Tag: cigarettes

  • ಸಿಗರೇಟ್ ಹೊಗೆ ಬಿಟ್ಟಿದ್ದನ್ನ ಪ್ರಶ್ನಿಸಿದ ಯುವಕನ ಮೇಲೆ ರೌಡಿಶೀಟರ್‌ನಿಂದ ಹಲ್ಲೆ

    ಸಿಗರೇಟ್ ಹೊಗೆ ಬಿಟ್ಟಿದ್ದನ್ನ ಪ್ರಶ್ನಿಸಿದ ಯುವಕನ ಮೇಲೆ ರೌಡಿಶೀಟರ್‌ನಿಂದ ಹಲ್ಲೆ

    ಬೆಂಗಳೂರು: ಸಿಗರೇಟ್ ಸೇದಿ ಹೊಗೆ ಬಿಟ್ಟಿದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ರೌಡಿಶೀಟರ್ ಒಬ್ಬ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಸಂಪಿಗೆಹಳ್ಳಿ ಬಳಿಯ ಹೆಗಡೆ ನಗರದಲ್ಲಿ ಇಂದು ಘಟನೆ ನಡೆದಿದ್ದು, ರೌಡಿಶೀಟರ್ ಜಲಕ್, ಕುಮಾರ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಕುಮಾರ್ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆಯ ವಿವರ: ರೌಡಿಶೀಟರ್ ಜಲಕ್ ಸಿಗರೇಟ್ ಸೇದುತ್ತಿದ್ದ. ಈ ವೇಳೆ ಅಲ್ಲಿಯೇ ನಿಂತಿದ್ದ ಕುಮಾರ್ ಕಡೆಗೆ ಹೊಗೆ ಬಿಟ್ಟಿದ್ದಾನೆ. ಇದರಿಂದ ಕೋಪಗೊಂಡ ಕುಮಾರ್, ಯಾಕೆ ಹೀಗೆ ಮಾಡಿದ್ದು ಎಂದು ಪ್ರಶ್ನಿಸಿದ್ದಾನೆ. ನನ್ನನ್ನೇ ಪ್ರಶ್ನಿಸುತ್ತೀಯಾ ಅಂತಾ ಜಲಕ್ ಜಗಳಕ್ಕೆ ಇಳಿದಿದ್ದಾನೆ. ಇಬ್ಬರ ನಡುವೆ ವಾಗ್ದಾಳಿ ನಡೆದು, ಕುಮಾರ್ ಮೇಲೆ ಜಲಕ್ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

    ಹಲ್ಲೆಗೆ ಒಳಗಾಗಿದ್ದ ಕುಮಾರ್ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವದಿಂದ ಬಳಲುತ್ತಿದ್ದ. ಘಟನಾ ಸ್ಥಳದಲ್ಲಿದ್ದ ಜನರು ತಕ್ಷಣವೇ ಕುಮಾರ್‍ನನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸಂಪಿಗೆಹಳ್ಳಿ ಠಾಣಾ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಜಲಕ್ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿಗರೇಟ್ ವಿಚಾರಕ್ಕೆ ಬಲಿಯಾಯ್ತು ಅಮಾಯಕ ಬಡಜೀವ!

    ಸಿಗರೇಟ್ ವಿಚಾರಕ್ಕೆ ಬಲಿಯಾಯ್ತು ಅಮಾಯಕ ಬಡಜೀವ!

    ಬೆಂಗಳೂರು: ಸಿಗರೇಟ್ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ವಿಜಯನಗರದ ವಾಟರ್ ಟ್ಯಾಂಕ್ ಬಳಿ ನಡೆದಿದೆ.

    ಮಹಾದೇವ್ ಕೊಲೆಯಾದ ದುರ್ದೈವಿ. ವಿಜಯನಗರದ ವಾಟರ್ ಟ್ಯಾಂಕ್ ಬಳಿಯಿರುವ ಫುಡ್‍ಸ್ಟ್ರೀಟ್‍ನಲ್ಲಿ ಬೀಡ ಅಂಗಡಿ ಇಟ್ಟಿದ್ದ ರಾಜ್ ದೀಪ್ ಸಿಂಗ್ ಹಾಗೂ ಮಹದೇವ್ ಊಟಕ್ಕೆ ತೆರಳಿದ್ದರು. ಈ ವೇಳೆ ವಿನಯ್ ಎಂಬಾತ ಅಂಗಡಿಯಲ್ಲಿದ್ದ ಸಿಗರೇಟ್ ತೆಗೆದುಕೊಂಡು, ಹಣ ಕೊಡದೆ ಹಾಗೇ ಹೋಗಿದ್ದ.

