Tag: CID Notices

  • ರೇವಣ್ಣನಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ: ಅಶ್ವತ್ಥ್ ನಾರಾಯಣ್

    ರೇವಣ್ಣನಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ: ಅಶ್ವತ್ಥ್ ನಾರಾಯಣ್

    – ಗೃಹಸಚಿವರು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ
    – ಕೆಲವರಿಗೆ ದುಡ್ಡು ಮಾಡಬೇಕೆಂಬ ಮಾನಸಿಕ ಕಾಯಿಲೆ ಇದೆ

    ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಶಿಕ್ಷಣ ಎಂದರೆ ಏನು ಅಂತ ಗೊತ್ತಿಲ್ಲ ಎಂದು ಹಾಸನದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ವ್ಯಂಗ್ಯವಾಡಿದರು.

    ಮಾಧ್ಯಮಗಳೊಂದಿಗೆ ರೇವಣ್ಣ ಹೇಳಿಕೆ ಕುರಿತು ಮಾತನಾಡಿದ್ದು, ರೇವಣ್ಣ ಅವರಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ. ನಾಲ್ಕು ಬಿಲ್ಡಿಂಗ್ ಕಟ್ಟೋದನ್ನೇ ಶಿಕ್ಷಣ ಅನ್ಕೊಂಡಿದ್ದಾರೆ. ದೇವೇಗೌಡರನ್ನು ಕಂಡರೆ ಎಲ್ಲರಿಗೂ ಅಪಾರ ಗೌರವವಿದೆ. ಮಾಜಿ ಸಿಎಂ ಕುಮಾರಸ್ವಾಮಿ, ರೇವಣ್ಣ ಅವರಿಗೆ ಯಾವ ರೀತಿ ಕೆಲಸ ನಡೆಸಬೇಕು, ಸುಧಾರಣೆ ಮಾಡಬೇಕೆಂಬ ಕಲ್ಪನೆ ಇಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: 118 ವರ್ಷದ ಸನ್ಯಾಸಿನಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ 

    ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇವೆ. ಪಾಪ ರೇವಣ್ಣ ಅವರಿಗೆ ಇದೆಲ್ಲ ಗೊತ್ತಿಲ್ಲ, ಸಹಿಸಿಕೊಳ್ಳಲು ಆಗುತ್ತಿಲ್ಲ. ಇವರ ವೇಗಕ್ಕೆ ನಾವೀಲ್ಲವಲ್ಲ, ಅಡ್ರೆಸ್ ಇಲ್ಲದಂಗೆ ಹೊಗಿದ್ದೇವೆ ಅನ್ನೋ ಸಮಸ್ಯೆಯಾಗಿದೆ. ಅವರು ಎಲ್ಲೆಲ್ಲೂ ಲೆಕ್ಕಕ್ಕೆ ಇಲ್ಲ, ರಿಯಾಯಿತಿ ಕೇಸ್‍ಗಳು ಅವರು ಕೆಲಸ ಮಾಡುವುದು ಹೇಗೆ ಅನ್ನೋದನ್ನು ತೋರಿಸಿ ಕೊಡುತ್ತೇನೆ ಎಂದರು.

    ರೇವಣ್ಣ ಅವರು ಬಹಳ ದಕ್ಷ, ಪ್ರಾಮಾಣಿಕ, ಸ್ವಜನಪಕ್ಷಪಾತವಿಲ್ಲದೆ ಪಾರದರ್ಶಕವಾಗಿ ಕೆಲಸ ಮಾಡಿರುವವರು. ಅವರು ವಿಚಾರ ಏನು ಅಂತ ಅವರ ಊರಿನವರಿಗೆ, ಜೊತೆಯಲ್ಲಿರುವವರಿಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ನನ್ನ ವಿಚಾರದಲ್ಲಿ ಮಾತನಾಡುವ ನೈತಿಕತೆ, ಬದ್ಧತೆ, ಅರ್ಹತೆ ಅವರಿಗಿಲ್ಲ. ನನ್ನ ಬಗ್ಗೆ ಹೇಳಿಕೆ ಕೊಡಲು ಅವರು ಒಳ್ಳೆಯ ಕಲ್ಪನೆಗಳನ್ನು ವಿಚಾರಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ಕೊಟ್ಟರು.

    ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟೀಸ್ ವಿಚಾರವಾಗಿ ಮಾತನಾಡಿದ ಅವರು, ಈ ಕುರಿತು ಅವರೇ ಬಂದು ಹೇಳಬೇಕು. ನಿಮ್ಮ ಬಳಿ ಮಾಹಿತಿ ಇದ್ದರೆ ಕೊಡಿ ಅಂತ ಕರೆದಿದ್ದಾರೆ. ನೀವು ಕ್ರೈಂ ಮಾಡಿದ್ದೀರಾ ಎಂದು ಕರೆದಿಲ್ಲ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯಬಾರದು. ನೇರವಾಗಿ ಹೇಳಬೇಕು, ಸಾಕ್ಷಿ ಕೊಡಬೇಕು. ಕಾನೂನು ಪಾಲನೆ ಮಾಡುವವರು, ಸರ್ಕಾರ ನಡೆಸುವವರು ಈ ರೀತಿ ಮಾತನಾಡಿದರೆ ಎಷ್ಟು ತಿಳುವಳಿಕೆ ಇದೆ ಎಂದು ಪ್ರಶ್ನಿಸಿದರು. ಗೊಡಂಬಿ, ದ್ರಾಕ್ಷಿ ಕೊಟ್ಟರೆ ಯಾರೂ ಬೇಕಾದರೂ ತಿನ್ನುತ್ತಾರೆ. ಇವರೇನು ತಿಂದು ವಾಂತಿ ಮಾಡುತ್ತಾರಾ? ಹೇಳಿಕೆ ಕೊಡುವ ಮುನ್ನ ಯೋಚನೆ ಮಾಡಲಿ ಎಂದು ಕಿಡಿಕಾರಿದರು.

    ಸಹಾಯಕ ಪ್ರಾಧ್ಯಾಪಕರು, ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ದೂರನ್ನು ದಾಖಲು ಮಾಡಿದ್ದಾರೆ. ವಿಚಾರಣೆ ನಡಿಯುತ್ತಿದೆ, ನಂತರ ಕ್ರಮ ತೆಗೆದುಕೊಳ್ಳಲಾಗುವುದು. ಇದರಲ್ಲಿ ಗೃಹ ಸಚಿವರ ವೈಫಲ್ಯ ಇಲ್ಲ. ಅವರ ದೊಡ್ಡತನ ಅವರ ಗಮನಕ್ಕೆ ಬಂದ ಕೂಡಲೇ ಕ್ರಮ ತೆಗೆದುಕೊಂಡಿದ್ದಾರೆ. ಗೃಹಸಚಿವರು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಬೇರೆ ಯಾವ ಸರ್ಕಾರದಲ್ಲೂ ಈ ರೀತಿ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಗೃಹಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಆರಗ ಅವನ್ನು ಪ್ರಶಂಸಿಸಿದರು. ಇದನ್ನೂ ಓದಿ: 4ನೇ ಅಲೆ ತಡೆಯೋದು ನಮ್ಮ ಕೈಯಲ್ಲಿಯೇ ಇದೆ: ತಜ್ಞ ವೈದ್ಯರು

    ಯಾರೇ ತಪ್ಪು ಮಾಡಿದರೂ ತಪ್ಪೇ. ಉಪ್ಪು ತಿಂದವನು ನೀರು ಕುಡಿಯಲೇಬೇಕು. ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ. ಗುತ್ತಿಗೆದಾರರಿಂದ ಪರ್ಸಂಟೇಜ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರವನ್ನು ಸಂಸ್ಕೃತಿ ರೀತಿ ಬೆಳೆಸಿದೆ. ಭ್ರಷ್ಟಾಚಾರ ಒಂದು ಸಂಸ್ಕ್ರತಿ ರೀತಿ ಬೆಳೆದಿದೆ. ಅದನ್ನು ಸಂಪೂರ್ಣವಾಗಿ ಸರಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಯತ್ನ ಪಡುತ್ತಿದ್ದಾರೆ. ಮುಖ್ಯಮಂತ್ರಿಗಳು ಗುತ್ತಿಗೆದಾರರನ್ನು ಕರೆದು ಮಾತನಾಡಿದ್ದಾರೆ. ಕೆಲವರಿಗೆ ದುಡ್ಡು ಮಾಡಬೇಕೆಂಬ ಮಾನಸಿಕ ಕಾಯಿಲೆ ಇದೆ. ಲೂಟಿ ಮಾಡಬೇಕೆಂದು ಕೆಲವರಿಗೆ ತಲೆಯಲ್ಲಿ ಬಂದಿದೆ ಅದನ್ನು ಕಿತ್ತು ಹಾಕಬೇಕು ಎಂದು ವಿವರಿಸಿದರು.