Tag: Chittapur

  • ಹೈಕೋರ್ಟ್ ತೀರ್ಪು ಪಾಲಿಸುತ್ತೇವೆ, ಎಲ್ಲರಿಗೂ ಸಮಾನ ಅವಕಾಶ ನೀಡಿ: ಕಲಬುರಗಿ ಆರ್‌ಎಸ್‌ಎಸ್‌

    ಹೈಕೋರ್ಟ್ ತೀರ್ಪು ಪಾಲಿಸುತ್ತೇವೆ, ಎಲ್ಲರಿಗೂ ಸಮಾನ ಅವಕಾಶ ನೀಡಿ: ಕಲಬುರಗಿ ಆರ್‌ಎಸ್‌ಎಸ್‌

    ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವ ಹಾಗೂ ವಿಜಯದಶಮಿಯ ಅಂಗವಾಗಿ ರಾಜ್ಯಾದ್ಯಂತ ಈವರೆಗೂ 500 ಸ್ಥಳಗಳಲ್ಲಿ ಗಣವೇಷಧಾರಿ ಸ್ವಯಸೇವಕರಿಂದ ಪಥಸಂಚಲನ ನಡೆದಿವೆ. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಆದರೂ ಕಲಬುರಗಿ ಹೈಕೋರ್ಟ್‌ (Kalaburagi) ಪೀಠದ ತೀರ್ಪಿಗನುಗುಣವಾಗಿ ನಾವು ನಡೆಯುತ್ತೇವೆ ಎಂದು ಆರ್‌ಎಸ್‌ಎಸ್‌ ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ಮಂಗಳವಾರ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಶಾಂತಿ ಸಭೆ ಬಳಿಕ ಸಂಘದಿಂದ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸಂಘವು ದೇಶದ ಎಲ್ಲ ಸಮುದಾಯಗಳ ಭಾಷೆ, ಪಂಥ, ನಂಬಿಕೆ ಗೌರವಿಸುವ ಸಂಘಟನೆಯಾಗಿದೆ. ಪಥಸಂಚಲನ (RSS Flag March) ಯಾರ ವಿರುದ್ಧವೂ ಅಲ್ಲ ಎಂದು ಹೇಳಿದರು.

    ಚಿತ್ತಾಪುರ ಒಂದು ಐತಿಹಾಸಿಕ ನಗರ. ಸಂಘದ ಸಂಚಲನದಿಂದ ಯಾವುದೇ ರೀತಿಯ ಅಹಿತಕರ ಘಟನೆ ನಮ್ಮ ಕಡೆಯಿಂದ ಆಗುವುದಿಲ್ಲ. ನ.2 ರಂದು ನಡೆಸಲು ಉದ್ದೇಶಿಸಿರುವ ಪಥಸಂಚಲನವು ಚಿತ್ತಾಪುರ ತಾಲೂಕಿನ ಪೂರ್ವ ನಿರ್ಧಾರಿತ ಕಾರ್ಯಕ್ರಮ. ತಾಲೂಕಿನ ಸ್ವಯಂಸೇವಕರೇ ಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ಹಿಂದೆಯೂ ಚಿತ್ತಾಪುರದಲ್ಲಿ ಸಂಚಲನಗಳು ಶಾಂತವಾಗಿ ನಡೆದಿದ್ದು,ಈಗಲೂ ಸಹ ಶಾಂತವಾಗಿಯೇ ನಡೆಯಲಿದೆ ಎಂಬ ಭರವಸೆ ನಮ್ಮದು. ಹೈಕೋರ್ಟ್‌ನಲ್ಲಿ ಈ ಪ್ರಕರಣವಿದ್ದು ನ್ಯಾಯಾಲಯದ ತೀರ್ಪಿಗನುಗುಣವಾಗಿ ನಾವು ನಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.

    ದೇಶದ ಎಲ್ಲಾ ಸಮುದಾಯಗಳ ಭಾವನೆ ಗೌರವಿಸುವ ಆರ್‌ಎಸ್‌ಎಸ್‌ ಎಲ್ಲರಿಗೂ ಸಮಾನವಾಗಿ ಅವಕಾಶವನ್ನು ಬೇರೆ ಬೇರೆ ಸಮಯದಲ್ಲಿ ನೀಡಬೇಕೆಂದು ಕೇಳಿಕೊಳ್ಳುತ್ತದೆ. ಅವರವರ ವಿಚಾರ ಹೇಳುವ ಎಲ್ಲಾ ಅವಕಾಶಗಳಿವೆ. ಹೀಗಾಗಿ ಎಲ್ಲರಿಗೂ ಕೂಡ ಅನುಕೂಲವಾಗುವಂತೆ ದಿನಗಳನ್ನು ನೀಡುವಂತೆ ವಿನಂತಿಸಿದರು. ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಶಾಂತಿ ಸಭೆಗೆ ಬಂದಿರುವ ಎಲ್ಲ ಸಜ್ಜನ ನಾಗರೀಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮನವಿ ಮಾಡುತ್ತಿದ್ದು, ನಾವೆಲ್ಲರೂ ಕೂಡಿ ದೇಶದ ಏಳಿಗೆಗೆ ಶ್ರಮಿಸೋಣ ಎಂದು ಹೇಳಿದ್ದಾರೆ.

  • ಚಿತ್ತಾಪುರ RSS ಪಥ ಸಂಚಲನ – ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ತೀರ್ಮಾನ: ಪರಮೇಶ್ವರ್

    ಚಿತ್ತಾಪುರ RSS ಪಥ ಸಂಚಲನ – ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ತೀರ್ಮಾನ: ಪರಮೇಶ್ವರ್

    – ಕಡ್ಡಾಯ ಅನುಮತಿ ಆದೇಶ RSS ದೃಷ್ಟಿಯಿಂದ ಮಾಡಿದ್ದಲ್ಲ ಎಂದ ಸಚಿವ

    ಬೆಂಗಳೂರು: ಚಿತ್ತಾಪುರದಲ್ಲಿ (Chittapur) ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್ ಹಾಗೂ ಭೀಮ್ ಆರ್ಮಿ ಒಟ್ಟಿಗೆ ಅನುಮತಿ ಕೇಳಿದ್ದಾರೆ. ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲಾಡಳಿತ ಅದರ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ತಿಳಿಸಿದರು.

