Tag: Christmas 2024

  • ಕ್ರಿಸ್ಮಸ್ ಟ್ರೀ – ಏನಿದರ ಇತಿಹಾಸ, ಮಹತ್ವ?

    ಕ್ರಿಸ್ಮಸ್ ಟ್ರೀ – ಏನಿದರ ಇತಿಹಾಸ, ಮಹತ್ವ?

    ಕ್ರಿಸ್ಮಸ್ ಹಬ್ಬ ಬಂತೆಂದರೆ ಸಾಕು ಅಲಂಕಾರಿಕ ವಸ್ತುಗಳು ನಮ್ಮನ್ನು ಎಲ್ಲೆಡೆಯೂ ಸೆಳೆಯುತ್ತಲಿರುತ್ತವೆ. ಹಾಗೆಯೇ ಕ್ರಿಸ್ಮಸ್ ಹಬ್ಬದ ಸಾಂಕೇತಿಕ ರೂಪವೆಂದರೆ ಅದು ಕ್ರಿಸ್ಮಸ್ ಟ್ರೀ

    ಸಾಮಾನ್ಯವಾಗಿ ಕ್ರಿಸ್ಮಸ್ ಹಬ್ಬದಲ್ಲಿ ಅಲಂಕಾರಿಕ ವಸ್ತುಗಳು, ಕೇಕ್ ಹಾಗೂ ಇನ್ನಿತರ ಸಿಹಿ ತಿಂಡಿಗಳು, ಕ್ರಿಸ್ಮಸ್ ಟ್ರೀ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತದೆ. ಈ ಹಬ್ಬದಲ್ಲಿ ಮುಖ್ಯವಾಗಿ ಆಕರ್ಷಣೆಗೊಳಪಡುವ ಕ್ರಿಸ್ಮಸ್ ಟ್ರೀಯ ಮಹತ್ವ ಹಾಗೂ ಇತಿಹಾಸ ಇಲ್ಲಿದೆ.

    ಕ್ರಿಸ್ಮಸ್ ಟ್ರೀ ಇತಿಹಾಸ:
    ಒಂದು ದಂತ ಕಥೆಯ ಪ್ರಕಾರ, ಒಮ್ಮೆ ಥರ್‌ದೇವರಿಗೆ ಮುಗ್ಧ ಮಗುವನ್ನು ಬಲಿಕೊಡಬೇಕೆಂದು ಗ್ರಾಮದ ಜನರೆಲ್ಲರೂ ನಿರ್ಧಾರ ಮಾಡಿ ಒಂದೇ ಸ್ಥಳದಲ್ಲಿ ಎಲ್ಲರನ್ನೂ ಒಗ್ಗೂಡಿಸಿದ್ದರು. ಇದನ್ನು ನೋಡಿದ ಇಂಗ್ಲಿಷ್ ಸಂನ್ಯಾಸಿ ಸಂತ ಬೋನಿಫೇಸ್ ಮಗುವನ್ನು ರಕ್ಷಿಸಲು ಮರವೊಂದು ಕೆಳಗೆ ಬೀಳುವಂತೆ ಮಾಡುತ್ತಾನೆ. ಆಗ ಆ ಸ್ಥಳದಲ್ಲಿ ಒಂದು ಸಣ್ಣ ಮರವೊಂದು ಬೆಳೆಯುತ್ತದೆ.

    ಆ ಸಂತನ ಪ್ರಕಾರ ಅದೇ ಮರ ಕ್ರಿಸ್ತನ ಶಾಶ್ವತತೆಯನ್ನು ಸಂಕೇತಿಸುತ್ತದೆ ಮತ್ತು ಅದನ್ನು ‘ ಟ್ರೀ ಆಫ್ ಲೈಫ್’ ಎಂದು ಕರೆಯಲಾಗುತ್ತದೆ. ಬದುಕಿನ ಸಂಕೇತವಾಗಿ ಮರವನ್ನು ಹಿಂದಿನಿಂದಲೂ ಆಭರಣ ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ಇದನ್ನು ಬದುಕಿನ ಸಕಾರಾತ್ಮಕ ಮನೋಭಾವದ ಸಂಕೇತವಾಗಿ ಪೂಜಿಸಲಾಗುತ್ತದೆ. ಹೊಸ ವರ್ಷದ ಮುನ್ನುಡಿ ಬರೆಯುವ ಈ ಹಬ್ಬ ಸಂಭ್ರಮ, ಸಂತೋಷದ ಜೊತೆಗೆ ಎಲ್ಲೆಡೆ ಶಾಂತಿಯನ್ನು ಪಸರಿಸಲಿ ಎಂಬ ಸದಾಶಯದೊಂದಿಗೆ ಎಲ್ಲರೂ ಸೇರಿ ಈ ಭಗವಂತನಲ್ಲಿ ಪ್ರಾರ್ಥನೆ ಮಾಡಿ ನವವರ್ಷವನ್ನು ಬರಮಾಡಿಕೊಳ್ಳೋಣ.

    ಕ್ರಿಸ್ಮಸ್ ಟ್ರೀ ಮಹತ್ವ:
    ಕ್ರಿಸ್ಮಸ್ ಟ್ರೀಯನ್ನು ಶಾಶ್ವತ ಜೀವನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಂಪ್ರದಾಯವು ಮೊದಲು ಜರ್ಮನಿಯಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ನಂತರ ಅದು 1830ರ ದಶಕದಲ್ಲಿ ಇಂಗ್ಲೆಂಡ್‌ಗೆ ಪಸರಿಸಿತು. ದಂತಕಥೆಯ ಪ್ರಕಾರ ಚಳಿಗಾಲದಲ್ಲಿ ಯೇಸು ಕ್ರಿಸ್ತನ ಜನನದ ನಂತರ, ಹಿಮದಿಂದ ಕೂಡಿದ್ದ ಮರಗಳು ಹಸಿರು ಬಣ್ಣಕ್ಕೆ ತಿರುಗಿದವು. ಹೀಗಾಗಿ ಕ್ರಿಸ್ಮಸ್ ಟ್ರೀಯನ್ನು ಶಾಶ್ವತತೆ ಹಾಗೂ ಧನಾತ್ಮಕತೆಗೆ ಹೋಲಿಸಲಾಗುತ್ತದೆ.

    ಕ್ರಿಸ್ಮಸ್ ಟ್ರೀ ವಾತಾವರಣದಲ್ಲಿ ಉಲ್ಲಾಸ, ಸಕಾರಾತ್ಮಕತೆ ಮತ್ತು ಚೈತನ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಹಸಿರು ಬಿಟ್ಟುಕೊಡದೇ ಉಳಿಸುವ ಮನೋಭಾವನೆ ಕ್ರಿಸ್ಮಸ್ ಟ್ರೀ ಹೊಂದಿದೆ. ಈ ನಿತ್ಯಹರಿದ್ವರ್ಣ ಮರದಿಂದ ಹೊರಹೊಮ್ಮುವ ಸಿಹಿ ಸುವಾಸನೆಯು ದೈನಂದಿನ ಒತ್ತಡದಿಂದ ನಿಮ್ಮನ್ನು ವಿಶ್ರಾಂತಿಯಾಗಿರಿಸಲು ಸಹಾಯ ಮಾಡುತ್ತದೆ.

    ಆರಂಭದ ದಿನಗಳಲ್ಲಿ ಕ್ರಿಸ್ಮಸ್ ಟ್ರೀ ಟ್ರೀಗೆ ಜಿಂಜರ್ ಬ್ರೆಡ್, ಸೇಬು ಮುಂತಾದ ಆಹಾರ ಪದಾರ್ಥಗಳಿಂದ ಅಲಂಕಾರ ಮಾಡುತ್ತಿದ್ದರು. ಆದರೆ ಕಾಲಾನಂತರದಲ್ಲಿ ಸಂಪ್ರದಾಯಗಳು ವಿಕಸನಗೊಂಡು ಈಗ ವಿದ್ಯುತ್ ದೀಪಗಳು, ಮಿಠಾಯಿಗಳು, ಮಿನುಗುವ ನಕ್ಷತ್ರಗಳು, ಹಲವು ಬಣ್ಣದ ಕಾಗದಗಳಿಂದ ಕತ್ತರಿಸಿದ ಹಾಗೂ ಚಿನ್ನದ ಹಾಳೆಗಳು, ಬೆಳ್ಳಿಯ ತಂತಿಗಳು, ಸಾಂತಾ ಕ್ಲಾಸ್ ಬೊಂಬೆಗಳು, ಮತ್ತು ಸಣ್ಣ ಗೊಂಬೆಗಳನ್ನು ಅಲಂಕಾರಿಕ ವಸ್ತುಗಳಾಗಿ ಬಳಸುತ್ತಾರೆ.

