Tag: Christian community

  • ಬಾಂಗ್ಲಾದೇಶ | ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ

    ಬಾಂಗ್ಲಾದೇಶ | ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ

    ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಮಧ್ಯಂತರ ಸರ್ಕಾರ ಬಂದ ಬಳಿಕ ಅಲ್ಪಸಂಖ್ಯಾತರ ಮೇಲಿನ ದಾಳಿ ಹೆಚ್ಚುತ್ತಲೇ ಇವೆ. ಹಿಂದೂ ದೇಗುಲಗಳ (Temple) ಮೇಲಿನ ದಾಳಿ ಬಳಿಕ ಇದೀಗ ಚಿತ್ತಗಾಂಗ್ ಪ್ರದೇಶದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ ವೇಳೆ ಕ್ರಿಶ್ಚಿಯನ್ ಸಮುದಾಯದ (Christian Community) 19 ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.

    ಬಂದರ್ಬನ್ ಜಿಲ್ಲೆಯ ನೋಟುನ್ ತೊಂಗ್‌ಹಿರಿ ತ್ರಿಪುರಾ ಪರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 17 ಮನೆಗಳು ಸಂಪೂರ್ಣ ಭಸ್ಮವಾಗಿದ್ದು, ಎರಡು ಮನೆಗಳು ಭಾಗಶಃ ಸುಟ್ಟಿವೆ. ಈ ಬಗ್ಗೆ ಬಾಂಗ್ಲಾ ಸರ್ಕಾರ ಒಂದೇ ಸಮುದಾಯದ ಎರಡು ಗುಂಪುಗಳ ನಡುವಿನ ವೈಷಮ್ಯವೇ ಇದಕ್ಕೆ ಕಾರಣ ಎಂದು ಹೇಳಿಕೊಂಡಿದೆ.

    ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆಂದು ಚರ್ಚ್‌ಗೆ ಹೋಗಿದ್ದಾಗ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಸಮುದಾಯದ ಮುಖಂಡರ ದೂರು ಆಧರಿಸಿ ಎಫ್‌ಐಆ‌ರ್ ದಾಖಲಿಸಲಾಗಿದೆ. ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕ್ರಿಶ್ಚಿಯನ್ ಸಮುದಾಯದ ಪರವಾಗಿ ನಾನಿರುತ್ತೇನೆ – ಸಿದ್ದರಾಮಯ್ಯ

    ಕ್ರಿಶ್ಚಿಯನ್ ಸಮುದಾಯದ ಪರವಾಗಿ ನಾನಿರುತ್ತೇನೆ – ಸಿದ್ದರಾಮಯ್ಯ

    ಕೋಲಾರ: ನನ್ನ ಸರ್ಕಾರದಲ್ಲಿ (Government) ನಾನು ಎಂದೂ ಭೇದ-ಭಾವ ಮಾಡಿಲ್ಲ, ಮುಂದೆಯೂ ಮಾಡಲ್ಲ. ನನ್ನ 5 ವರ್ಷ ಆಡಳಿತ ನೋಡಿದ್ದೀರಿ, ಸಂವಿಧಾನದ (Constitution Of Indian) ಅಡಿಯಲ್ಲಿ ನಾವೆಲ್ಲ ಕೆಲಸ ಮಾಡಬೇಕು. ನಾನು ಕ್ರಿಶ್ಚಿಯನ್ ಸಮುದಾಯದ (Christian Community) ಅಭಿವೃದ್ಧಿ ಪರವಾಗಿ ನಾವಿರುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದ್ದಾರೆ.

    ಕೋಲಾರದ ಮೆಥೋಡಿಸ್ಟ್ ಚರ್ಚ್‌ಗೆ (Church) ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ನನ್ನ ಮೇಲೆ ಒತ್ತಡ ಇದೆ. ನಾನೂ ಈಗ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದೇನೆ. ವರುಣಾ, ಬಾದಾಮಿಯಿಂದಲೂ ಸ್ಪರ್ಧೆಗೆ ಮನವಿಯಿದೆ. ನಾನು ಕೋಲಾರದ ಜನತೆಗೆ ಅಬಾರಿಯಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಕೋಲಾರ ಎಂಟ್ರಿ ಬೆನ್ನಲ್ಲೇ ಗುಂಪು ರಾಜಕೀಯ- ಸಿದ್ದರಾಮಯ್ಯ ಮೇಲೆ ಮುನಿಯಪ್ಪ ಮುನಿಸು

    ನಾನು 5 ವರ್ಷ ಮುಖ್ಯಮಂತ್ರಿ (Chief Minister) ಆಗಿದ್ದೆ. ಎಲ್ಲ ವರ್ಗದ ಜನರನ್ನ ಸಮಾನವಾಗಿ ಕಂಡಿದ್ದೆ, ಬಡವರ ಪರವಾಗಿದ್ದೆ. ನಾನು ಧರ್ಮದ ಆಧಾರದಲ್ಲಿ ಕೆಲಸ ಮಾಡಿಲ್ಲ. ಈ ದೇಶ ಬಹುತ್ವದ ದೇಶ, ಮನುಷ್ಯರ ಮತ್ತೊಬ್ಬ ಮನುಷ್ಯರನ್ನ ಪ್ರೀತಿಸಬೇಕು. ಆದ್ರೆ ಬಿಜೆಪಿ (BJP) ಧರ್ಮದ ಆಧಾರದಲ್ಲಿ ರಾಜಕೀಯ ಮಾಡ್ತಿದೆ. ಕಾಂಗ್ರೆಸ್ (Congress) ಸರ್ವಧರ್ಮದಲ್ಲಿ ಸಮಾನತೆ ಕಾಣುತ್ತಿದೆ ಎಂದರು. ಇದನ್ನೂ ಓದಿ: ಟಿಕೆಟ್ ಸಿಗದ್ದಕ್ಕೆ ಟವರ್ ಹತ್ತಿ ಬೆದರಿಕೆ ಹಾಕಿದ ಆಪ್ ಮುಖಂಡ

    ನಾನು ನಾಮಿನೇಷನ್ ಹಾಕಬೇಕು ಅಂದಾಗ ಮತ್ತೆ ಚರ್ಚ್ ಗೆ ಬರುತ್ತೇನೆ ಎಂದರು. ಈ ವೇಳೆ ಸ್ಪರ್ಧೆ ಮಾಡಲೇಬೇಕು ಎಂದು ಮುಖಂಡರು ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ರೈಸ್ತ ಸಮುದಾಯ ಸೇಫ್ – ಕೆನಡಿ

    ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ರೈಸ್ತ ಸಮುದಾಯ ಸೇಫ್ – ಕೆನಡಿ

    ಶಿವಮೊಗ್ಗ: ಬಿಜೆಪಿ ಸರ್ಕಾರ ಬಂದ ಮೇಲೆ ಯಾವುದೇ ಸಮುದಾಯವು ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಕ್ರೈಸ್ತ ಸಮುದಾಯ ಸುರಕ್ಷಿತವಾಗಿದೆ ಎಂದು ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಂತಕುಮಾರ ಕೆನಡಿ ತಿಳಿಸಿದ್ದಾರೆ.

    KENADI PRESSMEET

    ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸರ್ಕಾರ ಇರುವುದು ಎಲ್ಲ ಸಮುದಾಯದ ಏಳಿಗೆಗಾಗಿ. ಬಿಜೆಪಿ ಸರ್ಕಾರ ಬಂದ ಮೇಲೆ ಯಾವುದೇ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ. ಕ್ರೈಸ್ತ ಸಮುದಾಯವೂ ಅತ್ಯಂತ ಸುರಕ್ಷಿತವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್, ಲಾಲ್‍ಬಾಗ್‍ಗಳಿಗಿಂತ ದೊಡ್ಡ ಪಾರ್ಕ್ ನಿರ್ಮಾಣ: ಮುನಿರತ್ನ

    KENADI PRESSMEET

    ಮತಾಂತರ ನಿಷೇಧ ಕಾಯ್ದೆಯನ್ನು ಕ್ರೈಸ್ತ ಸಮುದಾಯ ವಿರೋಧಿಸಿಲ್ಲ. ಆದರೆ ಕಾಯ್ದೆ ಜಾರಿಗೆ ತರುವ ಮೊದಲು ಚರ್ಚೆಗೆ ಒಳಪಡಿಸಬೇಕಿತ್ತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ ಅಷ್ಟೇ. ಮತಾಂತರ ನಿಷೇಧ ಕಾಯ್ದೆಯಲ್ಲಿ ಸರ್ಕಾರದ ನಿರ್ಧಾರ ಏನಿದೆಯೋ, ಅದನ್ನು ಗೌರವಿಸಬೇಕಾಗುತ್ತದೆ. ಅಲ್ಲಲ್ಲಿ ಸಮುದಾಯದ ಪರವಾಗಿ ಸಣ್ಣಪುಟ್ಟ ವ್ಯತ್ಯಾಸ ಇರಬಹುದು. ಅದನ್ನೇ ವಿರೋಧ ಎನ್ನುವುದು ಸರಿಯಲ್ಲ. ವಿರೋಧವನ್ನು ಯಾರು ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ವಿಷಯಕ್ಕೆ ಬಂದು ಡಿಕೆಶಿ ಶೇಪ್ ಔಟ್ ಮಾಡಿಕೊಂಡಿದ್ದಾರೆ: ಅಶ್ವಥ್ ನಾರಾಯಣ

  • ವಿವಾದಿತ ಸಮಾಧಿಯನ್ನ ಶಾಂತಿಯುತವಾಗಿ ಸ್ಥಳಾಂತರಿಸಿದ ಕ್ರೈಸ್ತ ಸಮುದಾಯ

    ವಿವಾದಿತ ಸಮಾಧಿಯನ್ನ ಶಾಂತಿಯುತವಾಗಿ ಸ್ಥಳಾಂತರಿಸಿದ ಕ್ರೈಸ್ತ ಸಮುದಾಯ

    ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ 130 ವರ್ಷಗಳಿಂದ ತೀವ್ರ ವಿವಾದ ಹುಟ್ಟಿಸಿದ್ದ ಮೂಡಿಗೆರೆ ಪಟ್ಟಣದ ಹೃದಯ ಭಾಗದಲ್ಲಿದ್ದ ಕ್ರೈಸ್ತ ಸಮುದಾಯದ ಸಮಾಧಿಯನ್ನ ಕ್ರೈಸ್ತರು ಶಾಂತಿಯುತವಾಗಿ ಬಗೆಹರಿಸಿಕೊಂಡಿದ್ದಾರೆ.

    ಮೂಡಿಗೆರೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗಲ್ಲಿದ್ದ ಕ್ರೈಸ್ತ ಸಮುದಾಯ ಶಿಲುಬೆಯನ್ನ ಸಮುದಾಯದ ಮುಖಂಡರು ಹಾಗೂ ಪಟ್ಟಣ ಪಂಚಾಯ್ತಿ ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಂಡು ಸ್ಥಳಾಂತರಿಸಿದೆ. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್‌

    1884ರಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಸ್ಯಾಮುಯಲ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಸ್ಯಾಮುಯಲ್, ಬಡಜನರ ಕಷ್ಟಕ್ಕೆ ಮರುಗುತ್ತಿದ್ದು, ಸದಾ ಸಮಾಜಮುಖಿ ಕೆಲಸ-ಕಾರ್ಯಗಳಲ್ಲಿ ತೊಡಗಿದ್ದರು ಎಂಬ ಕಾರಣಕ್ಕೆ ಸ್ಥಳಿಯ ಕ್ರೈಸ್ತ ಸಮುದಾಯ ಬಸ್ ನಿಲ್ದಾಣದ ಮುಂಭಾಗದ ಜಾಗದಲ್ಲೇ ಅವರ ಅಂತ್ಯ ಸಂಸ್ಕಾರ ಮಾಡಿತ್ತು. ಅಂದಿನಿಂದಲೂ ಈ ಜಾಗ ವಿವಾದದಿಂದ ಕೂಡಿತ್ತು. ಪಟ್ಟಣ ಪಂಚಾಯ್ತಿ ನಾಲ್ಕೈದು ದಶಕಗಳಿಂದ ಮಳಿಗೆ ನಿರ್ಮಿಸಲು ಈ ವಿವಾದಿತ ಶಿಲುಬೆಯನ್ನ ತೆರವುಗೊಳಿಸಲು ಮುಂದಾದರೂ ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ:  ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್

    ಶಿಲುಬೆ ತೆರವುಗೊಳಿಸಲು ಕ್ರೈಸ್ತ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಇಂದು ಪಟ್ಟಣ ಪಂಚಾಯ್ತಿ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿರುವ ಕ್ರೈಸ್ತ ಸಮುದಾಯ ಶಾಂತಿಯುತವಾಗಿ ಶಿಲುಬೆಯನ್ನ ಸ್ಥಳಾಂತರಿಸಿದೆ. ಪಟ್ಟಣ ಪಂಚಾಯ್ತಿ ನೇತೃತ್ವದಲ್ಲಿ ಪೂಜೆ ಮಾಡಿ ಶಿಲುಬೆಯನ್ನ ಸ್ಥಳಾಂತರಿಸಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿದ್ದ ಶಿಲುಬೆಯನ್ನು ಸ್ಥಳಾಂತರಿಸಿ ಕ್ರೈಸ್ತರ ಸ್ಮಶಾನದಲ್ಲಿ ಪೂಜೆ ಮಾಡಿ ಮತ್ತೊಮ್ಮೆ ಸಮಾಧಿ ಮಾಡಿದ್ದಾರೆ.

    ಸುಮಾರು ಎರಡು ಗಂಟೆ ಕಾರ್ಯಚರಣೆ ನಡೆಸಿದರೂ ಆ ಜಾಗದಲ್ಲಿ ಯಾವುದೇ ಕಳೆಬರಹ ಸಿಗಲಿಲ್ಲ. 130 ವರ್ಷವಾದ ಕಾರಣ ನೆಲದ ಒಳಭಾಗದಲ್ಲಿ ಏನೂ ಇರಲಿಲ್ಲ. ಜೆಸಿಬಿಯಲ್ಲಿ ಗುಂಡಿ ತೆಗೆಸಿ ಹುಡುಕಿದರೂ ಯಾವುದೇ ಕುರುಹು ಸಿಗಲಿಲ್ಲ. ಹಾಗಾಗಿ, ಕ್ರೈಸ್ತರು ಸಮಾಧಿಯ ಮಣ್ಣನ್ನೇ ತೆಗೆದುಕೊಂಡು ಹೋಗಿ, ಮಣ್ಣಿನ ಜೊತೆ ಸಮಾಧಿ ಅಕ್ಕಪಕ್ಕದಲ್ಲಿದ್ದ ಕಲ್ಲು ಹಾಗೂ ಇತರೆ ವಸ್ತುಗಳನ್ನ ಮತ್ತೇ ಸಂಪ್ರದಾಯಬದ್ಧವಾಗಿ ಮಣ್ಣು ಮಾಡಿ ಅದರ ಮೇಲೆ ಶಿಲುಬೆಯನ್ನ ಮತ್ತೆ ಪುನರ್ ಪ್ರತಿಷ್ಠಾಪಿಸಿದ್ದಾರೆ.

    ಈಗ ಆ ಜಾಗದಲ್ಲಿ ಪಟ್ಟಣ ಪಂಚಾಯ್ತಿ ಮಳಿಗೆ ನಿರ್ಮಾಣ ಮಾಡಲು ಮುಂದಾಗಿದೆ. ಹೆಚ್ಚು-ಕಡಿಮೆ ಶತಮಾನಗಳಿಂದ ವಿವಾದದಲ್ಲಿದ್ದ ಸ್ಥಳವನ್ನು ಆರು ತಿಂಗಳ ಹಿಂದೆ ಅಧ್ಯಕ್ಷರಾದ ಧನ್‍ಪಾಲ್, ಪಟ್ಟಣ ಪಂಚಾಯ್ತಿ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದ ಜೊತೆ ಮಾತುಕತೆ ನಡೆಸಿ ಶತಮಾನದ ಸಮಸ್ಯೆಯನ್ನ ಶಾಂತಿಯುತವಾಗಿ ಬಗೆಹರಿಸಿದ್ದಾರೆ. ಅಧ್ಯಕ್ಷರು ಈ ಕಾರ್ಯಕ್ಕೆ ಮೂಡಿಗೆರೆ ಪಟ್ಟಣದ ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.