    ಬೆಂಗಳೂರಿನಲ್ಲಿ ಮಾತಾಡಿದ ಪರಮೇಶ್ವರ್, ಸರ್ಕಾರದ ಮಾರ್ಗಸೂಚಿ ಪ್ರಕಾರ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ಸಾರ್ವಜನಿಕ, ಸರ್ಕಾರಿ ಸ್ಥಳಗಳ ಬಳಕೆ ಅನುಮತಿ ಪಡೆಯುವ ಆದೇಶ ಆರ್‌ಎಸ್‌ಎಸ್‌ಗೆ ಮಾತ್ರ ಸೀಮಿತ ಅಲ್ಲ. ಈಗ ಹೊರಡಿಸಿರುವ ತುರ್ತು ಆದೇಶದಲ್ಲಿ ಕ್ಲಾರಿಟಿ ಇದೆ. ಅದರಲ್ಲಿ ಎಲ್ಲಾದರೂ ಆರ್‌ಎಸ್‌ಎಸ್ ಪದ ಬಳಕೆ ಆಗಿದೆಯಾ? ಸುಮ್ಮನೆ ಅನವಶ್ಯಕವಾಗಿ RSSಗೆ ಮಾಡಿದ್ದಾರೆ ಅಂತ ಹೇಳೋದು ಸರಿಯಲ್ಲ. ನಾವು ಆರ್‌ಎಸ್ಎಸ್‌ ಒಬ್ಬರಿಗೆ ಮಾಡಲಿಲ್ಲ. ನಾವು ಎಲ್ಲರಿಗೂ ಅನ್ವಯ ಆಗುವಂತೆ ಮಾಡಿದ್ದೇವೆ. ಸಂಘರ್ಷ ಆಗಬಾರದು ಶಾಂತಿಯುತವಾಗಿ ನಡೆಯಬೇಕು ಎನ್ನುವ ಕಾರಣಕ್ಕಾಗಿ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸೇಡಂ ಆರ್‌ಎಸ್ಎಸ್ ಪಥಸಂಚಲನದಲ್ಲಿ ಸರ್ಕಾರಿ ವೈದ್ಯ ಭಾಗಿ

    ಸಾಂದರ್ಭಿಕ ಚಿತ್ರ

    ಸರ್ಕಾರಿ ಶಾಲಾ ಕಾಲೇಜಿನಲ್ಲಿ ಯಾರಿಗೂ ಕೊಡಬಾರದು ಅಂತಲೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಈಗ ಸಮಸ್ಯೆ ಬಂತು ಆರ್‌ಎಸ್‌ಎಸ್ ದೃಷ್ಟಿಯಿಂದಲೇ ಈ ನಿರ್ಧಾರ ಬಂತು ಅಂತ ಇಟ್ಟುಕೊಳ್ಳೋಣ. ಆ ಸಮಸ್ಯೆ ಬಂದಾಗ ಸಂಘರ್ಷಕ್ಕೆ ಅವಕಾಶ ಮಾಡಿಕೊಡದೆ ಶಾಂತಿಯುತವಾಗಿ ಆಗಲಿ ಅಂತ ನಾವು ಮಾಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟರು.

    ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಬರ್ತಾ ಇತ್ತು. ಅದಕ್ಕಾಗಿ ಅವರಿಗೆ ಬೆಂಗಾವಲು ಪಡೆ ಹೆಚ್ಚಿಸಲಾಗಿದೆ. ಕ್ಯಾಬಿನೆಟ್ ದರ್ಜೆ ಸಚಿವರು ಅವರಿಗೆ ರಕ್ಷಣೆ ಕೊಡಬೇಕಾದ ಜವಾಬ್ದಾರಿ ಸರ್ಕಾರದ್ದು ಅಂತ ಪರಮೇಶ್ವರ್ ತಿಳಿಸಿದರು. ಇದನ್ನೂ ಓದಿ: ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಬ್ರೇಕ್‌

  • ಈಗಲೇ ಯಾಕೆ ಪಥ ಸಂಚಲನ ಮಾಡಬೇಕು? ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರೇ- ಆರ್‌ಎಸ್‌ಎಸ್‌ಗೆ ಪ್ರಿಯಾಂಕ್‌ ಪ್ರಶ್ನೆ

    ಈಗಲೇ ಯಾಕೆ ಪಥ ಸಂಚಲನ ಮಾಡಬೇಕು? ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರೇ- ಆರ್‌ಎಸ್‌ಎಸ್‌ಗೆ ಪ್ರಿಯಾಂಕ್‌ ಪ್ರಶ್ನೆ

    ಬೆಂಗಳೂರು: ಈಗಲೇ ಯಾಕೆ ಪಥ ಸಂಚಲನ (RSS Route March) ಮಾಡಬೇಕು? ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರೇ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priynak Kharge) ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ತಮ್ಮ ಕ್ಷೇತ್ರ ಚಿತ್ತಪುರದಲ್ಲಿ (Chittapur) ತಾಲೂಕು ಆಡಳಿತ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಅನುಮತಿ ನೀಡದ್ದಕ್ಕೆ ಸುದಿಗೋಷ್ಠಿ ನಡೆಸಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

    ಮತ್ತೊಮ್ಮೆ ಅರ್ಜಿ ಹಾಕಿದರೆ ಪರಿಗಣಿಸಿ ಎಂದು ಕೋರ್ಟ್ ಹೇಳಿದೆ. ಆದರೆ ಇಂದು ಪಥ ಸಂಚಲನ ಮಾಡುವಂತಿಲ್ಲ ಮಾಡಲೂಬಾರದು ಎಂದು ಕೋರ್ಟ್ ಪ್ರಕಾರ ಹೇಳಿದಂತಾಯ್ತು. ಭೀಮ್ ಆರ್ಮಿ, ದಲಿತ ಪ್ಯಾಂಥರ್‌ಗೆ ಪಥಸಂಚಲನಕ್ಕೆ ಹಕ್ಕಿದೆ, ಆರ್‌ಎಸ್‌ಎಸ್‌ಗೂ, ಕಾಂಗ್ರೆಸ್‌ಗೆ ಹಕ್ಕು ಇದೆ. ಸಮಾಜದಲ್ಲಿ ಶಾಂತಿ ಕಾಪಾಡುವುದು ಬಹಳ ಮುಖ್ಯ. ಮತ್ತೊಮ್ಮೆ ಅರ್ಜಿ ಕೊಡಲಿ. ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಪರಿಸ್ಥಿತಿ ನೋಡಿಕೊಂಡು ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ:  ಆರ್‌ಎಸ್‌ಎಸ್‌ Vs ಸರ್ಕಾರ – ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಒಪ್ಪಿದ ಲಾಯರ್‌ | ಹೈಕೋರ್ಟ್‌ನಲ್ಲಿ ಏನಾಯಿತು?

    ಆರ್‌ಎಸ್‌ಎಸ್ ಕಲಬುರಗಿ ಜಿಲ್ಲೆಯಲ್ಲಿ ಪಥಸಂಚಲನ ಮಾಡುತ್ತೇವೆ ಎಂದು ಹೇಳಿತ್ತು. ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಿಸುವಂತೆ ಪತ್ರ ಬರೆದಿದ್ದಕ್ಕೆ ಉದ್ದೇಶಪೂರ್ವಕವಾಗಿ ನನ್ನ ಮತ ಕ್ಷೇತ್ರದಲ್ಲಿ ಪ್ಲ್ಯಾನ್ ಮಾಡಿದ್ದಾರೆ. ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ ಆದಮೇಲೆ ನನಗೆ ಬುದ್ದಿ ಕಲಿಸಬೇಕೆಂದು ಚಿತ್ತಾಪುರದಲ್ಲಿ ಪಥಸಂಚಲನದ ಪ್ಲ್ಯಾನ್ ಮಾಡಿದ್ದಾರೆ ಎಂದರು.

    ಆರ್‌ಎಸ್‌ಎಸ್‌ಗೆ ತಕ್ಷಣವೇ ಪಥ ಸಂಚಲನ ಮಾಡಿ ಏನು ಸಾಧಿಸಬೇಕಿತ್ತು? ಅಮಾಯಕ ವ್ಯಕ್ತಿಯಿಂದ ಬೆದರಿಕೆ ಹಾಕಿಸ್ತೀರಿ. ನಿಮ್ಮ ಮಾತಿನಿಂದ ಜನರಿಗೆ ಘಾಸಿಯಾಗಿದೆ ಆಕ್ರೋಶವಿದೆ ಇದೇ ಸಂದರ್ಭದಲ್ಲಿ ಯಾಕೆ ಪಥಸಂಚಲನ ಮಾಡಬೇಕು ಎಂದು ಕೇಳಿದರು. ಇದನ್ನೂ ಓದಿ: ಕಾನೂನು ಸುವ್ಯವಸ್ಥೆ ಹಾಳಾಗಬಹುದು – ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಇಲ್ಲ

    ಚಿತ್ತಾಪುರದ ಹಿಂದಿನ ಬಿಜೆಪಿ ಅಭ್ಯರ್ಥಿ ಪ್ರೆಸ್ ಮೀಟ್ ಮಾಡಿ ಆರ್‌ಎಸ್‌ಎಸ್‌ ಕಟ್ಟರ್ ಸಂಘಟನೆ. ಬೆದರಿಕೆ ಅಲ್ಲ ನಾಳೆ ನಿಮ್ಮ ಮನೆಗೂ ಬರುತ್ತಾರೆ. ಹುಷಾರು ಅಂತ ಮತ್ತೆ ಬೆದರಿಕೆ ಹಾಕ್ತಾನೆ. ಇದಾದ ಮೇಲೆ ಮತ್ತೆ ಪಥಸಂಚಲನ ಮಾಡಬೇಕಾ? ಚಿತ್ತಾಪುರದ ಜನಪ್ರತಿನಿಧಿಯನ್ನು ನಿಂದಿಸಿದ ನಿಮಗೆ ಇವತ್ತೇ ಅವಕಾಶ ಕೊಡಬೇಕೇ ಎಂದು ಪ್ರಶ್ನಿಸಿದರು.

     

    ಯಾವುದೋ ಕಾಗದದಲ್ಲಿ ಚಿತ್ತಾಪುರದ ವ್ಯಕ್ತಿಯೂ ಅಲ್ಲದವರಿಂದ ಅರ್ಜಿ ಹಾಕಿಸಿದ್ದಾರೆ. ಅನುಮತಿ ಕೇಳದ ಅವರು ಕೇವಲ ಕಾಗದದಲ್ಲಿ ರೂಟ್ ಮ್ಯಾಪ್ ಹಾಕಿ ಮಾಹಿತಿಗಾಗಿ ಅಂತ ಬರೆದುಕೊಟ್ಟಿದ್ದಾರೆ. ಆಗ ಭೀಮ್ ಆರ್ಮಿಯೂ ಕೂಡ ಪಥಸಂಚಲನಕ್ಕೆ ಅನುಮತಿ ಕೇಳಿದ್ದಾರೆ. ಆರ್‌ಎಸ್‌ಎಸ್ ವ್ಯಕ್ತಿಯಿಂದ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಲಾಗಿದೆ. ಈ ಸಂಘಟನೆಯವರು ಚಿತ್ತಾಪುರದಲ್ಲಿ ಮಾಡುವಾಗ ನಮಗೂ ಅವಕಾಶ ಕೊಡಿ ಅಂತ ಪತ್ರ ಬರೆದಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಮಾತನಾಡಿ ಅದೇ ಸಂಘಟನೆ ನಮ್ಮ ತಾಲೂಕಲ್ಲಿ ಪಥಸಂಚಲನ ಮಾಡುವಾಗ ನಮ್ಮ ಜನರು ಏನು ಮಾಡಬೇಕು ಎಂದು ಕೇಳಿದರು.

