Tag: christmas

  • ನೈಟ್ ಕರ್ಫ್ಯೂ ಬಗ್ಗೆ ಸದ್ಯಕ್ಕೆ ಚಿಂತನೆ ನಡೆಸಿಲ್ಲ: ಅಶೋಕ್

    ನೈಟ್ ಕರ್ಫ್ಯೂ ಬಗ್ಗೆ ಸದ್ಯಕ್ಕೆ ಚಿಂತನೆ ನಡೆಸಿಲ್ಲ: ಅಶೋಕ್

    ಬೆಂಗಳೂರು: ನೈಟ್ ಕರ್ಫ್ಯೂ ಬಗ್ಗೆ ಸದ್ಯಕ್ಕೆ ಚಿಂತನೆ ನಡೆಸಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಓಮಿಕ್ರಾನ್ ತಡೆಗೆ ನೈಟ್ ಕರ್ಫ್ಯೂ ಹೇರುವುದರ ಬಗ್ಗೆ ಯಾವುದೇ ಚಿಂತನೆಯನ್ನು ನಡೆಸಿಲ್ಲ. ಬದಲಿಗೆ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.

    ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಮಾರ್ಗಸೂಚಿ ಬಿಡುಗಡೆಗೊಳಿಸುವುದರ ಕುರಿತು ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಓಮಿಕ್ರಾನ್ ಆತಂಕದಿಂದಾಗಿ ಕ್ರಿಸ್ ಮಸ್ ಹಾಗೂ ಹೊಸವರ್ಷಕ್ಕೆ ನಿರ್ಬಂಧ ಅಗತ್ಯವಾಗಿದೆ. ಓಮಿಕ್ರಾನ್ ಬೇರೆ ಬೇರೆ ದೇಶದಲ್ಲಿ ಹೆಚ್ಚು ಹರಡುತ್ತಿದ್ದು, ಇಂದು ಬೆಂಗಳೂರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಲಹೆಯನ್ನು ಪಡೆಯಲಾಗಿದೆ. ಹೊಸವರ್ಷ ಆಚರಣೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.

    ಈಗಾಗಲೇ ಸಭೆ ಸಮಾರಂಭಗಳಿಗೆ 500 ಜನರು ಸೇರಬಹುದು ಎಂದು ಹೇಳಲಾಗಿದೆ. ಆದರೆ ಕ್ರಿಸ್‌ಮಸ್ ಸಂದರ್ಭದಲ್ಲಿ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುವವರ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ನಾಳೆಯೊಳಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

    ಹೊಸವರ್ಷ ಆಚರಣೆ ಸಂದರ್ಭದಲ್ಲಿ ಸ್ಟ್ರೀಟ್ ಸಂಭ್ರಮದ ಬಗ್ಗೆ ಮಾತನಾಡಿದ ಅವರು, ಸ್ಟ್ರೀಟ್ ಸಂಭ್ರಮದ ಬಗ್ಗೆ ಹೆಚ್ಚು ಭಯವಿದೆ. ಈ ಸಂದರ್ಭದಲ್ಲಿ ತಬ್ಬಿಕೊಂಡು ಮುದ್ದಾಡುವ ಸಂಭ್ರಮ ಜೋರಾಗಿರುತ್ತದೆ. ಇದರಿಂದಾಗಿ ಕೊರೊನಾ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಸ್ಟ್ರೀಟ್ ಸಂಭ್ರಮಕ್ಕೆ ಬ್ರೇಕ್ ಹಾಕುವ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗುವುದು ಎಂದರು. ದನ್ನೂ ಓದಿ: ದೇಶದಲ್ಲಿ 200 ಗಡಿ ದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

    ಎಂಜಿ ರೋಡ್, ಬ್ರಿಗೇಡ್ ರೋಡ್ ಸಂಭ್ರಮಕ್ಕೆ ನಿರ್ಬಂಧ ಹಾಕುವ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿಬಂಧನೆಯನ್ನು ತರುತ್ತೇವೆ. ಅದಕ್ಕೆ ಕಡಿವಾಣ ಹಾಕಬೇಕಾ ಅಥವಾ ನಿಬಂಧನೆ ಹೇರಬೇಕಾ ಎನ್ನುವುದರ ಕುರಿತು ಚರ್ಚೆ ನಡೆಸಲಾಗುವುದು. ಎಂದು ಮಾಹಿತಿ ನೀಡಿದರು.

  • ಮೇಘನಾ ಮನೆಯಲ್ಲಿ ಕ್ರಿಸ್‍ಮಸ್‍ಗೆ ಭರ್ಜರಿ ತಯಾರಿ – ಕಲರ್ ಫುಲ್ ಲೈಟಿಂಗ್ಸ್ ನೋಡಿ ರಾಯನ್ ಖುಷ್

    ಮೇಘನಾ ಮನೆಯಲ್ಲಿ ಕ್ರಿಸ್‍ಮಸ್‍ಗೆ ಭರ್ಜರಿ ತಯಾರಿ – ಕಲರ್ ಫುಲ್ ಲೈಟಿಂಗ್ಸ್ ನೋಡಿ ರಾಯನ್ ಖುಷ್

    ಬೆಂಗಳೂರು: ಕ್ರಿಸ್‍ಮಸ್ ಹಬ್ಬಕ್ಕೆ ಈ ಬಾರಿ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮನೆಯಲ್ಲಿ ಭರ್ಜರಿ ತಯಾರಿ ನಡೆಸಲಾಗುತ್ತಿದ್ದು ಸಿಂಗಾರಗೊಂಡಿರುವ ಮನೆಯಲ್ಲಿ ಮೇಘನಾ ಪ್ರೀತಿಯ ಮಗನೊಂದಿಗೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    meghana raj

    ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಹಿಂದೂ ಆಗಿದ್ದು, ಅವರ ತಾಯಿ ಪ್ರಮೀಳಾ ಜೋಷಾಯಿ ಕ್ರಿಶ್ಚಿಯನ್ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಮೇಘನಾ ಮನೆಯಲ್ಲಿ ಯಾವುದೇ ಹಿಂದೂ ಹಾಗೂ ಕ್ರಿಶ್ಚಿಯನ್ ಹಬ್ಬಗಳು ಬಂದಾಗ ಎರಡು ಹಬ್ಬವನ್ನು ಸಮನಾಗಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದನ್ನೂ ಓದಿ: ಮಗನ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಕರೀನಾ ವಿಶ್

    ಸದ್ಯ ಕ್ರಿಸ್‍ಮಸ್ ಹಬ್ಬಕ್ಕೆ ಇನ್ನೇನು ನಾಲ್ಕು ದಿನಗಳಷ್ಟೇ ಬಾಕಿ ಇದ್ದು, ಈ ಬಾರಿ ಹಬ್ಬಕ್ಕೆ ಮೇಘನಾ ರಾಜ್ ಮನೆಯನ್ನು ಸಖತ್ ಕಲರ್ ಫುಲ್ ಆಗಿ ಸಿಂಗರಿಸಲಾಗಿದೆ. ಇನ್ನೂ ಈ ಫೋಟೋವನ್ನು ಮೇಘನಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಲೈಟ್ ಹಾಗೂ ಸ್ಟಾರ್ಸ್‍ಗಳಿಂದ ಅಲಂಕಾರಗೊಳಿಸಲಾಗಿರುವ ಮನೆಯ ಮಧ್ಯ ಭಾಗದಲ್ಲಿ ಮೇಘನಾ ರಾಯನ್‍ನ್ನು ಎತ್ತಿಕೊಂಡಿದ್ದಾರೆ. ಫೋಟೋದಲ್ಲಿ ರಾಯನ್ ಮಂಕಿ ಕ್ಯಾಪ್ ಧರಿಸಿ ಕಲರ್ ಫುಲ್ ಆಗಿರುವ ಲೈಟಿಂಗ್ಸ್‍ನನ್ನೇ ಅಚ್ಚರಿಯಿಂದ ನೋಡುತ್ತಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ಜೊತೆಗೆ ಲವ್, ಲೈಫ್ ಮತ್ತು ಅದ್ಭುತವಾದ ಕ್ರಿಸ್‍ಮಸ್ ತಿಂಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಈ ಮುನ್ನ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಹಿಂದೂ ಹಾಗೂ ಕ್ರಿಶ್ಚಿಯನ್ ಎರಡು ಸಂಪ್ರದಾಯದಂತೆ ಮದುವೆಯಾಗಿದ್ದರು. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಈ ದಂಪತಿಯ ಪ್ರೀತಿಯ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರ ನಾಮಕರಣ ಮಾಡಲಾಗಿತ್ತು. ಅಲ್ಲದೇ ರಾಯನ್ ಎಂಬ ಹೆಸರು ಎಲ್ಲ ಧರ್ಮಕ್ಕೂ ಸೇರಿದೆ. ಬೇರೆ ಬೇರೆ ವರ್ಷನ್, ಬೇರೆ ಬೇರೆ ರೀತಿಯಲ್ಲಿ ಉಚ್ಛಾರಣೆ ಇರಬಹುದು, ಆದರೆ ಅರ್ಥ ಒಂದೇ. ರಾಯನ್ ಸರ್ಜಾ ಎಂದರೆ ಯುವರಾಜ ಎಂಬ ಅರ್ಥವಿದೆ ಎಂದು ಮೇಘನಾ ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಅಂತೀರೋ ರಮ್ಯಾ

  • ರಾಜ್ಯದಲ್ಲಿ ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ಸಾಧ್ಯತೆ

    ರಾಜ್ಯದಲ್ಲಿ ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಭೀತಿ ಮಧ್ಯೆ ಕೊರೊನಾ 3ನೇ ಅಲೆ ಆತಂಕ ಹೆಚ್ಚಾಗಿದೆ. ಹೆಮ್ಮಾರಿಗೆ ತಡೆ ಒಡ್ಡಲು ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ರಾಜ್ಯದಲ್ಲಿ ಡಿಸೆಂಬರ್ 22ರಿಂದ ಜನವರಿ 2ರವರೆಗೆ ಮತ್ತೆ ನೈಟ್ ಕರ್ಫ್ಯೂ ಜಾರಿಗೆ ಸಲಹೆ ನೀಡಿದೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಗೆ ಶಿಫಾರಸು ಮಾಡಿದ್ದು, ಈ ಹತ್ತು ದಿನಗಳ ಅವಧಿಯಲ್ಲಿ ಪಬ್, ರೆಸ್ಟೋರೆಂಟ್, ಮಾಲ್‍ಗಳಿಗೆ ಷರತ್ತು ವಿಧಿಸುವ ಸಾಧ್ಯತೆಯಿದೆ. ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‍ನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ನಿರ್ಬಂಧ ವಿಧಿಸುವಂತೆ ಶಿಫಾರಸು ಮಾಡಿದೆ. ಇದನ್ನೂ ಓದಿ: ರಾಜ್ಯ ವಿಶ್ವ ಮಟ್ಟದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರೇ ಹೇಳಿದ್ದಾರೆ: ಡಿಕೆಶಿ

    ದೇಗುಲ, ಚರ್ಚ್, ಮಸೀದಿಗಳಲ್ಲೂ ಕಠಿಣ ನಿಯಮ ಜಾರಿ ಮಾಡುವ ನಿರೀಕ್ಷೆಯಿದೆ. ಧಾರ್ಮಿಕ ಕೇಂದ್ರಗಳಲ್ಲಿ ಡಬಲ್ ಡೋಸ್ ಲಸಿಕೆ ಆದ್ರಷ್ಟೇ ಅವಕಾಶ ನೀಡುವ ಸಾಧ್ಯತೆಯಿದೆ. ಈ ಸಂಬಂಧ ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುವ ಸಂಭವ ಇದೆ. ಈ ನಡುವೆ ಲಸಿಕೆ ಹಂಚಿಕೆಯಲ್ಲಿ ಕರ್ನಾಟಕ ಹೊಸ ದಾಖಲೆ ಸೃಷ್ಟಿಸಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ಶೇ.100ರಷ್ಟು ವ್ಯಾಕ್ಸಿನೇಷನ್ ಆಗಿದೆ. ರಾಜ್ಯದಲ್ಲಿ ಈವರೆಗೂ 8.17 ಕೋಟಿ ಲಸಿಕೆ ಹಂಚಿಕೆ ಮಾಡಿದೆ. ಇದನ್ನೂ ಓದಿ: ಮುಂದಿನ ವರ್ಷ ಕೆಲ ಶಾಲೆಗಳಲ್ಲಿ NEP ಜಾರಿ: ಬಿ.ಸಿ.ನಾಗೇಶ್

  • ವೀಕೆಂಡ್, ಕ್ರಿಸ್ ಮಸ್ ಮಸ್ತಿಗೆ ಕರಾವಳಿಯ ಕಡಲತೀರಕ್ಕೆ ಲಗ್ಗೆ ಇಟ್ಟ ಪ್ರವಾಸಿಗರು

    ವೀಕೆಂಡ್, ಕ್ರಿಸ್ ಮಸ್ ಮಸ್ತಿಗೆ ಕರಾವಳಿಯ ಕಡಲತೀರಕ್ಕೆ ಲಗ್ಗೆ ಇಟ್ಟ ಪ್ರವಾಸಿಗರು

    – ಕಡಲತೀರಗಳು ಪ್ರವಾಸಿಗರಿಂದ ಹೌಸ್ ಫುಲ್!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಡಲತೀರಗಳು ಪ್ರವಾಸಿಗರಿಂದ ಹೌಸ್ ಫುಲ್ ಆಗಿದ್ದು, ವೀಕೆಂಡ್ ಹಾಗೂ ಕ್ರಿಸ್‍ಮಸ್ ಆಚರಣೆಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

    ರಾಜ್ಯ, ಹೊರ ರಾಜ್ಯದಿಂದ ಸಾವಿರಾರು ಪ್ರವಾಸಿಗರು ಕಡಲತೀರಕ್ಕೆ ಮುತ್ತಿಗೆ ಹಾಕಿದ್ದು, ಕರೊನಾ ಭಯ ಲೆಕ್ಕಿಸದೆ ಕುಟುಂಬದೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದಾರೆ. ವೀಕೆಂಡ್ ಜೊತೆ ಸಾಲು ಸಾಲು ರಜೆ, ಕ್ರಿಸ್‍ಮಸ್ ಹಬ್ಬದ ಹಿನ್ನೆಲೆ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಡಲತೀರದಲ್ಲಿ ಸಾವಿರಾರು ಪ್ರವಾಸಿಗರ ದಂಡೇ ಹರಿದುಬಂದಿದೆ.

    ಜಿಲ್ಲೆಯ ಗೋಕರ್ಣ, ಮುರಡೇಶ್ವರ, ಕಾರವಾರ ಕಡಲ ತೀರದಲ್ಲಿ ಪ್ರವಾಸಿಗರು ತುಂಬಿ ತುಳುಕುತಿದ್ದು, ಕರೊನಾ ಭಯ ಬಿಟ್ಟು ಸಮುದ್ರದ ನೀರಿಗೆ ಮೈಯೊಡ್ಡಿ ಎಂಜಾಯ್ ಮಾಡಿದರು. ಕರೊನಾ ಇದ್ದರೇನು ನಮಗೆ ಭಯವಿಲ್ಲ, ನಾವು ಒತ್ತಡ ದೂರ ಮಾಡಲು ಇಲ್ಲಿಗೆ ಬಂದಿದ್ದೇವೆ ಎಂದು ಸಮುದ್ರದಲ್ಲಿ ಮಿಂದೇಳುತ್ತಿದ್ದಾರೆ. ಕುಟುಂಬದೊಂದಿಗೆ ಮೋಜು, ಮಸ್ತಿ ಮಾಡಿದ್ದಾರೆ.

  • ಜಗತ್ತಿನಾದ್ಯಂತ ಕ್ರಿಸ್‍ಮಸ್ ಸಂಭ್ರಮಾಚರಣೆ – ಬೆಂಗ್ಳೂರು ಸೇರಿ ರಾಜ್ಯದ ಹಲವೆಡೆ ಕ್ರಿಸ್ತನ ಪ್ರಾರ್ಥನೆ

    ಜಗತ್ತಿನಾದ್ಯಂತ ಕ್ರಿಸ್‍ಮಸ್ ಸಂಭ್ರಮಾಚರಣೆ – ಬೆಂಗ್ಳೂರು ಸೇರಿ ರಾಜ್ಯದ ಹಲವೆಡೆ ಕ್ರಿಸ್ತನ ಪ್ರಾರ್ಥನೆ

    – ದೇಶ, ವಿದೇಶಗಳಲ್ಲಿ ಚರ್ಚ್‍ಗಳಿಗೆ ಲೈಟಿಂಗ್ಸ್

    ಬೆಂಗಳೂರು: ಕೊರೊನಾ ನಡುವೆಯೂ ವಿಶ್ವದ ಹಲವೆಡೆ ಈಗಾಗಲೇ ಕ್ರಿಸ್‍ಮಸ್ ಆಚರಣೆ ಮಾಡಲಾಯ್ತು. ತಿಂಗಳುಗಳಿಂದ ಕಾದುಕುಳಿತ ಕ್ರಿಸ್ತನ ಆರಾಧಕರು ಕೋವಿಡ್ ಹಿನ್ನೆಲೆಯಲ್ಲೂ ವಿಶೇಷ ಪ್ರಾರ್ಥನೆಗಳ ಮೂಲಕ ಏಸುವಿಗೆ ನಮಿಸಿದ್ರು. ಬೆಂಗಳೂರಿನ ಶಿವಾಜಿನಗರದ ಸೆಂಟ್‍ಮೇರಿಸ್ ಬೆಸಿಲಿಕಾ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯ್ತು.

    ಮೈಸೂರಿನ ವಿಶ್ವವಿಖ್ಯಾತ ಸಂತಫಿಲೋಮಿನ ಚರ್ಚ್‍ನಲ್ಲಿ ಬಲಿಪೂಜೆ ಮೂಲಕ ಸರಳವಾಗಿ ಕ್ರಿಸ್‍ಮಸ್ ಆಚರಣೆ ಮಾಡಿದ್ದಾರೆ. ಕ್ರಿಶ್ಚಿಯನ್ನರು ಬಾಲ ಏಸುವಿನ ಮೆರವಣಿಗೆ ಮಾಡಿದ್ರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದ್ರು. ಚರ್ಚ್‍ನ ಸಭಾಂಗಣದಲ್ಲಿ ಕೊರೊನಾ ನಿಯಮ ಪಾಲನೆ ಜೊತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ರು. ಉಡುಪಿಯಲ್ಲೂ ಕ್ರಿಸ್‍ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಚರ್ಚ್ ಆವರಣ ವಿದ್ಯುದ್ದೀಪಾಲಂಕಾರದಿಂದ ಝಗಮಗಿಸುತ್ತಿದೆ. ಮಿಡ್ನೈಟ್ ಮಾಸ್ ರದ್ದು ಮಾಡಿರುವ ಉಡುಪಿ ಧರ್ಮ ಪ್ರಾಂತ್ಯ, ನಿಗದಿತ ವೇಳೆಗೆ ಮೊದಲೇ ಕ್ರಿಸ್‍ಮಸ್ ಬಲಿ ಪೂಜೆಯನ್ನು ನಡೆಸಿದೆ.

    ಮಂಜಿನ ನಗರಿ ಮಡಿಕೇರಿಯಲ್ಲು ಕೂಡ ಸಂಭ್ರಮ ಸಡಗರದಿಂದ ಕ್ರಿಸ್ತನ ಹುಟ್ಟುಹಬ್ಬವನ್ನು ಸಂಭ್ರಮಿಸಲಾಗ್ತಿದೆ. ನಗರದ ಸಂತ ಮೈಕಲರ ಚರ್ಚ್ ನವ ವದುವಿನಂತೆ ಸಿಂಗಾರಗೊಂಡಿದ್ದು ಬಣ್ಣ ಬಣ್ಣದ ಲೈಟಿಂಗ್ ಗಳಿಂದ ಮೂಡಿದ ಚಿತ್ತಾರ ನಯನ ಮನೋಹರವಾಗಿದೆ. ಇಡೀ ಚರ್ಚ್ ಸುಂದರ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಭಾಂದವರು ಅಗಮಿಸಿ ಪ್ರಾರ್ಥನೆ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲೂ ಕ್ರಿಸ್‍ಮಸ್ ಹಿನ್ನೆಲೆ ಚರ್ಚ್ ಆವರಣವೆಲ್ಲಾ ಕಲರ್ ಕಲರ್ ಲೈಟ್ಸ್‍ಗಳಿಂದ ಕಂಗೊಳಿಸ್ತಿದೆ. ಕೊರೊನಾ ನಿಯಮದಂತೆಯೇ ಜನರು ಅಂತರ ಕಾಯ್ದುಕೊಂಡು ಯೇಸುವಿಗೆ ಪಾರ್ಥನೆ ಸಲ್ಲಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಬಾಲ ಏಸುವಿಗೆ ಗೋಧಳಿಕೆ ಇಟ್ಟು, ಪರಸ್ಪರ ಶುಭಾಶಯ ಕೋರಿ ಸಂತಸ ಪಟ್ರು.

    ಕೊರೊನಾ ಮಧ್ಯೆ ದೇಶದಲ್ಲೂ ಕ್ರಿಸ್‍ಮಸ್ ಆಚರಣೆ ಮಾಡಲಾಗ್ತಿದೆ. ದೆಹಲಿ, ಮುಂಬೈ, ಕೊಲ್ಕತ್ತಾ ಸೇರಿದಂತೆ ಹಲವೆಡೆ ಯೇಸು ಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸ್ತಿದ್ದಾರೆ. ವಿದೇಶಗಳಲ್ಲೂ ಕ್ರಿಸ್‍ಮಸ್ ಆಚರಣೆ ಮಾಡಲಾಗಿದೆ. ಜನರು ಅಂತರ ಕಾಯ್ದುಕೊಂಡು ಕ್ರಿಸ್‍ಮಸ್ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ರು. ಅಮೆರಿಕ, ಆಸ್ಟ್ರೇಲಿಯಾದಲ್ಲಿ ಚರ್ಚ್‍ಗಳಿಗೆ ಮಾಡಿದ್ದ ವಿದ್ಯುತ್ ದೀಪಾಂಲಕಾರ ಎಲ್ಲರನ್ನು ಆಕರ್ಷಿಸುತ್ತಿದೆ.

  • ಅನಗತ್ಯವಾಗಿ ಸಂಚರಿಸದೆ ಕೋವಿಡ್-19 ನಿಯಮ ಪಾಲಿಸಿ: ಸಿಎಂ

    ಅನಗತ್ಯವಾಗಿ ಸಂಚರಿಸದೆ ಕೋವಿಡ್-19 ನಿಯಮ ಪಾಲಿಸಿ: ಸಿಎಂ

    ಬೆಂಗಳೂರು: ಸಾರ್ವಜನಿಕರ ಅಭಿಪ್ರಾಯದ ಹಿನ್ನೆಲೆ ರಾತ್ರಿ ಕರ್ಫ್ಯೂ ಆದೇಶವನ್ನು ಹಿಂಪಡೆಯಲಾಗಿದ್ದು, ಅನಗತ್ಯವಾಗಿ ಸಂಚರಿಸದೆ ಸರ್ಕಾರ ವಿಧಿಸಿರುವ ಕೋವಿಡ್-19 ನಿಯಮಗಳನ್ನು ಪಾಲಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬ್ರಿಟನ್ ಮುಂತಾದ ದೇಶಗಳಲ್ಲಿ ಪತ್ತೆಯಾದ ಕೋವಿಡ್ ರೂಪಾಂತರ ವೈರಾಣು ಹರಡುವಿಕೆ ನಿಯಂತ್ರಿಸಲು ತಜ್ಞರ ಸಲಹೆಯಂತೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಸಾರ್ವಜನಿಕ ವಲಯದ ಅಭಿಪ್ರಾಯಗಳನ್ನು ಪರಿಗಣಿಸಿ, ಸಚಿವರುಗಳ ಮತ್ತು ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂ ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಿಸಿ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಗುಂಪುಗೂಡದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

    ಅನಗತ್ಯವಾಗಿ ಸಂಚರಿಸದೆ ಹಾಗೂ ಸರ್ಕಾರ ವಿಧಿಸಿರುವ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಯಬೇಕೆಂದು ಮನವಿ ಮಾಡಿದ್ದಾರೆ.

  • ಓವನ್ ಇಲ್ಲದೇ ಮಾಡಿ ರುಚಿ ರುಚಿಯಾದ ಕ್ರಿಸ್‍ಮಸ್ ಕೇಕ್

    ಓವನ್ ಇಲ್ಲದೇ ಮಾಡಿ ರುಚಿ ರುಚಿಯಾದ ಕ್ರಿಸ್‍ಮಸ್ ಕೇಕ್

    ಹೊಸ ಕೊರೊನಾ ಅಲೆ ಹಿನ್ನೆಲೆ ಇಡೀ ಜಗತ್ತು ತಲ್ಲಣಗೊಂಡಿದೆ. ಸರ್ಕಾರ ಸಹ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಕ್ರಿಸ್‍ಮಸ್ ಹಬ್ಬವನ್ನ ಕುಟುಂಬಸ್ಥರ ಜೊತೆ ಮನೆಯಲ್ಲಿಯೇ ಅಚರಿಸುವಂತೆ ಸರ್ಕಾರ ಮನವಿ ಸಹ ಮಾಡಿಕೊಂಡಿದೆ. ಕೊರೊನಾದಿಂದಾಗಿ ಹಬ್ಬದ ದಿನ ಹೆಚ್ಚಿನ ಸಮಯ ಮನೆಯಲ್ಲಿರಬೇಕಾಗುತ್ತೆ. ಹಾಗಾಗಿ ಹೊರಗಿನಿಂದ ಕೇಕ್ ತರದೇ ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರ ಕ್ರಿಸ್‍ಮಸ್ ಆಚರಿಸಿ. ಓವನ್ ಇಲ್ಲದೇ ಸರಳವಾಗಿ ಕೇಕ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಮೊಟ್ಟೆ-4
    * ಸಕ್ಕರೆ ಪುಡಿ – 1 ಕಪ್
    * ಮೈದಾ- 1 ಕಪ್
    * ಬೇಕಿಂಗ್ ಸೋಡಾ- 1 ಟೀ ಸ್ಪೂನ್
    * ಉಪ್ಪು- 1/4 ಟೀ ಸ್ಪೂನ್
    * ತುಪ್ಪ – 1 ಕಪ್
    * ವೆನ್ನಿಲ್ಲಾ ಎಸೆನ್ಸ್ – 1/2 ಟೀ ಸ್ಪೂನ್

    ಮಾಡುವ ವಿಧಾನ
    * ಮೊದಲಿಗೆ ಮಿಕ್ಸಿಂಗ್ ಬೌಲ್‍ಗೆ ನಾಲ್ಕು ಮೊಟ್ಟೆಗಳನ್ನ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
    * ಮೊಟ್ಟೆ ಮಿಶ್ರಣಕ್ಕೆ ಒಂದು ಕಪ್ ನಷ್ಟು ಸಕ್ಕರೆ ಪುಡಿ ಹಾಕಿ ಗಂಟು ಬರದಂತೆ ಕಲಸಿಕೊಳ್ಳಿ.
    * ಮೊಟ್ಟೆ ಮತ್ತು ಸಕ್ಕರೆ ಪುಡಿ ಚೆನ್ನಾಗಿ ಮಿಶ್ರಣವಾದ ಮೇಲೆ ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಉಪ್ಪು, ತುಪ್ಪ ಮತ್ತು ವೆನ್ನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. (ನೀವು ಡ್ರೈ ಫ್ರೂಟ್ಸ್ ಪ್ರಿಯರಾಗಿದ್ರೆ, ಈ ವೇಳೆ ಸಣ್ಣದಾಗಿ ಕತ್ತರಿಸಿರುವ ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ ಇನ್ನಿತರ ಡ್ರೈ ಫ್ರೂಟ್ಸ್ ಸೇರಿಸಿಕೊಳ್ಳಬಹುದು).

    * ಒಂದು ಬೌಲ್‍ಗೆ ತುಪ್ಪ ಸವರಿ, ಅದರ ಮೇಲೆ ಒಣ ಮೈದಾ ಹಿಟ್ಟು ಹಾಕಿ ತೆಳುಬಾಗಿ ಹರಡಿ, ಸಿದ್ಧವಾಗಿರೋ ಮಿಶ್ರಣವನ್ನ ಹಾಕಿ ಗಂಟು ಬರದಂತೆ ಸಮ ಮಾಡಿಕೊಳ್ಳಿ.
    * ಒಂದು ದೊಡ್ಡ ಪ್ಯಾನ್‍ಗೆ ಎರಡು ಟೀ ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಈ ಪ್ಯಾನ್ ನಲ್ಲಿ ಚಿಕ್ಕ ಸ್ಟ್ಯಾಂಡ್ ಇರಿಸಬೇಕು. ಈ ಸ್ಟ್ಯಾಂಡ್ ಮೇಲೆ ನಿಧಾನವಾಗಿ ಮಿಶ್ರಣ ಹಾಕಿರೋ ಬೌಲ್ ಇರಿಸಿ ಮುಚ್ಚಳ ಮುಚ್ಚಿ 40 ರಿಂದ 45 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿದ್ರೆ ಕ್ರಿಸ್‍ಮಸ್ ಕೇಕ್ ಸಿದ್ಧ.

  • ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

    ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ಕೋವಿಡ್ ಕಾರಣದಿಂದ ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶ ಇರಲ್ಲ ಎಂದು ರಾಜ್ಯ ಸರ್ಕಾರ ಹೇಳಿತ್ತು. ಇದೀಗ ಕ್ರಿಸ್‍ಮಸ್ ಹಬ್ಬಕ್ಕೂ ಅನ್ವಯವಾಗುವಂತೆ ಕಠಿಣ ನಿಯಮಗಳನ್ನು ಸರ್ಕಾರ ಜಾರಿ ಮಾಡಲು ಮುಂದಾಗಿದೆ. ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆ ಸಂಬಂಧ ಕೇಂದ್ರ ಸರ್ಕಾರದ ಆದೇಶದ ಅನ್ವಯ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

    ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಕ್ರಿಸ್‍ಮಸ್ ಹಬ್ಬವನ್ನು ಭಕ್ತಿಪೂರ್ವಕವಾಗಿ, ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಕರೆ ನೀಡಿದೆ. ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಜನ ಸೇರುವ ಪ್ರದೇಶಗಳಲ್ಲಿ ಹಲವು ನಿರ್ಬಂಧಗಳನ್ನು ಸರ್ಕಾರ ಹೇರಿದೆ. ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಡಿಸೆಂಬರ್ 20ರಿಂದಲೇ ಅಂದ್ರೆ ಮುಂದಿನ ಭಾನುವಾರದಿಂದಲೇ ಜಾರಿಗೆ ಬರಲಿವೆ. ಜನವರಿ 2ರವರೆಗೆ ಈ ಮಾರ್ಗಸೂಚಿ ಜಾರಿಯಲ್ಲಿ ಇರುತ್ತದೆ.

    ಕೋವಿಡ್ ರೂಲ್ಸ್ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಂತೆ ಆಗಿದೆ. ಪಬ್, ಕ್ಲಬ್ ಬೇಡ ಅಂದ್ಕೊಂಡು ಬೆಂಗಳೂರಿನ ಹೊರವಲಯದ ಹೋಟೆಲ್, ರೆಸಾರ್ಟ್ ಗಳಲ್ಲಿ ಪಾರ್ಟಿ ಆಯೋಜಿಸಲು ಮುಂದಾಗಿದ್ದವರಿಗೂ ಹೊಸ ಮಾರ್ಗಸೂಚಿ ತಣ್ಣೀರು ಎರಚಿದೆ. ಕೆಲ ಆಯೋಜಕರಂತೂ, ಗ್ರಾಹಕರನ್ನು ಸೆಳೆಯಲು ಭರ್ಜರಿ ಆಫರ್ ಕೊಟ್ಟಿದ್ದರು. ಟ್ರೆಕ್ಕಿಂಗ್, ಫೈರ್ ಕ್ಯಾಂಪ್, ಡಿಜೆ ಪಾರ್ಟಿ, ಓಪನ್ ಪಾರ್ಟಿಗಳಿಗೆ ಬುಕ್ಕಿಂಗ್ ಕೂಡ ಶುರುವಾಗಿತ್ತು.

    ಕ್ರಿಸ್‍ಮಸ್, ಹೊಸ ವರ್ಷಕ್ಕೆ ಮಾರ್ಗಸೂಚಿ
    * ಕ್ರಿಸ್‍ಮಸ್ ಆಚರಣೆ ವೇಳೆ ಹಸ್ತಲಾಘವ, ಆಲಿಂಗನ ನಿಷಿದ್ಧ.
    * ಚರ್ಚ್‍ಗಳಲ್ಲಿ ಹೆಚ್ಚು ಜನ ಸೇರದಂತೆ ಕ್ರಮ ಕೈಗೊಳ್ಳಬೇಕು (ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಯೋಜಕರು ಕ್ರಮ ತೆಗೆದುಕೊಳ್ಳಬೇಕು)
    * ಕ್ಲಬ್,ಪಬ್,ರೆಸ್ಟೋರೆಂಟ್‍ಗಳಲ್ಲಿ ಡಿಜೆ, ಡ್ಯಾನ್ಸ್, ಪಾರ್ಟಿ ನಿಷೇಧ.

    * ಪ್ರತಿನಿತ್ಯದಂತೆ ಕ್ಲಬ್,ಪಬ್,ರೆಸ್ಟೋರೆಂಟ್ ನಡೆಸಲು ಅಡ್ಡಿ ಇಲ್ಲ.(ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಕಡ್ಡಾಯ)
    * ಹೋಟೆಲ್, ಮಾಲ್, ಪಬ್‍ಗಳು ಟೋಕನ್ ಪದ್ದತಿ, ಬುಕಿಂಗ್ ಅಳವಡಿಸಿಕೊಳ್ಳಬೇಕು (ಜನರು ಒಮ್ಮೆಯೇ ಬರುವುದನ್ನು ತಡೆಯಲು)
    * ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಜನರ ಸೇರುವಿಕೆ, ಸಂಭ್ರಮಾಚರಣೆ ನಿಷೇಧ.

    * ಡಿಸಿ, ಎಸ್‍ಪಿಗಳಿಗೆ ಆಯ್ದ ರಸ್ತೆಗಳಲ್ಲಿ ನಿರ್ಬಂಧ ವಿಧಿಸುವ ಅಧಿಕಾರ.
    * ಹಿರಿಯ ನಾಗರಿಕರು, 10 ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಇರಬೇಕು.
    * ಅಪಾರ್ಟ್‍ಮೆಂಟ್, ಹೋಟೆಲ್, ಹಾಲ್‍ಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ.
    * ಹಸಿರು ಪಟಾಕಿ ಹೊಡೆಯಬಹುದು.

  • ಕೊರೊನಾ ಎಫೆಕ್ಟ್ – ಕ್ರಿಸ್‍ಮಸ್ ಆಚರಣೆಗೆ ಸರ್ಕಾರದ ಹೊಸ ರೂಲ್ಸ್

    ಕೊರೊನಾ ಎಫೆಕ್ಟ್ – ಕ್ರಿಸ್‍ಮಸ್ ಆಚರಣೆಗೆ ಸರ್ಕಾರದ ಹೊಸ ರೂಲ್ಸ್

    – ಅತಿಥಿಗಳು ಮನೆಯೊಳಗೆ ಬರುವಂತಿಲ್ಲ

    ಬ್ರಸೆಲ್: ಅತಿಥಿಗಳು ಕ್ರಿಸ್‍ಮಸ್ ಆಚರಣೆಗೆ ಮನೆಗೆ ಬರಬಹುದು. ಆದರೆ ಬಾತ್ ರೂಮ್ ಬಳಸೋಕೆ ಒಬ್ಬರಿಗೆ ಮಾತ್ರ ಅವಕಾಶ ಎಂದು ಬ್ರೆಸೆಲ್ಸ್ ಸರ್ಕಾರ ಹೊಸ ರೂಲ್ಸ್ ಮಾಡಿದೆ.

    ಬೆಲ್ಜಿಯಂನಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಲಾಕ್‍ಡೌನ್ ಜಾರಿಗೊಳಿಸಿದೆ. ಈ ಸಮಯದಲ್ಲಿ ಕ್ರಿಸ್‍ಮಸ್ ಬಂದಿರುವುದರಿಂದ ಹಬ್ಬದ ಆಚರಣೆಗೆ ಅನುಮತಿ ನೀಡಿ ಸರ್ಕಾರ ಇಂತಹ ವಿಚಿತ್ರ ರೂಲ್ಸ್‍ವೊಂದನ್ನು ಹಾಕಿದೆ.

    ಕ್ರಿಸ್‍ಮಸ್ ಆಚರಣೆಗೆ ಬಂದಿರುವ ಅತಿಥಿಗಳು ಯಾರು ಮನೆ ಒಳಗೂ ಬರುವಂತಿಲ್ಲ. ಮನೆಯ ಹೊರಗೆ ಪಾರ್ಟಿ ಮಾಡಬೇಕು. ಪಾರ್ಟಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಬಂದಿರುವ ಅತಿಥಿಗಳಲ್ಲಿ ಒಬ್ಬರಿಗೆ ಮಾತ್ರ ಮನೆ ಒಳಗೆ ಹೋಗಲು ಅವಕಾಶ ಇರುತ್ತದೆ. ಆ ಒಬ್ಬ ಅತಿಥಿಗೆ ಮಾತ್ರ ಮನೆಯ ಬಾತ್‍ರೂಮ್ ಬಳಸಲು ಅವಕಾಶ ಇರುತ್ತದೆ ಎಂದು ವಿಚಿತ್ರ ನಿಯಮವನ್ನು ಹಾಕುವ ಮೂಲಕವಾಗಿ ಹಬ್ಬದ ಸೆಲೆಬ್ರೆಷನ್‍ಗೆ ಅನುಮತಿ ನೀಡಿದೆ.

    ಕ್ರಿಸ್‍ಮಸ್ ಆಚರಣೆಗೆ ಅಗತ್ಯ ಇರುವ ಸರಕು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಜನರು ಗುಂಪು ಸೇರುವಂತಿಲ್ಲ.ನೆವೆಂಬರ್ ನಿಂದ ಎರಡನೇ ಹಂತದ ಲಾಕ್‍ಡೌನ್ ಜಾರಿಯಾಗಿದೆ ಇದು ಫೆಬ್ರವರಿವರೆಗೂ ಜಾರಿಯಲ್ಲಿರಲಿದೆ ಎಂದು ಬ್ರಸೆಲ್‍ನ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

  • ಶೆಫ್ ಆಗಿ ಕೇಕ್ ಮಿಕ್ಸಿಂಗ್ ಮಾಡಿದ ಡಿ ಬಾಸ್

    ಶೆಫ್ ಆಗಿ ಕೇಕ್ ಮಿಕ್ಸಿಂಗ್ ಮಾಡಿದ ಡಿ ಬಾಸ್

    ಮೈಸೂರು: ಕ್ರಿಸ್‍ಮಸ್ ಹಿನ್ನೆಲೆ ಕೇಕ್ ತಯಾರಿಕೆ ಜೋರಾಗೇ ನಡೆದಿದ್ದು, ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನಟ ದರ್ಶನ್ ಕೇಕ್ ಮಿಕ್ಸಿಂಗ್ ಮಾಡಿ ಗಮನ ಸೆಳೆದಿದ್ದಾರೆ.

    ದಾಸ ಶೆಫ್ ಆಗಿ ಕೇಕ್ ಮಿಕ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ದರ್ಶನ್‍ಗೆ ನಿರ್ಮಾಪಕ ಸಂದೇಶ್ ಸಾಥ್ ನೀಡಿದ್ದು, ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ನಿರ್ಮಾಪಕ ಸಂದೇಶ್ ನಾಗರಾಜು ಭಾಗಿಯಾಗಿ ಕ್ರಿಸ್‍ಮಸ್ ಅಂಗವಾಗಿ ತಯಾರಾಗುತ್ತಿರುವ ಕೇಕ್ ತಯಾರಿಕೆಗೆ ಕೈ ಜೋಡಿಸಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತರರೊಂದಿಗೆ ಕ್ರಿಸ್‍ಮಸ್ ಸಂಭ್ರಮದಲ್ಲಿ ತೊಡಗಿ, ಕೇಕ್ ಮಿಕ್ಸಿಂಗ್ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ನೇಹಿತರ ಜೊತೆ ಕ್ರಿಸ್ ಮಸ್ ಹಬ್ಬದ ಕೇಕ್ ಮಿಕ್ಸಿಂಗ್ ಮಾಡಿ ಸಂಭ್ರಮಿಸಿದ್ದಾರೆ.

    ಡಿಸೆಂಬರ್ 25ರಂದು ಕ್ರಿಸ್‍ಮಸ್ ಹಬ್ಬವಿದ್ದು, ಒಂದು ತಿಂಗಳ ಮುಂಚಿನಿಂದಲೇ ಕೇಕ್ ತಯಾರಿಸಲಾಗುತ್ತಿದೆ. ದರ್ಶನ್ ಸಹ ಕೇಕ್ ತಯಾರಿಸುವ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಕ್ರಿಸ್‍ಮಸ್ ಅಂಗವಾಗಿ ವಿವಿಧ ಬಗೆಯ ಹಾಗೂ ಬೃಹತ್ ಕೇಕ್‍ಗಳನ್ನು ತಯಾರಿಸಲಾಗುತ್ತದೆ.