Tag: Chris Gayle

  • ದಾಖಲೆಯ ಹೊಸ್ತಿಲಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

    ದಾಖಲೆಯ ಹೊಸ್ತಿಲಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

    – ದಾಖಲೆಗೆ ಬೇಕಿದೆ 3 ಸಿಕ್ಸರ್
    – ಸಿಕ್ಸರ್ ಕಿಂಗ್ ಆಗಲಿರುವ ರೋಹಿತ್ ಶರ್ಮಾ

    ಅಬುಧಾಬಿ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ದಾಖಲೆಯ ಹೊಸ್ತಿಲಿನಲ್ಲಿ ನಿಂತಿದ್ದಾರೆ. ಇನ್ನು ಕೇವಲ 3 ಸಿಕ್ಸರ್ ಹೊಡೆದರೆ 400 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

    ಐಪಿಎಲ್‍ನ ಮೊದಲ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್, ಇಂದು ಕೋಲ್ಕತ್ತಾ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕೋಲ್ಕತ್ತಾ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ರೆಕಾರ್ಡ್ ಹೊಂದಿರುವ ಹಿಟ್ ಮ್ಯಾನ್ ಈ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿದರೆ ದಾಖಲೆ ನಿರ್ಮಿಸಲಿದ್ದಾರೆ. ಚುಟುಕು ಕ್ರಿಕೆಟ್‍ನಲ್ಲಿ 350 ಸಿಕ್ಸರ್ ಸಿಡಿಸಿರುವ ಶರ್ಮಾ ಭಾರತೀಯರಲ್ಲಿ ಮೊದಲಿಗರಾಗಿದ್ದಾರೆ. 324 ಸಿಕ್ಸರ್ ಸಿಡಿಸಿರುವ ಸುರೇಶ್ ರೈನಾ ಎರಡನೇ ಸ್ಥಾನದಲ್ಲಿದ್ದಾರೆ. 315 ಸಿಕ್ಸರ್ ಸಿಡಿಸಿರುವ ವಿರಾಟ್ 302 ಸಿಕ್ಸರ್ ಸಿಡಿಸಿರುವ ಧೋನಿ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಆರ್​ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್

    ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕನಾಗಿರುವ ರೋಹಿತ್ ಶರ್ಮಾ, 133 ಸಿಕ್ಸರ್‍ಗಳನ್ನು ಭಾರತದ ಪರವಾಗಿ ಚುಟುಕು ಕ್ರಿಕೆಟ್ ಆಡುವಾಗ ಸಿಡಿಸಿರುವುದು ವಿಶೇಷವಾಗಿದೆ.  ಇದನ್ನೂ ಓದಿ: ಐಪಿಎಲ್‍ನಲ್ಲಿ ವಾರ್ನರ್ ದಾಖಲೆ ಹಿಂದಿಕ್ಕಿದ ಕನ್ನಡಿಗ ಕೆ.ಎಲ್ ರಾಹುಲ್

    ಸಿಕ್ಸರ್‌ಗಳ ಪಟ್ಟಿಯಲ್ಲಿ, 1043 ಸಿಕ್ಸರ್ ಸಿಡಿಸಿರುವ ಕೆರೆಬಿಯನ್ ಸ್ಟಾರ್ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. 756 ಸಿಕ್ಸರ್ ಹೊಡೆದಿರುವ ಕೀರನ್ ಪೊಲಾರ್ಡ್ ಎರಡನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ರಸೆಲ್ (509) 4ನೇ ಸ್ಥಾನದಲ್ಲಿ ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್ (485) 5ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ (467) 6ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (430) 7ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆರನ್ ಫಿಂಚ್  (399) ಭಾರತದ ರೋಹಿತ್ ಶರ್ಮಾ 397 ಸಿಕ್ಸರ್ ಸಿಡಿಸಿ ಕ್ರಮವಾಗಿ 8ನೇ ಸ್ಥಾನದಲ್ಲಿದ್ದಾರೆ.

  • ಐಪಿಎಲ್‍ನಲ್ಲಿ ವಾರ್ನರ್ ದಾಖಲೆ ಹಿಂದಿಕ್ಕಿದ ಕನ್ನಡಿಗ ಕೆ.ಎಲ್ ರಾಹುಲ್

    ಐಪಿಎಲ್‍ನಲ್ಲಿ ವಾರ್ನರ್ ದಾಖಲೆ ಹಿಂದಿಕ್ಕಿದ ಕನ್ನಡಿಗ ಕೆ.ಎಲ್ ರಾಹುಲ್

    ದುಬೈ: ಪಂಜಾಬ್ ತಂಡದ ನಾಯಕ ಕನ್ನಡಿಗ ಕೆ.ಎಲ್ ರಾಹುಲ್, ಹೈದರಾಬಾದ್ ತಂಡದ ಆಟಗಾರ ಡೇವಿಡ್ ವಾರ್ನರ್ ಅವರ ಹೆಸರಲ್ಲಿದ್ದ ವೇಗದ 3,000ರನ್‍ಗಳ ದಾಖಲೆಯನ್ನು ಮುರಿದಿದ್ದಾರೆ.

    14ನೇ ಆವೃತ್ತಿಯ 32ನೇ ಪಂದ್ಯದಲ್ಲಿ ಪಂಜಾಬ್ ಹಾಗೂ ರಾಜಸ್ಥಾನ ತಂಡಗಳು ಕಾದಾಡಿದವು, ಈ ಪಂದ್ಯದಲ್ಲಿ ರಾಹುಲ್ ಐಪಿಎಲ್‍ನಲ್ಲಿ ವೇಗವಾಗಿ 3,000ರನ್ ಸಿಡಿಸಿದ ನೂತನ ಮೈಲಿಗಲ್ಲು ಸ್ಥಾಪಿಸಿದರು. ಇದನ್ನೂ ಓದಿ: ಕೊನೆಯ ಓವರಿನಲ್ಲಿ ತ್ಯಾಗಿ ಜಾದೂ – ರಾಜಸ್ಥಾನಕ್ಕೆ 2 ರನ್‍ಗಳ ರೋಚಕ ಜಯ

    ಐಪಿಎಲ್‍ನಲ್ಲಿ ಈ ವರೆಗೆ ರಾಹುಲ್ 89 ಪಂದ್ಯವಾಡಿದ್ದು, ಅದರಲ್ಲಿ 80 ಇನ್ನಿಂಗ್ಸ್‌ನಲ್ಲಿ ಬ್ಯಾಟ್‍ಬೀಸಿ 3,000ಕ್ಕೂ ಅಧಿಕ ರನ್ ಹೊಡೆದು ಅತೀ ವೇಗವಾಗಿ 3000 ರನ್ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಮೊದಲು ಎರಡನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದರು. ಇದೀಗ ಅವರ ದಾಖಲೆ ಮುರಿದು ರಾಹುಲ್ ಆ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ರಾಹುಲ್ 1,000 ರನ್ ದಾಖಲಿಸಲು 38 ಇನ್ನಿಂಗ್ಸ್ ಆಡಿದರೆ 2,000 ರನ್ ದಾಖಲಿಸಲು 22 ಇನ್ನಿಂಗ್ಸ್ ಬಳಸಿಕೊಂಡಿದ್ದರು, ಇದೀಗ 3,000ರನ್‍ಗಾಗಿ ಕೇವಲ 20 ಇನ್ನಿಂಗ್ಸ್ ಬಳಸಿಕೊಂಡಿದ್ದಾರೆ. ಇದನ್ನೂ ಓದಿ: RCB ಹೀನಾಯ ಸೋಲಿಗೆ ಏನಂದ್ರು ಕ್ರಿಕೆಟ್ ಪ್ರೇಮಿಗಳು?

    ಐಪಿಎಲ್‍ನಲ್ಲಿ ವೇಗವಾಗಿ 3,000ರನ್ ದಾಖಲಿಸಿರುವ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದು, 75 ಇನ್ನಿಂಗ್ಸ್‌ನಲ್ಲಿ ಗೇಲ್ 3,000 ರನ್ ಸಿಡಿಸಿದ್ದಾರೆ, ಎರಡನೇ ಸ್ಥಾನದಲ್ಲಿ ರಾಹುಲ್ ಇದ್ದರೆ, 94 ಇನ್ನಿಂಗ್ಸ್‌ನಿಂದ 3,000 ರನ್ ಬಾರಿಸಿರುವ ವಾರ್ನರ್ ಮೂರನೇ ಸ್ಥಾನದಲ್ಲಿದ್ದಾರೆ. 103 ಇನ್ನಿಂಗ್ಸ್‌ನಿಂದ 3,000ರನ್ ಬಾರಿಸಿದ ಸುರೇಶ್ ರೈನಾ ನಾಲ್ಕನೇ ಸ್ಥಾನ ಮತ್ತು 104 ಇನ್ನಿಂಗ್ಸ್‌ನಿಂದ 3,000 ರನ್ ಚಚ್ಚಿದ ಎಬಿಡಿ ವಿಲಿಯರ್ಸ್ ಐದನೇ ಸ್ಥಾನದಲ್ಲಿದ್ದಾರೆ.

  • ಕೆಟ್ಟ ದಾಖಲೆ ಬರೆದ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್

    ಕೆಟ್ಟ ದಾಖಲೆ ಬರೆದ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್

    ವೆಸ್ಟ್ ಇಂಡೀಸ್: ತನ್ನ ಆಕ್ರಮಣಕಾರಿ ಬ್ಯಾಟಿಂಗ್‍ನಿಂದಲೇ ಹೆಸರು ವಾಸಿಯಾಗಿರುವ ಕ್ರಿಸ್ ಗೇಲ್ ಟಿ20 ಯಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆಗಿರುವ ಕೆಟ್ಟ ದಾಖಲೆಯನ್ನು ಸಹ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

    ಕ್ರಿಸ್ ಗೇಲ್ ಬ್ಯಾಟಿಂಗ್ ಬಂದರೆ ಎದುರಾಳಿ ಬೌಲರ್ ಗಳು ನಡುಗುತ್ತಾರೆ. ಟಿ20 ಯಲ್ಲಿ ಅತಿ ಹೆಚ್ಚು ರನ್ ಬಾರಿಸುವ ಗೇಲ್ ಈಗ ಹೆಚ್ಚು ಬಾರಿ ಶೂನ್ಯಕ್ಕೆ ಬಲಿಯಾಗಿರುವ ಆಟಗಾರ ಎಂಬ ಕುಖ್ಯಾತಿಗೂ ಪಾತ್ರವಾಗಿದ್ದಾರೆ. ಕ್ರಿಕೆಟ್ ಪಂದ್ಯಗಳಲ್ಲಿ ಅಬ್ಬರಿಸುವ ಗೇಲ್ ಇದುವರೆಗೂ ಒಟ್ಟು 446 ಟಿ20 ಪಂದ್ಯಗಳನ್ನು ಆಡಿ 30 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅಲ್ಲದೆ ಟಿ20ಯಲ್ಲಿ 175 ರನ್ ಹೊಡೆಯುವ ಮೂಲಕ ವೈಯಕ್ತಿಕವಾಗಿ ಅತಿಹೆಚ್ಚು ಸ್ಕೋರ್ ಗಳಿಸಿದ್ದಾರೆ.  ಇದನ್ನೂ ಓದಿ: 500 ಟಿ20 ಪಂದ್ಯವಾಡಿ ದಾಖಲೆ ಬರೆದ ಬ್ರಾವೋ