    ನಮ್ಮ ಪರವಾಗಿ ಜನರೂ ಇದ್ದಾರೆ, ನಾವೇನಾದರೂ ಪ್ರಚೋದನೆ ಕೊಟ್ಟಿದ್ದೀವಾ? ಎಂಎಲ್‌ಎ ಅಭ್ಯರ್ಥಿ ಬೈತಾರೆ, ಸಂಘಟನೆ ಬೈಯುತ್ತದೆ, ಅಲ್ಲಿಯೇ ಪಥ ಸಂಚಲನ ಮಾಡುತ್ತೀರಾ ಎಂದು ಪ್ರಿಯಾಂಕ್‌ ಖರ್ಗೆ ನಾನಾ ಪ್ರಶ್ನೆಗಳನ್ನು ಕೇಳಿದ್ದಾರೆ.

  • ಆರ್‌ಎಸ್‌ಎಸ್‌ Vs ಸರ್ಕಾರ – ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಒಪ್ಪಿದ ಲಾಯರ್‌ | ಹೈಕೋರ್ಟ್‌ನಲ್ಲಿ ಏನಾಯಿತು?

    ಆರ್‌ಎಸ್‌ಎಸ್‌ Vs ಸರ್ಕಾರ – ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಒಪ್ಪಿದ ಲಾಯರ್‌ | ಹೈಕೋರ್ಟ್‌ನಲ್ಲಿ ಏನಾಯಿತು?

    ಕಲಬುರಗಿ: ಚಿತ್ತಾಪುರದಲ್ಲಿ (Chittapur) ಆರ್‌ಎಸ್‌ಎಸ್‌ ಪಥಸಂಚಲನ (RSS Route March) ವಿಚಾರ ಈಗ ಹೈಕೋರ್ಟ್‌ (High Court) ಮೆಟ್ಟಿಲೇರಿದೆ. ಆರ್‌ಎಸ್‌ಎಸ್‌ ವಾದವನ್ನು ಕೋರ್ಟ್‌ ಪುರಸ್ಕರಿಸಿದರೆ ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಯುವ ಸಾಧ್ಯತೆಯಿದೆ.

    ಐಟಿ, ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಇಂದು ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಮುಂದಾಗಿತ್ತು. ಆದರೆ ತಾಲೂಕು ಆಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ಕೋರ್ಟ್‌ ಇಂದು ಯಾವುದೇ ಆದೇಶ ಪ್ರಕಟಿಸದೇ ಮುಂದಿನ ವಿಚಾರಣೆಯನ್ನು ಅ.24ಕ್ಕೆ ಮುಂದೂಡಿದೆ.

    ವಿಚಾರಣೆ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಪರ ವಕೀಲರು ನ.2 ರಂದು ಪಥಸಂಚಲನ ನಡೆಸಲು ಅನುಮತಿ ನೀಡುವಂತೆ ಕೇಳಿದ್ದಾರೆ. ಇದನ್ನೂ ಓದಿ: ಕಾನೂನು ಸುವ್ಯವಸ್ಥೆ ಹಾಳಾಗಬಹುದು – ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಇಲ್ಲ

    ವಿಚಾರಣೆಯಲ್ಲಿ ಏನಾಯ್ತು?
    ಅರ್ಜಿದಾರ ಅಶೋಕ್‌ ಪಾಟೀಲ್‌ ಪರವಾಗಿ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ವಾದಿಸಿದರು. ಈ ವೇಳೆ ಆರಂಭದಲ್ಲಿ ಪೀಠ ಪಥಸಂಚಲನಕ್ಕೆ ಅನುಮತಿ ಕೋರಿ ಯಾವ ಪ್ರಾಧಿಕಾರಕ್ಕೆ ಅನುಮತಿ ಕೇಳಬೇಕು? ಯಾವ ಕಾನೂನಿನ ಅಡಿ ಅನುಮತಿ ಕೋರಬೇಕು ಎಂಬ ವಿಚಾರದ ಬಗ್ಗೆ ಮಾತ್ರ ವಾದಿಸಿ ಎಂದು ಸೂಚಿಸಿತು.

    ಇದಕ್ಕೆ ಅರುಣ್‌ ಶಾಮ್‌ ಅ.17ಕ್ಕೆ ಚಿತ್ತಾಪುರದ ಕಾರ್ಯಕಾರಿ ಮ್ಯಾಜಿಸ್ಟ್ರೇಟ್‌ಗೆ ಅನುಮತಿ ಕೋರಲಾಗಿತ್ತು. ಆದರೆ ಅ.18 ರಂದು ಈ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.

    ಈ ಸಂದರ್ಭದಲ್ಲಿ ಒಂದು ಗುಂಪು ಪಂಥಸಂಚಲನ ನಡೆಸಲು ಅವಕಾಶವಿದೆಯೇ? ಅದು ಪ್ರತಿಭಟನೆಯೇ ಆಗಿರಬೇಕಿಂದಿಲ್ಲ. ಅದು ಮೌನ ಪ್ರತಿಭಟನೆಯಾಗಿರಬಹುದು? ಜನರಲ್ಲಿ ಜಾಗೃತಿ ಮೂಡಿಸಲು ಇಚ್ಛಿಸಬಹುದು? ಇದಕ್ಕೆ ಅನುಮತಿ ಬೇಕೆ? ಹಾಗಾದರೆ ಯಾರಿಂದ ಅನುಮತಿ ಪಡೆಯಬೇಕು? ಯಾವ ಕಾನೂನು ಜಾರಿಯಲ್ಲಿದೆ. ಯಾವ ಕಾನೂನಿನ ನಿಬಂಧನೆಗೆ ನಾವು ಒಳಪಟ್ಟಿದ್ದೇವೆ. ಯಾರಿಗೆ ಅನುಮತಿ ಕೇಳಬೇಕು ಎಂಬುದು ಗೊತ್ತಾಗಬೇಕು. ಇಲ್ಲವಾದಲ್ಲಿ ನಾವು ನಿಯಮವಿಲ್ಲದ ಆಡಳಿತಕ್ಕೆ ಒಳಪಡುತ್ತೇವೆ ಎಂದು ಹೇಳಿತು.

