Tag: chiyaan vikaram

  • ನಾನು ಭೂಮಿಯ ಮೇಲಿನ ಅದೃಷ್ಟ ವ್ಯಕ್ತಿ: ವಿಕ್ರಮ್ ಭೇಟಿಯಾದ ಡಿವೈನ್ ಸ್ಟಾರ್

    ನಾನು ಭೂಮಿಯ ಮೇಲಿನ ಅದೃಷ್ಟ ವ್ಯಕ್ತಿ: ವಿಕ್ರಮ್ ಭೇಟಿಯಾದ ಡಿವೈನ್ ಸ್ಟಾರ್

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ಕಾಲಿವುಡ್ (Kollywood) ಸ್ಟಾರ್ ನಟ ಚಿಯಾನ್ ವಿಕ್ರಮ್‌ರನ್ನು (Chiyaan Vikram) ಭೇಟಿಯಾಗಿದ್ದಾರೆ. 24 ವರ್ಷಗಳ ಕಾಯುವಿಕೆಯ ನಂತರ ವಿಕ್ರಮ್ ಅವರನ್ನು ಭೇಟಿಯಾದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ರಿಷಬ್ ಸಂಭ್ರಮಿಸಿದ್ದಾರೆ.

    ನಟನಾಗುವಾಗ ನನ್ನ ಪ್ರಯಾಣದಲ್ಲಿ, ವಿಕ್ರಮ್ ಸರ್ ಯಾವಾಗಲೂ ನನಗೆ ಸ್ಫೂರ್ತಿಯಾಗಿದ್ದರು. 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಇಂದು ವಿಕ್ರಮ್ ಅವರನ್ನು ಭೇಟಿಯಾದೆ. ಹೀಗಾಗಿ ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ. ನನ್ನಂತಹ ನಟರನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು, ‘ತಂಗಲಾನ್’ ಸಿನಿಮಾಗೆ ಶುಭ ಹಾರೈಸುತ್ತೇನೆ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Rishab Shetty (@rishabshettyofficial)

    ಅಂದಹಾಗೆ, ವಿಕ್ರಮ್ ನಟನೆಯ ‘ತಂಗಲಾನ್’ (Thangalaan) ಚಿತ್ರ ಇದೇ ಆ.15ರಂದು ರಿಲೀಸ್‌ಗೆ ಸಿದ್ಧವಾಗಿದೆ. ಹಾಗಾಗಿ ಪ್ರಚಾರಕ್ಕಾಗಿ ಬೆಂಗಳೂರಿಗೆ ವಿಕ್ರಮ್ ಭೇಟಿ ನೀಡಿದ್ದರು. ಇದೀಗ ಮುಂಬೈ ಮತ್ತು ಕೊಚ್ಚಿಗೆ ಚಿತ್ರತಂಡ ತೆರಳಲಿದೆ.

    ಇನ್ನೂ ಕುಂದಾಪುರದಲ್ಲಿ ‘ಕಾಂತಾರ ಪಾರ್ಟ್ 1’ ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದೇ ವರ್ಷ ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

  • ಚಿಯಾನ್ ವಿಕ್ರಮ್‌ಗೆ ಪವನ್ ಕುಮಾರ್ ಆ್ಯಕ್ಷನ್ ಕಟ್

    ಚಿಯಾನ್ ವಿಕ್ರಮ್‌ಗೆ ಪವನ್ ಕುಮಾರ್ ಆ್ಯಕ್ಷನ್ ಕಟ್

    ʻಲೂಸಿಯಾʼ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಮತ್ತೆ ಸುದ್ದಿಯಲ್ಲಿದ್ದಾರೆ. ಮಾಲಿವುಡ್ ಸ್ಟಾರ್ ಫಯಾದ್ ಫಾಸಿಲ್‌ಗೆ ನಿರ್ದೇಶನ ಮಾಡುತ್ತಿರುವ ಬೆನ್ನಲ್ಲೇ ತಮಿಳಿನ ಸ್ಟಾರ್ ಚಿಯಾನ್ ವಿಕ್ರಮ್‌ಗೆ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.

    ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಪವನ್ ಕುಮಾರ್, ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿರುವ ಹೊಸ ಚಿತ್ರದಲ್ಲಿ ಫಯಾದ್‌ಗೆ ಪವನ್ ನಿರ್ದೇಶನ ಮಾಡುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚಿಯಾನ್ ವಿಕ್ರಮ್ ಮತ್ತು ಪವನ್ ಕುಮಾರ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕಾಗಿ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ.

    ಇತ್ತೀಚೆಗಷ್ಟೇ ಸಿನಿಮಾ ಪ್ರಚಾರಕ್ಕೆ ಚಿಯಾನ್ ವಿಕ್ರಮ್ ಬೆಂಗಳೂರಿಗೆ ಬಂದಿದ್ದರು. ಇದೇ ವೇಳೆ ಪವನ್ ಕುಮಾರ್ ಅವರು ಭೇಟಿಯಾಗಿ, ತಮಗೆ ಕಥೆ ಹೇಳಿರುವುದರ ಬಗ್ಗೆ ಚಿಯಾನ್ ವಿಕ್ರಮ್ ರಿವೀಲ್ ಮಾಡಿದ್ದಾರೆ. ಪವನ್ ಕುಮಾರ್ ಬರೆದಿರುವ ಕಥೆ ತುಂಬಾ ಇಷ್ಟವಾಗಿದೆ. ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ವಿಕ್ರಮ್ ಹೇಳಿದ್ದಾರೆ. ಈ ಚಿತ್ರದಲ್ಲಿ ಪವರ್‌ಫುಲ್‌ ಪಾತ್ರದಲ್ಲಿ ವಿಕ್ರಮ್‌ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಒಟ್ನಲ್ಲಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಪವನ್ ಕುಮಾರ್ ದಕ್ಷಿಣದ ಸಿನಿಮಾಗಳಲ್ಲೂ ಛಾಪೂ ಮೂಡಿಸುತ್ತಿದ್ದಾರೆ. ಚಿಯಾನ್ ವಿಕ್ರಮ್ ಮತ್ತು ಪವನ್ ಕುಮಾರ್‌ಗೆ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]