    ಇದನ್ನು ಪ್ರಶ್ನಿಸಲು ತೆರಳಿದ್ದ ರಾಜ್‍ದೀಪ್ ಸಿಂಗ್ ಹಾಗೂ ಮಹಾದೇವ್, ವಿನಯ್‍ಗೆ ಸಿಗರೇಟಿನ ಹಣವನ್ನು ಪೆಟಿಎಂ ಮೂಲಕ ವರ್ಗಾಯಿಸೆಂದು ಹೇಳಿದ್ದರು. ಈ ವೇಳೆ ಜಗಳಕ್ಕೆ ನಿಂತ ವಿನಯ್ ಏಕಾಏಕಿ ಚಾಕುವಿನಿಂದ ಮಹಾದೇವ್ ಎದೆ ಭಾಗಕ್ಕೆ ಇರಿದು, ವಿಕೆಟ್ ಬ್ಯಾಟ್‍ನಿಂದ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹದೇವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕೊಲೆಯನ್ನು ಕಂಡ ಸ್ಥಳೀಯರು ಕೂಡಲೇ ಆರೋಪಿ ವಿನಯ್‍ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಿನಕ್ಕೆ 40 ಸಿಗರೇಟ್ ಸೇದ್ತಿದ್ದೆ- ಚಟ ಬಿಟ್ಟ ಕಥೆ ತಿಳಿಸಿದ  ಮಾಜಿ ಸಿಎಂ- ವಿಡಿಯೋ ನೋಡಿ

    ದಿನಕ್ಕೆ 40 ಸಿಗರೇಟ್ ಸೇದ್ತಿದ್ದೆ- ಚಟ ಬಿಟ್ಟ ಕಥೆ ತಿಳಿಸಿದ ಮಾಜಿ ಸಿಎಂ- ವಿಡಿಯೋ ನೋಡಿ

    ಮೈಸೂರು: ವಕೀಲನಾಗಿದ್ದಾಗ ನಾನು ದಿನಕ್ಕೆ ನಾಲ್ಕು ಪ್ಯಾಕ್ ಅಂದ್ರೆ, 40 ವೀಲ್ಸ್ ಸಿಗರೇಟ್ ಸೇದುತ್ತಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದ ಸೆನೆಟ್ ಹಾಲ್ ನಲ್ಲಿ ಇವತ್ತು ನಡೆದ ಸ್ತನ ಮತ್ತು ಗರ್ಭ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸ್ನೇಹಿತರು ವಿದೇಶಕ್ಕೆ ಹೋದಾಗ ಪೆನ್ನು ವಾಚ್ ಗಿಫ್ಟ್ ನೀಡುತ್ತಿದ್ದರು. ಆದರೆ ಒಮ್ಮೆ ಸ್ನೇಹಿತರು ಒಂದು ಬಾಕ್ಸ್ ವೆರೈಟಿ ಸಿಗರೇಟ್‍ಗಳನ್ನು ಉಡುಗೊರೆಯಾಗಿ ತಂದು ಕೊಟ್ಟಿದ್ದರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

    ಯಾವ ಸಿಗರೇಟ್ ಹೇಗಿದೆ ಅಂತಾ ನೋಡೋಕೆ ಎಲ್ಲವನ್ನೂ ಸೇದಿಬಿಟ್ಟೆ. ಸಿಗರೇಟ್ ಖಾಲಿಯಾದ ಮೇಲೆ ಅಬ್ಬಾ ನಾನು ಇಷ್ಟು ಸಿಗರೇಟ್ ಸೇದಿ ಬಿಟ್ಟೆನಾ? ನನ್ನ ಆರೋಗ್ಯದ ಗತಿ ಏನಾಗುತ್ತೆ? ಅಂತಾ ಯೋಚಿಸಿಲು ಪ್ರಾರಂಭಿಸಿದೆ. ಆಗ ಸ್ವಲ್ಪ ಜ್ಞಾನೋದಯವಾಯಿತು. ರಾತ್ರಿಯ ಯೋಚಿಸಿ, ಇನ್ನು ಮುಂದೆ ಸಿಗರೇಟ್ ಸೇದುವುದನ್ನು ಬಿಡುತ್ತೇನೆ ಅಂತಾ 1987 ಆಗಸ್ಟ್ 17ರಂದು ಶಪಥ ಮಾಡಿದೆ ಎಂದರು.