    ಇದಕ್ಕೆ ಅರುಣ್‌ ಶ್ಯಾಮ್‌ ಅವರು ಪಥಸಂಚನವನ್ನು ರದ್ದುಪಡಿಸುವುದು ಅವರ ಉದ್ದೇಶವಾಗಿತ್ತು. ಹೀಗಾಗಿ ಅವರು ಅನುಮತಿ ನಿರಾಕರಿಸಿದ್ದಾರೆ ಎಂದು ಉತ್ತರಿಸಿದರು.

    ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ವಾದಿಸಿ, ಬೇರೊಂದು ಸಂಘಟನೆ ಇಂದು ಪಥಸಂಚಲಕ್ಕೆ ಅನುಮತಿ ಕೋರಿದೆ. ಹೀಗಾಗಿ ತಾಲೂಕು ಆಡಳಿತ ಯಾವುದೇ ಸಂಘಟನೆಗೆ ಪಥಸಂಚಲನ ನಡೆಸಲು ಅನುಮತಿ ನೀಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ:  ಪ್ರಿಯಾಂಕ್‌ ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ – 12 ಪ್ರಶ್ನೆ ಕೇಳಿದ ಸರ್ಕಾರ

    ಇದಕ್ಕೆ ಪೀಠ ಎರಡೂ ಸಂಘಟನೆಗಳಿಗೆ ಬೇರೆ ಬೇರೆ ದಿನ ಅನುಮತಿ ನೀಡಿ ಎಂದಾಗ ಅರುಣ್‌ ಶ್ಯಾಮ್‌ ಇದು ಸಾಧ್ಯವಿಲ್ಲ. ಬೇರೆ ಸ್ಥಳ ನೀಡಬಹುದು ಎಂದು ಮನವಿ ಮಾಡಿದರು. ಕೊನೆಗೆ ನವೆಂಬರ್‌ 2 ರಂದು ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಅನುಮತಿಸಿದರೆ ಉತ್ತಮ. ಅಷ್ಟೇ ಅಲ್ಲದೇ ರಾಜ್ಯದ್ಯಂತ ಇದೂವರೆಗೆ 250 ಕಡೆ ಪಥಸಂಚಲನ ನಡೆಸಲಾಗಿದೆ. ಎಲ್ಲಿಯೂ ಸಮಸ್ಯೆಯಾಗಿಲ್ಲ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲಾಗುವುದು ಎಂದು ಅರುಣ್‌ ಶ್ಯಾಮ್‌ ಮುಚ್ಚಳಿಕೆ ನೀಡಿದರು.

    ಕೊನೆಗೆ ಕೋರ್ಟ್‌ ಯಾವ ರಸ್ತೆ ಮಾರ್ಗ ಪಥಸಂಚಲನ ನಡೆಯಲಿದೆ? ಎಷ್ಟು ಜನ ಭಾಗವಹಿಸುತ್ತಾರೆ ಎಂಬುದನ್ನು ಅರ್ಜಿದಾರರು ಸರ್ಕಾರಕ್ಕೆ ನೀಡಬೇಕು. ಹೊಸದಾಗಿ ಅರ್ಜಿ ಸಲ್ಲಿಸಿ ಪಥ ಸಂಚಲನದ ಮಾಹಿತಿ, ದಿನಾಂಕ ಎಲ್ಲಾ ವಿವರಗಳನ್ನು ಒಳಗೊಂಡ ಮನವಿಯನ್ನು ಅರ್ಜಿದಾರರು ಜಿಲ್ಲಾಧಿಕಾರಿಗೆ ನೀಡಬೇಕು. ಇದರ ಪ್ರತಿಯನ್ನು ಅರ್ಜಿದಾರರು ತಹಶೀಲ್ದಾರ್‌, ಸ್ಥಳೀಯ ಪೊಲೀಸರಿಗೆ ನೀಡಬೇಕು ಎಂದು ಸೂಚಿಸಿತು.

    ಎಲ್ಲಾ ಮಾಹಿತಿಯನ್ನು ಪರಿಗಣಿಸಿ ಸರ್ಕಾರ ವರದಿ ಸಲ್ಲಿಸಬೇಕು. ಇಂದು ಅರ್ಜಿಗೆ ಸಂಬಂಧಿಸಿದಂತೆ ಮೆರಿಟ್‌ ಮೇಲೆ ಯಾವುದೇ ಆದೇಶ ನೀಡುವುದಿಲ್ಲ. ಸರ್ಕಾರದ ವರದಿ ಆಧರಿಸಿ ಪ್ರಕರಣ ಪರಿಗಣಿಸಲಾಗುವುದು ಎಂದು ಸೂಚಿಸಿದ ನ್ಯಾಯಾಲಯ ಅ. 24ರ ಮಧ್ಯಾಹ್ನ 3:30 ವಿಚಾರಣೆಯನ್ನು ಮುಂದೂಡಿತು.

  • ಕಾನೂನು ಸುವ್ಯವಸ್ಥೆ ಹಾಳಾಗಬಹುದು – ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಇಲ್ಲ

    ಕಾನೂನು ಸುವ್ಯವಸ್ಥೆ ಹಾಳಾಗಬಹುದು – ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಇಲ್ಲ

    ಕಲಬುರಗಿ: ಪ್ರಿಯಾಂಕ್‌ ಖರ್ಗೆ(Priynak Khgarge) ಪ್ರತಿನಿಧಿಸುವ ಚಿತ್ತಾಪುರದಲ್ಲಿ (Chittapur) ಸರ್ಕಾರ ಇಂದು ನಡೆಯಬೇಕಿದ್ದ ಆರ್‌ಎಸ್‌ಎಸ್‌ (RSS) ಪಥ ಸಂಚನಲನಕ್ಕೆ ಅನುಮತಿ ನೀಡಲು ನಿರಾಕರಿಸಿದೆ.

    ಪಥಸಂಚಲನಕ್ಕೆ ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಎಂಬ ಕಾರಣ ನೀಡಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ತಾಲೂಕು ತಹಶೀಲ್ದಾರ್‌ ನಾಗಯ್ಯ ಅನುಮತಿ ನೀಡಲು ನಿರಾಕರಿಸಿದ್ದಾರೆ.

    ಯಾವ ಕಾರಣಕ್ಕೆ ನಿರಾಕರಣೆ?
    ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವಬೆದರಿಕೆ ಹಾಕಿದ್ದನ್ನು ಖಂಡಿಸಿ ತವರು ಕ್ಷೇತ್ರದಲ್ಲಿ ಬಂದ್‌ ನಡೆಸಿ ಪ್ರತಿಭಟನೆ ನಡೆಸಲಾಗಿದೆ. ಇದನ್ನೂ ಓದಿ:  ಪ್ರಿಯಾಂಕ್‌ ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ – 12 ಪ್ರಶ್ನೆ ಕೇಳಿದ ಸರ್ಕಾರ

    ಆರ್‌ಎಸ್‌ಎಸ್‌ ಪಥಸಂಚಲನದ ವಿರುದ್ಧವಾಗಿ ಭೀಮ್ ಆರ್ಮಿ ಸಂಘಟನೆ ಹಾಗೂ ಭಾರತೀಯ ದಲಿತ ಪ್ಯಾಂಥರ(ರಿ) ಸಂಘದ ಸದಸ್ಯರು ಅದೇ ಮಾರ್ಗವಾಗಿ ಪಥಸಂಚಲನ ಮಾಡಲು ಅನುಮತಿ ಕೋರಿದ್ದಾರೆ.

    ಭಾನುವಾರ ಎಲ್ಲಾ ಸಂಘಟನೆಗಳು ಒಂದೇ ಮಾರ್ಗದಲ್ಲಿ ಪಥಸಂಚಲನ ನಡೆಸಿದರೆ ಗೊಂದಲ ಉಂಟಾಗಿ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಸಂಘಟನೆಗಳಿಗೆ ಪಥಸಂಚಲನ ಮಾಡಲು ಅನುಮತಿ ನೀಡುವುದಿಲ್ಲ.

  • ಪ್ರಿಯಾಂಕ್‌ ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ – 12 ಪ್ರಶ್ನೆ ಕೇಳಿದ ಸರ್ಕಾರ

    ಪ್ರಿಯಾಂಕ್‌ ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ – 12 ಪ್ರಶ್ನೆ ಕೇಳಿದ ಸರ್ಕಾರ

    ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಫೈಟ್‌ ಜೋರಾಗಿದೆ. ಪ್ರಿಯಾಂಕ್‌ ಖರ್ಗೆ ಅವರ ಸ್ವಕ್ಷೇತ್ರ ಚಿತ್ತಾಪುರದಲ್ಲಿ (Chittapur) ಇಲ್ಲಿಯವರೆಗೆ ಪಥಸಂಚಲನಕ್ಕೆ ಅನುಮತಿ ಸಿಕ್ಕಿಲ್ಲ.

    100ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಆರ್‌ಎಸ್‌ಎಸ್‌ ತಾಲೂಕು ಆಡಳಿತವನ್ನು ಕೇಳಿತ್ತು. ಅನುಮತಿ ಕೇಳಿದ ನಂತರ ತಾಲೂಕು ತಹಶೀಲ್ದಾರ ನಾಗಯ್ಯ 12 ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗೆ ಆರ್‌ಎಸ್‌ಎಸ್‌ ಉತ್ತರ ನೀಡಿದ್ದರೂ ಮಧ್ಯರಾತ್ರಿ 11 ಗಂಟೆಯವರೆಗೂ ಅನುಮತಿ ಸಿಕ್ಕಿಲ್ಲ. ಯಾವ ಕಾರಣಕ್ಕೆ ಅನುಮತಿ ನೀಡಿಲ್ಲ ಎನ್ನುವುದರ ಬಗ್ಗೆ ಇಲ್ಲಿಯವರೆಗೆ ಅಧಿಕಾರಿಗಳು ಯಾವುದೇ ವಿವರ ನೀಡಿಲ್ಲ ಇದನ್ನೂ ಓದಿ:   RSS ಪಥ ಸಂಚಲನ – ಚಿತ್ತಾಪುರದಲ್ಲಿ ಹಾಕಿದ್ದ ಬ್ಯಾನರ್‌, ಬಂಟಿಂಗ್‌ ತೆರವು

     

    ಚಿತ್ತಾಪುರ ತಹಶೀಲ್ದಾರ್‌ ಕೇಳಿರುವ 12 ಪ್ರಶ್ನೆಗಳು ಏನು?

    1.ಪಥ ಸಂಚಲನಲ್ಲಿ ಎಷ್ಟು ಜನ ಭಾಗವಹಿಸುತ್ತಿರಿ? ಆ ವಿವರ ನೀಡಿ?

    2.ಪಥ ಸಂಚಲನದಲ್ಲಿ ಚಿತ್ತಾಪೂರ ತಾಲೂಕು ಹೊರತು ಪಡಿಸಿ ಬೇರೆ ತಾಲೂಕಾ ಅಥವಾ ಬೇರೆ ಜಿಲ್ಲೆಯ ಎಷ್ಟು ಜನರು ಭಾಗವಹಿಸುತ್ತಾರೆ?

    3.ಬಜಾಜ ಕಲ್ಯಾಣ ಮಂಟಪ ಆವರಣದ ಮಾಲೀಕರ ಅನುಮತಿ ಪತ್ರ ಸಲ್ಲಿಸಿಲ್ಲ ಯಾಕೆ?

    4. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಂಜಾಗೃತಾ ಕ್ರಮ ವಹಿಸುವ ಒಪ್ಪಿಗೆ ಪತ್ರ ಸಲ್ಲಿಸಿಲ್ಲ ಯಾಕೆ?

    5. ಲಾಠಿ ಅಥವಾ ಆಯುಧಗಳ ಕುರಿತು ಮಾಹಿತಿ ನೀಡಿಲ್ಲ ಯಾಕೆ?

    6. ತಮ್ಮ ಸಂಘದ ನೋಂದಣಿ ಪ್ರಮಾಣ ಪತ್ರದ ದೃಢೀಕರಣ ಪ್ರತಿ ಸಲ್ಲಿಸಿಲ್ಲ ಯಾಕೆ?

    7. ಸದರಿ ಕಾರ್ಯಕ್ರಮದಲ್ಲಿ ಯಾರು ಮುಖ್ಯ ಭಾಷಣಕಾರರು ಭಾಗವಹಿಸುವದರ ಬಗ್ಗೆ ಅವರ ಪೂರ್ಣ ಮಾಹಿತಿ ಸಲ್ಲಿಸಿಲ್ಲ ಯಾಕೆ?

    8. ಪಥ ಸಂಚಲನದ ಕಾರ್ಯಕ್ರಮ ಕುರಿತು ತುರ್ತು ಸಂವಹನ ಕೈಗೊಳ್ಳಲು ಜವಾಬ್ದಾರಿಯುತ 10 ಜನ ಸ್ಥಳೀಯ ಮುಖಂಡರ ಮಾಹಿತಿ ನೀಡಿಲ್ಲ ಯಾಕೆ?

    9. ಈ ಕಾರ್ಯಕ್ರಮವು ಸ್ಥಳಿಯ ಚಿತ್ತಾಪೂರ ಘಟಕದಿಂದ ಕೈಗೊಳ್ಳುತ್ತಿದ್ದಿರೋ ಅಥವಾ ಮತ್ಯಾವ ಘಟಕದಿಂದ ಕೈಗೊಳ್ಳುತ್ತಿರುವ ಬಗ್ಗೆ ಸ್ಪಷ್ಟಿಕರಣ ನೀಡಿ

    10. ಈ ಕಾರ್ಯಕ್ರಮವು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದು ಆದರೆ ಮುಕ್ತಾಯದ ಸಮಯದ ಬಗ್ಗೆ ಮಾಹಿತಿ ನೀಡಿಲ್ಲ ಯಾಕೆ?

    11. ಪಥ ಸಂಚಲನಾ ಕಾರ್ಯಕ್ರಮದ ಮೂಲ ಉದ್ದೇಶದ ಏನು? ವಿವರ ನೀಡಿ.

    12. ಉಲ್ಲೇಖದ ತಮ್ಮ ಮನವಿ ಪತ್ರದಲ್ಲಿ ಅಕ್ಟೋಬರ್ 17ರಂದು ವಿನಂತಿ ಪತ್ರ ನೀಡಿರುತ್ತೇವೆ ಎಂದು ತಿಳಿಸಿದ್ದೀರಿ. ಆದರೆ ತಾವು ನಮ್ಮ ಕಛೇರಿಗೆ ಯಾವುದೇ ಮನವಿ ಪತ್ರ ಸಲ್ಲಿಸಿಲ್ಲ.

  • ಕಲಬುರಗಿ ಜಿಲ್ಲಾಡಳಿತಕ್ಕೆ ಭಾರೀ ಮುಖಭಂಗ – ಸೂಲಿಬೆಲೆಯ ಚಿತ್ತಾಪುರ ಕಾರ್ಯಕ್ರಮಕ್ಕೆ ಅನುಮತಿ

    ಕಲಬುರಗಿ ಜಿಲ್ಲಾಡಳಿತಕ್ಕೆ ಭಾರೀ ಮುಖಭಂಗ – ಸೂಲಿಬೆಲೆಯ ಚಿತ್ತಾಪುರ ಕಾರ್ಯಕ್ರಮಕ್ಕೆ ಅನುಮತಿ

    ಕಲಬುರಗಿ: ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ನಮೋ ಭಾರತ್‌ (Namo Bharat) ಕಾರ್ಯಕ್ರಮ ನಿರ್ಬಂಧ ಹೇರಿದ್ದ ಕಲಬುರಗಿ ಜಿಲ್ಲಾಡಳಿತಕ್ಕೆ ಭಾರೀ ಮುಖಭಂಗವಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರ ಪ್ರವೇಶಕ್ಕೆ  ಜಿಲ್ಲಾಡಳಿತ ಹೇರಿದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ (High Court of Karnataka, Kalaburagi Bench) ತೆರವುಗೊಳಿಸಿದೆ.

    ಗುರುವಾರ ಸಂಜೆ 6 ಗಂಟೆಗೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಪ್ರತಿನಿಧಿಸುವ ಚಿತ್ತಾಪುರ (Chittapur) ಪಟ್ಟಣದ ಬಾಪುರಾವ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಮೋ ಭಾರತ್‌ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ರಾತ್ರೋರಾತ್ರಿ ಜಿಲ್ಲಾಡಳಿತ ರದ್ದು ಮಾಡಿ ಸೂಲಿಬೆಲೆ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.  ಇದನ್ನೂ ಓದಿ: ಮೋದಿ ಸಾಧನೆ ಬಗ್ಗೆ ಮಾತಾಡೋದನ್ನ ಸಹಿಸೋಕಾಗದೆ ಕಾರ್ಯಕ್ರಮ ಕ್ಯಾನ್ಸಲ್: ಸೂಲಿಬೆಲೆ ಕಿಡಿ

    ಸೂಲಿಬೆಲೆ ಜಿಲ್ಲೆ ಪ್ರವೇಶಿಸಿದರೆ ಶಾಂತಿ ಕದಡುತ್ತಾರೆ ಹಾಗೂ ಕಾನೂನು ವ್ಯವಸ್ಥೆ ಹಾಳಾಗಬಹುದು ಎಂಬ ನಿಟ್ಟಿನಲ್ಲಿ ಕಲಬುರಗಿ ಸಹಾಯಕ ಆಯುಕ್ತರು ಫೆ.‌29 ರಿಂದ ಮಾರ್ಚ್‌ 4ರವರೆಗೆ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು.  ಇದನ್ನೂ ಓದಿ: 200ಕ್ಕೂ ಅಧಿಕ ಪೊಲೀಸರಿಂದ ಭದ್ರತೆ – ಅಲ್ದೂರಿನಲ್ಲಿ ಸೂಲಿಬೆಲೆಯ ನಮೋ ಭಾರತ್ ಕಾರ್ಯಕ್ರಮ ಯಶಸ್ವಿ

     

