ಬೆಂಗಳೂರು: ಗಾಂಜಾ ಸೇವಿಸಿ ಗಲಾಟೆ ಮಾಡುತ್ತಿದ್ದ ಕಿಡಿಗೇಡಿಗಳನ್ನು ಬೆಂಗಳೂರಿನ (Bengaluru) ಕಬ್ಬನ್ ಪಾರ್ಕ್ ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ.
ಹೊಸ ವರ್ಷದ (New Year) ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ರಂಗು ರಂಗಾಗಿದೆ. ಎಂಜಿ ರೋಡ್, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್‍ಗಳಲ್ಲಿ ಕಿಕ್ಕಿರಿದು ಜನರು ಸೇರಿದ್ದು, 2023ರನ್ನು ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಈ ವೇಳೆ ಬ್ರಿಗೇಡ್ ರೋಡ್ (Brigade Road) ಎಂಟ್ರಿಯಲ್ಲಿ ಕೆಲವರು ಗಾಂಜಾ ಸೇದುತ್ತಿದ್ದರು. ಅಷ್ಟೇ ಅಲ್ಲದೇ ಗಾಂಜಾ ಮತ್ತಿನಲ್ಲಿ ಗಲಾಟೆ ನಡೆಸಿದ್ದಾರೆ. ಇದನ್ನೂ ಓದಿ: ಚರ್ಚ್ ಸ್ಟ್ರೀಟ್‌ನಲ್ಲಿ ಮಾರಾಮಾರಿ – ಲವರ್ ಮುಟ್ಟಿದ್ದಕ್ಕೆ ಬಿತ್ತು ಗೂಸಾ
ಬೆಂಗಳೂರು: ಹೊಸ ವರ್ಷ (New Year) ಆಚರಣೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ 2023ರನ್ನು ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಭರ್ಜರಿ ಸಿದ್ಧವಾಗಿದೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಚರ್ಚ್ ಸ್ಟ್ರೀಟ್‌ನಲ್ಲಿ (Church Street) ಲವರ್ ಮುಟ್ಟಿದ್ದಕ್ಕೆ ಮಾರಾಮಾರಿ ನಡೆದಿದೆ.
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. ಕೆಲ ದುಷ್ಕರ್ಮಿಗಳು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಲವರ್ ಫುಲ್ ಗರಂ ಆಗಿದ್ದಾನೆ. ನೂಕುನುಗ್ಗಲಿನಲ್ಲಿ ತನ್ನ ಹುಡುಗಿ ಮುಟ್ಟಿದ್ದಕ್ಕೆ ದುಷ್ಕರ್ಮಿಗೆ ಆಕೆಯ ಪ್ರಿಯಕರ ಹೊಡೆದಿದ್ದಾನೆ. ಈ ವೇಳೆ ಹೊಡೆಸಿಕೊಂಡ ದುಷ್ಕರ್ಮಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಹೊಸ ವರ್ಷವನ್ನು ಯಾವ ದೇಶ ಮೊದಲು ಆಚರಿಸುತ್ತೆ ಗೊತ್ತಾ?
ಬೆಂಗಳೂರು: 2022ಕ್ಕೆ ಟಾಟಾ ಹೇಳಿ, 2023ಕ್ಕೆ ಹಾಯ್ ಹಾಯ್ ಹೇಳಲು ಇನ್ನು ಕೆಲವೇ ಗಂಟೆಯಷ್ಟೇ ಬಾಕಿ. ಈಗಾಗಲೇ ಬೆಂಗಳೂರು (Bengaluru), ಮೈಸೂರು (Mysuru), ಹುಬ್ಬಳ್ಳಿ(Hubballi), ಕಲಬುರಗಿ, ಬೆಳಗಾವಿ (Belagavi), ಮಂಗಳೂರು (Managaluru) ಸೇರಿ ರಾಜ್ಯದೆಲ್ಲೆಡೆ ಸಂಭ್ರಮಾಚರಣೆಗಳು ಶುರುವಾಗಿವೆ. ಎಲ್ಲರೂ ರಂಗು ರಂಗಾಗಿದ್ದಾರೆ.
12 ಗಂಟೆ ಯಾವಾಗ ಆಗುತ್ತಪ್ಪಾ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳು ಯುವ ಸಮೂಹದಿಂದ ಕಿಕ್ಕಿರಿಯುತ್ತಿವೆ. ಪಬ್, ಬಾರ್ ಅಂಡ್ ರೆಸ್ಟೋರೆಂಟ್‍ಗಳು ಕಲರ್‌ಫುಲ್ ಆಗಿವೆ. ಮುಂಜಾಗ್ರತಾ ಕ್ರಮವಾಗಿ 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಈಗಾಗಲೇ ಇಂದಿರಾನಗರ ಚರ್ಚ್ ಸ್ಟ್ರೀಟ್ ಬಂದ್ ಆಗಿದ್ದು, ದುಬಾರಿ ಚಾರ್ಜ್ ನಡುವೆಯೂ ಪಬ್‍ಗಳಿಗೆ ಫುಲ್ ಬೇಡಿಕೆ ಕೇಳಿಬರುತ್ತಿವೆ. ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಪಬ್‍ಗಳು ಭರ್ತಿಯಾಗಿದ್ದು, ಪಬ್‍ಗಳು ಹೊಸ ವರ್ಷದ ಪಾರ್ಟಿಗೆ ದರ ಹೆಚ್ಚಿಸಿದೆ. ಪ್ರತಿಬಾರಿಗಿಂತ ಇಂದು ಶೇ.50ರಷ್ಟು ಏರಿಕೆ ಆಗಿದ್ದು, 2.5 ಸಾವಿರ ಇದ್ದ ಚಾರ್ಚ್ 4.5 ರಿಂದ 5 ಸಾವಿರ ಚಾರ್ಚ್ ಮಾಡಲಾಗುತ್ತಿದೆ. ದುಪ್ಪಟ್ಟು ಚಾರ್ಚ್ ನಡುವೆಯೂ ಪಾರ್ಟಿ ಪ್ರೀಯರು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶವಿಲ್ಲ – ಪ್ರವಾಸಿಗರಿಗೆ ಕಾಟೇಜ್ ಕೊಡದಿರಲು ನಿರ್ಧಾರ
ವಾಚ್ ಟವರ್, ವುಮೆನ್ ಸೇಫ್ ಹೌಸ್ ನಿರ್ಮಿಸಲಾಗಿದೆ. ಸಿಸಿಟಿವಿಗಳ ಕಣ್ಗಾವಲು, ಆರೆಂಜ್ ಸ್ಕ್ವಾಡ್ ಕೂಡ ಇದೆ. ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದೆ. ನಸುಕಿನಜಾವ 2 ಗಂಟೆಯವರೆಗೂ ಮೆಟ್ರೋ ಸೇವೆ ಇರಲಿದೆ. ಅವಧಿ ಮೀರಿದ್ರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಈಗಾಗಲೇ ಏರ್‌ಪೋರ್ಟ್ ಮೇಲ್ಸೇತುವೆ ಹೊರತುಪಡಿಸಿ ಉಳಿದೆಲ್ಲಾ ಫ್ಲೈಓವರ್ ಬಂದ್ ಆಗಿವೆ. ಇದನ್ನೂ ಓದಿ: ಕಾಂಗ್ರೆಸ್ ತುಕ್ಡೆ ತುಕ್ಡೆ ಗ್ಯಾಂಗ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ: ಅಮಿತ್ ಶಾ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ವೀಕೆಂಡ್ ನಲ್ಲಿ ಸಿಲಿಕಾನ್ ಸಿಟಿಯ ಹೈಫೈ ಏರಿಯಾಗೆ ಹೋಗುವ ಮುನ್ನ ಯೋಚಿಸಿ, ಚರ್ಚ್ ಸ್ಟ್ರೀಟ್ ನಲ್ಲಿ ಇನ್ನು ವೀಕೆಂಡ್ ವೆಹಿಕಲ್ಸ್ ನಿಷೇಧ ಮಾಡಲಾಗಿದೆ. ಹೀಗಾಗಿ ಇನ್ಮುಂದೆ ವಿಕೇಂಡ್ ಬಂತೆಂದು ಚರ್ಚ್ ಸ್ಟ್ರೀಟ್ ಕಡೆಗೆ ಗಾಡಿ ತಗೋಂಡು ಜಾಲಿ ರೌಂಡ್ ಹೋಗಲು ಆಗಲ್ಲ.
ಇಂದಿನಿಂದ ಫೆಬ್ರವರಿ 28ರ ವರೆಗೆ ಚರ್ಚ್ ಸ್ಟ್ರೀಟ್ ಕ್ಲೀನ್ ಏರ್ ಸ್ಟ್ರೀಟ್ ಎಂದು ಘೊಷಿಸಲಾಗಿದ್ದು, ಭಾರತದ ಮೊದಲ ಸ್ವಚ್ಛ ವಾಯು ಸ್ಟ್ರೀಟ್ ಚರ್ಚ್ ಸ್ಟ್ರೀಟ್ ಫಸ್ಟ್- ಟೆಸ್ಟ್ ಬೆಡ್ ಗೆ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕಾಲ್ನಡಿಗೆಯಲ್ಲಿ ತೆರಳುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಾಯು ಮಾಲಿನ್ಯ ಕಡಿಮೆ ಮಾಡಲು ಹೊಸ ಪ್ರಯೋಗ ಮಾಡಲಾಗುತ್ತಿದ್ದು, ಭೂ ಸಾರಿಗೆ ನಿರ್ದೇಶನಾಲಯ, ಡಲ್ಟ್(ಡೈರೆಕ್ಟರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್‍ಪೋರ್ಟ್) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆ ರೂಪಿಸಲಾಗಿದೆ. ಅಲ್ಲದೆ ಚರ್ಚ್ ಸ್ಟ್ರೀಟ್ ನಲ್ಲಿ ಯುರೋಪ್ ಮಾದರಿಯನ್ನು ಅಳವಡಿಕೆ ಮಾಡಲಾಗುತ್ತದೆಯಂತೆ.
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ ಚಾಲನೆ ನೀಡಿದ್ದಾರೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಾತ್ ನೀಡಿದ್ದಾರೆ. ಚರ್ಚ್ ಸ್ಟ್ರೀಟ್ ನ ರಸ್ತೆಗಳನ್ನು ಮುಖ್ಯಮಂತ್ರಿಗಳು ಪರಿಶೀಲಿಸಿದ್ದು, ಭಾರತದ ಮೊದಲ ಸ್ವಚ್ಛ ವಾಯು ಬೀದಿ(ಕ್ಲೀನ್ ಏರ್ ಸ್ಟ್ರೀಟ್) ಎಂದಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿ ವೀಕೆಂಡ್ ನಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ವಾರದಲ್ಲಿ ಎರಡು ದಿನ ಪಾದಚಾರಿಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸ್ವಚ್ಛ ಗಾಳಿ, ನೀರು ಪ್ರತಿಯೊಬ್ಬರ ಹಕ್ಕು. ಸೈಕಲ್ ಹೆಚ್ಚು ಉಪಯೋಗಿಸಿ, ನಡಿಯಿರಿ ಎಂದು ಸಿಎಂ ಸಲಹೆ ನೀಡಿದ್ದಾರೆ.
ಮಾಲಿನ್ಯರಹಿತ ಪರಿಸರ ನಿರ್ಮಾಣ ನಮ್ಮ ಗುರಿ. ಭಾರತದ ಮೊಟ್ಟ ಮೊದಲ ಸ್ವಚ್ಚ ವಾಯು ರಸ್ತೆ ಉಪಕ್ರಮವಾಗಿ ಚರ್ಚ್ ಸ್ಟ್ರೀಟ್ ಫಸ್ಟ್ – ‘ಟೆಸ್ಟ್ ಬೆಡ್’ ಅನ್ನು ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಇಂದು ಉದ್ಘಾಟಿಸಲಾಯಿತು. ನಗರಾಭಿವೃದ್ಧಿ ಸಚಿವರು, ಶಾಸಕರು, ಬಿ.ಬಿ.ಎಂ.ಪಿ ಆಡಳಿತಾಧಿಕಾರಿಗಳು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. pic.twitter.com/RLD4ybt1Qc
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಶನಿವಾರ ಹಾಗೂ ಭಾನುವಾರ ಎರಡು ದಿನ ಚರ್ಚ್ ಸ್ಟ್ರೀಟ್ ನಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಎರಡು ದಿನ ಈ ರಸ್ತೆಯಲ್ಲಿ ವಾಯುಮಾಲಿನ್ಯದ ಪ್ರಮಾಣ ಅಳೆಯಲಾಗುತ್ತೆದೆ. ನಂತರದ ದಿನಗಳಲ್ಲಿ ಹೆಚ್ಚಿನ ದಿನಗಳನ್ನು ವಿಸ್ತರಿಸುವ ಕುರಿತು ಚಿಂತಿಸಲಾಗುತ್ತದೆ. ಇದು ಮೊದಲ ಹಂತ, ನಂತರ ಬೇರೆ ಪ್ರದೇಶಗಳಲ್ಲಿ ವಿಸ್ತರಿಸಲು ಆಲೋಚನೆ ನಡೆಸಲಾಗುತ್ತಿದೆ ಎಂದರು.
ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣದ ಕುರಿತು ಪೊಲೀಸರು ಬಗೆದಷ್ಟು ಸತ್ಯ ಹೊರಗೆ ಬರುತ್ತಿದ್ದು, ಕೆಲ ಆರೋಪಿಗಳು ದೇಶದ್ರೋಹಿಗಳ ಜೊತೆ ಸಂಪರ್ಕದಲ್ಲಿರುವುದು, ಇನ್ನೂ ಕೆಲವರು ದುಷ್ಕೃತ್ಯದಲ್ಲಿ ತೊಡಗಿರುವ ಕುರತ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಇದೀಗ ಮತ್ತೊಂದು ಭಯಾನಕ ಸತ್ಯ ಹೊರ ಬಿದ್ದಿದ್ದು, ಡಿಜೆ ಹಳ್ಳಿ ಗಲಭೆ ಪ್ರಕರಣ ಪುಂಡರಿಗೆ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ಲಿಂಕ್ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ನಗರದ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ರುವಾರಿಗೆ ಪುಂಡರು ನಿಕಟ ಸಂಬಂಧಿಗಳು ಎಂಬ ಮಾಹಿತಿ ಲಭ್ಯವಾಗಿದೆ.
ಗಲಭೆ ಪ್ರಕರಣದಲ್ಲಿ ಬಾಂಬ್ ಬ್ಲಾಸ್ಟ್ ಆರೋಪಿ ಅಫ್ರೀದಿ ಸಹೀದರ ಮೊಹಮದ್‍ನ್ನು ಪೊಲೀಸರು ಬಂಧಿಸಿದ್ದು, ಅಫ್ರೀದಿಯು ಸಿಯಾವುದ್ದೀನ್, ಮೊಹಮದ್ ಸೇರಿದಂತೆ ಐವರು ಆರೋಪಿಗಳ ಜೊತೆ ಒಡನಾಟ ಹೊಂದಿದ್ದ ಎನ್ನಲಾಗಿದೆ. ಸದ್ಯ ಬಾಂಬ್ ಬ್ಲಾಸ್ಟ್ ಲಿಂಕ್ ಬಗ್ಗೆ ಸಿಸಿಬಿಯಿಂದ ತನಿಖೆ ಮುಂದುವರಿದಿದ್ದು, ಎಲ್ಲ ರೀತಿಯಿಂದಲೂ ವಿಚಾರಣೆ ನಡೆಸುತ್ತಿದ್ದಾರೆ. ಈ ಮೂಲಕ ಹಿಂದಿನ ಸತ್ಯವನ್ನು ಬಾಯ್ಬಿಡಿಸುತ್ತಿದ್ದಾರೆ.
2014ರ ಡಿಸೆಂಬರ್ ನಲ್ಲಿ ಚರ್ಚ್ ಸ್ಟ್ರೀಟ್ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಇದು ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿತ್ತು. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಹಲವರನ್ನು ಬಂಧಿಸಿದ್ದರು. ಇದೀಗ ಪ್ರಮುಖ ಆರೋಪಿಯೊಂದಿಗೆ ಈತ ಸಂಪರ್ಕ ಹೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ಬಾಂಬ್ ಬ್ಲಾಸ್ಟ್ ರುವಾರಿ ಸಾರಾಯಿಪಾಳ್ಯದ ಹುಡುಗಿಯನ್ನು ಮದುವೆಯಾಗಿದ್ದ. ಬಳಿಕ ಪರಪ್ಪನ ಅಹ್ರಹಾರದಲ್ಲಿ ಎನ್‍ಐಎ ಆತನನ್ನು ಬಂಧಿಸಿತ್ತು.
ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಬಳಿಕ ಇದೀಗ ಸಿಲಿಕಾನ್ ಸಿಟಿಯಲ್ಲಿ ಕೂಡ ಫ್ರೀ ಕಾಶ್ಮೀರ ಕೂಗು ಎದ್ದಿದೆ.
ಹೌದು. ನಗರದ ಚರ್ಚ್ ಸ್ಟ್ರೀಟ್ ರಸ್ತೆಯ ಗೋಡೆಗಳು ಮತ್ತು ಅಂಗಡಿ ಶೆಟರ್ ಗಳಲ್ಲಿ ಫ್ರೀ ಕಾಶ್ಮೀರ ಬರಹಗಳನ್ನು ಬರೆಯಲಾಗಿದೆ. ಅಲ್ಲದೆ ನೋ ಸಿಎಎ, ನೋ ಎನ್‍ಆರ್‍ಸಿ, ನೊ ಎನ್‍ಪಿಎ, ಬಿಜೆಪಿ ಈಸ್ ಕ್ಯಾನ್ಸರ್, ಮೋದಿ ಫ್ಯಾಸಿಸ್ಟ್ ಹೀಗೆ ಸಾಲು ಸಾಲು ಬರಹಗಳನ್ನು ಬರೆಯಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಮೋದಿ ಹಾಗೂ ಆರ್ ಎಸ್‍ಎಸ್ ಖಂಡಿಸಿ ಸಹ ಸಾಕಷ್ಟು ಬರಹಗಳನ್ನ ಬರೆಯಲಾಗಿತ್ತು. ಇಡೀ ರಸ್ತೆ ಹಾಗೂ ಶೆಟರ್‍ಗಳು ಮೋದಿ ವಿರೋಧಿ ಬರಹಗಳಿಂದ ಕೂಡಿ ಹೋಗಿತ್ತು. ಇದರ ಜೊತೆಗೆ ಫ್ರೀ ಕಾಶ್ಮೀರ ಅಂತ ಸಹ ಬರೆಯಲಾಗಿದ್ದು, ಮತ್ತಷ್ಟು ವಿವಾದ ಪಡೆದುಕೊಳ್ಳುವಂತೆ ಮಾಡಲಾಗಿತ್ತು.
ಸಿಸಿಟಿವಿಯಲ್ಲಿ ಸೆರೆ:
ಬೆಳಗ್ಗಿನ ಜಾವ 3.8ರ ಸುಮಾರಿಗೆ ಬಂದ ಇಬ್ಬರು ಸ್ಕೂಟರ್ ನಿಲ್ಲಿಸಿ ಸ್ಪ್ರೇ ಬಳಸಿ, ಬರಹಗಳನ್ನ ಬರೆದಿದ್ದಾರೆ. ಇವರು ಬರೆಯೋ ಬರಹಗಳು ಎದುರುಗಿದ್ದ ಬಿಲ್ಡಿಂಗ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲವೇ ನಿಮಿಷಗಳಲ್ಲಿ ಬರಹಗಳನ್ನ ಬರೆದು ಹೋಗಿದ್ದಾರೆ. ಯಾವಾಗ ಈ ವಿಚಾರ ವರದಿಯಾಯಿತೋ, ತಕ್ಷಣವೇ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಅಲ್ಲದೆ ಒಂದಷ್ಟು ಸಿಸಿಟಿವಿ ವಿಡಿಯೋಗಳನ್ನ ಸಂಗ್ರಹಿಸಿ ದೂರು ದಾಖಲಿಸಿಕೊಂಡು, ಆರೋಪಿಗಳಿಗಾಗಿ ಹುಡುಕಾಟ ನಡೆಸಲು ಆರಂಭಿಸಿದರು. ಇದನ್ನೂ ಓದಿ: ಮೈಸೂರು ವಿವಿ ಕ್ಯಾಂಪಸ್‍ನಲ್ಲೂ ಪ್ರತ್ಯೇಕ ಕಾಶ್ಮೀರ ಕೂಗು
ಈ ಮಧ್ಯೆ ಕಬ್ಬನ್ ಪಾರ್ಕ್ ಪೊಲೀಸರು ಮೋದಿ ವಿರೋಧಿ ಬರಹಗಳಿಗೆ ಪೈಂಟ್ ಹಾಕಿಸಿದರು. ಇದೇ ವೇಳೆ ಚರ್ಚ್‍ಸ್ಟ್ರೀಟ್‍ಗೆ ಬಂದ ಕೆಲ ಹಿಂದೂಪರ ಸಂಘಟನೆಯ ಕಾರ್ಯಕರ್ತರು, ಘೋಷಣೆ ಕೂಗಿದರು. ಮೋದಿ ಪರ ಹಾಗೂ ಭಾರತ್ ಮಾತೆಗೆ ಜೈಕಾರ ಕೂಗಿ, ಸಿಎಎ ವಿರೋಧಿ ಬರಹಗಳಿಗೆ ಇವರು ಸಹ ಪೈಂಟ್ ಬಳಿಯೋ ಕೆಲಸ ಮಾಡಿದರು. ಸಿಎಎ ವಿರೊಧಿ ಬರಹ ಬರೆದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು. ನಂತರ ವಿ ಸಪೋರ್ಟ್ ಸಿಎಎ ಅಂತ ಹಿಂದೂ ಸಂಘಟನೆ ಕಾರ್ಯಕರ್ತರು ಬರೆದರು. ಕೊನೆಗೆ ಇದ್ಯಾವುದು ಬೇಡ ಅಂತ ಕಬ್ಬನ್‍ಪಾರ್ಕ್ ಪೊಲೀಸರು, ಸಿಎಎ ಪರ ಹಾಗೂ ವಿರೋಧದ ಬರಹಗಳಿಗೆ ಕೂಡ ಪೈಂಟ್ ಬಳಿಯೋ ಕೆಲಸ ಮಾಡಿದರು. ಇದನ್ನೂ ಓದಿ: ವಿವಾದಿತ ಪೋಸ್ಟರ್ ಹಿಡಿದಿದ್ದ ಮೈಸೂರು ಯುವತಿ ನಾಪತ್ತೆ
ಬೆಂಗಳೂರು: ಕಾನೂನು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತದೆ. ನೋವಾದವರಿಗೆ ನೋವು ಮಾಡಬೇಡಿ. ಬೇರೆಯವರಿಗೆ ಕೇಡು ಮಾಡಬೇಡಿ ಎಂದು ಹೇಳುವ ಮೂಲಕ ಮಗ ನಲಪಾಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಚರ್ಚ್ ಸ್ಟ್ರೀಟ್ ವಿನೂತನ ಮಾದರಿ ರಸ್ತೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಮಗ ನಲಪಾಡ್ ವಿಚಾರ ಪ್ರಸ್ತಾಪಿಸಿದರು. ಮನಸ್ಸು ನೋಯಿಸುವಂತಹ ರಾಜಕೀಯ ಯಾರೂ ಮಾಡಬಾರದು. ಉತ್ತಮ ಮನುಷ್ಯರಾಗಬೇಕು. ನಾನು ಮಾಡಿದರೂ ತಪ್ಪು ಯಾರೇ ಮಾಡಿದರೂ ತಪ್ಪು. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಉತ್ತಮ ಮನುಷ್ಯರಾಗಿ ಬದುಕೋಣ ಎಂದು ಹೇಳಿದ್ರು.
ಇದೇ ವೇಳೆ ಮಾಧ್ಯಮಗಳಿಗೆ ಬೋಧಿಸಿದ ಹ್ಯಾರಿಸ್, ಮಾಧ್ಯಮ ಸ್ನೇಹಿತರೇ ಒಳ್ಳೆಯದನ್ನೇ ಬರೆಯಿರಿ. ಸರ್ಕಾರದ ಅಭಿವೃದ್ಧಿ ಯನ್ನು ತೋರಿಸಿ. ಕಾನೂನು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತದೆ. ನೋವಾದವರಿಗೆ ನೋವು ಮಾಡಬೇಡಿ. ಬೇರೆಯವರಿಗೆ ಕೇಡು ಮಾಡಬೇಡಿ ಎಂದರು. ಬಿಜೆಪಿಯವರಿಗೆ ತಾಕತ್ತಿದ್ದರೆ ಶಾಂತಿನಗರ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಮಾಡಲಿ ಎಂದು ಸವಾಲು ಹಾಕಿದ್ರು.
ಲೋಕಾರ್ಪಣೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಶಾಸಕ ಹ್ಯಾರಿಸ್ ಜೊತೆ ವೇದಿಕೆ ಹಂಚಿಕೊಳ್ಳದೆ, ಪಾವಗಡದಲ್ಲಿ ಸೋಲಾರ್ ಪಾರ್ಕ್ ಉದ್ಘಾಟನೆ ನೆಪದಲ್ಲಿ ತೆರಳಿದ್ರು. ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಬಾವುಟಗಳದ್ದೇ ರಾಜ್ಯಭಾರವಾಗಿತ್ತು. ಉದ್ಘಾಟನಾ ಸಮಾರಂಭ ಕಾಂಗ್ರೆಸ್ ಸಮಾವೇಶವಾಗಿ ಮಾರ್ಪಾಡಾಯ್ತು. ಹ್ಯಾರಿಸ್ ಅವರಿಂದಲೇ ಕಾರ್ಯಕ್ರಮ ನಿರೂಪಣೆ ನಡೆಯಿತು. ಶಾಂತಿನಗರ ಜನ ಹ್ಯಾರಿಸ್‍ಗೆ ಜೈಕಾರ ಹಾಕಿದ್ರು.
ಬೆಂಗಳೂರು: ಸಿಲಿಕಾನ್ ಸಿಟಿಯ ವೀಕೆಂಡ್ ಹಾಟ್ ಫೇವರೇಟ್ ಚರ್ಚ್‍ಸ್ಟ್ರೀಟ್ ಶುಕ್ರವಾರದಿಂದ ಆರು ತಿಂಗಳ ಕಾಲ ಬಂದ್ ಆಗಲಿದೆ. ಕಾರಣ ಈ ರಸ್ತೆಯಲ್ಲಿ ಬಿಬಿಎಂಪಿ ಟೆಂಡರ್ ಶ್ಯೂರ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಿದೆ.
ವೀಕೆಂಡ್‍ನಲ್ಲಿ ಎಂ.ಜಿ ರೋಡ್, ಬ್ರಿಗೇಡ್ ರೋಡ್ ಸುತ್ತಾಡೋರು, ಊಟ ಮಾಡೋಕೆ ಹೆಜ್ಜೆ ಹಾಕೋದು ಚರ್ಚ್ ಸ್ಟ್ರೀಟ್ ರಸ್ತೆ ಕಡೆಗೆ. ಇಲ್ಲಿ ಚೈನೀಸ್, ಜಾಪ್ನೀಸ್, ಕೇರಳ ರೆಸ್ಟೋರೆಂಟ್‍ಗಳು ಸೇರಿ ಸುಮಾರು 100ಕ್ಕೂ ಹೆಚ್ಚು ರೆಸ್ಟೋರೆಂಟ್, ಪಬ್, ಬಾರ್‍ಗಳಿವೆ. ಹಲವಾರು ಕಾರ್ಪೊರೇಟ್ ಕಂಪನಿಗಳು ಈ ರಸ್ತೆಯಲ್ಲಿರೋದ್ರಿಂದ ಅಗಾಗ ಈವೆಂಟ್‍ಗಳು ನಡೀತಿರುತ್ತವೆ. ಆದ್ರೆ ರಸ್ತೆಯಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ಕೈಗೆತ್ತಿಕೊಂಡಿರೋದ್ರಿಂದ ಈ ರಸ್ತೆ ಮುಂದಿನ ಆರು ತಿಂಗಳವರೆಗೆ ಬಂದ್ ಆಗಲಿದೆ.
ಟೆಂಡರ್ ಶ್ಯೂರ್ ಕಾಮಗಾರಿ ನಡೆಸುತ್ತಿರೋದೇನೋ ಸರಿ. ಆದ್ರೆ, ರಸ್ತೆಯ ಎರಡೂ ಬದಿಗಳನ್ನು ಬಂದ್ ಮಾಡ್ತಿರೋದು ಇದೀಗ ರೆಸ್ಟೋರೆಂಟ್‍ಗಳ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸಾಧ್ಯವಾದಷ್ಟು ಬೇಗ ಕಾಮಗಾರಿ ಮುಗಿಸಿಕೊಡುವ ಭರವಸೆಯನ್ನು ಬಿಬಿಎಂಪಿ ನೀಡಿದೆ. ಹಾಗಿದ್ರೂ ಮುಂದಿನ ಆರು ತಿಂಗಳ ಕಾಲ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹಲವು ಅನಾನುಕೂಲಗಳನ್ನ ಅಲ್ಲಿಗೆ ಹೋಗೋರು ಸಹಿಸಿಕೊಳ್ಳಬೇಕಾಗಿದೆ.