    ಅವತ್ತಿನಿಂದ ಸಿಗರೇಟ್ ವಾಸನೆ ಕಂಡರೂ ಆಗುವುದಿಲ್ಲ. ನಾನು ಹೆಚ್ಚಾಗಿ ವೀಲ್ಸ್ ಸಿಗರೇಟ್ ಸೇದುತ್ತಿದ್ದೆ ಎಂದ ಅವರು, ಸಿಗರೇಟ್ ಸೇದಿದರೆ ಕ್ಯಾನ್ಸರ್ ಬರುತ್ತೆ ಅಂತಾ ಹೇಳುತ್ತಾರೆ, ಜೊತೆಗೆ ತಿಳುವಳಿಕೆ ಇರುತ್ತದೆ. ಪ್ಯಾಕ್‍ಗಳ ಮೇಲೆ ಸ್ಮೋಕಿಂಗ್ ಇಸ್ ಇಂಜೂರಿಯಸ್ ಟು ಹೆಲ್ತ್ ಅಂತಾ ಬರೆದಿರುತ್ತದೆ. ಆದರೂ ಅದನ್ನು ನೋಡಿಕೊಂಡೇ ಸೇದುತ್ತಾರೆ. ಕೆಟ್ಟ ಚಟಗಳನ್ನು ಆದಷ್ಟು ಬೇಗ ಬಿಟ್ಟರೆ ಒಳ್ಳೆಯದಾಗುತ್ತದೆ ಎಂದು ಯುವ ಸಮೂಹಕ್ಕೆ ಸಿದ್ದರಾಮಯ್ಯ ಸಲಹೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮ್ಯಾಚ್ ಬಾಕ್ಸ್, ಲೈಟರ್ ಆಯ್ತು ಈಗ ವಾಲೆಟ್ ನಿಂದ ಸಿಗರೇಟ್ ಹಚ್ಚಿಕೊಂಡ – ವಿಡಿಯೋ ವೈರಲ್

    ಮ್ಯಾಚ್ ಬಾಕ್ಸ್, ಲೈಟರ್ ಆಯ್ತು ಈಗ ವಾಲೆಟ್ ನಿಂದ ಸಿಗರೇಟ್ ಹಚ್ಚಿಕೊಂಡ – ವಿಡಿಯೋ ವೈರಲ್

    ಮಾಸ್ಕೋ: 2018 ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯವೊಂದರ ವೇಳೆ ಸ್ಟೇಡಿಯೊಬ್ಬನಲ್ಲಿ ಕುಳಿತ್ತಿದ್ದ ಅಭಿಮಾನಿಯೊಬ್ಬ ಬೆಂಕಿ ಉಗುಳುವ ವಾಲೆಟ್ ನಿಂದ ಸಿಗರೇಟ್ ಹಚ್ಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹೌದು, ಇದುವರೆಗೂ ಮ್ಯಾಚ್ ಬಾಕ್ಸ್, ಲೈಟರ್ ನಿಂದ ಸಿಗರೇಟ್ ಹಚ್ಚಿಕೊಳ್ಳುವುದು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಈತ ತನ್ನ ವಾಲೆಟ್ ನಿಂದ ಸಿಗರೇಟ್ ಹಚ್ಚಿಕೊಳ್ಳುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವಿಡಿಯೋದಲ್ಲಿ ಮ್ಯಾಚ್ ವೀಕ್ಷಿಸುತ್ತಾ ಕುಳಿತ ವ್ಯಕ್ತಿ ಬಾಯಿಗೆ ಸಿಗರೇಟ್ ಇಟ್ಟು ಬಳಿಕ ತನ್ನ ವಾಲೆಟ್ ಓಪನ್ ಮಾಡುತ್ತಾನೆ. ಈ ವೇಳೆ ಇದ್ದಕ್ಕಿದ್ದ ಹಾಗೇ ವಾಲೆಟ್ ನಿಂದ ಬೆಂಕಿ ಕಾಣಿಸಿಕೊಳ್ಳುತ್ತದೆ. ಬಳಿಕ ವಾಲೆಟ್ ಮುಚ್ಚುತ್ತಿದಂತೆ ಬೆಂಕಿ ಕೊನೆಗೊಳ್ಳುತ್ತದೆ. ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಂದ್ಯದ ವೇಳೆ ಮೊದಲು ಈ ದೃಶ್ಯಗಳನ್ನು ಖಾಸಗಿ ಚಾನೆಲ್ ಒಂದರ ಕಾಮೆಂಟರ್ ನೋಡಿದ್ದು, ಬಳಿಕ ಎಲ್ಲರ ಗಮನ ಆತನ ಕಡೆ ಸೆಳೆದಿದೆ. ಸದ್ಯ ಈ ವಿಡಿಯೋ ನೋಡದ ಹಲವರು ಬೆಂಕಿ ಉಗುಳುವ ವಾಲೆಟ್‍ಗಾಗಿ ಹುಡುಕಾಟ ನಡೆಸಿದ್ದಾರೆ.

