Tag: christmas

  • Christmas | ಮಕ್ಕಳಿಗೆ ಗಿಫ್ಟ್‌ ನೀಡುವ ಸಾಂತಾ ಕ್ಲಾಸ್‌ ಯಾರು? ಹಿನ್ನೆಲೆ ಏನು?

    Christmas | ಮಕ್ಕಳಿಗೆ ಗಿಫ್ಟ್‌ ನೀಡುವ ಸಾಂತಾ ಕ್ಲಾಸ್‌ ಯಾರು? ಹಿನ್ನೆಲೆ ಏನು?

    ಕ್ರಿಸ್ಮಸ್‌ (Christmas) ಹಬ್ಬದ ಸಂದರ್ಭದಲ್ಲಿ ಮಕ್ಕಳಿಗಾಗಿ ಸಾಕಷ್ಟು ಉಡುಗೊರೆಗಳು, ಸಿಹಿತಿಂಡಿಗಳನ್ನು ನೀಡುವ ಸಾಂತಾ ಕ್ಲಾಸ್‌ (Santa Claus) ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ.

    ಸಾಂತಾ ಕ್ಲಾಸ್‌ ಬಗ್ಗೆ ಮಕ್ಕಳು ಪ್ರಶ್ನೆ ಮಾಡಿದರೆ ಆತ ದೇವದೂತ. ಕ್ರಿಸ್ಮಸ್‌ ಹಬ್ಬದಂದು ಮೇಲಿನಿಂದ ಇಳಿದು ಬಂದು ಉಡುಗೊರೆ (Gift) ನೀಡಿ ಮರಳಿ ಹೋಗುತ್ತಾನೆ ಎಂದು ಪೋಷಕರು ಹೇಳುತ್ತಿರುತ್ತಾರೆ. ಆದರೆ ನಿಜವಾದ ಸಾಂತಾ ಕ್ಲಾಸನ ಕಥೆ ಬೇರೆಯೇ ಇದೆ.

    ಬಹಳ ಹಿಂದೆ ಟರ್ಕಿಯ (Turkey) ಮೈರಾ ನಗರದಲ್ಲಿ ಸೇಂಟ್ ನಿಕೋಲಸ್ (Saint Nicholas) ಎಂಬ ವ್ಯಕ್ತಿ ನೆಲೆಸಿದ್ದ. ಶ್ರೀಮಂತನಾಗಿದ್ದ ಈತ ಜನರಿಗೆ ಸಹಾಯ ಮಾಡುವುದರಲ್ಲೇ ಸಂತೋಷ ಅನುಭವಿಸುತ್ತಿದ್ದ. ಮಕ್ಕಳು ದು:ಖದಲ್ಲಿದ್ದರೆ ವಿಶೇಷವಾದ ಉಡುಪು ತೊಟ್ಟು ಅವರಿಗೆ ಉಡುಗೊರೆಗಳನ್ನು ನೀಡುತ್ತಿದ್ದ. ಎಲ್ಲರೂ ಸಂತೋಷವಾಗಿರಬೇಕು ಎಂದು ಆತ ಬಯಸುತ್ತಿದ್ದ.

    17ನೇ ವಯಸ್ಸಿನಲ್ಲಿ ಪಾದ್ರಿಯಾದ ಸೇಂಟ್ ನಿಕೋಲಸ್ ತನ್ನ ಜೀವನದುದ್ದಕ್ಕೂ ಮಧ್ಯರಾತ್ರಿಯಲ್ಲಿ ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಿದ್ದ. ಒಂದು ಬಾರಿ ಊರಿನಲ್ಲಿ ವರದಕ್ಷಿಣೆ ಕೊಡಲು ಹಣವಿಲ್ಲದೆ ಮೂವರು ಹುಡುಗಿಯರ ಮದುವೆ ನಿಂತು ಹೋಗುವ ಪರಿಸ್ಥಿತಿ ಬಂದಿತ್ತು. ಈ ವಿಚಾರ ತಿಳಿದ ಸಂತ ನಿಕೊಲಾಸ್ ಮೂರು ಥೈಲಿ ಹಣವನ್ನು ಕ್ರಿಸ್ಮಸ್ ಹಬ್ಬದಂದು ಕಿಟಕಿಯ ಮೂಲಕ ಒಳಗೆಸೆದು ಅವರಿಗೆ ಸಂತೋಷ ಉಂಟುಮಾಡಿದ್ದ.  ಇದನ್ನೂ ಓದಿ: ಕ್ರಿಸ್ಮಸ್ ಟ್ರೀ – ಏನಿದರ ಇತಿಹಾಸ, ಮಹತ್ವ?

    ನಿಕೋಲಸ್‌ ಹೆಸರಿನ ರೂಪಾಂತರವೇ ಸಾಂತಾಕ್ಲಾಸ್. ಈ ಕಾರಣಕ್ಕೆ ನಿದ್ರೆ ಮಾಡುತ್ತಿರುವ ಮಕ್ಕಳ ಹಾಸಿಗೆ ಬದಿಯಲ್ಲಿ ಕ್ರಿಸ್ಮಸ್ ಬಹುಮಾನಗಳನ್ನು ಇಟ್ಟುಹೋಗುವುದು ಸಂಪ್ರದಾಯ ಆರಂಭಗೊಂಡಿದೆ.