  • ಕ್ರಿಸ್‌ಮಸ್‌ ಸಂಭ್ರಮ – ನೀವೂ ವಿಶ್‌ ಮಾಡ್ಬೇಕಾ? ವಾಟ್ಸಪ್‌ ಸ್ಟೇಟಸ್‌ಗೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

    ಕ್ರಿಸ್‌ಮಸ್‌ ಸಂಭ್ರಮ – ನೀವೂ ವಿಶ್‌ ಮಾಡ್ಬೇಕಾ? ವಾಟ್ಸಪ್‌ ಸ್ಟೇಟಸ್‌ಗೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

    ಕ್ರಿಸ್‌ಮಸ್ ಅಂದ್ರೆ ಕ್ರೈಸ್ತರಿಗೆ ಬಹಳ ಸಂಭ್ರಮ, ಸಡಗರ. ವರ್ಷದ ಕೊನೆಯಲ್ಲಿ ಬರುವ ಹಬ್ಬಕ್ಕಾಗಿ ಕ್ರೈಸ್ತ ಬಾಂಧವರು ವರ್ಷಪೂರ್ತಿ ಕಾಯುತ್ತಾರೆ. ಕ್ರಿಸ್‌ಮಸ್ ಟ್ರೀ ತಂದು ಸಿಂಗರಿಸುವುದು, ಮನೆಯಲ್ಲಿ ಮತ್ತು ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸಿ, ಯೇಸುಕ್ರಿಸ್ತನ ಹುಟ್ಟುಹಬ್ಬವನ್ನ ಸಂಭ್ರಮಿಸಲಾಗುತ್ತದೆ. ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಮುನ್ನಾದಿನ ರಾತ್ರಿ ವಿಶೇಷ ಪೂಜೆ, ಪ್ರಾರ್ಥನೆ ಇರುತ್ತದೆ. ಕ್ರೈಸ್ತರು ಕೇಕ್ ಹಂಚುವ ಮೂಲಕ ಕ್ರಿಸ್‌ಮಸ್ ಆಚರಿಸುತ್ತಾರೆ. ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ರೂಪದಲ್ಲಿ, ಹಲವು ಪದ್ಧತಿ ಮತ್ತು ಪ್ರಕಾರಗಳ ಮೂಲಕ ಕ್ರಿಸ್‌ಮಸ್ ಆಚರಿಸಲಾಗುತ್ತದೆ.

