Tag: Christmas celebrations

  • ಕ್ರಿಸ್ಮಸ್ ಟ್ರೀ – ಏನಿದರ ಇತಿಹಾಸ, ಮಹತ್ವ?

    ಕ್ರಿಸ್ಮಸ್ ಟ್ರೀ – ಏನಿದರ ಇತಿಹಾಸ, ಮಹತ್ವ?

    ಕ್ರಿಸ್ಮಸ್ ಹಬ್ಬ ಬಂತೆಂದರೆ ಸಾಕು ಅಲಂಕಾರಿಕ ವಸ್ತುಗಳು ನಮ್ಮನ್ನು ಎಲ್ಲೆಡೆಯೂ ಸೆಳೆಯುತ್ತಲಿರುತ್ತವೆ. ಹಾಗೆಯೇ ಕ್ರಿಸ್ಮಸ್ ಹಬ್ಬದ ಸಾಂಕೇತಿಕ ರೂಪವೆಂದರೆ ಅದು ಕ್ರಿಸ್ಮಸ್ ಟ್ರೀ

    ಸಾಮಾನ್ಯವಾಗಿ ಕ್ರಿಸ್ಮಸ್ ಹಬ್ಬದಲ್ಲಿ ಅಲಂಕಾರಿಕ ವಸ್ತುಗಳು, ಕೇಕ್ ಹಾಗೂ ಇನ್ನಿತರ ಸಿಹಿ ತಿಂಡಿಗಳು, ಕ್ರಿಸ್ಮಸ್ ಟ್ರೀ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತದೆ. ಈ ಹಬ್ಬದಲ್ಲಿ ಮುಖ್ಯವಾಗಿ ಆಕರ್ಷಣೆಗೊಳಪಡುವ ಕ್ರಿಸ್ಮಸ್ ಟ್ರೀಯ ಮಹತ್ವ ಹಾಗೂ ಇತಿಹಾಸ ಇಲ್ಲಿದೆ.

    ಕ್ರಿಸ್ಮಸ್ ಟ್ರೀ ಇತಿಹಾಸ:
    ಒಂದು ದಂತ ಕಥೆಯ ಪ್ರಕಾರ, ಒಮ್ಮೆ ಥರ್‌ದೇವರಿಗೆ ಮುಗ್ಧ ಮಗುವನ್ನು ಬಲಿಕೊಡಬೇಕೆಂದು ಗ್ರಾಮದ ಜನರೆಲ್ಲರೂ ನಿರ್ಧಾರ ಮಾಡಿ ಒಂದೇ ಸ್ಥಳದಲ್ಲಿ ಎಲ್ಲರನ್ನೂ ಒಗ್ಗೂಡಿಸಿದ್ದರು. ಇದನ್ನು ನೋಡಿದ ಇಂಗ್ಲಿಷ್ ಸಂನ್ಯಾಸಿ ಸಂತ ಬೋನಿಫೇಸ್ ಮಗುವನ್ನು ರಕ್ಷಿಸಲು ಮರವೊಂದು ಕೆಳಗೆ ಬೀಳುವಂತೆ ಮಾಡುತ್ತಾನೆ. ಆಗ ಆ ಸ್ಥಳದಲ್ಲಿ ಒಂದು ಸಣ್ಣ ಮರವೊಂದು ಬೆಳೆಯುತ್ತದೆ.

    ಆ ಸಂತನ ಪ್ರಕಾರ ಅದೇ ಮರ ಕ್ರಿಸ್ತನ ಶಾಶ್ವತತೆಯನ್ನು ಸಂಕೇತಿಸುತ್ತದೆ ಮತ್ತು ಅದನ್ನು ‘ ಟ್ರೀ ಆಫ್ ಲೈಫ್’ ಎಂದು ಕರೆಯಲಾಗುತ್ತದೆ. ಬದುಕಿನ ಸಂಕೇತವಾಗಿ ಮರವನ್ನು ಹಿಂದಿನಿಂದಲೂ ಆಭರಣ ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ಇದನ್ನು ಬದುಕಿನ ಸಕಾರಾತ್ಮಕ ಮನೋಭಾವದ ಸಂಕೇತವಾಗಿ ಪೂಜಿಸಲಾಗುತ್ತದೆ. ಹೊಸ ವರ್ಷದ ಮುನ್ನುಡಿ ಬರೆಯುವ ಈ ಹಬ್ಬ ಸಂಭ್ರಮ, ಸಂತೋಷದ ಜೊತೆಗೆ ಎಲ್ಲೆಡೆ ಶಾಂತಿಯನ್ನು ಪಸರಿಸಲಿ ಎಂಬ ಸದಾಶಯದೊಂದಿಗೆ ಎಲ್ಲರೂ ಸೇರಿ ಈ ಭಗವಂತನಲ್ಲಿ ಪ್ರಾರ್ಥನೆ ಮಾಡಿ ನವವರ್ಷವನ್ನು ಬರಮಾಡಿಕೊಳ್ಳೋಣ.

    ಕ್ರಿಸ್ಮಸ್ ಟ್ರೀ ಮಹತ್ವ:
    ಕ್ರಿಸ್ಮಸ್ ಟ್ರೀಯನ್ನು ಶಾಶ್ವತ ಜೀವನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಂಪ್ರದಾಯವು ಮೊದಲು ಜರ್ಮನಿಯಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ನಂತರ ಅದು 1830ರ ದಶಕದಲ್ಲಿ ಇಂಗ್ಲೆಂಡ್‌ಗೆ ಪಸರಿಸಿತು. ದಂತಕಥೆಯ ಪ್ರಕಾರ ಚಳಿಗಾಲದಲ್ಲಿ ಯೇಸು ಕ್ರಿಸ್ತನ ಜನನದ ನಂತರ, ಹಿಮದಿಂದ ಕೂಡಿದ್ದ ಮರಗಳು ಹಸಿರು ಬಣ್ಣಕ್ಕೆ ತಿರುಗಿದವು. ಹೀಗಾಗಿ ಕ್ರಿಸ್ಮಸ್ ಟ್ರೀಯನ್ನು ಶಾಶ್ವತತೆ ಹಾಗೂ ಧನಾತ್ಮಕತೆಗೆ ಹೋಲಿಸಲಾಗುತ್ತದೆ.

    ಕ್ರಿಸ್ಮಸ್ ಟ್ರೀ ವಾತಾವರಣದಲ್ಲಿ ಉಲ್ಲಾಸ, ಸಕಾರಾತ್ಮಕತೆ ಮತ್ತು ಚೈತನ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಹಸಿರು ಬಿಟ್ಟುಕೊಡದೇ ಉಳಿಸುವ ಮನೋಭಾವನೆ ಕ್ರಿಸ್ಮಸ್ ಟ್ರೀ ಹೊಂದಿದೆ. ಈ ನಿತ್ಯಹರಿದ್ವರ್ಣ ಮರದಿಂದ ಹೊರಹೊಮ್ಮುವ ಸಿಹಿ ಸುವಾಸನೆಯು ದೈನಂದಿನ ಒತ್ತಡದಿಂದ ನಿಮ್ಮನ್ನು ವಿಶ್ರಾಂತಿಯಾಗಿರಿಸಲು ಸಹಾಯ ಮಾಡುತ್ತದೆ.

    ಆರಂಭದ ದಿನಗಳಲ್ಲಿ ಕ್ರಿಸ್ಮಸ್ ಟ್ರೀ ಟ್ರೀಗೆ ಜಿಂಜರ್ ಬ್ರೆಡ್, ಸೇಬು ಮುಂತಾದ ಆಹಾರ ಪದಾರ್ಥಗಳಿಂದ ಅಲಂಕಾರ ಮಾಡುತ್ತಿದ್ದರು. ಆದರೆ ಕಾಲಾನಂತರದಲ್ಲಿ ಸಂಪ್ರದಾಯಗಳು ವಿಕಸನಗೊಂಡು ಈಗ ವಿದ್ಯುತ್ ದೀಪಗಳು, ಮಿಠಾಯಿಗಳು, ಮಿನುಗುವ ನಕ್ಷತ್ರಗಳು, ಹಲವು ಬಣ್ಣದ ಕಾಗದಗಳಿಂದ ಕತ್ತರಿಸಿದ ಹಾಗೂ ಚಿನ್ನದ ಹಾಳೆಗಳು, ಬೆಳ್ಳಿಯ ತಂತಿಗಳು, ಸಾಂತಾ ಕ್ಲಾಸ್ ಬೊಂಬೆಗಳು, ಮತ್ತು ಸಣ್ಣ ಗೊಂಬೆಗಳನ್ನು ಅಲಂಕಾರಿಕ ವಸ್ತುಗಳಾಗಿ ಬಳಸುತ್ತಾರೆ.

