Tag: christmas

  • ಕ್ರಿಸ್‍ಮಸ್ ಹಬ್ಬಕ್ಕೆ ಮಗಳು ತಂದೆಗೆ ನೀಡಿದ ಗಿಫ್ಟ್ ಲಿಸ್ಟ್ ವೈರಲ್

    ಕ್ರಿಸ್‍ಮಸ್ ಹಬ್ಬಕ್ಕೆ ಮಗಳು ತಂದೆಗೆ ನೀಡಿದ ಗಿಫ್ಟ್ ಲಿಸ್ಟ್ ವೈರಲ್

    ನವದೆಹಲಿ: ಮುಂದಿನ ತಿಂಗಳು ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಿದ್ದೇವೆ. ಈ ಮಧ್ಯೆ 10 ವರ್ಷದ ಬಾಲಕಿಯೊಬ್ಬಳು ತನ್ನ ತಂದೆಗೆ ಬರೆದುಕೊಟ್ಟ ಗಿಫ್ಟ್ ಲಿಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಟ್ವಿಟ್ಟರ್ ಬಳಕೆದಾರ ಜಾನ್ಸನ್ ಎಂಬವರ ಮಗಳು ತನ್ನದೇ ಕೈಬರಹದಲ್ಲಿ 26 ದುಬಾರಿ ಬೆಲೆಯ ವಸ್ತುಗಳ ಹೆಸರು ಬರೆದುಕೊಂಡಿದ್ದಾಳೆ. ಐಫೋನ್ 11, ಮ್ಯಾಕ್ ಬುಕ್ ಏರ್, ಚಾನೆಲ್ ಪರ್ಸ್, ಗುಚಿ ಸ್ಲೈಡರ್ಸ್, ಜೀವಂತ ಮೊಲ ಹಾಗೂ ಸುಮಾರು 2 ಲಕ್ಷದಷ್ಟು ಹಣ ಮೊದಲಾದವುಗಳು ಸೇರಿ ಒಟ್ಟು 26 ವಸ್ತುಗಳನ್ನು ಬರೆದು ಆ ಲಿಸ್ಟನ್ನು ತಂದೆ ಕೊಟ್ಟು ಇವುಗಳನ್ನು ತನಗೆ ಉಡುಗೊರೆಯಾಗಿ ನೀಡಬೇಕೆಂದು ಹೇಳಿದ್ದಾಳೆ.

    https://twitter.com/a_johnson412/status/1194689352992903169?ref_src=twsrc%5Etfw%7Ctwcamp%5Etweetembed%7Ctwterm%5E1194689352992903169&ref_url=https%3A%2F%2Fwww.indiatoday.in%2Ftrending-news%2Fstory%2Fiphone-11-chanel-purse-real-bunny-4000-10-yr-old-girl-s-christmas-wish-list-is-viral-seen-yet-1620012-2019-11-18

    ಈ ಲಿಸ್ಟನ್ನು ಜಾನ್ಸನ್ ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ತನ್ನ 10 ವರ್ಷದ ಮಗಳು ಆಕೆಯ ಮನಸ್ಸಿಗೆ ತೋಚಿದ್ದೆಲ್ಲವೂ ಈ ಕ್ರಿಸ್ ಮಸ್ ಲಿಸ್ಟ್ ನಲ್ಲಿದೆ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಇಲ್ಲಿಯವರೆಗೆ ಸುಮಾರು 24 ಸಾವಿರ ಮಂದಿ ರಿ-ಟ್ವೀಟ್ ಮಾಡಿದ್ರೆ, ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೇ ಸಾವಿರಾರು ಬಾಲಕಿಯ ಪರ-ವಿರೋಧ ಕಾಮೆಂಟ್ ಗಳು ಬರುತ್ತಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು, ಆಕೆಗೆ ನಿಜವಾಗಲೂ ಏನು ಬೇಕೆಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾಳೆ. ಅಲ್ಲದೆ ಅದನ್ನು ಹೇಗೆ ಕೇಳಬೇಕೋ ಹಾಗೆಯೇ ಕೇಳಿದ್ದಾಳೆ. ತುಂಬಾ ಇಷ್ಟವಾಯಿತು ಎಂದು ಬರೆದುಕೊಂಡಿದ್ದಾರೆ.

    https://twitter.com/itsarifitz/status/1195039103126888448?ref_src=twsrc%5Etfw%7Ctwcamp%5Etweetembed%7Ctwterm%5E1195039103126888448&ref_url=https%3A%2F%2Fwww.indiatoday.in%2Ftrending-news%2Fstory%2Fiphone-11-chanel-purse-real-bunny-4000-10-yr-old-girl-s-christmas-wish-list-is-viral-seen-yet-1620012-2019-11-18

  • ಚರ್ಚ್ ಗೆ ತೆರಳಿದ್ದ ಯುವಕನ ಕೊಲೆ- ಕ್ರಿಸ್‍ಮಸ್ ಹಬ್ಬದಂದೇ ಹರಿಯಿತು ರಕ್ತ..!

    ಚರ್ಚ್ ಗೆ ತೆರಳಿದ್ದ ಯುವಕನ ಕೊಲೆ- ಕ್ರಿಸ್‍ಮಸ್ ಹಬ್ಬದಂದೇ ಹರಿಯಿತು ರಕ್ತ..!

    ಬೆಂಗಳೂರು: ಕ್ರಿಸ್‍ಮಸ್ ಹಬ್ಬಕ್ಕೆಂದು ಚರ್ಚ್ ಗೆ ತೆರಳಿದ್ದ ಯುವಕನೊಬ್ಬನನ್ನು ಗೆಳೆಯರೇ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಡಿಜೆ ಹಳ್ಳಿಯ ದೊಡ್ಡಣ್ಣ ನಗರ ನಿವಾಸಿ ಜಗದೀಶ್ ಕುಮಾರ್ ಮೃತ ದುರ್ದೈವಿ. ಈತ ಡಿ.24 ರಂದು ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ರಾತ್ರಿ ಚರ್ಚ್ ಗೆ ತೆರಳಿದ್ದನು. ಆದರೆ ಕತ್ತಲಾದರೂ ಮನೆಗೆ ಬಂದಿರಲಿಲ್ಲ. ಕೊನೆಗೆ ಜಗದೀಶ್ ನನ್ನು ಹುಡುಕಿಕೊಂಡು ಕುಟುಂಬದವರು ಹೋಗಿದ್ದಾರೆ. ಆಗ ಚರ್ಚ್ ನ ಕೂಗಳತೆ ದೂರದಲ್ಲೇ ಜಗದೀಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ತಕ್ಷಣ ಕುಟುಂಬಸ್ಥರು ಜಗದೀಶ್ ನನ್ನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಗದೀಶ್ ಮೃತ ಪಟ್ಟಿದ್ದಾನೆ.

    ಚರ್ಚ್ ಗೆ ತೆರಳಿದ್ದ ಜಗದೀಶ್ ಕುಮಾರ್ ಮನೆಗೆ ಬರುವಾಗ ಕಂಠಪೂರ್ತಿ ಕುಡಿದಿದ್ದನು. ಈ ವೇಳೆ ಅದೇ ಏರಿಯಾದ ನಿವಾಸಿ ಅರುಣ್ ಎಂಬಾತ ಚರ್ಚ್ ಮುಂದೆ ನಡೆದು ಹೋಗುತ್ತಿದ್ದವನು ಜಗದೀಶ್‍ನನ್ನು ನೋಡಿ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಕುಡಿತದ ಅಮಲಿನಲ್ಲಿ ಜಗದೀಶ್ ಅಲ್ಲೇ ಇದ್ದ ರಾಡ್‍ನಿಂದ ಅರುಣ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಅಲ್ಲಿಂದ ಅರುಣ್ ಪರಾರಿಯಾಗಿದ್ದು, ತನ್ನ ಗೆಳೆಯರಾದ ಶರತ್, ಅಪ್ಪು ಹಾಗೂ ಜಾನ್ ಪೀಟರ್ ಜೊತೆ ಬಂದು ಚರ್ಚ್ ಮುಂಭಾಗ ನಿಂತಿದ್ದ ಜಗದೀಶ್ ಮೇಲೆ ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಕುಸಿದು ಬೀಳುತಿದ್ದಂತೆಯೇ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಮೃತನ ಸಂಬಂಧಿ ರವಿ ಕುಮಾರ್ ತಿಳಿಸಿದ್ದಾರೆ.

    ತೀವ್ರವಾಗಿ ಗಾಯಗೊಂಡಿದ್ದ ಜಗದೀಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಡಿಜೆ ಹಳ್ಳಿ ಪೊಲೀಸರು ಅರುಣ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

    ಜಗದೀಶ್ ಕುಮಾರ್ ಒಂದು ಕಾಲದಲ್ಲಿ ಇದೇ ಏರಿಯಾದಲ್ಲಿ ಪೊರ್ಕಿಯಾಗಿದ್ದು, ಮೇಲ್ನೋಟಕ್ಕೆ ಕುಡಿತದ ಅಮಲಿನಲ್ಲಿ ಕೊಲೆಯಾದರೂ ಹಳೇ ವೈಷಮ್ಯಕ್ಕೆ ನಡೆದಿರಬಹುದು ಅಂತ ಪೊಲೀಸರು ಶಂಕಿಸಿದ್ದಾರೆ. ಆದ್ರೆ ತನಿಖೆಯಿಂದಷ್ಟೇ ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    -ಬಿಗ್ ಮನೆಯಲ್ಲಿ ಯಾರಿಗೂ ಗೊತ್ತಾಗಲಿಲ್ಲ!

    ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಅಕ್ಷತಾ ಮತ್ತು ರಾಕೇಶ್ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅಕ್ಷತಾ ಅವರು ಕ್ರಿಸ್ ಮಸ್ ಪ್ರಯುಕ್ತ ರಾಕೇಶ್ ಕೊಟ್ಟ ಉಡುಗೊರೆಯನ್ನು ಮೊದಲು ನಿರಾಕರಿಸಿ ಬಳಿಕ ಎಲ್ಲರೂ ಮಲಗಿದ ನಂತರ ತೆಗೆದುಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಕ್ರಿಸ್‍ಮಸ್ ಪ್ರಯುಕ್ತ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆಲ್ಲರೂ ಸಾಂತಾ ಆಗಿದ್ದರು. ಆದ್ದರಿಂದ ಬಿಗ್‍ಬಾಸ್ ಸ್ಪರ್ಧಿಗಳೆಲ್ಲರಿಗೂ ಒಂದು ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಕ್ ಎಂದರೆ ತಮ್ಮ ಬಳಿ ಇರುವ ಅಮೂಲ್ಯ ವಸ್ತುವನ್ನು ಇತರೆ ಸ್ಪರ್ಧಿಯೊಬ್ಬರಿಗೆ ಉಡುಗೊರೆ ರೂಪದಲ್ಲಿ ಕೊಡಬೇಕಿತ್ತು. ಉಡುಗೊರೆ ಕೊಟ್ಟ ಕಾರಣವನ್ನು ಎಲ್ಲರ ಮುಂದೆ ಹೇಳಿ ಕೊಡಬೇಕಿತ್ತು.

    ಅದೇ ರೀತಿ ಎಲ್ಲರೂ ತಮ್ಮ ಅಮೂಲ್ಯ ವಸ್ತುಗಳನ್ನು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ರಾಕೇಶ್, ರಶ್ಮಿ ಅವರಿಗೆ ಕ್ರಿಸ್‍ಮಸ್ ಗಿಫ್ಟ್ ಆಗಿ ಒಂದು ಬೆಲ್ಟ್ ಕೊಟ್ಟಿದ್ದರು. ಎಲ್ಲ ಸ್ಪರ್ಧಿಗಳಿಗೂ ಉಡುಗೊರೆ ಸಿಕ್ಕಿತ್ತು. ಆದರೆ ಅಕ್ಷತಾಗೆ ಯಾರಿಂದಲೂ ಉಡುಗೊರೆ ಸಿಗಲಿಲ್ಲ. ಇದರಿಂದ ಅಕ್ಷತಾ ಬೇಸರ ಮಾಡಿಕೊಂಡಿದ್ದರು. ಕೊನೆಗೆ ರಾಕೇಶ್ ಮೇಕಪ್ ರೂಮಿಗೆ ತೆರಳಿ ಅಕ್ಷತಾ ಸೂಟ್‍ಕೇಸ್ ಮೇಲೆ ಗಿಫ್ಟ್ ಇಟ್ಟು ಬಂದಿದ್ದರು.

    ಮೇಕಪ್ ರೂಮಿನಲ್ಲಿ ಇರಿಸಿದ ಗಿಫ್ಟ್ ನ್ನು ನಿವೇದಿತಾ ಗೌಡ ನೋಡಿದರು. ಗಿಫ್ಟ್ ಮೇಲೆ ಅಕ್ಷತಾ ಅಂತ ಬರೆಯಲಾಗಿತ್ತು. ಹಾಗಾಗಿ ನಿವೇದಿತಾ ಗೌಡ ನೇರವಾಗಿ ಅಕ್ಷತಾಗೆ ನೀಡಿದರು. ಆದರೆ ಅಕ್ಷತಾ ಉಡುಗೊರೆ ಮೇಲೆ ಬರೆದಿದ್ದ ಸಂದೇಶವನ್ನು ಇಟ್ಟುಕೊಂಡು ಕಾಣಿಕೆಯನ್ನು ರಾಕೇಶ್ ಸೂಟ್‍ಕೇಸ್ ನಲ್ಲಿ ವಾಪಸ್ ಇಟ್ಟಿದ್ದರು. ರಾಕೇಶ್ ತಮ್ಮ ಸ್ವೆಟರ್ ನ್ನು ಉಡುಗೊರೆಯಾಗಿ ಕೊಟ್ಟಿದ್ದರು.

    ಇದನ್ನು ನೋಡಿದ ರಾಕೇಶ್, ಇದು ಕ್ರಿಸ್ ಮಸ್ ಗಿಫ್ಟ್, ಯಾರು ಉಡುಗೊರೆಯನ್ನ ವಾಪಸ್ ಕೊಡಬಾರದು ಅಂತ ಪದೇ ಪದೇ ಅಕ್ಷತಾಗೆ ಹೇಳಿದರು. ಆದರೆ ಅಕ್ಷತಾ ನೀವು ಕನ್ನಡದಲ್ಲಿ ಬರೆದಿರುವ ಸಂದೇಶ ಸಾಕು ಎಂದು ಗಿಫ್ಟ್ ಪಡೆಯದೆ ಹೋದರು. ಬಳಿಕ ಬಿಗ್ ಮನೆಯಲ್ಲಿ ಲೈಟ್ ಆಫ್ ಆದ ಮೇಲೆ ಅಕ್ಷತಾ ರಾಕೇಶ್ ಕೊಟ್ಟ ಉಡುಗೊರೆಯನ್ನು ಪಡೆದುಕೊಂಡಿದ್ದಾರೆ.

    ರಾತ್ರಿ ವೇಳೆ ಅಕ್ಷತಾ ಗಿಫ್ಟ್ ತೆಗೆದುಕೊಂಡು ರಾಕೇಶ್ ಬರೆದ ಸಂದೇಶವನ್ನು ಬಿಗ್ ಬಾಸ್ ಕ್ಯಾಮೆರಾ ಮುಂದೆ ಓದಿ ಹೇಳಿದ್ದಾರೆ. “ಅಕ್ಷತಾ ನನಗೆ ಗೊತ್ತು, ಇದು ನಿನಗೆ ಬೇಕು ಅಂತ, ನೀನು ಇದನ್ನು ಕ್ಯಾಮೆರಾ ಮುಂದೆ ಬೇಕು ಎಂದು ಕೇಳುತ್ತಿದ್ದೆ. ನಮ್ಮ ಮಧ್ಯೆ ನಡೆಯುತ್ತಿರುವ ಕೋಲ್ಡ್ ವಾರ್ ಗೆ ಈ ಉಡುಗೊರೆಯಿಂದ ವಾವ್ ಸಿಗಲಿದೆ’ ಎಂದು ರಾಕೇಶ್ ಬರೆದಿದ್ದರು.

    ಅಕ್ಷತಾ ಬಿಗ್ ಮನೆಯಲ್ಲಿ ಕ್ಯಾಮೆರಾ ಮುಂದೆ ಹೋಗಿ ನನಗೆ ಸ್ವೆಟರ್ ಬೇಕು ಎಂದು ಕೇಳುತ್ತಿದ್ದರು. ಆದ್ದರಿಂದ ರಾಕೇಶ್ ಕ್ರಿಸ್‍ಮಸ್ ಪ್ರಯುಕ್ತ ಅಕ್ಷತಾಗೆ ಸ್ವೆಟರ್ ಕೊಟ್ಟಿದ್ದಾರೆ. ಕೊನೆಗೆ ಸ್ವೆಟರ್ ಕೊಟ್ಟ ರಾಕೇಶ್ ಗೆ ಅಕ್ಷತಾ ಧನ್ಯವಾದ ತಿಳಿಸಿದ್ದಾರೆ. ರಾತ್ರಿ ವೇಳೆ ಗಿಫ್ಟ್ ಪಡೆದುಕೊಂಡ ಕಾರಣ ಉಳಿದ ಸ್ಪರ್ಧಿಗಳಿಗೆ ಗೊತ್ತಾಗಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

    ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

    ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಸಂತಾಕ್ಲಾಸ್ ಡ್ರೆಸ್ ಧರಿಸಿ ಅನಾಥ ಮಕ್ಕಳೊಡನೆ ಮಗುವಾಗಿ ಸಂಭ್ರವಿಸಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

    ಸಂತಾಕ್ಲಾಸ್ ವೇಷ ಧರಿಸಿ ಮುಂಬೈನಲ್ಲಿರುವ ಆಶ್ರಯ ಚೈಲ್ಡ್  ಕೇರ್‌ಲ್ಲಿ  ಅನಾಥ ಮಕ್ಕಳೊಂದಿಗೆ ಈ ಬಾರಿ ಕ್ರಿಸ್ಮಸ್ ಆಚರಿಸಿದ್ದಾರೆ.

    ಮಕ್ಕಳೊಂದಿಗೆ ಮಗುವಾದ ಸಚಿನ್ ಮಕ್ಕಳ ಆಸೆಯಂತೆ ಅವರೊಂದಿಗೆ ಕ್ರಿಕೆಟ್ ಆಟವಾಡಿ ಖುಷಿಪಟ್ಟರು. ಅಲ್ಲದೆ ಮಕ್ಕಳ ಜೊತೆ ತಾವು ಮಕ್ಕಳಾಗಿ ಸಂತೋಷವಾಗಿ ಎಲ್ಲರೊಡನೆ ಬೆರೆತರು. ಬಳಿಕ ಎಲ್ಲಾ ಮಕ್ಕಳಿಗೂ ಉಡುಗೊರೆಯನ್ನು ಕೊಟ್ಟು ಸಂಭ್ರಮಿಸಿದ್ದಾರೆ.

    ಮಕ್ಕಳೊಡನೆ ಕಳೆದ ಕ್ಷಣವನ್ನು, ಅವರ ಸಂಭ್ರಮದ ಕ್ರಿಸ್ಮಸ್ ಆಚರಣೆಯ ವೀಡಿಯೋವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಸಚಿನ್ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಎಲ್ಲರಿಗೂ ಮೇರಿ ಕ್ರಿಸ್ಮಸ್. ಆಶ್ರಯ ಚೈಲ್ಡ್ ಕೇರ್‌ ಮಕ್ಕಳೊಂದಿಗೆ ಕಳೆದ ಸಮಯ ತುಂಬಾ ಅದ್ಭುತವಾಗಿತ್ತು. ಮಕ್ಕಳ ಮುಗ್ಧ ಮುಖಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರಿಸ್‍ಮಸ್ ಹಬ್ಬಕ್ಕೆ ಬಿಕಿನಿ ತೊಟ್ಟು ವಿಶ್ ಮಾಡಿದ ಹಾಟ್ ಬೆಡಗಿ ದಿಶಾ

    ಕ್ರಿಸ್‍ಮಸ್ ಹಬ್ಬಕ್ಕೆ ಬಿಕಿನಿ ತೊಟ್ಟು ವಿಶ್ ಮಾಡಿದ ಹಾಟ್ ಬೆಡಗಿ ದಿಶಾ

    ಮುಂಬೈ: ಬಾಲಿವುಡ್ ಹಾಟ್ ಬೆಡಗಿ ದಿಶಾ ಪಠಾಣಿ ಕ್ರಿಸ್‍ಮಸ್ ಹಬ್ಬಕ್ಕೆ ಬಿಕಿನಿ ತೊಟ್ಟು ತಮ್ಮ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

    ದಿಶಾ ಬಿಳಿ ಬಿಕಿನಿ ತೊಟ್ಟು ಸೋಫಾ ಮೇಲೆ ಕುಳಿತಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಫೋಟೋವನ್ನು ಪೋಸ್ಟ್ ಮಾಡಿ ಅದಕ್ಕೆ, “ಎಲ್ಲರಿಗೂ ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು” ಎಂದು ಕ್ಯಾಪ್ಷನ್ ನೀಡಿದ್ದಾರೆ.

    ದಿಶಾ ಅವರ ಈ ಪೋಸ್ಟ್ ನೋಡಿ ಕೆಲವರು ಹೊಗಳಿದರೆ, ಇನ್ನೂ ಕೆಲವರು ದಿಶಾ ಅವರ ಈ ಅವತಾರ ನೋಡಿ ದೆಹಲಿಯಲ್ಲಿ ಸಾಕಷ್ಟು ಚಳಿ ಇದೆ. ನಿಮಗೆ ಚಳಿ ಆಗುತ್ತಿಲ್ಲವೇ ಎಂದು ಪ್ರಶ್ನಿಸಿ ಕಾಲೆಳೆದಿದ್ದಾರೆ.

    ಈ ಹಿಂದೆ ದೀಪಾವಳಿ ಹಬ್ಬದಂದು ದಿಶಾ ಗೋಲ್ಡನ್ ಲೆಹೆಂಗಾ ಧರಿಸಿ ಅದಕ್ಕೆ ಒಳಉಡುಪು ಹಾಕಿ ಕೈಯಲ್ಲಿ ದೀಪ ಹಿಡಿದು ಫೋಟೋಗೆ ಪೋಸ್ ನೀಡಿದ್ದರು. ಹೋಟೆಲ್‍ನ ರೂಂವೊಂದರಲ್ಲಿ ದಿಶಾ ಫೆಸ್ಟಿವ್ ಲುಕ್‍ನಲ್ಲಿ ಈ ರೀತಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು.

    ದಿಶಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ. ಹಾಗಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ದಿಶಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.

     

    View this post on Instagram

     

    Merry Christmas to all????‍♀️????

    A post shared by disha patani (paatni) (@dishapatani) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೂನಂ ಪಾಂಡೆಯಿಂದ ಕ್ರಿಸ್‍ಮಸ್‍ಗಾಗಿ ಸಾಂತಾ ಅವತಾರದಲ್ಲಿ ಸೆಕ್ಸಿ ವಿಡಿಯೋ

    ಪೂನಂ ಪಾಂಡೆಯಿಂದ ಕ್ರಿಸ್‍ಮಸ್‍ಗಾಗಿ ಸಾಂತಾ ಅವತಾರದಲ್ಲಿ ಸೆಕ್ಸಿ ವಿಡಿಯೋ

    ಹೈದರಾಬಾದ್: ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ತಮ್ಮ ಹಾಟ್ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ. ಆದ್ದರಿಂದ ತಮ್ಮ ಹಾಟ್ ಫೋಟೋ, ವಿಡಿಯೋ ಮೂಲಕ ಸುದ್ದಿಯಾಗುತ್ತಾರೆ. ಈ ಮತ್ತೆ ಕ್ರಿಸ್‍ಮಸ್ ಪ್ರಯುಕ್ತ ಒಂದು ಸೆಕ್ಸಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

    ಕ್ರಿಸ್‍ಮಸ್ ಗೆ ಹಬ್ಬಕ್ಕೆ ಸಿನಿತಾರೆಯರು ಶುಭಾಶಯ ಕೋರುತ್ತಾರೆ. ಕೆಲವರು ವಿಭಿನ್ನ ರೀತಿ ವಿಶ್ ಮಾಡುತ್ತಾರೆ. ಹೀಗಾಗಿ ನಟಿ ಪೂನಂ ಪಾಂಡೆ ಹಾಟ್ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಕ್ರಿಸ್‍ಮಸ್ ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

    ನಟಿ ಪೂನಂ ಪಾಂಡೆ ಕ್ರಿಸ್‍ಮಸ್ ಕ್ಕಿಂತ ಹಿಂದಿನ ದಿನವೇ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಬಿಕಿನಿ ತೊಟ್ಟು ಅದರ ಮೇಲೆ ಕೆಂಪು ಅಥವಾ ಬಿಳಿ ಬಣ್ಣದ ಕ್ರಿಸ್‍ಮಸ್ ಶರ್ಟ್ ಧರಿಸಿದ್ದಾರೆ. ಒಂದು ಸಾಂತಾ ಟೋಪಿಯನ್ನು ಹಾಕಿದ್ದು, ಪೂನಂ ಬೆಡ್ ಮೇಲೆ ಮಲಗಿ ಅಲ್ಲಿಂದ ಹಾಡು ಹೇಳಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಬಳಿಕ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ಬಟ್ಟೆಯನ್ನು ಬಿಚ್ಚಲು ಮುಂದಾಗಿದ್ದಾರೆ. ಆಗ ಶರ್ಟ್ ಅವರ ತಲೆಗೆ ಸಿಲುಕಿಕೊಂಡಿರುವುದನ್ನು ವಿಡಿಯೋ ದಲ್ಲಿ ಕಾಣಬಹುದಾಗಿದೆ.

    ಪೂನಂ ಪಾಂಡೆಯ ಈ ಸೆಕ್ಸಿ ವಿಡಿಯೋವನ್ನು ಯೂಟ್ಯೂಬ್ ಅಪ್ಲೋಡ್ ಮಾಡಿದ ಒಂದೇ ದಿನದಲ್ಲಿ 2.4 ಲಕ್ಷ ವೀವ್ಸ್ ಆಗಿದೆ. ಈ ವಿಡಿಯೋ ಜೊತೆಗೆ ಪೂನಂ “ಟ್ವಿಟ್ಟಿಗರ ಬೇಡಿಕೆಯ ಮೇರೆಗೆ ಅವರಿಗಾಗಿ ಈ ವಿಡಿಯೋ” ಎಂದು ಟ್ವೀಟ್ ಮಾಡಿ ವಿಡಿಯೋ ಲಿಂಕ್ ಮಾಡಿದ್ದಾರೆ.

    ಈ ವರ್ಷ ಮಾತ್ರವಲ್ಲದೇ ಪ್ರತಿ ವರ್ಷ ಪೂನಂ ಪಾಂಡೆ, ಕ್ರಿಸ್‍ಮಸ್ ದಿನ ಸೆಕ್ಸಿ ಫೋಟೋ ಅಥವಾ ವಿಡಿಯೋವನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅದೇ ರೀತಿ ಈ ವರ್ಷವೂ ಕ್ರಿಸ್‍ಮಸ್ ಗಾಗಿ ಸಾಂತಾ ಅವತಾರದಲ್ಲಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

    https://twitter.com/iPoonampandey/status/1077468190500900864

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಯನ್ನ ಬೆಸ್ಟ್ ಸಾಂತಾ ಅಂದು ಕ್ರಿಸ್‍ಮಸ್‍ಗೆ ವಿಶ್ ಮಾಡಿದ್ರು ಯಶ್

    ಪತ್ನಿಯನ್ನ ಬೆಸ್ಟ್ ಸಾಂತಾ ಅಂದು ಕ್ರಿಸ್‍ಮಸ್‍ಗೆ ವಿಶ್ ಮಾಡಿದ್ರು ಯಶ್

    ಬೆಂಗಳೂರು: ತನ್ನ ಕೆಜಿಎಫ್ ಚಿತ್ರ ದೇಶ-ವಿದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಹೊತ್ತಲ್ಲೇ ನಾಡಿನಾದ್ಯಂತ ಇಂದು ಕ್ರಿಸ್ ಮಸ್ ಹಬ್ಬ ಆಚರಿಸುವ ದಿನವೂ ಬಂದಿದೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಅವರು ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    ತನ್ನ ಪತ್ನಿ ರಾಧಿಕಾ ಪಂಡಿತ್ ಜೊತೆಗಿರುವ ಸೆಲ್ಫಿ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಯಶ್, ನನ್ನ ಪತ್ನಿಯೇ ನನಗೆ ಬೆಸ್ಟ್ ಸಾಂತಾ ಎಂದು ಹೇಳಿದ್ದಾರೆ.

    ಪೋಸ್ಟ್ ನಲ್ಲೇನಿದೆ..?
    ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನನ್ನ ಪತ್ನಿಯೇ ನನ್ನ ಬೆಸ್ಟ್ ಸಾಂತಾ ಹೇಳಿಕೊಂಡಿದ್ದಾರೆ. ಪುಟ್ಟ ಕಂದಮ್ಮಳನ್ನು ಉಡುಗೊರೆಯಾಗಿ ನೀಡಿ ಈ ಬಾರಿಯ ಕ್ರಿಸ್ ಮಸ್ ಹಬ್ಬವನ್ನು ಅತ್ಯಂತ ಸುಂದರವಾಗಿ ನನಗೆ ಆಚರಿಸಲು ಅವಕಾಶ ಮಾಡಿಕೊಟ್ಟ ನನ್ನ ಸಾಂತಾಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ಕೆಜಿಎಫ್ ಚಿತ್ರದ 4 ದಿನದ ಕಲೆಕ್ಷನ್ ಎಷ್ಟು ಗೊತ್ತೆ?

    ಮನೆಗೆ ಹೋಗೋದೆ ಖುಷಿ:
    ತನ್ನ ಅಭಿನಯದ ಕೆಜಿಎಫ್ ಚಿತ್ರ ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿದ್ದು, ಈ ಬೆನ್ನಲ್ಲೇ ಅಮೆರಿಕ ಮೂಲದ ಯೂ ಟ್ಯೂಬ್ ಚಾನೆಲ್ ನವರು ಯಶ್ ಅವರನ್ನು ವಿಡಿಯೋ ಮೂಲಕ ಸಂದರ್ಶನ ಮಾಡಿದ್ದರು.

    ಈ ವೇಳೆ ರಾಕಿ, ಕೆಜಿಎಫ್ ಗಿಂತಲೂ ದೊಡ್ಡ ಖುಷಿ ನನಗೆ ಮನೆಗೆ ಹೋದಾಗ ಈಗ ಸಿಗ್ತಿದೆ. ‘ಕೆಲಸದ ಒತ್ತಡ ಎಷ್ಟೇ ಇದ್ದರೂ ಇದೀಗ ನನಗೆ ಮನೆಗೆ ಹೋಗೋದೆ ಒಂದು ಖುಷಿ. ಯಾಕಂದ್ರೆ ನನ್ನ ಮನೆಯಲ್ಲಿ ನನಗೋಸ್ಕರ ಒಬ್ಬಳು ಪುಟ್ಟ ದೇವತೆ ಕಾಯುತ್ತಿರುತ್ತಾಳೆ. ಅವಳೊಂದಿಗೆ ನಾನು ಆಟ ಆಡಬಹುದು ಎಂಬುದೇ ನನಗೆ ಅತ್ಯಂತ ಖುಷಿ ಕೊಡುವ ವಿಚಾರವಾಗಿದೆ. ಅವಳು ನಂಗೆ ಒಂಥರಾ ಅದೃಷ್ಟ ದೇವತೆ’ ಎಂದು ಯಶ್ ತಮ್ಮ ಮಗಳ ಬಗ್ಗೆ ಹೇಳಿಕೊಂಡಿದ್ದರು. ಇದನ್ನೂ ಓದಿ: ತಮಿಳುನಾಡಲ್ಲೂ ಕೆಜಿಎಫ್ ಹವಾ – ತಮಿಳು ಚಿತ್ರಗಳನ್ನು ಹಿಂದಿಕ್ಕಿ ಸ್ಕ್ರೀನ್ ಹೆಚ್ಚಿಸಿಕೊಳ್ಳುತ್ತಿದ್ದಾನೆ ರಾಕಿ ಭಾಯ್

    ಇದೇ ತಿಂಗಳ 2ರಂದು ಭಾನುವಾರ ಯಶ್-ರಾಧಿಕಾ ದಂಪತಿಗೆ ಹೆಣ್ಣು ಮಗುವಾಗಿತ್ತು. ಹೆಣ್ಣು ಮಗುವಿನ ಸಂತಸದಲ್ಲಿರುವ ಹೊತ್ತಲ್ಲೇ ರಾಕಿಂಗ್ ಜೋಡಿಯ 2ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನೂ ಆಚರಿಸಿಕೊಂಡಿದ್ದು, “ಎರಡು ವರ್ಷದ ಹಿಂದೆ ಹೀಗಿದ್ದೆವು. ಇಂದು ಹೀಗಿದ್ದೇವೆ. ನಮ್ಮ ಜೀವನದ ಹೊಸ ಪ್ರಯಾಣಕ್ಕೆ ಸಿದ್ಧವಾಗಿದ್ದೇವೆ. ನನ್ನ ಪ್ರೀತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    ಇದಾದ ಬಳಿಕ ಇದೀಗ ಯಶ್ ಅಭಿನಯ ಕೆಜಿಎಫ್ ರಿಲೀಸ್ ಆಗಿದ್ದು, ಎಲ್ಲಡೆ ರಾಕಿ ಭಾಯ್ ಗೆ ಉಘೇ ಎನ್ನಲಾಗುತ್ತಿದೆ. ದೇಶ ಹಾಗೂ ಹೊರದೇಶದಲ್ಲಿ ಯಶಸ್ಸಿನ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ನಟ ಶಾರೂಖ್ ಅಭಿನಯದ ಝೀರೋ ಸಿನಿಮಾ ಕೂಡ ಅಂದೇ ತೆರೆಕಂಡಿದ್ದು, ಆದ್ರೆ ಝೀರೋವನ್ನು ಹಿಂದಿಕ್ಕಿ ಕೆಜಿಎಫ್ ಮುನ್ನುಗ್ಗುತ್ತಿದೆ.

    https://www.instagram.com/p/BrzIPfVgX6g/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರಿಸ್ ಮಸ್‍ಗಾಗಿ ಸಿಂಪಲ್ ಚಾಕ್ಲೇಟ್ ಕೇಕ್

    ಕ್ರಿಸ್ ಮಸ್‍ಗಾಗಿ ಸಿಂಪಲ್ ಚಾಕ್ಲೇಟ್ ಕೇಕ್

    ಈಗಾಗಲೇ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಸಿಂಪಲ್ ಕೇಕ್ ಹಾಗೂ ಎಗ್‍ಲೆಸ್ ಕೇಕ್ ಮಾಡಿದ್ದೀರಾ. ಚಾಕ್ಲೇಟ್ ಅಂದರೆ ಕೆಲವರಿಗೆ ತುಂಬಾ ಇಷ್ಟ. ಹಾಗಾಗಿ ನಿಮಗಾಗಿ ಚಾಕ್ಲೇಟ್ ಕೇಕ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಮೈದಾ – 1 ಕಪ್
    2. ಜೋಳದ ಹಿಟ್ಟು – 2-3 ಚಮಚ ( ಕಾರ್ನ್ ಫ್ಲೋರ್)
    3. ಸಕ್ಕರೆ – 100 ಗ್ರಾಂ
    4. ಎಣ್ಣೆ – 3-4 ಚಮಚ
    5. ಕೋಕೋ ಪೌಡರ್ – 2 ಚಮಚ
    6. ಬೇಕಿಂಗ್ ಪೌಡರ್ – 1 ಚಮಚ
    7. ಬೆಣ್ಣೆ- 50 ಗ್ರಾಂ
    8. ಕಂಡೆನ್ಸ್‍ಡ್ ಮಿಲ್ಕ್ – 100 ಎಂಎಲ್

    ಮಾಡುವ ವಿಧಾನ:
    * ಒಂದು ಬೌಲ್‍ಗೆ 2 ಚಮಚ ಕೋಕೋ ಪೌಡರ್ ಹಾಕಿ ಬಿಸಿ ನೀರು ಸೇರಿಸಿ ತಣ್ಣಗಾಗಲು ಬಿಡಿ.
    * ಒಂದು ಮಿಕ್ಸಿಂಗ್ ಬೌಲ್‍ಗೆ 50 ಗ್ರಾಂ ಬೆಣ್ಣೆ, ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಬೀಟ್ ಮಾಡಿ.
    * ಕಂಡೆನ್ಸಡ್ ಮಿಲ್ಕ್ ಹಾಕಿ ಬೀಟ್ ಮಾಡಿ. ಅದಕ್ಕೆ ಮೈದಾ, ಬೇಕಿಂಗ್ ಪೌಡರ್, ಜೋಳದ ಹಿಟ್ಟು ಹಾಕಿ ಮಿಕ್ಸ್ ಮಾಡಿ.
    * ಇದಕ್ಕೆ ಮಿಕ್ಸ್ ಮಾಡಿಟ್ಟಿದ್ದ ಕೋಕೋ ಪೌಡರ್ ಅನ್ನು ಸೇರಿಸಿ ಟ್ರೂಟಿ ಫ್ರೂಟಿ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಮಿಕ್ಸ್ ಮಾಡಿ.
    * ಗಂಟಿಲ್ಲದಂತೆ ಮಿಕ್ಸ್ ಆದ ಕೇಕ್ ಮಿಶ್ರಣವನ್ನು ಎಣ್ಣೆ ಸವರಿದ ಒಂದು ಅಗಲವಾದ ಪಾತ್ರೆಗೆ ಶಿಫ್ಟ್ ಮಾಡಿ.
    * ಖಾಲಿ ಕುಕ್ಕರ್‍ನಲ್ಲಿ ಮರಳು, ಉಪ್ಪು ಅಥವಾ ಪ್ಯಾನ್ ಸ್ಟ್ಯಾಂಡ್ ಇಟ್ಟು 5 ನಿಮಿಷ ಬಿಸಿ ಮಾಡಿ.
    * ಬಳಿಕ ಕೇಕ್ ಮಿಶ್ರಣ ಇರುವ ಪ್ಯಾನ್ ಅನ್ನು ಕುಕ್ಕರ್ ಒಳಗೆ ಇಟ್ಟು 30-40 ನಿಮಿಷ ಲೋ ಫ್ಲೇಮ್‍ನಲ್ಲಿ ಬೇಯಿಸಿ.
    * ಬೇಕಿದ್ದರೆ ಕೇಕ್ ಮಿಶ್ರಣಕ್ಕೆ ಮೇಲೆ ಡ್ರೈ ಫ್ರೂಟ್ಸ್ ಹಾಕಬಹುದು.
    * ಕೇಕ್ ಆದ ಬಳಿಕ ತಣ್ಣಗಾದ ಮೇಲೆ ಕಟ್ ಮಾಡಿ ಸೇವಿಸಿ.
    * ಬೇಕಿದ್ದಲ್ಲಿ ಇದಕ್ಕೆ ಗಾರ್ನಿಶ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರಿನಲ್ಲಿ ರಾತ್ರಿಯೇ ಮುಗಿಲು ಮುಟ್ಟಿದ ಕ್ರಿಸ್‍ಮಸ್ ಸಂಭ್ರಮ

    ಬೆಂಗಳೂರಿನಲ್ಲಿ ರಾತ್ರಿಯೇ ಮುಗಿಲು ಮುಟ್ಟಿದ ಕ್ರಿಸ್‍ಮಸ್ ಸಂಭ್ರಮ

    ಬೆಂಗಳೂರು: ಕ್ರಿಸ್‍ಮಸ್ ಅಂದ್ರೆನೇ ಕಲರ್ ಫುಲ್. ಸಿಲಿಕಾನ್ ಸಿಟಿ ಸೇರಿದಂತೆ ನಾಡಿನ ಚರ್ಚ್, ಕ್ರೈಸ್ತ ಬಾಂಧವರ ಮನೆಗಳು ಕಲರ್ ಫುಲ್ ಲೈಟಿಂಗ್ಸ್ ನಿಂದ ಜಗಮಗಿಸುತ್ತಿದೆ. ನಾಡಿನೆಲ್ಲೆಡೆ ಕ್ರಿಸ್‍ಮಸ್ ಸಂಭ್ರಮ ಜೋರಾಗಿದೆ.

    ಬೆಂಗಳೂರಿನಲ್ಲಿ ರಾತ್ರಿಯೇ ಕ್ರಿಸ್‍ಮಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಶಿವಾಜಿನಗರದ ಸೆಂಟ್ ಮೇರಿಸ್ ಬಸೆಲಿಕಾ, ಶಾಂತಿ ನಗರದ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ರಿಚ್ ಮಂಡ್ ರಸ್ತೆಯ ಸ್ಯಾಕ್ರೇಡ್ ಹಾರ್ಟ್ ಚರ್ಚ್ ಸೇರಿದಂತೆ ನಗರದಲ್ಲಿ 80 ರಿಂದ 85 ಚರ್ಚ್ ಗಳಿದ್ದು, ಬಣ್ಣ ಬಣ್ಣದ ಬೆಳಕುಗಳಿಂದ ಕಂಗೊಳಿಸುತ್ತಿವೆ.

    ಕೋಲಾರದ ಕೆಜಿಎಫ್‍ನಲ್ಲಿ ಕ್ರಿಸ್‍ಮಸ್ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ನಗರವೊಂದರಲ್ಲಿ 200ಕ್ಕೂ ಹೆಚ್ಚು ಚರ್ಚ್‍ಗಳಿದ್ದು, 60 ಸಾವಿರಕ್ಕೂ ಅಧಿಕ ಕ್ರಿಶ್ಚಿಯನ್ನರು ಇಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿ ಕೆಜಿಎಫ್ ನಗರವನ್ನು ಮಿನಿ ಇಂಗ್ಲೆಂಡ್, ರೋಂ ನಗರಿ ಎಂಬೆಲ್ಲಾ ಹೆಸರುಗಳಿಂದ ಕರೆಯಲಾಗುತ್ತೆ. ಇಲ್ಲಿ ಕ್ರಿಸ್‍ಮಸ್ ಹಬ್ಬವನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಣೆ ಮಾಡಲಾಗ್ತಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಂಧವ್ಯದ ಬೆಸುಗೆ ಕಂಡು ಬಂದಿದೆ. ಮೂಡುಬಿದಿರೆಯ ಪ್ರಸನ್ನ ಜೋಯೆಲ್ ಸಿಕ್ವೇರಾ, ಯತೀಶ್ ಕುಲಾಲ್, ಅಬ್ದುಲ್ ರವೂಫ್ ಎಂಬ ಮೂವರು ಯುವಕರು 15 ದಿನಗಳ ಕಾಲ ಶ್ರಮಿಸಿ 20 ಅಡಿ ಎತ್ತರ ಮತ್ತು 20 ಅಡಿ ಅಗಲದ ಅತಿ ದೊಡ್ಡ ಕ್ರಿಸ್‍ಮಸ್ ನಕ್ಷತ್ರವನ್ನು ರಚಿಸಿದ್ದಾರೆ. ಈ ನಕ್ಷತ್ರವನ್ನ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್‍ನ ಆವರಣದಲ್ಲಿ ನಿಲ್ಲಿಸಲಾಗಿದ್ದು ಜನರ ಆಕರ್ಷಣೆಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರಿಸ್ ಮಸ್ ಹಬ್ಬಕ್ಕೆ ಸಿಲಿಕಾನ್ ಸಿಟಿಗೆ ಬಂದ ಚೆಂದುಳ್ಳಿ ಚೆಲುವೆಯರು

    ಕ್ರಿಸ್ ಮಸ್ ಹಬ್ಬಕ್ಕೆ ಸಿಲಿಕಾನ್ ಸಿಟಿಗೆ ಬಂದ ಚೆಂದುಳ್ಳಿ ಚೆಲುವೆಯರು

    ಬೆಂಗಳೂರು: ಎಲ್ಲಾ ಹಬ್ಬಗಳಿಗಿಂತಾನೂ ಕ್ರಿಸ್ ಮಸ್ ಹೆಚ್ಚು ಕಲರ್ ಫುಲ್ ಆಗಿರುತ್ತೆ. ಫೆಸ್ಟ್ ಗೆ ಒಂದೇ ದಿನ ಮಾತ್ರ ಬಾಕಿಯಿದ್ದು, ಸಿಲಿಕಾನ್ ಸಿಟಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದರ ನಡುವೆ ಟ್ರೆಂಡಿ ಚೆಲುವೆಯರು ಎಂಟ್ರಿ ಕೊಟ್ಟು ಸಂಭ್ರಮವನ್ನು ರಂಗೇರಿಸಿದ್ದಾರೆ.

    ಡಿಸೆಂಬರ್ ಬಂದರೆ ಸಾಕು ಸಿಲಿಕಾನ್ ಸಿಟಿ ನವವಧುವಿನಂತೆ ಫಳಫಳ ಹೊಳೆಯುತ್ತೆ. ಸಿಲಿಕಾನ್ ಸಿಟಿ ಹುಡುಗಿಯರು ಅಷ್ಟೇ ಥ್ರೀಲ್ ಆಗಿ ಕ್ರಿಸ್ ಮಸ್‍ಗೆ ರೆಡಿಯಾಗುತ್ತಿದ್ದು, ರಂಗು ರಂಗಿನ ಗೌನ್‍ಗಳಿಗೆ ಕ್ಲೀನ್ ಬ್ಲೋಲ್ಡ್ ಆಗಿದ್ದಾರೆ. ರೆಡ್, ವೈಟ್ ಆಂಡ್ ಗ್ರೀನ್ ಗೌನ್ ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ.

    ರೆಡ್ ಗೌನ್ ಅನ್ನು ಸಂತಾ ಕ್ಲಾಸ್ ಸಿಂಬಲ್ ಆಗಿ, ವೈಟ್ ಡ್ರೆಸ್ ಅನ್ನು ಸ್ನೋ ಎಂದು ಹಾಗೂ ಗ್ರೀನ್ ಡ್ರೆಸ್ ಅನ್ನು ಕ್ರಿಸ್ ಮಸ್ ಟ್ರೀ ಎಂದು ಭಾವಿಸುತ್ತಿದ್ದಾರೆ. ಜೊತೆಗೆ ಚಾರ್ಮಿಂಗ್ ಬ್ಯೂಟಿಸ್, ತಮ್ಮದೇ ಸ್ಟೈಲ್ ನಲ್ಲಿ ರಾಂಪ್ ವಾಕ್ ಮಾಡಿ, ಬೆಡಗು ಭಿನ್ನಾಣವನ್ನು ಪ್ರರ್ದಶಿಸಿದ್ದಾರೆ.

    ಶಾಪಿಂಗ್ ಅಡ್ಡಗಳಲ್ಲಿ ಈ ವೆಸ್ಟರ್ನ್ ಗೌನ್ ಗಳು ಸಖತ್ ಸೌಂಡ್ ಮಾಡತ್ತಿವೆ. ಕಾಲೇಜು ಹುಡುಗಿಯರಿಂದ ಹಿಡಿದು ಮಹಿಳೆಯರು ಈ ರಂಗು ರಂಗಿನ ಗೌನ್ ಗಳಿಗೆ ಮಾರು ಹೋಗಿದ್ದಾರೆ. ಇವುಗಳು ಪಾರ್ಟಿವೇರ್ ಗೆ ಸೂಟ್ ಆಗಿದ್ದು, ಡಿಫರೆಂಟ್ ಆ್ಯಂಡ್ ಸ್ಟೈಲೀಶ್ ಲುಕ್ ನೀಡುತ್ತಿವೆ.

    ಲಾಂಗ್ ಆ್ಯಂಡ್ ಶಾರ್ಟ್ ಗೌನ್ ಗಳು ಟ್ರೆಂಡ್ ಆಗಿದ್ದು, ಇವುಗಳನ್ನು ತೊಟ್ಟು ಚೆಂದುಳ್ಳಿ ಚೆಲುವೆಯರು ಸಂತಾ ಕ್ಲಾಸ್ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಕ್ರಿಸ್ ಮಸ್‍ಗೆ ಗೌನ್ ಫ್ಯಾಷನ್ ಟ್ರೆಂಡ್ ಆಗಿದ್ದು, ಇವುಗಳು ಐಟಿ-ಬಿಟಿ ಹುಡುಗಿಯರ ಮೇಲೆ ಸವಾರಿ ಮಾಡುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv