವನ್ನು ಜೀವಿಸುವ,ನೆಗೆಟಿವ್ ಬಿಟ್ಟು ಪಾಸಿಟಿವ್ ಬಗ್ಗೆ ಯೋಚಿಸುವ ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಚೈತ್ರಾ ಕಾಣಿಸಿಕೊಳ್ತಿದ್ದಾರೆ. ಇಂಥ ನಾಯಕಿಯ ಬದುಕಿಗೆ ನಾಯಕ ಎಂಟ್ರಿ ಕೊಟ್ಟಾಗ ಏನಾಗುತ್ತೇ ಅನ್ನೋದೇ ಚಿತ್ರದ ಸ್ಟೋರಿ. ಇದನ್ನು ಓದಿ: ಪುಷ್ಪ-2ನಲ್ಲೂ ಸಮಂತಾ- ಆದ್ರೆ ಐಟಂ ಸಾಂಗ್‌ನಲ್ಲಿ ಅಲ್ಲ?

    ನಿರ್ದೇಶಕ ನಾಗರಾಜ್ ಸೋಮಯಾಜಿ ಮೂಲತಃ ಫೋಟೋಗ್ರಾಫರ್,ರಂಗಭೂಮಿಯಲ್ಲಿಯೂ ಸಕ್ರಿಯರಾಗಿರುವ ಅವರು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು. ಈಗ `ಅಕಟಕಟ’ ಸಿನಿಮಾಗೆ ಚಿತ್ರಕಥೆ ಬರೆದು ಡೈರೆಕ್ಷನ್ ಕೂಡ ನಿರ್ದೇಶಕ ನಾಗರಾಜ್ ಅವರೇ ಮಾಡ್ತಿದ್ದಾರೆ. ಸದ್ಯ ಭಿನ್ನ ಟೈಟಲ್‌ನಿಂದ ಗಮನ ಸೆಳೆಯುತ್ತಿರೋ `ಅಕಟಕಟ’ ಚಿತ್ರ, ಮುಂದಿನ ದಿನಗಳಲ್ಲಿ ಅದ್ಯಾವ ರೀತಿ ಸೌಂಡ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.

  • ಚಾರ್ಲಿ ತಂಡ ಸೇರಿದ ಖ್ಯಾತ ತಮಿಳು ನಟ

    ಚಾರ್ಲಿ ತಂಡ ಸೇರಿದ ಖ್ಯಾತ ತಮಿಳು ನಟ

    ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ 777 ಚಾರ್ಲಿ ಕುರಿತು ಚಿತ್ರತಂಡ ಬಿಗ್ ಅನೌನ್ಸ್‍ಮೆಂಟ್ ಮಾಡಿದ್ದು, ತಮಿಳಿನ ಖ್ಯಾತ ನಟರೊಬ್ಬರು ಚಿತ್ರತಂಡವನ್ನು ಸೇರಿದ್ದಾರೆ.

    777 ಚಾರ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ವಿವಿಧ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಇದರ ಜೊತೆಗೆ ಅಪ್‍ಡೇಟ್‍ಗಳು ಸಹ ಸಿಗುತ್ತಿವೆ. ಇತ್ತೀಚೆಗೆ ರಾಜ್.ಬಿ.ಶೆಟ್ಟಿ ಹಾಗೂ ಡ್ಯಾನಿಶ್ ಸೇಟ್ ಚಿತ್ರತಂಡ ಸೇರಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಇದೀಗ ಮತ್ತೊಂದು ಬಹುದೊಡ್ಡ ಅನೌನ್ಸ್‍ಮೆಂಟ್ ಹೊರ ಬಿದ್ದಿದ್ದು, ತಮಿಳಿನ ಖ್ಯಾತ ನಟ ಬಾಬಿ ಸಿಂಹ 777 ಚಾರ್ಲಿ ಚಿತ್ರತಂಡವನ್ನು ಸೇರಿದ್ದಾರೆ. ಅವರ ಹುಟ್ಟುಹಬ್ಬದ ದಿನದಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಬಹಿರಂಗಪಡಿಸಿದೆ.

    ನವೆಂಬರ್ 4ರಂದು ಚಿತ್ರತಂಡ ಈ ಕುರಿತು ಮುನ್ಸೂಚನೆ ನೀಡಿತ್ತು. ಇದೇ ನವೆಂಬರ್ 6ರಂದು ಬೆಳಗ್ಗೆ 7.30ಕ್ಕೆ ಒಂದು ದೊಡ್ಡ ಅನೌನ್ಸ್‍ಮೆಂಟ್ ನಮ್ಮ ಕಡೆಯಿಂದ. ನಿರೀಕ್ಷಿಸಿ ಎಂದು ಪುಷ್ಕರ್ ಫಿಲಂಸ್‍ನ ಅಧೀಕೃತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಅದರಂತೆ ಇಂದು ಚಿತ್ರತಂಡ ವಿಷಯವನ್ನು ಬಹಿರಂಗಪಡಿಸಿದೆ. ಬಾಬಿ ಸಿಂಹ ಅವರ ಹುಟ್ಟುಹಬ್ಬದ ಅಂಗವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶುಭ ಕೋರಿದೆ.

