Tag: Cinema. Abhi

  • ಸ್ಯಾಂಡಲ್‍ವುಡ್‍ಗೆ ರಮ್ಯಾ ಎಂಟ್ರಿ ಕೊಟ್ಟು 15 ವರ್ಷ!

    ಸ್ಯಾಂಡಲ್‍ವುಡ್‍ಗೆ ರಮ್ಯಾ ಎಂಟ್ರಿ ಕೊಟ್ಟು 15 ವರ್ಷ!

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ 2003ರಲ್ಲಿ ಅಭಿ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟು 15 ವರ್ಷಗಳನ್ನು ಪೂರೈಸಿದ್ದಾರೆ.

    ರಮ್ಯಾ ಮೊದಲ ಚಿತ್ರದಲ್ಲೇ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆ ಅಭಿ ಚಿತ್ರದಲ್ಲಿ ನಟಿಸಿದ್ದರು ಈ ಚಿತ್ರ ಹಿಟ್ ಆದ ಮೇಲೆ ಪುನೀತ್ ಹಾಗೂ ರಮ್ಯಾ ಜೋಡಿ ಆಕಾಶ್ ಹಾಗೂ ಅರಸು ಚಿತ್ರದಲ್ಲಿ ಕಾಣಿಸಿಕೊಂಡಿತ್ತು.

    ಸ್ಯಾಂಡಲ್‍ವುಡ್ ಅಲ್ಲದೇ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ರಮ್ಯಾ ನಟಿಸಿದ್ದರು. ಇವರೆಗೂ ಅವರಿಗೆ 2 ಫಿಲಂಫೇರ್ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದೆ.

    ರಮ್ಯಾ ಸ್ಯಾಂಡಲ್‍ವುಡ್‍ನ ಟಾಪ್ ಹೀರೋಗಳಾದ ದರ್ಶನ್, ಸುದೀಪ್, ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಯಶ್, ಲೂಸ್ ಮಾದ ಯೋಗೇಶ್, ಉಪೇಂದ್ರ, ದುನಿಯಾ ವಿಜಯ್ ಜೊತೆ ನಟಿಸಿದ್ದರು.

    ಇನ್ನು ರಮ್ಯಾ ಕೊನೆಯದಾಗಿ ತೆರೆ ಮೇಲೆ ನಾಗರಹಾವು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ರಮ್ಯಾ ಈಗ ರಾಜಕೀಯದಲ್ಲಿ ಬ್ಯುಸಿಯಾಗಿದ್ದು, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ವಿಭಾಗದ ಅಧ್ಯಕ್ಷೆ ಆಗಿದ್ದಾರೆ.