Tag: chocolate

  • ಚಾಕೊಲೇಟ್‌ಗೋಸ್ಕರ ಭಾರತದ ಗಡಿ ದಾಟಿ ಬಂದಿದ್ದ ಬಾಂಗ್ಲಾ ಹುಡುಗ ಅರೆಸ್ಟ್‌

    ಚಾಕೊಲೇಟ್‌ಗೋಸ್ಕರ ಭಾರತದ ಗಡಿ ದಾಟಿ ಬಂದಿದ್ದ ಬಾಂಗ್ಲಾ ಹುಡುಗ ಅರೆಸ್ಟ್‌

    ಅಗರ್ತಲ: ಚಾಕೊಲೇಟ್‌ ಖರೀದಿಸಲು ಗಡಿ ದಾಟಿ ಭಾರತಕ್ಕೆ ಪ್ರವೇಶಿಸಿದ್ದ ಬಾಂಗ್ಲಾದೇಶದ ಹುಡುಗನನ್ನು ಬಂಧಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶುಕ್ರವಾರ ತಿಳಿಸಿದೆ.

    ಎರಡು ದೇಶಗಳ ನಡುವಿನ ಅಂತರಾಷ್ಟ್ರೀಯ ಗಡಿಯನ್ನು ಗುರುತಿಸುವ ಶಾಲ್ದಾ ನದಿಯ ಸಮೀಪವಿರುವ ಬಾಂಗ್ಲಾದೇಶದ ಹಳ್ಳಿಯೊಂದರ ನಿವಾಸಿ ಎಮಾನ್ ಹೊಸೈನ್‌ನನ್ನು ಬಿಎಸ್‌ಎಫ್‌ ಸಿಬ್ಬಂದಿ ಬಂಧಿಸಿದ್ದಾರೆ. ತ್ರಿಪುರಾದ ಸಿಪಾಹಿಜಾಲಾ ಜಿಲ್ಲೆಯಲ್ಲಿ ತನ್ನ ಅಚ್ಚುಮೆಚ್ಚಿನ ಭಾರತೀಯ ಚಾಕೊಲೇಟ್ ಖರೀದಿಸಲು ಆಗಾಗ ಈ ನದಿ ಮಾರ್ಗವಾಗಿ ಭಾರತಕ್ಕೆ ಬರುತ್ತಿದ್ದ. ಇದನ್ನೂ ಓದಿ: ಅಮರನಾಥ ಯಾತ್ರೆ – ಕೇಂದ್ರ ಗೃಹ ಇಲಾಖೆಯಿಂದ ಭದ್ರತಾ ಪರಿಶೀಲನೆ

    ಆತ ಭಾರತದ ಕಲಾಂಚೌರಾ ಗ್ರಾಮದ ಅಂಗಡಿಯಿಂದ ಚಾಕೊಲೇಟ್ ಖರೀದಿಸಲು ಮುಳ್ಳುತಂತಿ ಬೇಲಿ ಬಳಿ ರಂಧ್ರವೊಂದನ್ನು ಮಾಡಿ ಅದರ ಮೂಲಕ ನುಸುಳುತ್ತಿದ್ದ. ಅದೇ ರಂಧ್ರದ ಮೂಲಕ ಮತ್ತೆ ತನ್ನ ಮನೆಗೆ ವಾಪಾಸ್ಸಾಗುತ್ತಿದ್ದ. ಸಾಹಸ ಕೃತ್ಯಕ್ಕೆ ಮುಂದಾಗಿದ್ದ ಆತನನ್ನು ಏ.13 ರಂದು ಬಿಎಸ್‌ಎಫ್‌ ಸಿಬ್ಬಂದಿ ಬಂಧಿಸಿದ್ದಾರೆ.

    ಹುಡುಗನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸೋನಮುರ ಎಸ್‌ಡಿಪಿಒ ಬನೋಜ್ ಬಿಪ್ಲಬ್ ದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ 50% ರಿಯಾಯಿತಿ: ಸಿಎಂ ಠಾಕೂರ್

    ವಿಚಾರಣೆ ವೇಳೆ, ಬಾಂಗ್ಲಾದೇಶದ ಕೊಮಿಲ್ಲಾ ಜಿಲ್ಲೆಯ ನಿವಾಸಿಯಾಗಿರುವ ಬಾಲಕ ಚಾಕೊಲೇಟ್ ಖರೀದಿಗಾಗಿ ಭಾರತಕ್ಕೆ ನುಸುಳಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ಬಳಿ ಕೇವಲ 100 ಬಾಂಗ್ಲಾದೇಶಿ ಟಾಕಾ (ಕರೆನ್ಸಿ) ಪತ್ತೆಯಾಗಿದೆ. ಆದರೆ ಆತ ಅಕ್ರಮವಾಗಿ ಏನನ್ನೂ ಹೊಂದಿರಲಿಲ್ಲ. ಅಗತ್ಯ ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ. ಅವರ ಕುಟುಂಬದ ಯಾರೂ ಇದುವರೆಗೆ ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ ಎಂದು ದಾಸ್‌ ಅವರು ಮಾಹಿತಿ ನೀಡಿದ್ದಾರೆ.

