Tag: christmas

  • ಮುಂಬೈನಲ್ಲಿ ಹೈ ಅಲರ್ಟ್ – ಜನವರಿ 2ರವರೆಗೂ ಕರ್ಫ್ಯೂ ಜಾರಿ

    ಮುಂಬೈನಲ್ಲಿ ಹೈ ಅಲರ್ಟ್ – ಜನವರಿ 2ರವರೆಗೂ ಕರ್ಫ್ಯೂ ಜಾರಿ

    ಮುಂಬೈ: ಕ್ರಿಸ್ಮಸ್ (Christmas) ಮತ್ತು ಹೊಸ ವರ್ಷಚಾರಣೆಗೆ (New Year) ಇನ್ನು ಕೆಲವು ವಾರಗಳು ಬಾಕಿ ಇರುವಾಗಲೇ ಮುಂಬೈನಲ್ಲಿ (Mumbai) ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಭಯೋತ್ಪಾದಕ ಚಟುವಟಿಕೆಗಳ (Terrorism) ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಜನವರಿ 2ರ ವರೆಗೂ ಕರ್ಫ್ಯೂ (Curfew) ವಿಧಿಸಿದ್ದು, 5 ಕ್ಕಿಂತ ಹೆಚ್ಚು ಮಂದಿ ಒಟ್ಟಾಗಿ ಓಡಾಡುವಂತಿಲ್ಲ ಎಂದು ಆದೇಶಿಸಿದೆ.

    ಮುಂಬೈ ಪೊಲೀಸ್ ಕೇಂದ್ರ ಕಚೇರಿಯಿಂದ ಈ ಆದೇಶ ಪ್ರಕಟಗೊಂಡಿದ್ದು, ಜನವರಿ 2ರ ವರೆಗೂ ಶಸ್ತ್ರಾಸ್ತ್ರಗಳು, ಬಂದೂಕುಗಳು, ಕತ್ತಿಗಳು ಮತ್ತು ಇತರ ಆಯುಧಗಳೊಂದಿಗೆ ಸಂಚಾರದ ಮೇಲೂ ನಿಷೇಧವನ್ನು ವಿಧಿಸಲಾಗಿದೆ.

    ಅಧಿಕೃತ ಸೂಚನೆಯ ಪ್ರಕಾರ, ಮದುವೆ ಸಮಾರಂಭಗಳು, ಅಂತ್ಯಕ್ರಿಯೆ ಸಭೆಗಳು, ಸ್ಮಶಾನಗಳಿಗೆ ಹೋಗುವ ದಾರಿಯಲ್ಲಿ ಧ್ವನಿವರ್ಧಕಗಳು, ವಾದ್ಯಗಳು, ಬ್ಯಾಂಡ್‌ಗಳನ್ನು ನುಡಿಸುವಂತಿಲ್ಲ, ಪಟಾಕಿ ಹೊಡೆಯುವಂತಿಲ್ಲ. ಕ್ಲಬ್‌ಗಳು, ಸಹಕಾರ ಸಂಘಗಳು ಮತ್ತು ಇತರ ಸಂಘಗಳ ಮೆರವಣಿಗೆಗಳ ಮೇಲೆ ನಿಷೇಧವನ್ನು ವಿಧಿಸಲಾಗಿದೆ. ಇದನ್ನೂ ಓದಿ: ಶ್ರದ್ಧಾ ಬಿಟ್ಟು ಹೋಗುವ ಆತಂಕದಲ್ಲಿ ಹತ್ಯೆ ಮಾಡಿದೆ – ಮಂಪರು ಪರೀಕ್ಷೆಯಲ್ಲಿ ಅಫ್ತಾಬ್ ಮತ್ತೊಮ್ಮೆ ತಪ್ಪೊಪ್ಪಿಗೆ

    ಸಾರ್ವಜನಿಕ ಚಲನಚಿತ್ರ ಪ್ರದರ್ಶನ ಸ್ಥಳಗಳು ಅಥವಾ ಸುತ್ತಮುತ್ತಲಿನ ಯಾವುದೇ ಸ್ಥಳಗಳಲ್ಲಿ, ನಾಟಕಗಳು ಅಥವಾ ಕಾರ್ಯಕ್ರಮಗಳನ್ನು ವೀಕ್ಷಿಸುವ ಉದ್ದೇಶಕ್ಕಾಗಿ ಸಭೆ ನಡೆಸುವುದು ನಿಷೇಧಿಸಲಾಗಿದೆ. ಸರ್ಕಾರಿ ಕಚೇರಿಗಳ ಸುತ್ತಲೂ ಸರ್ಕಾರಿ ಅಥವಾ ಅರೆ ಸರ್ಕಾರಿ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಅನಗತ್ಯ ಜನ ಸೇರುವಂತಿಲ್ಲ. ಶಾಲಾ ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು, ಕಾರ್ಖಾನೆಗಳಲ್ಲೂ ಸಾಮಾನ್ಯ ವ್ಯವಹಾರಗಳ ಸಭೆಗಳನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: “ಬ್ರಾಹ್ಮಣ ಭಾರತ್ ಛೋಡೋ” – ಜೆಎನ್‍ಯು ಕ್ಯಾಂಪಸ್ ಗೋಡೆಗಳ ಮೇಲೆ ವಿವಾದಾತ್ಮಕ ಬರಹ

    Live Tv
    [brid partner=56869869 player=32851 video=960834 autoplay=true]

  • ಕ್ರಿಸ್‍ಮಸ್ ಸಂಭ್ರಮ – ಗೋಲ್ಡನ್ ಸ್ಟಾರ್ ಪುತ್ರನಿಗೆ ಸರ್ಪ್ರೈಸ್ ಕೊಟ್ಟ ಸಾಂತಾ

    ಕ್ರಿಸ್‍ಮಸ್ ಸಂಭ್ರಮ – ಗೋಲ್ಡನ್ ಸ್ಟಾರ್ ಪುತ್ರನಿಗೆ ಸರ್ಪ್ರೈಸ್ ಕೊಟ್ಟ ಸಾಂತಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್‍ಗೆ ಸಾಂತಾ ಕ್ಲಾಸ್‌ ಗಿಫ್ಟ್ ನೀಡುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ.

    ಪ್ರತಿ ಬಾರಿ ಕ್ರಿಸ್‍ಮಸ್ ಹಬ್ಬ ಬಂದಾಗ ಮಕ್ಕಳು ಈ ಬಾರಿ ಸಂತಾ ನಮಗೆ ಏನು ಗಿಫ್ಟ್ ಕೊಡುತ್ತಾರೆ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಎಕ್ಸ್‌ಪೆಕ್ಟ್ ಕೂಡ ಮಾಡಿರದ ವಿಹಾನ್‍ಗೆ ಸಾಂತಾ ಕ್ಲಾಸ್‌ ಆಗಮಿಸಿ ಗಿಫ್ಟ್ ಮೇಲೆ ಗಿಫ್ಟ್ ನೀಡಿ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಇನ್ನು ಈ ವೀಡಿಯೋವನ್ನು ಗಣೇಶ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ಪುತ್ರಿಯ ನಿಶ್ಚಿತಾರ್ಥ ಫೋಟೋ ಶೇರ್ ಮಾಡಿದ ಸ್ಮೃತಿ ಇರಾನಿ

    ವೀಡಿಯೋದಲ್ಲಿ ಗಣೇಶ್ ಅವರು ಸೆಲ್ಫಿ ವೀಡಿಯೋ ಮಾಡುತ್ತಿದ್ದ ವೇಳೆ ಬಂದು ಅಪ್ಪನನ್ನು ಬಿಗಿದಪ್ಪಿಕೊಂಡ ವಿಹಾನ್ ಬೆನ್ನ ಹಿಂದಿನಿಂದ ಸಾಂತಾ ಕ್ಲಾಸ್‌ ಆಗಮಿಸುತ್ತಾರೆ. ಇದನ್ನು ಕಂಡು ವಿಹಾನ್ ಫುಲ್ ಶಾಕ್ ಆಗುತ್ತಾನೆ. ನಂತರ ಸಾಂತಾ ಕ್ಲಾಸ್‌ ವಿಹಾನ್‍ಗೆ ಹ್ಯಾಪಿ ಕ್ರಿಸ್‍ಮಸ್ ಎಂದು ವಿಶ್ ಮಾಡಿ, ಪಕ್ಷಿಯ ಪಂಜರವನ್ನು ಗಿಫ್ಟ್ ಆಗಿ ನೀಡಿ, ವಿಹಾನ್ ಕಣ್ಣನ್ನು ಮುಚ್ಚಿಸಿ, ಲಾಲಿಪಾಪ್ ನೀಡಿ ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಕ್ರಿಸ್‍ಮಸ್ ಮೂಡ್ ನಲ್ಲಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ಕಿಡ್ಸ್

     

    View this post on Instagram

     

    A post shared by Ganesh (@goldenstar_ganesh)

    ಗಿಫ್ಟ್ ಸ್ವೀಕರಿಸಿದ ವಿಹಾನ್ ಸಂತಾಗೆ ಧನ್ಯವಾದ ತಿಳಿಸಿ ಗಿಫ್ಟ್ ಇಷ್ಟ ಆಗಿದ್ದು, ಫುಲ್ ಖುಷ್ ಆಗಿರುವುದಾಗಿ ಗಣೇಶ್‍ಗೆ ತಿಳಿಸಿದ್ದಾನೆ. ಈ ಎಲ್ಲಾ ದೃಶ್ಯವನ್ನು ಹಿಂದಿನಿಂದ ಗಮನಿಸುತ್ತಿದ್ದ ಗಣೇಶ್ ಪುತ್ರಿ ಚಾರಿತ್ರ್ಯ ಕೂಡ ಸಂತಸಗೊಂಡಿದ್ದಾರೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

    ಒಟ್ಟಾರೆ ಶನಿವಾರ ಕ್ರಿಸ್‍ಮಸ್ ಹಬ್ಬವನ್ನು ರಾಧಿಕಾ ಪಂಡಿತ್, ಮೇಘನಾ ಸರ್ಜಾ ಸೇರಿದಂತೆ ಹಲವಾರು ತಾರೆಗಳು ತಮ್ಮ ಮಕ್ಕಳೊಂದಿಗೆ ಆಚರಿಸಿದ್ದು, ಕ್ರಿಸ್‍ಮಸ್ ಸಡಗರ ಚಂದನವನದ ತಾರೆಯರ ಮನೆಯಲ್ಲೂ ಮನೆಮಾಡಿತ್ತು ಎಂದರೆ ತಪ್ಪಾಗಲಾರದು.

  • ಪತಿ ಜೊತೆಗೆ ಮೊದಲ ಬಾರಿ ಕ್ರಿಸ್‍ಮಸ್ ಸೆಲೆಬ್ರೇಟ್ ಮಾಡಿದ ಕತ್ರಿನಾ ಕೈಫ್

    ಪತಿ ಜೊತೆಗೆ ಮೊದಲ ಬಾರಿ ಕ್ರಿಸ್‍ಮಸ್ ಸೆಲೆಬ್ರೇಟ್ ಮಾಡಿದ ಕತ್ರಿನಾ ಕೈಫ್

    ಮುಂಬೈ: ಬಾಲಿವುಡ್‌ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊಸ ಜೀವನ ಆರಂಭವಾದ ಬಳಿಕ ಇಬ್ಬರು ಒಟ್ಟಾಗಿ ಮೊದಲ ಬಾರಿ ಕ್ರಿಸ್‍ಮಸ್ ಸಂಭ್ರಮದಿಂದ ಆಚರಿಸಿದ್ದಾರೆ. ಈ ಸುಂದರ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಕತ್ರಿನಾ ವಿಕ್ಕಿಯ ತೋಳ ತೆಕ್ಕೆಯಲ್ಲಿ ಬಂಧಿಯಾಗಿದ್ದರು. ಅಭಿಮಾನಿಗಳ ಮನಗೆದ್ದ ಈ ಚಿತ್ರಕ್ಕೆ ವಿಶೇಷ ಕಾರಣವೊಂದಿದೆ. ನಿನ್ನೆ ಕ್ರಿಸ್‍ಮಸ್. ಕತ್ರಿನಾ ಹಾಗೂ ವಿಕ್ಕಿ ಜೊತೆಯಾಗಿ ಆಚರಿಸುತ್ತಿರುವ ಮೊದಲ ಕ್ರಿಸ್‍ಮಸ್ ಹಬ್ಬವಿದು. ಆದ್ದರಿಂದಲೇ ಕ್ರಿಸ್‍ಮಸ್ ಟ್ರೀ ಮುಂದೆ ನಿಂತು ಇಬ್ಬರು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದರು. ಇದೀಗ ಚಿತ್ರಗಳು ವೈರಲ್ ಆಗಿದ್ದು, ಕತ್ರಿನಾ ಕೈಫ್ ಕೂಡ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಈ ಫೋಟೋಗಾಗಿ ನಾವು ಕಾಯುತ್ತಿದ್ದೆವು ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಪುತ್ರಿಯ ನಿಶ್ಚಿತಾರ್ಥ ಫೋಟೋ ಶೇರ್ ಮಾಡಿದ ಸ್ಮೃತಿ ಇರಾನಿ

     

    View this post on Instagram

     

    A post shared by Katrina Kaif (@katrinakaif)

    ಕತ್ರಿನಾ ಹಾಗೂ ವಿಕ್ಕಿ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಅದ್ದೂರಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಶಾಸ್ತ್ರದಲ್ಲಿ ತೆಗೆದ ಕೆಲವು ಫೋಟೋಗಳನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಇಬ್ಬರು ಜೊತೆಯಾಗಿ ಕ್ರಿಸ್‍ಮಸ್ ಆಚರಣೆ ಮಾಡಿದ್ದಾರೆ. ಇದನ್ನೂ ಓದಿ: ಹಿಂದಿನ ಸರ್ಕಾರ ಹಣವನ್ನು ಕಬ್ರಿಸ್ತಾನ್‍ಗಳಿಗಾಗಿ ವ್ಯರ್ಥ ಮಾಡಿದೆ: ಯೋಗಿ ಆದಿತ್ಯನಾಥ್

  • ಕ್ರಿಸ್‍ಮಸ್ ಮೂಡ್ ನಲ್ಲಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ಕಿಡ್ಸ್

    ಕ್ರಿಸ್‍ಮಸ್ ಮೂಡ್ ನಲ್ಲಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ಕಿಡ್ಸ್

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮಕ್ಕಳು ಕ್ರಿಸ್‍ಮಸ್ ಮೂಡ್ ನಲ್ಲಿ ಇದ್ದು, ಫುಲ್ ಎಂಜಾಯ್ ಮಾಡುತ್ತಿದ್ದಾರೆ.

    ರಾಧಿಕಾ ತಮ್ಮ ಮುದ್ದು ಮಕ್ಕಳು ಐರಾ ಮತ್ತು ಯಥರ್ವ್ ಕ್ರಿಸ್‍ಮಸ್ ಟ್ರೀ ಮುಂದೆ ನಿಂತುಕೊಂಡಿರುವ ಫೋಟೋವನ್ನು ಇನ್‍ಸ್ಟಾ ಸ್ಟೋರಿಗೆ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಧಿಕಾ ಜೊತೆಗೆ ಇಬ್ಬರು ಮಕ್ಕಳು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು

    ಫೋಟೋದಲ್ಲಿ ಮೊದಲು ಯಥರ್ವ್ ಕ್ರಿಸ್‍ಮಸ್ ಟ್ರೀ ಬಳಿ ಬಂದು ಅಲಂಕಾರವನ್ನು ನೋಡುತ್ತಿರುತ್ತಾನೆ. ನಂತರ ಐರಾ ಸಹ ಅವನ ಬಳಿಗೆ ಬಂದು ಕ್ರಿಸ್‍ಮಸ್ ಟ್ರೀಗೆ ಮಾಡಿರುವ ಅಲಂಕಾರನ್ನ ಬಹಳ ಕುತೂಹಲದಿಂದ ನೋಡುತ್ತಿರುತ್ತಾರೆ. ನಂತರ ತಾಯಿ ರಾಧಿಕಾ ಅವರಿಬ್ಬರ ಬಳಿ ಬಂದು ಆ ಅಲಂಕಾರವನ್ನು ತೋರಿಸುತ್ತಿರುವಂತೆ ಫೋಟೋದಲ್ಲಿ ಕಾಣುತ್ತೆ. ಒಟ್ಟಿನಲ್ಲಿ ಎಲ್ಲ ಫೋಟೋಗಳು ಮುದ್ದಾಗಿದ್ದು, ಮಕ್ಕಳು ಮಾತ್ರ ಈ ಅಲಂಕಾರವನ್ನು ಬಹಳ ಕುತೂಹಲದಿಂದ ನೋಡುವುದನ್ನು ನಾವು ಗಮನಿಸಬಹುದು.

    ರಾಧಿಕಾ ಅವರಿಗೆ ಕೇಕ್ ಮಾಡುವುದು, ಕ್ರಾಫ್ಟ್ ವರ್ಕ್ ಮಾಡುವುದು, ಕ್ರಿಸ್‍ಮಸ್ ತಯಾರಿ ಮಾಡುವುದೆಲ್ಲ ಸಂಭ್ರಮ ತರುತ್ತೆ. ಎಷ್ಟೂ ಬಾರಿ ಅವರೇ ಕೇಕ್, ಕುಕ್ಕಿಸ್ ಮಾಡಿ ಇನ್‍ಸ್ಟಾ ದಲ್ಲಿ ಪೋಸ್ಟ್ ಅನ್ನು ಮಾಡಿದ್ದಾರೆ. ಇಂದು ಕ್ರಿಸ್‍ಮಸ್ ಆಗಿರುವುದರಿಂದ ರಾಧಿಕಾ ಮನೆಯಲ್ಲಿ ಕ್ರಿಸ್‍ಮಸ್ ಸಂಭ್ರಮವಿದ್ದು, ಆ ಫೋಟೋಗಳನ್ನು ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ: ನಿಖಿಲ್ ಕುಮಾರಸ್ವಾಮಿ

  • ಉಡುಪಿಯಲ್ಲಿ ನಿಯಮಬದ್ಧ ಕ್ರಿಸ್‌ಮಸ್‌ – ಬಿಷಪ್ ನಿರ್ಧಾರಕ್ಕೆ ಎಲ್ಲೆಡೆಯಿಂದ ಶ್ಲಾಘನೆ

    ಉಡುಪಿಯಲ್ಲಿ ನಿಯಮಬದ್ಧ ಕ್ರಿಸ್‌ಮಸ್‌ – ಬಿಷಪ್ ನಿರ್ಧಾರಕ್ಕೆ ಎಲ್ಲೆಡೆಯಿಂದ ಶ್ಲಾಘನೆ

    ಉಡುಪಿ: ಕೋವಿಡ್ ಮೂರನೆ ಅಲೆ, ಹೊಸ ರೂಪಾಂತರಿ ಓಮಿಕ್ರಾನ್‌ ಭೀತಿಯ ನಡುವೆ ಉಡುಪಿ ಧರ್ಮಪ್ರಾಂತ್ಯದಲ್ಲಿ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಸರಳವಾಗಿ ಕ್ರಿಸ್‌ಮಸ್‌ ಆಚರಿಸಲಾಯಿತು.

    ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದು ತನ್ನ ಅಧೀನದಲ್ಲಿರುವ ಚರ್ಚ್‌ಗಳಿಗೆ ಆದೇಶ ಹೊರಡಿಸಿದ್ದರು. ಚರ್ಚ್ ಹಾಲ್‌ನಲ್ಲಿ ಯೇಸು ಕ್ರಿಸ್ತರ ಜನ್ಮದಿನದಂದು ಬಲಿಪೂಜೆಗಳನ್ನು ಮಾತ್ರ ಮಾಡಬೇಕು ಎಂದು ನಿರ್ಣಯ ಕೈಗೊಂಡಿದ್ದರು. ತನ್ನ ಅಧೀನದಲ್ಲಿ ಬರುವ ಏಳು ತಾಲ್ಲೂಕುಗಳ ಚರ್ಚ್‌ಗಳಲ್ಲಿ ಈ ನಿಯಮವನ್ನು ಪಾಲಿಸಲಾಯಿತು. ಇದನ್ನೂ ಓದಿ: ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

    ಈ ಬಾರಿ ಕೊರೊನಾ ಆತಂಕ ಹಿನ್ನೆಲೆಯಲ್ಲಿ ಪ್ರತಿ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಬಲಿಪೂಜೆಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗಿತ್ತು. ಸಾಮೂಹಿಕ ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಚರ್ಚ್ ಆವರಣ ಹಾಗೂ ಚರ್ಚ್ ಸಭಾಂಗಣದ ಹೊರಗೆ ಯಾವುದೇ ವ್ಯವಸ್ಥೆಗಳನ್ನು ಮಾಡಲಾಗಿಲ್ಲ. ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ನೇತೃತ್ವದಲ್ಲಿ ವಿಶೇಷ ಬಲಿ ಪೂಜಾ ಕಾರ್ಯಕ್ರಮ ನೆರವೇರಿತು. ನೂರಾರು ಭಕ್ತರು ಧಾರ್ಮಿಕ ಸಭೆಯಲ್ಲಿ ಭಾಗಿಯಾದರು.

    ಕ್ರಿಸ್‌ಮಸ್‌ ಸಂದರ್ಭದಲ್ಲಿ ಕ್ರೈಸ್ತ ಧರ್ಮೀಯರು ಚರ್ಚ್ ಮತ್ತು ಮನೆಗಳಲ್ಲಿ ಕ್ರಿಬ್ ತಯಾರು ಮಾಡುತ್ತಾರೆ. ಭಗವಾನ್ ಯೇಸು ಸ್ವಾಮಿ ಗೋದಲಿಯಲ್ಲಿ ಹುಟ್ಟಿದ್ದಾನೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಅಂದಿನ ದಿನವನ್ನು ಮನೆಗಳಲ್ಲಿ ಗೋದಲಿ ತಯಾರಿಸಿ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲಾಗುತ್ತದೆ. ಉಡುಪಿ ಧರ್ಮ ಪ್ರಾಂತ್ಯದಲ್ಲಿ ಯೇಸು ಕ್ರಿಸ್ತರು ಹುಟ್ಟಿದ ಘಟನೆಯನ್ನು ಮರುಸೃಷ್ಟಿ ಮಾಡಲಾಯಿತು. ಇದನ್ನೂ ಓದಿ: ಯೇಸು ಕ್ರಿಸ್ತರ ಉದಾತ್ತ ಸಂದೇಶಗಳನ್ನು ಸ್ಮರಿಸೋಣ: ಮೋದಿ ಕ್ರಿಸ್‌ಮಸ್‌ ಶುಭಾಶಯ

    ಪ್ರತಿವರ್ಷ ಎಲ್ಲಾ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ವಿವಿಧ ವಿನೋದಾವಳಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು ನಡೆಯುತ್ತವೆ. ಈ ಬಾರಿ ಯಾವುದಕ್ಕೂ ಕೂಡ ಇಲ್ಲ ಅವಕಾಶ ನೀಡಿಲ್ಲ. ಕೊರೊನಾ ಸೋಂಕನ್ನು ಸಂಪೂರ್ಣ ಹತೋಟಿಗೆ ತರುವ ಉದ್ದೇಶ ಹಾಗೂ ಸಮಾಜಕ್ಕೆ ಮಾದರಿಯಾಗಬೇಕೆಂಬ ಹಿನ್ನೆಲೆಯಲ್ಲಿ ಉಡುಪಿ ಬಿಷಪ್ ಈ ನಿಯಮ ರೂಪಿಸಿದ್ದಾರೆ.

    ಸರ್ಕಾರ ನಿಯಮ ರೂಪಿಸುವ ಮೊದಲೇ ಉಡುಪಿ ಬಿಷಪ್ ಒಂದು ನಿರ್ಧಾರಕ್ಕೆ ಬಂದಿದ್ದರು. ಅದನ್ನು ಉಡುಪಿ ಧರ್ಮಪ್ರಾಂತ್ಯದ ಎಲ್ಲರೂ ಪಾಲಿಸಿದ್ದಾರೆ. ಯಾವುದೇ ಚರ್ಚ್‌ಗಳಿಗೆ ಯಾರೂ ಆಸ್ಪದ ಕೊಡಲಿಲ್ಲ ಎಂದು ಉಡುಪಿಯ ಜಸ್ಟಿನ್ ಎರಲ್ ಡಿಸಿಲ್ವ ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದರು.

  • ಯೋಧರ ಮಕ್ಕಳ ಶಿಕ್ಷಣಕ್ಕಾಗಿ ಧನ ಸಂಗ್ರಹಕ್ಕೆ ಮಹಿಳೆಯರಿಂದ ಬೈಕ್ ಜಾಥಾ

    ಯೋಧರ ಮಕ್ಕಳ ಶಿಕ್ಷಣಕ್ಕಾಗಿ ಧನ ಸಂಗ್ರಹಕ್ಕೆ ಮಹಿಳೆಯರಿಂದ ಬೈಕ್ ಜಾಥಾ

    ಬೆಂಗಳೂರು: ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಸಂತಾ ಕ್ಲಾಸ್ ಪೋಷಾಕು ತೊಟ್ಟು ಮಹಿಳೆಯರು ಬೃಹತ್ ಬೈಕ್ ಜಾಥಾ ನಡೆಸಿದರು.

    ನರದಲ್ಲಿಂದು ಮಹಿಳಾ ಸಂಘಟನೆ, ಶೀಫಾರ್ ಸೊಸೈಟಿ ಮತ್ತು ಟಸ್ಕರ್ ಹರ್ಲಿ ವೋನರ್ಸ್ ಗ್ರೂಪ್‌ನಿಂದ ಬೈಕ್ ಜಾಥಾ ನಡೆಸಿದರು. ಈ ಜಾಥಾದಲ್ಲಿ ಸೇನಾ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹ ಆಕರ್ಷಣೀಯವಾಗಿತ್ತು. 100 ಮಹಿಳೆಯರು ರಂಗು ರಂಗಿನ ಸಂತಾ ಕ್ಲಾಸ್ ವೇಷತೊಟ್ಟು ಬೈಕ್‌ನಲ್ಲಿ ಸಂಚರಿಸಿ ಗಮನ ಸೆಳೆದರು.

    ಶೀಫಾರ್ ಸೊಸೈಟಿ ಸಂಸ್ಥಾಪಕ ಸದಸ್ಯರಾದ ಹರ್ಷಿಣಿ ವೆಂಕಟೇಶ್, ವಿದ್ಯಾ ಮಂಜುನಾಥ್, ಶಾಲಿನಿ ದೀಪಕ್, ಕವಿತಾ ಪ್ರಭಾಕರ್ ನೇತೃತ್ವದ ತಂಡ ಬೈಕ್ ಜಾಥಾ ನಡೆಸಿದರು. ಜಾಥಾಗೆ ನಗರದ ಚಾನ್ಸರಿ ಪೆವಿಲಿಯನ್‌ನ ಬಳಿ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಚಾನ್ಸರಿ ಪೆವಲಿಯನ್ ಹೋಟೆಲ್ ನಿರ್ದೇಶಕ ಭಾಸ್ಕರ್ ರಾಜು ಚಾಲನೆ ನೀಡಿದರು.

    ಚಾನ್ಸರಿ ಪೆವಲಿಯನ್ ಹೋಟೆಲ್ ಮುಂಭಾಗದಿಂದ ರೆಸಿಡೆನ್ಸಿ ರಸ್ತೆ, ಮೆಯೋ ಹಾಲ್, ಎಂ.ಜಿ. ರಸ್ತೆ, ವಿಧಾನಸೌಧ, ನೃಪತುಂಗ ರಸ್ತೆ, ಹಡ್ಸನ್ ಸರ್ಕಲ್, ಕಂಠೀರವ ಸ್ಟೇಡಿಯಂ, ಮಲ್ಯ ಆಸ್ಪತ್ರೆ ಮೂಲಕ ಹಾದುಹೋಗಿ ಮತ್ತೆ ಚಾನ್ಸರಿ ಪೆವಿಲಿಯನ್ ಹೋಟೆಲ್ ಬಳಿ ಜಾಥಾ ಕೊನೆಗೊಂಡಿತು. ಇದನ್ನೂ ಓದಿ: ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

    ಶೀಫಾರ್ ಸೊಸೈಟಿಯು ಸೇನಾ ಯೋಧರ ಮಕ್ಕಳಿಗೆ ಶಿಕ್ಷಣ ನೀಡುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕೋಲಾರ ಜಿಲ್ಲೆಯ ಎರಡು ಗ್ರಾಮಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಕಂಪ್ಯೂಟರ್‌ಗಳನ್ನು ಒದಗಿಸುತ್ತಿದೆ. ಈ ಗ್ರಾಮಗಳ 200 ಕುಟುಂಬಗಳಿಗೆ ಶೀಫಾರ್ ಸೊಸೈಟಿಯಿಂದ ಸೋಲಾರ್ ಪೆನಲ್‌ಗಳ ಕಿಟ್‌ಗಳನ್ನು ಒದಗಿಸಿದೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

    ಸ್ಪರ್ಶ ಫೌಂಡೇಷನ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಬೆಂಗಳೂರು, ಇಕೆಬಾನ ಅಂತಾರಾಷ್ಟ್ರೀ ವಿಜಯಲಕ್ಷ್ಮಿ ಟೂರಿಸ್ಟ್ ಅಂಡ್ ಟೈಟಾನ್ ಸಂಸ್ಥೆ, ವೈಸ್ ಮಾರ್ಷಲ್ ಬಿ.ಕೆ.ಮುರುಳಿ ಪಾಲ್ಗೊಂಡಿದ್ದರು.

  • ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

    ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕ್ರಿಸ್‍ಮಸ್ ಹಬ್ಬಕ್ಕೆ ಭರ್ಜರಿಯಾಗಿ ತಯಾರಿ ನಡೆಸಿರುವ ಕುರಿತಾಗಿ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಇದೀಗ ರಾಯನ್ ಮೊದಲ ಬಾರಿಗೆ ಸೆಲೆಬ್ರೇಟ್ ಮಾಡಿರುವ ಕ್ರಿಸ್‍ಮಸ್ ಹೇಗೆ ಇತ್ತು ಎನ್ನುವ ಫೋಟೋವನ್ನು ಶೇರ್ ಮಾಡಿದ್ದಾರೆ.

    ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು, ನಿಮ್ಮ ಜೀವನದುದ್ದಕ್ಕೂ ಬೆಳಕು, ಪ್ರೀತಿ ಸದಾ ಇರಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮಗನ ಜೊತೆಗೆ ಕ್ರಿಸ್‍ಮಸ್ ಟ್ರೀ ಪಕ್ಕದಲ್ಲಿ ಕುಳಿತುಕೊಂಡು ನಗುತ್ತಾ ಪೋಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಫೋಟೋವನ್ನು ಮೆಚ್ಚಿ ರಾಯನ್ ಸೆಲೆಬ್ರೇಟ್ ಮಾಡುತ್ತಿರುವ ಮೊದಲ ಕ್ರಿಸ್‍ಮಸ್‍ಗೆ ಶುಭ ಕೋರುತ್ತಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ: ನಳಿನ್ ಕುಮಾರ್ ಕಟೀಲ್

    ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಹಿಂದೂ ಆಗಿದ್ದು, ಅವರ ತಾಯಿ ಪ್ರಮೀಳಾ ಜೋಷಾಯಿ ಕ್ರಿಶ್ಚಿಯನ್ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಮೇಘನಾ ಮನೆಯಲ್ಲಿ ಯಾವುದೇ ಹಿಂದೂ ಹಾಗೂ ಕ್ರಿಶ್ಚಿಯನ್ ಹಬ್ಬಗಳು ಬಂದಾಗ ಎರಡು ಹಬ್ಬವನ್ನೂ ಸಮನವಾಗಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

    ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಈ ದಂಪತಿಯ ಪ್ರೀತಿಯ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರ ನಾಮಕರಣ ಮಾಡಲಾಗಿತ್ತು.

    meghana raj

    ರಾಯನ್ ಎಂಬ ಹೆಸರು ಎಲ್ಲ ಧರ್ಮಕ್ಕೂ ಸೇರಿದೆ. ಬೇರೆ ಬೇರೆ ವರ್ಷನ್, ಬೇರೆ ಬೇರೆ ರೀತಿಯಲ್ಲಿ ಉಚ್ಛಾರಣೆ ಇರಬಹುದು, ಆದರೆ ಅರ್ಥ ಒಂದೇ. ರಾಯನ್ ಸರ್ಜಾ ಎಂದರೆ ಯುವರಾಜ ಎಂಬ ಅರ್ಥವಿದೆ ಎಂದು ಮೇಘನಾ ಸ್ಪಷ್ಟಪಡಿಸಿದ್ದರು.

  • ಯೇಸು ಕ್ರಿಸ್ತರ ಉದಾತ್ತ ಸಂದೇಶಗಳನ್ನು ಸ್ಮರಿಸೋಣ: ಮೋದಿ ಕ್ರಿಸ್‌ಮಸ್‌ ಶುಭಾಶಯ

    ಯೇಸು ಕ್ರಿಸ್ತರ ಉದಾತ್ತ ಸಂದೇಶಗಳನ್ನು ಸ್ಮರಿಸೋಣ: ಮೋದಿ ಕ್ರಿಸ್‌ಮಸ್‌ ಶುಭಾಶಯ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ವಿಶ್ವದ ಎಲ್ಲರಿಗೂ ಕ್ರಿಸ್‌ಮಸ್‌ ಶುಭಾಶಯ ಕೋರಿದ್ದಾರೆ. ಯೇಸು ಕ್ರಿಸ್ತರ ಉದಾತ್ತ ಸಂದೇಶಗಳನ್ನು ಸ್ಮರಿಸೋಣ ಎಂದು ಮೋದಿ ಅವರು ಸಂದೇಶ ನೀಡಿದ್ದಾರೆ.

    ಎಲ್ಲರಿಗೂ ಕ್ರಿಸ್‌ಮಸ್‌ ಶುಭಾಶಯಗಳು! ಏಸು ಕ್ರಿಸ್ತರ ಜೀವನ, ಉದಾತ್ತ ಸಂದೇಶಗಳನ್ನು ನಾವು ನೆನೆಯೋಣ. ಸೇವೆ, ದಯೆ, ನಮ್ರತೆಯನ್ನು ಯೇಸು ಕ್ರಿಸ್ತರ ಸಂದೇಶಗಳು ಪ್ರತಿಪಾದಿಸಿವೆ. ಎಲ್ಲರೂ ಆರೋಗ್ಯ, ಸಾಮರಸ್ಯದಿಂದಿರಿ ಎಂದು ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

    ನಾಗರಿಕರು, ವಿಶೇಷವಾಗಿ ಕ್ರೈಸ್ತ ಸಹೋದರ-ಸಹೋದರಿಯರಿಗೆ ಕ್ರಿಸ್‌ಮಸ್‌ ಹಬ್ಬದ ಶುಭಾಶಯಗಳು. ಈ ಸಂತೋಷದಾಯಕ ಸಂದರ್ಭದಲ್ಲಿ, ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಆಧರಿಸಿ ಸಮಾಜವನ್ನು ನಿರ್ಮಿಸಲು ನಮ್ಮ ಜೀವನದಲ್ಲಿ ಯೇಸು ಕ್ರಿಸ್ತರ ಬೋಧನೆಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಕರೆ ನೀಡಿದ್ದಾರೆ.

    ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಟ್ವೀಟ್‌ ಮಾಡಿ, ಎಲ್ಲರಿಗೂ ಕ್ರಿಸ್‌ಮಸ್‌ ಶುಭಾಶಯಗಳು. ಎಲ್ಲ ಆರೋಗ್ಯ, ಸಂತೋಷ ಮತ್ತು ಸಾಮರಸ್ಯವನ್ನು ಬಯಸುತ್ತೇನೆ ಎಂದು ಶುಭಹಾರೈಸಿದ್ದಾರೆ. ಇದನ್ನೂ ಓದಿ: ರಾಧೆ ಶ್ಯಾಮ್ ಸಿನಿಮಾದ ಕ್ಲೈಮ್ಯಾಕ್ ಹೈಲೈಟ್ ಆಗಿರುತ್ತೆ: ಪ್ರಭಾಸ್

    ವಿಶ್ವದೆಲ್ಲೆಡೆ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ವ್ಯಾಪಕವಾಗಿ ಹರಡುತ್ತಿದ್ದು, ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕ್ರಿಸ್‌ಮಸ್‌ ಅದ್ದೂರಿ ಆಚರಣೆಗೆ ತಡೆ ನೀಡಿರುವ ಸರ್ಕಾರಗಳು, ಕೋವಿಡ್‌ ನಿಯಮಗಳನ್ನು ಪಾಲಿಸಿ ಸರಳವಾಗಿ ಕ್ರಿಸ್‌ಮಸ್‌ ಆಚರಿಸುವಂತೆ ಜನತೆಗೆ ಸಲಹೆ ನೀಡಿವೆ.

  • ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

    ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

    ಭುವನೇಶ್ವರ: ವಿಶ್ವದೆಲ್ಲೆಡೆ ಇಂದು ಕ್ರಿಸ್‌ಮಸ್‌ ಸಂಭ್ರಮ ಮನೆಮಾಡಿದೆ. ಈ ನಡುವೆ ಕಲಾವಿದರೊಬ್ಬರು ತಮ್ಮ ವಿಶಿಷ್ಟ ಕಲೆಯ ಮೂಲಕ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್‌ ಶುಭಾಶಯ ತಿಳಿಸಿದ್ದಾರೆ.

    ಹೌದು, ಅಂತಾರಾಷ್ಟ್ರೀಯ ಮರಳು ಶಿಲ್ಪ ಕಲಾವಿದ ಸುದರ್ಶನ್‌ ಪಾಟ್ನಾಯಕ್‌ ಅವರು, ಪುರಿ ಕಡಲ ತೀರದಲ್ಲಿ ಸುಮಾರು 5,400 ಗುಲಾಬಿಗಳನ್ನು ಬಳಸಿ ಸಂತಾ ಕ್ಲಾಸ್‌ ಅವರ ಕಲಾಕೃತಿ ರೂಪಿಸಿ ಗಮನ ಸೆಳೆದಿದ್ದಾರೆ. ಆ ಮೂಲಕ ಕ್ರೈಸ್ತ ಬಾಂಧವರಿಗೆ ವಿಶಿಷ್ಟ ರೀತಿಯಲ್ಲಿ ಕ್ರಿಸ್‌ಮಸ್‌ ಶುಭಕೋರಿದ್ದಾರೆ. ಇದನ್ನೂ ಓದಿ: ಕೊರೊನಾ ಟೈಮ್ ನಲ್ಲಿ ನೀವು ಮಾಡಿದ ಕೆಲಸಕ್ಕೆ ಹ್ಯಾಂಡ್ ಸಾಫ್ ಎಂದ ರಚಿತಾ

    ಕೆಂಪು ಹಾಗೂ ಬಿಳಿ ಗುಲಾಬಿ ಹೂಗಳನ್ನು ಬಳಸಿಕೊಂಡು ಸಮುದ್ರ ತೀರದ ಮರಳಿನಲ್ಲಿ ಸಂತಾ ಕ್ಲಾಸ್‌ ಕಲಾಕೃತಿ ಮೂಡಿಸಿದ್ದಾರೆ. ಜೊತೆಗೆ ʼಕ್ರಿಸ್‌ಮಸ್‌ ಶುಭಾಶಯಗಳು, ಕೋವಿಡ್‌ ನಿಯಮಗಳನ್ನು ಪಾಲಿಸಿ ಕ್ರಿಸ್‌ಮಸ್‌ ಆಚರಿಸಿʼ ಎಂಬ ಸಾಲುಗಳನ್ನು ಬರೆದು ವಿಶ್‌ ಮಾಡಿದ್ದಾರೆ.

