ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಜಗ್ಗನನ್ನು ಸಿಐಡಿ ಅಧಿಕಾರಿಗಳು (CID Officers) ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ರೌಡಿಶೀಟರ್ ಬಿಕ್ಲು ಶಿವ ಪ್ರಕರಣದ ತನಿಖೆ ಚುರುಕುಗೊಂಡಿದೆ. ಒಳಸಂಚು ಆರೋಪ ಹೊತ್ತಿರುವ ಜಗದೀಶ್ @ ಜಗ್ಗನನ್ನ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮೊದಲು ವಿಚಾರಣೆಗೆ ಒಳಪಡಿಸಿದಾಗ ಬೈರತಿ ಬಸವರಾಜ್‌ಗೂ ನನಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದ. ಇದೀಗ ನಟಿ ರಚಿತಾ ರಾಮ್‌ಗೂ ನನಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ.ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ – ನನಗೂ ಬೈರತಿ ಬಸವರಾಜ್‌ಗೂ ಸಂಬಂಧವಿಲ್ಲ ಎಂದ ಎ1 ಜಗ್ಗ
ಮೂಲಗಳ ಪ್ರಕಾರ, ನಟಿ ರಚಿತಾ ರಾಮ್ (Rachita Ram) ಜೊತೆಗಿನ ಫೋಟೋಸ್ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಎ1 ಆರೋಪಿ ಜಗ್ಗ ನಟಿ ರಚಿತಾ ರಾಮ್‌ಗೂ ನನಗೂ ಸಂಪರ್ಕವಿಲ್ಲ. ರವಿ ಭೋಪಣ್ಣ ಸಿನಿಮಾ ಶೂಟಿಂಗ್ ವೇಳೆ ನಾನು ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದೆ. ಆ ಸಮಯದಲ್ಲಿ ಅಭಿಮಾನಿಯಾಗಿ ಗಿಫ್ಟ್ ಕೊಟ್ಟಿದ್ದೆ. ಆದರೆ ಒಡವೆ ಬಗ್ಗೆ ಗೊತ್ತಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ (Biklu Shiva Case) ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಎ1 ಆರೋಪಿ ಜಗ್ಗನನ್ನು ಸಿಐಡಿ ಅಧಿಕಾರಿಗಳು (CID Officers) ವಿಚಾರಣೆ ನಡೆಸಿದ್ದಾರೆ. ಈ ವೇಳೆ ನನಗೂ ಶಾಸಕ ಬೈರತಿ ಬಸವರಾಜ್‌ಗೂ (Byrathi Basavaraj) ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾನೆ.
ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎ1 ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ಸಿಐಡಿ ಅಧಿಕಾರಿಗಳು ಮಂಗಳವಾರ (ಆ.26) ಬಂಧಿಸಿದ್ದರು. ಸದ್ಯ ಆತನನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದು, ತನಿಖಾ ತಂಡ ವಿಚಾರಣೆ ಆರಂಭಿಸಿದೆ.ಇದನ್ನೂ ಓದಿ: ಭಾರತದಲ್ಲಿ 5 ಲಕ್ಷ ಉಚಿತ ChatGPT ಖಾತೆ – OpenAI ಘೋಷಣೆ
ಸಿಐಡಿ ಎಸ್.ಪಿ ವೆಂಕಟೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದ್ದು, ಬಿಕ್ಲು ಶಿವನ ಜೊತೆ ಇದ್ದ ವೈಷಮ್ಯದ ಬಗ್ಗೆ, ಕಿತ್ತಗನೂರಿನ ಜಮೀನಿನ ಗಲಾಟೆಯ ಬಗ್ಗೆ, ಹಳೆ ಕೇಸ್‌ಗಳು, ಬೈರತಿ ಬಸವರಾಜ್ ಜೊತೆಗಿನ ಸಂಪರ್ಕ ಸೇರಿ ಹಲವು ವಿಚಾರಗಳನ್ನು ಬಾಯ್ಬಿಡಿಸಲು ಯತ್ನಿಸುತ್ತಿದ್ದಾರೆ. ಈ ವೇಳೆ ಜಗ್ಗ, ನನಗೂ ಬೈರತಿ ಬಸವರಾಜ್‌ಗೂ ಆತ್ಮೀಯತೆ ಇಲ್ಲ. ಕ್ಷೇತ್ರದ ಶಾಸಕರಾದ ಹಿನ್ನೆಲೆ ಹಲವು ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೆ. ಇನ್ನು ಕುಂಭಮೇಳಕ್ಕೆ ಹೋಗಿದ್ದಾಗ ಅಲ್ಲಿ ಸಿಕ್ಕಿದ್ದರು. ಭೇಟಿಯಾಗಿ ಫೋಟೊ ತೆಗೆದುಕೊಂಡಿದ್ದೆ. ಕ್ಷೇತ್ರದ ಶಾಸಕರು ಅಂತಾ ಫೋಟೋ ತೆಗೆಸಿಕೊಂಡಿದ್ದು, ಬಿಕ್ಲು ಶಿವ ಕೊಲೆಗೂ ಶಾಸಕರಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ.
