ದಾವಣಗೆರೆ: ಇಲ್ಲಿನ (Davanagere) ಹರಿಹರದ (Harihar) ಆರೋಗ್ಯ ಮಾತೆ ಚರ್ಚ್‍ನಲ್ಲಿ (Church) ಲೆಕ್ಕಪತ್ರದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಚರ್ಚ್‍ನ ಲೆಕ್ಕಪತ್ರ ನೀಡಲು ಹಾಗೂ ಅವ್ಯವಸ್ಥೆ ಸರಿ ಪಡಿಸಲು ಚರ್ಚ್ ಪಾಲನಾ ಪರಿಷತ್ ಸದಸ್ಯರು ಹಾಗೂ ಮುಖಂಡರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಪ್ರಾನ್ಸಿಸ್ಸ್ ಸೆರಾವೋ ಲೆಕ್ಕಪತ್ರ ಒದಗಿಸಿರಲಿಲ್ಲ.
ಇದರಿಂದಾಗಿ ಮೂರು ದಿನಗಳ ಕಾಲ ನಡೆಯುವ ಸಭೆಗೆ ಆಗಮಿಸಿದ ಬಿಷಪ್ ಪ್ರಾನ್ಸಿಸ್ಸ್ ಸೆರಾವೋ ಅವರಿಗೆ ಘೇರಾವ್ ಹಾಕಲಾಗಿತ್ತು. ಇದರಿಂದ ಎರಡು ಗುಂಪುಗಳ ನಡುವೆ ಚರ್ಚ್ ಮುಂಭಾಗವೇ ಮಾರಾಮಾರಿ ನಡೆದಿದೆ.
ಕೂಡಲೇ ಹರಿಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಶಿವಮೊಗ್ಗ: ಚರ್ಚ್‍ನ (Church) ಹುಂಡಿ ಕಾಸಿಗಾಗಿ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿರುವುದು ಹೊಳೆಹೊನ್ನೂರು (Holehonnur) ಸಮೀಪದ ಸದಾಶಿವ ನಗರದ ಹಕ್ಕಿಪಿಕ್ಕಿ ಕ್ಯಾಂಪ್ ಚರ್ಚ್‍ನಲ್ಲಿ ನಡೆದಿದೆ.
ಭಾನುವಾರದ ಪ್ರಾರ್ಥನೆ ವೇಳೆ ಭಕ್ತರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಚರ್ಚ್‍ನ ಹುಂಡಿ ಹಣದ ವಿಚಾರಕ್ಕೆ ಗಲಾಟೆ ನಡೆದಿದೆ. ಹುಂಡಿ ಹಣದ ಮೇಲೆ ಹಿಡಿತ ಸಾಧಿಸುವ ಸಂಬಂಧ ಹಳೆಯ ಮತ್ತು ಹೊಸ ಟ್ರಸ್ಟ್ ಸದಸ್ಯರ ನಡುವೆ ಭಿನ್ನಾಭಿಪ್ರಾಯದಿಂದ ಈ ಗಲಾಟೆ ನಡೆದಿದೆ.
ಹೊರಗಿನವರೇ ಇರುವ ಟ್ರಸ್ಟ್‌ನವರು ಬಂದು ಹುಂಡಿಯ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪರಸ್ಪರ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಕೈ ಮಿಲಾಯಿಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಡ ಗಾಯಗಳಾಗಿವೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹಕ್ಕಿಪಿಕ್ಕಿ ಕ್ಯಾಂಪ್‍ನಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಶಿಲ್ಲಾಂಗ್: ವ್ಯಕ್ತಿಯೊಬ್ಬ ಚರ್ಚ್‌ನೊಳಗೆ (Church) ಪ್ರವೇಶಿಸಿ ಜೈ ಶ್ರೀರಾಂ ಘೋಷಣೆ ಕೂಗಿದ ಘಟನೆ ಮೇಘಾಲಯದ (Meghalaya) ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆಕಾಶ್ ಸಾಗರ್ ಎಂಬಾತ ಮಾವಿನ್ನಾಂಗ್ ಗ್ರಾಮದ ಚರ್ಚ್ ಒಳಗೆ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಬಳಿಕ ಜೈ ಶ್ರೀರಾಂ ಘೋಷಣೆ ಕೂಗಿ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೊಪದಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೇಘಾಲಯ ಸಿಎಂ ಕಾನಾಡ್ ಸಂಗ್ರಾ ಅವರು ಈ ಘಟನೆಯನ್ನು ಖಂಡಿಸಿದ್ದಾರೆ. ಇದು ಉದ್ದೇಶಪೂರ್ವಕ ಕೃತ್ಯವಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರವು ಸಾಮಾಜಿಕ, ಧಾರ್ಮಿಕ ಅಥವಾ ಕೋಮು ಸಾಮರಸ್ಯ ಕದಡುವುದಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕದಲ್ಲೂ ಇದೇ ಮಾದರಿಯ ಘಟನೆ
2023ರಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಇಬ್ಬರು ವ್ಯಕ್ತಿಗಳು ಮಸೀದಿಯೊಳಗೆ ತೆರಳಿ ಜೈ ಶ್ರೀರಾಂ ಘೋಷಣೆ ಕೂಗಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.
ಝಗಮಗಿಸುವ ಚರ್ಚ್‌ಗಳು, ವಿದ್ಯುತ್ ದೀಪಗಳಿಂದ ಮಿನುಗುವ ಕ್ರಿಸ್‌ಮಸ್ ಟ್ರೀ (Christmas Tree), ಚರ್ಚ್‌ಗಳಿಂದ ಪ್ರಾರ್ಥನೆ, ಸಾಂತಾನಿಂದ ಮಕ್ಕಳಿಗೆ ಸಪ್ರೈಸ್ ಉಡುಗೊರೆಗಳು, ಕೈಯಲ್ಲಿ ವೈನ್ ಗ್ಲಾಸ್, ಬಗೆಬಗೆಯ ಕೇಕ್‌ಗಳ ಸ್ವಾದ… ಈ ಎಲ್ಲಾ ವಿಶೇಷತೆಗಳ ಹೂರಣ. ಭಕ್ತಿ ಮತ್ತು ಸಂಭ್ರಮಾಚರಣೆ. ಪ್ರೀತಿ, ಶಾಂತಿ, ಸೌಹಾರ್ದತೆ ಸಾರಿದ ಏಸುಕ್ರಿಸ್ತನ ಸ್ಮರಣೆ. ಎಲ್ಲವೂ ಮೇಳೈಸಿದ ಹಬ್ಬವೇ ಕ್ರಿಸ್‌ಮಸ್. ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬ ಕ್ರಿಸ್‌ಮಸ್ (Christmas Festival) ಮತ್ತೆ ಬಂದಿದೆ.
ಪ್ರತಿ ವರ್ಷ ಡಿಸೆಂಬರ್ 25 ರಂದು ಆಚರಿಸುವ ಕ್ರಿಸ್‌ಮಸ್ ಎಂದಾಕ್ಷಣ ನಮಗೆ ನೆನಪಾಗುವುದು ಚರ್ಚ್, ಏಸುಕ್ರಿಸ್ತ, ಕ್ರಿಸ್‌ಮಸ್ ಟ್ರೀ, ಕೇಕ್ ಮತ್ತು ಆಚರಣೆ. ಆದರೆ, ಕ್ರಿಸ್‌ಮಸ್ ಹಬ್ಬದ ಇತಿಹಾಸ ಮತ್ತು ಅದರ ಮಹತ್ವದ ಬಗ್ಗೆ ನಿಮಗೇನಾದರೂ ತಿಳಿದಿದೆಯೇ?
ಕ್ರಿಸ್‌ಮಸ್ ಇತಿಹಾಸವೇನು?
ಕ್ರೈಸ್ತ ಧರ್ಮೀಯರ ಈ ಹಬ್ಬಕ್ಕೆ ಶತಮಾನಗಳ ಇತಿಹಾಸವಿದೆ. ಕ್ರಿಸ್‌ಮಸ್ ಆಚರಣೆ ಮೊದಲು ಶುರುವಾಗಿದ್ದು ರೋಮ್ ದೇಶದಲ್ಲಿ ಎಂದು ಹೇಳಲಾಗಿದೆ. ಕ್ರಿಸ್‌ಮಸ್‌ಗೆ ಮುನ್ನ ರೋಮ್‌ನಲ್ಲಿ ಡಿ.25ರ ದಿನವನ್ನು ಸೂರ್ಯ ದೇವರ ಜನ್ಮದಿನವಾಗಿ ಆಚರಿಸಲಾಯಿತು. ಆಗ ರೋಮ್ ಚಕ್ರವರ್ತಿಗಳು ಸೂರ್ಯದೇವನನ್ನು ತಮ್ಮ ದೇವರಾಗಿ ಪರಿಗಣಿಸುತ್ತಿದ್ದರು. ಸೂರ್ಯ ದೇವನನ್ನೇ ಪೂಜಿಸುತ್ತಿದ್ದರು. ಕಾಲಾನಂತರ ಕ್ರಿ.ಶ.330ರ ಹೊತ್ತಿಗೆ ರೋಮ್‌ನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಚಾರವು ವೇಗವಾಗಿ ಬೆಳೆಯಿತು. ಕ್ರೈಸ್ತ ಧರ್ಮದ ಅನುಯಾಯಿಗಳ ಸಂಖ್ಯೆಯೂ ಹೆಚ್ಚಿತು. ಬಳಿಕ ಕ್ರಿ.ಶ.336ರಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳು ‘ಯೇಸುಕ್ರಿಸ್ತನನ್ನು ಸೂರ್ಯದೇವನ ಅವತಾರ’ ಎಂದು ಪರಿಗಣಿಸಿದರು. ಅಂದಿನಿಂದ ಕ್ರಿಸ್‌ಮಸ್ ಹಬ್ಬವನ್ನು ಯೇಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವ ಸಂಪ್ರದಾಯ ಆರಂಭವಾಯಿತು. ಹೀಗಾಗಿ, ಡಿ.25 ರಂದು ಕ್ರಿಸ್‌ಮಸ್ ಹಬ್ಬ ಆಚರಿಸುವ ಪರಿಪಾಠ ಶುರುವಾಯಿತು.
ಕ್ರೈಸ್ತರಿಗೆ ಹೊಸ ವರ್ಷ
ಭಾರತೀಯರಿಗೆ ‘ಯುಗಾದಿ’ಯನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಆದರೆ ಕ್ರೈಸ್ತರಿಗೆ ಕ್ರಿಸ್‌ಮಸ್ ಹಬ್ಬವು ಹೊಸ ವರ್ಷವಾಗಿದೆ. ಈ ದಿನವನ್ನು ಕೆಟ್ಟದರ ಮೇಲೆ ಒಳಿತಿನ ವಿಜಯವೆಂದು ಪರಿಗಣಿಸುತ್ತಾರೆ. ಕ್ರಿಸ್ತ ಜನಿಸಿದ ದಿನವೆಂದು ಕ್ರೈಸ್ತರು ಡಿ.25 ರಂದು ಕ್ರಿಸ್‌ಮಸ್ ಆಚರಿಸುತ್ತಾರೆ. ಕ್ರಿಶ್ಚಿಯನ್ ಧರ್ಮದ ಜನರಿಗೆ ಇದು ಸಾಂಪ್ರದಾಯಿಕ ಹಬ್ಬ. ಪರಸ್ಪರ ಕ್ರಿಸ್‌ಮಸ್ ಕಾರ್ಡ್ ಉಡುಗೊರೆ ನೀಡುವುದು, ಚರ್ಚ್‌ಗೆ ಹೋಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುವುದು ಜೊತೆಗೆ ಮನೆಗಳನ್ನು ಕ್ರಿಸ್‌ಮಸ್ ಟ್ರೀ ಹಾಗೂ ಹೂಗಳಿಂದ ಅಲಂಕರಿಸುತ್ತಾರೆ. ಸಂಬಂಧಿಕರು, ಸ್ನೇಹಿತರು ಎಲ್ಲರೂ ಒಟ್ಟಿಗೆ ಸೇರಿ ವಿಶೇಷ ಆಹಾರ ಸವಿದು ಸಂಭ್ರಮಿಸುತ್ತಾರೆ.
ಆಚರಣೆ ಹೇಗೆ?
ಕ್ರಿಸ್‌ಮಸ್ ಹಬ್ಬದ ದಿನ ಪ್ರಭು ಯೇಸುವಿನ ನೆನಪಿಗಾಗಿ ಗೋಶಾಲೆಯನ್ನು ನಿರ್ಮಿಸುತ್ತಾರೆ. ಈ ಗೋಶಾಲೆಯು ಕುರುಬರೊಂದಿಗಿನ ಯೇಸುವಿನ ಬಾಲ್ಯವನ್ನು ಚಿತ್ರಿಸುತ್ತದೆ. ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುತ್ತಾರೆ. ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುತ್ತಾರೆ. ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುತ್ತಾರೆ. ಕ್ರಿಸ್ಮಸ್‌ಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವ ಮೂಲಕ ಕ್ರಿಸ್‌ಮಸ್ ಹಬ್ಬ ಆಚರಿಸುತ್ತಾರೆ.
ಗಿಫ್ಟ್ ವಿನಿಮಯ
ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್‌ಮಸ್ ಹಬ್ಬದ ವಿಶೇಷತೆಗಳಲ್ಲಿ ಒಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ನಂಬಿಕೆ. ‘ಸಾಂಟಾ ಕ್ಲಾಸ್’ ಅಂದ್ರೆ ‘ಸಂತಾ ನಿಕೋಲಾಸ್’. ಇವರು 4ನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತಾ ನಿಕೋಲಾಸ್ ಪ್ರಸಿದ್ಧ. ಹೀಗಾಗಿ, ಪ್ರತಿವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ.
ಕ್ರಿಸ್‌ಮಸ್ ಹಬ್ಬದ ಪ್ರಾಮುಖ್ಯತೆ
ಹಿಂದೆಲ್ಲ ಕ್ರಿಸ್‌ಮಸ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರೆ ಈಗ ಪ್ರಪಂಚದಾದ್ಯಂತ ಆಚರಿಸುವ ಹಬ್ಬವಾಗಿ ಮಾರ್ಪಟ್ಟಿದೆ. ಜನರನ್ನು ಪಾಪದಿಂದ ಮುಕ್ತಗೊಳಿಸಲು ಮತ್ತು ಜನರಿಗೆ ಒಳಿತನ್ನು ಮಾಡಲು ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದನು. ಜನರನ್ನು ಪಾಪದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಯೇಸುಕ್ರಿಸ್ತನು ತನ್ನ ಪ್ರಾಣವನ್ನು ತ್ಯಾಗ ಮಾಡಿದನು ಎಂಬ ನಂಬಿಕೆ ಕ್ರಿಸ್‌ಮಸ್ ಹಬ್ಬದ್ದು.
ಯೇಸುಕ್ರಿಸ್ತನನ್ನು ಬರಮಾಡಿಕೊಳ್ಳುವ ಪ್ರಕ್ರಿಯೆಯಾಗಿ ಮನೆಮನೆಗೂ ತೆರಳಿ ಹಾಡುಗಳನ್ನು ಹಾಡಲಾಗುತ್ತದೆ. ಕ್ರೆöÊಸ್ತ ಧರ್ಮೀಯರು ಕ್ರಿಸ್ಮಸ್‌ಗೆ ಸ್ವಲ್ಪವೇ ಮೊದಲು ಚರ್ಚ್ ಮೊದಲಾದ ಸ್ಥಳಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾರೆ. ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ.