  • ಕ್ರಿಸ್‌ಮಸ್‌ ಸಂಭ್ರಮ – ನೀವೂ ವಿಶ್‌ ಮಾಡ್ಬೇಕಾ? ವಾಟ್ಸಪ್‌ ಸ್ಟೇಟಸ್‌ಗೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

    ಕ್ರಿಸ್‌ಮಸ್‌ ಸಂಭ್ರಮ – ನೀವೂ ವಿಶ್‌ ಮಾಡ್ಬೇಕಾ? ವಾಟ್ಸಪ್‌ ಸ್ಟೇಟಸ್‌ಗೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

    ಕ್ರಿಸ್‌ಮಸ್ ಅಂದ್ರೆ ಕ್ರೈಸ್ತರಿಗೆ ಬಹಳ ಸಂಭ್ರಮ, ಸಡಗರ. ವರ್ಷದ ಕೊನೆಯಲ್ಲಿ ಬರುವ ಹಬ್ಬಕ್ಕಾಗಿ ಕ್ರೈಸ್ತ ಬಾಂಧವರು ವರ್ಷಪೂರ್ತಿ ಕಾಯುತ್ತಾರೆ. ಕ್ರಿಸ್‌ಮಸ್ ಟ್ರೀ ತಂದು ಸಿಂಗರಿಸುವುದು, ಮನೆಯಲ್ಲಿ ಮತ್ತು ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸಿ, ಯೇಸುಕ್ರಿಸ್ತನ ಹುಟ್ಟುಹಬ್ಬವನ್ನ ಸಂಭ್ರಮಿಸಲಾಗುತ್ತದೆ. ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಮುನ್ನಾದಿನ ರಾತ್ರಿ ವಿಶೇಷ ಪೂಜೆ, ಪ್ರಾರ್ಥನೆ ಇರುತ್ತದೆ. ಕ್ರೈಸ್ತರು ಕೇಕ್ ಹಂಚುವ ಮೂಲಕ ಕ್ರಿಸ್‌ಮಸ್ ಆಚರಿಸುತ್ತಾರೆ. ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ರೂಪದಲ್ಲಿ, ಹಲವು ಪದ್ಧತಿ ಮತ್ತು ಪ್ರಕಾರಗಳ ಮೂಲಕ ಕ್ರಿಸ್‌ಮಸ್ ಆಚರಿಸಲಾಗುತ್ತದೆ.

    ಇದೊಂದು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷ, ಪ್ರೀತಿ ಹಂಚಿಕೊಳ್ಳುವ ಮೂಲಕ ಆಚರಿಸುವ ಹಬ್ಬವಾಗಿದೆ. ಈ ಹಬ್ಬದ ದಿನದಂದು ಕ್ರೈಸ್ತ ಬಾಂಧವರು ಮುಂಜಾನೆಯೇ ಚರ್ಚ್‌ಗಳಿಗೆ ಭೇಟಿ ನೀಡಿ ಅವರ ದೇವರ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಚರ್ಚ್‌ಗಳಲ್ಲಿ ಮತ್ತು ಮನೆಗಳಲ್ಲಿ ಕ್ಯಾಂಡಲ್‌ ಹಚ್ಚುವ ಮೂಲಕ ಹಬ್ಬ ಪ್ರಾರಂಭಿಸುತ್ತಾರೆ. ಮನೆಯಲ್ಲಿ ಕೇಕ್‌, ಚಾಕೋಲೇಟ್‌ಗಳಂತಹ ಸಿಹಿ ತಯಾರಿಸಿ ಹಂಚುವ ಮೂಲಕ ತಮ್ಮ ಪ್ರೀತಿ, ಬಾಂಧವ್ಯ ಗಟ್ಟಿ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ಅವರು ತಮ್ಮ ಪ್ರೀತಿ ಪಾತ್ರರಿಗೆ, ಸಂಬಂಧಿಕರಿಗೆ ಬಂಧುಗಳಿಗೆ ಶುಭಾಶಯ ತಿಳಿಸುತ್ತಾರೆ. ನಿಮಗೂ ಶುಭಾಶಯ ಹಂಚಿಕೊಳ್ಳುವ ಆಸೆಯಿದ್ದರೆ.. ಅದಕ್ಕೆ ಸಿಂಪಲ್‌ ಟಿಪ್ಸ್‌ ಇಲ್ಲಿದೆ… ಮುಂದೆ ಓದಿ…

    2025ರ ಕ್ರಿಸ್‌ಮಸ್‌ ಹಬ್ಬದ ಶುಭಾಶಯಕ್ಕೆ ಕೋಟ್ಸ್‌

    1. ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್‌ 2024ರ ಹಾರ್ದಿಕ ಶುಭಾಶಯಗಳು.
    2. ನಾಡಿನ ಸಮಸ್ತ ಜನತೆಗೆ ಕ್ರಿಸ್‌ಮಸ್‌ ಹಬ್ಬದ ಹಾರ್ದಿಕ ಶುಭಾಶಯಗಳು.
    3. ಈ ವರ್ಷದ ಕ್ರಿಸ್‌ಮಸ್‌ಹಬ್ಬ ನಿಮ್ಮ ಬಾಳಲ್ಲಿ ಪ್ರೀತಿ, ಶಾಂತಿ ಮತ್ತು ಸಂತೋಷ ತುಂಬಲಿ… ಎಲ್ಲರಿಗೂ ಮೇರಿ ಕ್ರಿಸ್‌ಮಸ್‌.
    4. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಕ್ರಿಸ್‌ಮಸ್‌ ಹಬ್ಬದ ಹಾರ್ದಿಕ ಶುಭಾಶಯಗಳು.
    5. ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರಿದ, ತ್ಯಾಗ, ಕರುಣೆಗಳ ಸಾಕಾರ ಮೂರ್ತಿ ಏಸುಕ್ರಿಸ್ತನ ಜನ್ಮದಿನವಾದ ಇಂದು ಎಲ್ಲರಿಗೂ ಆಯಸ್ಸು ಶುಭವನ್ನು ತರಲಿ. ಕ್ರಿಸ್‌ಮಸ್‌ ಹಬ್ಬದ ಹಾರ್ದಿಕ ಶುಭಾಶಯಗಳು.
    6. ಈ ವರ್ಷದ ಕ್ರಿಸ್‌ಮಸ್‌ನೊಂದಿಗೆ ಹಳೆಯ ವರ್ಷಕ್ಕೆ ವಿದಾಯ ಹೇಳೋಣ. ಮುಂದಿನ ಹೊಸ ವರ್ಷಕ್ಕೆ ಶುಭ ಕೋರುತ್ತಾ ಎಲ್ಲವನ್ನು ಸಕಾರಾತ್ಮಕತೆಯಿಂದಲೇ ತೆಗೆದುಕೊಳ್ಳೋಣ. ಪ್ರತಿಯೊಬ್ಬರಿಗೂ ಕ್ರಿಸ್‌ಮಸ್‌ 2024ರ ಮತ್ತು 2025 ಹೊಸ ವರ್ಷದ ಶುಭಾಶಯಗಳು.
    7. ಯೇಸು ಕ್ರಿಸ್ತನು ನಿಮ್ಮ ಬಾಳಿನಲ್ಲಿ ಬಯಸಿದ್ದೆಲ್ಲವನ್ನ ಕರುಣಿಸಲಿ.. ಕ್ರಿಸ್‌ಮಸ್‌ 2024ರ ಹಾರ್ದಿಕ ಶುಭಾಶಯಗಳು.
    8. ಯೇಸು ಕ್ರಿಸ್ತನ ಆಶೀರ್ವಾದ ಪ್ರತಿಯೊಬ್ಬರ ಮೇಲೂ ಇರಲಿ.. ಕ್ರಿಸ್‌ಮಸ್‌ 2024ರ ಶುಭಾಶಯಗಳು.
    9. ನಿಮ್ಮೆಲ್ಲಾ ಒತ್ತಡವು ಮರೆಯಾಗಲಿ, ನಿಮ್ಮ ಹೃದಯವು ಶಾಂತಿ ಮತ್ತು ಐಶ್ವರ್ಯದಿಂದ ತುಂಬಿರಲಿ.. ಮೇರಿ ಕ್ರಿಸ್‌ಮಸ್‌ 2024.
    10. ಕ್ರಿಸ್‌ಮಸ್‌ ಟ್ರೀ ಯಂತೆ ಬದುಕು ಸದಾ ಸುಂದರವಾಗಿರಲಿ, ಕ್ರಿಸ್‌ಮಸ್‌ ಮೇಣದ ಬತ್ತಿಯ ಬೆಳಕಿನಂತೆ ಬದುಕಿನಲ್ಲಿ ಸದಾ ಬೆಳಕು ತುಂಬಿರಲಿ, ಕ್ರಿಸ್‌ಮಸ್‌ ಕೇಕಿನ ಸಿಹಿಯಂತೆ ಬದುಕಿನ ತುಂಬಾ ಸಿಹಿ ಇರಲಿ ಎಂದು ಹಾರೈಸುತ್ತಾ ಕ್ರಿಸ್‌ಮಸ್‌ 2024ರ ಶುಭಾಶಯಗಳು.
    11. ನಿಮ್ಮ ಜೀವನದಲ್ಲಿ ಸದಾ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿ ತುಂಬಿರಲಿ. ಯೇಸುಕ್ರಿಸ್ತನು ಸದಾ ನಿಮಗೆ ಒಳಿತನ್ನೇ ಮಾಡಲಿ.. ಕ್ರಿಸ್‌ಮಸ್‌ 2024ರ ಹಾರ್ದಿಕ ಶುಭಾಶಯಗಳು.
    12. ಯೇಸುವಿನ ಕೃಪೆಯಿಂದ ಕಷ್ಟಗಳೆಲ್ಲಾ ಮಂಜಿನಂತೆ ಕರಗಲಿ. ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೂ ಕ್ರಿಸ್‌ಮಸ್‌ 204ರ ಹಾರ್ದಿಕ ಶುಭಾಶಯಗಳು.

