Tag: Cigratte

  • ಸಿಗರೇಟ್ ವಿಚಾರಕ್ಕೆ ಕಿರಿಕ್ – ಪೊಲೀಸರ ಮುಂದೆ ಬಟ್ಟೆ ಬಿಚ್ಚಿ ಯುವತಿಯಿಂದ ರಂಪಾಟ

    ಸಿಗರೇಟ್ ವಿಚಾರಕ್ಕೆ ಕಿರಿಕ್ – ಪೊಲೀಸರ ಮುಂದೆ ಬಟ್ಟೆ ಬಿಚ್ಚಿ ಯುವತಿಯಿಂದ ರಂಪಾಟ

    ಮುಂಬೈ: ಸೆಕ್ಯೂರಿಟಿ ಗಾರ್ಡ್ ಸಿಗರೇಟ್ ತಂದು ಕೊಡದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮುಂಬೈಯ ಅಂಧೇರಿಯಲ್ಲಿ ಯುವತಿಯೊಬ್ಬಳು ಪೊಲೀಸರ ಮುಂದೆಯೇ ಬಟ್ಟೆ ಬಿಚ್ಚಿ ರಂಪಾಟ ಮಾಡಿ ಸುದ್ದಿಯಾಗಿದ್ದಾಳೆ.

    ಡೆಹರಾಡೂನ್ ನಿವಾಸಿಯಾಗಿರುವ ಯುವತಿ ಮಾಡೆಲ್ ಹಾಗೂ ಬರಹಗಾರ್ತಿಯಾಗಿದ್ದು, ಮುಂಬೈ ಲೋಂಕಡವಾಲಾದಲ್ಲಿ ವಾಸಿಸುತ್ತಿದ್ದಳು. ಅಕ್ಟೋಬರ್ 25ರ ರಾತ್ರಿ ಯುವತಿ ಮದ್ಯ ಸೇವಿಸಿ ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ್ದಾಳೆ.

    https://twitter.com/MeghaSh77484473/status/1055893355283050501?ref_src=twsrc%5Etfw%7Ctwcamp%5Etweetembed%7Ctwterm%5E1055893355283050501%7Ctwgr%5E363937393b70726f64756374696f6e&ref_url=https%3A%2F%2Fwww.mid-day.com%2Farticles%2Fmumbai-drunk-woman-strips-in-front-of-police-thrashes-security-guard%2F19928153

    15ನೇ ಮಹಡಿಯ ತನ್ನ ಫ್ಲಾಟ್‍ನಲ್ಲಿ ಯುವತಿ ಮದ್ಯ ಸೇವಿಸುತ್ತಿದ್ದಳು. ಈ ವೇಳೆ ಆಕೆ ಸೆಕ್ಯೂರಿಟಿ ಅಲೋಕ್‍ರನ್ನು ಕರೆ ಮಾಡಿ ಸಿಗರೇಟ್ ತರಲು ಹೇಳಿದ್ದಾಳೆ. ಆದರೆ ಅಲೋಕ್ ಸಿಗರೇಟ್ ತರಲು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವತಿ 15ನೇ ಮಹಡಿಯಿಂದ ಕೆಳಗಿಳಿದು ಬಂದು ಅಲೋಕ್ ಮೇಲೆ ಹಲ್ಲೆ ಮಾಡಿದ್ದಾಳೆ.

    ಯುವತಿ ಅಲೋಕ್ ಮೇಲೆ ಹಲ್ಲೆ ಮಾಡಿದ ನಂತರ ಪೊಲೀಸರಿಗೆ ತುರ್ತು ಕರೆ ಮಾಡಿದ್ದಾಳೆ. ಒಶಿವಾರಾ ಪೊಲೀಸರು ಸ್ಥಳಕ್ಕೆ ಬಂದು ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಲು ಹೇಳಿದ್ದರು. ಆದರೆ ಪೊಲೀಸರ ತಂಡದಲ್ಲಿ ಮಹಿಳಾ ಸಿಬ್ಬಂದಿ ಇಲ್ಲದಿರುವುದನ್ನು ನೋಡಿ ಯುವತಿ ಪೊಲೀಸ್ ಠಾಣೆಗೆ ಹೋಗಲು ನಿರಾಕರಿಸಿದ್ದಾಳೆ.

     

    ಕರೆ ಮಾಡಿದ ಹಿನ್ನೆಲೆಯಲ್ಲಿ ಯುವತಿಯನ್ನು ಫ್ಲಾಟ್‍ಗೆ ಹೋಗಲು ಪೊಲೀಸರು ಬಿಡಲಿಲ್ಲ. ಇದರಿಂದ ರೊಚ್ಚಿಗೆದ್ದ ಯುವತಿ ತನ್ನ ಬಟ್ಟೆ ಬಿಚ್ಚಿ ಸೆಕ್ಯೂರಿಟಿ ಹಾಗೂ ಪೊಲೀಸರ ಮೇಲೆ ರೇಗಾಡಲು ಶುರು ಮಾಡಿದ್ದಾಳೆ. ಯುವತಿ ಶನಿವಾರ 27ರಂದು ಒಶಿವಾರಾ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv