Tag: chocalate

  • ಟ್ಯಾಂಕರ್ ಪಲ್ಟಿಯಾಗಿ ರಸ್ತೆಯಿಡೀ ಹರಿಯಿತು ಚಾಕಲೇಟ್!

    ಟ್ಯಾಂಕರ್ ಪಲ್ಟಿಯಾಗಿ ರಸ್ತೆಯಿಡೀ ಹರಿಯಿತು ಚಾಕಲೇಟ್!

    ಪೋಲ್ಯಾಂಡ್: ಚಾಕಲೇಟ್ ದ್ರಾವಣ ತುಂಬಿದ್ದ ಟ್ಯಾಂಕರೊಂದು ರಸ್ತೆ ಮಧ್ಯೆ ಪಲ್ಟಿಯಾದ ಪರಿಣಾಮ ದ್ರವ ರೂಪದ ಚಾಕಲೇಟ್ ರಸ್ತೆಯಿಡೀ ಚೆಲ್ಲಿದ ಘಟನೆ ಪೋಲ್ಯಾಂಡ್ ನಲ್ಲಿ ನಡೆದಿದೆ.

    ಈ ಘಟನೆ ಬುಧವಾರ ನಡೆದಿದ್ದು, ಘಟನೆಯಿಂದ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ಬಂದಿತ್ತು. ಈ ಟ್ಯಾಂಕರ್ ದಕ್ಷಿಣ ಪೋಲ್ಯಾಂಡ್ ಗೆ ಸೇರಿದ್ದಾಗಿದೆ ಎಂಬುದಾಗಿ ವರದಿಯಾಗಿದೆ.

    ಗ್ರ್ಯಾಬೋಸ್ಜೆವೊ ಟ್ರಾಫಿಕ್ ತಡೆಗೋಡೆಗೆ ಡಿಕ್ಕಿಯಾದ ಪರಿಣಾಮ ಸುಮಾರು 12 ಟನ್ ಚಾಕಲೇಟ್ ದ್ರಾವಣವಿದ್ದ ಟ್ಯಾಂಕರ್ ಪಲ್ಟಿಯಾಗಿದೆ ಎಂದು ಅಲ್ಲಿನ ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

    ಘಟನೆಯಲ್ಲಿ 60 ವರ್ಷದ ಚಾಲಕನ ಕೈಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದರು. ಸೂರ್ಯನ ಬಿಸಿಲಿಗೆ ರಸ್ತೆಯಲ್ಲಿ ಚೆಲ್ಲಿದ್ದ ಚಾಕಲೇಟ್ ದ್ರಾವಣ ಒಣಗಿ ಅಂಟು ಅಂಟಾಗಿತ್ತು. ಹೀಗಾಗಿ ಆ ದ್ರಾವಣವನ್ನು ತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟರು. ಚಾಕಲೇಟ್ ಗಿಂತ ಎಣ್ಣೆಯನ್ನು ತೆರವುಗೊಳಿಸುವುದೇ ಸುಲಭ ಅಂತ ಸ್ಲುಪ್ಕಾ ನಗರದ ಪೊಲೀಸ್ ಮಾರ್ಲೆನಾ ಕುಕಾವಾಕ ತಿಳಿಸಿದ್ದಾರೆ.

  • ಚಾಕ್ಲೇಟ್ ತಿನ್ನುವ ಮುನ್ನ ಎಚ್ಚರ- ಸಿಹಿ ಜೊತೆ ಫ್ರಿಯಾಗಿ ಸಿಗುತ್ತೆ ಹುಳುಗಳು!

    ಚಾಕ್ಲೇಟ್ ತಿನ್ನುವ ಮುನ್ನ ಎಚ್ಚರ- ಸಿಹಿ ಜೊತೆ ಫ್ರಿಯಾಗಿ ಸಿಗುತ್ತೆ ಹುಳುಗಳು!

    ಬೆಂಗಳೂರು: ಹುಟ್ಟುಹಬ್ಬ, ಪ್ರೇಮಿಗಳ ದಿನ, ಹೊಸ ವರ್ಷ, ಪಾರ್ಟಿ.. ಹೀಗೆ ಎಲ್ಲ ಸಂತೋಷದಲ್ಲೂ ನಾವು ಮೊದಲು ಖರೀದಿಸೋದು ಚಾಕ್ಲೇಟ್. ಆದ್ರೇ ನಗರದ ಪ್ರತಿಷ್ಠಿತ ಅಂಗಡಿಯಲ್ಲಿ ಸಿಗೋ ಚಾಕ್ಲೇಟ್ ಗಳನ್ನ ನೀವು ತಿಂದ್ರೆ ನಿಮ್ಮ ಆರೋಗ್ಯಕ್ಕೆ ಕುತ್ತು ಗ್ಯಾರಂಟಿ.

    ಪ್ರತಿಷ್ಠಿತ ಅಂಗಡಿಗಳಿಗೆ ಹೋಗಿ ಸೊಗಸಾಗಿ ಪ್ಯಾಕ್ ಆಗಿರೋ ಚಾಕ್ಲೇಟ್ ಗಳನ್ನು ಖರೀದಿಸಿ ಮಕ್ಕಳಿಗೆ ಕೊಡುವ ಮುನ್ನ ಪರೀಕ್ಷಿಸಿಕೊಳ್ಳಿ. ಯಾಕಂದ್ರೆ ಸಿಹಿ ಜೊತೆ ಇಲ್ಲಿ ಹುಳುಗಳೂ ಫ್ರೀಯಾಗಿ ಸಿಕ್ತಾವೆ. ಈ ಬಗ್ಗೆ ಯಾರಾದ್ರೂ ಬಂದು ಕೇಳಿದ್ರೆ ಅವರಿಗೆ ಬದಲಿ ಚಾಕ್ಲೇಟ್ ಕೊಟ್ಟು ಕಳಿಸಿ ಕೈ ತೊಳೆದುಕೊಳ್ತಾರೆ. ಬಿಟಿಎಂ ಲೇಔಟ್‍ನಲ್ಲಿರೋ `ಮೋರ್ ದೆನ್’ ಚಾಕ್ಲೇಟ್ ಹಾಗೂ ಕೇಕ್ ಶಾಪ್ ನಲ್ಲಿ ಹುಳುವಿರೋ ಚಾಕ್ಲೇಟ್ ಗಿಫ್ಟ್ ಆಗಿ ಸಿಕ್ಕಿದೆ. ಎಕ್ಸ್ಪೈರ್ ಡೇಟ್ ಸಹ ಅಳಿಸಿ ಚಾಕ್ಲೇಟ್ ಮಾರಾಟ ಮಾಡಲಾಗಿತ್ತು.

    ಈ ಬಗ್ಗೆ ಅಂಗಡಿಯವರನ್ನ ಕೇಳಿದ್ರೆ ಬದಲಿ ಚಾಕ್ಲೇಟ್ ಕೊಟ್ಟು ಸಾಗಹಾಕೋಕೆ ಮುಂದಾದ್ರು. ಹಣ ಪಡೆದು ಅವಧಿ ಮುಗಿದಿರೋ ಹುಳುಗಳಿರೋ ಚಾಕ್ಲೇಟ್ ಮಾರಾಟ ಮಾಡಿದ ವ್ಯಾಪಾರಿ ವಿರುದ್ಧ ಗ್ರಾಹಕಿ ವೇದ ಗ್ರಾಹಕರ ಕೋರ್ಟ್ ಮೆಟ್ಟಿಲೇರೋ ತಯಾರಿ ನಡೆಸಿದ್ದಾರೆ.