    ಬಾಬಿ ಸಿಂಹ ಖಡಕ್ ಲುಕ್ ನೀಡಿರುವ ಪೋಸ್ಟರ್ ಹಂಚಿಕೊಂಡಿದ್ದು, ಪಕ್ಕದಲ್ಲಿ ರಕ್ಷಿತ್ ಶೆಟ್ಟಿ ಕೂಡ ನಿಂತಿದ್ದಾರೆ. ಅಲ್ಲದೆ ಇಬ್ಬರ ಪಕ್ಕ ಕಂದು ಹಾಗೂ ಕಪ್ಪು ಬಣ್ಣದ ಎರಡು ನಾಯಿಗಳು ಸಹ ಇವೆ. ಖ್ಯಾತ ನಟ ಬಾಬಿ ಸಿಂಹ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಅವರಿಗೆ ನಮ್ಮ 777 ಚಾರ್ಲಿ ಕುಟುಂಬಕ್ಕೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇವೆ ಎಂದು ಬರೆಯಲಾಗಿದೆ. ನಟ ರಕ್ಷಿತ್ ಶೆಟ್ಟಿ ಸಹ ಪೋಸ್ಟ್ ಮಾಡಿ ಬಾಬಿ ಸಿಂಹ ಅವರಿಗೆ ಶುಭಾಶಯ ತಿಳಿಸಿದ್ದಾರೆ. 777 ಚಾರ್ಲಿ ಸಿನಿಮಾದಲ್ಲಿ ಬಾಬಿ ಸಿಂಹ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

     

    View this post on Instagram

     

    ಖ್ಯಾತ ನಟ ಬಾಬಿ ಸಿಂಹ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಅವರಿಗೆ ನಮ್ಮ #777ಚಾರ್ಲಿ ಕುಟುಂಬಕ್ಕೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇವೆ. இனிய பிறந்தநாள் வாழ்த்துக்கள் பாபி சிம்ஹா, #777சார்லி குடும்பத்திற்கு உங்களை அன்புடன் வரவேற்கிறோம் #777Charlie, a crew that is growing stronger with each splendid addition???? Wishing you the happiest birthday and an even happier welcome to the #777Charlie family BobbySimha. We’re elated to have you on board as #Vamsinadhan ???? @rakshitshetty @pushkara_mallikarjunaiah @kiranraj_k @rajbshetty @iamsangeethasringeri #pushkarfilms @paramvah_studios #777CharlieWelcomesBobbySimha #777charlie

    A post shared by PushkarFilms (@pushkarfilms) on

    ಕಿರಣ್‍ರಾಜ್.ಕೆ ನಿರ್ದೇಶನದಲ್ಲಿ 777 ಚಾರ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಬಾಬಿ ಸಿಂಹ ಅವರ ನಿರ್ಧಿಷ್ಟ ಪಾತ್ರ ದಕ್ಷಿಣ ಭಾರತದವರು, ಉತ್ತರದಲ್ಲಿ ನೆಲೆಸಿರುವವರದ್ದಾಗಿದೆ. ಹೀಗಾಗಿ ಈ ಬಗ್ಗೆ ಕಿರಣ್ ನನ್ನ ಬಳಿ ಕೇಳಿದಾಗ ಬಾಬಿ ಉತ್ತಮ ಆಯ್ಕೆ ಎಂದು ಹೇಳಿದೆ. ಹೀಗಾಗಿ ಅವರು ನಮ್ಮ ತಂಡ ಸೇರಿದರು. ನಿರ್ದೇಶಕ ಕಿರಣ್ ಹಾಗೂ ನಾನು 5 ವರ್ಷಗಳ ಸ್ನೇಹಿತರು. ಚೆನ್ನೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೇಟಿಯಾದಾಗ ಒಟ್ಟಿಗೆ ಕೆಲಸ ಮಾಡಲು ಬಯಸಿದ್ದೆವು. ಚಾರ್ಲಿ ಸಿನಿಮಾ ಮೂಲಕ ಅದು ಸಾಕಾರಗೊಂಡಿದೆ ಎಂದು ಕಿರಣ್ ಅವರ ಸ್ನೇಹದ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

    ಬಾಬಿ ಇತ್ತೀಚೆಗೆ ಕೊಕೈಕನಾಲ್ ಚಿತ್ರದಲ್ಲಿ ತಮ್ಮ ಭಾಗದ ಶೂಟಿಂಗ್‍ನಲ್ಲಿ ಭಾಗವಹಿಸಿದ್ದರು. ಇದೀಗ ಚಾರ್ಲಿ ತಂಡ ಸೇರಿದ್ದಾರೆ. ಅವರ ಈ ಅತಿಥಿ ಪಾತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಬಾಬಿ ಚಿತ್ರ ತಂಡ ಸೇರಿರುವುದರಿಂದ ಸಿನಿಮಾವನ್ನು ಕನ್ನಡ ಹಾಗೂ ತಮಿಳಿನಲ್ಲಿ ಬಿಡುಗಡೆ ಮಾಡಲು ಚಿಂತಿಸಲಾಗುತ್ತಿದೆ ಎಂದು ಇದೇ ವೇಳೆ ರಕ್ಷಿತ್ ಶೆಟ್ಟಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

    ನಿರ್ದೇಶಕರು ಹಾಗೂ ಚಿತ್ರದ ಕೆಲ ಸದಸ್ಯರ ತಂಡ ಪ್ರಸ್ತುತ ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದಲ್ಲಿ ಲೊಕೇಶನ್ ಹುಡುಕುತ್ತಿದೆ. ನವೆಂಬರ್ 20ರಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದೇವೆ. ಸಿನಿಮಾದ ಕೊನೇಯ 20 ನಿಮಿಷಗಳ ಚಿತ್ರೀಕರಣ ಬಾಕಿ ಉಳಿದಿದೆ. ಅಂತಿಮ ದೃಶ್ಯಗಳಿಗೆ ಹಿಮ ಆವರಿಸಿರಬೇಕು. ಹೀಗಾಗಿ ಅದನ್ನು ಕೊನೆಗೆ ಚಿತ್ರೀಕರಿಸಲಾಗುತ್ತಿದೆ. 2021ರ ಮಾರ್ಚ್ ವೇಳೆಗೆ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ರಕ್ಷಿತ್ ಶೆಟ್ಟಿ ಚಿತ್ರದ ಬಿಡುಗಡೆ ಕುರಿತು ವಿವರಿಸಿದ್ದಾರೆ. ಬಾಬಿ ಅವರು ಚಾರ್ಲಿ ತಂಡ ಸೇರಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನೂ ಹೆಚ್ಚಿಸಿದ್ದು, ಚಿತ್ರ ಯಾವ ರೀತಿ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

     

  • ದೇಶದ್ಯಾಂತ ತೆರೆಕಾಣಲು ಸಜ್ಜಾಯ್ತು ‘ಅವನೇ ಶ್ರೀಮನ್ನಾರಾಯಣ’!

    ದೇಶದ್ಯಾಂತ ತೆರೆಕಾಣಲು ಸಜ್ಜಾಯ್ತು ‘ಅವನೇ ಶ್ರೀಮನ್ನಾರಾಯಣ’!

    ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ಶ್ರೀಮನ್ನಾರಾಯಣ ಸಿನಿಮಾ ದೇಶದ್ಯಾಂತ ತೆರೆಕಾಣಲು ಸಜ್ಜಾಗುತ್ತಿದೆ.

    ಈ ಸಿನಿಮಾ ಸಚಿನ್ ರವಿ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ರಕ್ಷಿತ್ ಅವರ ಒಡೆತನದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಎಚ್.ಕೆ. ಪ್ರಕಾಶ್ ಅವರ ಶ್ರೀ ದೇವಿ ಎಂಟರ್ ಪ್ರೈಸಸ್‍ನಲ್ಲಿ ನಿರ್ಮಾಣವಾಗಿದೆ. 80 ರ ದಶಕದ ಹಳೆಯ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ.

    ಈ ಹಿಂದೆ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ ಉಳಿದವರು ಕಂಡಂತೆ ಸಿನಿಮಾ ತಮಿಳು ಮತ್ತು ಮಲೆಯಾಳಂ ನಲ್ಲಿಯೂ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೇ ಕಿರಿಕ್ ಪಾರ್ಟಿ ಸಿನಿಮಾ ಕೂಡಾ ತೆಲುಗು ಭಾಷೆಯಲ್ಲಿ ಮರು ನಿರ್ಮಾಣ ಮಾಡಲಾಗಿತ್ತು. ಇದೀಗ ಹಿಂದಿ ಭಾಷೆಯಲ್ಲೂ ನಿರ್ಮಾಣವಾಗುತ್ತಿದೆ.

    ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಅವನೇ ಶ್ರೀ ಮನ್ನಾರಾಯಣ ಸಿನಿಮಾ ದೊಡ್ಡ ಬಜೆಟ್ ಸಿನಿಮಾವಾಗಿದ್ದು, ಏಕಕಾಲದಲ್ಲಿ ಎಲ್ಲಾ ಭಾಷೆಯಲ್ಲೂ ಬಿಗ್ ಸ್ಕ್ರೀನ್ ಮೇಲೆ ತೆರೆಕಾಣಲಿದೆ. ಈ ಸಿನಿಮಾ ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ಚಿತ್ರರಂಗದಲ್ಲೇ ದೊಡ್ಡ ಮಟ್ಟದಲ್ಲಿ ಸೆಡ್ಡು ಹೊಡೆಯಬಹುದು ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ.

    ಈ ಸಿನಿಮಾದಲ್ಲಿ ಸಾನ್ವಿ ಶ್ರೀವಾತ್ಸವ್ ಲೀಡ್ ರೋಲ್‍ನಲ್ಲಿ ಅಭಿನಯಿಸುತ್ತಿದ್ದು, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮತ್ತು ಬಾಲಾಜಿ ಮನೋಹರ್ ಅವರು ಕೂಡ ಅಭಿನಯಿಸಿದ್ದಾರೆ. ಸ್ವಲ್ಪ ಪ್ರಮಾಣದ ಚಿತ್ರೀಕರಣ ಬಾಕಿ ಇದ್ದು, ಅದೆಲ್ಲ ಪೂರ್ಣಗೊಂಡ ಬಳಿಕ ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಧರಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಾವುದೇ ಕಾರಣಕ್ಕೂ ರಾಜ್ಯ ಒಡೆಯೋ ಕೆಲ್ಸ ಮಾಡ್ಬೇಡಿ : ಶಿವರಾಜ್ ಕುಮಾರ್

    ಯಾವುದೇ ಕಾರಣಕ್ಕೂ ರಾಜ್ಯ ಒಡೆಯೋ ಕೆಲ್ಸ ಮಾಡ್ಬೇಡಿ : ಶಿವರಾಜ್ ಕುಮಾರ್

    ಬೆಂಗಳೂರು: ನಾವೆಲ್ಲ ಒಂದೇ, ಒಟ್ಟಿಗೆ ಇರಬೇಕು. ಯಾವುದೇ ಕಾರಣಕ್ಕೂ ರಾಜ್ಯ ಒಡೆಯೋ ಕೆಲ್ಸ ಮಾಡಬೇಡಿ ಎಂದು ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.

    `ಕವಚ’ ಚಿತ್ರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಏನೇ ಸಮಸ್ಯೆ ಇದ್ದರೂ ಬಗೆಹರಿಸಿಕೊಂಡು ಹೋಗೋಣ. ಖಂಡ ಖಂಡ ಕರ್ನಾಟಕ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಒಂದೇ, ಅದು ಅಖಂಡ ಕರ್ನಾಟಕ. ನಾವೆಲ್ಲ ಒಂದೇ. ಒಟ್ಟಿಗೆ ಇರಬೇಕು. ಯಾವುದೇ ಕಾರಣಕ್ಕೂ ರಾಜ್ಯ ಒಡೆಯುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

    ಪ್ರತ್ಯೇಕ ರಾಜ್ಯ ಬೇಕು ಎಂದು ಕೇಳುವವರಿಗೆ ಬುದ್ಧಿ ಮಾತು ಹೇಳುವಷ್ಟು ದೊಡ್ಡವನು ನಾನಲ್ಲ. ಎಲ್ಲರು ಮಾತನಾಡುವುದು ಕನ್ನಡ ಭಾಷೆ. ಇದರಲ್ಲಿ ಹುಬ್ಬಳ್ಳಿ ಭಾಷೆ, ಮೈಸೂರು, ಬೆಂಗಳೂರು ಭಾಷೆ ಎಂಬುವುದು ಇಲ್ಲ. ಒಂದರನ್ನು ನೋಡಿ ನಾವು ನಕಲು ಮಾಡುವುದು ಬೇಡ, ಯಾವುದೇ ವಿಚಾರ ಬಂದರು ಒಟ್ಟಿಗೆ ಕುಳಿತು ಮಾತನಾಡೋಣ. ನಮ್ಮ ಸ್ವಂತ ತನವನ್ನು ಬಿಟ್ಟುಕೊಡುವುದು ಬೇಡ ಎಂದು ಹೇಳಿದರು.