    ಇದೊಂದು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷ, ಪ್ರೀತಿ ಹಂಚಿಕೊಳ್ಳುವ ಮೂಲಕ ಆಚರಿಸುವ ಹಬ್ಬವಾಗಿದೆ. ಈ ಹಬ್ಬದ ದಿನದಂದು ಕ್ರೈಸ್ತ ಬಾಂಧವರು ಮುಂಜಾನೆಯೇ ಚರ್ಚ್‌ಗಳಿಗೆ ಭೇಟಿ ನೀಡಿ ಅವರ ದೇವರ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಚರ್ಚ್‌ಗಳಲ್ಲಿ ಮತ್ತು ಮನೆಗಳಲ್ಲಿ ಕ್ಯಾಂಡಲ್‌ ಹಚ್ಚುವ ಮೂಲಕ ಹಬ್ಬ ಪ್ರಾರಂಭಿಸುತ್ತಾರೆ. ಮನೆಯಲ್ಲಿ ಕೇಕ್‌, ಚಾಕೋಲೇಟ್‌ಗಳಂತಹ ಸಿಹಿ ತಯಾರಿಸಿ ಹಂಚುವ ಮೂಲಕ ತಮ್ಮ ಪ್ರೀತಿ, ಬಾಂಧವ್ಯ ಗಟ್ಟಿ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ಅವರು ತಮ್ಮ ಪ್ರೀತಿ ಪಾತ್ರರಿಗೆ, ಸಂಬಂಧಿಕರಿಗೆ ಬಂಧುಗಳಿಗೆ ಶುಭಾಶಯ ತಿಳಿಸುತ್ತಾರೆ. ನಿಮಗೂ ಶುಭಾಶಯ ಹಂಚಿಕೊಳ್ಳುವ ಆಸೆಯಿದ್ದರೆ.. ಅದಕ್ಕೆ ಸಿಂಪಲ್‌ ಟಿಪ್ಸ್‌ ಇಲ್ಲಿದೆ… ಮುಂದೆ ಓದಿ…

    2025ರ ಕ್ರಿಸ್‌ಮಸ್‌ ಹಬ್ಬದ ಶುಭಾಶಯಕ್ಕೆ ಕೋಟ್ಸ್‌

    1. ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್‌ 2024ರ ಹಾರ್ದಿಕ ಶುಭಾಶಯಗಳು.
    2. ನಾಡಿನ ಸಮಸ್ತ ಜನತೆಗೆ ಕ್ರಿಸ್‌ಮಸ್‌ ಹಬ್ಬದ ಹಾರ್ದಿಕ ಶುಭಾಶಯಗಳು.
    3. ಈ ವರ್ಷದ ಕ್ರಿಸ್‌ಮಸ್‌ಹಬ್ಬ ನಿಮ್ಮ ಬಾಳಲ್ಲಿ ಪ್ರೀತಿ, ಶಾಂತಿ ಮತ್ತು ಸಂತೋಷ ತುಂಬಲಿ… ಎಲ್ಲರಿಗೂ ಮೇರಿ ಕ್ರಿಸ್‌ಮಸ್‌.
    4. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಕ್ರಿಸ್‌ಮಸ್‌ ಹಬ್ಬದ ಹಾರ್ದಿಕ ಶುಭಾಶಯಗಳು.
    5. ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರಿದ, ತ್ಯಾಗ, ಕರುಣೆಗಳ ಸಾಕಾರ ಮೂರ್ತಿ ಏಸುಕ್ರಿಸ್ತನ ಜನ್ಮದಿನವಾದ ಇಂದು ಎಲ್ಲರಿಗೂ ಆಯಸ್ಸು ಶುಭವನ್ನು ತರಲಿ. ಕ್ರಿಸ್‌ಮಸ್‌ ಹಬ್ಬದ ಹಾರ್ದಿಕ ಶುಭಾಶಯಗಳು.
    6. ಈ ವರ್ಷದ ಕ್ರಿಸ್‌ಮಸ್‌ನೊಂದಿಗೆ ಹಳೆಯ ವರ್ಷಕ್ಕೆ ವಿದಾಯ ಹೇಳೋಣ. ಮುಂದಿನ ಹೊಸ ವರ್ಷಕ್ಕೆ ಶುಭ ಕೋರುತ್ತಾ ಎಲ್ಲವನ್ನು ಸಕಾರಾತ್ಮಕತೆಯಿಂದಲೇ ತೆಗೆದುಕೊಳ್ಳೋಣ. ಪ್ರತಿಯೊಬ್ಬರಿಗೂ ಕ್ರಿಸ್‌ಮಸ್‌ 2024ರ ಮತ್ತು 2025 ಹೊಸ ವರ್ಷದ ಶುಭಾಶಯಗಳು.
    7. ಯೇಸು ಕ್ರಿಸ್ತನು ನಿಮ್ಮ ಬಾಳಿನಲ್ಲಿ ಬಯಸಿದ್ದೆಲ್ಲವನ್ನ ಕರುಣಿಸಲಿ.. ಕ್ರಿಸ್‌ಮಸ್‌ 2024ರ ಹಾರ್ದಿಕ ಶುಭಾಶಯಗಳು.
    8. ಯೇಸು ಕ್ರಿಸ್ತನ ಆಶೀರ್ವಾದ ಪ್ರತಿಯೊಬ್ಬರ ಮೇಲೂ ಇರಲಿ.. ಕ್ರಿಸ್‌ಮಸ್‌ 2024ರ ಶುಭಾಶಯಗಳು.
    9. ನಿಮ್ಮೆಲ್ಲಾ ಒತ್ತಡವು ಮರೆಯಾಗಲಿ, ನಿಮ್ಮ ಹೃದಯವು ಶಾಂತಿ ಮತ್ತು ಐಶ್ವರ್ಯದಿಂದ ತುಂಬಿರಲಿ.. ಮೇರಿ ಕ್ರಿಸ್‌ಮಸ್‌ 2024.
    10. ಕ್ರಿಸ್‌ಮಸ್‌ ಟ್ರೀ ಯಂತೆ ಬದುಕು ಸದಾ ಸುಂದರವಾಗಿರಲಿ, ಕ್ರಿಸ್‌ಮಸ್‌ ಮೇಣದ ಬತ್ತಿಯ ಬೆಳಕಿನಂತೆ ಬದುಕಿನಲ್ಲಿ ಸದಾ ಬೆಳಕು ತುಂಬಿರಲಿ, ಕ್ರಿಸ್‌ಮಸ್‌ ಕೇಕಿನ ಸಿಹಿಯಂತೆ ಬದುಕಿನ ತುಂಬಾ ಸಿಹಿ ಇರಲಿ ಎಂದು ಹಾರೈಸುತ್ತಾ ಕ್ರಿಸ್‌ಮಸ್‌ 2024ರ ಶುಭಾಶಯಗಳು.
    11. ನಿಮ್ಮ ಜೀವನದಲ್ಲಿ ಸದಾ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿ ತುಂಬಿರಲಿ. ಯೇಸುಕ್ರಿಸ್ತನು ಸದಾ ನಿಮಗೆ ಒಳಿತನ್ನೇ ಮಾಡಲಿ.. ಕ್ರಿಸ್‌ಮಸ್‌ 2024ರ ಹಾರ್ದಿಕ ಶುಭಾಶಯಗಳು.
    12. ಯೇಸುವಿನ ಕೃಪೆಯಿಂದ ಕಷ್ಟಗಳೆಲ್ಲಾ ಮಂಜಿನಂತೆ ಕರಗಲಿ. ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೂ ಕ್ರಿಸ್‌ಮಸ್‌ 204ರ ಹಾರ್ದಿಕ ಶುಭಾಶಯಗಳು.

