Tag: cigaratte

  • ಪತಿಯ ಮರ್ಮಾಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟ ಪತ್ನಿ!

    ಪತಿಯ ಮರ್ಮಾಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟ ಪತ್ನಿ!

    ಲಕ್ನೋ: ಅಚ್ಚರಿಯ ಪ್ರಕರಣವೊಂದರಂತೆ ಪತ್ನಿಯೊಬ್ಬಳು ತನ್ನ ಪತಿಗೆ ಚಿತ್ರಹಿಂಸೆ ಕೊಟ್ಟ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ (Uttar Pradesh) ಸಿಯೋಹರಾ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪತ್ನಿ ಮೆಹರ್‌ (30) ಹಾಗೂ ಪತಿಯನ್ನು ಮನ್ನನ್ ಜೈದಿ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಪತ್ನಿ ತನ್ನ ಪತಿಯ ಮೇಲೆ ಈ ರೀತಿಯ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಸದ್ಯ ಪತಿಯ ಮೇಲೆ ಕ್ರೌರ್ಯ ಮೆರೆದ ಪತ್ನಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆಗುತ್ತಿದೆ.

    ಮೆಹರ್‌ ಹಾಗೂ ಮುನ್ನನ್‌ ಜೈದಿ ಪ್ರತ್ಯೇಕವಾಗಿ ವಾಸವಾಗಿದ್ದರು. ಇವರಿಬ್ಬರ ದಾಂಪತ್ಯದ ನಡುವೆ ಬಿರುಕು ಮೂಡಿದ ಬಳಿಕ ಮೆಹರ್‌ ಮದ್ಯಪಾನ ಹಾಗೂ ಸಿಗರೇಟ್‌ ಸೇದಲು ಆರಂಭಿಸಿದ್ದಾಳೆ. ಅಲ್ಲದೇ ಮೆಹರ್ ತನ್ನನ್ನು ದೈಹಿಕವಾಗಿ ನಿಂದಿಸಿದ್ದಾಳೆ. ತನ್ನ ಮೇಲೆ ಸುಳ್ಳು ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಖಾಸಗಿ ಅಂಗಗಳನ್ನು ಸಿಗರೇಟಿನಿಂದ ಸುಡುವ ಮುನ್ನ ಪತ್ನಿ ತನ್ನ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾಳೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಭ್ರೂಣಹತ್ಯೆ ದಂಧೆ: ದಂಪತಿ ಅರೆಸ್ಟ್

    ತನ್ನ ಸುರಕ್ಷತೆಯ ಬಗ್ಗೆ ಕಳವಳ ವ್ಯ ಕ್ತಪಡಿಸಿದ ಮನ್ನನ್ ತಮ್ಮ ಮನೆಯಲ್ಲಿ ಸಿಸಿಕ್ಯಾಮೆರಾ ಅಳವಡಿಸಿದ್ದಾರೆ ಈ ಕ್ಯಾಮೆರಾದಲ್ಲಿ ಮೆಹರ್‌ ಕ್ರೂರ ಕೃತ್ಯ ಸೆರೆಯಾಗಿದ್ದು, ಮುನ್ನನ್‌ ಪೊಲೀಸರಿಗೆ ಈ ದೃಶ್ಯವನ್ನು ನೀಡಿದ್ದಾರೆ. ಪತಿ ದೂರು ಮತ್ತು ಸಿಸಿಟಿವಿ ದೃಶ್ಯಾ ವಳಿಗಳನ್ನು ಸಲ್ಲಿಸಿದ ನಂತರ ಸಿಯೋಹರಾ ಜಿಲ್ಲಾ ಪೊಲೀಸರು ಕ್ರಮ ಕೈಗೊಂಡಿದ್ದು, ಭಾನುವಾರ ಮಹಿಳೆಯನ್ನು ಬಂಧಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮಹಿಳೆಯ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಪಿ ಪೂರ್ವ ಧರಂಪಾಲ್ ಸಿಂಗ್ ತಿಳಿಸಿದ್ದಾರೆ.

  • ಲಖೀಮಪುರ ಕೇಸ್ ಬಳಿಕ ಯುಪಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ

    ಲಖೀಮಪುರ ಕೇಸ್ ಬಳಿಕ ಯುಪಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ

    – ಬಾಲಕಿ ದೇಹವನ್ನ ಸಿಗರೇಟ್‍ನಿಂದ ಸುಟ್ಟ ನೀಚರು

    ಲಕ್ನೋ: ಉತ್ತರ ಪ್ರದೇಶದ ಲಖೀಮಪುರದ ರೇಪ್ ಆ್ಯಂಡ್ ಮರ್ಡರ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಇದೀಗ ಗೊರಖ್ಪುರದಲ್ಲಿ ಮತ್ತೊಂದು ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದ್ದು, ಅತ್ಯಾಚಾರದ ಬಳಿಕ ಕಾಮುಕರ ಬಾಲಕಿಯ ಮೃತದೇಹವನ್ನ ಸುಟ್ಟಿ ಅಟ್ಟಹಾಸ ಮರೆದಿದ್ದಾರೆ. ಗೊರಖ್ಪುರದ ಗೋಲ್ ಬಜಾರ್ ನಲ್ಲಿ ನಡೆದ ಘಟನೆಯ ಬಗ್ಗೆ ಭಾನುವಾರ ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಂತ್ರಸ್ತ ಬಾಲಕಿ ತಾಯಿಯ ದೇಹರಿಬರ್ ಗ್ರಾಮದ ಅರ್ಜುನ್ ಮತ್ತು ಮತ್ತೋರ್ವನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿ ಶುಕ್ರವಾರ ರಾತ್ರಿ ಮನೆ ಬಳಿಯಲ್ಲಿರು ಬೋರ್‍ವೆಲ್ ನಿಂದ ನೀರು ತರಲು ಹೋಗಿದ್ದಳು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಬಾಲಕಿಯ ಅಪಹರಿಸಿದ್ದಾರೆ. ಗ್ರಾಮದ ಕೆರೆಯ ಬಳಿಯಲ್ಲಿರುವ ಗುಡಿಸಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ನಂತರ ಸಿಗರೇಟ್ ನಿಂದ ಬಾಲಕಿಯ ದೇಹವನ್ನು ಸುಟ್ಟಿದ್ದಾರೆ. ಇದನ್ನೂ ಓದಿ: ಲಖೀಮಪುರ ರೇಪ್ ಆ್ಯಂಡ್ ಮರ್ಡರ್- ಕಣ್ಣು ಕಿತ್ತಿ, ನಾಲಿಗೆ ಕತ್ತರಿಸಿ, ಕತ್ತು ಹಿಸುಕಿ ಬರ್ಬರ ಕೊಲೆ

    ಸಂತ್ರಸ್ತ ಬಾಲಕಿ ಓರ್ವನನ್ನು ಗುರುತಿಸಿದ್ದಾಳೆ. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಸಂತ್ರಸ್ತ ಬಾಲಕಿ ತಾಯಿ ನೀಡಿದ ದೂರಿನ ಆಧಾರದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಶೀಘ್ರದಲ್ಲೇ ಇಬ್ಬರನ್ನು ಬಂಧಿಸಲಿದ್ದೇವೆ ಎಂದು ಎಸ್‍ಎಸ್‍ಪಿ ಸುನಿಲ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ – ಮನೆಗೆ ನುಗ್ಗಿ ಅಪ್ರಾಪ್ತೆ ಮೇಲೆ ರೇಪ್

  • ಕಬಾಬ್‌ಗೆ ಹಾಕಲಾಗುತ್ತೆ ಕಿಲ್ಲರ್ ಕೆಮಿಕಲ್ – ಕಲರ್‌ಗಾಗಿ ಡೇಂಜರ್ ಪೌಡರ್ ಮಿಕ್ಸ್

    ಕಬಾಬ್‌ಗೆ ಹಾಕಲಾಗುತ್ತೆ ಕಿಲ್ಲರ್ ಕೆಮಿಕಲ್ – ಕಲರ್‌ಗಾಗಿ ಡೇಂಜರ್ ಪೌಡರ್ ಮಿಕ್ಸ್

    ಬೆಂಗಳೂರು: ಚಿಕನ್ ಕಬಾಬ್ ಕಂಡ ತಕ್ಷಣ ಅಹಾ ಎಂದು ತಿನ್ನುವವರು ಈ ಸುದ್ದಿಯನ್ನು ನೋಡಲೇ ಬೇಕು. ಏಕೆಂದರೆ ರಸ್ತೆ ಬದಿಯಲ್ಲಿ ತಿನ್ನುವ ಕಲರ್‌ಫುಲ್ ಕಬಾಬ್ ಅನ್ನು ಕೊಳಕು ಜಾಗದಲ್ಲಿ ತಯಾರಿಸುತ್ತಾರೆ.

    ಹಣ ಕೊಟ್ಟು ಸಿಕ್ಕ ಸಿಕ್ಕ ಕಡೆ ಕಬಾಬ್ ತಿಂದರೆ ಫ್ರೀಯಾಗಿ ಕಾಯಿಲೆಗಳು ಕೂಡ ಬರುತ್ತದೆ. ಏಕೆಂದರೆ ಕಬಾಬ್ ತಯಾರಿಸುವ ವ್ಯಕ್ತಿ ಸಿಗರೇಟ್ ಸೇದಿಕೊಂಡು ಅದರ ಹೊಗೆಯನ್ನು ಕಬಾಬ್ ಮಸಾಲೆ ಪಕ್ಕ ಉಫ್ ಉಫ್ ಎಂದು ಉದುತ್ತಾನೆ. ಅಲ್ಲದೆ ಸಿಗರೇಟಿನ  ವೇಸ್ಟ್ ಅನ್ನು ಕಬಾಬ್ ಮಸಾಲೆಯ ಪಕ್ಕವೇ ಹಾಕುತ್ತಾನೆ.

    ಸಿಗರೇಟು ಸೇದಿದ ಹಾಗೂ ಪದೇಪದೇ ಬಾಯಿಯೊಳಗೆ ಕೈಹಾಕಿರುವ ಅದೇ ಕೈಯಲ್ಲಿ ವ್ಯಕ್ತಿ ಮಸಾಲೆ ರುಬ್ಬುತ್ತಾನೆ. ಇರೋ ಬರೋ ಕೆಮಿಕಲ್ ಜೊತೆಗೆ ಸಿಗರೇಟಿನ ಹೊಗೆ, ಅಳಿದುಳಿದ ಸಿಗರೇಟಿನ ಅವಶೇಷವೂ ಕೂಡ ಮಸಾಲೆಯ ಕಬಾಬ್‌ನೊಳಗೆ ಚಂದಗೆ ಬೆರೆತು ಹೋಗುತ್ತೆ.

    ರಸ್ತೆ ಬದಿಯಲ್ಲಿ ಕೊಂಚವೂ ಸ್ವಚ್ಛತೆಯಂತೂ ಇಲ್ಲ. ಗಲೀಜು ಗಲೀಜಾಗಿರುವ ಜಾಗದಲ್ಲಿ ಈ ಕಬಾಬ್‌ಗಳು ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ತಯಾರಾಗುತ್ತೆ. ಅಲ್ಲಲ್ಲಿ ನೊಣಗಳು ಹಾರಾಡುವ ಗಲೀಜು ಜಾಗದಲ್ಲಿ ಚೆಲ್ಲಿರುವ ಚಿಕನ್ ತುಂಡುಗಳು, ತೊಳೆಯದ ಕೈಯಲ್ಲಿ ಮಸಾಲೆ ಬೆರೆಸುವ ಕೈಗಳು, ಕಬಾಬ್ ಕರಿಯುವ ಬಾಣಲೆ ನೋಡಿದ್ದರೆ ಜನರು ಕಬಾಬ್ ತಿನ್ನುವುದನ್ನು ಬಿಟ್ಟು ಬಿಡುತ್ತಾರೆ.

