Tag: Cinema Sandalwood

  • ಅಪಘಾತ ಪ್ರಕರಣ: ನಟ ನಾಗಭೂಷಣ್ ವಿರುದ್ಧ 70 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

    ಅಪಘಾತ ಪ್ರಕರಣ: ನಟ ನಾಗಭೂಷಣ್ ವಿರುದ್ಧ 70 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

    ಟ ನಾಗಭೂಷಣ್ (Actor Nagabhushan) ಕಾರು ಅಪಘಾತ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಕೆಎಸ್ ಲೇಔಟ್ ಸಂಚಾರ ಪೊಲೀಸರು ಆಕ್ಸಿಡೆಂಟ್ ಸಂಬಂಧ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ನಾಗಭೂಷಣ್ ವಿರುದ್ಧ ಹಲವು ಸಾಕ್ಷಿಗಳನ್ನ ಕೋಣನ ಕುಂಟೆ ಪೊಲೀಸರು ಕಲೆಹಾಕಿದ್ದಾರೆ. ಇದನ್ನೂ ಓದಿ:Deepavali: ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ- ರಾಧಿಕಾ ಪಂಡಿತ್

    ಸೆಪ್ಟೆಂಬರ್ 30ರ ರಾತ್ರಿ ವಸಂತಪುರ ರಸ್ತೆಯ ಅಪಾರ್ಟ್ಮೆಂಟ್ ಬಳಿ ವಾಕಿಂಗ್ ಮಾಡುತ್ತಿದ್ದ ಕೃಷ್ಣ, ಪ್ರೇಮ ದಂಪತಿಗಳಿಗೆ ವೇಗವಾಗಿ ಬಂದ ನಟ ನಾಗಭೂಷಣ್ ಕಾರು ಡಿಕ್ಕಿ ಹೊಡೆದಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪತ್ನಿ ಪ್ರೇಮ ಸಾವನ್ನಪ್ಪಿದ್ರೆ, ಪ್ರೇಮ ಗಂಡ ಕೃಷ್ಣಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ರು. ಕೆಎಸ್ ಲೇಔಟ್ ಪೊಲೀಸರು ಕಾರು ಓಡಿಸ್ತಿದ್ದ ನಟನನ್ನ ಅರೆಸ್ಟ್ ಮಾಡಿ ಡ್ರಂಕ್ & ಡ್ರೈವ್ ಚೆಕ್ ಮಾಡಿ, ಪ್ರೊಸೀಜರ್ ಮುಗಿಸಿ, ಸ್ಟೇಷನ್ ಬೇಲ್ ಮೇಲೆ ಬಿಟ್ಟು ಕಳಿಸಿದ್ದರು. ಇದೀಗ ಸಂಚಾರ ಪೊಲೀಸರು ನಟ ನಾಗಭೂಷಣ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.

    ನಾಗಭೂಷಣ್ ಮೇಲೆ ಸುಮಾರು 70ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಪೊಲೀಸರು ಫೈಲ್ ಮಾಡಿದ್ದಾರೆ. ಈ ಘಟನೆ ಬಗ್ಗೆ 50ಕ್ಕೂ ಹೆಚ್ಚು ಸಾಕ್ಷ್ಯಗಳ ಸಂಗ್ರಹ ಮಾಡಲಾಗಿದೆ. ಇನ್ನೂ ಪ್ರೇಮಾ ಹಾಗೂ ಕೃಷ್ಣ ಅವರು ಪಾದಾಚಾರಿ ಮಾರ್ಗದಿಂದ ನೇರ ರಸ್ತೆಗೆ ಇಳಿದಿದ್ದರು ಎಂದು ಹೇಳಿಕೆ ನೀಡಿದ್ದರು. ಏಕಾಏಕಿ ಕಾರಿಗೆ ಅಡ್ಡಲಾಗಿ ಬಂದ ಕಾರಣ ಕಾರ್ ಕಂಟ್ರೋಲ್ ಸಿಗದೆ ಆ್ಯಕ್ಸಿಡೆಂಟ್ ಅಗಿದೆ ಎಂದು ನಾಗಭೂಷಣ್ ಹೇಳಿಕೆ ನೀಡಿದ್ದರು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಕೃಷ್ಣ ಅವರ ಹೇಳಿಕೆಯಲ್ಲಿ ಎಲ್ಲವೂ ಉಲ್ಟಾ ಆಗಿದೆ.

    ವೇಗವಾಗಿ ಬಂದ ಕಾರು ಫುಟ್‌ಪಾತ್ ಮೇಲೆ ಹೋಗುತ್ತಿದ್ದಾಗ ನಾನು ಮತ್ತು ನನ್ನ ಪತ್ನಿ ಪ್ರೇಮ ಅವರಿಗೆ ಕಾರು ಡಿಕ್ಕಿ ಹೊಡೆದಿತ್ತು ಎಂದು ಕೃಷ್ಣ ಹೇಳಿಕೆ ನೀಡಿದ್ದಾರೆ. ಮುಂದೆ ಕೋರ್ಟ್‌ನಲ್ಲಿ ಟ್ರಯಲ್ ಆರಂಭವಾಗಲಿದ್ದು, ಸಮನ್ಸ್ ಜಾರಿಯಾದಾಗ ಕೋರ್ಟ್‌ ಹಿಯರಿಂಗ್‌ಗಳನ್ನ ನಟ ಅಟೆಂಡ್ ಮಾಡಬೇಕು. ವಾದ ಪ್ರತಿವಾದ ನಡೆದು ಕೊನೆಗೆ ನ್ಯಾಯಾಧೀಶರಿಂದ ಆದೇಶ ಹೊರಬರಲಿದೆ.

  • ಖಡಕ್ ಅವತಾರದಲ್ಲಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್: ರಿಚ್ ಆಗಿದೆ `ವಿಕ್ರಾಂತ್ ರೋಣ’ ಟ್ರೈಲರ್

    ಖಡಕ್ ಅವತಾರದಲ್ಲಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್: ರಿಚ್ ಆಗಿದೆ `ವಿಕ್ರಾಂತ್ ರೋಣ’ ಟ್ರೈಲರ್

    ಕಿಚ್ಚ ಸುದೀಪ್ ನಟನೆಯ ನಿರೀಕ್ಷಿತ ಸಿನಿಮಾ `ವಿಕ್ರಾಂತ್ ರೋಣ’ ಬಹುಭಾಷೆಗಳಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಸದ್ಯ ಐದು ಭಾಷೆ, ಐದು ಸೂಪರ್ ಸ್ಟಾರ್‌ಗಳು ಟ್ರೇಲರ್ ರಿಲೀಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ʻವಿಕ್ರಾಂತ್ ರೋಣʼ ಸಿನಿಮಾ ಧೂಳೆಬ್ಬಿಸುತ್ತಿದೆ.

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಅನೂಪ್ ಭಂಡಾರಿ ನಿರ್ದೇಶನದ `ವಿಕ್ರಾಂತ್ ರೋಣ’ ಐದು ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಸದ್ದು ಮಾಡುತ್ತಿದೆ.

    ಸಿನಿಮಾ ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ವಿಕ್ರಾಂತ್ ರೋಣ ಇದೊಂದು ಥ್ರಿಲರ್ ಚಿತ್ರವಾಗಿದೆ ಭಯ ತುಂಬಿರುವ ಊರಿನಲ್ಲಿ ಭಯ ಅಂದ್ರೆ ಏನು ಅಂತಾ ಗೊತ್ತಿಲ್ಲದ ವ್ಯಕ್ತಿ ವಿಕ್ರಾಂತ್ ರೋಣ ಖಡಕ್ ಅಧಿಕಾರಿಯ ಎಂಟ್ರಿ ಆಗುತ್ತೆ. ಮುಂದೆ ಹೇಗೆ ಕಥೆ ಹೇಗೆ ಸಾಗುತ್ತದೆ ಅನ್ನೋದು ಟ್ವಿಸ್ಟ್. ಇದನ್ನೂ ಓದಿ:ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

    ಕಿಚ್ಚ ಸುದೀಪ್ ಜತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೇಲಿನ್ ಸಾಥ್ ನೀಡಿದ್ದಾರೆ. ಕೆಲ ದಿನಗಳ ಹಿಂದೆ ರಾ ರಾ ರಕ್ಕಮ್ಮ ಸಾಂಗ್ ಸಿಕ್ಕಾಪಟ್ಟೆ ಹವಾ ಏಬ್ಬಿಸಿತ್ತು. ಟ್ರೇಲರ್ ಸರದಿ, ಸುದೀಪ್ ಅವರ ವಿಕ್ರಾಂತ್ ರೋಣ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಟ್ರೇಲರ್ ಕೂಡ ರೀಚ್ ಆಗಿ ಮೂಡಿಬಂದಿದೆ.

    ವಿಕ್ರಾಂತ್ ರೋಣ ಸದ್ಯದಲ್ಲೇ ತೆರೆಗೆ ಅಪ್ಪಳಿಸುತ್ತಿದೆ.‌ ಜುಲೈ 28ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ತ್ರೀ ಡಿ ರೂಪದಲ್ಲಿ ಪ್ಯಾನ್ ಚಿತ್ರವಾಗಿ ಬೆಳ್ಳಿಪರದೆಯಲ್ಲಿ ರಾರಾಜಿಸಲಿದೆ. ಟ್ರೇಲರ್‌ನಿಂದ ಸೌಂಡ್ ಮಾಡುತ್ತಿರುವ ಸುದೀಪ್ ಸಿನಿಮಾ, ಸಿನಿಮಾ ರಿಲೀಸ್ ಬಳಿಕ ಹೇಗೆಲ್ಲಾ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.

    Live Tv

  • ಆ ಹುಡುಗಿಯ ಜೊತೆ ಮದುವೆ: ನೋ ವೇ ಚಾನ್ಸೇ ಇಲ್ಲಾ ಎಂದ ಜೆಕೆ

    ಆ ಹುಡುಗಿಯ ಜೊತೆ ಮದುವೆ: ನೋ ವೇ ಚಾನ್ಸೇ ಇಲ್ಲಾ ಎಂದ ಜೆಕೆ

    ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಜಯರಾಂ ಕಾರ್ತಿಕ್ ಸಿನಿಮಾಗಿಂತ ತಮ್ಮ ಮದುವೆ ವಿಚಾರಕ್ಕೆ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಫ್ಯಾಶನ್ ಡಿಸೈನರ್ ಅಪರ್ಣ ಸಮಂತಾ ಜತೆಗೆ ಜೆಕೆ ಮದುವೆ ಎಂದೆಲ್ಲಾ ಸುದ್ದಿಯಾಗಿತ್ತು. ಇದೀಗ ಈ ಎಲ್ಲಾ ವದಂತಿಗೂ ಜೆಕೆ ಸ್ಪಷ್ಟನೆ ನೀಡಿದ್ದಾರೆ.

    ಜಯರಾಂ ಕಾರ್ತಿಕ್ ಹಿಂದಿ ಕಿರುತೆರೆ ಮರಳಲು ಸಜ್ಜಾಗಿದ್ದಾರೆ. ಜತೆಗೆ ಸಾಕಷ್ಟು ಸಿನಿಮಾಗಳು ಜೆಕೆ ಕೈಯಲ್ಲಿದೆ. ಈಗ ಅವರ ಮದುವೆ ವದಂತಿಯ ಬಗ್ಗೆ ನಟ ಬೇಸರಿಸಿಕೊಂಡಿದ್ದಾರೆ. ಫ್ಯಾಶನ್ ಡಿಸೈನರ್ ಅಪರ್ಣ ಜತೆಗಿರೋ ಫೋಟೋ ಹಂಚಿಕೊಂಡ ಬೆನ್ನಲ್ಲೇ ಜೆಕೆ ಮದುವೆಯ ಸುದ್ದಿ ಕೂಡ ಸೃಷ್ಟಿಯಾಗಿತ್ತು. ಈಗ ಈ ಸುದ್ದಿ ಕುರಿತು ಜಯರಾಂ ಕಾರ್ತಿಕ್ ಮಾತನಾಡಿದ್ದಾರೆ. ಇದನ್ನೂ ಓದಿ: ಕಂಗನಾ ರಣಾವತ್ ‘ಧಾಕಡ್’ ಸಿನಿಮಾ ಸೋಲಿಗೆ ಕಾಣದ ಕೈಗಳು ಕಾರಣವಾ? : ಮತ್ತೊಂದು ಬಾಂಬ್ ಸಿಡಿಸಿದ ಕಂಗನಾ

    ಈ ಸುದ್ದಿ ಸುಳ್ಳು, ನನಗೆ ಅದೆಷ್ಟು ಬಾರಿ ಮದುವೆ ಮಾಡಿಸುತ್ತಿರೋ ಗೊತ್ತಿಲ್ಲ. ಅಪರ್ಣ ಮತ್ತು ನಾನು ಒಳ್ಳೆಯ ಸ್ನೇಹಿತರಷ್ಟೇ, ನಮ್ಮ ಸಿನಿಮಾಗಿಂತ ನಮ್ಮ ವಯಕ್ತಿಕ ವಿಚಾರ ಬಗ್ಗೆನೇ ಸುದ್ದಿಯಾಗುತ್ತಿದೆ ನಮ್ಮಿಬ್ಬರ ನಡುವೆ ಮದುವೆಯ ವಿಚಾರ ಚರ್ಚೆಯಾಗಿಲ್ಲ ಎಂದು ಮದುವೆ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಹಿಂದಿ ಕಿರುತೆರೆಯಲ್ಲಿ ಮಿಂಚಲು ಜಯರಾಂ ಕಾರ್ತಿಕ್ ಸಜ್ಜಾಗಿದ್ದಾರೆ.

  • `ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಸದಾನಂದ ವಿವಾಹ

    `ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಸದಾನಂದ ವಿವಾಹ

    ಕಿರುತೆರೆಯ ಸೂಪರ್ ಹಿಟ್ `ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟ ಸದಾನಂದ ಹಸೆಮಣೆ ಏರಿದ್ದಾರೆ. ಇದೀಗನಟ ಸದಾನಂದ ಮದುವೆಯ ಫೋಟೋಗಳ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಸುಲ್ತಾನ್‌ಪುರ ಗ್ರಾಮದ ಪ್ರತಿಭೆ ಸದಾನಂದ ದುರ್ಗಪ್ಪ ಕಾಳೆ ಅವರು ಖಾಸಗಿ ಚಾನೆಲ್‌ನ್ನ ಕಾಮಿಡಿ ಕಿಲಾಡಿಗಳು ಶೋ ಮೂಲಕ ಗುರುತಿಸಿಕೊಂಡಿದ್ದರು. ತಮ್ಮ ಅಮೋಘ ನಟನೆಯಿಂದ ಗಮನ ಸೆಳೆದಿದ್ದ ನಟ ಸದಾನಂದ ಇಂದು ಸರಳವಾಗಿ ವಿವಾಹವಾಗಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಟ ವಿಜಯ್ ಬಾಬು ಪಾಸ್‌ಪೋರ್ಟ್ ಸೀಜ್

    ಸಾಕಷ್ಟು ಸೀರಿಯಲ್ ಮತ್ತು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸದಾನಂದ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ನೆಚ್ಚಿನ ನಟನ ಹೊಸ ಬಾಳಿಗೆ ಸ್ನೇಹಿತರು ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • Love..ಲಿ ಇಂಟ್ರೊಡಕ್ಷನ್ ಫೈಟ್‌ನಲ್ಲಿ ಮಿಂಚಿದ ವಸಿಷ್ಠ ಸಿಂಹ

    Love..ಲಿ ಇಂಟ್ರೊಡಕ್ಷನ್ ಫೈಟ್‌ನಲ್ಲಿ ಮಿಂಚಿದ ವಸಿಷ್ಠ ಸಿಂಹ

    ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಕಮ್ ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ಲವರ್ ಬಾಯ್ ಆಗಿ ಲವ್..ಲಿ ಅಂತಾ ಮಿಂಚ್ತಿದ್ದಾರೆ. ಜೊತೆಗೆ ಈಗ ಇಂಟ್ರೊಡಕ್ಷನ್ ಸೀನ್‌ಗಾಗಿ ಖಡಕ್ ಆಗಿ ಫೈಟ್ ಮಾಡಿ, ಚಿತ್ರದ ಫೋಟೋ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದಾರೆ.

    ಕಮರ್ಷಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆ ವಸಿಷ್ಠ ಸಿಂಹ ಲವ್..ಲಿ ಅಂತಾ ಫುಲ್ ಲವ್ ಮೂಡ್‌ನಲ್ಲಿದ್ದಾರೆ. ಈಗ ಲವ್..ಲಿ ಚಿತ್ರದ ಇಂಟ್ರೊಡಕ್ಷನ್ ಸೀನ್‌ನಲ್ಲಿ ವಸಿಷ್ಠ ಸಿಂಹ ಖಡಕ್ ಆಗಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಇಂಟ್ರೊಡಕ್ಷನ್ ಸೀನ್ ಚಿತ್ರೀಕರಣ ಕಂಪ್ಲೀಟ್ ಆಗಿದೆ.

    Love..ಲಿ ಚಿತ್ರದ ಇಂಟ್ರೊಡಕ್ಷನ್ ಸೀನ್ಸ್ ಸಖತ್ ಅದ್ದೂರಿಯಾಗಿ ಮೂಡಿ ಬಂದಿದೆ. ವಸಿಷ್ಠ ಜತೆ ಸುದಿ, ಶೋಭರಾಜ್ ಮತ್ತು ವರದ ಫೈಟ್‌ನಲ್ಲಿ ಅಬ್ಬರಿಸಿದ್ದಾರೆ. ಹಿಂದೆಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ವಸಿಷ್ಠ ಸಿಂಹ ಅಬ್ಬರಿಸಿದ್ದಾರೆ. ಇದರ ಜತೆ ರೋಪ್ಸ್ ಆದಷ್ಟು ಅವೈಡ್ ಮಾಡಿ, ರಿಸ್ಕ್ ಶಾಟ್ ಮಾಡಿಸಿದ್ದಾರೆ. ಸಖತ್ ರಿಚ್ ಆಗಿ ಮೂಡಿ ಬಂದಿರುವ ಇಂಟ್ರೊಡಕ್ಷನ್ ಫೈಟ್ ದೃಶ್ಯಗಳಿಗೆ ಡ್ಯಾನಿ ಮಾಸ್ಟರ್ 40-50 ಫೈಟರ್ ಇಟ್ಕೊಂಡು ಫೈಟ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಇದನ್ನೂ ಓದಿ: ಸಮಂತಾ, ವಿಜಯ್ ದೇವರಕೊಂಡ ಪ್ರೀತಿಗಿಟ್ಟ ಹೆಸರು ‘ಖುಷಿ’

    ಚೇತನ್ ಕೇಶವ್ ನಿರ್ದೇಶನದ ಈ ಚಿತ್ರದಲ್ಲಿ ವಸಿಷ್ಠ ಸಿಂಹಗೆ ಜೋಡಿಯಾಗಿ ನಟಿ ಸಮೀಕ್ಷಾ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್‌ನಿಂದ ಗಮನ ಸೆಳೆದಿರುವ Love..ಲಿ ಚಿತ್ರದ ಮೇಲೆ ಅಭಿಮಾನಿಗಳ ಹೆಚ್ಚಿಸಿದೆ.

  • ಆಫ್‌ಸ್ಕ್ರೀನ್‌ನಲ್ಲಿ ಹೆಂಡತಿಗೆ ಮುತ್ತಿಟ್ಟ ಯಶ್‌

    ಆಫ್‌ಸ್ಕ್ರೀನ್‌ನಲ್ಲಿ ಹೆಂಡತಿಗೆ ಮುತ್ತಿಟ್ಟ ಯಶ್‌

    ಚಂದನವನದ `ಮೊಗ್ಗಿನ ಮನಸ್ಸಿ’ನ ನಟಿ ರಾಧಿಕಾ ಪಂಡಿತ್ ಸಿನಿಮಾದಿಂದ ಸ್ವಲ್ವ ಬ್ರೇಕ್ ತಗೆದುಕೊಂಡು ಕುಟುಂಬ ಮತ್ತು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. `ಕೆಜಿಎಫ್ 2′ ಯಶಸ್ಸಿನ ಹಿನ್ನೆಲೆ ಪಾರ್ಟಿ ಮೂಡ್‌ನಲ್ಲಿರೋ ಯಶ್ ಮತ್ತು ರಾಧಿಕಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೇಳೆ ಯಶ್ ತಮ್ಮ ಪತ್ನಿ ರಾಧಿಕಾ ಕೆನ್ನೆಗೆ ಮುತ್ತು ಕೊಡ್ತಿರೋ ಇನ್ಸ್ಟಾಗ್ರಾಂ ವೈರಲ್ ಆಗಿದೆ.

    ನ್ಯಾಷನಲ್ ಸ್ಟಾರ್ ಯಶ್ ಇಷ್ಟು ದಿನ `ಕೆಜಿಎಫ್ 2′ ಪ್ರಚಾರದಲ್ಲಿ ಬ್ಯುಸಿಯಾಗಿದ್ರು. ರಿಲೀಸ್ ನಂತರ ಕೆಜಿಎಫ್ 2 ಚಿತ್ರ ಈಗ ಬಾಕ್ಸ್ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರದ ಕಲೆಕ್ಷನ್ 1000 ಕೋಟಿಯತ್ತ ಸಮೀಪಿಸುತ್ತಿದೆ. ಇಡೀ ಚಿತ್ರದ ಗೆಲುವನ್ನು ಸಂಭ್ರಮಿಸಿಸಲು ಚಿತ್ರತಂಡ ಕುಟುಂಬದ ವೆಕೇಷನ್‌ಗೆ ಹೋಗಿದ್ದಾರೆ. `ಕೆಜಿಎಫ್ 2′ ಸಕ್ಸಸ್ ಸಂತಸದ ಕ್ಷಣಗಳನ್ನು ಫಿಲ್ಮಂ ಟೀಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಈಗ ಪತಿ ಯಶ್ ಜತೆಗಿನ ವಿಶೇಷ ಫೋಟೋವೊಂದನ್ನ ನಟಿ ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ.

    ಪೋಸ್ಟ್‌ನಲ್ಲಿ ಯಶ್ ಮತ್ತು ರಾಧಿಕಾ ಒಂದೇ ಕಲರ್ ಡ್ರೇಸ್ ಹಾಕಿಕೊಂಡಿದ್ದು, ಕೂಲಿಂಗ್ ಗ್ಲಾಸ್ ಹಾಕಿದ್ದಾರೆ. ಮೂರು ವಿಭಿನ್ನ ಪೋಸ್‌ಗಳಲ್ಲಿ ಒಬ್ಬರಿಗೊಬ್ಬರು ಪೋಸ್ ಕೊಡತ್ತಿದ್ದರೆ, ಕಡೆಯ ಫೋಟೋದಲ್ಲಿ ಯಶ್ ರಾಧಿಕಾ ಕೆನ್ನೆಗೆ ಕಿಸ್ ಮಾಡಿದ್ದಾರೆ. ಈ ಪೋಸ್ಟ್ಗೆ ಕಲರ್ ಗ್ಲಾಸ್‌ನಲ್ಲಿ ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದು, ಫೋಟೋ ಕೈಚಲಕ ಭುವನ್ ಗೌಡ ಎಂದು ಪೋಸ್ಟ್ ಮಾಡಿದ್ದಾರೆ. ನೆಚ್ಚಿನ ಜೋಡಿಯ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ: 

     

    View this post on Instagram

     

    A post shared by Radhika Pandit (@iamradhikapandit)

    ಯಶ್ ವೃತ್ತಿಜೀವನದ ಯಶಸ್ವಿ ಹಾದಿಯಲ್ಲಿ ಸಾಥ್ ಕೊಟ್ಟವರು ರಾಧಿಕಾ ಪಂಡಿತ್. ಮನೆ ಮತ್ತು ಮಕ್ಕಳ ಜವಬ್ದಾರಿ ಹೊತ್ತು ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ನೆಚ್ಚಿನ ನಟಿ ರಾಧಿಕಾ ಮತ್ತೆ ಯಾವಾಗ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳತ್ತಾರೆ ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ. ಜತೆಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಸಾಕಾಷ್ಟು ಕುತೂಹಲ ಹುಟ್ಟು ಹಾಕಿದೆ.

  • `ತೋತಾಪುರಿ’ ಟ್ರೇಲರ್‌ಗೆ ಕಿಚ್ಚನ ಸಾಥ್: ಜಗ್ಗೇಶ್-ಅದಿತಿ ಕಾಮಿಡಿ ಪಂಚ್‌ಗೆ ಫ್ಯಾನ್ಸ್ ಫಿದಾ

    `ತೋತಾಪುರಿ’ ಟ್ರೇಲರ್‌ಗೆ ಕಿಚ್ಚನ ಸಾಥ್: ಜಗ್ಗೇಶ್-ಅದಿತಿ ಕಾಮಿಡಿ ಪಂಚ್‌ಗೆ ಫ್ಯಾನ್ಸ್ ಫಿದಾ

    ವರಸ ನಾಯಕ ಜಗ್ಗೇಶ್‌ ಮತ್ತು ಅದಿತಿ ಪ್ರಭುದೇವಾ ನಟಿಸಿರುವ `ತೋತಾಪುರಿ’ ಚಿತ್ರದ ಟ್ರೇಲರ್ ರಿಲೀಸ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್ `ತೋತಾಪುರಿ’ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

    ಈಗಾಗಲೇ ಚಿತ್ರದ ಪೋಸ್ಟರ್ ಮತ್ತು `ಬಾಗ್ಲು ತೆಗಿ ಮೇರಿ ಜಾನ್’ ಸಾಂಗ್ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಈಗ ರಿಲೀಸ್ ಆಗಿರೋ `ತೋತಾಪುರಿ’ ಟ್ರೇಲರ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಜಗ್ಗೇಶ್ ಮತ್ತು ಅದಿತಿ ಪ್ರಭುದೇವಾ ಡಬಲ್ ಮಿನಿಂಗ್ ಕಾಮಿಡಿ ಜುಗಲ್‌ಬಂದಿ ಜತೆ ಡಾಲಿ ಮತ್ತು ಸುಮನ್ ರಂಗನಾಥ್, ದತ್ತಣ್ಣ ನಟನೆ ನೋಡುಗರಿಗೆ ಕಾಮಿಡಿ ಕಿಕ್ ಕೊಡ್ತಿದೆ.

    ಡಿಫರೆಂಟ್ ಕಂಟೆಂಟ್ ಮೂಲಕ ನಟ ಜಗ್ಗೇಶ್ ಮತ್ತು ಅದಿತಿ ಪ್ರಭುದೇವಾ ನಟಿಸಿರೋ `ತೋತಾಪುರಿ’ ಟ್ರೇಲರ್ ಕಿಚ್ಚ ಸುದೀಪ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಜಗ್ಗೇಶ್ ಮತ್ತು ಅದಿತಿ ಕಾಂಬಿನೇಷನ್ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. `ಬಾಗ್ಲು ತೆಗಿ ಮೇರಿ ಜಾನ್’ ಸಾಂಗ್ ನೋಡಿ ಇಷ್ಟಪಟ್ಟಿದ್ದ ಅಭಿಮಾನಿಗಳು, ಈಗ ಟ್ರೇಲರ್ ನೋಡಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾ ಮಗಳಿಗೆ ನಾಮಕರಣ: ಹೆಸರೇನು ಗೊತ್ತಾ?

    ಈ ಹಿಂದೆ ವಿಜಯ್ ಮತ್ತು ಜಗ್ಗೇಶ್ ಕಾಂಬಿನೇಷನ್‌ನಲ್ಲಿ ನೀರ್‌ದೋಸೆ ಚಿತ್ರ ತೆರೆಕಂಡಿತ್ತು. ಚಿತ್ರ ಸೂಪರ್ ಹಿಟ್ ಆಗಿತ್ತು, ಈಗ ತೋತಾಪುರಿ ಚಿತ್ರದ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಈ ಚಿತ್ರವೂ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. `ತೋತಾಪುರಿ’ ಚಿತ್ರದ ಕಾಮಿಡಿ ಕಿಕ್‌ಗೆ ಫಿದಾ ಆಗಿರೋ ಫ್ಯಾನ್ಸ್, ಚಿತ್ರಕ್ಕಾಗಿ ಕಾಯ್ತಿದ್ದಾರೆ.

  • ಅಭಿಮಾನಿಗಳಲ್ಲಿ ಲವ್ಲಿಸ್ಟಾರ್ ಪ್ರೇಮ್ ಕಳಕಳಿಯ ಮನವಿ

    ಅಭಿಮಾನಿಗಳಲ್ಲಿ ಲವ್ಲಿಸ್ಟಾರ್ ಪ್ರೇಮ್ ಕಳಕಳಿಯ ಮನವಿ

    ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರರಂಗದ ಆಸ್ತಿ. ಅಪ್ಪು ನಿಧನದಿಂದ ಇಡೀ ಚಿತ್ರರಂಗವೇ ತತ್ತರಿಸಿದೆ. ಇನ್ನು ಪುನೀತ್‌ ಅಗಲಿಕೆಯ ನೋವಿನಿಂದ ಚಿತ್ರರಂಗದ ಸ್ನೇಹಿತರು, ಕುಟುಂಬಸ್ಥರು, ನೋವಿನಲ್ಲಿದ್ದಾರೆ. ಈ ವೇಳೆ ನೆನಪಿರಲಿ ಪ್ರೇಮ್ ತಮ್ಮ ಹುಟ್ಟುಹಬ್ಬದ ವಿಚಾರವಾಗಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ವ್ಯಕ್ತಿತ್ವದಿಂದ, ಅಮೋಘ ನಟನೆಯಿಂದ ಮನೆಮಾತಾಗಿರೋ ನಟ ಪ್ರೇಮ್‌ಗೆ ಏಪ್ರಿಲ್ 18ರಂದು ಹುಟ್ಟುಹಬ್ಬದ ಸಂಭ್ರಮ. ಇದೀಗ ಒಂದು ದಿನ ಮುಂಚಿತವಾಗಿ ಅಭಿಮಾನಿಗಳಿಗೆ ಮನವಿ ಪತ್ರವೊಂದನ್ನು ತಮ್ಮ ಇನ್ಸ್ಟಾಗಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಪ್ಪು ಅಗಲಿಕೆಯ ಹಿನ್ನಲೆ ಹುಟ್ಟು ಹಬ್ಬದ ಸೆಲೆಬ್ರೇಶನ್ ಬೇಡ ಅಂತಾ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

     

    View this post on Instagram

     

    A post shared by Prem Nenapirali (@premnenapirali)

    ಪ್ರತಿ ವರ್ಷ ನನ್ನ ಹುಟ್ಟು ಹಬ್ಬವನ್ನು ನಿಮ್ಮದೇ ಎಂಬಂತೆ ಸಂಭ್ರಮಿಸುತ್ತಿದ್ದಿರಿ. ನಮ್ಮೆಲ್ಲರ ಪ್ರೀತಿಯ ಅಪ್ಪು ಸರ್, ಹಾಗೂ ನನ್ನ ಜೀವದ ಗೆಳೆಯ ಸುನೀಲ್ ದೂರವಾಗಿದ್ದಾರೆ, ಆದ ಕಾರಣ ಈ ವರ್ಷ ಬರ್ತಡೇ ಸೆಲೆಬ್ರೇಶನ್ ಬೇಡ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲು ದೇವಸ್ಥಾನಕ್ಕೆ ಹೋಗುತ್ತಿರುವ ಕಾರಣ ಮನೆಯಲ್ಲಿ ಇರುವುದಿಲ್ಲ. ಆದರೆ ನಿಮ್ಮ ಫೋನ್ ಕರೆಗಳಿಗೆ ಕಾಯುತ್ತಿರುತ್ತೇನೆ ಎಂದು ಇನ್ಸ್ಟಾಗಾಂ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:`ಕೆಜಿಎಫ್ 2′ ಸಕ್ಸಸ್ ಅಲೆಗೆ ಬೆದರಿದ ಬಾಲಿವುಡ್: ಚಿತ್ರರಂಗಕ್ಕೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್‌

    ನಟ ಪ್ರೇಮ್ ಮತ್ತು ಅಪ್ಪು ಮಧ್ಯೆ ಒಳ್ಳೆಯ ಬಾಂಧವ್ಯವಿತ್ತು. ಅಪ್ಪು ಮತ್ತು ಪ್ರಾಣ ಸ್ನೇಹಿತ ಸುನೀಲ್ ಅಗಲಿಕೆಯ ನೋವಿನಿಂದ ಹೊರಬರಲಾಗುತ್ತಿಲ್ಲ. ಇಡೀ ಚಿತ್ರರಂಗವೇ ಅಪ್ಪು ನಿಧನದ ನೋವಿನಲ್ಲಿರಬೇಕಾದರೆ ನೆನಪಿರಲಿ ಪ್ರೇಮ್ ಸೆಲೆಬ್ರೇಶನ್ ಬೇಡ ಅಂತಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ನೀವು ಎಲ್ಲಿದ್ದಿರೋ ಅಲ್ಲಿಂದಲೇ ಶುಭ ಹಾರೈಸಿ ಎಂದು ಕೇಳಿಕೊಂಡಿದ್ದಾರೆ.

  • `ಕೆಜಿಎಫ್ 2′ ಸಕ್ಸಸ್ ಅಲೆಗೆ ಬೆದರಿದ ಬಾಲಿವುಡ್: ಚಿತ್ರರಂಗಕ್ಕೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್‌

    `ಕೆಜಿಎಫ್ 2′ ಸಕ್ಸಸ್ ಅಲೆಗೆ ಬೆದರಿದ ಬಾಲಿವುಡ್: ಚಿತ್ರರಂಗಕ್ಕೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್‌

    `ಕೆಜಿಎಫ್ ಚಾಪ್ಟರ್ 2′ ಪ್ಯಾನ್ ಇಂಡಿಯಾ ಚಿತ್ರವಾಗಿ ದೇಶದೆಲ್ಲಡೆ ಚಿತ್ರ ಲೂಟಿ ಮಾಡ್ತಿದೆ. ರಾಕಿಭಾಯ್ ಸಿನಿಮಾ ಬಂದ ಮೇಲೆ ಬಾಲಿವುಡ್ ಸಿನಿಮಾ ರಂಗ ಬೆದರಿದೆ. ಇಡೀ ಸಿನಿಮಾರಂಗವನ್ನೇ `ಕೆಜಿಎಫ್ 2′ ಚಿತ್ರ ಆವರಿಸಿಕೊಂಡಿದೆ. ಯಶ್ ಮೇನಿಯಾ ಶುರುವಾದ ಮೇಲೆ ಬಾಲಿವುಡ್ ಕಥೆ ಮುಗಿದೆ ಹೋಯ್ತು ಎನ್ನುವ ಮಾತು ಕೇಳಿ ಬರುತ್ತಿದೆ.

    kgf 2

    ʻಕೆಜಿಎಫ್ 2ʼ ಸಕ್ಸಸ್ ಅಲೆ ಇದೀಗ ಬಾಲಿವುಡ್ ಸ್ಟಾರ್‌ಗಳಿಗೆ ಮತ್ತು ನಿರ್ದೇಶಕರಿಗೆ ಚಿಂತೆ ತಂದಿದೆ. ಹೇಗಾದರೂ ಮಾಡಿ ಬಾಲಿವುಡ್‌ನ ಮೊದಲ ಚಾರ್ಮ್ ತರುವ ಪ್ರಯತ್ನದಲ್ಲಿ ಅಲ್ಲಿನ ನಿರ್ದೇಶಕರು, ಸ್ಟಾರ್‌ಗಳು ತೊಡಗಿದ್ದಾರೆ. ಹೀಗಿರುವಾಗಲೇ ಕಿಂಗ್ ಖಾನ್ ಶಾರುಖ್ ಅವರು ಹೊಸ ಚಿತ್ರದ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ. ಸೋಲಿಲ್ಲದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಜತೆ ಕೆಲಸ ಶುರು ಮಾಡಿದ್ದಾರೆ.

    ʻಪುಷ್ಪʼ, ʻಆರ್‌ಆರ್‌ಆರ್‌ʼ, ʻಕೆಜಿಎಫ್ 2ʼ ಚಿತ್ರದ ಕಲೆಕ್ಷನ್‌ಗೆ ಬಾಲಿವುಡ್ ಸಿನಿಮಾಗಳಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದೆ. ಈ ಚಿತ್ರಗಳ ಸಕ್ಸಸ್‌ನಿಂದ ಬಾಲಿವುಡ್ ಮಂದಿ ಮಂಕಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಿಂದ ಹಿಂದಿ ಸಿನಿಮಾಗಳಿಗೆ ಸೋಲಿನ ರುಚಿ ತಟ್ಟಿದೆ. ಹೀಗಿರುವಾಗಲೇ ಹಿಂದಿ ಚಿತ್ರಗಳನ್ನ ಮೇಲಕ್ಕೆತ್ತಬೇಕು ಎಂಬ ನಿಟ್ಟಿನಲ್ಲಿದ್ದಾರೆ ಬಿಟೌನ್ ಸ್ಟಾರ್ಸ್.‌ ಇದನ್ನೂ ಓದಿ:ಚಿತ್ರರಂಗದಲ್ಲೇ ಧೂಳಿಬ್ಬಿಸಿರೋ ಕೆಜಿಎಫ್‌ನಲ್ಲಿ ಯಶ್‌ಗೆ ರೆಟ್ರೋ ಲುಕ್ ಕೊಟ್ಟಿದ್ದು ಇವರೇ..!

    ಸದ್ಯ ಶಾರುಖ್ ನಟನೆಯ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. `ಪಠಾಣ್’ ಮತ್ತು ಅಟ್ಲಿ ನಿರ್ದೇಶನದ ಚಿತ್ರ, ಮತ್ತು ರಾಜಕುಮಾರ್ ಹಿರಾನಿ ನಿರ್ದೇಶನದಲ್ಲಿ ಚಿತ್ರದಲ್ಲಿ ಈಗಾಗಲೇ ನಟಿಸುತ್ತಿದ್ದಾರೆ. ಪಂಜಾಬ್ ಗ್ರಾಮದಲ್ಲಿ ಶೂಟಿಂಗ್ ಶುರುವಾಗಿದೆ. ಹಿಂದಿ ಚಿತ್ರರಂಗದಲ್ಲಿ ಬಿಗ್ ಹಿಟ್ ಚಿತ್ರ ಕೊಡಬೇಕು ಎಂಬ ನಿಟ್ಟಿನಲ್ಲಿ ತೆರೆಮರೆಯಲ್ಲಿ ಭರ್ಜರಿ ಕೆಲಸ ನಡೆಯುತ್ತಿದೆ. ಮುಂದೆ ಚಿತ್ರರಂಗದಲ್ಲಿ ಎನೆಲ್ಲ ಸಂಚಲನ ಸೃಷ್ಟಿಯಾಗಬಹುದು ಅಂತಾ ಕಾದು ನೋಡಬೇಕಿದೆ.

     

  • ಹೈದರಾಬಾದ್ ಸ್ಟಾರ್ ನಟರ ಜೊತೆಗಿನ ಬಾಂಧವ್ಯ ಬಿಚ್ಚಿಟ್ಟ ರಾಕಿಭಾಯ್ ಯಶ್

    ಹೈದರಾಬಾದ್ ಸ್ಟಾರ್ ನಟರ ಜೊತೆಗಿನ ಬಾಂಧವ್ಯ ಬಿಚ್ಚಿಟ್ಟ ರಾಕಿಭಾಯ್ ಯಶ್

    ರಾಕಿಂಗ್ ಸ್ಟಾರ್ ಯಶ್ `ಕೆಜಿಎಫ್ 2′ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಕೆಜಿಎಫ್ 1 ಮತ್ತು ಚಾಪ್ಟರ್ 2 ಮೂಲಕ ರಾಷ್ಟಾçದ್ಯಂತ ಸದ್ದು ಮಾಡುತ್ತಿದ್ದಾರೆ. ಕೇವಲ ಸಿನಿಮಾಗಳ ಮೂಲಕ ಮಾತ್ರವಲ್ಲ ನಾನಾ ಸಿನಿಮಾ ರಂಗದ ಸ್ಟಾರ್ ನಟರ ಜೊತೆಯೂ ರಾಕಿಭಾಯ್ ಉತ್ತಮ ಬಾಂಧವ್ಯ ಹೊಂದಿದ್ದಾರೆ.

    ನಟ ಯಶ್ ಅವರಿಗೆ ಟಾಲಿವುಡ್‌ನಲ್ಲೂ ಸಾಕಷ್ಟು ಸೆಲೆಬ್ರೆಟಿ ಸ್ನೇಹಿತರಿದ್ದಾರೆ. ರಾಮ್‌ಚರಣ್, ಜ್ಯೂ.ಎನ್‌ಟಿಆರ್, ಅಲ್ಲು ಅರ್ಜುನ್ ಜೊತೆ ಅವರಿಗೆ ಒಳ್ಳೆಯ ಗೆಳೆತನವಿದೆ. ಹಾಗಾಗಿ ನಟ ಯಶ್ ಮೊನ್ನೆಯಷ್ಟೇ ಜ್ಯೂ.ಎನ್‌ಟಿಆರ್ ತಾಯಿ ಜೊತೆಗಿರುವ ವಿಶೇಷ ಬಾಂಧವ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ:ಇಂದು ಕೊನೆಗೂ ಮದುವೆಯಾದ ರಣಬೀರ್ ಮತ್ತು ಆಲಿಯಾ ಭಟ್

    ಸಿನಿಮಾ ಪ್ರಮೋಷನ್‌ಗಾಗಿ ಯಶ್ ಹೈದರಾಬಾದ್‌ಗೆ ಹೋದಾಗ ನಟ ರಾಮ್‌ಚರಣ್ ಮನೆಯಿಂದ ಅಡುಗೆ ಕಳುಹಿಸಿ ಕೊಟ್ಟಿದ್ದರಂತೆ. ಅಷ್ಟೇ ಅಲ್ಲದೇ ಜ್ಯೂ.ಎನ್‌ಟಿಆರ್ ಮನೆಗೆ ಯಶ್ ಭೇಟಿ ಕೊಟ್ಟಿದ್ದರಂತೆ. ಆ ವೇಳೆಯಲ್ಲಿ ಜ್ಯೂ.ಎನ್‌ಟಿಆರ್ ತಾಯಿಯ ಅತಿಥಿ ಸತ್ಕಾರ ಕಂಡು ರಾಕಿಭಾಯ್ ಖುಷಿಪಟ್ಟಿದ್ದಾರೆ. ಜ್ಯೂ.ಎನ್‌ಟಿಆರ್ ತಾಯಿ ಶಾಲಿನಿ ಅವರು ಕನ್ನಡದವರೇ ಆಗಿರುವುದರಿಂದ ಅವರೊಂದಿಗೆ ಬೆರೆಯಲು ಸುಲಭವಾಯಿತು. ಅದರಿಂದಲೇ ಜ್ಯೂ.ಎನ್‌ಟಿಆರ್ ಕುಟುಂಬದ ಜೊತೆ ಒಳ್ಳೆಯ ಒಡನಾಟ ಬೆಳೆಯಿತು. ಜ್ಯೂ.ಎನ್‌ಟಿಆರ್ ಅವರಿಗೆ ಕನ್ನಡದ ಮೇಲೆ ಅಪಾರ ಅಭಿಮಾನಿವಿದೆ ಎಂದು ಯಶ್ ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ಹೀಗೇ ರಾಮ್‌ಚರಣ್, ಜ್ಯೂ.ಎನ್‌ಟಿಆರ್ ಜೊತೆಯಿರುವ ಫ್ರೇಂಡ್‌ಶಿಪ್ ಬಗ್ಗೆ ರಿವೀಲ್ ಮಾಡಿದ್ದಾರೆ.