ಸದ್ಯ ತನಿಖಾಧಿಕಾರಿಗಳು ಕೊಲೆಯಲ್ಲಿ ಜಗ್ಗನ ಪಾತ್ರದ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಜುಲೈ 15ರಂದು ಬಿಕ್ಲು ಶಿವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಶಿವ ಅವರ ತಾಯಿ ವಿಜಯಲಕ್ಷ್ಮಿ ಅವರು ನೀಡಿದ ದೂರು ಆಧರಿಸಿ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬೈರತಿ ಬಸವರಾಜ್ ಅವರನ್ನು ಭಾರತಿನಗರ ಠಾಣೆಯ ಪೊಲೀಸರು ಎರಡು ಬಾರಿ ವಿಚಾರಣೆ ನಡೆಸಿದ್ದರು. 15 ಆರೋಪಿಗಳನ್ನು ಬಂಧಿಸಿದ್ದರು. ಅದಾದ ಮೇಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿತ್ತು.ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಗೆ ಬೆಂಕಿ ಇಟ್ಟ ಪೊಲೀಸ್ ಕಾನ್‌ಸ್ಟೇಬಲ್
ಬೆಂಗಳೂರು: ಪಿಎಸ್‍ಐ ಪರೀಕ್ಷೆಯ ಅಕ್ರಮದಲ್ಲಿ ಬಗೆದಷ್ಟು ರಹಸ್ಯ ಬಯಲಾಗುತ್ತಿದ್ದು, ಜ್ಞಾನಜ್ಯೋತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಡಿಲಿಂಗ್ ಹೇಗೆ ನಡೆಯುತಿತ್ತು ಎಂಬುವುದರ ಬಗ್ಗೆ ಪ್ರಿನ್ಸಿಪಾಲ್ ಆಗಿರುವ ಆರೋಪಿ ಕಾಶಿನಾಥ ಬಹಿರಂಗ ಪಡೆಸಿದ್ದಾನೆ.
ದಿವ್ಯಾ ಹಾಗರಗಿ ಹಾಗೂ ಮಂಜುನಾಥ ಮೇಲ್ಕುಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು. ಕ್ಯಾಂಡಿಡೇಟ್‍ಗಳಿಂದ ಅರ್ಧ ಹಣ ಪಾವತಿ ಆಗುತ್ತಿದ್ದಂತೆ ಆಗುತ್ತಿದ್ದಂತೆ ರೋಲ್ ನಂಬರ್ ಸ್ಕೂಲ್ ಪ್ರಿನ್ಸಿಪಾಲ್‍ಗೆ ಹೋಗುತ್ತಿತ್ತು. ನಂತರ ಜ್ಞಾನ ಜ್ಯೋತಿ ಸ್ಕೂಲ್ ಪ್ರಿನ್ಸಿಪಾಲ್ ಕಾಶಿನಾಥ ಡೀಲಿಂಗ್ ಪಡೆಯುತ್ತಿದ್ದ. ಡೀಲಿಂಗ್ ಪಡೆದು ಇನ್ವಿಜಿಲೇಟರ್‌ಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದ.
545 ಪಿಎಸ್‍ಐ ಪೋಸ್ಟ್ ಪರೀಕ್ಷೆ ಯಲ್ಲಿ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರಕ್ಕೆ ಸಾವಿತ್ರಿ, ಸುಮಾ, ಅರ್ಚನಾ, ಸುನಂದಾ, ಸಿದ್ದಮ್ಮ ಇನ್ವಿಜಿಲೇಟರ್‌ಗಳಾಗಿ ಹೋಗಿದ್ದರು. ಈ ಐವರಿಗೂ ಕಾಶಿನಾಥ್ ಅಭ್ಯರ್ಥಿಗಳ ರೋಲ್ ನಂಬರ್ ಮೆಸೇಜ್ ಮಾಡುತ್ತಿದ್ದನು. ನಂತರ ಆ ರೋಲ್ ನಂಬರ್‌ನಲ್ಲಿರುವ ಕ್ಯಾಂಡಿಡೇಟ್‍ಗಳಿಗೆ ಇದೇ ಮೇಲ್ವಿಚಾರಕರು ಉತ್ತರಗಳ ಚೀಟಿಯನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಇದೇ ವೇಳೆ ಬೇರೆ ಅಭ್ಯರ್ಥಿಗಳು ನೋಡಬಹುದು ಅಂತ ಎಕ್ಸಾಂನ ಬಳಿಕ ಮೇಲ್ವಿಚಾರಕರು ತಿದ್ದುವುದಾಗಿ ಹೇಳುತ್ತಿದ್ದರು.
ಕೇವಲ ವಾಟ್ಸಪ್ ಮೂಲಕವೇ ಕಾಶಿನಾಥ ಮೇಲ್ವಿಚಾರಕರಿಗೆ ಎಲ್ಲ ಮಾಹಿತಿಯನ್ನು ನೀಡುತ್ತಿದ್ದ. ಈ ಕೆಲಸವನ್ನು ಮಾಡಲು ಒಬ್ಬೊಬ್ಬ ಮೇಲ್ವಿಚಾರಕರಿಗೆ ಕಾಶಿನಾಥ 1 ಲಕ್ಷ ರೂಪಾಯಿ ಪರೀಕ್ಷಾ ಕೊಠಡಿಗೆ ಹೋಗುವ ಮುನ್ನವೇ ನೀಡುತ್ತಿದ್ದ. ಹಣವನ್ನು ಪಡೆದ ಬಳಿಕ ಇವರು ಕೊಠಡಿಯ ಪರಿವೀಕ್ಷಣೆಗೆ ತೆರಳುತ್ತಿದ್ದರು. ಈ ಸ್ಕ್ಯಾಮ್‍ನಲ್ಲಿ ಕಾಶಿನಾಥ ನಾಲ್ಕು ಲಕ್ಷ ರೂಪಾಯಿ ಇಟ್ಟುಕೊಳ್ಳುತ್ತಿದ್ದನು. ಇದೀಗ ಸಿಐಡಿ ಪೊಲೀಸರ ಮುಂದೆ 2014 ರಿಂದ ವ್ಯವಹಾರ ಮಾಡುತ್ತಿದ್ದೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ. ದಿವ್ಯಾ, ಮಂಜುನಾಥ ಹೇಳುತ್ತಿದ್ದಂತೆ ನನಗೆ ಬೇಕಾದ ಮೇಲ್ವಿಚಾರಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾನೆ. ಇದನ್ನೂ ಓದಿ: ದೆಹಲಿಯಲ್ಲಿ ಕೊರೊನಾ ಆರ್ಭಟ – GRPA ಆ್ಯಕ್ಷನ್ ಪ್ಲಾನ್‌ನಂತೆ ರೆಡ್‌ಅಲರ್ಟ್ ಘೋಷಣೆ
ಮತ್ತಷ್ಟು ತನಿಖೆ ನಡೆಸಬೇಕಾದ ಕಾರಣ ಮತ್ತೆ ಎಂಟು ದಿನಗಳ ಕಾಲ ಮಂಜುನಾಥ ಮೇಲ್ಕುಂದಿ, ಕಾಶಿನಾಥ, ಅಭ್ಯರ್ಥಿ ಶ್ರೀಧರನನ್ನು ಕಸ್ಟಡಿಗೆ ಪಡೆಯಲಾಗಿದೆ. ಈ ಹಿಂದೆ ಸೆಲೆಕ್ಟ್ ಆದ ವ್ಯಕ್ತಿಗಳ ಮಾಹಿತಿಯನ್ನು ಕೂಡ ಕಾಶಿನಾಥ ಬಾಯ್ಬಿಟ್ಟಿದ್ದಾನಂತೆ. ಈಗಿರುವ ಹಾಲಿ ಪಿಎಸ್‍ಐಗಳ ಗುಂಪಲ್ಲೂ ಗೋಲ್ ಮಾಲ್ ನಡೆದು ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ಕಾಶಿನಾಥ ಹೇಳಿದ್ದಾನೆ.
ಮತ್ತೊಂದೆಡೆ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಅಕ್ರಮಗಳಿಗೆ ಪೊಲೀಸರೇ ಶ್ರೀರಕ್ಷೆ ನೀಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಪಾಲು ಬಹಳ ದೊಡ್ಡದಿದೆ. ಅದಕ್ಕೆ ಅರೆಸ್ಟ್ ಆಗಿ ಸಿಐಡಿ ಕಸ್ಟಡಿಯಲ್ಲಿರೋ ಅಭ್ಯರ್ಥಿಗಳ ಸಂಖ್ಯೆ ಸಾಕ್ಷಿ. ಅಲ್ಲದೆ, ಬಹುತೇಕ ಟಾಪರ್ಸ್‍ಗಳೇ ಹಿಟ್ ಲಿಸ್ಟ್‍ನಲ್ಲಿದ್ದಾರೆ. ಪಿಎಸ್‍ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆ ಆಗಿರುವ ಟಾಪರ್ಸ್‍ಗಳೇ ಆರೋಪಿಗಳ ಪಟ್ಟಿಯಲ್ಲಿದ್ದಾರೆ.
ಈ ಪ್ರಕರಣದಲ್ಲಿ ನಾಲ್ವರು ಡಿವೈಎಸ್‍ಪಿ, ಇಬ್ಬರು ಸಿಪಿಐಗಳು ಭಾಗಿಯಾಗಿದ್ದು, ಅಭ್ಯರ್ಥಿಗಳಿಗೆ ಬ್ಲೂಟೂತ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈಗಾಗಲೇ ಮೂವರು ಡಿವೈಎಸ್‍ಪಿಗಳ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಓರ್ವ ಡಿವೈಎಸ್‍ಪಿಯ ಎರಡು ಮೊಬೈಲ್ ಸೀಜ್ ಮಾಡಿದ್ದಾರೆ.
ಬೆಂಗಳೂರು: ಪಿಎಸ್‍ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ 2ನೇ ಬಾರಿಗೆ ನೋಟಿಸ್ ನೀಡಿದ್ದು, ಈ ಬಾರಿಯಾದರೂ ಪ್ರಿಯಾಂಕ್ ಖರ್ಗೆ ವಿಚಾರಣೆಗೆ ಹಾಜರಾಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಪಿಎಸ್‍ಐ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಪ್ರಿಯಾಂಕ್ ಖರ್ಗೆ ಅವರು ಸುದ್ದಿಗೋಷ್ಠಿ ನಡೆಸಿ, ಆಡಿಯೋ ಕ್ಲಿಪ್‍ವೊಂದನ್ನು ಬಿಡುಗಡೆ ಮಾಡಿದ್ದರು. ಅಲ್ಲದೇ ಈ ಬಗ್ಗೆ ತಮ್ಮ ಬಳಿ ಕೆಲವು ಸಾಕ್ಷ್ಯಗಳು ಇರುವ ಬಗ್ಗೆ ಪ್ರಸ್ತಾಪಿಸಿದ್ದರು. ಈ ಹಿನ್ನಲೆ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸಾಕ್ಷ್ಯ, ದಾಖಲೆಗಳನ್ನು ಒದಗಿಸುವಂತೆ ಸಿಐಡಿ ಅಧಿಕಾರಿಗಳು ಪ್ರಿಯಾಂಕ್ ಖರ್ಗೆ ಅವರಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಇಲ್ಲಿ 1 ಮಾವಿನ ಹಣ್ಣಿಗೆ 2 ಸಾವಿರ – ತಿಂಗಳಿಗೆ ಮುಂಚೆಯೇ ಶುರುವಾಗಿದೆ ಬುಕ್ಕಿಂಗ್
ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಎರಡು ದಿನಗಳ ಒಳಗೆ ಸಿಐಡಿ ಡಿವೈಎಸ್ ಪಿ ನರಸಿಂಹಮೂರ್ತಿ ಅವರ ಮುಂದೆ ಬೆಂಗಳೂರಿನ ಕಾರ್ಲಟನ್ ಭವನದ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: PSI ದೈಹಿಕ ಪರೀಕ್ಷೆಯಲ್ಲೂ ಅಕ್ರಮ, ಥರ್ಮಾಕೋಲ್, ವಿಗ್ ಧರಿಸಿ ನೇಮಕ- ಪ್ರಿಯಾಂಕ್ ಖರ್ಗೆ ಆರೋಪ
ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಾಥ್ ನೀಡಿರುವ ಆರೋಪದಡಿ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಸದ್ಯ 11 ದಿನಗಳ ಕಾಲ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿದೆ.
ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಆದರೆ ಸಿಐಡಿ ಅಧಿಕಾರಿಗಳು ಶುಕ್ರವಾರ ಮಹಾರಾಷ್ಟ್ರದ ಪುಣೆಯ ಹೋಟೆಲ್‍ವೊಂದರ ಬಳಿ ದಿವ್ಯಾ ಹಾಗರಗಿಯನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದಿವ್ಯಾ ಹಾಗರಗಿ ಕಳೆದ ರಾತ್ರಿ ಮಹಿಳಾ ನಿಲಯದಲ್ಲಿಯೇ ಕಾಲ ಕಳೆದಿದ್ದಾರೆ. ಇದನ್ನೂ ಓದಿ: ಪರೀಕ್ಷೆಗೆ ಹಿಜಬ್ ಧರಿಸಿ ಬಂದ ಡಿಗ್ರಿ ವಿದ್ಯಾರ್ಥಿನಿಗೆ ಅನುಮತಿ ನಿರಾಕರಣೆ
ಕೋಟಿ, ಕೋಟಿ ಹಣವಿದ್ದರೂ ಅಕ್ರಮದ ಜಾಲಕ್ಕೆ ಸಿಲುಕಿರುವ ದಿವ್ಯಾ ಹಾಗರಗಿ ಇದೀಗ ತಮ್ಮನ್ನು ಭೇಟಿಯಾದವರ ಮುಂದೆ ಪಶ್ಚಾತ್ತಾಪದ ಮಾತುಗಳನ್ನಾಡುತ್ತಿದ್ದಾರೆ. ಕಲಬುರಗಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ದಿವ್ಯಾ ಹಾಗರಗಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವೆಲ್ಲವೂ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯಾಗಿದೆ.
ರಾಯಚೂರು: ನಗರದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣ ಹಿನ್ನೆಲೆಯಲ್ಲಿ ಸಿಐಡಿ ವಶದಲ್ಲಿದ್ದ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಳೆದ 9 ದಿನಗಳಿಂದ ಆರೋಪಿ ಸುದರ್ಶನ್ ಯಾದವ್‍ನನ್ನು ವಶದಲ್ಲಿಟ್ಟುಕೊಂಡು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇಂದಿಗೆ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಆರೋಪಿಗೆ ಶೇವಿಂಗ್ ಮಾಡಿಸಿ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ವಿಚಾರಣೆ ನಡೆಸಿದ ರಾಯಚೂರು 3ನೇ ಜೆಎಂಎಫ್‍ಸಿ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯನ್ನು ಎರಡು ಬಾರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಮಹತ್ವದ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದಾರೆ.
ಮೃತ ವಿದ್ಯಾರ್ಥಿನಿ ಹಾಗೂ ಆರೋಪಿ ಓಡಾಡಿದ ಸ್ಥಳಗಳು, ವಿದ್ಯಾರ್ಥಿನಿ ಸಾವಿನ ಬಳಿಕ ಆರೋಪಿ ಓಡಾಡಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಂಧ್ರಪ್ರದೇಶದ ಮಂತ್ರಾಲಯ, ಆದೋನಿಯಲ್ಲಿನ 5 ಕಡೆಗಳಲ್ಲಿ ಸಿಐಡಿ ಪೊಲೀಸರು ಸಿಸಿಟಿವಿ ಫೂಟೇಜ್ ಸಂಗ್ರಹ ಮಾಡಿದ್ದಾರೆ. ಲಾಡ್ಜ್ ರಿಜಿಸ್ಟರ್‍ನಲ್ಲಿ ಹೆಸರು ನೋಂದಣಿ ಮಾಡಿರುವ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಸುದರ್ಶನ್ ಮತ್ತು ವಿದ್ಯಾರ್ಥಿನಿ ಜೊತೆಯಾಗಿ ಹೊರ ಹೋಗಿರುವುದಕ್ಕೆ ಮಹತ್ವದ ಸಾಕ್ಷಾಧಾರಗಳ ಸಂಗ್ರಹ ಮಾಡಲಾಗಿದೆ. ಈ ಹಿಂದೆಯೂ ಕೂಡಾ ಇಬ್ಬರು ಜೊತೆಯಾಗಿ ಸುತ್ತಾಡುತ್ತಿದ್ದರು ಎನ್ನುವುದಕ್ಕೆ ಪೂರಕವಾಗಿ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.
ಸಿಐಡಿ ಡಿವೈಎಸ್‍ಪಿ ಕೆ. ರವಿಶಂಕರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಲಭ್ಯವಾದ ಸಾಕ್ಷಾಧಾರ ಆಧಾರದ ಮೇಲೆ ಆರೋಪಿ ವಿಚಾರಣೆ ಮಾಡಲಾಗಿದೆ. ಇದುವರೆಗೆ ಆರೋಪಿ ಹೇಳಿಕೆಗಳ ಆಧಾರದ ಮೇಲೆ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಈಗ ಬೇರೆ ಆಯಾಮಗಳಲ್ಲಿ ತನಿಖೆ ಮುಂದುವರಿಸಲಿದ್ದಾರೆ.