Tag: ChrisGayle

  • ರೋಹಿತ್ ಶರ್ಮಾ ಈಗ ಸಿಕ್ಸರ್ ವೀರ – ಟಾಪ್ 2 ಸ್ಥಾನದಲ್ಲಿ ಹಿಟ್‌ಮ್ಯಾನ್

    ರೋಹಿತ್ ಶರ್ಮಾ ಈಗ ಸಿಕ್ಸರ್ ವೀರ – ಟಾಪ್ 2 ಸ್ಥಾನದಲ್ಲಿ ಹಿಟ್‌ಮ್ಯಾನ್

    ಢಾಕಾ: ಟೀಂ ಇಂಡಿಯಾ (Team India) ವಿರುದ್ಧ ಬಾಂಗ್ಲಾದೇಶ (Bangladesh) ಐತಿಹಾಸಿಕ ಗೆಲುವು ಸಾಧಿಸುವ ಮೂಲಕ 2-0 ಅಂತರದಲ್ಲಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿತು. ಆದರೆ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಪಂದ್ಯ ಸೋತರು ಹೊಸ ದಾಖಲೆ ಬರೆಯುವ ಮೂಲಕ ತಾನು ಗೆದ್ದಿದ್ದಾರೆ.

    ಕೈಬೆರಳಿನಿಂದ ರಕ್ತ ಸುರಿಯುತ್ತಿದ್ದರೂ ಡೆತ್ ಓವರ್‌ಗಳಲ್ಲಿ (DeathOver) ಹೋರಾಡಿದ ರೋಹಿತ್ ಶರ್ಮಾ ಟೀಂ ಇಂಡಿಯಾ ಗೆಲ್ಲಿಸಲು ಸತತವಾಗಿ ಪ್ರಯತ್ನಿಸಿದರು. 28 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿಯೊಂದಿಗೆ 51 ರನ್ ಗಳಿಸಿದರು. ಸ್ಫೋಟಕ ಸಿಕ್ಸರ್ ಬೌಂಡರಿಗಳ ಆಟದಲ್ಲಿ 182.14 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಬೀಸಿದ ಹಿಟ್‌ಮ್ಯಾನ್ ಹೊಸ ದಾಖಲೆ ಸಹ ಬರೆದರು. ಇದನ್ನೂ ಓದಿ: ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್‌ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ

    ಹೌದು.. ರೋಹಿತ್ ಶರ್ಮಾ ಈಗ ಟಾಪ್ ಸಿಕ್ಸರ್ ವೀರರ ಪಟ್ಟಿಯಲ್ಲಿದ್ದಾರೆ. 500 ಸಿಕ್ಸರ್ ಸಿಡಿಸಿದ ವಿಶ್ವದ 2ನೇ ಹಾಗೂ ಭಾರತದ ನಂ.1 ಆಟಗಾರರಾಗಿದ್ದಾರೆ. ಇದನ್ನೂ ಓದಿ: ಬೆರಳಲ್ಲಿ ರಕ್ತಸುರಿಯುತ್ತಿದ್ದರೂ ಕೊನೆವರೆಗೆ ಹೋರಾಡಿದ ಹಿಟ್‌ಮ್ಯಾನ್ – ರಾಹುಲ್ ಸಲಾಂ

    483 ಪಂದ್ಯಗಳನ್ನಾಡಿರುವ ಕ್ರಿಸ್‌ಗೇಲ್ (Chris Gayle) 553 ಸಿಕ್ಸರ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದರೆ, 428 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 502 ಸಿಕ್ಸರ್ ಚಚ್ಚಿ 2ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನೂ 525 ಪಂದ್ಯಗಳನ್ನಾಡಿರುವ ಪಾಕಿಸ್ತಾನದ (Pakistan) ಆಲ್‌ರೌಂಡರ್ ಶಾಹಿದ್ ಅಫ್ರಿದಿ 476 ಸಿಕ್ಸರ್, 432 ಪಂದ್ಯಗಳನ್ನಾಡಿರುವ ಕೀವಿಸ್ ಪಡೆಯ ಬ್ರಿಂಡನ್ ಮೆಕಲಂ 398 ಸಿಕ್ಸರ್, 367 ಪಂದ್ಯಗಳನ್ನಾಡಿರುವ ಮಾರ್ಟೀನ್ ಗಪ್ಟಿಲ್ 383 ಸಿಕ್ಸರ್ ಸಿಡಿಸಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • IPL ಶತಕ ಸಿಡಿಸಿ ಮೆರೆದವರು ಯಾರು – ಇಲ್ಲಿದೆ ಟಾಪ್ 10 ಸಿಕ್ಸರ್ ವೀರರ ಪಟ್ಟಿ

    IPL ಶತಕ ಸಿಡಿಸಿ ಮೆರೆದವರು ಯಾರು – ಇಲ್ಲಿದೆ ಟಾಪ್ 10 ಸಿಕ್ಸರ್ ವೀರರ ಪಟ್ಟಿ

    ಮುಂಬೈ: ಅಸಲಿ ಟಿ20 ಅಂದ್ರೇನೇ ರೋಚಕ ಆಟ. ಹಾಗಾಗಿಯೇ, ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸಲು ಸಾಧ್ಯವಾಗಿದೆ. 15ನೇ ಆವೃತ್ತಿಯ ಲೀಗ್ ನಲ್ಲಿ ಮಿಂಚಿದ ಅನೇಕರು ತಮ್ಮಲ್ಲಿನ ಅನನ್ಯ ಪ್ರತಿಭೆಯಿಂದಾಗಿ ದಾಖಲೆಗಳನ್ನು ಬರೆದಿದ್ದಾರೆ.

    CHRIS GAYLE

    ಫೀಲ್ಡಿಂಗ್ ನಿರ್ಬಂಧಗಳು ಬ್ಯಾಟ್ಸ್ಮನ್ ಗಳಿಗೆ ಮಿಂಚಲು ಹೆಚ್ಚೆಚ್ಚು ಅವಕಾಶ ಮಾಡಿಕೊಟ್ಟಿವೆ. ಹಾಗಾಗಿ ಅನುಭವಿ ಆಟಗಾರರು ಕಡಿಮೆ ಎಸೆತಗಳಲ್ಲೇ ಸ್ಪೋಟಕ ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. ಪೈಕಿ ವೆಸ್ಟ್ಇಂಡೀಸ್ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್‌ಗೇಲ್ 6 ಹಾಗೂ ಆರ್‌ಸಿಬಿ ನಾಯಕನಾಗಿದ್ದ ವಿರಾಟ್ ಕೊಹ್ಲಿ 5 ಶತಕಗಳನ್ನು ಸಿಡಿಸಿದ್ದಾರೆ. ಇದನ್ನೂ ಓದಿ: ಪಠಾಣ್‌ Vs ಮಿಶ್ರಾ – ಭಾರತ ಶ್ರೇಷ್ಠ ದೇಶವಾಗಬಹುದು ಆದರೆ…

    IPL 2022 JOS BUTLER

    2008ನೇ ಇಸವಿಯ ಏಪ್ರಿಲ್ 18ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟ್ಸ್ಮನ್ ಆಗಿದ್ದ ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಭರ್ಜರಿ ಶತಕ ಸಿಡಿಸಿದ್ದರು. 73 ಎಸೆತಗಳಲ್ಲಿ 10 ಬೌಂಡರಿ ಹಾಗೂ 13 ಸಿಕ್ಸರ್‌ಗಳಿಂದ 158 ರನ್ ಗಳಿಸಿ ಅಜೇಯರಾಗುಳಿದಿದ್ದರು. ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿದ್ದ ಆರ್‌ಸಿಬಿ ತಂಡವು 82 ರನ್‌ಗಳಷ್ಟೇ ಗಳಿಸಲು ಸಾಧ್ಯವಾಗಿ 140 ರನ್‌ಗಳ ಅಂತರದ ಹೀನಾಯ ಸೋಲು ಕಂಡಿತು.

    IPL 2022 KL RAHUL (2)

    ಐಪಿಎಲ್ ಆರಂಭದಿಂದ ಭಾರತದ ಯಾರೊಬ್ಬರೂ ಶತಕ ಗಳಿಸಿದ ಉದಾಹರಣೆಯಿರಲಿಲ್ಲ. ಆದರೆ, 2009ರಲ್ಲಿ ಆರಂಭವಾದ ಪಂದ್ಯದಲ್ಲಿ ಮನಿಷ್ ಪಾಂಡೆ ಶತಕ ದಾಖಲಿಸಿದ ಮೊದಲ ಭಾರತೀಯ ಎನಿಸಿಕೊಂಡರು. ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿದ್ದ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 73 ಎಸೆತಗಳನ್ನು ಎದುರಿಸಿದ ಮನೀಶ್ ಪಾಂಡೆ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳಿಂದ 114 ರನ್ ಗಳಿಸಿ ಅಜೇಯರಾಗುಳಿದರು. ಪರಿಣಾಮ ಆರ್‌ಸಿಬಿ 12 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ನಂತರದ ಪಂದ್ಯಗಳಲ್ಲಿ ಅನೇಕರು ಶತಕ ಸಿಡಿಸಿ ದಾಖಲೆ ಬರೆದರು. ಇದನ್ನೂ ಓದಿ: ಶೂನ್ಯ ಸುತ್ತಿದ ಕೊಹ್ಲಿ, ರೋಹಿತ್ – 2022ರ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ

    WARNER

    ಟಾಪ್-10 ಪಟ್ಟಿಯಲ್ಲಿ ಯಾರಿದ್ದಾರೆ: ಐಪಿಎಲ್ ಇತಿಹಾಸದಲ್ಲಿ ಈವರೆಗೆ ಕ್ರಿಸ್‌ಗೆಲ್ 6, ವಿರಾಟ್‌ಕೊಹ್ಲಿ 5, ಡೇವಿಡ್‌ವಾರ್ನರ್ 4, ಶೇನ್‌ವಾಟ್ಸನ್ 4, ಎಬಿ ಡಿವಿಲಿಯರ್ಸ್ 4, ಸಂಜು ಸಾಮ್ಸನ್ 3, ಕೆ.ಎಲ್.ರಾಹುಲ್ 3, ಜಾಸ್ ಬಟ್ಲರ್ 3, ಬ್ರೆಂಡನ್ ಮೆಕಲಂ 2, ಆಡಂ ಗಿಲ್‌ಕ್ರಿಸ್ಟ್ 2 ಶತಕಗಳನ್ನು ಸಿಡಿಸಿ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 2021ರ ಐಪಿಎಲ್ ಆವೃತ್ತಿಯಲ್ಲಿ ಸಂಜು ಸಾಮ್ಸನ್ (63ಕ್ಕೆ 119), ದೇವದತ್ ಪಡಿಕಲ್ (52ಕ್ಕೆ 101), ಜೋಸ್ಟ್ ಬಟ್ಲರ್ (64ಕ್ಕೆ 124), ಋತುರಾಜ್ ಗಾಯಕ್ವಾಡ್ (60ಕ್ಕೆ 101) ಗಳಿಸಿದ್ದರು. ಸದ್ಯ ಈ ಆವೃತ್ತಿಯಲ್ಲಿ ಬಟ್ಲರ್ (2) ಹಾಗೂ ಕೆ.ಎಲ್.ರಾಹುಲ್ (1) ಇಬ್ಬರೇ ಶತಕ ಸಿಡಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇದನ್ನೂ ಓದಿ: Mumbai Vs Chennai ನಡುವಿನ ಪಂದ್ಯ ಭಾರತ-ಪಾಕ್ ಕಾದಾಟವಿದ್ದಂತೆ: ಭಜ್ಜಿ

    ABD

    ಭಾರತ ಸೆಂಚುರಿ ಸ್ಟಾರ್‌ಗಳು:
    ವಿರಾಟ್ ಕೊಹ್ಲಿ – 5
    ಕೆ.ಎಲ್.ರಾಹುಲ್ – 3
    ಸಂಜು ಸ್ಯಾಮ್ಸನ್ – 3
    ಅಜಿಂಕ್ಯ ರಹಾನೆ – 2
    ವೀರೇಂದ್ರ ಸೆಹ್ವಾಗ್ – 2

  • ಪೋಲಾರ್ಡ್ ವಿದಾಯ ಹೇಳಿದ್ದು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ: ಕ್ರಿಸ್‌ಗೇಲ್

    ಪೋಲಾರ್ಡ್ ವಿದಾಯ ಹೇಳಿದ್ದು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ: ಕ್ರಿಸ್‌ಗೇಲ್

    ಮುಂಬೈ: 15 ವರ್ಷಗಳ ಕಾಲ ವೆಸ್ಟ್ಇಂಡೀಸ್ ತಂಡದಲ್ಲಿ ಕ್ರಿಕೆಟ್ ಆಡಿದ 34 ವರ್ಷದ ಕೀರನ್ ಪೊಲಾರ್ಡ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಕ್ರಿಕೆಟರ್‌ಗಳು ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಜಾಲತಾಣಗಳಲ್ಲಿ ಪೊಲಾರ್ಡ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ ವಿದಾಯದ ಶುಭಾಶಯ ಕೋರಿದ್ದಾರೆ.

    IPL 2022 MI (1)

    ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹ ತಮ್ಮ ಟ್ವೀಟ್‌ನಲ್ಲಿ ಪೋಲಾರ್ಡ್ ಅವರ ಫೋಟೋ ಹಂಚಿಕೊಂಡಿದ್ದು, ಅವರನ್ನು `ಆಲ್‌ರೌಂಡರ್, ಚಾಲೆಂಜರ್, ಫೈಟರ್’ ಎಂದು ಕರೆದಿದ್ದಾರೆ. ಇದನ್ನೂ ಓದಿ: ಡೆಲ್ಲಿ ದರ್ಬಾರ್‌ಗೆ ಪಂಜಾಬ್ ಪಂಚರ್ – 10 ಓವರ್‌ಗಳಲ್ಲಿ ಟಾರ್ಗೆಟ್ ಉಡೀಸ್

    ವೆಸ್ಟ್ಇಂಡೀಸ್ ತಂಡದ ಕ್ರಿಕೆಟಿಗ ಕ್ರಿಸ್‌ಗೇಲ್, ನನಗಿಂತಲೂ ಮುಂಚಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವುದು ನನಗೆ ನಂಬಲಾಗುತ್ತಿಲ್ಲ. ನಿಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಅಭಿನಂದನೆಗಳು. ನಿಮ್ಮ ಜೊತೆಯಲ್ಲಿ ಆಡಿದ ಆಟಗಳು ತುಂಬಾ ಚೆನ್ನಾಗಿವೆ ಎಂದು ನೆನಪಿಸಿಕೊಂಡಿದ್ದಾರೆ.

    ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಪೊಲಾರ್ಡ್ ಅವರು ಆಡುತ್ತಿದ್ದಾರೆ. T20 ಫ್ರಾಂಚೈಸಿ ಹಾಗೂ T-10 ಲೀಗ್ ಟೂರ್ನಿಗಳಲ್ಲೂ ತಮ್ಮ ಆಟ ಮುಂದುವರಿಸಲಿದ್ದಾರೆ. ಬಹಳಷ್ಟು ಯೋಚಿಸಿದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್-2 ಡೈಲಾಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಂಗ್ಯ

    Kieron Pollard a

    34 ವರ್ಷ ವಯಸ್ಸಿನ ಪೊಲಾರ್ಡ್ 2007ರಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಕೊನೆಯ ಸರಣಿಯನ್ನು ಭಾರತ ತಂಡದ ವಿರುದ್ಧ ಆಡಿದರು. ಈವರೆಗೆ 123 ಏಕದಿನ ಪಂದ್ಯಗಳು ಹಾಗೂ ಹಾಗೂ 101 ಟಿ20 ಪಂದ್ಯಗಳಲ್ಲಿ ಮಿಂಚಿರುವ ಪೊಲಾರ್ಡ್ ಏಕದಿನ ಪಂದ್ಯಗಳಲ್ಲಿ 2706 (13 ಅರ್ಧ ಶತಕ, 3 ಶತಕ) ಹಾಗೂ T20 ಪಂದ್ಯಗಳಲ್ಲಿ 1569 ರನ್ (6 ಅರ್ಧಶತಕ) ಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ 119 ಗರಿಷ್ಠ ರನ್ ಗಳಿಸಿರುವ ಅವರು T20 ನಲ್ಲಿ 75 ಗರಿಷ್ಠ ರನ್‌ಗಳನ್ನು ಪೇರಿಸಿದ್ದಾರೆ.

    ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿರುವ ಅವರು, ಅನೇಕ ಪಂದ್ಯಗಳಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ದಡ ಸೇರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟಿಗರ ಸ್ಪೋಟಕ ಆಟಗಾರರ ಪಟ್ಟಿಯಲ್ಲೂ ಸ್ಥಾನ ಗಳಿಸಿದ್ದಾರೆ.