  • ಚಾಕೋಲೇಟ್ ರಾಕೆಟ್- ವೀಡಿಯೋ ವೈರಲ್

    ಚಾಕೋಲೇಟ್ ರಾಕೆಟ್- ವೀಡಿಯೋ ವೈರಲ್

    ಬರ್ನ್: ಚಾಕೋಲೇಟ್ ಸಿರಪ್‍ನಿಂದ ರಾಕೆಟ್ ತಯಾರು ಮಾಡಲು ಸಾಧ್ಯವೇ? ಸಾಧ್ಯವೆಂದು ಸ್ವಿಜರ್ಲೆಂಡ್‌ನ‌ ಪ್ರಸಿದ್ಧ ಕೇಕ್ ತಯಾರಕ ಅಮೌರಿ ಗುಯಿಕಾನ್ ತೋರಿಸಿಕೊಟ್ಟಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ವೀಡೀಯೋದಲ್ಲಿ ಏನಿದೆ?: ಬಳಿಯ ಬಣ್ಣದ ಕ್ರೀಮ್‍ನಿಂದ ರಾಕೆಟ್ ತಳಹದಿಯನ್ನು ಮಾಡಿ ಅದರ ಮೇಲೆ ರಾಕೆಟ್ ಕೋರಿಸಲಾಗಿದೆ. ಸರಿ ಸುಮಾರು ಅರ್ಧ ಚಂದ್ರಾಕೃತಿಯಲ್ಲಿ ಇರುವಂತೆ ಭಾಸವಾಗುತ್ತದೆ. ಚಾಕೊಲೇಟ್ ರಾಕೆಟ್ ಮಕ್ಕಳ ಹುಟ್ಟುಹಬ್ಬಕ್ಕೆ ಈ ಒಳ್ಳೆಯ ಉಡುಗೊರೆಯಾಗಿದೆ ಎಂದು ಬರೆದುಕೊಂಡು ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. ಇದನ್ನೂ ಓದಿ:  ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

     

    View this post on Instagram

     

    A post shared by Amaury Guichon (@amauryguichon)

    ಚಾಕೋಲೇಟ್ ರಾಕೆಟ್ ಮಾಡಲು ಹೇಗೆ ಚಾಕೋಲೇಟ್ ಬಳಕೆ ಮಾಡಲಾಗಿದೆ. ಹೇಗೆ ತಯರಿಸಲಾಯಿತ್ತು ಎನ್ನುವುದನ್ನು ಅಮೌರಿ ಗುಯಿಕಾನ್ ಅವರು ಒಂದೊಂದೇ ಸ್ಟೇಪ್ ವಿವರಿಸಿದ್ದಾರೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು ಕಾಮೆಂಟ್ ಮಾಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.  ಇದನ್ನೂ ಓದಿ: ಆಸ್ತಿ ವಿವಾದಕ್ಕೆ 70ರ ತಂದೆಯ ಕತ್ತು ಸೀಳಿ ಹತ್ಯೆಗೈದ ಮಗ

  • ಬುಕ್ ಮಾಡಿದ್ದು 1 ಲಕ್ಷ ರೂ. ಐಫೋನ್ ಆದ್ರೆ ಬಂದಿದ್ದು ಚಾಕೊಲೇಟ್

    ಬುಕ್ ಮಾಡಿದ್ದು 1 ಲಕ್ಷ ರೂ. ಐಫೋನ್ ಆದ್ರೆ ಬಂದಿದ್ದು ಚಾಕೊಲೇಟ್

    ಲಂಡನ್: ಆನ್‍ಲೈನ್ ನಲ್ಲಿ ಹಲವು ಬಾರಿ ನಾವು ಬುಕ್ ಮಾಡುವುದೇ ಒಂದು ಆದರೆ ಬರುವುದೇ ಇನ್ನೊಂದು. ಇಂತಹ ಸಾಕಷ್ಟು ವರದಿಗಳಾಗಿವೆ. ಅಂತೆಯೇ ವ್ಯಕ್ತಿಯೊಬ್ಬರು ಐಫೋನ್ ಬುಕ್ ಮಾಡಿದ್ರೆ, ಆತನಿಗೆ ಆನ್‍ಲೈನ್ ನಲ್ಲಿ ಚಾಕೊಲೇಟ್ ಬಂದಿದೆ. ಇದರಿಂದ ವ್ಯಕ್ತಿ 1 ಲಕ್ಷ ರೂ. ನಷ್ಟವನ್ನು ಅನುಭವಿಸಿದ್ದಾರೆ.

    ಆನ್‍ಲೈನ್ ಶಾಪಿಂಗ್ ನಲ್ಲಿ ಗ್ರಾಹಕರೊಬ್ಬರು ಐಫೋನ್ 13 ಪ್ರೊ ಮ್ಯಾಕ್ಸ್ ಅನ್ನು ಬುಕ್ ಮಾಡಿದ್ದಾರೆ. ಆದರೆ ಪೇಪರ್ ನಲ್ಲಿ ಸುತ್ತಿದ ಎರಡು ಚಾಕೊಲೇಟ್ ಗಳು ಬಂದಿದ್ದು, ಅದನ್ನು ನೋಡಿ ಗ್ರಾಹಕ ಫುಲ್ ಶಾಕ್ ಆಗಿದ್ದಾರೆ. ಇದನ್ನೂ ಓದಿ: ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