    ನಿಕೋಲಸ್‌ ಸಾವಿನ ನಂತರ ಚರ್ಚ್ ಅನುಯಾಯಿಗಳು ಈ ಪರಂಪರೆಯನ್ನು ಮುಂದುವರೆಸಿದರು. ಅಂದಿನಿಂದ ಈ ಕ್ರಮ ಒಂದು ಆಚರಣೆಯಾಗಿ ವಿಶ್ವಾದ್ಯಂತ ಪಸರಿಸಿತು. ಕುಟುಂಬದ ಹಿರಿಯರು ನಿಕೋಲಸ್ ತೊಡುತ್ತಿದ್ದಂತಹ ಉಡುಗೆ ಧರಿಸಿ ಮಕ್ಕಳಿಗಾಗಿ ಉಡುಗೊರೆಗಳನ್ನು ನೀಡಲಾರಂಭಿಸಿದರು. ಹೀಗೆ ಬಿಳಿಯ ಗಡ್ಡ, ಕೆಂಪು ಬಣ್ಣದ ಉಡುಗೆಯೊಂದಿಗೆ ಗಿಫ್ಟ್‌ ನೀಡುವ ಹಿರಿಯ ವ್ಯಕ್ತಿಯನ್ನು ಇಂದಿಗೂ ಮಕ್ಕಳು ಸಾಂತಾ ಕ್ಲಾಸ್ ಎಂದು ನಂಬುತ್ತಾರೆ.

     

  • ಕ್ರಿಸ್‌ಮಸ್ ಹಬ್ಬ – ಕೋಲಾರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ದೀಪಾಲಂಕಾರ

    ಕ್ರಿಸ್‌ಮಸ್ ಹಬ್ಬ – ಕೋಲಾರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ದೀಪಾಲಂಕಾರ

    ಕೋಲಾರ: ಡಿ.25ರಂದು ಕ್ರಿಸ್‌ಮಸ್ (Christmas) ಹಬ್ಬದ ಹಿನ್ನೆಲೆ ಕೋಲಾರ (Kolar) ನಗರದ ಮೆಥೋಡಿಸ್ಟ್ ಚರ್ಚ್ (Methodist Church) ದೀಪಾಲಂಕಾರದೊಂದಿಗೆ ಕ್ರಿಸ್‌ಮಸ್ ಆಚರಣೆಗೆ ಸಿದ್ಧಗೊಂಡಿದೆ.
    ಕೋಲಾರ ನಗರದ ಹಳೆ ಬಸ್ ನಿಲ್ದಾಣದ ಬಳಿ ಇರುವ ಮೆಥೋಡಿಸ್ಟ್ ಚರ್ಚ್ ಅದ್ಧೂರಿ ದೀಪಾಲಂಕಾರದ ಮೂಲಕ ಸಿಂಗಾರಗೊಂಡಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಚರ್ಚ್‌ನ ಒಳಗೆ ಹಾಗೂ ಹೊರಗಡೆ ಬಣ್ಣಬಣ್ಣದ ಲೈಟಿಂಗ್ಸ್ ಹಾಕಲಾಗಿದೆ.  ಇದನ್ನೂ ಓದಿ: ಹೋಟೆಲ್‌ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕಟ್ ಮಾಡಿದ್ಳು ಪ್ರಿಯತಮೆ!
    ಕ್ರಿಶ್ಚಿಯನ್ನರ ಮಹತ್ವದ ಹಬ್ಬ ಇದಾಗಿದೆ. ಈ ಹಿನ್ನೆಲೆ ಚರ್ಚ್‌ನ ಒಳಗೆ ಬಣ್ಣದ ಪೇಪರ್‌ನಿಂದ ಅಲಂಕರಿಸಲಾಗಿದೆ. ಇನ್ನು ಹೊರಗಡೆ ನಾನಾ ರೀತಿಯ ಬಣ್ಣದ ಲೈಟಿಂಗ್ಸ್‌ಗಳಿಂದ ಅಲಂಕರಿಸಲಾಗಿದೆ.  ಇದನ್ನೂ ಓದಿ: ಶಿವಣ್ಣಗೆ ಇಂದು ಶಸ್ತ್ರಚಿಕಿತ್ಸೆ – ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಪೂಜೆ
  • ನಿಮ್ಮ ನೆರೆಯವರನ್ನೂ ನಿಮ್ಮಂತೆಯೇ ಪ್ರೀತಿಸಿ – ಏಸುವಿನ ಸಂದೇಶ

    ನಿಮ್ಮ ನೆರೆಯವರನ್ನೂ ನಿಮ್ಮಂತೆಯೇ ಪ್ರೀತಿಸಿ – ಏಸುವಿನ ಸಂದೇಶ

    ವಿಶ್ವದಾದ್ಯಂತ ಡಿಸೆಂಬರ್‌ 25ರಂದು ಜಾತಿ, ಧರ್ಮಗಳನ್ನು ಮೀರಿ ಆಚರಿಸಲಾಗುವ ಕ್ರಿಸ್‌ಮಸ್‌ ಅನ್ನು ಭಾರತದಲ್ಲೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕ್ರಿಸ್‌ ಎಂಬುದು ಏಸುವಿನ ಹೆಸರಾದರೆ, ಮಾಸ್‌ ಎಂಬುದು ಪ್ರಾರ್ಥಿಸುವ ಸಮೂಹವನ್ನು ಪ್ರತಿನಿಧಿಸುತ್ತದೆ. ಇವೆರಡು ಪದಗಳು ಒಂದಾದಾಗ ಕ್ರಿಸ್‌ಮಸ್‌ ಆಗುತ್ತದೆ!

    ಏಸುವಿನ ಸಂದೇಶ: ಏಸು ತನ್ನ 12ನೇ ವಯಸ್ಸಿನಲ್ಲೇ ಬೋಧಕರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ತೊಡಗುತ್ತಿದ್ದ. 18ನೇ ವಯಸ್ಸಲ್ಲಿ ದೀಕ್ಷೆ ಪಡೆದು, ಬೋಧನೆಯಲ್ಲಿ ತೊಡಗಿಸಿಕೊಂಡ. ಜನರಿಗೆ ಸಂದೇಶವನ್ನು ನೀಡುವ ಜೊತೆಗೇ ಏಸು ಅನೇಕ ಪವಾಡಗಳನ್ನು ಮಾಡಿದ.

    ಏಸು ಅನೇಕ ರೋಗಿಗಳನ್ನು ಗುಣಪಡಿಸಿದ, ಆಹಾರ ಸಾಮಗ್ರಿಗಳ ಕೊರತೆಯಿದ್ದರೂ ಅದನ್ನೇ ಅಕ್ಷಯವಾಗಿಸಿ ಸಾವಿರಾರು ಜನರಿಗೆ ಊಟ ನೀಡಿದ. ಸತ್ತವರಿಗೆ ಪುನರ್‌ಜನ್ಮ ನೀಡಿದ. ಇಂತಹ ಪವಾಡಗಳಿಂದ ಆತ ಸಾಮಾನ್ಯ ವ್ಯಕ್ತಿ ಅಲ್ಲ ಎಂಬ ತೀರ್ಮಾನಕ್ಕೆ ಬಂದರು.

    ಏಸುವಿನ ಸಂದೇಶ ಅತ್ಯಂತ ನೇರ ಮತ್ತು ಸರಳವಾಗಿತ್ತು. ಆತ ಹೇಳುತ್ತಿದ್ದ ನೀತಿ ಕತೆಗಳು ಮತ್ತು ಹೇಳಿಕೆಗಳು ಜನರನ್ನು ಬಹಳ ಆಕರ್ಷಿಸಿಸುತ್ತಿದ್ದವು. ಆತ ಬೋಧಿಸಿದ ಮಹಾನ್‌ ಬೋಧನೆ ಪ್ರೀತಿಯೇ ಆಗಿತ್ತು. ಭಗವಂತನನ್ನು ಹೃದಯದಿಂದ ಪ್ರೀತಿಸಿ, ನಿಮ್ಮ ನೆರೆಯವರನ್ನೂ ನಿಮ್ಮಂತೆಯೇ ಪ್ರೀತಿಸಿ. ಪ್ರೀತಿಯೇ ಜೀವನ, ಇದರಿಂದಲೇ ಭಗವಂತನನ್ನು ತಲುಪಲು ಸಾಧ್ಯ ಎಂದು ಏಸು ಸಂದೇಶ ಕೊಟ್ಟರು.

    ಶಾಂತಿದೂತ: ಜನರ ಸೇವೆಯೇ ಶ್ರೇಷ್ಠ ಧರ್ಮವೆಂದು ಏಸು ಹೇಳಿದ. ಭೌತಿಕಕ್ಕಿಂತ ಆಧ್ಯಾತ್ಮಿಕತೆಯು ಹೆಚ್ಚು ಮುಖ್ಯವೆಂದ. ಪಾಪವನ್ನು ದ್ವೇಷಿಸಿ ಆದರೆ ಪಾಪಿಯನ್ನಲ್ಲ ಎಂಬ ಸಂದೇಶ ಸಾರಿದ. ೀ ಮೂಲಕ ಆತ ಶಾಂತಿದೂತನಾದ. ಇದು ಕೇವಲ ಬೋಧನೆಯಾಗಿರಲಿಲ್ಲ. ಆತ ಸ್ವತಃ ಇವುಗಳನ್ನು ಪಾಲಿಸಿ ತೋರಿಸಿದ. ಆತನನ್ನೇ ಶಿಲುಬೆಗೆ ಏರಿಸಿದ ಜನರನ್ನೂ ಕ್ಷಮಿಸಿದ. ಈ ಮೂಲಕ ಜಗತ್ತಿಗೆ ಕ್ಷಮೆ ಹಾಗೂ ಪ್ರೀತಿಯ ಸಂದೇಶ ಸಾರಿದ.

