Tag: Chruch

  • ಚರ್ಚ್‌ಗೆ ನುಗ್ಗಿ ಕಿಡಿಗೇಡಿಗಳ ದಾಂಧಲೆ- ಒಳಗಿದ್ದ ವಸ್ತುಗಳು ಧ್ವಂಸ

    ಚರ್ಚ್‌ಗೆ ನುಗ್ಗಿ ಕಿಡಿಗೇಡಿಗಳ ದಾಂಧಲೆ- ಒಳಗಿದ್ದ ವಸ್ತುಗಳು ಧ್ವಂಸ

    ಬೆಂಗಳೂರು: ಕೆಂಗೇರಿ ಉಪನಗರದಲ್ಲಿನ ಚರ್ಚ್‌ಗೆ ನುಗ್ಗಿದ ದುಷ್ಕರ್ಮಿಗಳ ತಂಡ ಒಳಗಿದ್ದ ವಸ್ತುಗಳನ್ನು ಒಡೆದು ಧ್ವಂಸ ಮಾಡಿದ್ದಾರೆ. ಸ್ಯಾಟಲೈಟ್ ಟೌನ್‍ನಲ್ಲಿರುವ ಸೆಂಟ್ ಫ್ರಾನ್ಸಿಸ್ ಅಸಿಸ್ ಚರ್ಚ್‌ನಲ್ಲಿ ಈ ಘಟನೆ ನಡೆದಿದೆ.

    ತಡರಾತ್ರಿ ಚರ್ಚ್‍ನ ಕಾಂಪೌಂಡ್ ಗೇಟ್ ಹಾರಿ ಒಳ ನುಗ್ಗಿದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಚರ್ಚ್ ಒಳಗಿನ ಕಿಟಕಿ, ಬಾಗಿಲು, ಚೇರುಗಳು, ಮೈಕ್, ಅಲಂಕಾರಿಕ ವಸ್ತುಗಳನ್ನು ಸೇರಿದಂತೆ ಬಹುತೇಕ ವಸ್ತುಗಳು ಒಡೆದು ಧ್ವಂಸ ಮಾಡಿದ್ದಾರೆ.

    ಬೆಳಗ್ಗಿನ ಜಾವ ಚರ್ಚ್‌ನ ಸಿಬ್ಬಂದಿ ಬಾಗಿಲು ಓಪನ್ ಮಾಡಿದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಕೆಂಗೇರಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಚರ್ಚ್ ಒಳಗೆ ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಧ್ವಂಸದ ದೃಶ್ಯಗಳು ಸೆರೆಯಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ.

    ಯಾವ ಕಾರಣಕ್ಕೆ ಈ ರೀತಿ ಚರ್ಚ್‌ಗೆ ನುಗ್ಗಿ ವಸ್ತುಗಳನ್ನು ಒಡೆದು ಹಾಕಿದ್ದಾರೆ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಸದ್ಯ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ.

  • ಮಂಜಿನ ನಗರಿ ಮಡಿಕೇರಿಯಲ್ಲಿ ಕ್ರಿಸ್ಮಸ್ ಸಂಭ್ರಮ -ನಾಡಿನ ಜನತೆ ಸುಖ ಶಾಂತಿಯಿಂದ ಬಾಳಲ್ಲಿ ಎಂದು ಪ್ರಾರ್ಥನೆ

    ಮಂಜಿನ ನಗರಿ ಮಡಿಕೇರಿಯಲ್ಲಿ ಕ್ರಿಸ್ಮಸ್ ಸಂಭ್ರಮ -ನಾಡಿನ ಜನತೆ ಸುಖ ಶಾಂತಿಯಿಂದ ಬಾಳಲ್ಲಿ ಎಂದು ಪ್ರಾರ್ಥನೆ

    ಮಡಿಕೇರಿ: ಡಿಸೆಂಬರ್ 25ರಂದು ಜಗತ್ತಿನೆಲ್ಲೆಡೆ ಕ್ರಿಸ್ಮಸ್ ಸಂಭ್ರಮ ಮೇಳೈಸುತ್ತೆ. ಹಲವು ತಿಂಗಳಿಂದ ಕಾದು ಕುಳಿತ ಕ್ರಿಸ್ತನ ಆರಾಧಕರು ರಾತ್ರಿಯಿಂದಲೆ ವಿಶೇಷ ಪ್ರಾರ್ಥನೆಗಳ ಮೂಲಕ ಏಸುವಿಗೆ ನಮಿಸುತ್ತಿದ್ದಾರೆ.

