Tag: Chris Gayle

  • ತಂಡದಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ, ಕುಂಬ್ಳೆ ಮುಂದೆ ಅತ್ತಿದ್ದೆ: ಕ್ರಿಸ್‌ ಗೇಲ್‌

    ತಂಡದಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ, ಕುಂಬ್ಳೆ ಮುಂದೆ ಅತ್ತಿದ್ದೆ: ಕ್ರಿಸ್‌ ಗೇಲ್‌

    ಮುಂಬೈ: ಪಂಜಾಬ್‌ ಕಿಂಗ್ಸ್‌ (Punjab Kings) ತಂಡದಲ್ಲಿ ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ. ನನ್ನನ್ನು ಸಣ್ಣ ಮಕ್ಕಳಂತೆ ನಡೆಸಿಕೊಂಡಿದ್ದರು ಎಂದು ಎಂದು ಮಾಜಿ ವಿಂಡೀಸ್‌ ಆಟಗಾರ ಕ್ರಿಸ್‌ ಗೇಲ್‌ (Chris Gayle) ಹೇಳಿದ್ದಾರೆ.

    ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಗೇಲ್‌, ಗೌರವದಿಂದ ನನ್ನನ್ನು ತಂಡ ನಡೆಸಿಕೊಂಡಿರಲಿಲ್ಲ. ಇದರಿಂದ ನಾನು ಖಿನ್ನತೆಗೆ ಒಳಗಾಗುವ ಸ್ಥಿತಿ ತಲುಪಿದ್ದೆ ಎಂದು ತಿಳಿಸಿದರು.

    ಪಂಜಾಬ್ ಕಿಂಗ್ಸ್ ತಂಡದಲ್ಲಿ ನನ್ನ ಐಪಿಎಲ್ ಜೀವನ ಬಹಳ ಬೇಗ ಕೊನೆಯಾಯಿತು. ನಾನು ತಂಡಕ್ಕೆ ಕೊಡುಗೆ ನೀಡಿದ್ದರೂ ಹಿರಿಯ ಆಟಗಾರನಾಗಿ ಕೊಡಬೇಕಾದ ಗೌರವ ಸಿಗಲಿಲ್ಲ. ಅನಿಲ್‌ ಕುಂಬ್ಳೆ (Anil Kumble) ಅವರ ಜೊತೆ ಮಾತನಾಡುವಾಗ ನಾನು ಅತ್ತಿದ್ದೆ. ತಂಡ ನನ್ನನ್ನು ನಡೆಸಿಕೊಂಡ ರೀತಿಯಿಂದ ನಿರಾಸೆಯಾಗಿತ್ತು ಎಂದು ದೂರಿದರು. ಇದನ್ನೂ ಓದಿ: BCCI ಬ್ಯಾಂಕ್ ಬ್ಯಾಲೆನ್ಸ್‌ 20 ಸಾವಿರ ಕೋಟಿಗೂ ಅಧಿಕ 5 ವರ್ಷದಲ್ಲಿ 14,627 ಕೋಟಿ ಆದಾಯ ಹೆಚ್ಚಳ

    ಕೆಎಲ್‌ ರಾಹುಲ್‌ ಅವರು ಕರೆ ಮಾಡಿ ಕ್ರಿಸ್‌ ಇರು ಮುಂದಿನ ಪಂದ್ಯದಲ್ಲಿ ಅವಕಾಶ ಸಿಗಲಿದೆ ಎಂದು ಹೇಳಿದರು. ಇದಕ್ಕೆ ನಾನು, ನಿಮಗೆ ಒಳ್ಳೆಯದಾಗಿ ಎಂದು ಹೇಳಿ ಬ್ಯಾಗ್‌ ಹಿಡಿದು ಹೊರಟೆ ಎಂದು ಹಳೆಯ ನೆನಪನ್ನು ಬಿಚ್ಚಿಟ್ಟರು.

    ಕ್ರಿಸ್ ಗೇಲ್ ಅವರು ಐಪಿಎಲ್‌ನಲ್ಲಿ 2018ರಿಂದ 2021ರವರೆಗೆ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಆಟಗಾರರಾಗಿ 41 ಪಂದ್ಯಗಳಲ್ಲಿ 40.75 ಸರಾಸರಿಯಲ್ಲಿ 1,304 ರನ್ ಹೊಡೆದಿದ್ದರು. ಇದರಲ್ಲಿ 1 ಶತಕ ಮತ್ತು ಹನ್ನೊಂದು ಅರ್ಧ ಶತಕಗಳಿದ್ದವು. ಅವರ ಸ್ಟ್ರೈಕ್ ರೇಟ್ 148.65 ಆಗಿದ್ದರೂ ತಂಡದ ಮ್ಯಾನೇಜ್ ಮೆಂಟ್ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದಿದ್ದಾರೆ.

    ಗೇಲ್‌ ಐಪಿಎಲ್‌ನಲ್ಲಿ ಮೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಆರಂಭದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌(2009-10), ನಂತರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (2011-2027), ಬಳಿಕ ಪಂಜಾಬ್‌ ಕಿಂಗ್ಸ್‌ (2018-2021) ತಂಡದ ಪರ ಆಡಿದ್ದರು.

  • ಆರ್‌ಸಿಬಿ ಜೆರ್ಸಿ, ಪಂಜಾಬ್‌ ಪೇಟಾ ಧರಿಸಿದ ಕ್ರಿಸ್‌ ಗೇಲ್‌ – ವೈರಲ್‌ ಆಯ್ತು ಸ್ಪೆಷಲ್‌ ಲುಕ್‌

    ಆರ್‌ಸಿಬಿ ಜೆರ್ಸಿ, ಪಂಜಾಬ್‌ ಪೇಟಾ ಧರಿಸಿದ ಕ್ರಿಸ್‌ ಗೇಲ್‌ – ವೈರಲ್‌ ಆಯ್ತು ಸ್ಪೆಷಲ್‌ ಲುಕ್‌

    ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವಿನ ಬಹು ನಿರೀಕ್ಷಿತ IPL 2025 ಫೈನಲ್ ಪಂದ್ಯಕ್ಕೆ ಉತ್ಸಾಹ ಹೆಚ್ಚಾಗಿದೆ. T20 ದಂತಕಥೆ ಕ್ರಿಸ್ ಗೇಲ್ (Chris Gayle) ಅವರ ವೈರಲ್ ಚಿತ್ರವು‌ ಶ್ರೀಮಂತ ಲೀಗ್‌ನ ಉನ್ಮಾದವನ್ನು ಮತ್ತಷ್ಟು ಹೆಚ್ಚಿಸಿದೆ.

    ಐಪಿಎಲ್ ವೃತ್ತಿಜೀವನದಲ್ಲಿ ಎರಡೂ ಫ್ರಾಂಚೈಸಿಗಳಿಗಾಗಿ ಆಡಿದ್ದ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ, ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮ್ಯಾಚ್‌ ವೇಳೆ ಆರ್‌ಸಿಬಿ ಜೆರ್ಸಿ ಹಾಗೂ ಸಾಂಪ್ರದಾಯಿಕ ಪಂಜಾಬಿ ಪೇಟ ಧರಿಸಿ ಕಾಣಿಸಿಕೊಂಡಿದ್ದಾರೆ. ಗೇಲ್‌ ಹೊಸ ಲುಕ್‌ ಸಖತ್‌ ವೈರಲ್‌ ಆಗಿದೆ. ಇದನ್ನೂ ಓದಿ: For The First Time ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ – ಇಂದಿನ ಲಕ್‌ ಹೇಗಿದೆ?

    ಗೇಲ್ ಅವರನ್ನು ಟಿ20 ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಅವರ ಐಪಿಎಲ್ ವೃತ್ತಿಜೀವನದಲ್ಲಿ 4,965 ರನ್‌ಗಳನ್ನು ಗಳಿಸಿದ್ದಾರೆ. ಐಪಿಎಲ್ 2011 (608 ರನ್‌ಗಳು) ಮತ್ತು ಐಪಿಎಲ್ 2012 (733 ರನ್‌ಗಳು) ನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದರು.

    ಐಪಿಎಲ್‌ 2025ರ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಆರ್‌ಸಿಬಿ ಸೆಣಸುತ್ತಿದೆ. ರಜತ್ ಪಾಟಿದಾರ್ ನೇತೃತ್ವದ ತಂಡವು ಮುಲ್ಲನ್‌ಪುರದಲ್ಲಿ ನಡೆದ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪ್ರಬಲ ಪ್ರದರ್ಶನ ನೀಡಿತ್ತು. ಜೋಶ್ ಹ್ಯಾಜಲ್‌ವುಡ್ ಮತ್ತು ಸುಯಾಶ್ ಶರ್ಮಾ ಅವರು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಪಂಜಾಬ್‌ ವಿರುದ್ಧ ಇನ್ನೂ 60 ಎಸೆತಗಳು ಬಾಕಿ ಇರುವಾಗ ಆರ್‌ಸಿಬಿ ಸಮಗ್ರ ಗೆಲುವು ಸಾಧಿಸಿತ್ತು. ಇದನ್ನೂ ಓದಿ: Photo Gallery | ಭಾರತೀಯ ಸೇನೆಗೆ ಫೈನಲ್‌‌ ಪಂದ್ಯ ಅರ್ಪಣೆ… ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಿ

    ಜೂನ್ 1 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡದ ವಿರುದ್ಧ ಕ್ವಾಲಿಫೈಯರ್ 2 ರಲ್ಲಿ ಗೆಲುವು ದಾಖಲಿಸಿ PBKS ಫಾರ್ಮ್‌ಗೆ ಬಂದಿತ್ತು. ಶ್ರೇಯಸ್ ಅಯ್ಯರ್ ಕೇವಲ 41 ಎಸೆತಗಳಲ್ಲಿ 87 ರನ್ ಗಳಿಸಿ ಪಂದ್ಯ ಗೆಲ್ಲುವ ಮೂಲಕ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದ್ದರು. 11 ವರ್ಷಗಳ ನಂತರ ಐಪಿಎಲ್ 2025 ರ ಫೈನಲ್‌ಗೆ ಪಂಜಾಬ್‌ ಲಗ್ಗೆ ಇಟ್ಟಿದೆ.

    18 ಋತುಗಳ ನಂತರ, ಈ ಎರಡೂ ಫ್ರಾಂಚೈಸಿಗಳು ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಸೆಣಸುತ್ತಿವೆ. ಇದು ಪಂದ್ಯಾವಳಿಯ ಪರಂಪರೆಯಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ಇದನ್ನೂ ಓದಿ: IPL Final | ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಪಂಜಾಬ್‌ ಕಿಂಗ್ಸ್‌

  • IPL 2025 | ಸಾರ್ವಕಾಲಿಕ ದಾಖಲೆ ಬರೆದವರು, ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡವರು…

    IPL 2025 | ಸಾರ್ವಕಾಲಿಕ ದಾಖಲೆ ಬರೆದವರು, ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡವರು…

    18ನೇ ಐಪಿಎಲ್‌ (IPL 2025) ಆವೃತ್ತಿಗೆ ಇನ್ನು 3 ದಿನಗಳಷ್ಟೇ ಬಾಕಿಯಿದ್ದು, ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ಈ ಟೂರ್ನಿಯಲ್ಲಿ ಮೊದಲಿನಿಂದಲೂ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಮತ್ತೊಂದೆಡೆ ಬೌಲರ ಕಮಾಲ್‌, ಕ್ಯಾಪ್ಟನ್‌ಗಳ ಚಮತ್ಕಾರ ಎಲ್ಲವೂ ಕಣ್ಣಿಗೆ ಹಬ್ಬ.

    ಟಿ20 ಫಾರ್ಮೆಟ್‌ಗೆ ಹೊಸ ಹೊಳಪು ನೀಡಿದ್ದು ಐಪಿಎಲ್. ಈ ಲೀಗ್ ಆರಂಭವಾದಾಗ ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ಯಾರೂ ಊಹಿಸಿರಲು ಸಾಧ್ಯವೇ ಇರಲಿಲ್ಲ. ಆದರೆ ಕಳೆದ 18 ವರ್ಷಗಳಲ್ಲಿ ಈ ಲೀಗ್ ಬೆಳೆದು ನಿಂತ ಪರಿ ಅಮೋಘ. ಈ ಲೀಗ್‌ನಲ್ಲಿ ಬ್ಯಾಟರ್‌ ಅಬ್ಬರ ಜೋರಾಗಿರುತ್ತದೆ. ಬೌಲರ್‌ಗಳ ರಣ ತಂತ್ರವನ್ನು ಬುಡಮೇಲು ಮಾಡಿ ರನ್‌ ವೇಗಕ್ಕೆ ಚುರುಕು ಮುಟ್ಟಿಸುವ ಬ್ಯಾಟರ್‌ಗಳು, ಕೆಲವೊಮ್ಮೆ ಪಂದ್ಯದ ದಿನಕ್ಕನೇ ಬದಲಿಸುವ ಬೌಲರ್‌ಗಳು, ಕೊನೆಯಲ್ಲಿ ರಣತಂತ್ರ ರೂಪಿಸಿ ಎದುರಾಳಿಗಳನ್ನು ಕಟ್ಟಿಹಾಕುವ ಕ್ಯಾಪ್ಟನ್‌ಗಳು ತಮ್ಮ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇಂತಹ ಅದ್ಭುತ ಕ್ಷಣಗಳಿಗೆ 18ನೇ ಆವೃತ್ತಿಯ ಐಪಿಎಲ್‌ ಕೂಡ ಸಾಕ್ಷಿಯಾಗಲಿದೆ.

    CHRIS GAYLE

    ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್, ಒಂದೇ ಋತುವಿನಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್, ನಾಯಕನಾಗಿ ಅತಿ ಹೆಚ್ಚು ಗೆಲುವು, ಹೆಚ್ಚು ವಿಕೆಟ್, ಕಡಿಮೆ ಸ್ಕೋರ್ ಗಳಿಸಿದ ತಂಡ ಸೇರಿದಂತೆ ಐಪಿಎಲ್‌ನಲ್ಲಿ ಮುರಿಯಲು ಕಷ್ಟಕರವಾದ ದಾಖಲೆಗಳ ಪಟ್ಟಿಇಂತಿದೆ. ಇದನ್ನೂ ಓದಿ: IPL 2025: ಆರೆಂಜ್‌, ಪರ್ಪಲ್‌ ಕ್ಯಾಪ್‌ ವಿನ್ನರ್ಸ್‌ ಇವರೇ.. – ಶಾನ್‌ ಮಾರ್ಷ್‌ನಿಂದ ಕಿಂಗ್‌ ಕೊಹ್ಲಿ ವರೆಗೆ

    ಕ್ರಿಸ್‌ಗೇಲ್‌ ತೂಫಾನ್‌ ಶತಕ
    ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್ ಅವರ ಈ ದಾಖಲೆ ಮುರಿಯುವುದು ಇಂದಿಗೂ ಅಸಾಧ್ಯವಾಗಿಯೇ ಉಳಿದಿದೆ. ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್ ದಿಗ್ಗಜನ ಹೆಸರಿನಲ್ಲಿದೆ. 2013ರ ಏಪ್ರಿಲ್ 23ರಂದು ಟೂರ್ನಿಯ 31ನೇ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 66 ಎಸೆತಗಳಲ್ಲಿ ಅಜೇಯ 175 ರನ್ ಬಾರಿಸಿದ್ದರು. ಅವರ ಈ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ, 17 ಸಿಕ್ಸರ್ ಗಳಿದ್ದವು. ಇಂದಿಗೂ ಸಹ ಗೇಲ್‌ ಅವರ ಈ ದಾಖಲೆ ಸಮೀಯ ಸುಳಿಯಲೂ ಯಾರಿಂದಲೂ ಸಾಧ್ಯವಾಗಿಲ್ಲ.

    ರನ್‌ ಮಿಷಿನ್‌ ಕೊಹ್ಲಿ
    ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016ರ ಐಪಿಎಲ್‌ನಲ್ಲಿ ಕೊಹ್ಲಿ 973 ರನ್ ಗಳಿಸಿದ್ದರು. ಯಾವೊಬ್ಬ ಬ್ಯಾಟರ್ ಕೂಡ ಈ ದಾಖಲೆಯ ಸಮೀಪಕ್ಕೂ ಸುಳಿದಿಲ್ಲ. ಆ ಋತುವಿನಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 81.08 ಸರಾಸರಿ ಮತ್ತು 152.03 ಸ್ಟೈಕ್ ರೇಟ್‌ನಲ್ಲಿ ಇಷ್ಟು ರನ್‌ ಸಿಡಿಸಿದ್ದರು. ಅವರು ಆಡಿದ 16 ಪಂದ್ಯಗಳಲ್ಲಿ 4 ಶತಕ ಮತ್ತು 7 ಅರ್ಧಶತಕ ಸಿಡಿಸಿದ್ದರು. ಕೊಹ್ಲಿ ನಂತರ 2ನೇ ಸ್ಥಾನದಲ್ಲಿ ಶುಭಮನ್‌ ಗಿಲ್‌ ಇದ್ದಾರೆ. 2023ರ ಆವೃತ್ತಿಯಲ್ಲಿ ಗಿಲ್‌ 890 ರನ್‌ ಗಳಿಸಿದ್ದರು. ಇದನ್ನೂ ಓದಿ: IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್‌!

    ನಾಯಕನಾಗಿ ದಾಖಲೆ ಬರೆದ ಕೂಲ್‌ ಕ್ಯಾಪ್ಟನ್‌
    ಐಪಿಎಲ್ ಇತಿಹಾಸದಲ್ಲೇ ನಾಯಕನಾಗಿ ಅತಿ ಹೆಚ್ಚು ದಾಖಲೆ ಕಂಡ ಆಟಗಾರ ಲೆಜೆಂಡ್‌ ಎಂ.ಎಸ್ ಧೋನಿ. ಈ ದಾಖಲೆಯನ್ನೂ ಮುರಿಯುವುದು ಸುಲಭದ ಮಾತಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐದು ಟ್ರೋಫಿ ಗೆದ್ದುಕೊಟ್ಟಿರುವ ಧೋನಿ, 226 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಈ ಪೈಕಿ ಧೋನಿ 133 ಪಂದ್ಯಗಳಲ್ಲಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. 91 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಇದನ್ನೂ ಓದಿ: IPL 2025 | 10 ತಂಡಗಳ ನಾಯಕರ ಹೆಸರು ಫೈನಲ್‌ – 9 ಮಂದಿ ಭಾರತೀಯರದ್ದೇ ಆರ್ಭಟ

    ಸ್ಪಿನ್‌ ಮಾಂತ್ರಿಕ ಚಹಲ್‌
    ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಯುಜೇಂದ್ರ ಚಹಲ್‌ ಅವರದ್ದಾಗಿದೆ. ಚಹಲ್‌ ಒಟ್ಟು 205 ವಿಕೆಟ್ ಕಬಳಿಸಿದ್ದು, ಇದು ಈವರೆಗೆ ಸಾರ್ವಕಾಲಿಕ ದಾಖಲೆಯಾಗಿಯೇ ಉಳಿದಿದೆ. ಇಷ್ಟು ವಿಕೆಟ್‌ ಪಡೆಯೋದಕ್ಕಾಗಿ 159 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. 40ಕ್ಕೆ 5 ವಿಕೆಟ್‌ ಪಡೆದಿರುವುದು ಅವರ ಬೆಸ್ಟ್ ಬೌಲಿಂಗ್ ಆಗಿದೆ. ಐಪಿಎಲ್ 2025 ರ ಋತುವಿನಲ್ಲಿ ಪಂಜಾಬ್‌ ಕಿಂಗ್ಸ್ ಪರ ಆಡಲಿರುವ ಚಹಲ್ ತಮ್ಮ ವಿಕೆಟ್ ಬೇಟೆಯನ್ನು ಮುಂದುವರಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: IPL 2025 | ಶ್ರೀಮಂತ ಕ್ರಿಕೆಟ್‌ ಟೂರ್ನಿಯಲ್ಲಿ ರನ್‌ ಹೊಳೆ ಹರಿಸಿದ ವೀರರು ಇವರೇ…

    ಅತೀ ಕಡಿಮೆ ರನ್‌ಗಳಿಗೆ ಆಲೌಟ್‌ ಆಗಿ ಕೆಟ್ಟ ದಾಖಲೆ ಬರೆದ 5 ತಂಡಗಳು
    * ಆರ್‌ಸಿಬಿ – 49 ರನ್‌ – ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ – 2017
    * ರಾಜಸ್ಥಾನ್‌ ರಾಯಲ್ಸ್ – 58 ರನ್‌ – ಆರ್‌ಸಿಬಿ ವಿರುದ್ಧ – 2009
    * ರಾಜಸ್ಥಾನ ರಾಯಲ್ಸ್‌ – 59 ರನ್‌ – ಆರ್‌ಸಿಬಿ ವಿರುದ್ಧ – 2023
    * ಡೆಲ್ಲಿ ಡೇರ್‌ ಡೆವಿಲ್ಸ್‌ – 66 ರನ್‌ – ಮುಂಬೈ ಇಂಡಿಯನ್ಸ್‌ ವಿರುದ್ಧ – 2017
    * ಡೆಲ್ಲಿ ಡೇರ್‌ ಡೆವಿಲ್ಸ್‌ – 67 ರನ್‌ – ಪಂಜಾಬ್‌ ಕಿಂಗ್ಸ್‌ ವಿರುದ್ಧ – 2017

  • IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್‌!

    IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್‌!

    ಯಾವುದೇ ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡುವ ತಂಡವು ಬೃಹತ್‌ ಮೊತ್ತ ಬಾರಿಸಬೇಕಾದ್ರೆ, ಸ್ಫೋಟಕ ಬ್ಯಾಟಿಂಗ್‌ ಮಾಡುವ ಹೊರತಾಗಿ ಉತ್ತಮ ಪಾಲುದಾರಿಕೆಯೂ ಮುಖ್ಯವಾಗುತ್ತದೆ. ಐಪಿಎಲ್‌ ಟೂರ್ನಿಗೂ (IPL 2025) ಇದು ಅನ್ವಯಿಸುತ್ತದೆ.

    ಮೊದಲು ಬ್ಯಾಟಿಂಗ್‌ ಮಾಡುವ ತಂಡದ ಪರ ಬ್ಯಾಟಿಂಗ್‌ ಜೋಡಿಯು ಕ್ರೀಸ್‌ ಮೇಲೆ ಭದ್ರವಾಗಿ ನೆಲೆಯೂರಿದರೆ, ದೊಡ್ಡ ಹೊಡೆತ ನೀಡಲು ಮುಂದಾದ್ರೆ, ಕನಿಷ್ಠ 200 ರನ್‌ಗಳನ್ನು ಕಲೆಹಾಕುವುದು ಖಚಿತ. ಕೆಲವೊಮ್ಮೆ ಅಧಿಕ ರನ್‌ ಗಳಿಸಿದ ತಂಡವು ಬೌಲಿಂಗ್‌ನಲ್ಲಿ ಕೊಂಚ ಎಡವಿದರೂ ಎದುರಾಳಿ ತಂಡಕ್ಕೆ ಗೆಲುವು ತಂದುಕೊಡಬಹುದು. ಉದಾಹರಣೆಗೆ 2023ರ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ (CSK vs RCB) ನಡುವಿನ ಪಂದ್ಯ ಸಾಕ್ಷಿಯಾಗಿದೆ. ಅಂದು ಚೆನ್ನೈ 226 ರನ್‌ ಪೇರಿಸಿದ್ದರೂ, ಕೇವಲ 9 ರನ್‌ಗಳಿಂದ ಗೆಲುವು ಸಾಧಿಸಿತ್ತು. 18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಳು ಸಮೀಪಿಸುತ್ತಿರುವ ಕಾರಣ ಈ ಹಿಂದಿನ ಅತ್ಯುತ್ತಮ ಜೊತೆಯಾಟವನ್ನು ಮೆಲುಕು ಹಾಕುಬೇಕಾಗಿದ್ದು, ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ ಜೊತೆಯಾಟ ನೀಡಿದ ಟಾಪ್‌ ಜೋಡಿಗಳನ್ನು ಇಲ್ಲಿ ಕಾಣಬಹುದು.

    RCB 11

    ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
    ಐಪಿಎಲ್‌ ಇತಿಹಾಸದಲ್ಲಿ ಅತ್ಯುತ್ತಮ ಜೊತೆಯಾಟ ನೀಡಿದ ಟಾಪ್‌-5 ಪಟ್ಟಿಯಲ್ಲಿ ಕೊಹ್ಲಿ ಮೂರರಲ್ಲಿ ಕಾಣಿಸಿಕೊಂಡಿದ್ದಾರೆ, ಅಲ್ಲದೇ ಆರ್‌ಸಿಬಿ ತಂಡ ಮೂವರು ಆಟಗಾರರು ಈ ಪಟ್ಟಿಲ್ಲಿರುವುದು ವಿಶೇಷ. 2016ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿ ಡಿವಿಲಿಯರ್ಸ್ (AB de Villiers) ಅವರೊಂದಿಗೆ 2ನೇ ವಿಕೆಟ್​ಗೆ ವಿರಾಟ್​ ಕೊಹ್ಲಿ (Virat Kohli) 229 ರನ್​​ಗಳನ್ನು ಸೇರಿಸಿದ್ದರು. ಈ ಪಂದ್ಯದಲ್ಲಿ ಇಬ್ಬರೂ ಶತಕಗಳನ್ನು ಸಿಡಿಸಿದ್ದರು. ದಕ್ಷಿಣ ಆಫ್ರಿಕಾದ ಬ್ಯಾಟರ್ ಮಿಸ್ಟರ್‌-360, ಕೇವಲ 52 ಎಸೆತಗಳಲ್ಲಿ 12 ಸಿಕ್ಸರ್​ಗಳು ಮತ್ತು 10 ಬೌಂಡರಿಗಳ ಸಹಾಯದಿಂದ 129 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 109 ರನ್ ಗಳಿಸುವುದರೊಂದಿಗೆ ಆರ್​ಸಿಬಿ 3 ವಿಕೆಟ್ ನಷ್ಟಕ್ಕೆ 248 ರನ್ ಪೇರಿಸಿತ್ತು. ಪಂದ್ಯದಲ್ಲಿ ಆರ್​​ಸಿಬಿ ಗೆದ್ದಿತ್ತು.

    RCB 2 3

    ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
    2015ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 2ನೇ ವಿಕೆಟ್​ಗೆ ಕೊಹ್ಲಿ ಮತ್ತು ವಿಲಿಯರ್ಸ್ 215 ರನ್​ಗಳ ಜೊತೆಯಾಟವಾಡಿದ್ದರು. ಆ ಪಂದ್ಯದಲ್ಲಿ ಎಬಿಡಿ ಕೇವಲ 59 ಎಸೆತಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 133 ರನ್ ಚಚ್ಚಿದ್ದರು. ವಿರಾಟ್ 50 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಮೊದಲ ಇನ್ನಿಂಗ್ಸ್​​ನಲ್ಲಿ 235/1 ಸ್ಕೋರ್ ಮಾಡಿದ್ದ ಆರ್​ಸಿಬಿ ಈ ಪಂದ್ಯವನ್ನು 39 ರನ್​ಗಳಿಂದ ಗೆದ್ದುಕೊಂಡಿತ್ತು.

    GTvsLSG 4

    ಕ್ವಿಂಟನ್‌ ಡಿ ಕಾಕ್‌ & ಕೆ.ಎಲ್‌ ರಾಹುಲ್‌
    2022ರ ಐಪಿಎಲ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಕೆ.ಎಲ್ ರಾಹುಲ್ ಅಬ್ಬರದ ಪ್ರದರ್ಶನ ನೀಡಿದ್ದರು. ಕೆಕೆಆರ್ ವಿರುದ್ಧ ರಾಹುಲ್ ಹಾಗೂ ಡಿ ಕಾಕ್ ಜೋಡಿ 210 ರನ್​ಗಳ ಜೊತೆಯಾಟ ದಾಖಲಿಸಿದ್ದರು. ಇದು ಟಿ20 ಲೀಗ್‌ನಲ್ಲಿ 3ನೇ ಅತ್ಯುತ್ತಮ ಜೊತೆಯಾಟವಾಗಿ ದಾಖಲಾಯಿತು.

    ಶುಭಮನ್‌ ಗಿಲ್‌ & ಸಾಯಿ ಸುದರ್ಶನ್‌:
    2024ರ ಐಪಿಎಲ್‌ ಆವೃತ್ತಿಯಲ್ಲಿ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌, ಆರಂಭಿಕ ಆಟಗಾರ ಸಾಯಿ ಸುದರ್ಶನ್‌ ಮೊದಲ ವಿಕೆಟ್‌ಗೆ 210 ರನ್‌ಗಳ ಜೊತೆಯಾಟ ನೀಡಿದ್ದರು. ಈ ಪಂದ್ಯದಲ್ಲಿ ಆರಂಭಿಕರಿಬ್ಬರೂ ಶತಕ ಸಿಡಿಸಿ ಮಿಂಚಿದ್ದರು. ಇದು ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ರನ್‌ಗಳ ನಾಲ್ಕನೇ ಜೊತೆಯಾಟವಾಗಿದೆ.

    ಗಿಲ್​ಕ್ರಿಸ್ಟ್​​ & ಶಾನ್​ ಮಾರ್ಷ್​​
    2011ರ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ, ಪಂಜಾಬ್ ನಾಯಕ ಆಡಂ ಗಿಲ್​​ಕ್ರಿಸ್ಟ್​​ 55 ಎಸೆತಗಳಲ್ಲಿ 106 ರನ್ ಗಳಿಸುವ ಮೂಲಕ ಅದ್ಭುತ ಶತಕ ಗಳಿಸಿದ್ದರು. ಶಾನ್ ಮಾರ್ಷ್ ಜೊತೆಗೂಡಿ 2ನೇ ವಿಕೆಟ್ ಗೆ 206 ರನ್ ಪೇರಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿನ 4ನೇ ಅತಿ ದೊಡ್ಡ ಜೊತೆಯಾಟವಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಪಂಜಾಬ್ 2 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತ್ತು. ಅಂತಿಮವಾಗಿ ಆರ್​ಸಿಬಿ 111 ರನ್ ಗಳ ಸೋಲು ಅನುಭವಿಸಿತ್ತು.

    ದಾಖಲೆ ಜೊತೆಯಾಟ ನೀಡಿದ ಟಾಪ್‌-5 ಜೋಡಿಗಳು:
    * ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ, 229 ರನ್​, ಗುಜರಾತ್​ ಲಯನ್ಸ್​ ವಿರುದ್ಧ (2016)
    * ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ 215 ರನ್​, ಮುಂಬೈ ಇಂಡಿಯನ್ಸ್ ವಿರುದ್ಧ (2015)
    * ಕ್ವಿಂಟನ್ ಡಿ ಕಾಕ್ & ಕೆಎಲ್ ರಾಹುಲ್ – ಮೊದಲ ವಿಕೆಟ್​ಗೆ, 210 ರನ್​, ಕೆಕೆಆರ್ ವಿರುದ್ಧ (2022)
    * ಶುಭಮನ್‌ ಗುಲ್‌ & ಸಾಯಿ ಸುದರ್ಶನ್‌ – ಮೊದಲ ವಿಕೆಟ್‌ಗೆ, 210 ರನ್‌, ಸಿಎಸ್‌ಕೆ ವಿರುದ್ಧ (2024)
    * ಆಡಮ್ ಗಿಲ್ಕ್ರಿಸ್ಟ್ & ಶಾನ್ ಮಾರ್ಷ್ – 2ನೇ ವಿಕೆಟ್‌ಗೆ 206 ರನ್‌, ಆರ್​​ಸಿಬಿ ವಿರುದ್ಧ (2011)

  • Champions Trophy 2025: ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ

    Champions Trophy 2025: ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ

    ದುಬೈ: ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತಾಗಿದೆ. ಅವರ ಅಬ್ಬರ ಬ್ಯಾಟಿಂಗ್‌ನಿಂದ ಬರುತ್ತಿರುವ ರನ್ ದಾಖಲೆಗಳ ಪುಟ ಸೇರುತ್ತಿದೆ. ಇಂದು ನಡೆಯುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲೂ ಕೂಡ ಇತರರ ದಾಖಲೆಗಳ ಅಳಿಸಿ ಹಾಕುವತ್ತ ಕಿಂಗ್ ಕೊಹ್ಲಿ ಚಿತ್ತ ನೆಟ್ಟಿದೆ. ಇದರ ಜೊತೆಗೆ, ಫಾರ್ಮ್ನಲ್ಲಿರುವ ಕೊಹ್ಲಿ ಕಿವೀಸ್‌ಗೆ ತಲೆನೋವಾಗಿ ಪರಿಣಮಿಸಿದ್ದಾರೆ.

    2008 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಮತ್ತೆ ಹಿಂದೆ ತಿರುಗು ನೋಡಿದ್ದೆ ಇಲ್ಲ. ಆನೆ ನಡೆದಿದ್ದೇ ದಾರಿ ಎಂಬಂತೆ ಕ್ರಿಕೆಟ್ ಅಖಾಡದಲ್ಲಿ ಅಬ್ಬರಿಸಿದ್ದಾರೆ.

    ಹಲವು ದಾಖಲೆಗಳಲ್ಲಿ ವಿರಾಜಮಾನವಾಗಿರುವ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅದು ಚಾಂಪಿಯನ್ಸ್ ಟ್ರೋಪಿಯ ಫೈನಲ್ ಅಖಾಡವೇ ವೇದಿಕೆಯಾಗಿದೆ. ಇಂದಿನ ಫೈನಲ್‌ನಲ್ಲಿ ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನ ಅಳಿಸಿ ಹಾಕುವತ್ತ ಕಣ್ಣಿಟ್ಟಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ 54 ರನ್ ಗಳಿಸಿದರೆ ಇಬ್ಬರು ದಿಗ್ಗಜರ ದಾಖಲೆಗಳು ಉಡೀಸ್ ಆಗಲಿದೆ.

    ಕುಮಾರ್ ಸಂಗಕ್ಕಾರ ಹಿಂದಿಕ್ಕಲು ಬೇಕು 55 ರನ್
    ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಪೂರೈಸಿದ ಆಟಗಾರರ ಪೈಕಿ 55 ಗಳಿಸಿದರೆ, ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಕ್ಕಾರಗಿಂತ ವೇಗವಾಗಿ ಮತ್ತು ಹೆಚ್ಚು ರನ್ ಗಳಿಸಿದ ಆಟಗಾರರಾಗಲಿದ್ದಾರೆ. ಸದ್ಯ ಸಂಗಕ್ಕಾರ 404 ಪಂದ್ಯದಲ್ಲಿ 14,234 ರನ್ ಗಳಿಸಿ ಸಚಿನ್ ತೆಂಡೂಲ್ಕರ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯ ಕೊಹ್ಲಿ 301 ಪಂದ್ಯಗಳಲ್ಲೇ 14,180 ರನ್ ಗಳಿಸಿದ್ದು, ಸಂಗಕ್ಕಾರ ದಾಖಲೆ ಮುರಿಯಲು 55 ರನ್‌ಗಳಷ್ಟೇ ಬೇಕಾಗಿದೆ.

    ಗೇಲ್ ದಾಖಲೆ ಉಡೀಸ್‌ಗೆ ಬೇಕು 46 ರನ್‌
    ಚಾಂಪಿಯನ್ ಟ್ರೋಫಿಯಲ್ಲಿ ಕ್ರಿಸ್ ಗೇಲ್ 17 ಪಂದ್ಯಗಳಲ್ಲಿ 791 ರನ್ ಗಳಿಸುವ ಮೂಲಕ ಅತೀ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕೊಹ್ಲಿ ಪ್ರಸ್ತುತ 17 ಪಂದ್ಯಗಳಲ್ಲಿ 746 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ 46 ರನ್ ಗಳಿಸಿದರೆ ಗೇಲ್ ದಾಖಲೆ ಹಿಂದಿಕ್ಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಲಿದ್ದಾರೆ.

    ಭಾರತದ ವಿರುದ್ಧ ಯಾವುದೇ ತಂಡ ಕಣಕ್ಕಿಳಿದರೂ, ಆ ತಂಡಕ್ಕೆ ವಿರಾಟ್ ಕೊಹ್ಲಿಯೇ ದೊಡ್ಡ ವಿಲನ್. ಇಂದಿನ ಪಂದ್ಯದಲ್ಲೂ ನ್ಯೂಜಿಲೆಂಡ್‌ಗೆ ಕೊಹ್ಲಿಯದ್ದೇ ಚಿಂತೆಯಾಗಿದೆ. ಕಿವೀಸ್‌ನ ಈ ತಲೆಬಿಸಿಗೆ ಕಾರಣ ಕೊಹ್ಲಿಯ ಇತ್ತೀಚಿನ ಫಾರ್ಮ್. ಇಡೀ ಟೂರ್ನಿಯಲ್ಲಿ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಕೊಹ್ಲಿ ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 72ರ ಸರಾಸರಿಯಲ್ಲಿ 217 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಸೆಂಚುರಿ ಮತ್ತೊಂದು ಆಫ್ ಸೆಂಚುರಿ. ಅದರಲ್ಲೂ ಕಳೆದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಶತಕ, ಅರ್ಧ ಶತಕ ಪೂರೈಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಕೊಹ್ಲಿಯ ಅಂಕಿಅಂಶ
    ಪಂದ್ಯ: 32
    ಒಟ್ಟು ರನ್: 1656
    ಹೆಚ್ಚು ರನ್: 154
    ಸ್ಟೈಕ್ ರೇಟ್: 95.55
    ಶತಕ: 6
    ಅರ್ಧಶತಕ: 9

    ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಕಿವೀಸ್ ವಿರುದ್ಧ 32 ಪಂದ್ಯವನ್ನಾಡಿರುವ ಕೊಹ್ಲಿ, 1656 ರನ್ ಚಚ್ಚಿದ್ದಾರೆ. ಇದರಲ್ಲಿ 6 ಶತಕ, 9 ಅರ್ಧಶತಕ ದಾಖಲಾಗಿದೆ. 154 ಕಿವೀಸ್ ವಿರುದ್ದ ಕೊಹ್ಲಿ ಸಿಡಿಸಿದ ಅತ್ಯಧಿಕ ರನ್ ಆಗಿದೆ.

  • ಆರಂಭಿಕ ಪಂದ್ಯದಲ್ಲೇ ಐತಿಹಾಸಿಕ ಗೆಲುವು – T20 ವಿಶ್ವಕಪ್‌ನಲ್ಲಿ USA ಶುಭಾರಂಭ!

    ಆರಂಭಿಕ ಪಂದ್ಯದಲ್ಲೇ ಐತಿಹಾಸಿಕ ಗೆಲುವು – T20 ವಿಶ್ವಕಪ್‌ನಲ್ಲಿ USA ಶುಭಾರಂಭ!

    – ಕ್ರಿಸ್‌ಗೇಲ್‌ ಅಪರೂಪದ ದಾಖಲೆ ಸರಿಗಟ್ಟಿದ ಯುಎಸ್‌ ಆಟಗಾರ

    ಡಲ್ಲಾಸ್‌: ಟಿ20 ವಿಶ್ವಕಪ್‌ (T20 World Cup) ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಅಮೆರಿಕ ಕ್ರಿಕೆಟ್‌ ತಂಡ ಗೆಲುವಿನ ಶುಭಾರಂಭ ಕಂಡಿದೆ. ಆರನ್ ಜೋನ್ಸ್‌ (Aaron Jones) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನೊಂದಿಗೆ ಅಮೆರಿಕ ತಂಡವು ಕೆನಡಾ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಅಮೆರಿಕ ತಂಡದ (Cricket USA) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಇದು ಐತಿಹಾಸಿಕ ಗೆಲುವು ಸಹ ಆಗಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆನಡಾ (Canada) 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 194 ರನ್‌ ಸಿಡಿಸಿತ್ತು. ಬೃಹತ್‌ ಮೊತ್ತದ ಗುರಿ ಪಡೆದ ಯುಎಸ್‌ಎ ಕೇವಲ 17.4 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 197‌ ರನ್‌ ಸಿಡಿಸಿ ಗೆಲುವಿನ ಖಾತೆ ತೆರೆಯಿತು.

    ಚೇಸಿಂಗ್‌ ಆರಂಭಿಸಿದ ಯುಎಸ್‌ ತಂಡ 6.3 ಓವರ್‌ಗಳಲ್ಲಿ 42 ರನ್‌ ಗಳಿಗೆ ಪ್ರಮುಖ 2 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ 3ನೇ ವಿಕೆಟ್‌ಗೆ ಜೊತೆಗೂಡಿದ ಆಂಡ್ರೀಸ್ ಗೌಸ್ ಹಾಗೂ ಆರನ್ ಜೋನ್ಸ್‌ ಜೋಡಿ 58 ಎಸೆತಗಳಲ್ಲಿ ಬರೋಬ್ಬರಿ 131 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ಕೈತಪ್ಪಿದ ಶತಕ:
    ಆರಂಭಿಕ ಪಂದ್ಯದಲ್ಲೇ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿ ತಂಡದ ಗೆಲುವಿಗೆ ಕಾರಣವಾದ ಆರನ್ ಜೋನ್ಸ್‌ 40 ಎಸೆತಗಳಲ್ಲಿ ಸ್ಫೋಟಕ 96 ರನ್‌ (10 ಸಿಕ್ಸರ್‌, 4 ಬೌಂಡರಿ) ಸಿಡಿಸಿ ಶತಕ ವಂಚಿತರಾದರು. ಇದರೊಂದಿಗೆ ಆಂಡ್ರೀಸ್ ಗೌಸ್ 46 ಎಸೆತಗಳಲ್ಲಿ 65 ರನ್‌ (3 ಸಿಕ್ಸರ್‌, 7 ಬೌಂಡರಿ), ಮೊನಾಂಕ್ ಪಟೇಲ್ 16 ರನ್‌ ಗಳಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಕೆನಡಾ ತಂಡ ಸಹ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನೇ ನೀಡಿತ್ತು. ನವನೀತ್ ಧಲಿವಾಲ್44 ಎಸೆತಗಳಲ್ಲಿ 61 ರನ್‌ (3 ಸಿಕ್ಸರ್‌, 6 ಬೌಂಡರಿ), ನಿಕೋಲಸ್ ಕಿರ್ಟನ್ 51 ರನ್‌ (31 ಎಸೆತ, 3 ಬೌಂಡರಿ, 2 ಸಿಕ್ಸರ್‌) ಚಚ್ಚಿದರೆ, ಶ್ರೇಯಸ್ ಮೊವ್ವ 16 ಎಸೆತಗಳಲ್ಲಿ ಸ್ಫೋಟಕ 32 ರನ್‌ ಸಿಡಿ ಮಿಂಚಿದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್ ಅಯ್ಯರ್

    ಕ್ರಿಸ್‌ಗೇಲ್‌ ಅಪರೂಪದ ದಾಖಲೆ ಉಡೀಸ್:‌
    ಟಿ20 ವಿಶ್ವಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಆರನ್ ಜೋನ್ಸ್‌, ಕ್ರಿಸ್‌ಗೇಲ್‌ ಅವರ ಅಪರೂಪದ ಸಿಕ್ಸರ್‌ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ವಿಶ್ವಕಪ್‌ ಟೂರ್ನಿಯ ಪಂದ್ಯವೊಂದರಲ್ಲೇ 10 ಸಿಕ್ಸರ್‌ ಸಿಡಿಸುವ ಮೂಲಕ 2007ರಲ್ಲಿ ಈ ಸಾಧನೆ ಮಾಡಿದ ಗೇಲ್‌ ದಾಖಲೆಯನ್ನ ಸರಿಗಟ್ಟಿದ್ದಾರೆ. ಇದನ್ನೂ ಓದಿ:T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್‌ ಸಿಡಿಸಿದವರ ಲಿಸ್ಟ್‌:
    * ಕ್ರಿಸ್‌ ಗೇಲ್‌ – 11 ಸಿಕ್ಸರ್‌ – 2016ರಲ್ಲಿ
    * ಕ್ರಿಸ್‌ ಗೇಲ್‌ – 10 ಸಿಕ್ಸರ್‌ – 2007ರಲ್ಲಿ
    * ಆರನ್‌ ಜೋಸ್‌ – 10 ಸಿಕ್ಸರ್‌ – 2024ರಲ್ಲಿ

  • IPL 2024: ಅತ್ಯುತ್ತಮ ಜೊತೆಯಾಟದಲ್ಲೂ ಆರ್‌ಸಿಬಿ ಆಟಗಾರರೇ ಟಾಪ್‌!

    IPL 2024: ಅತ್ಯುತ್ತಮ ಜೊತೆಯಾಟದಲ್ಲೂ ಆರ್‌ಸಿಬಿ ಆಟಗಾರರೇ ಟಾಪ್‌!

    ಬೆಂಗಳೂರು: ಯಾವುದೇ ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡುವ ತಂಡವು ಬೃಹತ್‌ ಮೊತ್ತ ಬಾರಿಸಬೇಕಾದ್ರೆ, ಸ್ಫೋಟಕ ಬ್ಯಾಟಿಂಗ್‌ ಮಾಡುವ ಹೊರತಾಗಿ ಉತ್ತಮ ಪಾಲುದಾರಿಕೆಯೂ ಮುಖ್ಯವಾಗುತ್ತದೆ. ಐಪಿಎಲ್‌ ಟೂರ್ನಿಗೂ (IPL 2024) ಇದು ಅನ್ವಯಿಸುತ್ತದೆ.

    ಮೊದಲು ಬ್ಯಾಟಿಂಗ್‌ ಮಾಡುವ ತಂಡದ ಪರ ಬ್ಯಾಟಿಂಗ್‌ ಜೋಡಿಯು ಕ್ರೀಸ್‌ ಮೇಲೆ ಭದ್ರವಾಗಿ ನೆಲೆಯೂರಿದರೆ, ದೊಡ್ಡ ಹೊಡೆತ ನೀಡಲು ಮುಂದಾದ್ರೆ, ಕನಿಷ್ಠ 200 ರನ್‌ಗಳನ್ನು ಕಲೆಹಾಕುವುದು ಖಚಿತ. ಕೆಲವೊಮ್ಮೆ ಅಧಿಕ ರನ್‌ ಗಳಿಸಿದ ತಂಡವು ಬೌಲಿಂಗ್‌ನಲ್ಲಿ ಕೊಂಚ ಎಡವಿದರೂ ರನ್‌ ತಂಡಕ್ಕೆ ಗೆಲುವು ತಂದುಕೊಡಬಹುದು. ಉದಾಹರಣೆಗೆ ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ (CSK vs RCB) ನಡುವಿನ ಪಂದ್ಯ ಸಾಕ್ಷಿಯಾಗಿದೆ. ಅಂದು ಚೆನ್ನೈ 226 ರನ್‌ ಪೇರಿಸಿದ್ದರು, ಕೇವಲ 9 ರನ್‌ಗಳಿಂದ ಗೆಲುವು ಸಾಧಿಸಿತ್ತು. 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಳು ಸಮೀಪಿಸುತ್ತಿರುವ ಕಾರಣ ಈ ಹಿಂದಿನ ಅತ್ಯುತ್ತಮ ಜತೆಯಾಟವನ್ನು ಮೆಲುಕು ಹಾಕುಬೇಕಾಗಿದ್ದು, ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ ಜೊತೆಯಾಟ ನೀಡಿದ ಟಾಪ್‌ ಜೋಡಿಗಳನ್ನು ಇಲ್ಲಿ ಕಾಣಬಹುದು.

    ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
    ಐಪಿಎಲ್‌ ಇತಿಹಾಸದಲ್ಲಿ ಅತ್ಯುತ್ತಮ ಜೊತೆಯಾಟ ನೀಡಿದ ಟಾಪ್‌-5 ಪಟ್ಟಿಯಲ್ಲಿ ಕೊಹ್ಲಿ ಮೂರರಲ್ಲಿ ಕಾಣಿಸಿಕೊಂಡಿದ್ದಾರೆ, ಅಲ್ಲದೇ ಆರ್‌ಸಿಬಿ ತಂಡ ಮೂವರು ಆಟಗಾರರು ಈ ಪಟ್ಟಿಲ್ಲಿರುವುದು ವಿಶೇಷ. 2016ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿ ಡಿವಿಲಿಯರ್ಸ್ (AB de Villiers) ಅವರೊಂದಿಗೆ 2ನೇ ವಿಕೆಟ್​ಗೆ ವಿರಾಟ್​ ಕೊಹ್ಲಿ (Virat Kohli) 229 ರನ್​​ಗಳನ್ನು ಸೇರಿಸಿದ್ದರು. ಈ ಪಂದ್ಯದಲ್ಲಿ ಇಬ್ಬರೂ ಶತಕಗಳನ್ನು ಸಿಡಿಸಿದ್ದರು. ದಕ್ಷಿಣ ಆಫ್ರಿಕಾದ ಬ್ಯಾಟರ್ ಮಿಸ್ಟರ್‌-360, ಕೇವಲ 52 ಎಸೆತಗಳಲ್ಲಿ 12 ಸಿಕ್ಸರ್​ಗಳು ಮತ್ತು 10 ಬೌಂಡರಿಗಳ ಸಹಾಯದಿಂದ 129 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 109 ರನ್ ಗಳಿಸುವುದರೊಂದಿಗೆ ಆರ್​ಸಿಬಿ 3 ವಿಕೆಟ್ ನಷ್ಟಕ್ಕೆ 248 ರನ್ ಪೇರಿಸಿತ್ತು. ಪಂದ್ಯದಲ್ಲಿ ಆರ್​​ಸಿಬಿ ಗೆದ್ದಿತ್ತು.

    AB de Villiers

    ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
    2015ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 2ನೇ ವಿಕೆಟ್​ಗೆ ಕೊಹ್ಲಿ ಮತ್ತು ವಿಲಿಯರ್ಸ್ 215 ರನ್​ಗಳ ಜೊತೆಯಾಟವಾಡಿದ್ದರು. ಆ ಪಂದ್ಯದಲ್ಲಿ ಎಬಿಡಿ ಕೇವಲ 59 ಎಸೆತಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 133 ರನ್ ಚಚ್ಚಿದ್ದರು. ವಿರಾಟ್ 50 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಮೊದಲ ಇನ್ನಿಂಗ್ಸ್​​ನಲ್ಲಿ 235/1 ಸ್ಕೋರ್ ಮಾಡಿದ್ದ ಆರ್​ಸಿಬಿ ಈ ಪಂದ್ಯವನ್ನು 39 ರನ್​ಗಳಿಂದ ಗೆದ್ದುಕೊಂಡಿತ್ತು.

    ಕ್ವಿಂಟನ್‌ ಡಿ ಕಾಕ್‌ & ಕೆ.ಎಲ್‌ ರಾಹುಲ್‌
    2022ರ ಐಪಿಎಲ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಕೆ.ಎಲ್ ರಾಹುಲ್ ಅಬ್ಬರದ ಪ್ರದರ್ಶನ ನೀಡಿದ್ದರು. ಕೆಕೆಆರ್ ವಿರುದ್ಧ ರಾಹುಲ್ ಹಾಗೂ ಡಿ ಕಾಕ್ ಜೋಡಿ 210 ರನ್​ಗಳ ಜೊತೆಯಾಟ ದಾಖಲಿಸಿದ್ದರು. ಇದು ಟಿ20 ಲೀಗ್‌ನಲ್ಲಿ 3ನೇ ಅತ್ಯುತ್ತಮ ಜೊತೆಯಾಟವಾಗಿ ದಾಖಲಾಯಿತು.

    ಗಿಲ್​ಕ್ರಿಸ್ಟ್​​ & ಶಾನ್​ ಮಾರ್ಷ್​​
    2011ರ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ, ಪಂಜಾಬ್ ನಾಯಕ ಆಡಮ್ ಗಿಲ್​​ಕ್ರಿಸ್ಟ್​​ 55 ಎಸೆತಗಳಲ್ಲಿ 106 ರನ್ ಗಳಿಸುವ ಮೂಲಕ ಅದ್ಭುತ ಶತಕ ಗಳಿಸಿದ್ದರು. ಶಾನ್ ಮಾರ್ಷ್ ಜೊತೆಗೂಡಿ 2ನೇ ವಿಕೆಟ್ ಗೆ 206 ರನ್ ಪೇರಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿನ 4ನೇ ಅತಿ ದೊಡ್ಡ ಜೊತೆಯಾಟವಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಪಂಜಾಬ್ 2 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತ್ತು. ಅಂತಿಮವಾಗಿ ಆರ್​ಸಿಬಿ 111 ರನ್ ಗಳ ಸೋಲು ಅನುಭವಿಸಿತ್ತು.

    ಗೇಲ್ & ವಿರಾಟ್​
    ಐಪಿಎಲ್ 2012ರ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ವಿರಾಟ್ ಮತ್ತು ಕ್ರಿಸ್ ಗೇಲ್ 2ನೇ ವಿಕೆಟ್​​ಗೆ 204 ರನ್​​ಗಳ ಜೊತೆಯಾಟ ಪೇರಿಸಿದ್ದರು. ಗೇಲ್ 62 ಎಸೆತಗಳಲ್ಲಿ 128 ರನ್ ಗಳಿಸಿದ್ದರೆ ವಿರಾಟ್ 53 ಎಸೆತಗಳಲ್ಲಿ 73 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ 21 ರನ್​ಗಳ ಭರ್ಜರಿ ಜಯ ಸಾಧಿಸಿತ್ತು.

    ದಾಖಲೆ ಜೊತೆಯಾಟ ನೀಡಿದ ಟಾಪ್‌-5 ಜೋಡಿಗಳು:
    * ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ, 229 ರನ್​, ಗುಜರಾತ್​ ಲಯನ್ಸ್​ ವಿರುದ್ಧ (2016)
    * ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ 215 ರನ್​, ಮುಂಬೈ ಇಂಡಿಯನ್ಸ್ ವಿರುದ್ಧ (2015)
    * ಕ್ವಿಂಟನ್ ಡಿ ಕಾಕ್ & ಕೆಎಲ್ ರಾಹುಲ್ – ಮೊದಲ ವಿಕೆಟ್​ಗೆ, 210 ರನ್​, ಕೆಕೆಆರ್ ವಿರುದ್ಧ (2022)
    * ಆಡಮ್ ಗಿಲ್ಕ್ರಿಸ್ಟ್ & ಶಾನ್ ಮಾರ್ಷ್ – 2ನೇ ವಿಕೆಟ್‌ಗೆ 206 ರನ್‌, ಆರ್​​ಸಿಬಿ ವಿರುದ್ಧ (2011)
    * ವಿರಾಟ್ ಕೊಹ್ಲಿ & ಕ್ರಿಸ್ ಗೇಲ್, 2ನೇ ವಿಕೆಟ್‌ಗೆ 204 ರನ್​, ಡೆಲ್ಲಿ ವಿರುದ್ಧ ವಿರುದ್ಧ, (2012)

  • ಐಪಿಎಲ್‌ನಲ್ಲಿ ಆರ್‌ಸಿಬಿ, ಆರ್‌ಸಿಬಿಯಲ್ಲಿ ಕೊಹ್ಲಿ, ಗೇಲ್‌ ನಂ.1 – ಟಾಪ್‌ ದಾಖಲೆಗಳಿವು

    ಐಪಿಎಲ್‌ನಲ್ಲಿ ಆರ್‌ಸಿಬಿ, ಆರ್‌ಸಿಬಿಯಲ್ಲಿ ಕೊಹ್ಲಿ, ಗೇಲ್‌ ನಂ.1 – ಟಾಪ್‌ ದಾಖಲೆಗಳಿವು

    – ರಾಯಲ್‌ ಚಾಲೆಂಜರ್ಸ್‌ ಹೆಸರಲ್ಲಿರೋ ಟಾಪ್‌ ದಾಖಲೆಗಳಿವು

    ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ (IPL 2024) ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ ಸಾಕಷ್ಟು ಟ್ರೆಂಡ್‌ ಇದೆ. 16 ಆವೃತ್ತಿ ಕಳೆದರೂ ಒಂದು ಬಾರಿಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಹೆಚ್ಚಿನ ಅಭಿಮಾನಿಗಳನ್ನೇ ಹೊಂದಿದೆ. ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ, ಸೋತರೂ ಆರ್‌ಸಿಬಿ ತಂಡವನ್ನ ಬೆಂಬಲಿಸುವ ಪ್ರಾಮಾಣಿಕ ಅಭಿಮಾನಿಗಳು (RCB Fans) ಇವರಾಗಿದ್ದಾರೆ.

    ಅದರಂತೆ ಆರ್‌ಸಿಬಿ ತಂಡ ಕೂಡ ತನ್ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿಲ್ಲ. ಐಪಿಎಲ್‌ನ ಸಾರ್ವಕಾಲಿಕ ಟಾಪ್‌ ದಾಖಲೆಗಳನ್ನು ತನ್ನ ಹೆಸರಿನಲ್ಲೇ ಇರಿಸಿಕೊಂಡಿದೆ. ಇದು ಅಭಿಮಾನಿಗಳಿಗೂ ಎಲ್ಲಿಲ್ಲದ ಹೆಗ್ಗಳಿಕೆ. ಅದೇನು ಅಂತೀರಾ ಮುಂದೆ ಓದಿ…

    ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ರನ್‌ ಗಳಿಸಿದ ಖ್ಯಾತಿ:
    2013ರ ಐಪಿಎಲ್‌ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಪುಣೆ ವಾರಿಯರ್ಸ್‌ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 20 ಓವರ್‌ಗಳಲ್ಲಿ 263 ರನ್‌ ಗಳಿಸಿತ್ತು. ಇದು ಐಪಿಎಲ್‌ ಇತಿಹಾಸದಲ್ಲೇ ಇನ್ನಿಂಗ್ಸ್‌ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಸ್ಕೋರ್‌ ಆಗಿದೆ. ಈವರೆಗೆ ಈ ದಾಖಲೆಯನ್ನು ಯಾವ ತಂಡವೂ ಮುರಿಯಲಾಗಿಲ್ಲ. 2023ರ ಐಪಿಎಲ್‌ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಕಿಂಗ್ಸ್‌ ಪಂಜಾಬ್‌ ವಿರುದ್ಧ 5 ವಿಕೆಟ್‌ಗೆ 257 ರನ್‌ ಗಳಿಸಿದ್ದು, ತಂಡವೊಂದರ 2ನೇ ಗರಿಷ್ಠ ಸ್ಕೋರ್‌ ಆಗಿದೆ. ಇದನ್ನೂ ಓದಿ: WPL 2024: ಅಂಪೈರ್‌ ಎಡವಟ್ಟು – ಫಿಕ್ಸಿಂಗ್‌ ಹಣೆಪಟ್ಟಿ ಕಟ್ಟಿಕೊಂಡ ಮುಂಬೈ ಇಂಡಿಯನ್ಸ್‌

    ಗೇಲ್‌ ಸಾರ್ವಕಾಲಿಕ ದಾಖಲೆ:
    2013ರ ಐಪಿಎಲ್‌ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಪುಣೆ ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ 263 ರನ್‌ ಬಾರಿಸಿತ್ತು. ಇದೇ ಪಂದ್ಯದಲ್ಲಿ ಮಾಜಿ ಕ್ರಿಕೆಟಿಗ ಕ್ರಿಸ್‌ ಗೇಲ್‌ ಕೇವಲ 66 ಎಸೆತಗಳಲ್ಲಿ 175 ರನ್‌ ಬಾರಿಸಿದ್ದರು. 265.15 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದ ಗೇಲ್‌ ಬರೋಬ್ಬರಿ 17 ಸಿಕ್ಸರ್‌, 13 ಬೌಂಡರಿಗಳನ್ನ ಚಚ್ಚಿದ್ದರು. ಇದು ಸಹ ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಇದನ್ನೂ ಓದಿ: RCB – CSK ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ – ಸೋಮವಾರದಿಂದಲೇ ಟಿಕೆಟ್‌ ಮಾರಾಟ ಶುರು, ದರ ಎಷ್ಟು?

    ಸರಣಿ ಶ್ರೇಷ್ಠ ಕೊಹ್ಲಿಯ ಸಾರ್ವಕಾಲಿಕ ದಾಖಲೆ ಏನು?
    ಇಂಡಿಯನ್‌ ಪ್ರೀಮಿಯರ್‌ ಲೀಗ್‌ 16 ಆವೃತ್ತಿಗಳಿಂದಲೂ ಆರ್‌ಸಿಬಿ ತಂಡದಲ್ಲೇ ಇರುವ ವಿರಾಟ್‌ ಕೊಹ್ಲಿ (Virat Kohli) ಸರಣಿಯೊಂದರಲ್ಲಿ ಅತಿಹೆಚ್ಚು ರನ್‌ ಗಳಿಸಿರುವ ಟಾಪ್‌ ದಾಖಲೆಯನ್ನು ಸಾರ್ವಕಾಲಿಕವಾಗಿ ಉಳಿಸಿಕೊಂಡಿದ್ದಾರೆ. 2016ರ ಆವೃತ್ತಿಯಲ್ಲಿ ವಿರಾಟ್‌ ಕೊಹ್ಲಿ 16 ಪಂದ್ಯಗಳಲ್ಲಿ 973 ರನ್‌ ಗಳಿಸಿದ್ದರು. 152.03 ಸ್ಟ್ರೈಕ್‌ರೇಟ್‌ನಲ್ಲಿ ಬರೋಬ್ಬರಿ 4 ಶತಕ‌, 7 ಅರ್ಧಶತಕ ಸೇರಿದಂತೆ 973 ರನ್‌ ಬಾರಿಸಿದ್ದರು. ಇದರಲ್ಲಿ 38 ಸಿಕ್ಸರ್‌, 83 ಬೌಂಡರಿಗಳೂ ಸೇರಿದ್ದವು. ಇದೂ ಐಪಿಎಲ್‌ ಇತಿಹಾಸದ ಸಾರ್ವಕಾಲಿಕ ದಾಖಲೆಯಾಗಿದೆ. ಕೊಹ್ಲಿ ಹೊರತುಪಡಿಸಿದರೆ, 890 ರನ್‌ ಗಳಿಸಿರುವ ಶುಭಮನ್‌ ಗಿಲ್‌, 863 ರನ್‌ ಗಳಿಸಿರುವ ಜೋಶ್‌ ಬಟ್ಲರ್‌, 848 ರನ್‌ ಗಳಿಸಿರುವ ಡೇವಿಡ್‌ ವಾರ್ನರ್‌ ಹಾಗೂ 735 ರನ್‌ ಗಳಿಸಿರುವ ಕೇನ್‌ ವಿಲಿಯಮ್ಸನ್‌ ಕ್ರಮವಾಗಿ 2,3,4,5ನೇ ಸ್ಥಾನಗಳಲ್ಲಿ ಇದ್ದಾರೆ. ಇದನ್ನೂ ಓದಿ: ಐಪಿಎಲ್‌ ಸಂಪೂರ್ಣ ಲೀಗ್‌ ಭಾರತದಲ್ಲೇ ನಡೆಯುತ್ತೆ – ಜಯ್‌ ಶಾ ಸ್ಪಷ್ಟನೆ

    ಟಾಪ್‌ ರನ್ನರ್‌ನಲ್ಲೂ ಕೊಹ್ಲಿಯೇ ಕಿಂಗ್‌:
    ಐಪಿಎಲ್‌ ಕ್ರಿಕೆಟ್‌ ಇತಿಹಾಸದಲ್ಲಿ ಅತಿಹೆಚ್ಚು ರನ್‌ ಗಳಿಸಿರುವ ಟಾಪ್‌ ರನ್ನರ್‌ಗಳ ಪೈಕಿ ಕೊಹ್ಲಿಯೇ ನಂ.1 ಆಗಿದ್ದಾರೆ. ಆರ್‌ಸಿಬಿ ಪರ 237 ಪಂದ್ಯ, 229 ಇನ್ನಿಂಗ್ಸ್‌ಗಳನ್ನಾಡಿರುವ ಕೊಹ್ಲಿ 7,263 ರನ್‌ ಗಳಿಸಿದ್ದಾರೆ. ವೈಯಕ್ತಿಕ ಗರಿಷ್ಠ ಸ್ಕೋರ್‌ 113 ಆಗಿದ್ದು, 7 ಶತಕಗಳು ಹಾಗೂ 50 ಅರ್ಧಶತಕಗಳು, 234 ಸಿಕ್ಸರ್‌, 643 ಬೌಂಡರಿಗಳೂ ಇದರಲ್ಲಿ ಸೇರಿವೆ. ಅಲ್ಲದೇ ಐಪಿಎಲ್‌ ಇತಿಹಾಸದಲ್ಲೇ ಅತಿಹೆಚ್ಚು ಶತಕ ಸಿಡಿಸಿದ ಖ್ಯಾತಿಯೂ ಕೊಹ್ಲಿ ಹೆಸರಿನಲ್ಲಿಯೇ ಇದೆ. ಇದರ ಖ್ಯಾತಿಯೂ ಆರ್‌ಸಿಬಿ ತಂಡಕ್ಕೆ ಸಲ್ಲುತ್ತದೆ. 6,617 ರನ್‌ ಗಳಿಸಿರುವ ಶಿಖರ್‌ ಧವನ್‌, 6,397 ರನ್‌ ಗಳಿಸಿರುವ ಡೇವಿಡ್‌ ವಾರ್ನರ್‌, 6,211 ರನ್‌ ಗಳಿಸಿರುವ ರೋಹಿತ್‌ ಶರ್ಮಾ, 5,528 ರನ್‌ ಗಳಿಸಿರುವ ಸುರೇಶ್‌ ರೈನಾ ಕ್ರಮವಾಗಿ 2,3,4,5ನೇ ಸ್ಥಾನಗಳಲ್ಲಿ ಇದ್ದಾರೆ.

  • 10,000 ರನ್‌ ಪೂರೈಸಿ ದಾಖಲೆ; ಬಾಬಾರ್‌ ಸ್ಫೋಟಕ ಆಟಕ್ಕೆ ಗೇಲ್‌, ವಿರಾಟ್‌ ಕೊಹ್ಲಿ ದಾಖಲೆ ಉಡೀಸ್‌

    10,000 ರನ್‌ ಪೂರೈಸಿ ದಾಖಲೆ; ಬಾಬಾರ್‌ ಸ್ಫೋಟಕ ಆಟಕ್ಕೆ ಗೇಲ್‌, ವಿರಾಟ್‌ ಕೊಹ್ಲಿ ದಾಖಲೆ ಉಡೀಸ್‌

    ಇಸ್ಲಾಮಾಬಾದ್‌: ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಫ್ಲಾಪ್‌ ಪ್ರದರ್ಶನ ನೀಡಿದ್ದ ಪಾಕ್‌ ತಂಡದ ಮಾಜಿ ನಾಯಕ ಬಾಬರ್‌ ಆಜಂ (Babar Azam)ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಭರ್ಜರಿ ಫಾರ್ಮ್‌ ಕಂಡುಕೊಂಡಿದ್ದಾರೆ.

    ಈ ಲೀಗ್‌ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 10 ಸಾವಿರ ರನ್‌ ಪೂರೈಸಿದ ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ಕ್ರಿಸ್ ಗೇಲ್ (Chris Gayle) ಹಾಗೂ ವಿರಾಟ್‌ ಕೊಹ್ಲಿ (Virat Kohli) ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ICC Test Ranking: 14 ಸ್ಥಾನ ಜಿಗಿದು ಟಾಪ್‌-20ಯಲ್ಲಿ ಸ್ಥಾನ ಪಡೆದ ಯಶಸ್ವಿ!

    ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕ ಬಾಬರ್ ಆಜಂ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಟಿ20 ಸ್ವರೋಪದಲ್ಲಿ ಅತಿ ವೇಗವಾಗಿ 10 ಸಾವಿರ ರನ್‌ ಪೂರೈಸಿದ ದಾಖಲೆ ಮಾಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪೇಶಾವರ್ ಝಲ್ಮಿ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಬಾಬರ್ 6 ರನ್ ಗಳಿಸುತ್ತಿದ್ದಂತೆ 271 ಪಂದಗಳಲ್ಲೇ 10,000 ರನ್ ಪೂರ್ಣಗೊಳಿಸಿದ್ದಾರೆ.

    CHRIS GAYLE

    2017ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆರಂಭಿಕ ಆಟಗಾರ ಕ್ರಿಸ್ ಗೇಲ್ ರಾಜ್ ಕೋಟ್ ಅಂಗಳದಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ಧ ತಮ್ಮ 285ನೇ ಟಿ20 ಇನಿಂಗ್ಸ್ ನಲ್ಲಿ ಅತಿ ವೇಗದ 10,000 ಚುಟುಕು ರನ್ ಪೂರೈಸಿ ಮಹತ್ತರ ದಾಖಲೆ ಸೃಷ್ಟಿಸಿದ್ದರು. ಈಗ ಆ ದಾಖಲೆ ಬಾಬರ್ ಹಿಂದಿಕ್ಕಿದ್ದಾರೆ. ಅಲ್ಲದೇ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ 3,000 ರನ್ ಪೂರೈಸಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಪಂದ್ಯಕ್ಕೆ ಕೆ.ಎಲ್‌ ರಾಹುಲ್‌ ಕಂಬ್ಯಾಕ್‌ – ಸುಳಿವು ಕೊಟ್ಟ ರೋಹಿತ್‌

    ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 10,000 ರನ್ ಪೂರೈಸಿದ ಸ್ಟಾರ್ಸ್‌:
    * 271 ಪಂದ್ಯ- ಬಾಬರ್ ಆಜಂ- ಪಾಕಿಸ್ತಾನ
    * 285 ಪಂದ್ಯ- ಕ್ರಿಸ್ ಗೇಲ್- ವೆಸ್ಟ್ ಇಂಡೀಸ್
    * 299 ಪಂದ್ಯ- ವಿರಾಟ್ ಕೊಹ್ಲಿ- ಭಾರತ
    * 303 ಪಂದ್ಯ- ಡೇವಿಡ್ ವಾರ್ನರ್- ಆಸ್ಟ್ರೇಲಿಯಾ
    * 327 ಪಂದ್ಯ- ಆರನ್‌ ಫಿಂಚ್- ಆಸ್ಟ್ರೇಲಿಯಾ
    * 350 ಪಂದ್ಯ- ಜೋಸ್‌ ಬಟ್ಲರ್- ಇಂಗ್ಲೆಂಡ್‌

  • World Cup Semifinal: ಸಿಕ್ಸರ್‌ನಿಂದಲೇ ವಿಶ್ವದಾಖಲೆ ನಿರ್ಮಿಸಿದ ಹಿಟ್‌ಮ್ಯಾನ್‌

    World Cup Semifinal: ಸಿಕ್ಸರ್‌ನಿಂದಲೇ ವಿಶ್ವದಾಖಲೆ ನಿರ್ಮಿಸಿದ ಹಿಟ್‌ಮ್ಯಾನ್‌

    ಮುಂಬೈ: ನ್ಯೂಜಿಲೆಂಡ್‌ (New Zealand) ವಿರುದ್ಧ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ (Team India) ನಾಯಕ ರೋಹಿತ್‌ ಶರ್ಮಾ (Rohit Sharma) ಭರ್ಜರಿ ಸಿಕ್ಸರ್‌ ಬಾರಿಸುವ ಮೂಲಕ ವಿಶ್ವದಾಖಲೆಯೊಂದನ್ನ ನಿರ್ಮಿಸಿದ್ದಾರೆ. ವಿಶ್ವಕಪ್‌ ಟೂರ್ನಿಯಲ್ಲೇ ಅತಿಹೆಚ್ಚು ಸಿಕ್ಸರ್‌ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಟೀಂ ಇಂಡಿಯಾ ಫೀಲ್ಡಿಂಗ್‌ ಮಾಡುವ ಅವಕಾಶವನ್ನು ಕಿವೀಸ್‌ಗೆ ಬಿಟ್ಟುಕೊಟ್ಟಿತು. ಆರಂಭಿಕನಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಸ್ಫೋಟಕ ಇನ್ನಿಂಗ್ಸ್‌ಗೆ ಮುಂದಾದರು. ಈ ವೇಳೆ ಟ್ರೆಂಟ್‌ ಬೌಲ್ಟ್‌ ಅವರ ಓವರ್‌ನಲ್ಲಿ ಪಂದ್ಯದ 3ನೇ ಸಿಕ್ಸರ್‌ ಸಿಡಿಸುವ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ 50ನೇ ಸಿಕ್ಸರ್‌ ದಾಖಲಿಸಿದರು. ಇದರೊಂದಿಗೆ ವಿಶ್ವಕಪ್‌ನಲ್ಲಿ 49 ಸಿಕ್ಸರ್‌ ಸಿಡಿಸಿದ್ದ ಕ್ರಿಸ್‌ಗೇಲ್‌ (Chris Gayle) ದಾಖಲೆಯನ್ನ ನುಚ್ಚುನೂರು ಮಾಡಿದರು.

    ಹಿಟ್‌ಮ್ಯಾನ್‌ ನಂ.1: ವಿಶ್ವಕಪ್‌ ಟೂರ್ನಿಯಲ್ಲಿ 49 ಸಿಕ್ಸರ್‌ ಸಿಡಿಸಿದ್ದ ಕ್ರಿಸ್‌ಗೇಲ್‌ 2ನೇ ಸ್ಥಾನದಲ್ಲಿದ್ದರೆ, 43 ಸಿಕ್ಸರ್ ಬಾರಿಸಿದ್ದ ಗ್ಲೇನ್‌ ಮ್ಯಾಕ್ಸ್‌ವೆಲ್‌ 3ನೇ ಸ್ಥಾನ, ತಲಾ 37 ಸಿಕ್ಸರ್‌ ಬಾರಿಸಿದ್ದ ಎಬಿಡಿ ವಿಲಿಯರ್ಸ್‌ ಮತ್ತು ಡೇವಿಡ್‌ ವಾರ್ನರ್‌ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ಒಟ್ಟು 4 ಸಿಕ್ಸರ್‌ ಬಾರಿಸಿರುವ ರೋಹಿತ್‌ ಶರ್ಮಾ ಒಟ್ಟು 51 ಸಿಕ್ಸರ್‌ಗಳೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: World Cup: ಈ ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್‌ ರೋಹಿತ್‌ ಶರ್ಮಾ

    ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾಗಿದ್ದ ರೋಹಿತ್‌ ಶರ್ಮಾ ಒಟ್ಟು 29 ಎಸೆತ ಎದುರಿಸಿ ತಲಾ 4 ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 47 ರನ್​ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಲಾಂಗ್​ ಆನ್​ನಲ್ಲಿ ನಾಯಕ ಕೇನ್​ ವಿಲಿಯಮ್ಸನ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿದರು. ಕೇವಲ 3 ರನ್​ ಅಂತರದಿಂದ ಅರ್ಧಶತಕ ವಂಚಿತರಾದರು. ಇದನ್ನೂ ಓದಿ: World Cup 2023: ಹಿಟ್‌ಮ್ಯಾನ್‌ ಸಿಕ್ಸರ್‌ ಹೊಡೆತಕ್ಕೆ ಲೆಜೆಂಡ್‌ ABD ದಾಖಲೆ ಪುಡಿಪುಡಿ

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ನೆದರ್ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಅವರು ಕ್ಯಾಲೆಂಡರ್​ ವರ್ಷವೊಂದರಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ದಾಖಲೆ ಬರೆದಿದ್ದರು. ಈ ಮೂಲಕ ಎಬಿಡಿ ದಾಖಲೆ ಮುರಿದ್ದರು. ಅದೇ ಪಂದ್ಯದಲ್ಲಿ ಆರಂಭಿಕನಾಗಿಯೇ 14 ಸಾವಿರ ಅಂತಾರಾಷ್ಟ್ರೀಯ ರನ್‌ ಪೂರೈಸಿದ ಸಾಧನೆಯನ್ನೂ ಮಾಡಿದ್ದರು. ಇದಕ್ಕೂ ಮುನ್ನ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ 18,000 ಅಂತಾರಾಷ್ಟ್ರೀಯ ರನ್ ಪೂರೈಸಿದ ದಾಖಲೆ ಬರೆದಿದ್ದರು. ಇದನ್ನೂ ಓದಿ: World Cup 2023: ಭಾರತಕ್ಕೆ ಗೆಲುವಿನ ʻಶ್ರೇಯಸ್ಸುʼ – ಡಚ್ಚರ ವಿರುದ್ಧ 160 ರನ್‌ಗಳ ಭರ್ಜರಿ ಜಯ..!