    ಏನಿದು ಘಟನೆ?
    ಇಂಗ್ಲೆಂಡ್‍ನ ಲೀಡ್ಸ್‍ನ ಡೇನಿಯಲ್ ಕ್ಯಾರೊಲ್ ಆನ್‍ಲೈನ್ ನಲ್ಲಿ 1 ಲಕ್ಷ ರೂ. ಮೌಲ್ಯದ ಐಫೋನ್ 13 ಪ್ರೊ ಮ್ಯಾಕ್ಸ್ ಅನ್ನು ಬುಕ್ ಮಾಡಿದ್ದರು. ಆದರೆ ಅವರು ಬುಕ್ ಮಾಡಿ ಎರಡು ವಾರಗಳಾದರೂ ಬಂದಿರಲಿಲ್ಲ. ಕೆಲ ದಿನಗಳ ವಿಳಂಬದ ನಂತರ ಬುಕ್ ಮಾಡಿದ್ದ ಬಾಕ್ಸ್ ಬಂದಿತು. ನಂತರ ಖುಷಿಯಿಂದ ಕವರ್ ಓಪನ್ ಮಾಡಿದ್ದಾರೆ. ಆದರೆ ಅದನ್ನು ತೆಗೆದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು.

    ಡೇನಿಯಲ್‍ಗೆ ಫೋನ್ ಬದಲಾಗಿ ರೋಲ್‍ನಲ್ಲಿ ಸುತ್ತಿದ ಎರಡು ಕ್ಯಾಡ್ಬರಿ ವೈಟ್ ಓರಿಯೊ ಚಾಕೊಲೇಟ್ ಬಂದಿತ್ತು. ಇದನ್ನು ಕಂಡು ಅವರು ದಿಗ್ಭ್ರಮೆಗೊಂಡಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡೇನಿಯಲ್, ನಾನು ಡಿಎಚ್‍ಎಲ್ ವೆಬ್‍ಸೈಟ್ ಮೂಲಕ ಡಿಸೆಂಬರ್ 2 ರಂದು ಫೋನ್ ಅನ್ನು ಆರ್ಡರ್ ಮಾಡಿದ್ದೆ. ಡಿಸೆಂಬರ್ 17 ರಂದು ನನಗೆ ಫೋನ್ ಡೆಲಿವರಿ ಮಾಡಬೇಕಿತ್ತು. ಆದರೆ ಅದು ಬರಲಿಲ್ಲ. ನಂತರ ನಾನೇ ಅಲ್ಲಿಗೆ ಹೋಗಿ ವಿಚಾರಿಸಿದಾಗ ನಿಮ್ಮ ಆರ್ಡರ್ ಶನಿವಾರ ಸಿಗುತ್ತೆ ಎಂದು ಮಾಹಿತಿಯನ್ನು ನೀಡಿದರು.

    ನಾನೇ ಸೋಮವಾರ ಆ ಪಾರ್ಸೆಲ್ ಸಂಗ್ರಹಿಸಲು 24-ಮೈಲಿ ಹೋಗಬೇಕಾಯಿತು. ಆದರೂ ಹೋಗಿ ನನ್ನ ಆರ್ಡರ್ ಅನ್ನು ತೆಗೆದುಕೊಂಡು ಮನೆಗೆ ಬಂದೆ. ಆ ಬಾಕ್ಸ್ ತುಂಬಾ ಹಗುರವಾಗಿತ್ತು. ಆಗ ನಾನು ಅದನ್ನು ತೆಗೆದು ನೋಡಿದಾಗ ಶಾಕ್ ಆಯ್ತು. ಅದರಲ್ಲಿ ನಾನು ಆರ್ಡರ್ ಮಾಡಿದ ಫೋನ್ ಬದಲಿಗೆ ರೋಲ್ ನಲ್ಲಿ ಸುತ್ತಿ ಇಟ್ಟಿದ್ದ ಚಾಕೊಲೇಟ್ ಇತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  14 ತಿಂಗಳ ನಂತರ ಭೇಟಿ – ಪಾಲಕನನ್ನು ಸುತ್ತುವರೆದು ಸೊಂಡಿಲಿನಿಂದ ಅಪ್ಪಿಕೊಂಡ ಆನೆಗಳು

    ತಮಗಾದ ಮೋಸವನ್ನು ಡೇನಿಯಲ್ ಟ್ವಿಟ್ಟರ್‌ನಲ್ಲೂ ಹಂಚಿಕೊಂಡಿದ್ದಾರೆ. ಡಿಎಚ್‍ಎಲ್ ಗೆ ಈ ಕುರಿತು ಡೇನಿಯಲ್ ದೂರು ನೀಡಿದ್ದಾರೆ. ಈ ಬಗ್ಗೆ ಡಿಎಚ್‍ಎಲ್ ವಕ್ತಾರರು ಪ್ರತಿಕ್ರಿಯಿಸಿದ್ದು, ಘಟನೆ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದ್ದು, ನಷ್ಟವಾದ ಆರ್ಡರ್ ಅನ್ನು ಮರುಕಳುಹಿಸುತ್ತೇವೆ. ಅಲ್ಲಿಯವರೆಗೂ ನಾವು ನಿಮ್ಮ ಸಂಪರ್ಕದಲ್ಲೇ ಇರುತ್ತೇವೆ ಎಂದು ತಿಳಿಸಿದ್ದಾರೆ.

  • ಚಾಕಲೇಟ್ ಮೂಲಕ ‘ಶುಭ’ ಆರಂಭಿಸಿದ ಜಾತ್ರೆ ಟೀಂ!

    ಚಾಕಲೇಟ್ ಮೂಲಕ ‘ಶುಭ’ ಆರಂಭಿಸಿದ ಜಾತ್ರೆ ಟೀಂ!

    ನಿನ್ನೆ ಬಿಗ್‍ಬಾಸ್, ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಭಜಿಸಿ ಇಬ್ಬರನ್ನು ನಾಯಕರಾಗಿ ಸುಚಿಸುವಂತೆ ಕ್ಯಾಪ್ಟನ್ ವಿಶ್ವನಾಥ್‍ಗೆ ಸೂಚಿಸಿದರು. ಅದರಂತೆ ವಿಶ್ವನಾಥ್ ದಿವ್ಯಾ ಉರುಡುಗ ಹಾಗೂ ಶುಭರನ್ನು ನಾಯಕರಾಗಿ ಆಯ್ಕೆ ಮಾಡಿದರು.

    ನಂತರ ದಿವ್ಯಾ ಉರುಡುಗ ತನ್ನ ತಂಡಕ್ಕೆ ಅರವಿಂದ್, ರಾಜೀವ್, ದಿವ್ಯಾ ಸುರೇಶ್, ಶಮಂತ್, ಶಂಕರ್‍ರನ್ನು ಆಯ್ಕೆ ಮಾಡಿಕೊಂಡು ತಂಡಕ್ಕೆ ‘ಅನುಬಂಧ’ ಎಂದು ಹೆಸರಿಟ್ಟರೆ, ಶುಭ ಪೂಂಜಾ, ಮಂಜು, ನಿಧಿ, ಪ್ರಶಾಂತ್, ವೈಷ್ಣವಿ, ರಘುರನ್ನು ಸೇರಿಸಿಕೊಂಡು ತಂಡಕ್ಕೆ ‘ಜಾತ್ರೆ’ ಎಂದು ಹೆಸರಿಡುತ್ತಾರೆ.

    ಬಳಿಕ ಎರಡು ತಂಡಕ್ಕೆ ಬಿಗ್‍ಬಾಸ್, ಗುಂಪು ಚಟುವಟಿಕೆಯನ್ನು ನೀಡುತ್ತಾರೆ. ಗಾರ್ಡನ್ ಏರಿಯದಲ್ಲಿ ಬಲೂನ್‍ಗಳನ್ನು ಇರಿಸಲಾಗಿದ್ದು, ಸದಸ್ಯರು ಬಲೂನ್‍ಗಳ ಮೇಲೆ ಕುಳಿತು ಹೊಡೆದು ಹಾಕಬೇಕು. ಆಗ ಬಲೂನ್‍ನಲ್ಲಿದ್ದ ಬೆಳ್ಳಿ ಹಾಗೂ ಚಿನ್ನದ ಚೀಟಿಗಳನ್ನು ಯಾವ ತಂಡ ಹೆಚ್ಚಾಗಿ ಸಂಗ್ರಹಿಸಿರುತ್ತಾರೋ ಅವರು ವಿಜೇತರಾಗಿರುತ್ತಾರೆ ಹಾಗೂ ಗೆದ್ದ ತಂಡಕ್ಕೆ ಬಹುಮಾನವಾಗಿ ಚಾಕಲೇಟ್ ನೀಡುವುದಾಗಿ ತಿಳಿಸಿರುತ್ತಾರೆ.

    ಅದರಂತೆ ಚಾಕಲೇಟ್ ತಿನ್ನುವ ಆಸೆಯಿಂದ ರೊಚ್ಚಿಗೆದ್ದ ಮನೆಮಂದಿ, ಒಂದು ಬಲೂನ್‍ನನ್ನು ಬಿಡದಂತೆ ಕುಳಿತು ಹೊಡೆದು ಹಾಕಿ ಚಿನ್ನದ ಹಾಗೂ ಬೆಳ್ಳಿಯ ಚೀಟಿಗಳನ್ನು ಸಂಗ್ರಹಿಸುತ್ತಾರೆ. ಈ ಟಾಸ್ಕ್‍ನಲ್ಲಿ ಶುಭ ಪೂಂಜಾರ ಜಾತ್ರೆ ಗ್ಯಾಂಗ್ 29 ಬಂಗಾರದ ಚೀಟಿಗಳನ್ನು ಸಂಗ್ರಹಿಸುವ ಮೂಲಕ ವಿಜೇತರಾಗುತ್ತಾರೆ. ಬಳಿಕ ಬಿಗ್‍ಬಾಸ್ ಜಾತ್ರೆ ತಂಡಕ್ಕೆ ಚಾಕಲೇಟ್ ಕಳುಹಿಸಿಕೊಡುತ್ತಾರೆ.