    https://twitter.com/belziee_lovee/status/1009512278813704196?

    ಸಾಧಾರಣವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್, ಫುಟ್‍ಬಾಲ್ ಪಂದ್ಯಗಳು ನಡೆಯುವ ವೇಳೆ ಅಭಿಮಾನಿಗಳು ಕ್ರೀಡಾಂಗಣವನ್ನು ಪ್ರವೇಶಿಸಬೇಕಾದರೆ ಮೊದಲು ಮೆಟಲ್ ಡಿಟೆಕ್ಟರ್ ಮೂಲಕ ಹಾದುಹೋಗಬೇಕಾಗುತ್ತದೆ. ಪಂದ್ಯಗಳಿಗೆ ಇಷ್ಟೊಂದು ಭದ್ರತೆ ಕಲ್ಪಿಸಿರುವಾಗ ವಿಶ್ವಕಪ್ ಪಂದ್ಯದ ವೇಳೆ ವಾಲೆಟ್ ತೆಗೆದುಕೊಂಡ ಹೋಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

  • ಸಿಗರೇಟ್ ತರಲ್ಲ ಅಂದಿದ್ದಕ್ಕೆ ಚಾಕುವಿನಿಂದ ಇರಿದು ಗೆಳೆಯನನ್ನು ಕೊಂದೇ ಬಿಟ್ರು!

    ಸಿಗರೇಟ್ ತರಲ್ಲ ಅಂದಿದ್ದಕ್ಕೆ ಚಾಕುವಿನಿಂದ ಇರಿದು ಗೆಳೆಯನನ್ನು ಕೊಂದೇ ಬಿಟ್ರು!

    ಬೆಂಗಳೂರು: ಸಿಗರೇಟ್ ತರಲ್ಲ ಅಂತಾ ಹೇಳಿದಕ್ಕೆ ಗೆಳೆಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಹಳೆ ಬಾಗಲೂರು ಲೇಔಟ್ ನಲ್ಲಿ ಶನಿವಾರ ತಡರಾತ್ರಿ ನಡೆದಿದೆ.

    ಮೊಹಮ್ಮದ್ ಅಲಿ (30) ಸ್ನೇಹಿತರಿಂದಲೇ ಕೊಲೆಯಾದ ವ್ಯಕ್ತಿ. ಕೆಲ ವರ್ಷಗಳ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ತನ್ನ ಹಳೆಯ ಗೆಳೆಯರಾದ ವಾಹಿದ್, ಮುಜಾಮಿಲ್ ಮತ್ತು ಸಬಾರಕ್ ಎಂಬವರನ್ನು ಶನಿವಾರ ರಾತ್ರಿ ಭೇಟಿಯಾಗಿದ್ದರು.

    ಎಲ್ಲರೂ ಒಂದೆಡೆ ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಮೊಹಮ್ಮದ್‍ಗೆ ಗೆಳೆಯರು ಸಿಗರೇಟ್ ತರಲು ಹೇಳಿದ್ದಾರೆ. ಸಿಗರೇಟ್ ತರಲು ಮೊಹಮ್ಮದ್ ಒಪ್ಪದೇ ಇದ್ದಾಗ ಗೆಳೆಯರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಸ್ನೇಹಿತರು ಮೊಹಮ್ಮದ್‍ಗೆ ಚಾಕುವಿನಿಂದ ಇರಿದಿದ್ದಾರೆ.

    ಮೊಹಮ್ಮದ್ ಕೂಗಾಟ ಕೇಳಿದ ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ 4 ಗಂಟೆಗೆ ಮೊಹಮ್ಮದ್ ಅಲಿ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಆಟೋ ಡ್ರೈವರ್‍ಗಳಾದ ವಾಹಿದ್, ಮುಜಾಮಿಲ್, ಸಬಾರಕ್ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.