  • ಕ್ರಿಸ್‌ಮಸ್ ಹಬ್ಬ ಆಚರಣೆಯ ಇತಿಹಾಸ, ಮಹತ್ವ ನಿಮಗೆಷ್ಟು ಗೊತ್ತು?

    ಕ್ರಿಸ್‌ಮಸ್ ಹಬ್ಬ ಆಚರಣೆಯ ಇತಿಹಾಸ, ಮಹತ್ವ ನಿಮಗೆಷ್ಟು ಗೊತ್ತು?

    ಝಗಮಗಿಸುವ ಚರ್ಚ್‌ಗಳು, ವಿದ್ಯುತ್ ದೀಪಗಳಿಂದ ಮಿನುಗುವ ಕ್ರಿಸ್‌ಮಸ್ ಟ್ರೀ (Christmas Tree), ಚರ್ಚ್‌ಗಳಿಂದ ಪ್ರಾರ್ಥನೆ, ಸಾಂತಾನಿಂದ ಮಕ್ಕಳಿಗೆ ಸಪ್ರೈಸ್‌ ಉಡುಗೊರೆಗಳು, ಕೈಯಲ್ಲಿ ವೈನ್ ಗ್ಲಾಸ್, ಬಗೆಬಗೆಯ ಕೇಕ್‌ಗಳ ಸ್ವಾದ… ಈ ಎಲ್ಲಾ ವಿಶೇಷತೆಗಳ ಹೂರಣ. ಭಕ್ತಿ ಮತ್ತು ಸಂಭ್ರಮಾಚರಣೆ. ಪ್ರೀತಿ, ಶಾಂತಿ, ಸೌಹಾರ್ದತೆ ಸಾರಿದ ಏಸುಕ್ರಿಸ್ತನ ಸ್ಮರಣೆ. ಎಲ್ಲವೂ ಮೇಳೈಸಿದ ಹಬ್ಬವೇ ಕ್ರಿಸ್‌ಮಸ್. ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬ ಕ್ರಿಸ್‌ಮಸ್ (Christmas Festival) ಮತ್ತೆ ಬಂದಿದೆ.

    ಪ್ರತಿ ವರ್ಷ ಡಿಸೆಂಬರ್ 25 ರಂದು ಆಚರಿಸುವ ಕ್ರಿಸ್‌ಮಸ್ ಎಂದಾಕ್ಷಣ ನಮಗೆ ನೆನಪಾಗುವುದು ಚರ್ಚ್, ಏಸುಕ್ರಿಸ್ತ, ಕ್ರಿಸ್‌ಮಸ್ ಟ್ರೀ, ಕೇಕ್ ಮತ್ತು ಆಚರಣೆ. ಆದರೆ, ಕ್ರಿಸ್‌ಮಸ್ ಹಬ್ಬದ ಇತಿಹಾಸ ಮತ್ತು ಅದರ ಮಹತ್ವದ ಬಗ್ಗೆ ನಿಮಗೇನಾದರೂ ತಿಳಿದಿದೆಯೇ?

    ಕ್ರಿಸ್‌ಮಸ್ ಇತಿಹಾಸವೇನು?
    ಕ್ರೈಸ್ತ ಧರ್ಮೀಯರ ಈ ಹಬ್ಬಕ್ಕೆ ಶತಮಾನಗಳ ಇತಿಹಾಸವಿದೆ. ಕ್ರಿಸ್‌ಮಸ್ ಆಚರಣೆ ಮೊದಲು ಶುರುವಾಗಿದ್ದು ರೋಮ್ ದೇಶದಲ್ಲಿ ಎಂದು ಹೇಳಲಾಗಿದೆ. ಕ್ರಿಸ್‌ಮಸ್‌ಗೆ ಮುನ್ನ ರೋಮ್‌ನಲ್ಲಿ ಡಿ.25ರ ದಿನವನ್ನು ಸೂರ್ಯ ದೇವರ ಜನ್ಮದಿನವಾಗಿ ಆಚರಿಸಲಾಯಿತು. ಆಗ ರೋಮ್ ಚಕ್ರವರ್ತಿಗಳು ಸೂರ್ಯದೇವನನ್ನು ತಮ್ಮ ದೇವರಾಗಿ ಪರಿಗಣಿಸುತ್ತಿದ್ದರು. ಸೂರ್ಯ ದೇವನನ್ನೇ ಪೂಜಿಸುತ್ತಿದ್ದರು. ಕಾಲಾನಂತರ ಕ್ರಿ.ಶ.330ರ ಹೊತ್ತಿಗೆ ರೋಮ್‌ನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಚಾರವು ವೇಗವಾಗಿ ಬೆಳೆಯಿತು. ಕ್ರೈಸ್ತ ಧರ್ಮದ ಅನುಯಾಯಿಗಳ ಸಂಖ್ಯೆಯೂ ಹೆಚ್ಚಿತು. ಬಳಿಕ ಕ್ರಿ.ಶ.336ರಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳು ‘ಯೇಸುಕ್ರಿಸ್ತನನ್ನು ಸೂರ್ಯದೇವನ ಅವತಾರ’ ಎಂದು ಪರಿಗಣಿಸಿದರು. ಅಂದಿನಿಂದ ಕ್ರಿಸ್‌ಮಸ್ ಹಬ್ಬವನ್ನು ಯೇಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವ ಸಂಪ್ರದಾಯ ಆರಂಭವಾಯಿತು. ಹೀಗಾಗಿ, ಡಿ.25 ರಂದು ಕ್ರಿಸ್‌ಮಸ್ ಹಬ್ಬ ಆಚರಿಸುವ ಪರಿಪಾಠ ಶುರುವಾಯಿತು.

    ಕ್ರೈಸ್ತರಿಗೆ ಹೊಸ ವರ್ಷ
    ಭಾರತೀಯರಿಗೆ ‘ಯುಗಾದಿ’ಯನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಆದರೆ ಕ್ರೈಸ್ತರಿಗೆ ಕ್ರಿಸ್‌ಮಸ್ ಹಬ್ಬವು ಹೊಸ ವರ್ಷವಾಗಿದೆ. ಈ ದಿನವನ್ನು ಕೆಟ್ಟದರ ಮೇಲೆ ಒಳಿತಿನ ವಿಜಯವೆಂದು ಪರಿಗಣಿಸುತ್ತಾರೆ. ಕ್ರಿಸ್ತ ಜನಿಸಿದ ದಿನವೆಂದು ಕ್ರೈಸ್ತರು ಡಿ.25 ರಂದು ಕ್ರಿಸ್‌ಮಸ್ ಆಚರಿಸುತ್ತಾರೆ. ಕ್ರಿಶ್ಚಿಯನ್ ಧರ್ಮದ ಜನರಿಗೆ ಇದು ಸಾಂಪ್ರದಾಯಿಕ ಹಬ್ಬ. ಪರಸ್ಪರ ಕ್ರಿಸ್‌ಮಸ್‌ ಕಾರ್ಡ್ ಉಡುಗೊರೆ ನೀಡುವುದು, ಚರ್ಚ್‌ಗೆ ಹೋಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುವುದು ಜೊತೆಗೆ ಮನೆಗಳನ್ನು ಕ್ರಿಸ್‌ಮಸ್ ಟ್ರೀ ಹಾಗೂ ಹೂಗಳಿಂದ ಅಲಂಕರಿಸುತ್ತಾರೆ. ಸಂಬಂಧಿಕರು, ಸ್ನೇಹಿತರು ಎಲ್ಲರೂ ಒಟ್ಟಿಗೆ ಸೇರಿ ವಿಶೇಷ ಆಹಾರ ಸವಿದು ಸಂಭ್ರಮಿಸುತ್ತಾರೆ.

