Tag: Chopper Crash

  • ಉತ್ತರಾಖಂಡ್‌ ಹೆಲಿಕಾಪ್ಟರ್‌ ಪತನ – 15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪೈಲಟ್‌ಗಿತ್ತು ಅಪಾರ ಅನುಭವ

    ಉತ್ತರಾಖಂಡ್‌ ಹೆಲಿಕಾಪ್ಟರ್‌ ಪತನ – 15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪೈಲಟ್‌ಗಿತ್ತು ಅಪಾರ ಅನುಭವ

    ಡೆಹ್ರಾಡೂನ್‌: ಭಾನುವಾರ ಮುಂಜಾನೆ ಉತ್ತರಾಖಂಡದ (Uttarakhand) ಗೌರಿಕುಂಡ್ ಬಳಿ ಪತನಗೊಂಡ ಹೆಲಿಕಾಪ್ಟರ್‌ನ (Chopper Crash) ಪೈಲಟ್‌ ಕ್ಯಾಪ್ಟನ್‌ ರಾಜ್‌ವೀರ್ ಸಿಂಗ್ ಚೌಹಾಣ್ (37) (Rajveer Singh Chauhan ) ಭಾರತೀಯ ವಾಯು ಸೇನೆಯಲ್ಲಿ (Indian Air Force) 15ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆಸಲ್ಲಿಸಿದ್ದರು. ಅವರಿಗೆ ವಿವಿಧ ಭೂ ಪ್ರದೇಶಗಳ ಮೇಲೆ ಹೆಲಿಕಾಪ್ಟರ್ ಹಾರಾಟ ನಡೆಸಿದ್ದ ಅನುಭವ ಇತ್ತು ಎಂದು ತಿಳಿದು ಬಂದಿದೆ.

    ರಾಜಾವೀರ್‌ ಸಿಂಗ್‌ ಅವರ ತಂದೆ ಗೋವಿಂದ್ ಸಿಂಗ್ ಮಗನ ಬಗ್ಗೆ ಮಾತನಾಡಿ, ಹೆಲಿಕಾಪ್ಟರ್‌ ದುರಂತದ ಮಾಹಿತಿ ಅವರ ಸಹೋದ್ಯೋಗಿಗಳಿಂದ ಸಿಕ್ಕಿದೆ. ನನ್ನ ಮಗ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ. ನನ್ನ ಸೊಸೆ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಅವರಿಗೆ ನಾಲ್ಕು ತಿಂಗಳ ಅವಳಿ ಮಕ್ಕಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ – ಪೈಲೆಟ್, ಮಗು ಸೇರಿ 6 ಮಂದಿ ಸಜೀವ ದಹನ

    ಜೈಪುರದ ಶಾಸ್ತ್ರಿ ನಗರದ ನಿವಾಸಿಯಾಗಿದ್ದ ರಾಜಾವೀರ್‌ ಸಿಂಗ್‌, ಅಕ್ಟೋಬರ್ 2024 ರಿಂದ ಆರ್ಯನ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್‌ನಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಿಗ್ಗೆ ಉತ್ತರಾಖಂಡದ ಬಳಿ ಅಪಘಾತಕ್ಕೀಡಾದ ಬೆಲ್ 407 ಹೆಲಿಕಾಪ್ಟರ್‌ನ ಪೈಲಟ್ ಆಗಿದ್ದರು. ಈ ಅಪಘಾತದಲ್ಲಿ ಅವರನ್ನು ಸೇರಿದಂತೆ 7 ಜನ ಸಾವನ್ನಪ್ಪಿದ್ದರು.

    ಸಿಂಗ್‌ ಅವರು, ವೈಮಾನಿಕ ಕಾರ್ಯಾಚರಣೆಗಳ ಮೇಲ್ವಿಚಾರಣೆ, ವಿವಿಧ ರೀತಿಯ ಹೆಲಿಕಾಪ್ಟರ್‌ಗಳ ಹಾರಾಟ ಮತ್ತು ಅವುಗಳ ನಿರ್ವಹಣೆಯಲ್ಲಿ ತರಬೇತಿ ಪಡೆದಿದ್ದರು.

    ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಇತರ ನಾಯಕರು ಏಳು ಜನರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಅವಶೇಷಗಳಡಿ ಸೂಟ್‌ಕೇಸ್‌ನಲ್ಲಿದ್ದ ಹಣ ಪತ್ತೆ

  • ಉತ್ತರಾಖಂಡ | ಭಾಗೀರಥಿ ನದಿ ಬಳಿ ಖಾಸಗಿ ಹೆಲಿಕಾಪ್ಟರ್ ಪತನ – ಐವರು ದುರ್ಮರಣ

    ಉತ್ತರಾಖಂಡ | ಭಾಗೀರಥಿ ನದಿ ಬಳಿ ಖಾಸಗಿ ಹೆಲಿಕಾಪ್ಟರ್ ಪತನ – ಐವರು ದುರ್ಮರಣ

    ಡೆಹ್ರಾಡೂನ್‌: ಗಂಗಾ ನದಿಯ ಮೂಲ ತೊರೆಗಳಲ್ಲಿ ಒಂದಾದ ಗಂಗೋತ್ರಿ ಕಡೆಗೆ ಹೊರಟಿದ್ದ ಖಾಸಗಿ ಹೆಲಿಕಾಪ್ಟರ್‌ ಪತನಗೊಂಡು (Private Chopper Crash) ಐವರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ (Uttarakhand) ಉತ್ತರಕಾಶಿ ಜಿಲ್ಲೆಯಲ್ಲಿ ನಡೆದಿದೆ.

    ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು, ಸೇನಾ ಸಿಬ್ಬಂದಿ, ವಿಪತ್ತು ನಿರ್ವಹಣಾ QRT ತಂಡ, 108 ಆಂಬ್ಯುಲೆನ್ಸ್, ಭಟ್ವಾರಿಯ ಬಿಡಿಒ, ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: ಉಗ್ರರು ಅಮಾಯಕರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಆಗಲ್ಲ – ಆಪರೇಷನ್‌ ಸಿಂಧೂರ ಬೆಂಬಲಿಸಿದ ಇಸ್ರೇಲ್‌

    ಪ್ರಾಥಮಿಕ ವರದಿಗಳ ಪ್ರಕಾರ, ಖಾಸಗಿ ಹೆಲಿಕಾಪ್ಟರ್‌ನಲ್ಲಿ 7 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಇಬ್ಬರು ಗಾಯಗೊಂಡಿದ್ದು, ಉಳಿದವರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ (Hospital) ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಗರ್ವಾಲ್ ವಿಭಾಗೀಯ ಆಯುಕ್ತ ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾದಿಂದ ಸಶಸ್ತ್ರ ಪಡೆ ಸಿಬ್ಬಂದಿಗೆ ಟಿಕೆಟ್‌ ಉಚಿತ ಮರುಹೊಂದಿಕೆ ಆಫರ್‌

  • CDS ಬಿಪಿನ್‌ ರಾವತ್‌ ಇದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

    CDS ಬಿಪಿನ್‌ ರಾವತ್‌ ಇದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

    ನವದೆಹಲಿ: ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ (ವಿಮಾನ ಸಿಬ್ಬಂದಿ) ಕಾರಣ ಎಂದು ರಕ್ಷಣಾ ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

    ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರು 2021ರ ಡಿಸೆಂಬರ್ 8 ರಂದು ಪ್ರಯಾಣಿಸುತ್ತಿದ್ದ Mi-17 V5 ಹೆಲಿಕಾಪ್ಟರ್ ಪತನಗೊಂಡಿತ್ತು. ಈ ಅಪಘಾತದಲ್ಲಿ ಜನರಲ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಒಟ್ಟು 12 ಜನರು ಸಾವನ್ನಪ್ಪಿದರು. ತಮಿಳುನಾಡಿನ ಕೂನೂರು ಬಳಿಯ ಪರ್ವತಗಳಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು.

    ಮೂರು ವರ್ಷಗಳ ನಂತರ, ನಿನ್ನೆ ಹಿಂದಿನ ದಿನ ಲೋಕಸಭೆಯಲ್ಲಿ ಮಂಡಿಸಲಾದ ರಕ್ಷಣಾ ಸ್ಥಾಯಿ ಸಮಿತಿಯ ವರದಿಯು Mi-17 ಅಪಘಾತವು ‘ಮಾನವ ದೋಷ (ಏರ್‌ಕ್ರೂ)’ ಕಾರಣದಿಂದಾಗಿ ಸಂಭವಿಸಿದೆ ಎಂದು ಹೇಳಿದೆ.

    2017 ರಿಂದ 2022 ರ ವರೆಗೆ ಭಾರತೀಯ ವಾಯು ಸೇನೆಯಲ್ಲಿ ಒಟ್ಟು 34 ಅಪಘಾತಗಳು ಸಂಭವಿಸಿವೆ ಎಂದು 18 ನೇ ಲೋಕಸಭೆಯ ಸ್ಥಾಯಿ ಸಮಿತಿ ವರದಿ ಹೇಳಿದೆ. 2021-2022 ಅವಧಿಯಲ್ಲಿ ಒಟ್ಟು ಒಂಬತ್ತು ಅಪಘಾತಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ.

  • ಬಿಪಿನ್‌ ರಾವತ್‌ ಇದ್ದ ಹೆಲಿಕಾಪ್ಟರ್‌ ದುರಂತಕ್ಕೆ ಪೈಲಟ್‌ ದೋಷವೇ ಕಾರಣ

    ಬಿಪಿನ್‌ ರಾವತ್‌ ಇದ್ದ ಹೆಲಿಕಾಪ್ಟರ್‌ ದುರಂತಕ್ಕೆ ಪೈಲಟ್‌ ದೋಷವೇ ಕಾರಣ

    ನವದೆಹಲಿ: ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್‌ ಬಿಪಿನ್‌ ರಾವತ್‌ ಅವರಿದ್ದ ಹೆಲಿಕಾಪ್ಟರ್‌ ದುರಂತಕ್ಕೆ ಪೈಲಟ್‌ ದೋಷವೇ ಕಾರಣ ಎಂದು ಮೂಲಗಳು ತಿಳಿಸಿವೆ.

    ಕಳೆದ ತಿಂಗಳು ತಮಿಳುನಾಡಿನ ಕೂನೂರು ಬಳಿ ರಷ್ಯಾ ಮೂಲದ ಎಂಐ-17ವಿ5 ಹೆಲಿಕಾಪ್ಟರ್‌ ಪತನಗೊಂಡಿತ್ತು. ಸೇನಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಸಿಡಿಎಸ್‌‌ ಬಿಪಿನ್‌ ರಾವತ್‌, ಪತ್ನಿ ಮಧುಲಿಕಾ ಸೇರಿದಂತೆ 12 ಮಂದಿ ದುರಂತದಲ್ಲಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಮೋದಿಗೆ ಭದ್ರತಾ ಲೋಪ – ಪಂಜಾಬ್ ತನ್ನ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ: ಬೊಮ್ಮಾಯಿ

    ಪೈಲಟ್‌ನ ಸಂಪೂರ್ಣ ನಿಯಂತ್ರಣದಲ್ಲಿರುವಾಗ ಹೆಲಿಕಾಪ್ಟರ್‌ ಅಜಾಗರೂಕತೆಯಿಂದ ಭೂಪ್ರದೇಶ ಅಥವಾ ನೀರು ಅಡಚಣೆಯಿಂದ ಈ ದುರಂತ ಸಂಭವಿಸಿದೆ ಎಂದು ಇಂಟರ್‌ನ್ಯಾಷನಲ್‌ ಏರ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್‌ ತಿಳಿಸಿದೆ.

    ಮೋಡ ಕವಿದ ವಾತಾವರಣದಲ್ಲಿ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್‌ ಅಪಘಾತದ ಸಮಯದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಆಗಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಲಾರಿ, ಬಸ್ ಮುಖಾಮುಖಿ ಡಿಕ್ಕಿ- 6 ಮಂದಿ ಸ್ಥಳದಲ್ಲೇ ಸಾವು

    ಹೆಲಿಕಾಪ್ಟರ್‌ ದುರಂತಕ್ಕೆ ಸಂಬಂಧಿಸಿದಂತೆ ದೇಶದ ಉನ್ನತ ಹೆಲಿಕಾಪ್ಟರ್‌ ಪೈಲಟ್‌ ಏರ್‌ ಮಾರ್ಷಲ್‌ ಮನ್ವೇಂದ್ರ ಸಿಂಗ್‌ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು.

  • ರಾವತ್ ಇದ್ದ ಹೆಲಿಕಾಪ್ಟರ್ ಪತನದ ತನಿಖಾ ವರದಿ ಮುಂದಿನ ವಾರ ಸಲ್ಲಿಕೆ?

    ರಾವತ್ ಇದ್ದ ಹೆಲಿಕಾಪ್ಟರ್ ಪತನದ ತನಿಖಾ ವರದಿ ಮುಂದಿನ ವಾರ ಸಲ್ಲಿಕೆ?

    ನವದೆಹಲಿ: ಇತ್ತೀಚೆಗಷ್ಟೇ ಹುತಾತ್ಮರಾದ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಪತನದ ತನಿಖಾ ವರದಿಯನ್ನು ಮುಂದಿನ ವಾರ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ.

    ಡಿ.8ರಂದು ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 13 ಮಂದಿ ಹುತಾತ್ಮರಾಗಿದ್ದರು. ರಾವತ್ ಅವರು ಕೊಯಮತ್ತೂರು ಬಳಿಯ ಸೂಲೂರಿನಿಂದ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸ್ಟಾಫ್ ಕಾಲೇಜಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.

    ಈ ದುರಂತಕ್ಕೆ ಕಾರಣವೇನು ಎಂಬ ಪ್ರಶ್ನೆ ಹಲವರಲ್ಲಿ ಕಾಡಿತ್ತು. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿಯಲು ರಕ್ಷಣಾ ಸಚಿವಾಲಯ ತ್ರಿಸೇವಾ ತನಿಖೆಗೆ ಆದೇಶಿಸಿತ್ತು. ಕೂನೂರಿನಲ್ಲಿ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆ ಸೇನಾ ಪಡೆಗಳ 3 ವಿಭಾಗಗಳ ತಜ್ಞರನ್ನು ಒಳಗೊಂಡ ಸಮಿತಿ ತನಿಖೆ ನಡೆಸಿತ್ತು.

    ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಈ ತಂಡದ ನೇತೃತ್ವ ವಹಿಸಿದ್ದರು. ಅವರು ಐಎಎಫ್‌ನ ತರಬೇತಿ ಕಮಾಂಡರ್‌ನ ಕಮಾಂಡರ್ ಮತ್ತು ಸ್ವತಃ ಚಾಪರ್ ಪೈಲಟ್ ಆಗಿದ್ದಾರೆ. ಅವರ ಜೊತೆ ಭಾರತೀಯ ಸೇನೆ ಮತ್ತು ನೌಕಾಪಡೆಯ ಇಬ್ಬರು ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳು ತನಿಖೆಯಲ್ಲಿ ಸಹಾಯಕರಾಗಿದ್ದಾರೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

    ಹೆಲಿಕಾಪ್ಟರ್ ಪತನಕ್ಕೆ ಲ್ಯಾಂಡಿಂಗ್ ಆಗುವ ವೇಳೆ ಸಿಬ್ಬಂದಿ ದಿಗ್ಭ್ರಮೆಗೆ ಸಿಲುಕಿದ್ದು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಳ್ಳಲಾಗಿದೆ. ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ನಲ್ಲಿ ಕಾಕ್‌ಪಿಟ್ ಧ್ವನಿ ರೆಕಾರ್ಡ್ ಮತ್ತು ಫ್ಲೈಟ್ ಡಾಟಾ ರೆಕಾರ್ಡ್ ಗಳನ್ನೆಲ್ಲಾ ಪರಿಶೀಲಿಸಲಾಗಿದೆ. ಇದನ್ನೂ ಓದಿ: New Year – ಪಾಕಿಸ್ತಾನ, ಚೀನಾ ಸೈನಿಕರಿಗೆ ಸಿಹಿ ಹಂಚಿ ವಿಶ್‌ ಮಾಡಿದ ಭಾರತೀಯ ಯೋಧರು

    ತನಿಖೆಯ ಎಲ್ಲಾ ವರದಿ ಅಂತಿಮ ಘಟ್ಟದಲ್ಲಿದೆ. ಹೀಗಾಗಿ ಮುಂದಿನ ವಾರ ಎಲ್ಲಾ ಅಂಶಗಳನ್ನು ಒಳಗೊಂಡ ಬೃಹತ್ ಗಾತ್ರದ ತನಿಖಾ ವರದಿ ವಾಯುಪಡೆ ಮುಖ್ಯ ಕಚೇರಿಗೆ ಸಲ್ಲಿಕೆ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

  • ಅಪ್ಪನಂತೆ ನಾನೂ ವಾಯುಪಡೆ ಸೇರ್ತೀನಿ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ವಿಂಗ್ ಕಮಾಂಡರ್ ಪುತ್ರಿ ಆಸೆ

    ಅಪ್ಪನಂತೆ ನಾನೂ ವಾಯುಪಡೆ ಸೇರ್ತೀನಿ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ವಿಂಗ್ ಕಮಾಂಡರ್ ಪುತ್ರಿ ಆಸೆ

    ಲಕ್ನೋ: ತಮಿಳುನಾಡಿನ ಕೂನೂರು ಬಳಿಯ ಅರಣ್ಯ ಪ್ರದೇಶದಲ್ಲಿ ಈಚೆಗೆ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಅವರ ಪುತ್ರಿ ಈಗ ತಂದೆಯ ಹಾದಿಯಲ್ಲೇ ನಡೆಯುವ ಆಶಯ ವ್ಯಕ್ತಪಡಿಸಿದ್ದಾರೆ. ಚೌಹಾಣ್ ಅವರ 11 ವರ್ಷದ ಪುತ್ರಿ, ತಂದೆಯಂತೆಯೇ ಭಾರತೀಯ ವಾಯುಪಡೆ ಪೈಲಟ್ ಆಗುತ್ತೇನೆಂದು ಹೇಳಿಕೊಂಡಿದ್ದಾರೆ.

    ಹುತಾತ್ಮರಾದ ತಂದೆಗೆ ಆರಾಧ್ಯ ತನ್ನ ಸಹೋದರ ಅವಿರಾಜ್ ಜೊತೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 7ನೇ ತರಗತಿ ಓದುತ್ತಿರುವ ಆರಾಧ್ಯಗೆ ತನ್ನ ತಂದೆಯೇ ಹೀರೋ. ಹೀಗಾಗಿ ಅವರಂತೆಯೇ ಪೈಲಟ್ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಪ್ರಧಾನಿಗೆ ಭಗವದ್ಗೀತೆ ಗಿಫ್ಟ್ ಕೊಟ್ಟ ಐರಾವತ ನಟಿ

    ನೀನು ಅಧ್ಯಯನದ ಕಡೆ ಹೆಚ್ಚು ಗಮನ ಕೇಂದ್ರೀಕರಿಸು, ಅಂಕಗಳಿಗಾಗಿ ಓದಬೇಡ. ನೀನು ಚೆನ್ನಾಗಿ ಅಧ್ಯಯನ ಮಾಡಿದ ಅಂಕಗಳು ತಾನಾಗಿಯೇ ಬರುತ್ತವೆ ಎಂದು ತಂದೆ ನನಗೆ ಸಲಹೆ ನೀಡುತ್ತಿದ್ದರು ಎಂದು ಆರಾಧ್ಯ ನೆನಪಿಸಿಕೊಂಡಿದ್ದಾರೆ.

    ಪೃಥ್ವಿ ಸಿಂಗ್ ಚೌಹಾಣ್ ಅವರು 2000ರಲ್ಲಿ ವಾಯುಪಡೆ ಸೇವೆಗೆ ಸೇರ್ಪಡೆಯಾಗಿದ್ದರು. ನಂತರ 2006ರಲ್ಲಿ ತಮ್ಮ ಕುಟುಂಬವನ್ನು ಮಧ್ಯಪ್ರದೇಶದ ಗ್ವಾಲಿಯರ್‍ನಿಂದ ಆಗ್ರಾಕ್ಕೆ ಸ್ಥಳಾಂತರಿಸಿದ್ದರು. ಇದನ್ನೂ ಓದಿ: ಅಮೇರಿಕಾದಲ್ಲಿ ಭೀಕರ ಚಂಡಮಾರುತ – 80ಕ್ಕೂ ಅಧಿಕ ಜನ ಸಾವು

    ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಪೃಥ್ವಿ ಅವರು ಸಹ ಮೃತಪಟ್ಟರು.

  • ಸಿಡಿಎಸ್ ರಾವತ್ ಸೇರಿ 13 ಮಂದಿ ಹುತಾತ್ಮ – ಬೆಳಗ್ಗೆಯಿಂದ ಏನೇನಾಯ್ತು?

    ಸಿಡಿಎಸ್ ರಾವತ್ ಸೇರಿ 13 ಮಂದಿ ಹುತಾತ್ಮ – ಬೆಳಗ್ಗೆಯಿಂದ ಏನೇನಾಯ್ತು?

    – ತಮಿಳುನಾಡಿನ ಊಟಿ ಬಳಿ ಘನಘೋರ ದುರಂತ
    – ಭಾರತೀಯ ಸೇನೆಯ ಬಲಿಷ್ಠ ನಾಯಕ ದುರ್ಮರಣ

    ಚೆನ್ನೈ/ನವದೆಹಲಿ: ತಮಿಳುನಾಡಿನಲ್ಲಿ ಘನಘೋರ ಅನಾಹುತ ಸಂಭವಿಸಿದ್ದು ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ರಕ್ಷಣಾ ಪಡೆಗಳ ಮುಖ್ಯಸ್ಥರು ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿದ್ದಾರೆ.

    ಭಾರತದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ನೀಲಗಿರಿ ಅರಣ್ಯ ವ್ಯಾಪ್ತಿಯ ಊಟಿ ಬಳಿ ದೊಡ್ಡ ಸ್ಫೋಟದೊಂದಿಗೆ ಪತನವಾಗಿದೆ.

    ಈ ಸಂದರ್ಭದಲ್ಲಿ ಹೆಲಿಕಾಪ್ಟರ್‌ನಲ್ಲಿ ಬಿಪಿನ್ ರಾವತ್ ಸೇರಿ 14 ಮಂದಿ ಪಯಣಿಸುತ್ತಿದ್ದರು. ದುರಂತದಲ್ಲಿ ಬಿಪಿನ್ ರಾವತ್, ಮತ್ತವರ ಪತ್ನಿ ಸೇರಿ 13 ಮಂದಿ ಬಲಿ ಆಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‍ಗೆ ವೆಲ್ಲಿಂಗ್ಟನ್‍ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಶೇ.95ಕ್ಕೂ ಹೆಚ್ಚು ಸುಟ್ಟ ಗಾಯಗಳೊಂದಿಗೆ ಬಳಲುತ್ತಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಏನಿದು ಸಿಡಿಎಸ್ ಹುದ್ದೆ? ಈ ಹುದ್ದೆಯನ್ನು ಸೃಷ್ಟಿಸಿದ್ದು ಯಾಕೆ? – ಇಲ್ಲಿದೆ ಸಮಗ್ರ ವಿವರ

    ಘಟನಾ ಸ್ಥಳದ ಚಿತ್ರಣ ಭೀಕರವಾಗಿತ್ತು. ಗಂಟೆಗಳ ಕಾಲ ಬೆಂಕಿ ಧಗಧಗಿಸುತ್ತಿತ್ತು. ಮೃತದೇಹಗಳು ಮತ್ತು ಹೆಲಿಕಾಪ್ಟರ್ ಬಿಡಿಭಾಗಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಕೆಲ ಹೊತ್ತು ಕಾಪ್ಟರ್ ಸನಿಹಕ್ಕೆ ಹೋಗದಷ್ಟು ಬೆಂಕಿ ಜ್ವಾಲೆ ಇತ್ತು. ಬೆಂಕಿಯ ತೀವ್ರತೆಗೆ ಇಡೀ ಪ್ರದೇಶ ಸುಟ್ಟು ಕರಕಲಾಗಿದೆ. ಕೂಡಲೇ ಪೊಲೀಸರು, ಅಗ್ನಿಶಾಮಕ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ದುರಂತ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಯೊಬ್ಬನನ್ನು ಸಿಆರ್‌ಪಿಎಫ್‌ನ ಕೋಬ್ರಾ ಪಡೆ ವಶಕ್ಕೆ ಪಡೆದುಕೊಂಡಿದೆ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್

    ಬೆಳಗ್ಗೆಯಿಂದ ಏನೇನಾಯ್ತು?
    ತಮಿಳುನಾಡಿನ ವೆಲ್ಲಿಂಗ್ಟನ್‍ನಲ್ಲಿರುವ ಮಿಲಿಟರಿ ಕಾಲೇಜಿನಲ್ಲಿ ಇಂದು ಬಿಪಿನ್‌ ರಾವತ್‌ ಉಪನ್ಯಾಸ ನೀಡಬೇಕಿತ್ತು. ಹೀಗಾಗಿ ದೆಹಲಿಯಿಂದ ಬೆಳಗ್ಗೆ 9ಕ್ಕೆ ಸೇನಾ ವಿಮಾನದಲ್ಲಿ ಸೂಳೂರಿನತ್ತ 9 ಮಂದಿ ಪ್ರಯಾಣ ಬೆಳೆಸಿದ್ದರು. ಬೆಳಗ್ಗೆ 11:35ಕ್ಕೆ ಸೂಳೂರಿಗೆ ಬಿಪಿನ್ ರಾವತ್ ಅವರಿದ್ದ ಸೇನಾ ವಿಮಾನ ಲ್ಯಾಂಡ್ ಆಗಿದೆ. ಸೂಳೂರಿನಿಂದ ಊಟಿಯ ವೆಲ್ಲಿಂಗ್ಟನ್‍ಗೆ ಸೇನಾ ಹೆಲಿಕಾಪ್ಟರ್‌ನಲ್ಲಿ 14 ಮಂದಿ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 12:22ಕ್ಕೆ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು – ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತು

    ವೆಲ್ಲಿಂಗ್ಟನ್‍ಗೆ ಏಳು ಕಿ.ಮೀ ದೂರದ ಕಟ್ಟೇರಿ ಪರ್ವತ ಪ್ರದೇಶದ ಟೀ ಎಸ್ಟೇಟ್‍ನಲ್ಲಿ ದೊಡ್ಡ ಶಬ್ಧದೊಂದಿಗೆ ಹೆಲಿಕಾಪ್ಟರ್‌ ಪತನಗೊಂಡಿದೆ. ಈ ವೇಳೆ ಭಾರೀ ಬೆಂಕಿ, ದಟ್ಟ ಹೊಗೆ ಕಾಣಿಸಿದೆ. ಮರಗಳ ಮೇಲೆ ಕಾಪ್ಟರ್ ಪತನ ಆಗುವಾಗ ಬೆಂಕಿಯುಂಡೆಯಂತೆ ನಾಲ್ವರು ಹೊರಗೆ ಜಿಗಿದಿದ್ದಾರೆ. 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಊಟಿ ಬಳಿ ಸೇನಾ ಹೆಲಿಕಾಪ್ಟರ್‌ ಪತನ- Mi-17 V5 ಹೆಲಿಕಾಪ್ಟರ್ ವಿಶೇಷತೆ ಏನು?