Tag: chitti babu

  • ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕುಟುಕಿದ ನಿರ್ಮಾಪಕನಿಗೆ ಸಮಂತಾ ತಿರುಗೇಟು

    ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕುಟುಕಿದ ನಿರ್ಮಾಪಕನಿಗೆ ಸಮಂತಾ ತಿರುಗೇಟು

    ಪ್ರತಿಭಾನ್ವಿತ ನಟಿ ಸಮಂತಾ (Samantha) ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಚಿತ್ರರಂಗದಲ್ಲಿ ಗಾಢ್ ಫಾದರ್ ಇಲ್ಲದೇ ತನ್ನ ಪ್ರತಿಭೆಯಿಂದ ಅಪಾರ ಅಭಿಮಾನಿಗಳ ಮನಗೆದ್ದಿರುವ ನಟಿಗೆ ಕೆಲ ದಿನಗಳ ಹಿಂದೆ ನಿರ್ಮಾಪಕ ಚಿಟ್ಟಿಬಾಬು (Chittibabu)  ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಸಮಂತಾ ಮುಖ ಕಿತ್ತು ಹೋಗಿದೆ. ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕಾಮೆಂಟ್ ಮಾಡಿದ್ದರು. ಇದೀಗ ಸಮಂತಾ ತಮ್ಮದೇ ಸ್ಟೈಲಿನಲ್ಲಿ ನಿರ್ಮಾಪಕನಿಗೆ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ನಿರ್ಮಾಪಕ ಹೇಳಿದ್ದೇನು?

    ಸಮಂತಾಗೆ (Samantha) ಇದೀಗ ನಾಯಕಿಯಾಗಿ ನಟಿಸಲು ಆಫರ್ ಬರುತ್ತಿಲ್ಲ. ಅದಕ್ಕೆ ಅವರು ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆಕೆಯ ಮುಖ ಅಜ್ಜಿ ಮುಖದಂತೆ ಆಗಿದೆ. ಟಾಪ್ ಹೀರೋಯಿನ್ ಪಟ್ಟದಿಂದ ಸಮಂತಾ ಕೆಳಗೆ ಬಿದ್ದು ಬಹಳ ಸಮಯವಾಗಿದೆ. ಅದಕ್ಕೆ ‘ಪುಷ್ಪ’ (Pushpa) ಸಿನಿಮಾದಲ್ಲಿ ಊ ಅಂಟಾವ ಹಾಡಿನಲ್ಲಿ ಅರೆಬೆತ್ತಲೆಯಾಗಿ ಕುಣಿದಿದ್ದಾಳೆ. ಹಣ ಮಾಡಲು, ಚಿತ್ರರಂಗದಲ್ಲಿ ನಿಲ್ಲಲು ಹೀಗೆ ಮಾಡ್ತಿದ್ದಾಳೆ ಎಂದಿದ್ದಾರೆ ಚಿಟ್ಟಿಬಾಬು. ಆಕೆಯ ವೃತ್ತಿ ಬದುಕು ಮುಗಿದಿದೆ. ಒಂದು ಸಮಯದಲ್ಲಿ ಒಳ್ಳೆಯ ಸ್ಟಾರ್ ಪಟ್ಟ ಅನುಭವಿಸಿದ್ದಾಳೆ. ಈಗ ಪ್ರತಿ ಸಿನಿಮಾಕ್ಕೂ ಏನೋ ಒಂದು ಡ್ರಾಮಾ ಮಾಡಿಕೊಂಡು, ನಾನು ಸತ್ತುಹೋಗುತ್ತೇನೆ ಎಂದು ಅದು ಇದು ಹೇಳಿ ಡ್ರಾಮಾ ಮಾಡಿಕೊಂಡು ಸಿನಿಮಾ ಗೆಲ್ಲಿಸಿಕೊಳ್ಳಲು ನೋಡುತ್ತಿದ್ದಾಳೆ. ಆದರೆ ಅದೆಲ್ಲ ವರ್ಕೌಟ್ ಆಗುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ನೋಡುತ್ತಾರೆ ಇಲ್ಲವಾದರೆ ಇಲ್ಲ. ‘ಶಾಕುಂತಲಂʼ (Shakuntalam) ಸಿನಿಮಾದ ಕತೆಯೂ ಅಷ್ಟೆ. ಆದರೆ ನನಗಿರುವ ಪ್ರಶ್ನೆ ಎಂದರೆ, ಎಲ್ಲಾ ಚಾರ್ಮ್ ಕಳೆದುಕೊಂಡಿರುವ ನಟಿ ಶಾಕುಂತಲೆ ಅಂತಹ ಅಂದಗಾತಿಯ ಪಾತ್ರಕ್ಕೆ ಹೇಗೆ ಸೂಟ್ ಆಗುತ್ತಾಳೆ ಎಂದು ಚಿಟ್ಟಿಬಾಬು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ:ರಾಡ್ ನಿಂದ ಹೊಡೆದು ಪವನ್ ಕಲ್ಯಾಣ್ ಅಭಿಮಾನಿ ಕೊಂದ ಪ್ರಭಾಸ್ ಫ್ಯಾನ್

    ಆದರೀಗ ಸಮಂತಾ, ಆ ನಿರ್ಮಾಪಕನಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದು ಸ್ಕ್ರೀನ್ ಶಾಟ್ ಹಂಚಿಕೊಳ್ಳುವ ಮೂಲಕ ಅವರು ವ್ಯಂಗ್ಯ ಮಾಡಿದ್ದಾರೆ. ನೇರವಾಗಿ ಚಿಟ್ಟಿಬಾಬು ಹೆಸರನ್ನು ಸಮಂತಾ ಪ್ರಸ್ತಾಪ ಮಾಡದಿದ್ದರೂ ಕೂಡ ನೆಟ್ಟಿಗರಿಗೆ ಅರ್ಥವಾಗಿದೆ. ಚಿಟ್ಟಿಬಾಬು ಅವರ ಕಿವಿಯಲ್ಲಿ ಸಿಕ್ಕಾಪಟ್ಟೆ ಕೂದಲು ಇದೆ. ಅದರ ರಹಸ್ಯವನ್ನು ಬಹಿರಂಗಪಡಿಸುವ ಮೂಲಕ ಸಮಂತಾ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಗೂಗಲ್ ಮಾಡಿದ್ದು ಅದರ ಸ್ಕ್ರಿನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಸಮಂತಾ ಶೇರ್ ಮಾಡಿರುವ ಪೋಸ್ಟ್‌ನಲ್ಲಿ ‘ಮನುಷ್ಯರ ಕಿವಿ ಮೇಲೆ ಕೂದಲು ಯಾಕೆ ಬೆಳೆಯುತ್ತದೆ’ ಎಂದು ಸಮಂತಾ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಅದಕ್ಕೆ ಗೂಗಲ್ ತೋರಿಸಿದ ಉತ್ತರವನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಲೈಂಗಿಕ ಆಸಕ್ತಿಗೆ ಹೆಚ್ಚಿಸುವ ಟೆಸ್ಟಾಸ್ಟಿರಾನ್ ಹಾರ್ಮೋನ್ ಜಾಸ್ತಿ ಇರುವ ಪುರುಷರ ಕಿವಿಯಲ್ಲಿ ಕೂದಲು ಬೆಳೆಯುತ್ತದೆ’ ಎಂಬ ಮಾಹಿತಿ ಈ ಸ್ಕ್ರಿನ್ ಶಾಟ್‌ನಲ್ಲಿದೆ. ಇದು ನಿರ್ಮಾಪಕ ಚಿಟ್ಟಿಬಾಬು ಕುರಿತಾಗಿಯೇ ಸಮಂತಾ ಹೇಳಿದ್ದು, ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಮಂತಾ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಪರ ನಿಂತಿದ್ದಾರೆ.

  • ಸಮಂತಾ ಮುಖ ಕಿತ್ತು ಹೋಗಿದೆ, ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕುಟುಕಿದ ನಿರ್ಮಾಪಕ

    ಸಮಂತಾ ಮುಖ ಕಿತ್ತು ಹೋಗಿದೆ, ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕುಟುಕಿದ ನಿರ್ಮಾಪಕ

    ಸ್ಟಾರ್ ನಟಿ ಸಮಂತಾ ಅವರು ಚಿತ್ರರಂಗದಲ್ಲಿ ಯಾರ ಸಹಾಯವಿಲ್ಲದೇ ತನ್ನ ಶ್ರಮದಿಂದ ನೆಲೆಗಿಟ್ಟಿಸಿಕೊಂಡ ಪ್ರತಿಭಾನ್ವಿತ ನಟಿ. ಸದ್ಯ ‘ಶಾಕುಂತಲಂ’ ಚಿತ್ರದ ನಟನೆಗಾಗಿ ಸ್ಯಾಮ್ ಗಮನ ಸೆಳೆಯುತ್ತಿದ್ದಾರೆ. ಚಿತ್ರಕ್ಕೆ ಬರುತ್ತಿರುವ ಕಾಮೆಂಟ್ಸ್‌ನಿಂದಾಗಿ ಖುಷಿಯಲ್ಲಿರುವ ಸಮಂತಾ ಬಗ್ಗೆ ನಿರ್ಮಾಪಕನೊಬ್ಬ ಕಟುವಾಗಿ ಮಾತನಾಡಿದ್ದಾರೆ. ಸಮಂತಾಳದ್ದು ಅಜ್ಜಿ ಮುಖ, ಅವಳ ವೃತ್ತಿ ಜೀವನ ಮುಗಿದಿದೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

    ಅನಾರೋಗ್ಯದ ವಿರುದ್ಧ ನಟಿ ಹೋರಾಡುತ್ತಿದ್ದಾರೆ. ಸಿನಿಮಾಗಳಿಗೆ ಪ್ರಾಮುಖ್ಯತೆ ನೀಡ್ತಿದ್ದಾರೆ. ಈ ನಡುವೆ ತೆಲುಗಿನ ನಿರ್ಮಾಪಕ ಚಿಟ್ಟಿಬಾಬು ಸಮಂತಾ ವಿರುದ್ಧ ಮಾತನಾಡಿದ್ದಾರೆ. ‘ಶಾಕುಂತಲಂ’ ಸಿನಿಮಾ ಬಗ್ಗೆ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ. ಶಾಕುಂತಲೆ ಅಪ್ರತಿಮ ಸೌಂದರ್ಯವತಿ, ಆದರೆ ಸಮಂತಾಗೆ ಆ ಪಾತ್ರ ಸೂಟ್‌ ಆಗಲ್ಲ. ಸಮಂತಾ ಮುಖ ಕಿತ್ತುಹೋಗಿದೆ. ಅದಕ್ಕಾಗಿ ಜನರನ್ನು ಸೆಳೆಯಲು ನಾನು ಸತ್ತುಹೋಗುತ್ತೇನೆ ಅದೂ ಇದು ಎಂದು ಹೈ ಡ್ರಾಮಾ ಮಾಡ್ತಿದ್ದಾರೆ. ಈ ಹಿಂದೆ ಯಾವುದೋ ಸಿನಿಮಾಕ್ಕೆ ಬೆಡ್ ಮೇಲೆ ಮಲಗಿ ಡಬ್ಬಿಂಗ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ಇದೆಲ್ಲಾ ಅವರ ಪ್ರಚಾರ ಗಿಮಿಕ್. ಹಿಂದೆ ಹಲವು ಕಲಾವಿದರು ತೀವ್ರ ಜ್ವರದ ನಡುವೆಯೂ ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ಚಿಟ್ಟಿಬಾಬು ಕಿಡಿಕಾರಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಸಮಂತಾಗೆ ನಾಯಕಿಯಾಗಿ ನಟಿಸಲು ಆಫರ್ ಬರುತ್ತಿಲ್ಲ. ಅದಕ್ಕೆ ಅವರು ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆಕೆಯ ಮುಖ ಅಜ್ಜಿ ಮುಖದಂತೆ ಆಗಿದೆ. ಟಾಪ್ ಹೀರೋಯಿನ್ ಪಟ್ಟದಿಂದ ಸಮಂತಾ ಕೆಳಗೆ ಬಿದ್ದು ಬಹಳ ಸಮಯವಾಗಿದೆ. ಅದಕ್ಕೆ ‘ಪುಷ್ಪ’ ಸಿನಿಮಾದಲ್ಲಿ ಊ ಅಂಟಾವ ಹಾಡಿನಲ್ಲಿ ಅರೆಬೆತ್ತಲೆಯಾಗಿ ಕುಣಿದಿದ್ದಾಳೆ. ಹಣ ಮಾಡಲು, ಚಿತ್ರರಂಗದಲ್ಲಿ ನಿಲ್ಲಲು ಹೀಗೆ ಮಾಡ್ತಿದ್ದಾಳೆ ಎಂದಿದ್ದಾರೆ ಚಿಟ್ಟಿಬಾಬು. ಆಕೆಯ ವೃತ್ತಿ ಬದುಕು ಮುಗಿದಿದೆ. ಒಂದು ಸಮಯದಲ್ಲಿ ಒಳ್ಳೆಯ ಸ್ಟಾರ್ ಪಟ್ಟ ಅನುಭವಿಸಿದ್ದಾಳೆ. ಈಗ ಪ್ರತಿ ಸಿನಿಮಾಕ್ಕೂ ಏನೋ ಒಂದು ಡ್ರಾಮಾ ಮಾಡಿಕೊಂಡು, ನಾನು ಸತ್ತುಹೋಗುತ್ತೇನೆ ಎಂದು ಅದು ಇದು ಹೇಳಿ ಡ್ರಾಮಾ ಮಾಡಿಕೊಂಡು ಸಿನಿಮಾ ಗೆಲ್ಲಿಸಿಕೊಳ್ಳಲು ನೋಡುತ್ತಿದ್ದಾಳೆ. ಆದರೆ ಅದೆಲ್ಲ ವರ್ಕೌಟ್ ಆಗುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ನೋಡುತ್ತಾರೆ ಇಲ್ಲವಾದರೆ ಇಲ್ಲ. ‘ಶಾಕುಂತಲಂ’ ಸಿನಿಮಾದ ಕತೆಯೂ ಅಷ್ಟೆ. ಆದರೆ ನನಗಿರುವ ಪ್ರಶ್ನೆ ಎಂದರೆ, ಎಲ್ಲಾ ಚಾರ್ಮ್ ಕಳೆದುಕೊಂಡಿರುವ ನಟಿ ಶಾಕುಂತಲಂ ಅಂತಹ ಅಂದಗಾತಿಯ ಪಾತ್ರಕ್ಕೆ ಹೇಗೆ ಸೂಟ್ ಆಗುತ್ತಾಳೆ ಎಂಬುದಷ್ಟೆ ಎಂದಿದ್ದಾರೆ ಚಿಟ್ಟಿಬಾಬು.

    ನಿರ್ಮಾಪಕ ಚಿಟ್ಟಿಬಾಬು ಮಾತುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವಿರೋಧ ವ್ಯಕ್ತವಾಗಿದೆ. ಹಿರಿಯ ನಿರ್ಮಾಪಕನಾಗಿ ನಟಿಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಸರಿಯಲ್ಲ ಎಂದಿದ್ದಾರೆ. ಚಿಟ್ಟಿಬಾಬು ಇಷ್ಟೆಲ್ಲಾ ಮಾತನಾಡಿದ್ರು ಕೂಡ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.