    ಮಂಜಿನ ನಗರಿ ಮಡಿಕೇರಿಯಲ್ಲಿಯೂ ಸಂಭ್ರಮ ಸಡಗರದಿಂದ ಕ್ರಿಸ್ತನ ಹುಟ್ಟುಹಬ್ಬವನ್ನು ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ. ನಗರದ ಸಂತ ಮೈಕೆಲರ ಚರ್ಚ್ ನವವಧುವಿನಂತೆ ಸಿಂಗಾರಗೊಂಡಿದ್ದು, ಬಣ್ಣ ಬಣ್ಣದ ಲೈಟಿಂಗ್ ಬಲೂನ್‍ಗಳಿಂದ ಮೂಡಿದ ಚಿತ್ತಾರ ನಯನ ಮನೋಹರವಾಗಿದೆ.

    ಇಡೀ ಚರ್ಚ್ ಸುಂದರ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಬಾಂಧವರು ಆಗಮಿಸಿ ಪ್ರಾರ್ಥನೆ ಮಾಡುತ್ತಿದ್ದಾರೆ. ರಾತ್ರಿ 12 ಗಂಟೆಗೆ ಏಸುವನ್ನು ಗೋಧಳಿಕೆ ಇಟ್ಟು ಸಂಭ್ರಮಿಸಿದ ಭಕ್ತರು ವಿಶೇಷ ಪ್ರಾರ್ಥನೆ ಮೂಲಕ ಕ್ರಿಸ್ತನನ್ನು ಸ್ಮರಿಸಿದರು.

    ರಾತ್ರಿಯಿಂದ ಆರಂಭವಾಗಿರುವ ಕ್ರಿಸ್ಮಸ್ ಸಡಗರ ಇಂದು ಬೆಳಗ್ಗೆವರೆಗೂ ಮುಂದುವರಿದಿದೆ. ಅಷ್ಟೇ ಅಲ್ಲದೇ ನಾಡಿನ ಜನರಿಗೆ ಒಳ್ಳೆಯದು ಮಾಡಲ್ಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ನಂತರ ಮನೆಗೆ ತರೆಳಿ ಬಗೆ ಬಗೆಯ ಕೇಕ್, ವೈನ್, ಆಹಾರ ತಯಾರಿಸಿ ಬಂಧುಗಳೊಂದಿಗೆ ಸಹಭೋಜನ ಮಾಡಿ ಖುಷಿಪಡುತ್ತಾರೆ.

  • ಬೆಂಗಳೂರಿನಲ್ಲಿ ರಾತ್ರಿಯೇ ಮುಗಿಲು ಮುಟ್ಟಿದ ಕ್ರಿಸ್‍ಮಸ್ ಸಂಭ್ರಮ

    ಬೆಂಗಳೂರಿನಲ್ಲಿ ರಾತ್ರಿಯೇ ಮುಗಿಲು ಮುಟ್ಟಿದ ಕ್ರಿಸ್‍ಮಸ್ ಸಂಭ್ರಮ

    ಬೆಂಗಳೂರು: ಕ್ರಿಸ್‍ಮಸ್ ಅಂದ್ರೆನೇ ಕಲರ್ ಫುಲ್. ಸಿಲಿಕಾನ್ ಸಿಟಿ ಸೇರಿದಂತೆ ನಾಡಿನ ಚರ್ಚ್, ಕ್ರೈಸ್ತ ಬಾಂಧವರ ಮನೆಗಳು ಕಲರ್ ಫುಲ್ ಲೈಟಿಂಗ್ಸ್ ನಿಂದ ಜಗಮಗಿಸುತ್ತಿದೆ. ನಾಡಿನೆಲ್ಲೆಡೆ ಕ್ರಿಸ್‍ಮಸ್ ಸಂಭ್ರಮ ಜೋರಾಗಿದೆ.

    ಬೆಂಗಳೂರಿನಲ್ಲಿ ರಾತ್ರಿಯೇ ಕ್ರಿಸ್‍ಮಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಶಿವಾಜಿನಗರದ ಸೆಂಟ್ ಮೇರಿಸ್ ಬಸೆಲಿಕಾ, ಶಾಂತಿ ನಗರದ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ರಿಚ್ ಮಂಡ್ ರಸ್ತೆಯ ಸ್ಯಾಕ್ರೇಡ್ ಹಾರ್ಟ್ ಚರ್ಚ್ ಸೇರಿದಂತೆ ನಗರದಲ್ಲಿ 80 ರಿಂದ 85 ಚರ್ಚ್ ಗಳಿದ್ದು, ಬಣ್ಣ ಬಣ್ಣದ ಬೆಳಕುಗಳಿಂದ ಕಂಗೊಳಿಸುತ್ತಿವೆ.

    ಕೋಲಾರದ ಕೆಜಿಎಫ್‍ನಲ್ಲಿ ಕ್ರಿಸ್‍ಮಸ್ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ನಗರವೊಂದರಲ್ಲಿ 200ಕ್ಕೂ ಹೆಚ್ಚು ಚರ್ಚ್‍ಗಳಿದ್ದು, 60 ಸಾವಿರಕ್ಕೂ ಅಧಿಕ ಕ್ರಿಶ್ಚಿಯನ್ನರು ಇಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿ ಕೆಜಿಎಫ್ ನಗರವನ್ನು ಮಿನಿ ಇಂಗ್ಲೆಂಡ್, ರೋಂ ನಗರಿ ಎಂಬೆಲ್ಲಾ ಹೆಸರುಗಳಿಂದ ಕರೆಯಲಾಗುತ್ತೆ. ಇಲ್ಲಿ ಕ್ರಿಸ್‍ಮಸ್ ಹಬ್ಬವನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಣೆ ಮಾಡಲಾಗ್ತಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಂಧವ್ಯದ ಬೆಸುಗೆ ಕಂಡು ಬಂದಿದೆ. ಮೂಡುಬಿದಿರೆಯ ಪ್ರಸನ್ನ ಜೋಯೆಲ್ ಸಿಕ್ವೇರಾ, ಯತೀಶ್ ಕುಲಾಲ್, ಅಬ್ದುಲ್ ರವೂಫ್ ಎಂಬ ಮೂವರು ಯುವಕರು 15 ದಿನಗಳ ಕಾಲ ಶ್ರಮಿಸಿ 20 ಅಡಿ ಎತ್ತರ ಮತ್ತು 20 ಅಡಿ ಅಗಲದ ಅತಿ ದೊಡ್ಡ ಕ್ರಿಸ್‍ಮಸ್ ನಕ್ಷತ್ರವನ್ನು ರಚಿಸಿದ್ದಾರೆ. ಈ ನಕ್ಷತ್ರವನ್ನ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್‍ನ ಆವರಣದಲ್ಲಿ ನಿಲ್ಲಿಸಲಾಗಿದ್ದು ಜನರ ಆಕರ್ಷಣೆಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಸಿದ್ಧ ನಟಿಮಣಿಗೆ ಪ್ರೀತಿಸುವಂತೆ ಪೀಡಿಸುತ್ತಿದವನ ಬಂಧನ

    ಪ್ರಸಿದ್ಧ ನಟಿಮಣಿಗೆ ಪ್ರೀತಿಸುವಂತೆ ಪೀಡಿಸುತ್ತಿದವನ ಬಂಧನ

    ಬೆಂಗಳೂರು: ಖ್ಯಾತ ನಟಿಗೆ ಕಿರುಕುಳ ನೀಡುತ್ತಿದ್ದ ಬೆಂಗಳೂರಿನ ಯುವಕನೊಬ್ಬನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

    ಉದಯೋನ್ಮಕ ನಟಿ ರೆಬೋ ಮೋನಿಕಾ ಜಾನ್ ಗೆ ಸ್ನೇಹಿತ ಫ್ರಾಂಕ್ಲಿನ್ ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರತಿ ಭಾನುವಾರ ಚರ್ಚ್ ಗೆ ಪ್ರಾರ್ಥನೆ ಮಾಡಲು ಮೋನಿಕಾ ಹೋಗುತ್ತಿದ್ದರು. ಚರ್ಚ್ ಗೆ ಹೋಗುತ್ತಿದ್ದ ನಟಿಯನ್ನು ಯುವಕ ಒಂದು ವರ್ಷದಿಂದ ಫಾಲೋ ಮಾಡುತ್ತಿದ್ದ.

    ಪ್ರಾರ್ಥನೆ ಮಾಡಲು ಬರುತ್ತಿದವ ನಟಿಯ ಜೊತೆ ಪರಿಚಯ ಮಾಡಿಕೊಂಡ ಫ್ರಾಂಕ್ಲಿನ್ ಬಳಿಕ ಪ್ರೀತಿಸುವಂತೆ, ಮದುವೆಯಾಗುವಂತೆ ಪೀಡಿಸುತ್ತಿದ್ದನು. ಆದರೆ ಇದನ್ನು ನಿರಾಕರಣೆ ಮಾಡಿ ಒಮ್ಮೆ ನಟಿ ಯುವಕನಿಗೆ ಎಚ್ಚರಿಕೆ ನೀಡಿದ್ದರು.

    ಯುವಕ ನಟಿಯ ಫೋನ್ ನಂಬರ್ ಕಲೆಕ್ಟ್ ಮಾಡಿ ಆಕೆಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದನು. ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ನನ್ನನ್ನು ಮದುವೆಯಾಗಬೇಕು ಎಂದು ಮೆಸೇಜ್ ಮಾಡುತ್ತಿದ್ದನು. ನಟಿಯ ಫೋನ್ ನಂಬರ್ ಮಾತ್ರವಲ್ಲದೆ ಆಕೆಯ ಕುಟುಂಬದ ಮಾಹಿತಿ, ಫೋನ್ ನಂಬರ್ ಕೂಡ ಕಲೆಕ್ಟ್ ಮಾಡಿದ್ದನು.

    ನಟಿಯ ಮಾತನ್ನು ಕೇಳದೆ ಮದುವೆಯಾಗುವಂತೆ ಪೀಡಿಸುತ್ತಿದ್ದರಿಂದ ಬೇಸತ್ತ ಮೋನಿಕಾ ಮಡಿವಾಳ ಪೊಲೀಸರಿಗೆ ದೂರು ನೀಡಿದ್ದರು. ನಟಿ ಕೊಟ್ಟ ದೂರು ಆಧರಿಸಿ 28 ವರ್ಷದ ಫ್ರಾಂಕ್ಲಿನ್ ವಿಸಿಲ್‍ನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

    ಮೋನಿಕಾ ಜೇಕಬ್ ‘ಇಂಟೇ ಸ್ವರ್ಗರಾಜ್ಯಂ’ ಅನ್ನೋ ಮಲೆಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನಷ್ಟು ಚಲನಚಿತ್ರಗಳಲ್ಲಿ ನಟನೆ ಪ್ರಾರಂಭ ಮಾಡಿದ್ದಾರೆ. ಫ್ರಾಂಕ್ಲಿನ್ ಬಸವನಗುಡಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದಾನೆ.