Tag: chocolate

  • ಅಪರಿಚಿತ ವ್ಯಕ್ತಿ ನೀಡಿದ ಚಾಕ್ಲೆಟ್ ಸೇವಿಸಿ 17 ವಿದ್ಯಾರ್ಥಿಗಳು ಅಸ್ವಸ್ಥ- ಆರೋಪಿಗಾಗಿ ಹುಡುಕಾಟ

    ಅಪರಿಚಿತ ವ್ಯಕ್ತಿ ನೀಡಿದ ಚಾಕ್ಲೆಟ್ ಸೇವಿಸಿ 17 ವಿದ್ಯಾರ್ಥಿಗಳು ಅಸ್ವಸ್ಥ- ಆರೋಪಿಗಾಗಿ ಹುಡುಕಾಟ

    ಮುಂಬೈ: ಅಪರಿಚಿತ ವ್ಯಕ್ತಿಯೊಬ್ಬ ನೀಡಿದ ಚಾಕ್ಲೇಟ್ (Chocolate) ಅನ್ನು ತಿಂದು 17 ವಿದ್ಯಾರ್ಥಿಗಳು (Students) ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ (Nagpur) ಶನಿವಾರ ನಡೆದಿದೆ. ಮಕ್ಕಳಿಗೆ ಚಾಕ್ಲೆಟ್ ನೀಡಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ವರದಿಗಳ ಪ್ರಕಾರ, ನಗರದ ಉತ್ತರ ಅಂಬಾಝರಿ ರಸ್ತೆಯಲ್ಲಿರುವ ಮದನ್ ಗೋಪಾಲ್ ಪ್ರೌಢಶಾಲೆಯ 3ನೇ, 4ನೇ ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳು ಊಟದ ಬಿಡುವಿನ ವೇಳೆ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಮಕ್ಕಳಿಗೆ ಚಾಕ್ಲೆಟ್ ಅನ್ನು ವಿತರಿಸಿದ್ದಾನೆ.

    ವ್ಯಕ್ತಿ ತನ್ನ ಹುಟ್ಟುಹಬ್ಬ ಎಂದು ಹೇಳಿ ಮಕ್ಕಳಿಗೆ ಚಾಕ್ಲೆಟ್ ಹಂಚಿದ್ದಾನೆ. ಚಾಕ್ಲೆಟ್ ಸೇವಿಸಿದ 1 ಗಂಟೆಯೊಳಗೆ 17 ವಿದ್ಯಾರ್ಥಿಗಳಿಗೆ ಎದೆನೋವು ಕಂಡುಬಂದಿದ್ದು, ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣವೇ ಅಸ್ವಸ್ಥ ಮಕ್ಕಳನ್ನು ಸೀತಾಬುಲ್ಡಿಯ ಲತಾ ಮಂಗೇಶ್ಕರ್ ಆಸ್ಪತ್ರೆಗೆ ಸಾಗಿಸಲಾಯಿತು. ಇದನ್ನೂ ಓದಿ: ಒಟ್ಟಿಗೆ ಇರಲು ಒಂದೇ ವ್ಯಕ್ತಿಯನ್ನು ಮದುವೆಯಾದ ಅವಳಿ ಟೆಕ್ಕಿಗಳು

    ತಮಗೆ ಚಾಕ್ಲೆಟ್ ನೀಡಿದ ವ್ಯಕ್ತಿ ಕಪ್ಪು ಬಣ್ಣದ ಕಾರಿನಲ್ಲಿ ಬಂದಿದ್ದು, ಮಾಸ್ಕ್ ಧರಿಸಿದ್ದ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಸೀತಾಬುಲ್ಡಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಹಿಡಿಯಲು ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಶಾಲಾ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.

    ಸದ್ಯ ಅಸ್ವಸ್ತರಾಗಿದ್ದ ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರು ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸಾಯಿಬಾಬಾಗೆ ತಲೆಬಾಗಿದಾತ ಮೇಲೇಳಲೇ ಇಲ್ಲ- ದೇಗುಲದಲ್ಲೇ ವ್ಯಕ್ತಿಗೆ ಹೃದಯಾಘಾತ

    Live Tv
    [brid partner=56869869 player=32851 video=960834 autoplay=true]

  • ಗಂಟಲಲ್ಲಿ ಸಿಕ್ಕಿಕೊಂಡ ಚಾಕ್ಲೇಟ್- 9 ವರ್ಷದ ಬಾಲಕ ಉಸಿರುಗಟ್ಟಿ ಸಾವು

    ಗಂಟಲಲ್ಲಿ ಸಿಕ್ಕಿಕೊಂಡ ಚಾಕ್ಲೇಟ್- 9 ವರ್ಷದ ಬಾಲಕ ಉಸಿರುಗಟ್ಟಿ ಸಾವು

    ಹೈದರಾಬಾದ್: ಚಾಕ್ಲೇಟ್ (Chocolate) ತಿನ್ನುವಾಗ ಉಸಿರುಗಟ್ಟಿ 9 ವರ್ಷದ ಬಾಲಕನೊಬ್ಬ (Boy) ಸಾವನ್ನಪ್ಪಿರುವ ಘಟನೆ ತೆಲಂಗಾಣದ (Telangana) ವಾರಂಗಲ್‌ನಲ್ಲಿ ನಡೆದಿದೆ. ಬಾಲಕನನ್ನು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದೆ.