  • ʻಸಾಂತಾಕ್ಲಾಸ್‌ʼನಲ್ಲಿ ವರ್ಷಪೂರ್ತಿ ಕ್ರಿಸ್‌ಮಸ್‌ ಸಂಭ್ರಮ – ವಿಲೇಜ್‌ ಇರೋದಾದ್ರೂ ಎಲ್ಲಿ?

    ʻಸಾಂತಾಕ್ಲಾಸ್‌ʼನಲ್ಲಿ ವರ್ಷಪೂರ್ತಿ ಕ್ರಿಸ್‌ಮಸ್‌ ಸಂಭ್ರಮ – ವಿಲೇಜ್‌ ಇರೋದಾದ್ರೂ ಎಲ್ಲಿ?

    ಡಿಸೆಂಬರ್‌ 25 ಬಂತೆಂದರೆ ಸಾಕು ಇಡೀ ವಿಶ್ವದಾದ್ಯಂತ ಇರುವ ಕ್ರೈಸ್ತ ಬಾಂಧವರು ಸಂಭ್ರಮದಿಂದ ಕ್ರಿಸ್‌ಮಸ್‌ ಹಬ್ಬ ಆಚರಿಸುತ್ತಾರೆ. ಪುಟ್ಟ ಪುಟ್ಟ ಮಕ್ಕಳು ಈ ದಿನಕ್ಕಾಗಿ, ಈ ದಿನದಂದು ಸಾಂತಕ್ಲಾಸ್‌ಗಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ. ಏಕೆಂದರೆ ಸಾಂತಾಕ್ಲಾಸ್‌ ನಮಗೆ ವಿಶೇಷ ಹುಡುಗೊರೆ ನೀಡುತ್ತಾರೆ ಎಂಬುದು ಅವರ ನಂಬಿಕೆ. ಆದ್ರೆ ವರ್ಷಪೂರ್ತಿ ಕ್ರಿಸ್ಮಸ್‌ ಸಂಭ್ರಮ ಮನೆ ಮಾಡಿರುವುದು ಸಾಂತಾಕ್ಲಾಸ್‌ ವಿಲೇಜ್‌ನಲ್ಲಿ.. ಹೀಗೊಂದು ಹಳ್ಳಿ ಇದೆಯಾ ಎಂದು ಅಚ್ಚರಿಯೂ ಸಹ ಆಗಬಹುದು. ಆದ್ರೂ ನೀವು ನಂಬಲೇಬೇಕು….

    ಈ ಹಳ್ಳಿ ಹೆಸರೇ ಸಾಂತಾಕ್ಲಾಸ್‌ ವಿಲೇಜ್‌.. ಸುಂದರ ಹಿಮಚ್ಛಾದಿತ ಪ್ರದೇಶಗಳ ನಡುವೆ ಇರುವ ಹಳ್ಳಿ ಇರುವುದೆಲ್ಲಿ? ಇದರ ವೈಶಿಷ್ಟ್ಯ ಏನು? ವರ್ಷಪೂರ್ತಿ ಇಲ್ಲಿ ಕ್ರಿಸ್ಮಸ್‌ ಆಚರಣೆ ಮಾಡುವುದೇಕೆ ಎಂಬುದುನ್ನು ತಿಳಿಯೋಣ….

    ಸಾಂತಾಕ್ಲಾಸ್ ವಿಲೇಜ್ ಎಲ್ಲಿದೆ?
    ಸಾಂತಾಕ್ಲಾಸ್ ವಿಲೇಜ್ ಇರುವುದು ಫಿನ್‌ಲ್ಯಾಂಡ್ ರೊವಾನಿಮಿಯಲ್ಲಿ. ಇದು ವರ್ಷವಿಡೀ ಹಿಮದಿಂದ ಆವೃತವಾಗಿರುವ ಪ್ರದೇಶವಾಗಿದೆ. ಸಾಂತಾಕ್ಲಾಸ್ ವಿಲೇಜ್ ಅನ್ನೋದು ಅಮ್ಯೂಸ್‌ಮೆಂಟ್ ಪಾರ್ಕ್. ಫಿನ್‌ಲ್ಯಾಂಡ್‌ನ ಲಾಪ್‌ಲ್ಯಾಂಡ್ ಪ್ರಾಂತ್ಯದಲ್ಲಿ 1985ರಲ್ಲಿ ಸಾಂತಾಕ್ಲಾಸ್ ವಿಲೇಜ್ ಅನ್ನು ಸ್ಥಾಪಿಸಲಾಯಿತು. ಸಾಂತಾಕ್ಲಾಸ್ ಗ್ರಾಮವು ರೊವಾನಿಮಿಯ ಈಶಾನ್ಯಕ್ಕೆ ಸುಮಾರು 8 ಕಿಮೀ ಮತ್ತು ರೊವಾನಿಮಿ ವಿಮಾನ ನಿಲ್ದಾಣದಿಂದ ಸುಮಾರು 2 ಕಿಮೀ ದೂರದಲ್ಲಿದೆ.