    ಶೂನ್ಯಕ್ಕೆ ಔಟಾಗಿರುವವರ ಪಟ್ಟಿಯನ್ನು ನೋಡುವುದಾದರೆ ಎರಡನೇ ಸ್ಥಾನದಲ್ಲಿ 373 ಪಂದ್ಯಗಳನ್ನಾಡಿರುವ ಸುನಿಲ್ ನರೈನ್ ಇದ್ದು 28 ಬಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಅಬ್ಬರದ ಹೊಡೆತಗಳಿಗೆ ಹೆಸರಾಗಿರುವ ಲೆಂಡ್ಲೆ ಸಿಮನ್ಸ್ 283 ಪಂದ್ಯಗಳಲ್ಲಿ 28 ಬಾರಿ ರನ್ ಗಳಿಸದೆ ವಿಕೆಟ್ ಒಪ್ಪಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಎಬಿಡಿ ಸಿಡಿಲಬ್ಬರದ ಶತಕಕ್ಕೆ ಬೆಚ್ಚಿಬಿದ್ದ ಆರ್​ಸಿಬಿ ಬೌಲರ್ಸ್

    ನಾಲ್ಕನೇ ಸ್ಥಾನದಲ್ಲಿ 337 ಪಂದ್ಯಗಳನ್ನಾಡಿರುವ ಡ್ವೈನೆ ಸ್ಮಿತ್ 28 ಬಾರಿ ಸೊನ್ನೆಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ. 5ನೇ ಸ್ಥಾನದಲ್ಲಿರುವ ಉಮರ್ ಅಕ್ಮಲ್ 27 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

    ಚುಟುಕು ಪಂದ್ಯಗಳಲ್ಲಿ ಸಿಕ್ಸರ್ ಸಿಡಿಸಿ ದಾಖಲೆ ಬರೆದಿರುವ ವೆಸ್ಟ್ ಇಂಡೀಸ್ ಆಟಗಾರರು ಶೂನ್ಯಕ್ಕೆ ಔಟ್ ಆಗಿರುವ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

     

  • ಯೂನಿವರ್ಸಲ್ ಬಾಸ್ ಅಲ್ಲ ನಾನು ‘ದಿ ಬಾಸ್’ ಎಂದ ಗೇಲ್

    ಯೂನಿವರ್ಸಲ್ ಬಾಸ್ ಅಲ್ಲ ನಾನು ‘ದಿ ಬಾಸ್’ ಎಂದ ಗೇಲ್

    ಸೈಂಟ್ ಲೂಸಿಯಾ: ವೆಸ್ಟ್ ಇಂಡಿಸ್ ತಂಡದ ಸ್ಫೋಟಕ ಬ್ಯಾಟ್ಸ್‌‌‌ಮ್ಯಾನ್‌ ಕ್ರಿಸ್ ಗೇಲ್ ತಮ್ಮ ಯೂನಿವರ್ಸಲ್ ಬಾಸ್ ಎಂಬ ಖ್ಯಾತನಾಮವನ್ನು ಬದಲಾಯಿಸಿ ನಾನು ಬರಿ ‘ದಿ ಬಾಸ್’ ಎಂದು ಹೇಳಿಕೊಂಡಿದ್ದಾರೆ.

    ಕೆಲದಿನಗಳ ಹಿಂದೆ ಟಿ20 ಕ್ರಿಕೆಟ್‍ನಲ್ಲಿ 14 ಸಾವಿರ ರನ್‍ಗಳ ಗಡಿಯನ್ನು ದಾಟಿದ ಗೇಲ್ ನೂತನ ವಿಶ್ವದಾಖಲೆ ಬರೆದು ಮಿಂಚಿದ್ದರು. ಆ ಬಳಿಕ ಮಾತನಾಡಿದ ಗೇಲ್ ನಾನು ಟಿ20 ಕ್ರಿಕೆಟ್‍ನಲ್ಲಿ ಯಾವತ್ತು ಬಾಸ್ ಆಗಿರಲು ಇಷ್ಟಪಡುತ್ತೇನೆ ಎಂದಿದ್ದಾರೆ. ತಮ್ಮ ಬ್ಯಾಟ್ ಮೇಲೆ ಇದ್ದ ಯೂನಿವರ್ಸಲ್ ಬಾಸ್ ಎಂಬ ಬರಹವನ್ನು ತೆಗೆಯಬೇಕೆಂದು ಈ ಹಿಂದೆ ಐಸಿಸಿ ಗೇಲ್‍ಗೆ ಸೂಚಿಸಿತ್ತು. ಹಾಗಾಗಿ ಇದೀಗ ಗೇಲ್ ಯೂನಿವರ್ಸಲ್ ಬಾಸ್ ಬದಲಾಗಿ ತಮ್ಮ ಬ್ಯಾಟ್‍ನಲ್ಲಿ ‘ದಿ ಬಾಸ್’ ಎಂದು ಮಾತ್ರ ಬರೆದುಕೊಂಡಿದ್ದಾರೆ.

    ತಮ್ಮ ಬ್ಯಾಟ್‍ನಲ್ಲಿ ‘ದಿ ಬಾಸ್’ ಎಂದು ಬರೆದುಕೊಂಡಿರುವ ಬಗ್ಗೆ ವಿವರಿಸಿದ ಗೇಲ್ ನನ್ನ ಬ್ಯಾಟ್‍ನಲ್ಲಿ ಯೂನಿವರ್ಸಲ್ ಬಾಸ್ ಎಂಬ ಬರಹದ ಬಗ್ಗೆ ಐಸಿಸಿ ಆಕ್ಷೇಪ ವ್ಯಕ್ತಪಡಿಸಿತ್ತು ಹಾಗಾಗಿ ನಾನು ‘ದಿ ಬಾಸ್’ ಎಂದು ಮರು ನಾಮಕರಣ ಮಾಡಿಕೊಂಡಿದ್ದೇನೆ. ಐಸಿಸಿ ನನ್ನನ್ನು ಯೂನಿವರ್ಸಲ್ ಬಾಸ್ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಆದರೆ ನಾನು ಮಾತ್ರ ಯಾವತ್ತು ‘ದಿ ಬಾಸ್’ ಅಗಿರಲು ಇಷ್ಟಪಡುತ್ತೇನೆ ಎನ್ನುವ ಮೂಲಕ ಕ್ರಿಕೆಟ್ ದೈತ್ಯ ಐಸಿಸಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಗೇಲ್ ವಿಶ್ವದಾಖಲೆ ಆಟ – ವಿಂಡೀಸಿಗೆ ಸರಣಿ

