Tag: Chlorine Gas

  • ಜಲಶುದ್ಧೀಕರಣ ಘಟಕದಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆ-ಮೂವರು ಅಸ್ವಸ್ಥ

    ಜಲಶುದ್ಧೀಕರಣ ಘಟಕದಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆ-ಮೂವರು ಅಸ್ವಸ್ಥ

    ವಿಜಯಪುರ: ಜಲಶುದ್ಧೀಕರಣ ಘಟಕದಲ್ಲಿನ ಕ್ಲೋರಿನ್ ಗ್ಯಾಸ್ ಟ್ಯಾಂಕ್ ಸೋರಿಕೆಯಾದ ಘಟನೆ ವಿಜಯಪುರದ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದ್ದು, ರಾಸಾಯನಿಕ ಹೊಗೆ ಸೇವಿಸಿ ಮೂರು ಜನ ಅಸ್ವಸ್ಥರಾಗಿದ್ದಾರೆ.

    ಪಟ್ಟಣದ ತೆಲಗಿ ರಸ್ತೆ ಬಳಿ ಇರುವ ಜಲ ಶುದ್ಧೀಕರಣದ ಘಟಕದಲ್ಲಿ ಈ ಅವಘಡ ಸಂಭವಿಸಿದ್ದು, ಸುಮಾರು ಮೂರು ಗಂಟೆಗಳ ಕಾಲ ಗ್ಯಾಸ್ ಟ್ಯಾಂಕ್ ಲೀಕ್ ಆಗಿ ಕೊಠಡಿಯಿಂದ ರಾಸಾಯನಿಕ ಹೊಗೆ ಸೋರಿಕೆಯಾಗಿದೆ. ಇನ್ನು ಇದು ಸುಮಾರು 2 ಸಾವಿರ ಕಿಲೋ ಸಾಮರ್ಥ್ಯದ ಟ್ಯಾಂಕ್ ಆಗಿದ್ದು, ರಾಸಾಯನಿಕ ಹೊಗೆ ಸೇವಿಸಿದ ಸುತ್ತಲಿನ ಪ್ರದೇಶ ಮಕ್ಕಳು ವಾಂತಬೇಧಿ ಸಮಸ್ಯೆಗೆ ಒಳಗಾಗಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹೊಗೆ ಆರಿಸಲು ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಕಾರ್ಯಾಚರಣೆ ವೇಳೆ ರಾಸಾಯನಿಕ ಹೊಗೆ ಸೇವಿಸಿ ಮೂವರು ಅಗ್ನಿಶಾಮಕ ಸಿಬ್ಬಂದಿ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಸ್ಥಳೀಯ ಬಾಗೇವಾಡಿ ಪಟ್ಟಣದ ನಿವಾಸಿಗಳು ಆತಂಕದಲ್ಲಿದ್ದಾರೆ.