    ಈ ತಾಣದಲ್ಲಿ ವರ್ಷವಿಡೀ ಸಾಂತಾಕ್ಲಾಸ್‌ನನ್ನು ನೋಡಬಹುದು. ಮಾತ್ರವಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಮಕ್ಕಳು ಸಾಂತಾಕ್ಲಾಸ್‌ನಿಂದ ಉಡುಗೊರೆಯನ್ನೂ ಪಡೆಯಬಹುದು. ಪ್ರತಿ ವರ್ಷ ಪ್ರಪಂಚದಾದ್ಯಂತದ ಜನರು ಸಾಂತಾನನ್ನು ಭೇಟಿ ಮಾಡಲು ಇಲ್ಲಿಗೆ ಬರುತ್ತಾರೆ. ಸಾಂತಾಕ್ಲಾಸ್ ಗ್ರಾಮದಲ್ಲಿ ಕ್ರಿಸ್ಮಸ್ ಆಚರಣೆಗಳು ಡಿಸೆಂಬರ್ 23 ರಿಂದ ಪ್ರಾರಂಭವಾಗುತ್ತವೆ. ಈ ದಿನದಿಂದ ಸಾಂತಾಕ್ಲಾಸ್ ಜನರನ್ನು ಭೇಟಿಯಾಗಲು ಹೊರಡುವುದು ಇಲ್ಲಿನ ಆಚರಣೆ.

    ರೊವಾನಿಮಿ ಗ್ರಾಮದ ವೈಶಿಷ್ಟ್ಯ ಗೊತ್ತೇ?
    ರೊವಾನಿಮಿ ಗ್ರಾಮವು ಮರದ ಗುಡಿಸಲುಗಳನ್ನು ಒಳಗೊಂಡಿದೆ. ಇಲ್ಲಿಗೆ ಭೇಟಿ ನೀಡಿದರೆ ಎಲ್ಲಿ ನೋಡಿದರೂ ಅಕ್ಷರಗಳು ಮತ್ತು ಅಂಕಿಗಳನ್ನು ನೋಡಬಹುದು. ವಿಶೇಷವೆಂದರೆ ಇಲ್ಲಿ ಬರುವ ಪತ್ರಗಳನ್ನು ಸಾಂತಾಕ್ಲಾಸ್ ಕೂಡ ಓದಿ ಮಕ್ಕಳಿಗೆ, ದೊಡ್ಡವರಿಗೆ ಸ್ಪಂದಿಸುತ್ತಾರೆ. ಅದಕ್ಕಾಗಿಯೇ ಪ್ರಪಂಚದಾದ್ಯಂತದ ಹಲವರು ಇಲ್ಲಿನ ಸಾಂತಾನಿಗೆ ಪತ್ರಗಳನ್ನು ಕಳುಹಿಸುತ್ತಾರೆ. ಈ ಪತ್ರಗಳನ್ನು ಸಂಗ್ರಹಿಸಲು ತಂಡವೊಂದು ಕೆಲಸ ಮಾಡುತ್ತದೆ. ನಂತರ ಅವರು ಅವುಗಳನ್ನು ಸಾಂಟಾಗೆ ತಲುಪಿಸುವ ಕೆಲಸ ಮಾಡುತ್ತಾರೆ.

    ನೀವು ಫಿನ್‌ಲ್ಯಾಂಡ್‌ಗೆ ಹೋದರೆ, ಖಂಡಿತವಾಗಿಯೂ ಕೆಲವು ಸ್ಥಳಗಳಿಗೆ ಭೇಟಿ ನೀಡಬೇಕು. ಸಾಂತಾಕ್ಲಾಸ್ ವಿಲೇಜ್, ಹೆಲ್ಸಿಂಕಿ, ಲೆವಿ, ಟರ್ಕು, ಪೂರ್ವು, ಸೈಮಾ ಸರೋವರ, ಫಿನ್‌ಲ್ಯಾಂಡ್ ರಾಷ್ಟ್ರೀಯ ಉದ್ಯಾನವನ, ಸೈವೊಲಿನಾ, ಸುವೊನ್ಸಿನ್ನಾ ಕ್ಯಾಸಲ್‌ನಂತಹ ಅನೇಕ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು. ಬೇಸಿಗೆ ರಜೆ ಸಾಂತಾಕ್ಲಾಸ್ ವಿಲೇಜ್‌ಗೆ ಭೇಟಿ ಮಾಡಲು ಹೇಳಿ ಮಾಡಿಸಿದ ಸಮಯ.