    ಏಸುವಿನ ಜನನ: ಏಸುಕ್ರಿಸ್ತನ ಜನನಕ್ಕೆ ಸಂಬಂಧಿಸಿದಂತೆ ಕೆಲವು ಕತೆಗಳಿವೆ. ದೇವದೂತ ಗೇಬ್ರಿಯಲ್ ಏಸುವಿನ ತಾಯಿ ಮೇರಿಯನ್ನು ಭೇಟಿಯಾಗಿ, ಪಾಪಗಳಿಂದ ಜನರನ್ನು ರಕ್ಷಿಸಲು ಪವಿತ್ರಾತ್ಮವು ಅವಳ ಮಗನಾಗಿ ಜನಿಸುತ್ತಾನೆ. ಆ ಮಗುವಿಗೆ ಏಸು ಎಂದು ಹೆಸರಿಡಬೇಕೆಂದೂ ಸೂಚಿಸುತ್ತಾನೆ.

    ಅದೇ ವೇಳೆಗೆ, ಪ್ರತಿಯೊಬ್ಬ ಪ್ರಜೆಯೂ ತಾವು ಹುಟ್ಟಿದ ಸ್ಥಳದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ರೋಮನ್‌ ಚಕ್ರವರ್ತಿ ಮಾಡಿದ್ದ ಆದೇಶವನ್ನು ಪಾಲಿಸಲು, ಬೆಥ್ಲೆಹೆಮ್‌ನಲ್ಲಿ ಜನಿಸಿದ್ದ ಜೋಸೆಫ್‌, ನಜರೇತ್‌ ಪಟ್ಟಣದಿಂದ ಅಲ್ಲಿಗೆ ಪ್ರಯಾಣಿಸಬೇಕಾಯಿತು. ಆತನೊಂದಿಗೆ ಗರ್ಭವತಿ ಪತ್ನಿ ಮೇರಿಯೂ ಇದ್ದಳು. ದಂಪತಿ ಅಲ್ಲಿಗೆ ಆಗಮಿಸಿದಾಗ ರಾತ್ರಿಯಾಗಿತ್ತು. ಅವರಿಗೆ ಉಳಿದುಕೊಳ್ಳಲು ಸ್ಥಳ ಸಿಗಲಿಲ್ಲ. ಈ ವೇಳೆ ಕುದುರೆ ಲಾಯದಲ್ಲಿ ಉಳಿದುಕೊಂಡಿದ್ದರು. ಆಗಲೇ ಏಸುವಿನ ಜನನವಾಯಿತು ಎನ್ನಲಾಗುತ್ತದೆ.

  • ಕ್ರಿಸ್ಮಸ್ ಹಬ್ಬಕ್ಕೆ ಟೂಟಿ-ಫ್ರೂಟಿ ಕೇಕ್ ಹೀಗೆ ಮಾಡಿ

    ಕ್ರಿಸ್ಮಸ್ ಹಬ್ಬಕ್ಕೆ ಟೂಟಿ-ಫ್ರೂಟಿ ಕೇಕ್ ಹೀಗೆ ಮಾಡಿ

    ನಾಡಿನಾದ್ಯಂತ ಕ್ರಿಸ್ಮಸ್ ಸಂಭ್ರಮ ಜೋರಾಗಿದೆ. ಏಸು ಕ್ರಿಸ್ತನ ಜನ್ಮದಿನದಂದು ಕ್ರೈಸ್ತರು ಆಚರಿಸುವ ಹಬ್ಬವೇ ಕ್ರಿಸ್ಮಸ್. ಕ್ರೈಸ್ತರಿಗೆ ಇದು ಅತ್ಯಂತ ಪವಿತ್ರವಾದ ಹಬ್ಬ. ಈ ಸಂದರ್ಭ ಪರಸ್ಪರ ಕ್ರಿಸ್ಮಸ್ ಕಾರ್ಡ್, ಉಡುಗೊರೆ ನೀಡುವುದು, ಚರ್ಚ್‌ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದು ಜೊತೆಗೆ ಮನೆಯನ್ನು ಕ್ರಿಸ್‌ಮಸ್ ಟ್ರೀ ಹಾಗೂ ಹೂವುಗಳಿಂದ ಆಲಂಕರಿಸಲಾಗುತ್ತದೆ. ಅಲ್ಲದೇ ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳನ್ನು ತಯಾರಿಸಿ ಜೊತೆಯಾಗಿ ಸಂಭ್ರಮಿಸುವ ಹಬ್ಬ ಇದಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಟೂಟಿ-ಫ್ರೂಟಿ ಕೇಕ್ ತಯಾರಿಸುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಮೊಸರು- ಒಂದು ಕಪ್
    ಸಕ್ಕರೆ- ಒಂದೂವರೆ ಕಪ್
    ಎಣ್ಣೆ-ಅರ್ಧ ಕಪ್
    ಮೈದಾ- ಒಂದು ಕಪ್
    ವೆನಿಲ್ಲಾ ಸಾರ- ಒಂದು ಚಮಚ
    ಅಡುಗೆ ಸೋಡ- ಒಂದು ಚಿಟಿಕೆ
    ಬೇಕಿಂಗ್ ಪೌಡರ್- ಒಂದು ಚಮಚ
    ನೀರು- ಅರ್ಧ ಕಪ್
    ಟೂಟಿ ಫ್ರೂಟಿ- ಅರ್ಧ ಕಪ್
    ಉಪ್ಪು- 1 ಚಿಟಿಕೆ

    ತಯಾರಿಸುವ ವಿಧಾನ:
    * ಮೊದಲನೆಯದಾಗಿ ಟೂಟಿ ಫ್ರೂಟಿಯನ್ನು ತೆಗೆದುಕೊಂಡು ಅದಕ್ಕೆ 1 ಟೀ ಚಮಚದಷ್ಟು ಮೈದಾ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ.
    * ನಂತರ ಒಂದು ಪಾತ್ರೆಯಲ್ಲಿ ಮೊಸರು, ಸಕ್ಕರೆ, ಎಣ್ಣೆ ಮತ್ತು ವೆನಿಲ್ಲಾ ಸಾರಗಳನ್ನು ತೆಗೆದುಕೊಳ್ಳಿ. ನಂತರ ಅದನ್ನು ವಿಸ್ಕ್ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.
    * ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದಕ್ಕೆ ಮೈದಾ ಹಿಟ್ಟನ್ನು ಜರಡಿ ಹಿಡಿದು ಹಾಕಿ. ಜೊತೆಗೆ ಅಡುಗೆ ಸೋಡಾ, ಬೇಕಿಂಗ್ ಪೌಡರ್, ಚಿಟಿಕೆ ಉಪ್ಪು ಹಾಕಿ ಗಂಟು ಬಾರದಂತೆ ಚೆನ್ನಾಗಿ ಕಲಸಿ.
    * ಈ ಮಿಶ್ರಣ ದಪ್ಪಗಿದ್ದರೆ ನೀರು ಸೇರಿಸಬಹುದು, ಇದಕ್ಕೆ ವೆನಿಲ್ಲಾ ಸಾರವನ್ನು ಹಾಕಿ ಕಲಸಿ.
    * ಬಳಿಕ ಟೂಟಿ ಫ್ರೂಟಿಯನ್ನು ಹಾಕಿ ಮಿಕ್ಸ್ ಮಾಡಿ.
    * ಈಗ ಕೇಕ್ ಅಚ್ಚಿಗೆ ಎಣ್ಣೆ ಸವರಿ. ಟ್ರೇಯ ಕೆಳಭಾಗಕ್ಕೆ ಬಟರ್ ಕಾಗದ (ಬಟರ್ ಪೇಪರ್) ಹಾಕಿ. ನಂತರ ಹಿಟ್ಟನ್ನು ಅದಕ್ಕೆ ಸುರಿಯಿರಿ.
    * ಟ್ರೇಯನ್ನು ಎರಡು ಬಾರಿ ತಟ್ಟಿ. ಮೇಲೆ ಬೇಕಿದ್ದರೆ ಸ್ವಲ್ಪ ಟೂಟಿ ಫ್ರೂಟಿ ಹಾಕಬಹುದು.
    * ಈಗ ಕೇಕ್ ಟ್ರೇಯನ್ನು ಮೊದಲೇ ಬಿಸಿಯಾಗಿರಿಸಿದ ಓವನ್‌ನಲ್ಲಿ ಇರಿಸಿ. ಇದನ್ನು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 30 ರಿಂದ 40 ನಿಮಿಷಗಳ ಕಾಲ ಬೇಯಿಸಿ.
    * ನಂತರ ಕೇಕ್ ಅನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಟ್ಟು ಒಂದು ತಟ್ಟೆಯಲ್ಲಿ ಅಲಂಕರಿಸಿದರೆ ರುಚಿಕರವಾದ ಟೂಟಿ ಫ್ರೂಟಿ ಕೇಕ್ ಸವಿಯಲು ಸಿದ್ಧ.

  • ಬೆಂಗಳೂರು| ಕ್ರಿಸ್‌ಮಸ್‌ ಆಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ – Photo Gallery

    ಬೆಂಗಳೂರು| ಕ್ರಿಸ್‌ಮಸ್‌ ಆಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ – Photo Gallery

    ಸಿಲಿಕಾನ್‌ ಸಿಟಿಯಲ್ಲಿ ಕ್ರಿಸ್‌ಮಸ್‌ ಸಂಭ್ರಮ ಮನೆ ಮಾಡಿದೆ. ಆರ್ಚ್‌ ಬಿಷಪ್‌ ಬೆಂಗಳೂರು ಇವರ ನೇತೃತ್ವದಲ್ಲಿ ನಡೆದ ಕ್ರಿಸ್‌ಮಸ್‌ ಸಂಭ್ರಮಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ. ಕೇಕ್‌ ಕಟ್‌ ಮಾಡಿ ಕ್ರೈಸ್ತ ಬಾಂಧವರಿಗೆ ಸಿಎಂ ಶುಭಾಶಯ ಕೋರಿದ್ದಾರೆ.

  • ಕ್ರಿಸ್‌ಮಸ್ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ

    ಕ್ರಿಸ್‌ಮಸ್ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ

    ಬೆಂಗಳೂರು: ಕ್ರಿಸ್‌ಮಸ್‌ (Christmas) ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಪೂರೈಸಲು ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ-ತಿರುವನಂತಪುರಂ ನಾರ್ತ್‌ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

    ಎಸ್ಎಂವಿಟಿ ಬೆಂಗಳೂರು-ತಿರುವನಂತಪುರಂ ನಾರ್ತ್ ಮಧ್ಯ ಒಂದು ಟ್ರಿಪ್ ವಿಶೇಷ ರೈಲು (06507/06508) ಸಂಚಾರ ಮಾಡಲಿದೆ. ಡಿ.23 (ಸೋಮವಾರ) ರಂದು ರಾತ್ರಿ 11:00 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಟು, ಮರುದಿನ ಸಂಜೆ 4:30 ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನ ಕಟ್ಟಿ ಹಾಕೋ ಕೆಲಸ ಬಿಜೆಪಿ ಮಾಡಿದೆ: ಆರ್.ಅಶೋಕ್‌

    ಹಿಂತಿರುಗುವಾಗ, ಈ ರೈಲು (06508) ಡಿ.24 (ಮಂಗಳವಾರ) ರಂದು ತಿರುವನಂತಪುರಂ ನಾರ್ತ್ ನಿಲ್ದಾಣದಿಂದ ಸಂಜೆ 5:55 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11:15 ಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

    ಎರಡೂ ಮಾರ್ಗಗಳಲ್ಲಿ ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಿಂಗವನಂ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕರ, ಕಾಯಂಕುಲಂ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ನಿಲ್ಲಲಿದೆ. ಇದನ್ನೂ ಓದಿ: ನನ್ನ ವಿರುದ್ಧ ಸಂಚು: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿಟಿ ರವಿ

  • ಸ್ಪೇಸ್‌ನಲ್ಲೇ ಕ್ರಿಸ್ಮಸ್ ಸಂಭ್ರಮ – ಸಾಂತಾಕ್ಲಾಸ್ ಆದ ಸುನಿತಾ ವಿಲಿಯಮ್ಸ್!

    ಸ್ಪೇಸ್‌ನಲ್ಲೇ ಕ್ರಿಸ್ಮಸ್ ಸಂಭ್ರಮ – ಸಾಂತಾಕ್ಲಾಸ್ ಆದ ಸುನಿತಾ ವಿಲಿಯಮ್ಸ್!

    ವಾಷಿಂಗ್ಟನ್: ಕ್ರಿಸ್ಮಸ್ ಹಬ್ಬಕ್ಕಾಗಿ ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ (Sunita Williams) ಸಾಂತಾಕ್ಲಾಸ್ ಆಗಿ ಕಾಣಿಸಿಕೊಂಡಿದ್ದು, ಫೋಟೋವೊಂದಕ್ಕೆ ಪೋಸ್ ನೀಡಿದ್ದಾರೆ.

    ಕಳೆದ ಆರು ತಿಂಗಳಿಂದ ಬಾಹ್ಯಾಕಾಶದಲ್ಲಿರುವ ಸುನಿತಾ ವಿಲಿಯಮ್ಸ್ ಇದೀಗ ಕ್ರಿಸ್ಮಸ್ ಸಂಭ್ರಮದಲ್ಲಿದ್ದಾರೆ. ಸದ್ಯ ಸುನಿತಾ ಅವರು ಸಾಂತಾ ಕ್ಲಾಸ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನು ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.ಇದನ್ನೂ ಓದಿ: ಮುಂಗಡ ಟಿಕೆಟ್ ಬುಕಿಂಗ್‌ನಲ್ಲೂ ‘ಯುಐ’ ದಾಖಲೆ- ಇನ್ನೇನಿದ್ರೂ ಉಪ್ಪಿ ಮೇನಿಯಾ ಶುರು

    ಹ್ಯಾಮ್ ರೇಡಿಯೋದಲ್ಲಿ ಮಾತನಾಡುವ ಸಮಯದಲ್ಲಿ ಸುನಿತಾ ವಿಲಿಯಮ್ಸ್ ಹಾಗೂ ಡಾನ್ ಪೆಟ್ಟಿಟ್ ಜೊತೆಗೂಡಿ ಫೋಟೋಗೆ ಪೋಸ್ ನೀಡಿದ್ದಾರೆ. ಫೋಟೋದಲ್ಲಿ ಇಬ್ಬರು ಸಾಂತಾಕ್ಲಾಸ್ ಟೋಪಿ ಧರಿಸಿದ್ದು, ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಲು ತಯಾರಿ ನಡೆಸುತ್ತಿದ್ದಾರೆ.

    ಸ್ಪೇಸ್‌ಎಕ್ಸ್ ಡ್ರ‍್ಯಾಗನ್ ಕ್ಯಾಪ್ಸುಲ್, ಭೂಮಿಯಿಂದ ಸರಕು ಹಾಗೂ ಇನ್ನಿತರ ಉಡುಗೊರೆಗಳನ್ನು ಸರಬರಾಜು ಮಾಡಿದೆ ಹಾಗೂ ಕ್ರಿಸ್ಮಸ್ ಸಮೀಪಿಸುತ್ತಿರುವ ಕಾರಣ ಗಗನಯಾತ್ರಿಗಳು ತಮ್ಮ ಕುಟುಂಬ, ಸ್ನೇಹಿತರಿಗೆ ವಿಡಿಯೋ ಕರೆ ಮೂಲಕ ಸಂಪರ್ಕ ಕಲ್ಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ 2024ರ ಜೂನ್‌ನಿಂದ ಬಾಹ್ಯಾಕಾಶದಲ್ಲಿದ್ದಾರೆ. ಎಂಟು ದಿನಗಳ ಕಾರ್ಯಾಚರಣೆಗಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಅವರು ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿಲ್ಲ. 2025ರ ಫೆಬ್ರವರಿ ತಿಂಗಳಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.ಇದನ್ನೂ ಓದಿ: NDA ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಅತಿಹೆಚ್ಚು 2.08 ಲಕ್ಷ ಕೋಟಿ ಅನುದಾನ: ಸಂಸದ ಕೆ.ಸುಧಾಕರ್‌

  • ಧಾರ್ಮಿಕ ಭಾವನೆಗೆ ಧಕ್ಕೆ: ನಟ ರಣಬೀರ್ ಕಪೂರ್ ವಿರುದ್ಧ ದೂರು

    ಧಾರ್ಮಿಕ ಭಾವನೆಗೆ ಧಕ್ಕೆ: ನಟ ರಣಬೀರ್ ಕಪೂರ್ ವಿರುದ್ಧ ದೂರು

    ಬಾಲಿವುಡ್ ನ ಹೆಸರಾಂತ ನಟ ರಣಬೀರ್ ಕಪೂರ್ (Ranbir Kapoor) ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂ ಭಾವನೆಗಳಿಗೆ ರಣಬೀರ್ ಕಪೂರ್ ಧಕ್ಕೆ ತಂದಿದ್ದಾರೆ ಎನ್ನುವ ಕಾರಣವನ್ನಿಟ್ಟುಕೊಂಡು ಬಾಂಬೆ ಹೈಕೋರ್ಟ್ ವಕೀಲರಾದ ಪಂಕಜ್ ಮಿಶ್ರಾ ಹಾಗೂ ಆಶಿಷ್ ರಾಜ್ ದೂರು ನೀಡಿದ್ದಾರೆ.

    ಕ್ರಿಸ್ ಮಸ್ (Christmas) ಹಬ್ಬದ ದಿನದಂದು ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಕೇಕ್ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಿ ಆನಂತರ ಜೈ ಮಾತಾದಿ ಎಂದು ಘೋಷಣೆ ಕೂಗಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ವಿಡಿಯೋವನ್ನು ಗಮನಿಸಿ ರಣಬೀರ್ ಮತ್ತು ಕುಟುಂಬದ ವಿರುದ್ಧ ದೂರು ಸಲ್ಲಿಕೆಯಾಗಿದೆ.

    ಅಗ್ನಿಯು ಹಿಂದುತ್ವದ ಸಂಕೇತ. ಕ್ರಿಸ್ ಮಸ್ ಆಚರಣೆಯ ಸಂದರ್ಭದಲ್ಲಿ ಇನ್ನೊಂದು ಧರ್ಮೀಯರ ಭಾವನೆ ಧಕ್ಕೆ ನೀಡಲಾಗಿದೆ. ಈ ಹಬ್ಬದಲ್ಲಿ ಆಲಿಯಾ ಭಟ್ (Alia Bhatt) ಸೇರಿದಂತೆ ಹಲವರು ಭಾಗಿಯಾಗಿದ್ದರು.

  • ಕ್ರಿಕೆಟರ್ ಪೃಥ್ವಿ ಶಾ ಜೊತೆ ನಿಮಿಕಾ ಕ್ರಿಸ್ ಮಸ್ ಸಂಭ್ರಮ

    ಕ್ರಿಕೆಟರ್ ಪೃಥ್ವಿ ಶಾ ಜೊತೆ ನಿಮಿಕಾ ಕ್ರಿಸ್ ಮಸ್ ಸಂಭ್ರಮ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಹಾಡೊಂದರ ಮೂಲಕ ವ್ಯಾಪಕ ಪ್ರಸಿದ್ಧಿ ಪಡೆದುಕೊಂಡಿರುವವರು ನಿಮಿಕಾ ರತ್ನಾಕರ್ (Nimika Ratnakar). ಬಣ್ಣದ ಜಗತ್ತಿನ ಭಾಗವಾಗಿದ್ದುಕೊಂಡು, ಸದಾ ಕ್ರಿಯಾಶೀಲವಾಗಿರುವ ನಿಮಿಕಾ ಇದೀಗ ಖ್ಯಾತ ಕ್ರಿಕೆಟ್ ಆಟಗಾರ ಪೃಥ್ವಿ ಶಾ (Prithvi Shah)ರನ್ನು ಭೇಟಿಯಾಗಿದ್ದಾರೆ. ಅದಕ್ಕೆ ಕಾರಣವಾಗಿರೋದು ಕ್ರಿಸ್ ಮಸ್ (Christmas) ಹಬ್ಬ.

    ನಿಮಿಕಾ ರತ್ನಾಕರ್ ತಮ್ಮಿಬ್ಬರು ಸಹೋದರರೊಂದಿಗೆ ಕ್ರಿಕೆಟರ್ ಪೃಥ್ವಿ ಶಾರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪೃಥ್ವಿ ಜೊತೆಗೂಡಿ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮಿಸಿದ್ದಾರೆ.