ವೃದ್ಧರನ್ನು ಪಾದ್ರಿ ಕಾಲಿನಿಂದ ಒದೆಯುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾದ್ರಿಯ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಹಿಂದಿದ್ಯಾ ಐಸಿಸ್ ಕೈವಾಡ?
ಇಸ್ಲಾಮಾಬಾದ್: ಕ್ರಿಶ್ಚಿಯನ್ (Christian) ಕುಟುಂಬವೊಂದು ಧರ್ಮನಿಂದನೆ ಮಾಡಿದ ಆರೋಪದ ಮೇಲೆ ಉದ್ರಿಕ್ತ ಗುಂಪು ಪಾಕಿಸ್ತಾನದ (Pakistan) ಪಂಜಾಬ್ (Punjab) ಪ್ರಾಂತ್ಯದಲ್ಲಿ 21 ಚರ್ಚ್‌ಗಳನ್ನು (Church) ಧ್ವಂಸಗೊಳಿಸಿತ್ತು. ದಾಳಿಗೆ ಸಂಬಂಧಿಸಿಂತೆ 600 ಜನರ ಮೇಲೆ ಕೇಸ್ ದಾಖಲಾಗಿದ್ದು, ಪಾಕಿಸ್ತಾನದ ಅಧಿಕಾರಿಗಳು ಇಲ್ಲಿಯವರೆಗೆ 135 ಆರೋಪಿಗಳನ್ನು ಬಂಧಿಸಿದ್ದಾರೆ.
ಪಂಜಾಬ್‌ನ ರಾಜಧಾನಿ ಲಾಹೋರ್‌ನಿಂದ (Lahore) ಸುಮಾರು 130 ಕಿ.ಮೀ ದೂರದಲ್ಲಿರುವ ಫೈಸಲಾಬಾದ್ ಜಿಲ್ಲೆಯ ಜರನ್‌ವಾಲಾ ಪಟ್ಟಣದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಕೆರಳಿದ ಗುಂಪೊಂದು ಬುಧವಾರ 21 ಚರ್ಚ್ಗಳು ಹಾಗೂ ಹಲವಾರು ಕ್ರಿಶ್ಚಿಯನ್ನರ ಮನೆಗಳನ್ನು ಸುಟ್ಟುಹಾಕಿದೆ. ಕ್ರಿಶ್ಚಿಯನ್ ಸ್ಮಶಾನ ಮತ್ತು ಸ್ಥಳೀಯ ಸಹಾಯಕ ಆಯುಕ್ತರ ಕಚೇರಿಯನ್ನೂ ಧ್ವಂಸಗೊಳಿಸಿದೆ.
ಭಯೋತ್ಪಾದನೆ ಹಾಗೂ ಧರ್ಮನಿಂದನೆ ಆರೋಪದಡಿಯಲ್ಲಿ 600 ಶಂಕಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಂಜಾಬ್ ಉಸ್ತುವಾರಿ ಮಾಹಿತಿ ಸಚಿವ ಅಮೀರ್ ಮಿರ್ ತಿಳಿಸಿದ್ದಾರೆ. ಜರನ್‌ವಾಲಾದಲ್ಲಿ ಅಲ್ಪಸಂಖ್ಯಾತ ಸಮುದಾಯದ ಚರ್ಚ್‌ಗಳು ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ 135 ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ ಎಂಬ ಉಗ್ರಗಾಮಿ ಗುಂಪಿನ ಸದಸ್ಯರು ಕೂಡಾ ಸೇರಿದ್ದಾರೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಸದ್ಯ ಪ್ರದೇಶದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ. ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಚರ್ಚ್‌ಗಳು ಮತ್ತು ಮನೆಗಳ ಹೊರಗೆ ಪೊಲೀಸ್ ಮತ್ತು ರೇಂಜರ್‌ಗಳ ಭಾರೀ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಮಿರ್ ಹೇಳಿದ್ದಾರೆ. ಹಲವು ಕಟ್ಟಡಗಳನ್ನು ಧ್ವಂಸಗೊಳಿಸುವ ದುಷ್ಕರ್ಮಿಗಳ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನ್‌ವೆಜ್ ಪ್ರಿಯರಿಗೆ ಬ್ಯಾಡ್ ನ್ಯೂಸ್- ಚಿಕನ್ ಬೆಲೆಯಲ್ಲಿಯೂ ಏರಿಕೆ!