    ನಂತರ ಜಾತ್ರೆ ತಂಡದವರು ಎದುರಾಳಿ ತಂಡದವರಿಗೆ ಅಣುಕಿಸುತ್ತಾ ಚಾಕಲೇಟ್‍ನನ್ನು ಸವಿದು ಆನಂದಿಸುತ್ತಾರೆ. ಒಟ್ಟಾರೆ ಈ ವಾರದ ಟಾಸ್ಕ್ ಆರಂಭವಾಗುತ್ತಿದ್ದಂತೆಯೇ ಜಾತ್ರೆ ತಂಡ ಸಿಹಿ ತಿನ್ನುವ ಮೂಲಕ ನ್ಯೂ ಗೇಮ್ ಸ್ಟಾರ್ಟ್ ಮಾಡಿದ್ದಾರೆ. ಆದರೆ ಮುಂದೆ ಹೇಗೆ ಆಟ ಆಡುತ್ತಾರೆ ಎಂದು ಕಾದು ನೋಡಬೇಕಾಗಿದೆ.

  • ಗಮನಸೆಳೀತಿದೆ 5.8 ಅಡಿ ಎತ್ತರ, 339 ಕೆಜಿ ತೂಕದ ಎಸ್‍ಪಿಬಿ ಚಾಕ್ಲೇಟ್ ಪ್ರತಿಮೆ

    ಗಮನಸೆಳೀತಿದೆ 5.8 ಅಡಿ ಎತ್ತರ, 339 ಕೆಜಿ ತೂಕದ ಎಸ್‍ಪಿಬಿ ಚಾಕ್ಲೇಟ್ ಪ್ರತಿಮೆ

    ಚೆನ್ನೈ: ದಿವಂಗತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಅವರ ಸ್ಮರಣಾರ್ಥವಾಗಿ ಚಾಕ್ಲೇಟ್ ಪ್ರತಿಮೆ ನಿರ್ಮಾಣವಾಗಿದೆ.

    ಹೌದು. ಪುದುಚೇರಿಯ ಅಂಗಡಿ ಮಾಲೀಕರೊಬ್ಬರು ಚಾಕ್ಲೇಟ್ ನಲ್ಲಿ ಗಾಯಕರ ಪ್ರತಿಮೆ ನಿರ್ಮಿಸಿದ್ದು, ಆಕರ್ಷಣೀಯವಾಗಿದೆ. 5.8 ಅಡಿ ಎತ್ತರ 339 ಕೆ.ಜಿ. ತೂಕದ ಎಸ್‍ಪಿಬಿ ಚಾಕ್ಲೇಟ್ ಪ್ರತಿಮೆ ಪುದುಚೇರಿಯ ಮಿಷನ್ ಸ್ಟ್ರೀಟ್‍ನಲ್ಲಿರುವ ಅಂಗಡಿಯಲ್ಲಿ ತಯಾರಿಸಿ ಪ್ರದರ್ಶಿಸಲಾಗಿದೆ. ಪ್ರತಿಮೆಯನ್ನು ಸಂಪೂರ್ಣವಾಗಿ ಚಾಕ್ಲೇಟ್ ನಿಂದಲೇ ರೆಡಿ ಮಾಡಲಾಗಿದೆ.

    ಕ್ರಿಸ್‍ಮಸ್ ಮತ್ತು ಹೊಸ ವರ್ಷ ಹಿನ್ನೆಲೆಯಲ್ಲಿ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಅಂಗಡಿ ಮಾಲೀಕರು ಈ ಪ್ರತಿಮೆಯ ಪ್ರದರ್ಶನ ಏರ್ಪಡಿಸಿದ್ದಾರೆ. ಇದನ್ನು ಜನವರಿ 3 ರವರೆಗೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ ಎಂದು ಪ್ರತಿಮೆಯನ್ನು ತಯಾರಿಸಿದ ರಾಜೇಂದ್ರನ್ ಹೇಳಿದ್ದಾರೆ.

    ಅಂಗಡಿಯಲ್ಲಿ ಗಣ್ಯರ ಪ್ರತಿಮೆಗಳನ್ನು ಪ್ರದರ್ಶನಕ್ಕೆ ಇಡುವುದು ಇದೇ ಮೊದಲಲ್ಲ. ಈ ಹಿಂದೆ ಎ.ಪಿ.ಜೆ ಅಬ್ದುಲ್ ಕಲಾಂ, ನಟ ರಜನಿಕಾಂತ್ ಹಾಗೂ ಕ್ರಿಕೆಟಿಗರ ಚಾಕ್ಲೇಟ್ ಪ್ರತಿಮೆಗಳನ್ನು ಕೂಡ ತಯಾರಿಸಿ ಪ್ರದರ್ಶಿಸಲಾಗಿತ್ತು.

  • ಚಾಕೊಲೇಟ್ ಆಸೆ ತೋರಿಸಿ 55ರ ವೃದ್ಧನಿಂದ 5ರ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ

    ಚಾಕೊಲೇಟ್ ಆಸೆ ತೋರಿಸಿ 55ರ ವೃದ್ಧನಿಂದ 5ರ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ

    ಚಾಮರಾಜನಗರ: ಚಾಕೊಲೇಟ್ ಆಸೆ ತೋರಿಸಿ 5 ವರ್ಷದ ಬಾಲಕಿ ಮೇಲೆ 55 ವರ್ಷದ ಕಾಮುಕನೋರ್ವ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಕೊಳ್ಳೇಗಾಲದ ಮಂಜುನಾಥ ನಗರ ಬಡಾವಣೆಯಲ್ಲಿ ನಡೆದಿದೆ.

    ಬಡಾವಣೆ ನಿವಾಸಿ ವೇಣುಗೋಪಾಲ್ (55) ಬಂಧಿತ ಆರೋಪಿ. ಎದುರು ಮನೆಯ 5 ವರ್ಷದ ಬಾಲಕಿಯನ್ನು ಚಾಕೊಲೇಟ್ ನೀಡುವ ಆಸೆ ತೋರಿಸಿ, ಕಳೆದ ಸೋಮವಾರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಬಾಲಕಿಯ ಜನನಾಂಗದಲ್ಲಿ ಗಾಯಗಳಾಗಿದ್ದರಿಂದ ಪ್ರಕರಣ ಇಂದು ಬೆಳಕಿಗೆ ಬಂದಿದೆ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಗಂಟಲಲ್ಲಿ ಚಾಕಲೇಟ್ ಸಿಲುಕಿ ಬಾಲಕ ದುರ್ಮರಣ

    ಗಂಟಲಲ್ಲಿ ಚಾಕಲೇಟ್ ಸಿಲುಕಿ ಬಾಲಕ ದುರ್ಮರಣ

    ಮಂಗಳೂರು: ಗಂಟಲಲ್ಲಿ ಚಾಕಲೇಟ್ ಸಿಲುಕಿ ಮಗುವೊಂದು ಸಾವನ್ನಪ್ಪಿದ ಘಟನೆ ಮಂಗಳೂರಿನ ಸೋಮೇಶ್ವರದಲ್ಲಿ ನಡೆದಿದೆ.

    ಉಳ್ಳಾಲ ಸಮೀಪದ ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡ ನಿವಾಸಿ ರಹೀಂ ಎಂಬವರ 8 ವರ್ಷದ ಮಗು ಪೈಝಾನ್ ಮೃತ ಬಾಲಕ. ಚಾಕಲೇಟ್ ತಿನ್ನುವಾಗ ಗಂಟಲಲ್ಲಿ ಸಿಲುಕಿಕೊಂಡಿದ್ದರಿಂದ ಉಸಿರು ತೆಗೆದುಕೊಳ್ಳಲು ಕಷ್ಟವಾಗಿದೆ.

    ಪೋಷಕರು ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲಿ ಮುಟ್ಟಿದೆ.

  • ಚಪ್ಪಲಿಯನ್ನು ಚಪ್ಪರಿಸಿ ತಿಂದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

    ಚಪ್ಪಲಿಯನ್ನು ಚಪ್ಪರಿಸಿ ತಿಂದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

    ಮುಂಬೈ: ಬಾಲಿವುಡ್‍ನ ಹಾಟ್ ಸುಂದರಿ ಮಂಗಳೂರಿನ ಮಗಳು ಶಿಲ್ಪಾ ಶೆಟ್ಟಿ ಚಪ್ಪಲಿಯನ್ನು ಚಪ್ಪರಿಸಿ ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಆರೇ ಶಿಲ್ಪಗೇ ಚಪ್ಪಲಿಯನ್ನು ತಿನ್ನುವಂತಹದ್ದು ಏನ್ ಆಗಿದೆ ಅಂತೀದಿದ್ದರಾ? ಶಿಲ್ಪ ತಿಂದಿರುವುದು ಚಪ್ಪಲಿಯನ್ನಲ್ಲ ಬದಲಿಗೆ ಚಪ್ಪಲಿ ಆಕಾರದಲ್ಲಿರುವ ಚಾಕಲೇಟ್ ಕೇಕ್ ಅನ್ನು ಸವಿದಿದ್ದಾರೆ. ಅವರು ಚಪ್ಪಲಿ ರೀತಿಯಲ್ಲಿರುವ ಚಾಕಲೇಟ್ ಕೇಕ್ ಅನ್ನು ತಿನ್ನುತಿರುವ ವಿಡಿಯೋವನ್ನು ಸ್ವತಃ ಅವರೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    https://www.instagram.com/p/B8D3RUDBZ-A/

    ಯೋಗ ಮತ್ತು ಡಯೇಟ್ ಮಾಡಿ ಫಿಟ್ ಅಂಡ್ ಫೈನ್ ಆಗಿರುವ ಶಿಲ್ಪಾ ಅವರು ಚೆನ್ನಾಗಿ ತಿನ್ನುತ್ತಾರೆ. ಹಾಗಾಗಿ ಭಾನುವಾರ ವೀಕೆಂಡ್ ಎಂಜಾಯ್ ಮಾಡಿರುವ ಶಿಲ್ಪಾ ಶೆಟ್ಟಿ ಅವರು, ಚಪ್ಪಲಿ ರೀತಿಯಲ್ಲಿ ತಯಾರಾದ ಚಾಕಲೇಟ್ ಕೇಕ್ ಅನ್ನು ತಿಂದು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಪ್ಪಲಿಯನ್ನು ತಿನ್ನುತ್ತೀರಾ? “ವಿಶೇಷ ಭಾನುವಾರ ವಿಶಿಷ್ಟ ಅಕಾರದ ಚಾಕಲೇಟ್ ಕೇಕ್‍ನೊಂದಿಗೆ” ಎಂದು ಬರೆದುಕೊಂಡಿದ್ದಾರೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ವಿಭಿನ್ನ ವಿಭಿನ್ನ ರೀತಿಯ ಚಾಕಲೇಟ್ ಕೇಕ್. ಆದರೆ ಇದು ಚಪ್ಪಲಿ ಆಕಾರದಲ್ಲಿರುವ ಚಾಕಲೇಟ್. ಇದಕ್ಕೆ ನಾನು ಚಪ್ಪಲಿಯನ್ನು ತಿನ್ನುತ್ತೀರಾ ಎಂದು ಪ್ರಶ್ನಿಸಿದ್ದೆ. ಇದನ್ನು ನಾವು ತಿನ್ನಬಹುದು. ತಿಂದು ನನಗೆ ಇಷ್ಟವಾಯಿತು ಎಂದು ಹೇಳಿ ಸಂಡೇ ಬೆಂಜ್ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

    ಕಳೆದ ತಿಂಗಳ 30 ರಂದು ತನ್ನ ಹುಟ್ಟೂರಿಗೆ ಬಂದಿದ್ದ ಶಿಲ್ಪಾ ಶೆಟ್ಟಿ ಅವರು, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಿ ದೇವಿಯ ದರ್ಶನ ಪಡೆದಿದ್ದರು. ಈ ವೇಳೆ ಮಾತನಾಡಿದ್ದ ಅವರು, ಕ್ಷೇತ್ರಕ್ಕೆ ಬರಬೇಕು ಎಂದು ತುಂಬಾ ಆಸೆ ಇತ್ತು. ಕಟೀಲು ದೇವರ ಅನುಗ್ರಹದಿಂದ ನಾನು ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಯಿತು. ಹಾಗಾಗಿ ಬ್ರಹ್ಮಕಲಶದ ಈ ಸಂದರ್ಭದಲ್ಲಿ ದೇವಿಗೆ ಪೂಜೆ ಸಲ್ಲಿಸಲು ಬಂದಿದ್ದೇನೆ ಎಂದು ತುಳುವಿನಲ್ಲಿ ಹೇಳಿದ್ದರು.

    ಈ ವೇಳೆ ಕಟೀಲು ಕ್ಷೇತ್ರದ ವತಿಯಿಂದ ನಟಿ ಶಿಲ್ಪಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲೇ ತನ್ನ ಮನೆಯಿರುವ ಶಿಲ್ಪಾ ಶೆಟ್ಟಿ ಅವರು ಕಟೀಲು ದುರ್ಗಾಪರಮೇಶ್ವರಿ ದೇವಿಯ ಪರಮ ಭಕ್ತೆಯಾಗಿದ್ದಾರೆ. ತನ್ನ ಹುಟ್ಟೂರಿಗೆ ಹಾಗೂ ಮಂಗಳೂರಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬರುವಾಗ, ತಪ್ಪದೇ ಕಟೀಲು ಶ್ರೀ ದೇವಿಯ ದರ್ಶನ ಪಡೆಯುತ್ತಾರೆ. ಸದ್ಯ ಬಾಲಿವುಡ್‍ನಲ್ಲಿ ಬ್ಯುಸಿ ಇರುವ ಶಿಲ್ಪಾ ಎರಡು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೆಟ್ಟಿ ನಟನೆಯ ನಿಕ್ಕಮ್ಮ ಮತ್ತು ಹಂಗಮಾ-2 ಸಿನಿಮಾಗಳು ಬಿಡುಗಡೆ ಸಿದ್ಧಗೊಳ್ಳುತ್ತಿವೆ.

  • ಚಾಕೋಲೆಟ್ ಕೊಡಿಸುವ ನೆಪದಲ್ಲಿ ಅಪ್ರಾಪ್ತೆ ಮೇಲೆ ರೇಪ್‍ಗೈದ ಕಾಮುಕ

    ಚಾಕೋಲೆಟ್ ಕೊಡಿಸುವ ನೆಪದಲ್ಲಿ ಅಪ್ರಾಪ್ತೆ ಮೇಲೆ ರೇಪ್‍ಗೈದ ಕಾಮುಕ

    ಯಾದಗಿರಿ: ಚಾಕೋಲೆಟ್ ಕೊಡಿಸುವ ನೆಪದಲ್ಲಿ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹಳ್ಳಿಯೊಂದರಲ್ಲಿ 3 ವರ್ಷದ ಬಾಲಕಿ ಮೇಲೆ ಅದೇ ಗ್ರಾಮದ ವ್ಯಕ್ತಿ ಮೃಗಿಯ ವರ್ತನೆ ತೋರಿದ್ದಾನೆ. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಕರೆದ ಆರೋಪಿ, ಚಾಕೋಲೆಟ್ ಕೊಡಿಸುತ್ತೇನೆ ಎಂದು ಮನೆಯ ಒಳಗೆ ಕರೆದುಕೊಂಡು ಹೋಗಿದ್ದ. ಬಳಿಕ ಮನೆಯ ಬಾಗಿಲು ಹಾಕಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಆರೋಪಿ ಮೃಗಿಯ ವರ್ತನೆಯಿಂದ ಬಾಲಕಿ ಭಯಗೊಂಡು ಅಳಲು ಆರಂಭಿಸಿದ್ದಾಳೆ. ಮಗಳು ಅಳುತ್ತಿರುವುದನ್ನು ಕೇಳಿಸಿಕೊಂಡ ಪೋಷಕರು ಕಾಮುಕನ ಮನೆ ಬಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯ ಪೋಷಕರು ಮನೆಯೊಳಗೆ ಬರುವುದಕ್ಕೂ ಮುನ್ನವೇ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದ. ಕಾಮುನ ಕೃತ್ಯ ತಿಳಿದ ಸ್ಥಳೀಯರು ಆತನನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು, ಆಕೆಯನ್ನು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುರಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕೊಡಗಿನಲ್ಲಿ ಅಧಿಕಾರಿಗಳಿಂದ ಅಂಗಡಿಗಳ ಮೇಲೆ ದಾಳಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕೊಡಗಿನಲ್ಲಿ ಅಧಿಕಾರಿಗಳಿಂದ ಅಂಗಡಿಗಳ ಮೇಲೆ ದಾಳಿ

    ಮಡಿಕೇರಿ: ಕೊಡಗು ಜಿಲ್ಲೆಯ ಪ್ರವಾಸಿ ಕೇಂದ್ರಗಳು ಮತ್ತು ಕೆಲವೆಡೆ ನಕಲಿ ಚಾಕ್ಲೇಟ್ ಮಾರಾಟ ನಡೆಯುತ್ತಿರುವ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡಲಾಗಿತ್ತು. ಈ ಸುದ್ದಿ ವರದಿಯಾದ ಬೆನ್ನಲ್ಲೇ ಇದೀಗ ಆಹಾರ ಇಲಾಖೆ ಅಧಿಕಾರಿಗಳು ಮಡಿಕೇರಿಯಲ್ಲಿ ದಾಳಿ ನಡೆಸಿ, ಕೆಲ ವರ್ತಕರಿಗೆ ನೋಟಿಸ್ ನೀಡಿದ್ದಾರೆ.

    ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ದಂಧೆ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಆಹಾರ ಇಲಾಖೆಯ ಹಿರಿಯ ಅಧಿಕಾರಿ ಶಿವಕುಮಾರ್, ರಾಜಾಸೀಟ್, ಅಬ್ಬಿಫಾಲ್ಸ್, ಕಾವೇರಿ ನಿಸರ್ಗಧಾಮ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಹೋಮ್ ಮೇಡ್ ದಂಧೆ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಚಾಕ್ಲೇಟ್ ಬಣ್ಣ ಬಯಲು

    ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ನಿಯಮಾನುಸಾರ ಪರವಾನಗಿ ಪಡೆಯಬೇಕು, ನಕಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಅಧಿಕಾರಿಗಳು ಹಲವು ವರ್ತಕರಿಗೆ ನೋಟೀಸ್ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲೆಡೆ ಹಲವು ತಂಡಗಳು ಕಾರ್ಯಾಚರಣೆ ನಡೆಸಲಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

    ಕೊಡಗಿನ ಹೋಂ ಮೇಡ್ ಚಾಕ್ಲೇಟ್‍ಗೆ ವಿಶೇಷ ಸ್ಥಾನಮಾನ ಇದೆ. ರಾಜ್ಯದ ಹಾಗೂ ಹೊರರಾಜ್ಯದಿಂದ ಬರುವ ಪ್ರವಾಸಿಗರು ಅಪಾರ ಪ್ರಮಾಣದಲ್ಲಿ ಚಾಕ್ಲೇಟ್ ಕೊಳ್ಳುತ್ತಾರೆ. ಇದನ್ನೇ ಎನ್‍ಕ್ಯಾಶ್ ಮಾಡಿಕೊಂಡ ದಂಧೆಕೋರರು ಹೋಂಮೇಡ್ ಹೆಸರಲ್ಲಿ ಜನರ ಹೊಟ್ಟೆಗೆ ವಿಷ ತುಂಬುತ್ತಿದ್ದಾರೆ. ಹೊರರಾಜ್ಯದಿಂದ ಚಾಕ್ಲೇಟ್ ಸ್ಲ್ಯಾಬ್‍ಗಳನ್ನು ತಂದು ಅವುಗಳನ್ನೇ ಕರಗಿಸಿ ಬೇಕಾದ ಶೇಪ್‍ಗಳಿಗೆ ಬದಲಾಯಿಸಿ ಮಾರಾಟ ಮಾಡುತ್ತಿದ್ದಾರೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಚಾಕ್ಲೇಟ್ ತಯಾರಿಸುತ್ತಿದ್ದಾರೆ. ಈ ಚಾಕ್ಲೇಟ್ ಮೇಲೆ ತಯಾರಿಕಾ ದಿನ ಆಗಲಿ, ಎಕ್ಸ್ ಪೈರಿ ಡೇಟ್ ಆಗಲಿ ಯಾವುದೂ ಇಲ್ಲ. ಅಷ್ಟೇ ಏಕೆ ಆಹಾರ ಸುರಕ್ಷಾ ಇಲಾಖೆ ನೀಡುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ಅನುಮತಿ ಕೂಡ ಇಲ್ಲ.