    ಗೇಲ್ ಒಟ್ಟು 431 ಟಿ20 ಪಂದ್ಯಗಳಿಂದ 1083 ಬೌಂಡರಿ, 1028 ಸಿಕ್ಸರ್ ಸಹಿತ 14,038 ರನ್ ಚಚ್ಚಿದ್ದಾರೆ. 37.63 ಸರಾಸರಿ, 146.18 ಸ್ಟ್ರೈಕ್ ರೇಟ್ ನೊಂದಿಗೆ 22 ಶತಕ, 87 ಅರ್ಧಶತಕ ಈಗಾಗಲೇ ಹೊಡೆದಿದ್ದಾರೆ. ಟಿ20 ಕ್ರಿಕೆಟ್‍ನಲ್ಲಿ ಹೊಡಿಬಡಿ ಆಟದ ಮೂಲಕ ಘಟಾಟುಘಟಿ ಬೌಲರ್‍ ಗಳ ಬೆವರಿಳಿಸುವ ಗೇಲ್‍ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ ಅವರೆಲ್ಲರೂ ಕೂಡ ಯೂನಿವರ್ಸಲ್ ಬಾಸ್ ಎಂದು ಗೇಲ್‍ರನ್ನು ಒಪ್ಪಿಕೊಂಡಿದ್ದರು. ಅವರೆಲ್ಲರಿಗೂ ಇನ್ನು ಮುಂದೆ ಯುನಿವರ್ಸಲ್ ಬಾಸ್ ಬದಲಾಗಿ ಗೇಲ್ ‘ದಿ ಬಾಸ್’ ಆಗಿ ಕಾಣಿಸಿಕೊಳ್ಳಲಿದ್ದಾರೆ.

  • ಟಿ20 ಕ್ರಿಕೆಟ್‍ನಲ್ಲಿ ಗೇಲ್ ವಿಶ್ವದಾಖಲೆ ಆಟ – ವಿಂಡೀಸಿಗೆ ಸರಣಿ

    ಟಿ20 ಕ್ರಿಕೆಟ್‍ನಲ್ಲಿ ಗೇಲ್ ವಿಶ್ವದಾಖಲೆ ಆಟ – ವಿಂಡೀಸಿಗೆ ಸರಣಿ

    ಸೈಂಟ್ ಲೂಸಿಯಾ: ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಟಿ20 ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟಿನಲ್ಲಿ 14 ಸಾವಿರ ರನ್‍ಗಳ ಗಡಿಯನ್ನು ದಾಟಿದ ವಿಶ್ವದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಗೇಲ್ ಪಾತ್ರವಾಗಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಜಂಪಾ ಎಸೆದ ಇನ್ನಿಂಗ್ಸ್ ನ  9ನೇ ಓವರ್ ನಲ್ಲಿ ಸಿಕ್ಸರ್ ಸಿಡಿಸಿ ಗೇಲ್ ಈ ದಾಖಲೆ ಬರೆದರು. ಮೂರನೇ ಟಿ20 ಪಂದ್ಯಕ್ಕೂ ಮೊದಲು ಗೇಲ್ 13,971 ರನ್ ಹೊಡೆದಿದ್ದರು.

    ಮೊದಲ ಎರಡು ಪಂದ್ಯದಲ್ಲಿ ಕ್ರಮವಾಗಿ 4, 13 ರನ್ ಹೊಡೆದಿದ್ದ ಗೇಲ್ ಮೂರನೇ ಪಂದ್ಯದಲ್ಲಿ 67 ರನ್(38 ಎಸೆತ, 4 ಬೌಂಡರಿ, 7 ಸಿಕ್ಸರ್) ಹೊಡೆದು ಔಟಾದರು.

    ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 141 ರನ್ ಹೊಡೆದರೆ ವಿಂಡೀಸ್ 14.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್‍ಗಳಿಸಿ ಜಯಗಳಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ದಾಖಲೆಯೊಂದಿಗೆ 67 ರನ್ ಸಿಡಿಸಿದ ಗೇಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದನ್ನೂ ಓದಿ : ಐಪಿಎಲ್‍ನಲ್ಲಿ ಸಿಕ್ಸರ್‌ಗಳ ದಾಖಲೆಯ ಒಡೆಯನಾದ ಕ್ರಿಸ್ ಗೇಲ್

    ಗೇಲ್ ನಂತರದ ಸ್ಥಾನವನ್ನು ವಿಂಡೀಸಿನ ಪೊಲಾರ್ಡ್(10,836 ರನ್), ಪಾಕಿಸ್ತಾನದ ಶೋಯೆಬ್ ಮಲ್ಲಿಕ್(10,074 ರನ್), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್(10,017 ರನ್), ವಿರಾಟ್ ಕೊಹ್ಲಿ(9,992 ರನ್) ಪಡೆದಿದ್ದಾರೆ.

    2013ರಲ್ಲಿ ನಡೆದ ಐಪಿಎಲ್‍ಲ್ಲಿ ಗೇಲ್ ಆರ್‌ಸಿಬಿ ಪರ ಆಡಿ ಪುಣೆ ವಾರಿಯರ್ಸ್ ವಿರುದ್ಧ ಔಟಾಗದೇ 175 ರನ್ ಹೊಡೆದಿದ್ದರು. ಇದು ಟಿ20ಯಲ್ಲಿ ಗೇಲ್ ಅವರ ಅತ್ಯಧಿಕ ಮೊತ್ತವಾಗಿದೆ.

    ಗೇಲ್ ಒಟ್ಟು 431 ಟಿ20 ಪಂದ್ಯಗಳಿಂದ 14,038 ರನ್ ಚಚ್ಚಿದ್ದಾರೆ. 37.63 ಸರಾಸರಿ, 146.18 ಸ್ಟ್ರೈಕ್ ರೇಟ್ ನೊಂದಿಗೆ 22 ಶತಕ, 87 ಅರ್ಧಶತಕ ಹೊಡೆದಿದ್ದಾರೆ. 1083 ಬೌಂಡರಿ, 1028 ಸಿಕ್ಸರ್ ಸಿಡಿಸಿದ್ದಾರೆ.

  • ಒಂದೇ ತಂಡದ ಪರ ಕ್ರಿಕೆಟ್ ಆಡಲಿದ್ದಾರೆ ಯುವರಾಜ್, ಗೇಲ್, ಎಬಿಡಿ

    ಒಂದೇ ತಂಡದ ಪರ ಕ್ರಿಕೆಟ್ ಆಡಲಿದ್ದಾರೆ ಯುವರಾಜ್, ಗೇಲ್, ಎಬಿಡಿ

    ಸಿಡ್ನಿ: ಭಾರತದ ತಂಡದ ಮಾಜಿ ಅಟಗಾರ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಆಸ್ಟ್ರೇಲಿಯಾದ ಕ್ರಿಕೆಟ್ ಕ್ಲಬ್ ಪರ ಒಂದೇ ತಂಡದಲ್ಲಿ ಆಡುವ ಕುರಿತು ವರದಿಯಾಗಿದೆ.

    ಸ್ಟಾರ್ ಕ್ರಿಕೆಟರ್‍ ಗಳಾಗಿ ಮಿಂಚಿರುವ ಈ ಮೂರು ಆಟಗಾರರಲ್ಲಿ ಯುವರಾಜ್ ಸಿಂಗ್ ಮತ್ತು ಎಬಿಡಿ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ನೀಡಿದ್ದಾರೆ. ಗೇಲ್ ಮಾತ್ರ ಸದ್ಯ ವೆಸ್ಟ್ ಇಂಡೀಸ್ ತಂಡದ ಪರ ಆಡುತ್ತಿದ್ದಾರೆ. ಇದೀಗ ಈ ಮೂರು ಆಟಗಾರರು ಕೂಡ ಆಸ್ಟ್ರೇಲಿಯಾದ ಮೆಲ್ಬರ್ನ್‍ನ ಕ್ರಿಕೆಟ್ ಕ್ಲಬ್ ಪರ ಜೊತೆಯಾಗಿ ಆಡುವ ಸಾಧ್ಯತೆಗಳಿವೆ ಎಂದು ಮುಲ್ಗ್ರೇವ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಮಿಲನ್ ಪುಲ್ಲನಾಯೆಗಮ್ ಹೇಳಿಕೆ ನೀಡಿದ್ದಾರೆ. ದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    ಸನತ್ ಜಯಸೂರ್ಯ ಕ್ಲಬ್ ತಂಡದಲ್ಲಿ ಕಾರ್ಯನಿರ್ವಹಿಸುವುದು ಈಗಾಗಲೇ ಖಚಿತವಾಗಿದ್ದು, ಶ್ರೀಲಂಕಾದ ತಿಲಕರತ್ನೆ ದಿಲ್ಶನ್, ಉಪುಲ್ ತರಂಗಾ ಸೇರಿದಂತೆ ನಾವು ಇತರ ಕೆಲವು ಪ್ರಮುಖ ಆಟಗಾರರೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಕ್ಲಬ್ ಪರ ಆಡಲು ಕೆಲ ಆಟಗಾರರನ್ನು ಕರೆತರಲು ಹಲವು ಪ್ರಯತ್ನಗಳು ನಡೆಯುತ್ತಿವೆ ಎಂದು ಪುಲ್ಲೆನಾಯಗಮ್ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಐಪಿಎಲ್ ಬಳಿಕ ಯುಎಇನಲ್ಲಿ ಟಿ20 ವಿಶ್ವಕಪ್ ಫಿಕ್ಸ್?

    ಮುಲ್ಗ್ರೇವ್ ಕ್ರಿಕೆಟ್ ಕ್ಲಬ್ ಈಗಾಗಲೇ ಶ್ರೀಲಂಕಾದ ದಿಲ್ಶನ್ ಮತ್ತು ತರಂಗಾ ಅವರನ್ನು ಕ್ಲಬ್ ಪರ ಆಡಲು ಸಂಪರ್ಕಿಸಿದೆ. ಮುಂದಿನ ಬೇಸಿಗೆಯಲ್ಲಿ ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಕ್ಲಬ್ ತಂಡ ರೂಪುಗೊಳ್ಳಲಿದೆ. ಜಯಸೂರ್ಯ ಈ ಕ್ಲಬ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇವರೊಂದಿಗೆ ಬ್ರಿಯಾನ್ ಲಾರಾ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲು ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮವೊಂದು ಸುದ್ದಿ ಬಿತ್ತರಿಸಿದೆ.

  • ಕ್ರಿಸ್ ಗೇಲ್ ಮುಂದೆ ಮೋಡಿ ಮಾಡದ ಚಹಲ್ ಬಾಡಿ

    ಕ್ರಿಸ್ ಗೇಲ್ ಮುಂದೆ ಮೋಡಿ ಮಾಡದ ಚಹಲ್ ಬಾಡಿ

    ಅಹಮದಾಬಾದ್: 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಆಟಗಾರರು ಆನ್ ಫೀಲ್ಡ್ ನಲ್ಲಿ ಎಷ್ಟು ಮನರಂಜನೆ ನೀಡುತ್ತಾರೋ ಅಷ್ಟೇ ಆಫ್ ಫೀಲ್ಡ್ ನಲ್ಲೂ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಇದೀಗ ಕ್ರಿಸ್ ಗೇಲ್ ಮತ್ತು ಯಜುವೇಂದ್ರ ಚಹಲ್ ಮೈದಾನದಲ್ಲಿ ಕ್ರಿಕೆಟ್ ಬಿಟ್ಟು ದೇಹದಾರ್ಢ್ಯ ಸ್ಪರ್ಧೆಗಿಳಿದಿದ್ದಾರೆ.

    ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಕ್ರಿಸ್ ಗೇಲ್ ಸದಾ ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆರ್​ಸಿಬಿ ತಂಡದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಜೊತೆ ಮೈದಾನದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಗಿಳಿಯುವ ಮೂಲಕ ಸುದ್ದಿಯಾಗಿದ್ದಾರೆ.

    ಗೇಲ್ ಮತ್ತು ಚಹಾಲ್ ಹಲವು ವರ್ಷಗಳ ಕಾಲ ಜೊತೆಯಾಗಿ ಆರ್​ಸಿಬಿ ತಂಡದ ಪರ ಆಡುತ್ತಿದ್ದರು. ಈ ವೇಳೆ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿರು. ಆದರೆ ಇದೀಗ ಗೇಲ್ ಆರ್‍ಸಿಬಿ ತಂಡವನ್ನು ಬಿಟ್ಟು ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದರೂ ಕೂಡ ಆರ್​ಸಿಬಿ ಆಟಗಾರ ಚಹಾಲ್ ಜೊತೆ ಆ ಸ್ನೇಹವನ್ನು ಹಾಗೆ ಉಳಿಸಿಕೊಂಡಿದ್ದಾರೆ. ಹಾಗಾಗಿ ತಮಾಷೆಗಾಗಿ ಆರ್​ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದ ಬಳಿಕ ಬಾಡಿ ಬಿಲ್ಡಿಂಗ್ ಮಾಡಿದ್ದಾರೆ. ಇದರಲ್ಲೂ ಕೂಡ ಗೇಲ್ ಅವರ ದೈತ್ಯ ದೇಹದ ಮುಂದೆ ಚಹಲ್ ಮೋಡಿ ಮಾಡಲಾಗದೇ ಸೋತಿದ್ದಾರೆ.

     

    View this post on Instagram

     

    A post shared by Punjab Kings (@punjabkingsipl)

    ಈ ಮೊದಲು ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಪಂದ್ಯದಲ್ಲಿ ಚಹಲ್ ಅವರ ಓವರ್‍ ನಲ್ಲಿ ಗೇಲ್ ಎರಡು ಭರ್ಜರಿ ಸಿಕ್ಸರ್ ಹೊಡೆದು ಮೈದಾನದಲ್ಲೇ ಚಹಾಲ್‍ಗೆ ಚಮಕ್ ಕೊಟ್ಟಿದ್ದರು. ಪಂದ್ಯ ಮುಗಿದ ಬಳಿಕ ಚಹಾಲ್ ಗೇಲ್‍ಗೆ ಬಾಡಿ ಬಿಡ್ಡಿಂಗ್‍ನಲ್ಲಿ ಚಮಕ್ ನೀಡಲು ಹೋದಂತೆ ಪೋಸ್ ನೀಡಿದ್ದಾರೆ.

    ಗೇಲ್ ತನ್ನ 41ನೇ ವಯಸ್ಸಿನಲ್ಲೂ ಕೂಡ ದೇಹವನ್ನು ದಷ್ಟಪುಷ್ಟವಾಗಿ ಬೆಳೆಸಿಕೊಂಡು ಫಿಟ್ ಆಗಿ ಕಾಣುತ್ತಿದ್ದರೆ. ಚಹಲ್ ಸಣ್ಣಗಿನ ಮೈಕಟ್ಟನ್ನು ಹೊಂದಿ ಸ್ಪಿನ್ ಜಾದೂ ಮಾಡುತ್ತಿದ್ದಾರೆ.

  • ಐಪಿಎಲ್‍ನಲ್ಲಿ ಸಿಕ್ಸರ್‍ ಗಳ ದಾಖಲೆಯ ಒಡೆಯನಾದ ಕ್ರಿಸ್ ಗೇಲ್

    ಐಪಿಎಲ್‍ನಲ್ಲಿ ಸಿಕ್ಸರ್‍ ಗಳ ದಾಖಲೆಯ ಒಡೆಯನಾದ ಕ್ರಿಸ್ ಗೇಲ್

    ಮುಂಬೈ: ಪಂಜಾಬ್ ಕಿಂಗ್ಸ್ ಪರ ಬ್ಯಾಟ್ ಬೀಸುವ ಯುನಿವರ್ಸಲ್ ಬಾಸ್ ಖ್ಯಾತಿಯ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಕ್ರಿಸ್ ಗೇಲ್ ಐಪಿಎಲ್‍ನಲ್ಲಿ 350 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

    ಮುಂಬೈನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ತಂಡದ ಬೌಲರ್ ಬೇನ್ ಸ್ಟೋಕ್ಸ್ ಎಸೆದ 7ನೇ ಓವರ್‍ನ 3 ನೇ ಬಾಲ್‍ನ್ನು ಮಿಡ್‍ವಿಕೆಟ್ ನತ್ತ ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್‍ನಲ್ಲಿ 350 ನೇ ಸಿಕ್ಸರ್ ಸಿಡಿಸಿದ ಅಪರೂಪದ ದಾಖಲೆ ಬರೆದರು.

    2008ನೇ ಆವೃತ್ತಿ ಐಪಿಎಲ್‍ನಿಂದ ಇದುವರೆಗೆ ಒಟ್ಟು 133 ಪಂದ್ಯಗಳಿಂದ 388 ಬೌಂಡರಿ ಮತ್ತು 351 ಸಿಕ್ಸ್ ಸಿಡಿಸಿದ್ದಾರೆ. ಗೇಲ್ ನಂತರದ ಸ್ಥಾನದಲ್ಲಿ ಆರ್‌ಸಿಬಿ ತಂಡದ ಎಬಿಡಿ ವಿಲಿಯರ್ಸ್ ಇದ್ದಾರೆ. ಎಬಿಡಿ 170 ಪಂದ್ಯಗಳಿಂದ 237 ಸಿಕ್ಸ್ ಬಾರಿಸಿದ್ದಾರೆ.

    205 ಪಂದ್ಯಗಳಿಂದ 216 ಸಿಕ್ಸರ್ ಸಿಡಿಸಿರುವ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನ 214 ಸಿಕ್ಸರ್‍ ಗಳೊಂದಿಗೆ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಪಾಲಾದರೆ, 201 ಸಿಕ್ಸರ್‍ನೊಂದಿಗೆ ಐದನೇ ಸ್ಥಾನದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ.

    ಕ್ರಿಸ್ ಗೇಲ್ 14ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ತಮ್ಮ ಬ್ಯಾಟ್ ಬೀಸಲು ಪ್ರಾರಂಭಿಸಿದ್ದು, ಮುಂದಿನ ಪಂದ್ಯಗಳಲ್ಲಿ ಗೇಲ್ ಸ್ಪೋಟಗೊಂಡರೆ ಎದುರಾಳಿ ತಂಡಗಳಿಗೆ ನಡುಕ ಹುಟ್ಟುವುದಂತು ಗ್ಯಾರಂಟಿ.

  • ಮೈಕಲ್ ಜಾಕ್ಸನ್ ಮೂನ್‍ವಾಕ್ ಸ್ಟೆಪ್ ಹಾಕಿ ರಂಜಿಸಿದ ಕ್ರಿಸ್ ಗೇಲ್

    ಮೈಕಲ್ ಜಾಕ್ಸನ್ ಮೂನ್‍ವಾಕ್ ಸ್ಟೆಪ್ ಹಾಕಿ ರಂಜಿಸಿದ ಕ್ರಿಸ್ ಗೇಲ್

    ಚೆನ್ನೈ: ಕ್ರಿಕೆಟ್ ಪ್ರಿಯರು ಎದುರುನೋಡುತ್ತಿರುವ ಬಹು ನಿರೀಕ್ಷಿತ ಐಪಿಎಲ್ 14ನೇ ಆವೃತ್ತಿಗೆ ಇನ್ನು ಕೇವಲ 2 ದಿನ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಎಲ್ಲಾ 8 ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಹಾಗೆ ತಂಡಕ್ಕಾಗಿ ಆಡಲು ಬಂದಿರುವ ವಿದೇಶಿ ಆಟಗಾರರು ಕ್ವಾರಂಟೈನ್ ಮುಗಿಸಿ ಮೈದಾನಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಈ ನಡುವೆ ಪಂಜಾಬ್ ತಂಡದ ದೈತ್ಯ ಬ್ಯಾಟ್ಸ್ ಮ್ಯಾನ್ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ತಮ್ಮ ಕ್ವಾರಂಟೈನ್ ಅವಧಿ ಮುಗಿದ ಸಂಭ್ರಮಕ್ಕೆ ಮೈಕಲ್ ಜಾಕ್ಸನ್ ಅವರಂತೆ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ.

    ಪಂಜಾಬ್ ತಂಡದೊಂದಿಗೆ ಸೇರಿಕೊಂಡು ಕ್ವಾರಂಟೈನ್ ಅವಧಿಯನ್ನು ಮುಗಿಸಿರುವ ಗೇಲ್ ತಮ್ಮದೇ ಸ್ಟೈಲ್‍ನಲ್ಲಿ ಈ ಸಂಭ್ರವನ್ನು ಅಚರಿಸಿದ್ದಾರೆ ಎಂದು ಪಂಜಾಬ್ ಫ್ರಾಂಚೈಸ್ ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದೆ.

    ಕ್ವಾರಂಟೈನ್ ಅವಧಿ ಮುಗಿದಿದೆ. ಇದೀಗ ಹೊರಬರುತ್ತಿದ್ದಾರೆ ನಿಮ್ಮೆಲ್ಲರ ಅಚ್ಚುಮೆಚ್ಚಿನ ಕ್ರಿಸ್ ಗೇಲ್ ಎಂದು ಡ್ಯಾನ್ಸ್ ಮಾಡುತ್ತಿರುವ ಗೇಲ್ ಅವರ ವೀಡಿಯೋ ಒಂದನ್ನು ಫ್ರಾಂಚೈಸ್ ಟ್ವೀಟ್ ಮಾಡಿದೆ ಈ ವೀಡಿಯೋದಲ್ಲಿ ಗೇಲ್ ಡ್ಯಾನ್ಸ್ ಮಾಸ್ಟರ್ ಮೈಕಲ್ ಜಾಕ್ಸನ್ ಅವರಂತೆ ಮೂನ್‍ವಾಕ್ ಮಾಡುತ್ತಿದ್ದು ಇದನ್ನು ಗಮನಿಸಿರುವ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

    ದೇಶದಾದ್ಯಂತ ಹಲವು ಅಭಿಮಾನಿಗಳನ್ನು ಹೊಂದಿರುವ ಗೇಲ್ ತಮ್ಮ ಸ್ಪೋಟಕ ಆಟದ ಮೂಲಕ ಬಿಗ್ ಸಿಕ್ಸರ್ ಹೊಡೆಯುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಕಳೆದ ಬಾರಿಯ ಐಪಿಎಲ್‍ನಲ್ಲಿ ಪಂಜಾಬ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯದೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.

    14 ಆವೃತ್ತಿಗಳಲ್ಲಿ ಒಮ್ಮೆಯೂ ಪ್ರಶಸ್ತಿಯನ್ನು ಎತ್ತಿಹಿಡಿಯದ ಪಂಜಾಬ್ ತಂಡ ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದು, ಇದರಲ್ಲಿ ಗೇಲ್ ಅವರ ಆಟ ಕೂಡ ಪ್ರಮುಖವಾಗಿದೆ ಈ ಬಾರಿ ಆಸ್ಟ್ರೇಲಿಯಾದ ಬೌಲರ್ ರಿಲೆ ಮೆರೆಡಿತ್, ರಿಚಡ್ರ್ಸಸನ್ ಮತ್ತು ಟಿ20 ಕ್ರಿಕೆಟ್‍ನ ನಂಬರ್ 1 ಬ್ಯಾಟ್ಸ್ ಮ್ಯಾನ್ ಡೇವಿಡ್ ಮಲಾನ್ ಕೂಡ ತಂಡದಲ್ಲಿದ್ದಾರೆ. ಹಾಗಾಗಿ ಈ ಬಾರಿ ಪಂಜಾಬ್ ತಂಡ ಬಲಿಷ್ಠವಾಗಿದೆ.

    ಪಂಜಾಬ್ ತಂಡ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 12 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧವಾಗಿ ಆಡಲಿದೆ. ಈ ಬಾರಿ ಪಂಜಾಬ್ ತಂಡದ ಯಾವ ರೀತಿ ಉಳಿದ ತಂಡಗಳಿಗೆ ಟಕ್ಕರು ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

  • ಜಮೈಕಾಗೆ ಕೋವಿಡ್ ಲಸಿಕೆ ನೀಡಿದ ಮೋದಿಗೆ ಧನ್ಯವಾದ ಅರ್ಪಿಸಿದ ಕ್ರಿಸ್ ಗೇಲ್

    ಜಮೈಕಾಗೆ ಕೋವಿಡ್ ಲಸಿಕೆ ನೀಡಿದ ಮೋದಿಗೆ ಧನ್ಯವಾದ ಅರ್ಪಿಸಿದ ಕ್ರಿಸ್ ಗೇಲ್

    ಜಮೈಕಾ: ಕೊರೊನಾದಿಂದಾಗಿ ಸಾಕಷ್ಟು ತೊಂದರೆಗೊಳಗಾಗಿದ್ದ ಜಮೈಕಾಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಸಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರಾದ ಕ್ರಿಸ್ ಗೇಲ್ ಮತ್ತು ಆ್ಯಂಡ್ರೆ ರಸೆಲ್ ಅವರು ಮೋದಿಗೆ ವೀಡಿಯೋ ಮೂಲಕ ಧನ್ಯವಾದ ಸಮರ್ಪಿಸಿದ್ದಾರೆ.

    ಜಮೈಕಾಗೆ ಭಾರತ ಸರ್ಕಾರ 50,000 ಡೋಸ್ ಕೋವಿಡ್ ಲಸಿಕೆಯನ್ನು ನೀಡಿತ್ತು. ಇದನ್ನು ಕಂಡು ಸಂತೋಷಗೊಂಡಿರುವ ವೆಸ್ಟ್ ಇಂಡೀಸ್‍ನ ಇಬ್ಬರು ಸ್ಫೋಟಕ ಆಟಗಾರರಾದ ಗೇಲ್ ಮತ್ತು ರಸೆಲ್ ವೀಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ.

    ಪ್ರಧಾನಿ ಮೋದಿ, ಭಾರತ ಸರ್ಕಾರ ಮತ್ತು ಭಾರತೀಯರಿಗೆ, ಜಮೈಕಾಗೆ ಕೋವಿಡ್ ಲಸಿಕೆ ನೀಡಿರುವುದಕ್ಕೆ ನಾನು ಧನ್ಯವಾದ ಸಮರ್ಪಿಸಲು ಇಚ್ಛಿಸುತ್ತೇನೆ. ಎಂದು ಹೇಳಿಕೊಂಡಿರುವ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.

    ಈ ಮೊದಲು ವೆಸ್ಟ್ ಇಂಡೀಸ್ ಕ್ರಿಕೆಟ್‍ನ ಇನ್ನೋರ್ವ ಸ್ಟಾರ್ ಆಟಗಾರ ಆ್ಯಂಡ್ರೆ ರಸೆಲ್ ಟ್ವಿಟ್ಟರ್ ನಲ್ಲಿ ವೀಡಿಯೋ ಹಾಕಿಕೊಂಡು ಧನ್ಯವಾದ ತಿಳಿಸಿದ್ದರು. ನಾನು ಪ್ರಧಾನಿ ಮೋದಿ ಮತ್ತು ಭಾರತದ ಹೈ ಕಮಿಷನ್‍ಗೆ ಧನ್ಯವಾದ ಸಲ್ಲಿಸುತ್ತಿದ್ದು, ನೀವು ಕಲುಹಿಸಿದ ವ್ಯಾಕ್ಸಿನ್ ನಮಗೆ ತಲುಪಿದೆ. ಇದರಿಂದ ನಾನು ಉತ್ಸಹ ಭರಿತನಾಗಿದ್ದು ವಿಶ್ವ ಮೊದಲಿನಂತೆ ಕೊರೊನಾ ಮುಕ್ತವಾಗುದನ್ನು ನೋಡಲು ಬಯಸುತ್ತೇನೆ. ಜಮೈಕಾದ ಜನರು ಕೂಡ ವ್ಯಾಕಿನ್‍ನ್ನು ಸ್ವಾಗತಿಸಿದ್ದು, ಈ ಮೂಲಕ ಭಾರತ ಜಮೈಕಾಗೆ ಇನ್ನು ಹತ್ತಿರವಾಗಿದೆ. ಭಾರತ ಹಾಗೂ ಜಮೈಕಾ ಸಹೋದರ ಸಂಬಂಧವನ್ನು ಬೆಳೆಸಿದಂತಾಗಿದೆ ಎಂದಿದ್ದರು.