Tag: Chris Gayle

  • World Cup 2023: ಸಿಕ್ಸರ್‌ನಿಂದಲೇ ಮತ್ತೊಂದು ದಾಖಲೆ ಬರೆದ ಸಿಕ್ಸರ್ ಶರ್ಮಾ

    World Cup 2023: ಸಿಕ್ಸರ್‌ನಿಂದಲೇ ಮತ್ತೊಂದು ದಾಖಲೆ ಬರೆದ ಸಿಕ್ಸರ್ ಶರ್ಮಾ

    ಧರ್ಮಶಾಲಾ: ಟೀಂ ಇಂಡಿಯಾ (Team India) ಬ್ಯಾಟರ್‌ಗಳ ಅಬ್ಬರಕ್ಕೆ ವಿಶ್ವದಾಖಲೆಗಳು ನುಚ್ಚುನೂರಾಗುತ್ತಿವೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ (ODI) ಭಾರತದ ಪರ 300ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದ ರೋಹಿತ್ ಶರ್ಮಾ (Rohit Sharma) ಇದೀಗ ಸಿಕ್ಸರ್ ನಿಂದಲೇ ಮತ್ತೊಂದು ದಾಖಲೆ ಸಿಡಿಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಭಾನುವಾರ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 40 ಎಸೆತಗಳಲ್ಲಿ 46 ರನ್ ಬಾರಿಸಿದ ರೋಹಿತ್ ಶರ್ಮಾ 4 ಬೌಂಡರಿ, 4 ಸಿಕ್ಸರ್‌ಗಳನ್ನೂ ಸಿಡಿಸಿದರು. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಭಾರತದ ನಂ.1 ಬ್ಯಾಟರ್ ಹಾಗೂ ವಿಶ್ವದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿ, ಶಮಿ ಮಿಂಚು; 20 ವರ್ಷಗಳ ನಂತರ ಕಿವೀಸ್‌ ಮಣಿಸಿದ ಭಾರತ

    2015ರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿಡಿ ವಿಲಿಯರ್ಸ್ (AB de Villiers) 58 ಸಿಕ್ಸರ್‌ ಹಾಗೂ 2019ರ ವರ್ಷದಲ್ಲಿ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಕ್ರಿಸ್‌ ಗೇಲ್ 56 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ 2023ರಲ್ಲಿ ರೋಹಿತ್ ಶರ್ಮಾ 53 ಸಿಕ್ಸರ್ ಸಿಡಿಸಿ ವಿಶೇಷ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಶಮಿ ಹೊಸ ದಾಖಲೆ – ODI ವಿಶ್ವಕಪ್‌ ಇತಿಹಾಸದಲ್ಲೇ 2 ಬಾರಿ ಐದು ವಿಕೆಟ್‌ ಕಬಳಿಸಿದ ಮೊದಲ ಭಾರತೀಯ

    ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 273 ರನ್‌ಗಳಿಗೆ ಸರ್ವಪತನ ಕಂಡಿತ್ತು. ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 48 ಓವರ್‌ಗಳಲ್ಲೇ 6 ವಿಕೆಟ್ ನಷ್ಟಕ್ಕೆ 274 ರನ್ ಸಿಡಿಸಿ ದಾಖಲೆ ಬರೆಯಿತು. ಇದನ್ನೂ ಓದಿ: ರೋಹಿತ್‌ ಶರ್ಮಾ ಸ್ಫೋಟಕ ಶತಕ – 8 ವಿಕೆಟ್‌ಗಳ ಜಯದೊಂದಿಗೆ ಪಾಕ್‌ ಹಿಂದಿಕ್ಕಿದ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿವೃತ್ತಿ ಘೋಷಣೆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ಕೊಟ್ಟ ಗೇಲ್

    ನಿವೃತ್ತಿ ಘೋಷಣೆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ಕೊಟ್ಟ ಗೇಲ್

    ಬೆಂಗಳೂರು: ಐಪಿಎಲ್ (IPL) ನಿವೃತ್ತಿ ಘೋಷಿಸಿದ್ದ ಕ್ರಿಸ್ ಗೇಲ್ (Chris Gayle) ಮತ್ತೆ ಐಪಿಎಲ್‍ಗೆ ಮರಳುವ ಮಾತಾಡಿದ್ದಾರೆ. ಹೌದು, ವಿರಾಟ್ ಕೊಹ್ಲಿಯ (Virat Kohli) ದಾಖಲೆಯಿಂದ ನಿದ್ರೆ ಕಳೆದುಕೊಂಡಿರುವ ಗೇಲ್ ಮುಂಬರುವ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ನೀಡಿದ್ದಾರೆ.