    ಮಾಡೆಲಿಂಗ್ ಕ್ರೇತ್ರದಲ್ಲಿ ಮಿಂಚುತ್ತಾ, ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ನೆಲೆ ಕಂಡುಕೊಂಡಿರುವವರು ನಿಮಿಕಾ ರತ್ನಾಕರ್. ಮಂಗಳೂರು ಮೂಲದ ನಿಮಿಕಾ ಸಿನಿಮಾದಾಚೆಗೂ ಒಂದಷ್ಟು ಸೆಲೆಬ್ರಿಟಿಗಳ ಸ್ನೇಹ ವಲಯದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೊಬ್ಬರಾಗಿರುವ ಪೃಥ್ವಿ ಶಾ ಜೊತೆಗಿನ ಕ್ರಿಸ್ ಮಸ್ ಆಚರಣೆ ನಿಮಿಕಾ ಖುಷಿಗೆ ಕಾರಣವಾಗಿದೆ.

  • ಕ್ರಿಸ್ಮಸ್ ಸಂಭ್ರಮದಲ್ಲಿ ಚಿತ್ರರಂಗದ ತಾರೆಯರು

    ಕ್ರಿಸ್ಮಸ್ ಸಂಭ್ರಮದಲ್ಲಿ ಚಿತ್ರರಂಗದ ತಾರೆಯರು

    ಗತ್ತಿನಾದ್ಯಂತ ಕ್ರಿಸ್ಮಸ್ ಹಬ್ಬದ (Christmas Festival) ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಏಸುಕ್ರಿಸ್ತನ ಸ್ಮರಣೆ ಮಾಡಲಾಗುತ್ತಿದೆ. ಇದರ ನಡುವೆ ಸಿನಿಮಾ ನಟ-ನಟಿಯರು ಕೂಡ ಕ್ರಿಸ್ಮಸ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಕ್ರಿಸ್ಮಸ್ ಹಬ್ಬದಂದು ಚೆಂದದ ಫೋಟೋಗಳನ್ನ ಕೂಡ ಶೇರ್ ಮಾಡಿದ್ದಾರೆ.

    ಕ್ರಿಸ್ಮಸ್ ಹಬ್ಬದ ದಿನದಂದು ‘ಗಟ್ಟಿಮೇಳ’ (Gattimela) ಬ್ಯೂಟಿ ಶರಣ್ಯ ಶೆಟ್ಟಿ (Sharanya Shetty) ಅವರು ಕೆಂಪು ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಕಲರ್ ಗೌನ್‌ಗೆ ಬಿಳಿ ಬಣ್ಣದ ಉಲ್ಲನ್ ಶಾಲ್ ಮತ್ತು ಟೋಪಿ ಧರಿಸಿ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಶರಣ್ಯ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

    ‘ಬಚ್ಚನ್’ ಚಿತ್ರದ ನಟಿ ಪಾರುಲ್ ಯಾದವ್ (Parul Yadav) ಅವರು ತಮ್ಮ ನಾಯಿ ಮರಿಗಳ ಜೊತೆ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ. ಇದರ ಸ್ಪೆಷಲ್ ಫೋಟೋಗಳನ್ನ ಕೂಡ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕೊನೆಗೂ ಮಗಳ ಮುಖ ರಿವೀಲ್ ಮಾಡಿದ ರಣ್‌ಬೀರ್-ಆಲಿಯಾ ದಂಪತಿ

    ಉಗ್ರಂ, ಬಘೀರ ಹೀರೋ ಶ್ರೀಮುರಳಿ (Srimurali) ಕೂಡ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಪತ್ನಿ ವಿದ್ಯಾ ಮತ್ತು ಮಕ್ಕಳೊಂದಿಗಿನ ಹಬ್ಬದ ಫೋಟೋ ಶ್ರೀಮುರಳಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ನಿರೂಪ್ ಜೊತೆ ಡ್ಯುಯೆಟ್ ಹಾಡೋಕೆ ಸಜ್ಜಾದ ಬೃಂದಾ

    ಬಾಲಿವುಡ್ ನಟಿ ಆಲಿಯಾ ಭಟ್ (Aliaa Bhatt) ದಂಪತಿ ಕೂಡ ತಮ್ಮ ಕುಟುಂಬದ ಜೊತೆ ಅದ್ದೂರಿಯಾಗಿ ಕ್ರಿಸ್ಮಸ್ ಹಬ್ಬ ಆಚರಣೆ ಮಾಡಿದ್ದಾರೆ. ಹಬ್ಬದ ಸುಂದರ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

    ಇನ್ನೂ ಕ್ರಿಸ್ಮಸ್‌ ಹಬ್ಬದ ಖುಷಿಯಲ್ಲಿ ರಣ್‌ಬೀರ್‌-ಆಲಿಯಾ ಭಟ್‌ ಜೋಡಿ, ಮಗಳ ಮುಖವನ್ನ ರಿವೀಲ್‌ ಮಾಡಿದ್ದಾರೆ. ಕ್ರಿಸ್ಮಸ್‌ ಪಾರ್ಟಿವೊಂದರಲ್ಲಿ ಹೊರಬರುವಾಗ ಪಾಪರಾಜಿಗಳ ಕಣ್ಣಿಗೆ ರಾಹಾ ಮುದ್ದು ಮುದ್ದಾಗಿ ಪೋಸ್‌ ನೀಡಿದ್ದಾಳೆ.