    ವರದಿಗಳ ಪ್ರಕಾರ ಬಾಲಕ ಚಾಕ್ಲೇಟ್ ತಿನ್ನುತ್ತಿದ್ದಾಗ ಅದು ಆತನ ಗಂಟಲಿನಲ್ಲಿ ಸಿಕ್ಕಿಕೊಂಡಿದೆ. ಬಳಿಕ ಆತನನ್ನು ವಾರಂಗಲ್‌ನ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಲ್ಲಿ ವೈದ್ಯರು ಆತ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಆಟವಾಡುತ್ತಿದ್ದಾಗ ರೈಲು ಡಿಕ್ಕಿ- ವಲಸೆ ಕಾರ್ಮಿಕರ ಮೂವರು ಮಕ್ಕಳು ದುರ್ಮರಣ

    ಬಾಲಕ ನಗರದ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, 2ನೇ ತರಗತಿಯಲ್ಲಿ ಓದುತ್ತಿದ್ದ. ಆತನ ತಂದೆ ಆಸ್ಟ್ರೇಲಿಯಾದಿಂದ ಚಾಕ್ಲೇಟ್ ಅನ್ನು ತಂದಿದ್ದು, ಅದನ್ನು ಬಾಲಕ ಶಾಲೆಗೆ ಒಯ್ದಿದ್ದ. ಶನಿವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಆತ ಚಾಕ್ಲೇಟ್ ಅನ್ನು ತಿನ್ನುತ್ತಿದ್ದ ವೇಳೆ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾರೊಕ್ಕೂ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

    ಬಾಲಕನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಶಾಲೆಯ ಆಡಳಿತ ಮಂಡಳಿ ಬಾಲಕನ ಪೋಷಕರಿಗೆ ಮಾಹಿತಿ ನೀಡಿದೆ. ಆದರೆ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ. ಘಟನೆಯ ಬಗ್ಗೆ ಬಾಲಕನ ಪೋಷಕರು ಯಾವುದೇ ದೂರನ್ನು ನೀಡಿಲ್ಲ ಎಂದು ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಲ್‌ನಲ್ಲಿ ಚಾಕಲೇಟ್ ಕದ್ದ ವೀಡಿಯೋ ವೈರಲ್ ಆಗಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

    ಮಾಲ್‌ನಲ್ಲಿ ಚಾಕಲೇಟ್ ಕದ್ದ ವೀಡಿಯೋ ವೈರಲ್ ಆಗಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

    ಕೋಲ್ಕತ್ತಾ: ಕಾಲೇಜು ಯುವತಿಯೊಬ್ಬಳು (Teen) ಮಾಲ್‌ವೊಂದರಲ್ಲಿ (Mall) ಚಾಕಲೇಟ್ (Chocolate) ಕದ್ದಿರುವ ವೀಡಿಯೋ ವೈರಲ್ ಆಗಿರುವುದಕ್ಕೆ ಮನನೊಂದು ಆತ್ಮಹತ್ಯೆಗೆ (Suicide) ಶರಣಾಗಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ (West Bengal) ಅಲಿಪುರ್‌ದವಾರ್ ಜಿಲ್ಲೆಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಯುವತಿ ಜೈಗಾಂವ್‌ನ ಶಾಪಿಂಗ್ ಮಾಲ್‌ನಲ್ಲಿ ಚಾಕಲೇಟ್ ಕದ್ದಿದ್ದಾಳೆ. ಯುವತಿಯ ಗಮನಕ್ಕೆ ಬಾರದಂತೆ ಅದರ ವೀಡಿಯೋವನ್ನು ಅಲ್ಲಿ ಕೆಲಸ ಮಾಡುವವರು ಚಿತ್ರೀಕರಿಸಿದ್ದಾರೆ. ಯುವತಿ ಚಾಕಲೇಟ್ ಕದ್ದ ಬಳಿಕ ಅಂಗಡಿ ಮಾಲೀಕರ ಕೈಯಲ್ಲಿ ಆಕೆ ಸಿಕ್ಕಿ ಬಿದ್ದಿದ್ದಾಳೆ. ಈ ವೇಳೆ ಆಕೆ ಕ್ಷಮೆಯನ್ನೂ ಕೇಳಿದ್ದಾಳೆ.

    ಬಳಿಕ ಆಕೆ ಚಾಕಲೇಟ್ ಕದ್ದಿರುವ ವೀಡಿಯೋವನ್ನು ಚಿತ್ರೀಕರಿಸಿರುವ ವಿಚಾರ ತಿಳಿದು, ಅದನ್ನು ಎಲ್ಲಿಯೂ ಹಂಚಿಕೊಳ್ಳದAತೆ ಮನವಿ ಮಾಡಿಕೊಂಡಿದ್ದಾಳೆ. ಆದರೆ ಬಳಿಕ ವೀಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!

    ಈ ಬಗ್ಗೆ ಕಂಬನಿ ಹಾಕಿರುವ ಯುವತಿಯ ಕುಟುಂಬ, ಆಕೆ ತಪ್ಪು ಮಾಡಿದ್ದಾಳೆ ನಿಜ. ಆದರೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಬಳಿಕ ಅವಳು ಚಾಕಲೇಟ್‌ಗೆ ಪಾವತಿಯನ್ನೂ ಮಾಡಿದ್ದಾಳೆ. ಇದಾದ ಬಳಿಕವೂ ಆಕೆಯನ್ನು ನಿಂದಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಆಕೆಯ ವೀಡಿಯೋವನ್ನು ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಘಟನೆಯ ಬಳಿಕ ಆಕೆ ತುಂಬಾ ಒತ್ತಡದಲ್ಲಿದ್ದಳು. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆ ವೀಡಿಯೋವನ್ನು ಏಕೆ ವೈರಲ್ ಮಾಡಬೇಕಿತ್ತು? ಆತ್ಮಹತ್ಯೆ ಮಾಡಿಕೊಂಡಿರುವ ಮಗಳನ್ನು ಮತ್ತೆ ಬದುಕಿಸಲು ಸಾಧ್ಯವೆ? ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಘಟನೆಯ ಬಳಿಕ ಕ್ರೋಧಗೊಂಡ ಜನರು ಸೋಮವಾರ ಶಾಪಿಂಗ್ ಮಾಲ್ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಘಟನೆಯ ಬಗ್ಗೆ ಶಾಪಿಂಗ್ ಮಾಲ್‌ನ ಅಧಿಕಾರಿಗಳೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವಾಗ ತಲೆಗೆ ಲಿಫ್ಟ್ ಬಡಿದು ಬಾಲಕಿ ಸಾವು

    Live Tv
    [brid partner=56869869 player=32851 video=960834 autoplay=true]

  • ಮಂತ್ರಿಗಾಗಿ ಕಾದು ಕುಳಿತ ರಮೇಶ್ ಜಾರಕಿಹೊಳಿಗೆ ಬಿಜೆಪಿಯವರು ಚಾಕಲೇಟ್ ತಿನ್ನಿಸುತ್ತಿದ್ದಾರೆ: ಸತೀಶ್ ಜಾರಕಿಹೊಳಿ ವ್ಯಂಗ್ಯ

    ಮಂತ್ರಿಗಾಗಿ ಕಾದು ಕುಳಿತ ರಮೇಶ್ ಜಾರಕಿಹೊಳಿಗೆ ಬಿಜೆಪಿಯವರು ಚಾಕಲೇಟ್ ತಿನ್ನಿಸುತ್ತಿದ್ದಾರೆ: ಸತೀಶ್ ಜಾರಕಿಹೊಳಿ ವ್ಯಂಗ್ಯ

    ಬೆಳಗಾವಿ: ಮಂತ್ರಿಗಾಗಿ ಕಾದು ಕುಳಿತ ರಮೇಶ್ ಜಾರಕಿಹೊಳಿ (Ramesh Jarakiholi) ಕಲ್ಲು ಹೊಡೆಯಬಾರದು ಅಂತಾ ಚಾಕಲೇಟ್ ತಿನ್ನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಹೋದರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarakiholi) ವ್ಯಂಗ್ಯವಾಡಿದ್ದಾರೆ.

    ಮುಂದಿನ ಚುನಾವಣೆಯಲ್ಲಿ ಬೆಳಗಾವಿ (Belgavi) ಜಿಲ್ಲೆಗೆ ರಮೇಶ್ ಜಾರಕಿಹೊಳಿ ನೇತೃತ್ವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷ ಕಟ್ಟಿದ ಯಡಿಯೂರಪ್ಪ ಅವರನ್ನೇ ಸೈಡ್ ಲೈನ್ ಮಾಡಿದ್ದಾರೆ. ಯಡಿಯೂರಪ್ಪನವರಿಗೆ (Yediyurappa) ನೇತೃತ್ವ ಕೊಡುತ್ತಿಲ್ಲ. ಇನ್ನೂ ರಮೇಶ್ ಜಾರಕಿಹೊಳಿ ಯಾವ ಲೆಕ್ಕ? ಬಿಜೆಪಿ (BJP) ನಾಯಕರು ರಮೇಶ್ ಜಾರಕಿಹೊಳಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಮಂತ್ರಿಗಾಗಿ ಕಾದು ಕುಳಿತ ರಮೇಶ್ ಕಲ್ಲು ಎಸೆಯಬಾರದು ಅಂತಾ ಚಾಕಲೇಟ್ ತಿನ್ನಿಸುವ ಕೆಲಸ ಮಾಡುತ್ತಿದ್ದಾರೆ. ರಮೇಶ್ ಜಾಕಿಹೊಳಿ ಸಿಟ್ಟಾದರೆ ಏನಾದರೂ ಮಾಡಬಹುದು ಎಂಬ ಭಯ ಬಿಜೆಪಿ ನಾಯಕರಿಗೆ ಇದೆ. ಹಿಂದಿನ ಸರ್ಕಾರ ಕೆಡವಿದ ರಮೇಶ್ ಜಾರಕಿಹೊಳಿಗೆ ಈ ಸರ್ಕಾರ ಕೆಡುವುದು ದೊಡ್ಡ ಮಾತಲ್ಲ. ಒಂದು ಬಾರಿ ಬೈಪಾಸ್ ಸರ್ಜರಿ ಮಾಡಿದವನಿಗೆ ಎರಡನೇ ಬೈಪಾಸ್ ಸರ್ಜರಿ ಮಾಡುವುದು ದೊಡ್ಡ ಕೆಲಸವಲ್ಲ. ಹಾಗಾಗಿ ರಮೇಶ್ ಜಾರಕಿಹೊಳಿಗೆ ತಿಂಗಳಿಗೊಮ್ಮೆ ಚಾಕಲೇಟ್ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಆಸ್ಪತ್ರೆಯನ್ನು ಸ್ಫೋಟಿಸುತ್ತೇನೆ- ಮುಖೇಶ್ ಅಂಬಾನಿ, ಕುಟುಂಬಸ್ಥರಿಗೆ ಜೀವ ಬೆದರಿಕೆ

    ಸಿಎಂ (BasavarajBommai) ಈಗಾಗಲೇ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಮೂರು ಬಾರಿ ಮಾತನಾಡಿದ್ದಾರೆ. ಈಗ ಮತ್ತೆ ಈ ಕುರಿತಂತೆ ಬಿಜೆಪಿ ಹೈಕಮಾಂಡ್ ಭೇಟಿಗೆ ದೆಹಲಿಗೆ ಹೊರಟಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಗುಜರಾತ್ ಚುನಾವಣೆಯಲ್ಲಿ (Gujrat Election) ಬ್ಯೂಸಿ ಆಗಿದ್ದಾರೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ಚುನಾವಣಾ ನಡೆಸುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರನ್ನು ನಮ್ಮ ನಾಯಕ ಅಂತಾ ಒಪ್ಪಿಕೊಂಡಿಲ್ಲ. ಇನ್ನೂ ರಮೇಶ್ ಜಾರಕಿಹೊಳಿ ಯಾವ ಲೆಕ್ಕ? ರಮೇಶ್ ಜಾರಕಿಹೊಳಿಗೆ ಆಗಾಗ ಏನಿದ್ದರೂ ಸಮಾಧಾನಕರ ಬಹುಮಾನ ಕೊಡುತ್ತಾರೆ. ಹೀಗಾಗಿ ರಮೇಶ್‍ಗೆ ಬಂದಾಗೊಮ್ಮೆ ಚಾಕಲೇಟ್ ಕೊಟ್ಟು ಹೋಗುತ್ತಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ಸಿಗರ ಭಾರತ ಬಿಟ್ಟು ಓಡೋ ಯಾತ್ರೆ: ನಳೀನ್ ಕುಮಾರ್ ಕಟೀಲ್

    Live Tv
    [brid partner=56869869 player=32851 video=960834 autoplay=true]

  • ಗಾಂಜಾ ಮಿಶ್ರಿತ ಚಾಕ್ಲೇಟ್ ಮಾರಾಟ- ರಾಯಚೂರಿನಲ್ಲಿ ಅಬಕಾರಿ ಪೊಲೀಸರ ದಾಳಿ

    ಗಾಂಜಾ ಮಿಶ್ರಿತ ಚಾಕ್ಲೇಟ್ ಮಾರಾಟ- ರಾಯಚೂರಿನಲ್ಲಿ ಅಬಕಾರಿ ಪೊಲೀಸರ ದಾಳಿ

    ರಾಯಚೂರು: ಗಾಂಜಾ ಮಿಶ್ರಿತ ಚಾಕ್ಲೇಟ್ (Chocolate) ಮಾರಾಟ ದೂರು ಹಿನ್ನೆಲೆಯಲ್ಲಿ ರಾಯಚೂರಿನ ವಿವಿಧೆಡೆ ಅಬಕಾರಿ ಪೊಲೀಸರು (Excise Police) ಮಿಂಚಿನ ಕಾರ್ಯಾಚರಣೆ ಮಾಡಿದ್ದಾರೆ.

    ಜಿಲ್ಲೆಯಲ್ಲಿ 8 ತಂಡ ರಚಿಸಿ ದಾಳಿ ನಡೆಸಿದ ಅಬಕಾರಿ ಪೊಲೀಸರು ನಗರದ ವಿವಿಧೆಡೆ ಕಿರಾಣಿ ಅಂಗಡಿ, ಪಾನ್ ಡಬ್ಬಾ ಅಂಗಡಿಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ಆದರೆ ರಾಯಚೂರು ನಗರದಲ್ಲಿ ಎಲ್ಲೂ ಗಾಂಜಾ (Ganja) ಮಿಶ್ರಿತ ಚಾಕ್ಲೆಟ್ ಪತ್ತೆಯಾಗಿಲ್ಲ. ದಾಳಿ ಮುಂದುವರಿದಿದ್ದು ಸಾರ್ವಜನಿಕರಲ್ಲಿ ಚಾಕ್ಲೆಟ್ ಬಗ್ಗೆ ಮಾಹಿತಿ ಇದ್ರೆ ಕೂಡಲೇ ಸಂಪರ್ಕಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ತಾಯಿ ಅಗಲಿಕೆ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಇನ್ಸ್‌ಪೆಕ್ಟರ್ – ಕುಖ್ಯಾತ ಕಳ್ಳನನ್ನು ಬಂಧಿಸಿ ಭಾರೀ ಮೆಚ್ಚುಗೆ

    ಯಾದಗಿರಿ ಜಿಲ್ಲೆಯ ಶಹಪುರ, ಸುರಪುರದಲ್ಲಿ 7500 ಹೆಚ್ಚು ಚಾಕ್ಲೇಟ್ ಪತ್ತೆ ಹಿನ್ನೆಲೆ, ಜಿಲ್ಲೆಯಲ್ಲೂ ಮಾರಾಟ ಬಗ್ಗೆ ಅನಾಮಧೇಯ ಬಾತ್ಮಿ, ದೂರುಗಳು ಬಂದ ಹಿನ್ನೆಲೆ ದಾಳಿ ಮಾಡಲಾಗಿದೆ. ಆದರೆ ಏಕಾಏಕಿ ಕಾರ್ಯಾಚರಣೆ ನಡೆಸಿದ ಹಿನ್ನೆಲೆ ಕಿರಾಣಿ ಅಂಗಡಿಗಳ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗಡಿಗಳಲ್ಲಿನ ವಸ್ತುಗಳನ್ನೆಲ್ಲಾ ಹೊರಗೆ ಹಾಕಿ ಪರಿಶೀಲನೆ ಮಾಡಿರುವುದರಿಂದ ಇದು ಸರಿಯಾದ ಕ್ರಮ ಅಲ್ಲಾ ಅಂತ ವ್ಯಾಪಾರಿಗಳು ಅಸಮಾಧಾನ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಾಕೊಲೇಟ್‌ನಲ್ಲಿ ಗಾಂಜಾ ಬೆರೆಸಿ ಮಾರಾಟ – ವ್ಯಕ್ತಿ ಅರೆಸ್ಟ್

    ಚಾಕೊಲೇಟ್‌ನಲ್ಲಿ ಗಾಂಜಾ ಬೆರೆಸಿ ಮಾರಾಟ – ವ್ಯಕ್ತಿ ಅರೆಸ್ಟ್

    ಚೆನ್ನೈ: ಚಾಕೊಲೇಟ್‍ಗಳ ಜೊತೆಗೆ 20.5 ಕೆಜಿ ಗಾಂಜಾ ಬೆರೆಸಿ ಮಾರಾಟ ಮಾಡುತ್ತಿದ್ದ 58 ವರ್ಷದ ವ್ಯಕ್ತಿಯನ್ನು ಕೊಯಮತ್ತೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಅರಿವೋಲಿ ನಗರದ ಕೆ.ಬಾಲಾಜಿ ಎಂದು ಗುರುತಿಸಲಾಗಿದ್ದು, ಈತನೊಂದಿಗೆ ಇನ್ನೂ 15 ಮಂದಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೇಸಲ್ಲಿ ಇನ್ನಿಬ್ಬರ ಬಂಧನ- ಪ್ರಕರಣದ ಮಾಸ್ಟರ್ ಮೈಂಡ್ ಬಗ್ಗೆಯೂ ಸುಳಿವು

    ಇದೀಗ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 272, 273, 328 ಮತ್ತು (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ) ಸೇರಿದಂತೆ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಿಷೇಧಿತ ಪದಾರ್ಥಗಳ ಪರೀಕ್ಷೆಗಾಗಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಎಗ್‍ಲೆಸ್ ‘ಚಾಕೊಲೇಟ್ ಬ್ರೌನಿ’ ಮಾಡುವ ವಿಧಾನ

    ಎಗ್‍ಲೆಸ್ ‘ಚಾಕೊಲೇಟ್ ಬ್ರೌನಿ’ ಮಾಡುವ ವಿಧಾನ

    ಚಾಕೊಲೇಟ್ ಎಂದರೇ ಚಿಕ್ಕವರಿಂದ ದೊಡ್ಡವರ ತನಕ ಇಷ್ಟಪಟ್ಟು ತಿನ್ನುತ್ತಾರೆ. ಇತ್ತೀಚೆಗೆ ಹೆಚ್ಚು ಫೇಮಸ್ ಆಗುತ್ತಿರುವ ‘ಚಾಕೊಲೇಟ್ ಬ್ರೌನಿ’ಯನ್ನು ಮೊಟ್ಟೆಯಿಲ್ಲದೇ ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ. ನೀವು ಸಹ ಮನೆಯಲ್ಲಿ ಸುಲಭವಾಗಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಸಕ್ಕರೆ – 1 ಕಪ್
    * ಮೈದಾ – 3/4 ಕಪ್
    * ಬೇಕಿಂಗ್ ಪೌಡರ್ – 1ವರೆ ಟೀಸ್ಪೂನ್
    * ಕೋಕೋ ಪೌಡರ್ – 1/3 ಕಪ್(30 ಗ್ರಾಂ)
    * ಬೆಣ್ಣೆ – 1/2 ಕಪ್
    * ಮೊಸರು – 1/2 ಕಪ್
    * ವೆನಿಲ್ಲಾ ಸಿರಂ – 1 ಟೀ ಸ್ಪೂನ್
    * ಸೆಮಿ ಸ್ವೀಟ್ ಚಾಕೊಲೇಟ್ ಚಿಪ್ಸ್ – 1/2 ಕಪ್

    ಮಾಡುವ ವಿಧಾನ:
    * 10 ನಿಮಿಷಗಳ ಕಾಲ ಬಾಣಲೆ ಬಿಸಿ ಮಾಡಿ. ಅದಕ್ಕೆ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ.
    * ಮಿಕ್ಸರ್‍ಗೆ ಹಾಕಿ ಸಕ್ಕರೆಯನ್ನು ಪುಡಿ ಮಾಡಿ. ನಂತರ ಮೈದಾ ಮತ್ತು ಕೋಕೋ ಪೌಡರ್‍ನನ್ನು ಜರಡಿ ಮಾಡಿಕೊಮಡು ಎರಡನ್ನು ಮಿಶ್ರಣ ಮಾಡಿ.
    * ಮತ್ತೊಂದು ಬಟ್ಟಲಿನಲ್ಲಿ ಕರಗಿದ ಮತ್ತು ತಂಪಾಗಿಸಿದ ಬೆಣ್ಣೆಯನ್ನು ತೆಗೆದುಕೊಳ್ಳಿ. ಅದಕ್ಕೆ ಮೊಸರು ಸೇರಿಸಿ. 1 ಟೀಚಮಚ ವೆನಿಲ್ಲಾ ಸಿರಂ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ.


    * ಅದಕ್ಕೆ ಚಾಕೊಲೇಟ್ ಚಿಪ್ಸ್ ಸೇರಿಸಿ. ಚೆನ್ನಾಗಿ ಬೆರೆಸಿ. ಅದನ್ನು ಕೇಕ್ ಪ್ಯಾನ್‍ಗೆ ಚಾಕೋಲೇಟ್ ಮಿಶ್ರಣವನ್ನು ಹಾಕಿ ಗ್ಯಾಸ್ ಮೇಲೆ 20 ರಿಂದ 30ನಿಮಿಷಗಳ ಬಿಸಿ ಮಾಡಿ.
    * ನಂತರ ಪ್ಯಾನ್‍ನಿಂದ ತೆಗೆದುಹಾಕುವ ಮೊದಲು ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಅದು ತಣ್ಣಗಾದ ನಂತರ,‌ ಕೇಕ್ ಪ್ಯಾನ್‍ ಬದಿ ಹಿಡಿದು ಬ್ರೌನಿ ಕೇಕ್ ಎಚ್ಚರಿಕೆಯಿಂದ ಮೇಲಕ್ಕೆತ್ತಿ.
    * ಚಾಕುವಿನಿಂದ ಅದನ್ನು ಕಟ್ ಮಾಡಿ.

    Live Tv
    [brid partner=56869869 player=32851 video=960834 autoplay=true]

  • ಚಾಕ್ಲೆಟ್ ಕವರ್ ನುಂಗಿ 6 ವರ್ಷದ ಬಾಲಕಿ ಸಾವು

    ಚಾಕ್ಲೆಟ್ ಕವರ್ ನುಂಗಿ 6 ವರ್ಷದ ಬಾಲಕಿ ಸಾವು

    ಉಡುಪಿ: ಚಾಕ್ಲೆಟ್ ಕವರ್ ನುಂಗಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.

    ಬಾಲಕಿಯನ್ನು ಸಮನ್ವಿ (6) ಎಂದು ಗುರುತಿಸಲಾಗಿದ್ದು, ಈಕೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಮೂಲದ ನಿವಾಸಿ. ಸಮನ್ವಿ ಉಪ್ಪುಂದದ ಆಂಗ್ಲ ಮಾಧ್ಯಮ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಳೆ.

    ಶಾಲೆಯ ಬಸ್ಸಿಗೆ ಕಾಯುತ್ತಿರುವ ಸಮಯದಲ್ಲಿ ಸಮನ್ವಿ ಪ್ಲಾಸ್ಟಿಕ್ ಕವರ್ ಸಮೇತ ಚಾಕ್ಲೆಟ್ ತಿಂದಿದ್ದಾಳೆ. ಹೀಗೆ ತಿಂದ ಚಾಕ್ಲೆಟ್ ಬಾಲಕಿ ಗಂಟಲಲ್ಲಿ ಸಿಲುಕಿಕೊಂಡು ಉಸಿರುಗಟ್ಟಿ ಶಾಲಾ ವಾಹನದಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.

    ಸದ್ಯ ಬಾಲಕಿಯ ಮೃತದೇಹವನ್ನು ಮಣಿಪಾಲ್ ಕೆ.ಎಂ.ಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ಯಾಕ್ಟೀರಿಯಾ ಪತ್ತೆ- ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಸ್ಥಗಿತ

    ಬ್ಯಾಕ್ಟೀರಿಯಾ ಪತ್ತೆ- ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಸ್ಥಗಿತ

    ಬ್ರಸೆಲ್ಸ್: ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಸದ್ಯ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

    ಬೆಲ್ಜಿಯಂನ ವೈಜ್ ನಗರದಲ್ಲಿರುವ ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ನಡೆಸುತ್ತಿರುವ ಚಾಕೊಲೇಟ್ ಫ್ಯಾಕ್ಟರಿ ವಿಶ್ವದಲ್ಲೇ ಅತ್ಯಂತ ದೊಡ್ಡ ಫ್ಯಾಕ್ಟರಿಯಾಗಿದೆ. ಅದರಲ್ಲಿ ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿರುವುದು ಚಾಕೊಲೇಟ್ ಪ್ರಿಯರಿಗೆ ಆಘಾತ ತಂದಿದೆ. ಸದ್ಯ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿಲಾಗಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಪ್ರವಾಹದಿಂದ ರಕ್ಷಿಸಿಕೊಳ್ಳಲು ತೇಲುವ ಮನೆ ನಿರ್ಮಿಸಿದ ಜಪಾನ್ – ಏನಿದರ ವಿಶೇಷತೆ?

    ಈ ಬಗ್ಗೆ ಮಾಹಿತಿ ನೀಡಿರುವ ಕಂಪನಿ ವಕ್ತಾರ ಕಾರ್ನೀಲ್ ವಾರ್ಲೋಪ್, ಪರೀಕ್ಷೆಯ ಬಳಿಕ ತಯಾರಿಸಲಾದ ಎಲ್ಲಾ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದೆ. ಬ್ಯಾಕ್ಟೀರಿಯಾ ಕಂಡುಬಂದಂತೆ ಉತ್ಪನ್ನಗಳನ್ನು ಪಡೆದಿರುವ ಎಲ್ಲಾ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಮುಂದಿನ ಸೂಚನೆ ಬರುವವರೆಗೂ ಚಾಕೊಲೇಟ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

    ಬ್ಯಾಕ್ಟೀರಿಯಾ ಪತ್ತೆಯಾದ ಬಳಿಕದ ಹೆಚ್ಚಿನ ಉತ್ಪನ್ನಗಳು ಮಾರಾಟವಾಗಿಲ್ಲ. ಆದರೂ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಜೂನ್ 25ರಿಂದ ತಯಾರಿಸಲಾದ ಉತ್ಪನ್ನಗಳನ್ನು ರವಾನಿಸದಂತೆ ಕೇಳಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಂಗರ್ ಕೆಲ್ಲಿಗೆ 30 ವರ್ಷ ಜೈಲು ಶಿಕ್ಷೆ: 9 ಆರೋಪ ಸಾಬೀತು

    ವಿಶ್ವದ ನಂ.1 ಚಾಕೊಲೇಟ್ ತಯಾರಿಕಾ ಕಂಪನಿ ಇದಾಗಿದ್ದು, 2020-2021 ಹಣಕಾಸು ವರ್ಷದಲ್ಲಿ 2 ಕೋಟಿ ಟನ್‌ಗಳಷ್ಟು ಉತ್ಪನ್ನಗಳು ಮಾರಾಟವಾಗಿವೆ. ಕಂಪನಿಯಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಪ್ರಪಂಚದಾದ್ಯಂತ 60ಕ್ಕೂ ಹೆಚ್ಚು ಉತ್ಪಾದನಾ ಘಟಕಗಳಿವೆ.

    Live Tv

  • ಇಡ್ಲಿ ಪಾತ್ರೆಯಲ್ಲಿ ಮಾಡಿ ‘ಚಾಕೊಲೇಟ್ ಚಿಪ್ ಕುಕೀಸ್’

    ಇಡ್ಲಿ ಪಾತ್ರೆಯಲ್ಲಿ ಮಾಡಿ ‘ಚಾಕೊಲೇಟ್ ಚಿಪ್ ಕುಕೀಸ್’

    ಚಾಕೊಲೇಟ್ ಎಂದರೇ ಎಲ್ಲರಿಗೂ ಇಷ್ಟ. ಚಾಕೊಲೇಟ್‍ನಿಂದ ಮಾಡುವ ಎಲ್ಲ ತಿನಿಸುಗಳನ್ನು ಜನರು ಇಷ್ಟಪಟ್ಟು ತಿನ್ನುತ್ತಾರೆ. ಈಗ ಟ್ರೆಂಡಿಯಾಗಿ ಪ್ರಾರಂಭವಾಗಿರುವ ‘ಚಾಕೊಲೇಟ್ ಚಿಪ್ ಕುಕೀಸ್’ ರೆಸಿಪಿಯನ್ನು ಮಾಡುವುದು ತುಂಬಾ ಸುಲಭ. ಇದಕ್ಕೆ ಕುಕೀಸ್ ಮೇಕಿಂಗ್ ಬೇಕು ಎಂಬುದೇನಿಲ್ಲ. ಇಡ್ಲಿ ಪಾತ್ರೆ ಇದ್ರೆ ಈ ಕುಕೀಸ್ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ನೀವು ಇದನ್ನು ಮನೆಯಲ್ಲಿ ಟ್ರೈ ಮಾಡಿ, ಟೇಸ್ಟ್ ನೋಡಿ.

    ಬೇಕಾಗಿರುವ ಪದರ್ಥಾಗಳು:
    * ಬೆಣ್ಣೆ – 1 ಕಪ್
    * ಸಕ್ಕರೆ – 1 ಕಪ್
    * ಬ್ರೌನ್ ಶುಗರ್ – 1 ಕಪ್
    * ಮೊಟ್ಟೆ – 2
    * ವೆನಿಲ್ಲಾ ಸಿರಂ – 2 ಟೀಸ್ಪೂನ್


    * ಅಡಿಗೆ ಸೋಡಾ – 1 ಟೀಸ್ಪೂನ್
    * ಬಿಸಿ ನೀರು – 2 ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ಮೈದಾ ಹಿಟ್ಟು – 3 ಕಪ್
    * ಚಾಕೊಲೇಟ್ ಚಿಪ್ಸ್ – 2 ಕಪ್
    * ಮಾಡಿದ ವಾಲ್ನುಟ್ಸ್ – 1 ಕಪ್ ಕಟ್

    ಮಾಡುವ ವಿಧಾನ:
    * ಪ್ಯಾನ್ ಬಿಸಿಯಾದ ಮೇಲೆ ಅದಕ್ಕೆ ಬೆಣ್ಣೆ, ಸಕ್ಕರೆ ಮತ್ತು ಬ್ರೌನ್ ಶುಗರ್ ಹಾಕಿ ಅದು ಪಾಕದ ರೀತಿ ಆಗುವವರೆಗೂ ಬೇಯಿಸಿ.
    * ನಂತರ ಮೊಟ್ಟೆಗಳನ್ನು ಒಡೆದು ಈ ಮಿಶ್ರಣಕ್ಕೆ ಹಾಕಿ. ನಂತರ ವೆನಿಲ್ಲಾ, ಅಡಿಗೆ ಸೋಡಾವನ್ನು ಬೆರೆಸಿ ಪಾಕ ರೆಡಿ ಮಾಡಿಕೊಳ್ಳಿ.
    * ಇನ್ನೊಂದು ಪಾತ್ರೆಯಲ್ಲಿ ಮೈದಾ ಹಿಟ್ಟಿಗೆ ಸ್ವಲ್ಪ ಉಪ್ಪು ಹಾಕಿ ಕಲಸಿ. ನಂತರ ಹಿಟ್ಟಿಗೆ ಚಾಕೊಲೇಟ್ ಚಿಪ್ಸ್ ಮತ್ತು ವಾಲ್ನುಟ್ಸ್ ಬೆರೆಸಿ. ನಂತರ ಇದಕ್ಕೆ ಪಾಕವನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ.
    * ಇದನ್ನು ಚಾಕೊಲೇಟ್ ಮೇಕಿಂಗ್‍ಗೆ ಅಥವಾ ಇಡ್ಲಿ ಪಾತ್ರೆಗೆ ಕುಕೀಸ್ ಮಿಶ್ರಣವನ್ನು ಹಾಕಿ, 20 ನಿಮಿಷ ಬಿಡಿ.

    _ ಈಗ ಬಿಸಿ, ಬಿಸಿಯಾದ ‘ಚಾಕೊಲೇಟ್ ಚಿಪ್ ಕುಕೀಸ್’ ಸವಿಯಲು ಸಿದ್ಧ.

    Live Tv