    ಆಚರಣೆ ಹೇಗೆ?
    ಕ್ರಿಸ್‌ಮಸ್ ಹಬ್ಬದ ದಿನ ಪ್ರಭು ಯೇಸುವಿನ ನೆನಪಿಗಾಗಿ ಗೋಶಾಲೆಯನ್ನು ನಿರ್ಮಿಸುತ್ತಾರೆ. ಈ ಗೋಶಾಲೆಯು ಕುರುಬರೊಂದಿಗಿನ ಯೇಸುವಿನ ಬಾಲ್ಯವನ್ನು ಚಿತ್ರಿಸುತ್ತದೆ. ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುತ್ತಾರೆ. ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುತ್ತಾರೆ. ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುತ್ತಾರೆ. ಕ್ರಿಸ್ಮಸ್‌ಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವ ಮೂಲಕ ಕ್ರಿಸ್‌ಮಸ್ ಹಬ್ಬ ಆಚರಿಸುತ್ತಾರೆ.

    ಗಿಫ್ಟ್ ವಿನಿಮಯ
    ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್‌ಮಸ್ ಹಬ್ಬದ ವಿಶೇಷತೆಗಳಲ್ಲಿ ಒಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ನಂಬಿಕೆ. ‘ಸಾಂಟಾ ಕ್ಲಾಸ್’ ಅಂದ್ರೆ ‘ಸಂತಾ ನಿಕೋಲಾಸ್’. ಇವರು 4ನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತಾ ನಿಕೋಲಾಸ್ ಪ್ರಸಿದ್ಧ. ಹೀಗಾಗಿ, ಪ್ರತಿವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ.

    ಕ್ರಿಸ್‌ಮಸ್ ಹಬ್ಬದ ಪ್ರಾಮುಖ್ಯತೆ
    ಹಿಂದೆಲ್ಲ ಕ್ರಿಸ್‌ಮಸ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರೆ ಈಗ ಪ್ರಪಂಚದಾದ್ಯಂತ ಆಚರಿಸುವ ಹಬ್ಬವಾಗಿ ಮಾರ್ಪಟ್ಟಿದೆ. ಜನರನ್ನು ಪಾಪದಿಂದ ಮುಕ್ತಗೊಳಿಸಲು ಮತ್ತು ಜನರಿಗೆ ಒಳಿತನ್ನು ಮಾಡಲು ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದನು. ಜನರನ್ನು ಪಾಪದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಯೇಸುಕ್ರಿಸ್ತನು ತನ್ನ ಪ್ರಾಣವನ್ನು ತ್ಯಾಗ ಮಾಡಿದನು ಎಂಬ ನಂಬಿಕೆ ಕ್ರಿಸ್‌ಮಸ್ ಹಬ್ಬದ್ದು.

    ಯೇಸುಕ್ರಿಸ್ತನನ್ನು ಬರಮಾಡಿಕೊಳ್ಳುವ ಪ್ರಕ್ರಿಯೆಯಾಗಿ ಮನೆಮನೆಗೂ ತೆರಳಿ ಹಾಡುಗಳನ್ನು ಹಾಡಲಾಗುತ್ತದೆ. ಕ್ರೆöÊಸ್ತ ಧರ್ಮೀಯರು ಕ್ರಿಸ್ಮಸ್‌ಗೆ ಸ್ವಲ್ಪವೇ ಮೊದಲು ಚರ್ಚ್ ಮೊದಲಾದ ಸ್ಥಳಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾರೆ. ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ.