Tag: cinema halls

  • ಹೊರಗಡೆಯ ಆಹಾರಕ್ಕೆ ನಿರ್ಬಂಧ ಹೇರಬಹುದು, ಥಿಯೇಟರ್‌ಗಳು ಶುದ್ಧವಾದ ಕುಡಿಯುವ ನೀರು ಫ್ರೀ ನೀಡಬೇಕು: ಸುಪ್ರೀಂ

    ಹೊರಗಡೆಯ ಆಹಾರಕ್ಕೆ ನಿರ್ಬಂಧ ಹೇರಬಹುದು, ಥಿಯೇಟರ್‌ಗಳು ಶುದ್ಧವಾದ ಕುಡಿಯುವ ನೀರು ಫ್ರೀ ನೀಡಬೇಕು: ಸುಪ್ರೀಂ

    ನವದೆಹಲಿ: ಪ್ರೇಕ್ಷಕರು ಹೊರಗಡೆಯಿಂದ ಆಹಾರ ಮತ್ತು ಪಾನೀಯವನ್ನು(Food and Beverage) ಚಲನಚಿತ್ರ ಮಂದಿರಕ್ಕೆ(Cinema Halls) ಕೊಂಡೊಯ್ಯುವುದನ್ನು ನಿಯಂತ್ರಿಸುವ ಹಕ್ಕು ಚಿತ್ರಮಂದಿರದ ಮಾಲೀಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್(Supreme Court) ಹೇಳಿದೆ.

    ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾ. ಪಿ ಎಸ್ ನರಸಿಂಹ ಅವರ ಪೀಠವು ಚಿತ್ರಮಂದಿರವು ಮಾಲೀಕರ ಖಾಸಗಿ ಆಸ್ತಿಯಾಗಿದೆ. ಆದರೆ ಶುದ್ಧವಾದ ನೀರನ್ನು ಉಚಿತವಾಗಿ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ.

    ವೀಕ್ಷಕರು ಮನರಂಜನೆಗಾಗಿ ಸಿನಿಮಾ ಹಾಲ್‌ಗೆ ಭೇಟಿ ನೀಡುತ್ತಾರೆ. ಚಿತ್ರಮಂದಿರದ ಮಾಲೀಕರು ಆಹಾರ ಮತ್ತು ಪಾನೀಯಗಳ ಪ್ರವೇಶವನ್ನು ನಿಯಂತ್ರಿಸುವ ಹಕ್ಕನ್ನು ಹೊಂದಿದ್ದಾರೆ. ಲಭ್ಯವಿರುವ ಪಾನಿಯವನ್ನು ಸೇವಿಸಬೇಕೇ? ಬೇಡವೇ ಎಂಬುದು ಸಂಪೂರ್ಣವಾಗಿ ಚಲನಚಿತ್ರ ಪ್ರೇಕ್ಷಕರ ಆಯ್ಕೆಯ ಮೇಲೆ ಇರುತ್ತದೆ ಎಂದು ಪೀಠ ಹೇಳಿದೆ.

    ವೀಕ್ಷಕರು ಚಲನಚಿತ್ರ ಮಂದಿರಕ್ಕೆ ಪ್ರವೇಶಿಸಿದರೆ, ಅವನು/ಅವಳು ಚಿತ್ರಮಂದಿರದ ಮಾಲೀಕರ ನಿಯಮಗಳಿಗೆ ಬದ್ಧವಾಗಿರಬೇಕು ಮತ್ತು ಇದು ಸ್ಪಷ್ಟವಾಗಿ ಥಿಯೇಟರ್ ಮಾಲೀಕರ ವಾಣಿಜ್ಯ ನಿರ್ಧಾರದ ವಿಷಯವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.  ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‌ ಉದ್ಘಾಟನೆಗೊಂಡ 4ನೇ ದಿನಕ್ಕೆ ಕಲ್ಲು ತೂರಾಟ- ಕಿಟಕಿ ಗಾಜು ಪುಡಿ ಪುಡಿ

    ಪ್ರೇಕ್ಷಕರು ತಮ್ಮ ಸ್ವಂತ ಆಹಾರ ಮತ್ತು ಪಾನೀಯಗಳನ್ನು ಚಿತ್ರಮಂದಿರಗಳಿಗೆ ಕೊಂಡೊಯ್ಯುವುದನ್ನು ಮಲ್ಟಿಪ್ಲೆಕ್ಸ್‌ಗಳು ತಡೆಯಬಾರದು ಎಂದು ಜಮ್ಮು ಕಾಶ್ಮೀರ ಹೈಕೋರ್ಟ್‌ 2018ರಲ್ಲಿ ತೀರ್ಪು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಥಿಯೇಟರ್‌, ಮಲ್ಟಿಪ್ಲೆಕ್ಸ್‌(Multiplexes) ಮಾಲೀಕರು ಮೇಲ್ಮನವಿ ಸಲ್ಲಿಸಿದ್ದರು.

    ಹಾಲ್‌ ನೀಡುವ ಸಿನಿಮಾ ಟಿಕೆಟ್‌ ಜೊತೆ ಮಾತ್ರ ಪ್ರೇಕ್ಷಕರ ಒಪ್ಪಂದ ಇರುತ್ತದೆ. ಆದರೆ ಸಭಾಂಗಣದೊಳಗೆ ತಿನ್ನುವ ವಸ್ತುಗಳನ್ನು ಕೊಂಡೊಯ್ಯಲು ಪ್ರೇಕ್ಷಕರಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

    ಚಿತ್ರಮಂದಿರಗಳ ಆವರಣವು ಸಾರ್ವಜನಿಕ ಆಸ್ತಿಯಲ್ಲ. ಅಷ್ಟೇ ಅಲ್ಲದೇ ಥಿಯೇಟರ್‌ ಒಳಗಡೆ ಆಹಾರವನ್ನು ಖರೀದಿಸಲೇಬೇಕೆಂದು ಪ್ರೇಕ್ಷಕರಿಗೆ ನಾವು ಒತ್ತಾಯ ಮಾಡುತ್ತಿಲ್ಲ ಎಂದು ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ಅವರು ವಾದ ಮಂಡಿಸಿ ಮಲ್ಟಿಪ್ಲೆಕ್ಸ್‌ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • 7 ತಿಂಗಳ ಬಳಿಕ ಥಿಯೇಟರ್ ಓಪನ್‌ – ಮಾರ್ಗಸೂಚಿಯಲ್ಲಿ ಏನಿದೆ?

    7 ತಿಂಗಳ ಬಳಿಕ ಥಿಯೇಟರ್ ಓಪನ್‌ – ಮಾರ್ಗಸೂಚಿಯಲ್ಲಿ ಏನಿದೆ?

    ನವದೆಹಲಿ: ಬರೋಬ್ಬರಿ 7 ತಿಂಗಳ ಬಳಿಕ ಥಿಯೇಟರ್, ಮಲ್ಟಿಪ್ಲೆಕ್ಸ್‌ ಓಪನ್ ಆಗುತ್ತಿದೆ. ಅಕ್ಟೋಬರ್ 15ರಿಂದ ಚಿತ್ರಪ್ರೇಮಿಗಳು ಚಿತ್ರಮಂದಿರಕ್ಕೆ ಹೋಗಿ ಫಿಲಂ ವೀಕ್ಷಣೆ ಮಾಡಬಹುದು. ಆದರೆ, ಈ ಮೊದಲಿನಂತೆ ಥಿಯೇಟರ್‌ನಲ್ಲಿ ಜೊತೆಯಾಗಿ ಹಿತವಾಗಿ ಪತಿ, ಪತ್ನಿಯರು, ಪ್ರೇಮಿಗಳು ಅಕ್ಕ ಪಕ್ಕ ಕುಳಿತು ಒಟ್ಟಿಗೆ ಕುಳಿತು ಸಿನಿಮಾ ನೋಡಲು ಸಾಧ್ಯವಿಲ್ಲ.

    ಕೇಂದ್ರ ಸರ್ಕಾರ ಥಿಯೇಟರ್ ಓಪನ್ ಸಂಬಂಧ ಇಂದು ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಸಾಕಷ್ಟು ಟಫ್ ರೂಲ್ಸ್ ಇವೆ. ಇದನ್ನು ನೋಡಿ, ಚಿತ್ರರಂಗದ ಮಂದಿ ಸಿನಿಮಾ ರಿಲೀಸ್ ಮಾಡೋದು ಹೇಗಪ್ಪಾ ಎಂದು ಚಿಂತಾಕ್ರಾಂತರಾಗಿದ್ದಾರೆ.

    ಮಾರ್ಗಸೂಚಿಯಲ್ಲಿ ಏನಿದೆ?
    * ಥಿಯೇಟರ್‌ನಲ್ಲಿ ಶೇ.50ರಷ್ಟು ಸೀಟ್ ಮಾತ್ರ ಭರ್ತಿಗೆ ಅವಕಾಶ
    * ಪ್ರೇಕ್ಷಕರು ಕುಳಿತುಕೊಳ್ಳದ ರೀತಿಯಲ್ಲಿ ಸೀಟ್ ಮಾರ್ಕ್ ಮಾಡಬೇಕು
    * ಪ್ರೇಕ್ಷಕರು ಕುಳಿತುಕೊಳ್ಳುವ ಸೀಟ್‍ಗಳ ನಡುವೆ 6 ಅಡಿ ಅಂತರ ಇರಬೇಕು
    * ಥಿಯೇಟರ್‌ಗೆ ಹೋಗುವವರು ಆರೋಗ್ಯ ಸೇತು ಆ್ಯಪ್ ಹೊಂದಿರಬೇಕು
    * ಥಿಯೇಟರ್‌ಗೆ ಬರುವ ಪ್ರೇಕ್ಷಕರ ಮೊಬೈಲ್ ಸಂಖ್ಯೆ ಸಂಗ್ರಹ ಕಡ್ಡಾಯ
    * ಹ್ಯಾಂಡ್ ವಾಶ್, ಸ್ಯಾನಿಟೈಸರ್ ಇರಿಸುವುದು ಕಡ್ಡಾಯ ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್ – ಯಾರಿಗೆ ಕೊರೊನಾ ಟೆಸ್ಟ್‌ ಕಡ್ಡಾಯ?

    * ಮಧ್ಯಂತರ ವಿರಾಮದಲ್ಲಿ ಪ್ರೇಕ್ಷಕರ ಅನಗತ್ಯ ಓಡಾಟಕ್ಕೆ ನಿರ್ಬಂಧ
    * ಅನಾರೋಗ್ಯ ಇದ್ದವರು ಥಿಯೇಟರ್‌ನಿಂದ ದೂರ ಉಳಿಯಬೇಕು
    * ಅಡ್ವಾನ್ಸ್ ಬುಕಿಂಗ್, ಡಿಜಿಟಲ್ ಪೇಮೆಂಟ್‍ಗೆ ಒತ್ತು ಕೊಡಬೇಕು
    * ಥಿಯೇಟರ್‌ನಲ್ಲಿರುವ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಡ್ಡಾಯ
    * ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗಷ್ಟೇ ಅವಕಾಶ ನೀಡಬೇಕು
    * ಸಿನಿಮಾ ಹಾಲ್‍ನಲ್ಲಿ ಆಹಾರ ಪದಾರ್ಥ ಪೂರೈಸುವಂತಿಲ್ಲ
    * ಉಸಿರಾಟಕ್ಕೆ ಸಂಬಂಧಿಸಿದ ಶಿಷ್ಟಾಚಾರಗಳ ಪಾಲನೆ ಕಡ್ಡಾಯ
    * ಏರ್ ಕಂಡೀಷನ್ ಮಟ್ಟ 24 ರಿಂದ 30 ಡಿಗ್ರಿ ನಡುವೆ ಇರಬೇಕು

  • 1 ವಾರ ಕರ್ನಾಟಕ ಲಾಕ್ ಡೌನ್- ಮಾಲ್, ಕಾಲೇಜುಗಳಿಗೆ ರಜೆ, ಜಾತ್ರೆ ರದ್ದು

    1 ವಾರ ಕರ್ನಾಟಕ ಲಾಕ್ ಡೌನ್- ಮಾಲ್, ಕಾಲೇಜುಗಳಿಗೆ ರಜೆ, ಜಾತ್ರೆ ರದ್ದು

    ಬೆಂಗಳೂರು: ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಒಂದು ವಾರ ಕಾಲ ಕರ್ನಾಟಕದಲ್ಲಿ ಮಾಲ್, ಸಿನಿಮಾ ಥಿಯೇಟರ್, ಎಲ್ಲ ಸಮಾರಂಭಗಳು ಬಂದ್ ಆಗಲಿದೆ.

    ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆಯ ಬಳಿಕ ಮಾಲ್, ಚಿತ್ರ ಮಂದಿರ, ಮದುವೆ, ಸಮ್ಮರ್, ನೈಟ್ ಕ್ಲಬ್, ಸ್ವಿಮ್ಮಿಂಗ್ ಫುಲ್, ನಿಶ್ಚಿತಾರ್ಥ, ನಾಮಕರಣ, ಸಭೆ ಸಮಾರಂಭ ಜಾತ್ರೆ ಎಲ್ಲ ಒಂದು ವಾರ ಕಾಲ ನಿಲ್ಲಿಸಲು ಸೂಚನೆ ನೀಡಲಾಗಿದೆ. ಎಲ್ಲ ವಿವಿಗಳು ಬಂದ್ ಆಗಲಿದ್ದು, ಸಾಧ್ಯವಾದಷ್ಟು ಪ್ರವಾಸ ಮಾಡುವುದನ್ನು ರದ್ದು ಮಾಡಬೇಕೆಂದು ಸರ್ಕಾರ ಕೇಳಿಕೊಂಡಿದೆ.

    ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಐಟಿ ಯವರಿಗೆ ವರ್ಕ್ ಫ್ರಂ ಹೋಮ್ ಮಾಡಲು ಈಗಾಗಲೇ ಸೂಚನೆ ನೀಡಿದ್ದೇವೆ. ಅಧಿವೇಶನ ಎಂದಿನಂತೆ ನಡೆಯುತ್ತದೆ. ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

    https://twitter.com/publictvnews/status/1238398685504868352

    ಇಂದು ತೆಗೆದುಕೊಂಡ ನಿರ್ಧಾರ ಇಡಿ ರಾಜ್ಯಕ್ಕೆ ಅನ್ವಯವಾಗಲಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಂಡಿದ್ದೇವೆ ಎಂದು ಸಿಎಂ ತಿಳಿಸಿದರು.