    16ನೇ ಆವೃತ್ತಿಯ ಐಪಿಎಲ್‍ನಲ್ಲಿ ಎರಡನೇ ಶತಕ ಸಿಡಿಸಿದ ಕೊಹ್ಲಿ ದಾಖಲೆ ಬರೆದಿದ್ದಾರೆ. ಈ ಮೂಲಕ ಕೊಹ್ಲಿ ಶತಕ 7ಕ್ಕೆ ಏರಿದೆ. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಶತಕಗಳಿಸಿದ ಆಟಗಾರ ಎಂಬ ಪಟ್ಟವನ್ನು ವಿರಾಟ್ ಈಗ ಅಲಂಕರಿಸಿದ್ದಾರೆ. ಹೈದರಾಬಾದ್ ವಿರುದ್ಧ ಶತಕ ಬಾರಿಸಿ ಅತಿ ಹೆಚ್ಚು ಸೆಂಚುರಿ ಸಿಡಿಸಿದ್ದ ಕ್ರಿಸ್ ಗೇಲ್ ಜೊತೆ ಕೊಹ್ಲಿ ಜಂಟಿ ದಾಖಲೆ ಹೊಂದಿದ್ದರು. ಗೇಲ್ 6 ಶತಕ ಬಾರಿಸಿ ಐಪಿಎಲ್‍ನಲ್ಲಿ ದಾಖಲೆ ಮಾಡಿದ್ದರು. ಇದೀಗ ಕೊಹ್ಲಿ ಗೇಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದನ್ನೂ ಓದಿ: RCB ಔಟ್, ಮುಂಬೈಗೆ ಪ್ಲೇ ಆಫ್ ಗಿಫ್ಟ್ – ಪಂದ್ಯ ಸೋತಿದ್ದಕ್ಕೆ ಕಣ್ಣೀರಿಟ್ಟ ಕೊಹ್ಲಿ

    ಈ ಬಗ್ಗೆ ಕ್ರಿಸ್ ಗೇಲ್, ಕೊಹ್ಲಿ ಕಡೆಯಿಂದ ಅದ್ಭುತ ಆಟಗಾರಿಕೆ ಮೂಡಿಬಂದಿದೆ. ಅವರು ನನ್ನ ದಾಖಲೆಯನ್ನು ಹಿಂದಿಕ್ಕಿದ್ದಾರೆ. ನಿವೃತ್ತಿ ಹಿಂಪಡೆದು ಐಪಿಎಲ್‍ಗೆ ಮರಳುತ್ತೇನೆ. ಕೊಹ್ಲಿ ಅತ್ಯುತ್ತಮ ಆಟಗಾರ, ತಂಡವನ್ನು ಗೆಲ್ಲಿಸಲು ಸಾಕಷ್ಟು ಶ್ರಮವಹಿಸುತ್ತಾರೆ. ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಆಟ ಅದ್ಭುತವಾಗಿರುತ್ತದೆ ಎಂದಿದ್ದಾರೆ.

    ಆರ್‌ಸಿಬಿ (RCB) ಪರ ಐಪಿಎಲ್‍ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿಯ ಪಾಲಾಗಿದೆ. ಜೊತೆಗೆ ಟೀಮ್ ಇಂಡಿಯಾ ಪರ ಟಿ20 ಪಂದ್ಯದಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರರಾಗಿದ್ದಾರೆ. ಐಪಿಎಲ್ 2023 ರಲ್ಲಿ 14 ಪಂದ್ಯಗಳನ್ನು ಆಡಿದ ವಿರಾಟ್ ಕೊಹ್ಲಿ, 639 ರನ್ ಗಳಿಸಿದರು. 53.25 ಸರಾಸರಿ ಜೊತೆಗೆ 139.82 ಸ್ಟ್ರೈಕ್‍ರೇಟ್ ಕಾಪಾಡಿಕೊಂಡಿದ್ದಾರೆ. ಫಾಪ್, ಶುಭ್‍ಮನ್ ಗಿಲ್ ಬಳಿಕ ಈ ಬಾರಿಯ ಸೀಸನ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.

    ಕೊಹ್ಲಿಯ ದಾಖಲೆ ನಡುವೆಯು, ಐಪಿಎಲ್ 2023 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರ ನಡೆದಿದೆ. ಈ ಮೂಲಕ ಇಷ್ಟು ವರ್ಷಗಳಂತೆ ಈ ವರ್ಷವೂ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ. ಇದನ್ನೂ ಓದಿ: IPL 2023 Playoffs: ಮೇ 23ಕ್ಕೆ CSK vs GT ಹೈವೋಲ್ಟೇಜ್‌ ಕದನ – ಮಹಿ ಮೇಲೆ ಎಲ್ಲರ ಕಣ್ಣು

  • ʻಈ ಸಲ ಕಪ್‌ ನಮ್ದೆʼ – RCB ಅಭಿಮಾನಿಗಳನ್ನ ಹಾಡಿ ಹೊಗಳಿದ ಎಬಿಡಿ

    ʻಈ ಸಲ ಕಪ್‌ ನಮ್ದೆʼ – RCB ಅಭಿಮಾನಿಗಳನ್ನ ಹಾಡಿ ಹೊಗಳಿದ ಎಬಿಡಿ

    ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಅನ್‌ ಬಾಕ್ಸ್‌ ಕಾರ್ಯಕ್ರಮದಲ್ಲಿ ಬೆಂಗಳೂರು ಫ್ರಾಂಚೈಸಿಯು, ಎಬಿಡಿ ವಿಲಿಯರ್ಸ್ (AB de Villiers) ಹಾಗೂ ಕ್ರಿಸ್‌ ಗೇಲ್‌ (Chris Gayle) ಅವರಿಗೆ ಹಾಲ್‌ ಆಫ್‌ ಫೇಮ್‌ ನೀಡುವ ಮೂಲಕ ಭಾನುವಾರ ಗೌರವಿಸಿತು.

    ಈ ವೇಳೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಎಬಿಡಿ ವಿಲಿಯರ್ಸ್‌, ರಾಯಲ್‌ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಲು ನನಗೆ ಇನ್ನು ಮುಂದೆ ಅವಕಾಶವಿಲ್ಲ. ಆದ್ರೆ, ಒಬ್ಬ ಅಭಿಮಾನಿಯಾಗಿ ಆರ್‌ಸಿಬಿ ತಂಡವನ್ನ ಬೆಂಬಲಿಸುತ್ತೇನೆ. ʻಈ ಸಲ ಕಪ್ ನಮ್ದೆʼ ಎಂದು ಅಭಿಮಾನಿಗಳನ್ನ ಹುರಿದುಂಬಿಸಿದ್ದಾರೆ. ಇದನ್ನೂ ಓದಿ: ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿ ಔಟ್ – ಯಾರಿಗೆ ವರ್ಷಕ್ಕೆ ಎಷ್ಟು ಸಂಭಾವನೆ?

    ಈ ವೇಳೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಇಷ್ಟಪಡುತ್ತೀರಾ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ, ಎಬಿ ಡಿವಿಲಿಯರ್ಸ್‌, ಆರ್‌ಸಿಬಿ ಪ್ಲೇಯಿಂಗ್‌ ಇಲೆವೆನ್‌ಗೆ ಮರಳಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

    ಆರ್‌ಸಿಬಿ ಅಭಿಮಾನಿಗಳು ಇಡೀ ವಿಶ್ವದಲ್ಲಿಯೇ ಅತ್ಯುತ್ತಮ ಅಭಿಮಾನಿಗಳು. ಇಲ್ಲಿ ಪಂದ್ಯವನ್ನು ಗೆಲ್ಲುವುದು ಅದ್ಭುತವಾಗಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಆರ್‌ಸಿಬಿ ತಂಡ ಬಲಿಷ್ಠವಾಗಿದೆ. ಹಾಗಾಗಿ ನನಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡಲು ಅವಕಾಶ ಸಿಗುವುದಿಲ್ಲ. ಇದರ ಬದಲು ಅಭಿಮಾನಿಯಾಗಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ತಂಡವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

    ಆರ್‌ಸಿಬಿ ಪರ 156 ಪಂದ್ಯಗಳನ್ನಾಡಿರುವ ಎಬಿಡಿ 4,491 ರನ್‌ ರನ್‌ ಸಿಡಿಸಿದ್ದಾರೆ. ಈಗಾಗಲೇ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದೆ.

  • ವಿದೇಶದಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆ ನಟಿ ದೀಪಿಕಾ ದಾಸ್

    ವಿದೇಶದಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆ ನಟಿ ದೀಪಿಕಾ ದಾಸ್

    ಬಿಗ್ ಬಾಸ್ ಮನೆಯಲ್ಲಿ (Bigg Boss House) ತಮ್ಮದೇ ಶೈಲಿಯಲ್ಲಿ ದೀಪಿಕಾ ದಾಸ್ (Deepika Das) ಗುರುತಿಸಿಕೊಂಡವರು. ಇದೀಗ ವೆಕೇಷನ್ಸ್‌ಗಾಗಿ ನಟಿ ದುಬೈಗೆ ಹಾರಿದ್ದಾರೆ. ಈ ವೇಳೆ ವಿದೇಶದಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ (Chris Gayle) ಅವರನ್ನ ಮೀಟ್ ಮಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ನಾಗಿಣಿ, ಬಿಗ್ ಬಾಸ್ ಶೋ (Bigg Boss)  ಮೂಲಕ ಮೋಡಿ ಮಾಡಿರುವ ನಟಿ ದೀಪಿಕಾ ದಾಸ್ ಸದ್ಯ ದುಬೈನಲ್ಲಿದ್ದಾರೆ. ಫ್ರೆಂಡ್ಸ್ ಜೊತೆ ಮೋಜು- ಮಸ್ತಿ ಮಾಡ್ತಿದ್ದಾರೆ. ಶೂಟಿಂಗ್‌ಗೆ ಬ್ರೇಕ್ ಹಾಕಿ, ವಿದೇಶ ಪ್ರವಾಸದಲ್ಲಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ರಜನಿ ಜೊತೆ ಶಿವರಾಜ್ ಕುಮಾರ್: ಫೋಟೋ ಲೀಕ್

     

    View this post on Instagram

     

    A post shared by Deepika Das (@deepika__das)

    ವಿದೇಶದಲ್ಲಿ ಇದೀಗ ಕ್ರಿಕೆಟಿಗ ಕ್ರಿಸ್ ಗೇಲ್ ಅವರನ್ನು ದೀಪಿಕಾ ದಾಸ್ ಭೇಟಿಯಾಗಿದ್ದಾರೆ. ಇಬ್ಬರು ಜೊತೆಯಿರುವ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಕನ್ನಡಿಗರಿಗೆ ಕ್ರಿಸ್ ಗೇಲ್ ಎಂದರೆ ಇಷ್ಟ. ಆರ್‌ಸಿಬಿ ತಂಡದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ನಟಿ ದೀಪಿಕಾ ದಾಸ್ ಕೂಡ ಕ್ರಿಸ್ ಗೇಲ್ ಅವರಿಗೆ ದೊಡ್ಡ ಅಭಿಮಾನಿಯಾಗಿದ್ದು, ಈ ಕುರಿತು ಪೋಸ್ಟ್‌ನಲ್ಲಿ ಅವರೇ ಹೇಳಿಕೊಂಡಿದ್ದಾರೆ.

     

    View this post on Instagram

     

    A post shared by Deepika Das (@deepika__das)

    ಇದು ಅನಿರೀಕ್ಷಿತ ಭೇಟಿ ಎಂದು ಕ್ರಿಸ್ ಗೇಲ್ ಜೊತೆಗಿರುವ ಫೋಟೋವನ್ನ ದೀಪಿಕಾ ದಾಸ್ ಶೇರ್ ಮಾಡಿದ್ದು, ಈಗ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೂಪರ್ ಟೆನ್ ಲೀಗ್‍ನಲ್ಲಿ ಗೇಲ್ ಜೊತೆ ಬ್ಯಾಟ್‍ ಬೀಸಲಿದ್ದಾರೆ ಕಿಚ್ಚ ಸುದೀಪ್

    ಸೂಪರ್ ಟೆನ್ ಲೀಗ್‍ನಲ್ಲಿ ಗೇಲ್ ಜೊತೆ ಬ್ಯಾಟ್‍ ಬೀಸಲಿದ್ದಾರೆ ಕಿಚ್ಚ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ (Sandalwood) ಖ್ಯಾತ ನಟ ಕಿಚ್ಚ ಸುದೀಪ್ (Kichcha Sudeep) ಮತ್ತು ವೆಸ್ಟ್ ಇಂಡೀಸ್‍ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ (Chris Gayle) ಸೂಪರ್ ಟೆನ್ ಕ್ರಿಕೆಟ್ ಲೀಗ್‍ನಲ್ಲಿ (Super Ten League) ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

    ಸೂಪರ್ ಟೆನ್ ಕ್ರಿಕೆಟ್ ಲೀಗ್‍ನಲ್ಲಿ ಸೆಲೆಬ್ರಿಟಿಗಳು ಮತ್ತು ವಿಶ್ವದ ಮಾಜಿ ಕ್ರಿಕೆಟ್ ಆಟಗಾರರು ಜೊತೆ ಸೇರಿ ಆಡಲಿದ್ದಾರೆ. 10 ಓವರ್‌ಗಳ ಸ್ವರೂಪದ ಕ್ರಿಕೆಟ್ ಲೀಗ್ ಇದಾಗಿದ್ದು, 2 ದಿನ ಬೆಂಗಳೂರಿನಲ್ಲಿ ಸೂಪರ್ ಟೆನ್ ಲೀಗ್ ನಡೆಸಲು ಈಗಾಗಲೇ ಸಿದ್ಧತೆ ಆರಂಭವಾಗಿದೆ. ಕ್ರಿಕೆಟ್ ಲೀಗ್‍ನಲ್ಲಿ ಬಾಲಿವುಡ್ (Bollywood), ಕನ್ನಡ (Kannada), ತಮಿಳು (Tamil)  ಮತ್ತು ತೆಲುಗು (Telugu)  ಚಿತ್ರರಂಗದ ನಟರು ಮತ್ತು ವಿಶ್ವದ ಮಾಜಿ ಕ್ರಿಕೆಟಿಗರು ಒಟ್ಟಿಗೆ ಸೇರಿ ಕ್ರಿಕೆಟ್ ಟೂರ್ನಿ ಆಡಲಿದ್ದಾರೆ. ಇದನ್ನೂ ಓದಿ: ಶಿಫಾಲಿ, ದೀಪ್ತಿ ಆಟಕ್ಕೆ ಥಾಯ್ಲೆಂಡ್‌ ಥಂಡಾ – ಏಷ್ಯಾಕಪ್ ಫೈನಲ್‍ಗೆ ಭಾರತ

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಗೇಲ್, ಜಗತ್ತಿನಾದ್ಯಂತ ಇರುವ ನನ್ನ ಕ್ರಿಕೆಟ್ ಗೆಳೆಯರು ಮತ್ತು ಚಿತ್ರರಂಗದಲ್ಲಿರುವ ದಿಗ್ಗಜರೊಂದಿಗೆ ಕ್ರಿಕೆಟ್ ಆಡಲು ಉತ್ಸುಕನಾಗಿದ್ದೇನೆ. ಪಂದ್ಯಾವಳಿಯು ಸೂಪರ್ 10 ಮಾದರಿಯಲ್ಲಿ ಇರಲಿದ್ದು, ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್

    ನಮ್ಮ ದೇಶ ಕ್ರಿಕೆಟ್ ಆಟವನ್ನು ತುಂಬಾ ಪ್ರೀತಿಸುತ್ತದೆ. ಇದೀಗ ಮಾಜಿ ಕ್ರಿಕೆಟಿಗರು, ಚಿತ್ರರಂಗದ ಗೆಳೆಯರು ಮತ್ತು ಉದ್ಯಮಿಗಳೊಂದಿಗೆ ಕ್ರಿಕೆಟ್ ಟೂರ್ನಿ ನಡೆಸಲು ಮುಂದಾಗಿದ್ದೇವೆ. ಸ್ಪರ್ಧಾತ್ಮಕ ಕ್ರಿಕೆಟ್‌ ಟೂರ್ನಿಯ ಮೂಲಕ ಇನ್ನಷ್ಟು ಮನರಂಜನೆ ಸಿಗಲಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರ್‌ಸಿಬಿಗೆ ಸೇರಿಸಿಕೊಂಡಾಗಿನಿಂದ ಗೇಲ್ ನನ್ನ ಬೆಸ್ಟ್ ಫ್ರೆಂಡ್ ಎಂದು ಫೋಟೋ ಹಂಚಿಕೊಂಡ ವಿಜಯ್ ಮಲ್ಯ

    ಆರ್‌ಸಿಬಿಗೆ ಸೇರಿಸಿಕೊಂಡಾಗಿನಿಂದ ಗೇಲ್ ನನ್ನ ಬೆಸ್ಟ್ ಫ್ರೆಂಡ್ ಎಂದು ಫೋಟೋ ಹಂಚಿಕೊಂಡ ವಿಜಯ್ ಮಲ್ಯ

    ಲಂಡನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)  ತಂಡಕ್ಕೆ ಕ್ರಿಸ್ ಗೇಲ್‍ರನ್ನು ಸೇರಿಸಿಕೊಂಡಾಗಿನಿಂದ ನನಗೆ ಉತ್ತಮ ಸ್ನೇಹಿತ ಎಂದು ಬರೆದುಕೊಂಡು ಉದ್ಯಮಿ ವಿಜಯ್ ಮಲ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಗೇಲ್ ಕುರಿತಾಗಿ ಮೆಚ್ಚುಗೆಯ ನುಡಿಗಳನ್ನು ಬರೆದುಕೊಂಡಿರುವ ಮಲ್ಯ, ನನ್ನ ಉತ್ತಮ ಸ್ನೇಹಿತ ಕ್ರಿಸ್ಟೋಫರ್ ಹೆನ್ರಿ ಗೇಲ್, ಯೂನಿವರ್ಸ್ ಬಾಸ್ ಅವರನ್ನು ಭೇಟಿಯಾಗಲು ಸಂತೋಷವಾಗುತ್ತದೆ. ನಾನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಾಗಿನಿಂದ ಗೇಲ್ ಮತ್ತು ನನ್ನ ನಡುವೆ ಉತ್ತಮ ಒಡನಾಟವಿದ್ದು, ಆತ ನಾ ಕಂಡ ಅತ್ಯುತ್ತಮ ಆಟಗಾರ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ

    2011ರಲ್ಲಿ ಗೇಲ್‍ರನ್ನು ಆರ್‌ಸಿಬಿ ತಂಡ ಖರೀದಿಸಿತ್ತು. ಆ ಬಳಿಕ ಆರ್‌ಸಿಬಿ ತಂಡದಲ್ಲಿ ಮಿಂಚಿದ ಗೇಲ್‍ರನ್ನು 2018ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಖರೀದಿಸಿತು. 2022ರ ಐಪಿಎಲ್ ಮೆಗಾ ಹರಾಜಿನಿಂದ ಸ್ವತಃ ಗೇಲ್ ಹಿಂದೆ ಸರಿದು ಐಪಿಎಲ್‍ನಲ್ಲಿ ಆಡಿರಲಿಲ್ಲ. ಇದನ್ನೂ ಓದಿ: 2021-22ರ ಅವಧಿಯಲ್ಲಿ ಟೀಂ ಇಂಡಿಯಾಗೆ 6 ನಾಯಕರು

    ಗೇಲ್ ಐಪಿಎಲ್‍ನಲ್ಲಿ ಒಟ್ಟು 142 ಪಂದ್ಯಗಳಿಂದ 4,965 ರನ್ ಚಚ್ಚಿದ್ದು, ಒಟ್ಟು 3 ಫ್ರಾಂಚೈಸ್‍ಗಳ ಪರ ಆಡಿದ್ದಾರೆ. ಐಪಿಎಲ್‍ನಲ್ಲಿ ಗೇಲ್ ಸಿಡಿಸಿರುವ 175 ರನ್ ವೈಯಕ್ತಿಕ ಹೆಚ್ಚಿನ ಗಳಿಕೆ ಯಾಗಿದೆ.

    Live Tv

  • ಐಪಿಎಲ್‍ನ ಸಿಕ್ಸರ್ ಕಿಂಗ್ಸ್

    ಐಪಿಎಲ್‍ನ ಸಿಕ್ಸರ್ ಕಿಂಗ್ಸ್

    ಮುಂಬೈ: ಐಪಿಎಲ್ ಎಂದಕ್ಷಣ ನೆನಪಿಗೆ ಬರುವುದು ಬಿಗ್ ಸಿಕ್ಸರ್‌ಗಳು. ಬ್ಯಾಟ್ಸ್‌ಮ್ಯಾನ್‌ಗಳು ಸಿಡಿಸುವ ಆಕರ್ಷಕ ಸಿಕ್ಸರ್‌ಗಳು ಪ್ರೇಕ್ಷಕರನ್ನು ರಂಜಿಸುತ್ತದೆ. ಐಪಿಎಲ್ ಇತಿಹಾಸವನ್ನು ಗಮನಿಸಿದರೆ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಪಟ್ಟಿಯಲ್ಲಿ ಮೂವರು ಕಾಣಿಸಿಕೊಂಡಿದ್ದಾರೆ.

    ಹೌದು ಐಪಿಎಲ್ ಬ್ಯಾಟ್ಸ್‌ಮ್ಯಾನ್‌ಗಳ ಸ್ವರ್ಗ. ಬಿಗ್ ಹಿಟ್ಟರ್‌ಗಳು ಸಿಡಿಸುವ ಮನಮೋಹಕ ಸಿಕ್ಸರ್‌ಗಳು ಅಭಿಮಾನಿಗಳನ್ನು ಇನ್ನಷ್ಟು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಈವರೆಗೆ ಆಗಿರುವ 14 ಸೀಸನ್‍ಗಳನ್ನು ಗಮನಿಸಿದಾಗ 3 ಮಂದಿ ಆಟಗಾರರು ಟಾಪ್ 3 ಸ್ಥಾನ ಪಡೆದುಕೊಂಡಿದ್ದಾರೆ. ಪ್ರತಿ ಪಂದ್ಯದಲ್ಲೂ ಬಿಗ್ ಸಿಕ್ಸರ್ ಮೂಲಕ ಈ ಮೂವರು ಪ್ರೇಕ್ಷಕರ ಮನಗೆದ್ದಿದ್ದಾರೆ. ಇದನ್ನೂ ಓದಿ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ – ರವೀಂದ್ರ ಜಡೇಜಾ ವಿಶ್ವ ನಂಬರ್ 1 ಆಲ್‍ರೌಂಡರ್

    14ನೇ ಆವೃತ್ತಿ ಐಪಿಎಲ್‍ವರೆಗೆ ಗಮನಿಸಿದರೆ, ಐಪಿಎಲ್‍ನ ಸಿಕ್ಸರ್ ಕಿಂಗ್ ಆಗಿ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಕಾಣಿಸಿಕೊಂಡಿದ್ದಾರೆ. ಮೈದಾನದಲ್ಲಿ ಸಿಕ್ಸರ್‌ಗಳ ಮಳೆ ಸುರಿಸುವ ಗೇಲ್ ಐಪಿಎಲ್ ಇತಿಹಾಸದಲ್ಲಿ 357 ಸಿಕ್ಸ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ಬಳಿಕ 251 ಸಿಕ್ಸ್ ಸಿಡಿಸಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಇದ್ದು, ಈವರೆಗೆ ರೋಹಿತ್ 227 ಸಿಕ್ಸ್ ಸಿಡಿಸಿ ಹಿಟ್‍ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾವಲ್ಪಿಂಡಿ ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿದ ಡೇವಿಡ್ ವಾರ್ನರ್

    14 ಆವೃತ್ತಿಗಳ ಬಳಿಕ ಇದೀಗ 15ನೇ ಆವೃತ್ತಿ ಐಪಿಎಲ್‍ಗೆ ದಿನಗಣನೆ ಆರಂಭವಾಗಿದ್ದು, ಈ ಮೂವರು ಐಪಿಎಲ್ ಸಿಕ್ಸರ್ ಕಿಂಗ್ಸ್‌ಗಳಲ್ಲಿ ಗೇಲ್ ಮತ್ತು ವಿಲಿಯರ್ಸ್ ಈಗಾಗಲೇ ಐಪಿಎಲ್‍ನಿಂದ ದೂರ ಸರಿದಿದ್ದಾರೆ. ರೋಹಿತ್ ಶರ್ಮಾ ಮಾತ್ರ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಬಿಡಿಯ ಸಿಕ್ಸರ್‌ಗಳ ದಾಖಲೆಯನ್ನು ಅಳಿಸಿ ಹಾಕಲು ರೋಹಿತ್‍ಗೆ ಇನ್ನೂ 24 ಸಿಕ್ಸ್ ಅವಶ್ಯಕತೆ ಇದೆ.

  • ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್ ಬೈ ಹೇಳಲು ಮುಂದಾದ್ರಾ ಕ್ರಿಸ್ ಗೇಲ್?

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್ ಬೈ ಹೇಳಲು ಮುಂದಾದ್ರಾ ಕ್ರಿಸ್ ಗೇಲ್?