    ಸುಮಾರು 28 ಅಡಿ ಅಗಲ ಮತ್ತು 50 ಅಡಿ ಉದ್ದದಲ್ಲಿ ಸಂತಾ ಕ್ಲಾಸ್‌ ಅವರ ಕಲಾಕೃತಿ ಮೂಡಿಬಂದಿದೆ. ಈ ಕಲಾಕೃತಿಯನ್ನು ರೂಪಿಸಲು ಸುದರ್ಶನ್‌ ಅವರು ಸುಮಾರು 8 ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಮರಳು ಶಿಲ್ಪ ಕಲಾಸಂಸ್ಥೆಯ ಸಹಕಾರವನ್ನೂ ಪಡೆದಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಮಿಗ್-21 ವಿಮಾನ ಪತನ – ಪೈಲಟ್‍ ಹುತಾತ್ಮ

    ಕೊರೊನಾ ಸಾಂಕ್ರಾಮಿಕ ಇಡೀ ವಿಶ್ವವನ್ನು ವ್ಯಾಪಿಸಿ ಸಂಕಷ್ಟ ಉಂಟುಮಾಡಿರುವುದು ನಮಗೆಲ್ಲರಿಗೂ ತಿಳಿದಿದೆ. ಆದರೂ ನಾವು ಹಬ್ಬ ಆಚರಣೆಗಳನ್ನು ಮಾಡುತ್ತಿದ್ದೇವೆ. ಕೋವಿಡ್‌ ನಿಯಮಗಳನ್ನು ಪಾಲಿಸಿ ಕ್ರಿಸ್‌ಮಸ್‌ ಆಚರಿಸುವಂತೆ ಕಲಾಕೃತಿ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಈ ಕಲಾಕೃತಿಯು ದಾಖಲೆ ಪುಸ್ತಕದಲ್ಲಿ ಹೆಸರಾಗುತ್ತದೆ ಎಂದು ಕಲಾವಿದ ಸುದರ್ಶನ್‌ ಪ್ರತಿಕ್ರಿಯಿಸಿದ್ದಾರೆ.

  • ರಾಜ್ಯಾದ್ಯಂತ ಡಿ.30 ರಿಂದ ಜ.2 ರವರೆಗೆ ಮಾಸ್ ಆಚರಣೆಗೆ ನಿರ್ಬಂಧ: ಬೊಮ್ಮಾಯಿ

    ರಾಜ್ಯಾದ್ಯಂತ ಡಿ.30 ರಿಂದ ಜ.2 ರವರೆಗೆ ಮಾಸ್ ಆಚರಣೆಗೆ ನಿರ್ಬಂಧ: ಬೊಮ್ಮಾಯಿ

    ಬೆಳಗಾವಿ: ರಾಜ್ಯಾದ್ಯಂತ ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ಹೊಸ ವರ್ಷದ ಸಾಮೂಹಿಕ ಆಚರಣೆಗೆ ನಿರ್ಬಂಧ ಹೇರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಸುವರ್ಣಸೌಧದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ ಬಗ್ಗೆ ಚರ್ಚೆ ನಡೆಸಲಾಯಿತು. ಅಲ್ಲದೆ ಕ್ರಿಸ್ ಮಸ್, ಹೊಸ ವರ್ಷ ಆಚರಣೆ ಬಗ್ಗೆಯೂ ಚರ್ಚಿಸಲಾಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಾಸ್ ಆಚರಣೆಗೆ ಅವಕಾಶವಿಲ್ಲ. ಕ್ರಿಸ್ ಮಸ್ ಗೆ ಯಾವುದೇ ನಿರ್ಬಂಧ ಇಲ್ಲ. ಎಂಜಿ ರೋಡ್ ಬ್ರಿಗೇಡ್ ರೋಡ್ ಗಳೆಲ್ಲ ಡಿಜೆ ಬ್ಯಾನ್ ಮಾಡಲಾಗುತ್ತದೆ ಎಂದರು. ಇದನ್ನೂ ಓದಿ: ಏಯ್ ಅಧ್ಯಕ್ಷ ಬಾರಯ್ಯ ಕೂತ್ಕೋ. ನನ್ನ ಜಿಲ್ಲೆಯಲ್ಲಿ ಯಾವುದೇ ಸಭೆ ಮಾಡ್ಬೇಡ – ಡಿಕೆಶಿಗೆ ಸಿದ್ದು ವಾರ್ನಿಂಗ್

    ಒಟ್ಟಿನಲ್ಲಿ ಬಹಿರಂಗ ಹೊಸ ವರ್ಷ ಆಚರಣೆಗೆ ನಿಷೇಧ ಹೇರಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2 ರವರೆಗಿನ ನಿರ್ಬಂಧ ರಾಜ್ಯಾದ್ಯಂತ ಅನ್ವಯವಾಗಲಿದೆ. ಪಬ್ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ 50% ಅವಕಾಶ ನೀಡಲಾಗುತ್ತಿದೆ. ಇನ್ನು ಸಿಬ್ಬಂದಿಗೆ ಡಬಲ್ ಡೋಸ್ ಲಸಿಕೆ ಹಾಕಿಸಿರಬೇಕು ಎಂದು ಹೇಳಿದರು.