ನೈರೋಬಿ: ಉಪವಾಸ ಮಾಡಿದರೆ ಏಸು ಕ್ರಿಸ್ತನನ್ನು (Jesus) ಭೇಟಿಯಾಗಬಹುದು ಎಂಬ ನಕಲಿ ಧಾರ್ಮಿಕ ಬೋಧಕನ ಮಾತನ್ನು ಕೇಳಿ ಉಪವಾಸ (Fasting) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 403ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 12 ಜನರ ಶವ ಕೀನ್ಯಾದ (Kenya) ಶಕಹೊಲ (Shakahola) ಅರಣ್ಯದಲ್ಲಿ ಪತ್ತೆಯಾಗಿದೆ.
ಮೃತಪಟ್ಟವರಲ್ಲಿ ಹೆಚ್ಚಿನವರು ಗುಡ್ ನ್ಯೂಸ್ ಇಂಟರ್‌ನ್ಯಾಷನಲ್ ಚರ್ಚ್‌ನ ಸಂಸ್ಥಾಪಕ, ಬೋಧಕ ಪೌಲ್ ಮೆಕೆಂಜಿ ಅನುಯಾಯಿಗಳಾಗಿದ್ದರು. ಉಪವಾಸ ಮಾಡಿದರೆ ಏಸುಕ್ರಿಸ್ತನನ್ನು ಸೇರಬಹುದು ಎಂಬ ಆತನ ಮಾತನ್ನು ನಂಬಿದ ಅನುಯಾಯಿಗಳು ಉಪವಾಸ ಮಾಡಿದ್ದು, 403ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 610ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ನಾಪತ್ತೆ
ಆರೋಪಿ ಪಾದ್ರಿ 2017ರಲ್ಲಿ ಮಕ್ಕಳಿಗೆ ಶಾಲೆಗೆ ಹೋಗಬೇಡಿ, ಬೈಬಲ್ ಶಿಕ್ಷಣವನ್ನು ಮಾನ್ಯ ಮಾಡುವುದಿಲ್ಲ ಎಂದು ಪ್ರಚಾರ ಮಾಡಿದ್ದ. ಅಲ್ಲದೇ ಜನರಿಗೆ ಏಸುಕ್ರಿಸ್ತನ ಭೇಟಿ ಮಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿ ಜನರನ್ನು ಅರಣ್ಯಕ್ಕೆ ಕರೆಸಿ ಅಲ್ಲಿ ಉಪವಾಸ ಮಾಡಿಸುತ್ತಿದ್ದ. ಇದನ್ನೂ ಓದಿ: ಭಾರತಕ್ಕೆ ಸಂಬಂಧಿಸಿದ 105 ಪ್ರಾಚೀನ ವಸ್ತುಗಳನ್ನು ವಾಪಸ್ ನೀಡಿದ ಅಮೆರಿಕ
ಮೃತಪಟ್ಟವರ ಶವಗಳನ್ನು ಅಧಿಕೃತವಾಗಿ ಪರೀಕ್ಷೆ ನಡೆಸಿದಾಗ ಹೆಚ್ಚಿನವರು, ಅಪೌಷ್ಟಿಕತೆ, ಉಸಿರುಗಟ್ಟುವಿಕೆ ಮುಂತಾದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಶೋಧನೆಗಳನ್ನು ಮುಖ್ಯ ಸರ್ಕಾರಿ ರೋಗಶಾಸ್ತ್ರಜ್ಞ ಜೋಹಾನ್ಸೆನ್ ಓಡುರ್ ದೃಢಪಡಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ಹಸಿವಿನಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆಗೆ ಮತ್ತೆ ಹಾನಿ; ರಷ್ಯಾ-ಕ್ರಿಮಿಯಾ ಸಂಪರ್ಕ ಕಡಿತ
ಭೋಪಾಲ್: ಅನಾಮಿಕರ ಗುಂಪೊಂದು ಚರ್ಚ್‍ಗೆ (Church) ಬೆಂಕಿ ಹಚ್ಚಿ, ಗೋಡೆಯ ಮೇಲೆ ರಾಮ ಎಂದು ಬರೆದ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.
ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಸುಖತಾವಾ ಬ್ಲಾಕ್‍ನ ಚರ್ಚ್‍ನಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಚರ್ಚ್‍ನಲ್ಲಿದ್ದ ಧಾರ್ಮಿಕ ಗ್ರಂಥಗಳು, ಪಿಠೋಪಕರಣಗಳೆಲ್ಲವೂ ಬೆಂಕಿಗೆ ಆಹುತಿಯಾಗಿವೆ. ಜೊತೆಗೆ ಗೊಡೆಯ ಮೇಲೆ ಕಿಡಿಗೇಡಿಗಳು ರಾಮ (Ram) ಎಂದು ಬರೆದು ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಕಿಡಿಗೇಡಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 5 ವರ್ಷಗಳ ಹಿಂದೆ ನಿರ್ಮಿಸಲಾದ ಚರ್ಚ್‍ನ ಕಿಟಕಿಯ ಬಾಗಿಲನ್ನು ತೆಗೆದು, ಒಳಗೆ ಹೋಗಿ ರಾಮ್ ಎಂದು ಬರೆದು, ಬೆಂಕಿ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಖ್ಯ ಶಿಕ್ಷಕಿಯನ್ನೇ ಕೂಡಿಹಾಕಿದ ವಿದ್ಯಾರ್ಥಿನಿಯರು
ಕೊಪ್ಪಳ: ಬಡಕುಟುಂಬಗಳನ್ನೇ ಟಾರ್ಗೆಟ್ ಮಾಡಿ ಕ್ರೈಸ್ತ ಧರ್ಮಕ್ಕೆ (Christianity) ಮತಾಂತರಿಸುತ್ತಿದ್ದ ಪ್ರಕರಣವೊಂದು ಕೊಪ್ಪಳ (Koppala) ಜಿಲ್ಲೆಯ ಕಾರಟಗಿ ಪೊಲೀಸ್ ಠಾಣಾ (Police Station) ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕರಟಗಿಯ ರಾಮನಗರದಲ್ಲಿ ಗ್ರೇಸ್ ಪ್ರಾರ್ಥನಾ ಮಂದಿರ ನಡೆಸುತ್ತಿರುವ ಸ್ಯಾಮುಯೇಲ್, ಬಡವರನ್ನೇ ಟಾರ್ಗೆಟ್ ಮಾಡಿ ಕ್ರೈಸ್ತಧರ್ಮಕ್ಕೆ ಮತಾಂತರ ಮಾಡುತ್ತಿದ್ದ. ಹಿಂದೂ ದೇವತೆಗಳನ್ನ (Hindus God) ನದಿಯಲ್ಲಿ ಎಸೆಯುವಂತೆ ಹೇಳುತ್ತಿದ್ದ. ಅಲ್ಲದೇ ಮತಾಂತರವಾಗಿ ಹಿಂದೂ ದೇವರನ್ನ ಪೂಜೆ ಮಾಡಿದ್ರೆ ಕೊಲೆ, ಅತ್ಯಾಚಾರ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ 4 ವರ್ಷಗಳ ಹಿಂದೆಯೇ ಮತಾಂತರಗೊಂಡ ಬಡ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀರಾಮನಗರದಲ್ಲಿ ಗ್ರೇಸ್ ಪ್ರಾರ್ಥನಾ ಮಂದಿರವನ್ನ ನಡೆಸುತ್ತಿರುವ ಸ್ಯಾಮುಯೇಲ್ ಹಾಗೂ ಪತ್ನಿ ಹೆದರಿಸಿ, ಬೆದರಿಸಿ ಮತಾಂತರ ಮಾಡುತ್ತಿದ್ದರು. ಈ ವೇಳೆ ಚರ್ಚ್‌ನಲ್ಲಿ ಉಚಿತ ಸೇವೆ ನೀಡುವುದಾಗಿ ಬಡ ಕುಟುಂಬದ ಅಪ್ರಾಪ್ತೆಯನ್ನ ಕರೆಸಿ, ಮದುವೆಯಾಗುವುದಾಗಿ ನಂಬಿಸಿದ್ದ ಪಾಸ್ಟರ್ ಮಗ ಚಿರಂಜೀವಿ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ರಾಮನಗರ: ಅನಧಿಕೃತವಾಗಿ ಚರ್ಚ್ (Church) ನಿರ್ಮಾಣ ಮಾಡಿ ಸಾಮೂಹಿಕ ಪ್ರಾರ್ಥನೆ ಹೆಸರಲ್ಲಿ ಮತಾಂತರ (Conversion) ಮಾಡಲಾಗುತ್ತಿದೆ ಎಂದು ಆರೋಪಿಸಿ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಗ್ರಾಮಕ್ಕೆ ಸೇರಿದ ಸರ್ವೇ ನಂ. 253ರಲ್ಲಿ ಅಕ್ರಮವಾಗಿ ಪ್ರಾರ್ಥನಾ ಮಂದಿರ ನಿರ್ಮಿಸಿ, ಬೇರೆ ಬೇರೆ ಜಿಲ್ಲೆಗಳಿಂದ ವಾರಪೂರ್ತಿ ಜನರನ್ನು ಕರೆತಂದು ಅವರನ್ನು ಮತಾಂತರಗೊಳ್ಳಲು ಮನಃಪರಿವರ್ತನೆ ಮಾಡಲಾಗುತ್ತಿದೆ. ಪ್ರತಿದಿನ 200ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನ ಸೇರಿಸಿ ಡಿಜೆ ಮಾದರಿಯ ಧ್ವನಿವರ್ಧಕಗಳನ್ನು ಉಪಯೋಗಿಸಿಕೊಂಡು ಮತಾಂತರ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಮಹಾರಾಷ್ಟ್ರದ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿದ ಎಡಿಜಿಪಿ ಅಲೋಕ್ ಕುಮಾರ್
ಈ ಕೂಡಲೇ ಅಲ್ಲಿ ನಿರ್ಮಿಸಿರುವ ಅನಧಿಕೃತ ಪ್ರಾರ್ಥನಾ ಮಂದಿರವನ್ನು ತೆರವುಗೊಳಿಸಿ, ಅಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಯ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಗೋಮಾಳ ಜಾಗಗಳಲ್ಲಿ ಶಿಲುಬೆಗಳು ಮತ್ತು ಕ್ರೈಸ್ತ ಮೂರ್ತಿಗಳನ್ನ ನಿರ್ಮಾಣ ಮಾಡಿದ್ದು, ಅದನ್ನು ತೆರವು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಪೊಲೀಸ್ ಜೀಪ್‌ನಿಂದ ಬಿದ್ದು ಸಾವು
Live Tv
[brid partner=56869869 player=32851 video=960834 autoplay=true]