    ಸಿಕ್ಕ ಸಿಕ್ಕ ಲೋಕಲ್ ಕೆಮಿಕಲ್‌ಗಳನ್ನು ಈ ಕಬಾಬ್‌ಗೆ ಬಳಕೆ ಮಾಡುತ್ತಾರೆ. ಅಲ್ಲದೆ ಈ ಕಬಾಬ್ ಟೇಸ್ಟ್ ಬರುವುದಕ್ಕೆ ಅಜಿನಾಮೋಟೋ ಎನ್ನುವ ಡೇಂಜರಸ್ ಪೌಡರ್‌ಗಳ ಬಳಕೆಯನ್ನು ಮಾಡಲಾಗುತ್ತೆ. ಇಂತಹ ಕಬಾಬ್ ಸೇವಿಸಿದ್ದರೆ ಹೊಟ್ಟೆಯ ಸಮಸ್ಯೆಯ ಜೊತೆಗೆ ಕಲರ್ ಬರುವುದ್ದಕ್ಕೆ ಪೌಡರ್, ಟೇಸ್ಟಿಂಗ್ ಪೌಡರ್ ಹಾಕುವುದರಿಂದ ಕ್ಯಾನ್ಸರ್, ಕರುಳು ಬೇನೆಯಂತಹ ಕಾಯಿಲೆನೂ ಬರುತ್ತೆ.

  • ಸಿಗರೇಟ್ ಸೇದ್ಬೇಡ ಅಂದಿದ್ದಕ್ಕೆ ಪತ್ನಿಗೆ ಚಾಕುವಿನಿಂದ್ಲೇ ಇರಿದ..!

    ಸಿಗರೇಟ್ ಸೇದ್ಬೇಡ ಅಂದಿದ್ದಕ್ಕೆ ಪತ್ನಿಗೆ ಚಾಕುವಿನಿಂದ್ಲೇ ಇರಿದ..!

    ಬೆಂಗಳೂರು: ಸಿಗರೇಟ್ ಸೇದಬೇಡ ಎಂದು ಪತ್ನಿ ಹೇಳಿದ್ದಕ್ಕೆ ಪತಿ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.

    ಗಾಯತ್ರಿ ಚಾಕು ಇರಿತಕ್ಕೊಳಗಾದ ಮಹಿಳೆ. ನಗರದ ಬಾಣಸವಾಡಿ ನಿವಾಸಿಯಾಗಿರುವ ಗಾಯತ್ರಿಗೆ ಎಲ್ಲ ಮಹಿಳೆಯರಿಗೆ ಇರುವಂತೆ, ತನ್ನ ಗಂಡನಿಗೆ ಯಾವುದೇ ದುಶ್ಚಟಗಳಿಬಾರದು. ಒಳ್ಳೆಯ ಗುಣವಿರುವ ಆರೋಗ್ಯವಂತ ಗಂಡ ಸಿಗಬೇಕು. ಅವನನ್ನು ತುಂಬಾ ಚೆನ್ನಾಗಿ ನೋಡ್ಕೋಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಗಾಯತ್ರಿಗೆ ಎಲ್ಲ ಚಟಗಳಿರುವ ಧರ್ಮ ಎನ್ನುವ ಪಾಪಿ ಗಂಡ ಸಿಕ್ಕಿದ್ದಾನೆ.

    ಗಾಯತ್ರಿ ಪತಿ ಧರ್ಮನಿಗೆ ಮಾಡುವುದಕ್ಕೆ ಯಾವುದೇ ಕೆಲಸ ಇಲ್ಲ. ದಿನ ಕಂಠಪೂರ್ತಿ ಕುಡಿಬೇಕು. ಸದಾ ಸಿಗರೇಟು ಘಾಟಲ್ಲೇ ತೇಲಾಡುತ್ತಿದ್ದನು. ಇಷ್ಟೆಲ್ಲ ಆದರೂ ಕೂಡ ಪತ್ನಿ ಗಾಯತ್ರಿ ತಾನೇ ಗಾರ್ಮೆಂಟ್ಸ್ ನಲ್ಲಿ ಕೆಲಸ ಸೇರಿಕೊಂಡು ಪತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಧರ್ಮ ಮಾತ್ರ ದಿನ ಕುಡಿದು ಮನೆಗೆ ಬಂದು ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದನು.

    ಪತಿ ಧರ್ಮನ ಈ ದುಶ್ಚಟಗಳ ಪರಿಣಾಮ ಕ್ಯಾನ್ಸರ್ ಕಾಯಿಲೆ ಅಟ್ಯಾಕ್ ಆಗಿತ್ತು. ಇನ್ನು ಮೇಲೆ ಇವೆಲ್ಲಾ ಬಿಟ್ಟು ಬದುಕಿ ಎಂದು ಪತ್ನಿ ಬುದ್ಧಿ ಹೇಳಿ, ಮೊದಲಿನಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

    ಫೆ. 18ರ ಸಂಜೆ ಧರ್ಮ ಮನೆ ಮುಂದೆ ಕೈಯಲ್ಲಿ ಸಿಗರೇಟ್ ಪ್ಯಾಕ್ ಹಿಡಿದು ಸಿಗರೇಟ್ ಸೇದುತ್ತಿದ್ದನು. ಇದನ್ನು ನೋಡಿದ ಪತ್ನಿ ಗಾಯತ್ರಿ ಮತ್ತೆ ಸಿಗರೇಟು ಶುರು ಮಾಡಿದ್ಯಾ ಅದನ್ನು ಬಿಸಾಕು ಎಂದು ಕೈಯಿಂದ ಸಿಗರೇಟು ಕಿತ್ತು ಎಸೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಧರ್ಮ ಅಲ್ಲಿಯೇ ಇದ್ದ ಚಾಕುವಿನಿಂದ ಪತ್ನಿಯ ಎಡಗಣ್ಣಿಗೆ ಇರಿದ್ದಾನೆ. ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿರುವ ಗಾಯತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೃಗಾಲಯದಲ್ಲಿ ಧಮ್ ಎಳೆದ ಚಿಂಪಾಂಜಿ- ವಿಡಿಯೋ ಫುಲ್ ವೈರಲ್

    ಮೃಗಾಲಯದಲ್ಲಿ ಧಮ್ ಎಳೆದ ಚಿಂಪಾಂಜಿ- ವಿಡಿಯೋ ಫುಲ್ ವೈರಲ್

    ನವದೆಹಲಿ: ಇಂಡೋನೇಶಿಯಾ ಪ್ರಾಣಿ ಸಂಗ್ರಹಾಲಯದಲ್ಲಿ ಚಿಂಪಾಂಜಿಯೊಂದು ಮನುಷ್ಯರಂತೆ ಸಿಗರೇಟ್ ಸೇದಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    22 ವರ್ಷದ ಅಪೆ ಎಂಬ ಹೆಸರಿನ ಜಿಂಪಾಂಜಿಯೊಂದು ಸಿಗರೇಟ್ ಸೇದಿದೆ. ಭಾನುವಾರ ರಜಾ ದಿನವಾದ್ದರಿಂದ ಸಾಮಾನ್ಯವಾಗಿ ಮೃಗಾಲಯಕ್ಕೆ ಬರುವವರ ಸಂಖ್ಯೆ ಜಾಸ್ತಿ. ಹೀಗೆ ಬಂದ ವ್ಯಕ್ತಿಯೊಬ್ಬ ಸಿಗರೇಟನ್ನು ಅರ್ಧ ಸೇದಿ ಚಿಂಪಾಜಿ ಪಕ್ಕ ಬಿಸಾಕಿದ್ದ. ಇದನ್ನು ಗಮನಿಸಿದ ಚಿಂಪಾಂಜಿ ನೇರವಾಗಿ ಸಿಗರೇಟ್ ಇದ್ದ ಸ್ಥಳಕ್ಕೆ ಬಂದು ಅದನ್ನು ತನ್ನ ಕೈಯಲ್ಲಿ ಎತ್ತಿಕೊಂಡಿದೆ. ಅಲ್ಲದೇ ಅಲ್ಲೇ ಪಕ್ಕಕ್ಕೆ ಹೋಗಿ ಮನುಷ್ಯರಂತೆ ತಾನೂ ಕೂತು ಸಿಗರೇಟ್ ಸೇದಿದೆ. ಇದನ್ನು ಮರಿಸನ್ ಗುಸಿಯಾನೊ ಎಂಬವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಇದೀಗ ವೈರಲ್ ಆಗಿದೆ.

    ಘಟನೆ ಕುರಿತು ಬ್ಯಾಂಡಂಗ್ ಮೃಗಾಲಯದ ವಕ್ತಾರ ಸುಲ್ಹಾನ್ ಪ್ರತಿಕ್ರಿಯಿಸಿದ್ದು, ಮೃಗಾಲಯದೊಳಗೆ ಇಂತಹ ಘಟನೆ ನಡೆದಿರುವುದು ವಿಷಾದವೇ ಸರಿ. ಇದಕ್ಕೆ ಅಲ್ಲಿನ ಸಿಬ್ಬಂದಿಗಳೇ ನೇರ ಹೊಣೆ ಅಂತ ಹೇಳಿದ್ದಾರೆ.

    ಯಾಕಂದ್ರೆ ಸಾಮಾನ್ಯವಾಗಿ ಮೃಗಾಲಯದೊಳಗೆ ಪ್ರಾಣಿಗಳಿಗೆ ಆಹಾರ ನೀಡಲು ಅವಕಾಶ ಇರುವುದಿಲ್ಲ. ಅಂತದ್ದರಲ್ಲಿ ಈ ವ್ಯಕ್ತಿಯೊಬ್ಬ ಸಿಗರೇಟ್ ನೀಡಿದ್ದಾನೆಂದರೆ ಈ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಅಂತ ಅವರು ತಿಳಿಸಿದ್ದಾರೆ. ಪ್ರಾಣಿ ದಯಾ ಸಂಘದವರು ಕೂಡ ಪ್ರವಾಸಿಗರ ಈ ವರ್ತನೆಯನ್ನು ಖಂಡಿಸಿದ್ದಾರೆ.

    https://www.facebook.com/marison.guciano/videos/10213499306150627/?lst=100003550156104%3A1640542585%3A1520584975

  • ಪತ್ನಿಯ ಕೂದಲು ಕತ್ತರಿಸಿ, ಸಿಗರೇಟ್‍ನಿಂದ ಸುಟ್ಟು, ಚಾಕುವಿನಿಂದ ಹಲ್ಲೆಗೈದ!

    ಪತ್ನಿಯ ಕೂದಲು ಕತ್ತರಿಸಿ, ಸಿಗರೇಟ್‍ನಿಂದ ಸುಟ್ಟು, ಚಾಕುವಿನಿಂದ ಹಲ್ಲೆಗೈದ!

    ಬೆಳಗಾವಿ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೂದಲು ಕತ್ತರಿಸಿ, ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆದ ಘಟನೆಯೊಂದು ಬೆಳಕಿಗೆ ಬಂದಿದೆ.

    20 ವರ್ಷದ ಕಾವೇರಿ ವಾಲಿ ಎಂಬ ಮಹಿಳೆಯ ಮೇಲೆ ಪತಿ ಅರ್ಜುನ ಬಾಗರಾಯ್ ಈ ಕೃತ್ಯ ಎಸಗಿದ್ದಾನೆ. ಈತ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನ ಲೋಕಾಯುಕ್ತ ಕಚೇರಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.

    ಕಳೆದ 6 ತಿಂಗಳಿಂದ ಬೆಂಗಳೂರಿನಲ್ಲಿ ದಂಪತಿ ನೆಲೆಸಿದ್ದರು. ಪ್ರತಿ ನಿತ್ಯವೂ ಮದ್ಯದ ಅಮಲಿನಲ್ಲಿ ಬಂದು ಪತಿ ತನ್ನ ವಿಕೃತಿ ಮೆರೆಯುತ್ತಾನೆ ಎನ್ನಲಾಗಿದೆ. ಪತ್ನಿಯ ತಲೆ ಕೂದಲು ಕತ್ತರಿಸಿ, ಸಿಗರೇಟ್ ನಿಂದ ಸುಟ್ಟು, ಚಾಕುವಿನಿಂದ ಹಲ್ಲೆಮಾಡಿ ಚಿತ್ರಹಿಂಸೆ ನೀಡಿದ್ದಾನೆ. ಅಲ್ಲದೇ ವರದಕ್ಷಿಣೆ ತರುವಂತೆ ನಿತ್ಯವೂ ಹಿಂಸೆ ನೀಡುತ್ತಿದ್ದಾನೆಂದು ಪತ್ನಿ ಕಾವೇರಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಸದ್ಯ ಪತಿಯ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.