    ದುಬೈ: ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ್ಯ ಡೆಂಜರಸ್ ಬ್ಯಾಟ್ಸ್‌ಮ್ಯಾನ್‌, ಸಿಕ್ಸರ್‌ಗಳ ಕಿಂಗ್, ಮೈದಾನದಲ್ಲಿ ರಂಜಿಸುವ ಯುನಿವರ್ಸಲ್ ಬಾಸ್ ಖ್ಯಾತಿಯ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್‌ಮ್ಯಾನ್‌ ಕ್ರಿಸ್ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಲು ಮುಂದಾದ್ರಾ ಎಂಬ ಅನುಮಾನ ಮೂಡಿದೆ.

    ಟಿ20 ವಿಶ್ವಕಪ್‍ನಲ್ಲಿ ಸೆಮಿಫೈನಲ್‍ಗೇರಲು ವಿಫಲವಾದ ವೆಸ್ಟ್ ಇಂಡೀಸ್ ತಂಡ ಇಂದು ಸೂಪರ್-12 ಹಂತದ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿತು. ಈ ವೇಳೆ ವೆಸ್ಟ್ ಇಂಡೀಸ್ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಗೇಲ್ 15ರನ್ (9 ಎಸೆತ, 2 ಸಿಕ್ಸ್) ಸಿಡಿಸಿ ಔಟ್ ಆದರು ಬಳಿಕ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ ಗೇಲ್ ಅಭಿಮಾನಿಗಳತ್ತ ಕೈ ಬೀಸಿ, ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದರು. ಜೊತೆಗೆ ತಮ್ಮ ಗ್ಲೌಸ್‍ನ್ನು ಅಭಿಮಾನಿಗಳಿಗೆ ನೀಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ನೀಡುವ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿದ ಕನ್ನಡಿಗ ರಾಹುಲ್

    ಟಿ20 ಕ್ರಿಕೆಟ್‍ನಲ್ಲಿ 445 ಪಂದ್ಯಗಳಿಂದ 14,321 ರನ್ ಸಿಡಿಸಿದ್ದಾರೆ. ಇದರಲ್ಲಿ ದಾಖಲೆಯ 22 ಶತಕಗಳು ಮತ್ತು 1043 ಸಿಕ್ಸರ್‍ ಗಳು ಕೂಡಿದೆ. ಗೇಲ್ ಈವರೆಗೆ ಟಿ20 ಕ್ರಿಕೆಟ್‍ನಲ್ಲಿ ಸ್ಫೋಟಕ ಬ್ಯಾಟಿಂಗ್‍ನಿಂದ ದೈತ ಆಟಗಾರನಾಗಿ ಮಿಂಚಿದ್ದರು. ಗೇಲ್ ವೆಸ್ಟ್ ಇಂಡೀಸ್ ತಂಡದ ಪರ 2004 ಚಾಂಪಿಯನ್ಸ್ ಟ್ರೋಫಿ, 2012 ಮತ್ತು 2016ರ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು.

    ಗೇಲ್ 103 ಟೆಸ್ಟ್ ಪಂದ್ಯಗಳಿಂದ 7,212 ರನ್ ಮತ್ತು 73 ವಿಕೆಟ್ ಪಡೆದರೆ, 301 ಏಕದಿನ ಪಂದ್ಯಗಳಿಂದ 10,480 ರನ್ ಮತ್ತು 167 ವಿಕೆಟ್ ಬೇಟೆಯಾಡಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಗೇಲ್ ಉತ್ತಮ ಸ್ನೇಹ ಜೀವಿಯಾಗಿದ್ದು, ಕ್ರಿಕೆಟ್ ಕಂಡ ಒಬ್ಬ ಉತ್ತಮ ಆಟಗಾರ ಮತ್ತು ಅಭಿಮಾನಿಗಳನ್ನು ರಂಜಿಸುತ್ತಿದ್ದ ದೈತ ಆಟಗಾರ ಕ್ರಿಕೆಟ್ ಅಂಗಳದಿಂದ ದೂರ ಸರಿಯುವ ಮುನ್ಸೂಚನೆ ನೀಡಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ದನ್ನೂ ಓದಿ: ಟೀಂ ಇಂಡಿಯಾ ಸೆಮಿಫೈನಲ್ ಕನಸು ನನಸಾಗಲು ಇದೊಂದೇ ಮಾರ್ಗ

  • ಆತ್ಮೀಯ ಸ್ನೇಹಿತನ ವಿಶ್ವದಾಖಲೆ ಮುರಿದ ಕೊಹ್ಲಿ

    ಆತ್ಮೀಯ ಸ್ನೇಹಿತನ ವಿಶ್ವದಾಖಲೆ ಮುರಿದ ಕೊಹ್ಲಿ

    ದುಬೈ: ಭಾರತ ಕ್ರಿಕೆಟ್ ತಂಡದ ರನ್ ಮೆಷಿನ್ ಎಂದೇ ಖ್ಯಾತರಾಗಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‍ನಲ್ಲಿ ತನ್ನ ಆತ್ಮೀಯ ಸ್ನೇಹಿತ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅವರ ದಾಖಲೆಯೊಂದನ್ನು ಮುರಿದು ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಟಿ20 ಕ್ರಿಕೆಟ್‍ನಲ್ಲಿ ಹೊಡಿಬಡಿ ಆಟದ ಮೂಲಕ ವಿಶ್ವದಾದ್ಯಂತ ತನ್ನದೇ ಕ್ರಿಕೆಟ್ ಪ್ರೇಮಿಗಳನ್ನು ಹೊಂದಿರುವ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ ಟಿ20 ವಿಶ್ವಕಪ್ ಇತಿಹಾಸದಲ್ಲಿ 9 ಅರ್ಧಶತಕ ಸಿಡಿಸಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಆ ದಾಖಲೆಯನ್ನು ಮುರಿದು ಟಿ20 ವಿಶ್ವಕಪ್‍ನಲ್ಲಿ 10 ಅರ್ಧಶತಕ ಸಿಡಿಸಿ ನೂತನ ವಿಶ್ವ ದಾಖಲೆಯ ಒಡೆಯನಾಗಿದ್ದಾರೆ. ಇವರಿಬ್ಬರ ಬಳಿಕ ಶ್ರೀಲಂಕಾ ತಂಡದ ಮಾಜಿ ಆಟಗಾರ ಮಹೇಲಾ ಜಯವರ್ಧನೆ 7 ಅರ್ಧಶತಕ ಸಿಡಿಸಿದರೆ ಭಾರತದ ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 6 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತ ಬೆನ್ನಲ್ಲೇ ನೆಟ್ಟಿಗರ ಪಾಲಿಗೆ ವಿಲನ್ ಆದ ಶಮಿ

    ವಿರಾಟ್ ಕೊಹ್ಲಿ 2021ರ ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 57 ರನ್ (49 ಎಸೆತ, 5 ಬೌಂಡರಿ, 1 ಸಿಕ್ಸ್) ಬಾರಿಸಿ ಮಿಂಚಿದರು. ಇದಲ್ಲದೇ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಔಟ್ ಆದರು. ಈ ಮೊದಲು 2012, 2014 ಮತ್ತು 2016ರಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಪಾಕಿಸ್ತಾನ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಆದರೆ 2021ರ ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನ ತಂಡ ಕೊಹ್ಲಿ ವಿಕೆಟ್ ಪಡೆಯುವುದರಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತಿದ್ದಕ್ಕೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ! 

  • 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    ದುಬೈ: ವೆಸ್ಟ್ ಇಂಡೀಸ್ ಸ್ಟಾರ್ ಆಟಗಾರ, ಪಂಜಾಬ್ ಕಿಂಗ್ಸ್ ತಂಡದ ಕ್ರಿಸ್ ಗೇಲ್ ಬಯೋಬಬಲ್‍ಗೆ ಬೇಸತ್ತು 14ನೇ ಐಪಿಎಲ್‍ನಿಂದ ಹೊರ ನಡೆದಿದ್ದಾರೆ.

    ಕಳೆದ ಕೆಲ ತಿಂಗಳಿನಿಂದ ನಾನು ಸಿಡಬ್ಲ್ಯುಐ ಬಬಲ್, ಸಿಪಿಎಲ್ ಬಬಲ್ ನಂತರ ಐಪಿಎಲ್ ಬಬಲ್‍ನ ಭಾಗವಾಗಿದ್ದೇನೆ. ಈಗ ನಾನು ಮಾನಸಿಕವಾಗಿ ಸಿದ್ಧವಾಗಲು ಮತ್ತು ರಿಫ್ರೆಶ್ ಆಗಲು ಬಯಸುತ್ತೇನೆ ಎಂದು ಗೇಲ್ ಹೇಳಿದ್ದಾರೆ. ಇದನ್ನೂ ಓದಿ: ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

    ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ನೆರವಾಗಲು ದುಬೈನಲ್ಲಿ ವಿರಾಮ ಪಡೆಯುತ್ತಿದ್ದೇನೆ. ನನಗೆ ಅನುಮತಿ ನೀಡಿದ ಪಂಜಾಬ್ ತಂಡಕ್ಕೆ ಧನ್ಯವಾದಗಳು. ಮುಂಬರುವ ಪಂದ್ಯಗಳಿಗೆ ಶುಭ ಹಾರೈಕೆಗಳು ಎಂದು ಗೇಲ್ ಹೇಳಿದ್ದಾರೆ.

    ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಗೇಲ್ ಲಭ್ಯ ಇರುವುದಿಲ್ಲ ಎಂದು ಪಂಜಾಬ್ ತಂಡ ಟ್ವೀಟ್ ಮಾಡಿದೆ.

    42 ವರ್ಷದ ಗೇಲ್ ಈ ವರ್ಷ ವೆಸ್ಟ್ ಇಂಡೀಸ್, ಸೈಂಟ್ ಕೀಟ್ಸ್, ನೆವಿಸ್ ಪ್ಯಾಟ್ರಿಯಾಟ್ಸ್, ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲ ಟೂರ್ನಿಗಳು ಬಯೋಬಬಲ್ ಆಡಿಯಲ್ಲಿ ನಡೆದಿತ್ತು. ಹೀಗಾಗಿ ಆಟಗಾರರು ಕೋವಿಡ್ 19 ನಿಯಮವನ್ನು ಉಲ್ಲಂಘಿಸುವಂತಿಲ್ಲ.