Tag: Cinema Artists

  • ಕೇರ್ ಮೋರ್ ಫೌಂಡೇಶನ್‌ನಿಂದ ಸೌಲಭ್ಯ ವಂಚಿತ ಮಕ್ಕಳಿಗಾಗಿ ಅಭಿಯಾನ – ಸಿನಿ ಕಲಾವಿದರ ಸಾಥ್

    ಕೇರ್ ಮೋರ್ ಫೌಂಡೇಶನ್‌ನಿಂದ ಸೌಲಭ್ಯ ವಂಚಿತ ಮಕ್ಕಳಿಗಾಗಿ ಅಭಿಯಾನ – ಸಿನಿ ಕಲಾವಿದರ ಸಾಥ್

    ಬೆಂಗಳೂರು: ಕೋವಿಡ್ ಹೆಚ್ಚಳ ಹಾಗೂ ಲಾಕ್‌ಡೌನ್ ಪರಿಣಾಮದಿಂದ ಕಳೆದೆರಡು ವರ್ಷಗಳಿಂದ ಅನಿವಾರ್ಯವಾಗಿ ಶಾಲೆಗಳನ್ನು ಮುಚ್ಚಲಾಗಿತ್ತು. ಇದೀಗ ರಾಜ್ಯಾದ್ಯಂತ ಮತ್ತೆ ಶಾಲೆಗಳು ಆರಂಭವಾಗಿದ್ದು, ಮಕ್ಕಳೆಲ್ಲಾ ಖುಷಿಯಾಗಿ ಶಾಲೆಗೆ ತೆರಳುತ್ತಿದ್ದಾರೆ.

    ಆದ್ರೆ ಇಂದಿಗೂ ಅದೆಷ್ಟೋ ಮಕ್ಕಳಿಗೆ ಮನೆಯಲ್ಲಿನ ಬಡತನದ ಕಾರಣದಿಂದಾಗಿ ಇಂಥಾ ಖುಷಿ ಸಂಪೂರ್ಣವಾಗಿ ಅನುಭವಿಸುವ ಅವಕಾಶ ಸಿಗೋದೇ ಇಲ್ಲ. ಇಂಥಹ ಸೌಲಭ್ಯ ವಂಚಿತ ಮಕ್ಕಳಿಗಾಗಿ ಕೇರ್ ಮೋರ್ ಫೌಂಡೇಶನ್ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿ ಬಡ ಮಕ್ಕಳಿಗೂ ನೆರವಾಗುವ ಅವಕಾಶ ಕಲ್ಪಿಸಿದೆ.  ಇದನ್ನೂ ಓದಿ: ವಿಮಾನದೊಳಗೆ ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ಹೊರಹಾಕಿ – DGCA

    ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಕೇರ್ ಮೋರ್ ಫೌಂಡೇಶನ್ ಸಂಸ್ಥೆ ಉತ್ತಮ ಮಾರ್ಗಗಳನ್ನೇ ತೆರೆದಿಟ್ಟಿದೆ. ಮನೆಯಲ್ಲಿ ಬಳಸದೇ ವ್ಯರ್ಥವಾಗಿ ಇಟ್ಟಿರುವ ಶಾಲಾ ಮಕ್ಕಳ ಬ್ಯಾಗ್‌ಗಳನ್ನು ಈ ಫೌಂಡೇಶನ್‌ಗೆ ದಾನ ಮಾಡುವಂತೆ ವಿನಂತಿಸಿದೆ. ಜೂನ್ 20ರ ವರೆಗೂ ಬ್ಯಾಗ್‌ಗಳನ್ನು ದಾನ ಮಾಡಲು ಅವಕಶವಿದೆ. ಇದಕ್ಕೆ ಸಂಬಂಧಿಸಿದ ಪೂರಕ ಮಾಹಿತಿಯನ್ನು CareMoreFoundation@Caremorefdn ಟ್ವಿಟ್ಟರ್ ಲಿಂಕ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದು, ಪರಿಶೀಲಿಸಬಹುದಾಗಿದೆ.

    ಕೇರ್ ಮೋರ್ ಫೌಂಡೇಶನ್ ಈಗಾಗಲೇ ಪರಿಸರ ಪ್ರೇಮಿಗಳ ತಂಡದ ಮೂಲಕ ಪ್ರಕೃತಿಗೆ ಪೂರಕವಾಗುವಂತಹ ಕೆಲಸ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇದರಲ್ಲಿ ಬೆಂಗಳೂರಿನ ಸಿನಿ ಕಲಾವಿದರು, ಉದ್ಯಮಿಗಳು, ಪೂರ್ಣ ಪ್ರಮಾಣದ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ನಾನಾ ವರ್ಗಗಳ ಯುವಜನರು ಭಾಗಿಯಾಗಿದ್ದಾರೆ. ಇದೀಗ ಮರು ಬಳಕೆ ಅನ್ನುವ ವಸ್ತು ವಿಷಯದ ಅಡಿಯಲ್ಲಿ ಬಡ ಮಕ್ಕಳಿಗೆ ನೆರವಾಗುವ ಕಾರ್ಯಕ್ಕೆ ಮುಂದಾಗಿದೆ. ಇದನ್ನೂ ಓದಿ: ವ್ಯಕ್ತಿ ಕಾಲಿಡಿದು ಒಳಗೆ ಎಳೆದುಕೊಳ್ಳಲು ಯತ್ನಿಸಿದ ಗೊರಿಲ್ಲಾ – ಬೋನ್‌ದಲ್ಲಿದ್ರೂ ಫುಲ್ ಸ್ಟ್ರಾಂಗ್

    ನಟಿ ಸಂಯುಕ್ತಾ ಹೊರನಾಡು ಅವರಂತಹ ಯುವ ನಟಿಯರು ಕೇರ್ ಮೋರ್ ಫೌಂಡೇಶನ್ ಆಯೋಜಿಸುವ ಕಾರ್ಯಕ್ರಮಗಳ ಮುಂಚೂಣಿಯಲ್ಲಿದ್ದುಕೊಂಡು ಪರಿಸರ ಪ್ರೇಮ ಮೆರೆಯುತ್ತಾ ಯುವಕರನ್ನೆಲ್ಲಾ ಅದರತ್ತ ಉತ್ತೇಜಿಸುತ್ತಿದ್ದಾರೆ.