    ಜಿಲ್ಲಾಡಳಿತದ ಆದೇಶವನ್ನ ಪ್ರಶ್ನಿಸಿ ನಮೋ ಬ್ರಿಗೇಡ್ ಮತ್ತು ಬಿಜೆಪಿ ಹೈಕೋರ್ಟ್ ಮೊರೆ ಹೋಗಿತ್ತು ಅರ್ಜಿಯನ್ನು ಮಾನ್ಯ ಮಾಡಿದ ನ್ಯಾ. ಶ್ರೀಶಾನಂದ ಅವರಿದ್ದ ಪೀಠ, ಈ ಹಿಂದೆ ಕಾರ್ಯಕ್ರಮ ನಡೆಸಲು ಪೊಲೀಸರು ನೀಡಿದ್ದ ಅನುಮತಿಯನ್ನು ನೀಡಬೇಕು. ಪೊಲೀಸರು ನೀಡಿದ್ದ ನಿಯಮಾವಳಿಗೆ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸಬೇಕು. ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಹೇಳಿ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ತೆರವು ಮಾಡಿತು.

    ಕೋರ್ಟ್‌ ತೀರ್ಪು ಬಂದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸೂಲಿಬೆಲೆ, ಅಂಬೇಡ್ಕರ್‌ ನೀಡಿದ ಸಂವಿಧಾನದಿಂದ ಧೈರ್ಯವಾಗಿ ಪ್ರಶ್ನೆ ಮಾಡಿ ನಾವು ಕಾರ್ಯಕ್ರಮಕ್ಕೆ ಅನುಮತಿ ಪಡೆದಿದ್ದೇವೆ. ದೇಶ ಭಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ತಾಪುರಕ್ಕೆ ಬರಬೇಕು ಎಂದು ಅವರು ಮನವಿ ಮಾಡಿದರು.

     

  • ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡದಂತೆ ಮಲ್ಲಿಕಾರ್ಜುನ ಖರ್ಗೆ ಪತ್ರ: ಮಣಿಕಂಠ ರಾಠೋಡ

    ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡದಂತೆ ಮಲ್ಲಿಕಾರ್ಜುನ ಖರ್ಗೆ ಪತ್ರ: ಮಣಿಕಂಠ ರಾಠೋಡ

    ಕಲಬುರಗಿ: ಒಂದೆಡೆ ಬುದ್ದ, ಬಸವ ಅಂಬೇಡ್ಕರ್ ತತ್ವದ ಬಗ್ಗೆ ಮಾತಾಡುವ ಕಾಂಗ್ರೆಸ್ (Congress) ಮುಖಂಡ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಬೇಡ ಜಂಗಮರಿಗೆ ಸಿಗಬೇಕಾದ ನ್ಯಾಯಯುತ ಎಸ್ಸಿ ಪ್ರಮಾಣ ಪತ್ರಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಬಿಜೆಪಿ (BJP) ಚಿತ್ತಾಪೂರ (Chittapur) ಟಿಕೆಟ್ ಆಕಾಂಕ್ಷಿ ಮಣಿಕಂಠ ರಾಠೋಡ (Manikanta Rathod) ಆರೋಪಿಸಿದ್ದಾರೆ.

    ಕಲಬುರಗಿಯಲ್ಲಿ (Kalaburagi) ಸುದ್ದಿಗೋಷ್ಠಿ ನಡೆಸಿದ ಅವರು, 1995ರಲ್ಲಿ ಅಂದಿನ ಮುಖ್ಯಮಂತ್ರಿ ದೇವೇಗೌಡರಿಗೆ, ಮಲ್ಲಿಕಾರ್ಜುನ ಖರ್ಗೆ ಬೇಡ ಜಂಗಮ ಸಮುದಾಯಕ್ಕೆ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡದಂತೆ ಪತ್ರ ಬರೆದಿದ್ದರು ಎಂದು ಈ ಹಿಂದೆ ಬರೆದಿದ್ದ ಪತ್ರವನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ, ಪತಿಯಿಂದ ಪತ್ನಿ ಕೊಲೆ: ಆರೋಪಿ ಬಂಧನ

    ಬೇಡ ಜಂಗಮ ಮನೆ ಮನೆಗೆ ಬಿಕ್ಷೆ ಬೇಡಿ ಬದುಕುತ್ತಿರುವ ಸಮುದಾಯ. ಇಂತಹ ಸಮುದಾಯಕ್ಕೆ ಸಿಗಬೇಕಾದ ಹಕ್ಕು ನೀಡುವಲ್ಲಿ ಮಲ್ಲಿಕಾರ್ಜುನ ಖರ್ಗೆ ಅಡ್ಡಗಾಲು ಹಾಕುತ್ತಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಮತ್ತು ವಿಶ್ವಾಸ ಇಲ್ಲ ಎಂದರು.

    ಆರ್ಥಿಕವಾಗಿ ಹಿಂದುಳಿದ ಬೇಡ ಜಂಗಮರಿಗೆ ಸರ್ಕಾರ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಬೇಕು. ಅಭಿವೃದ್ಧಿ ಹೊಂದಿದವರೇ ಇನ್ನೆಷ್ಟು ಅಭಿವೃದ್ಧಿ ಹೊಂದಬೇಕು. ಹಿಂದುಳಿದವರಿಗೂ ಅವಕಾಶ ಬಿಟ್ಟುಕೊಡಬೇಕಲ್ಲವೇ ಎಂದು ಪ್ರಶ್ನಿಸಿದರು.

    ನಾನು ಮೀಸಲಾತಿ ಬಿಟ್ಟುಕೊಡಲು ಸಿದ್ದನಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಮೀಸಲಾತಿ ಬಿಟ್ಟುಕೊಡಲು ಸಿದ್ದರಿದ್ದಾರಾ ಎಂದು ರಾಠೋಡ್ ಸವಾಲು ಹಾಕಿದರು. ನಾನು ಶಾಸಕನಾದರೆ ಬೇಡ ಜಂಗಮರ ಪರ ಹೋರಾಟ ನಡೆಸುತ್ತೇನೆ ಎಂದು ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು. ಇದನ್ನೂ ಓದಿ: ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಹೆಚ್‌ಡಿಕೆ ಮಾಸ್ಟರ್ ಪ್ಲಾನ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್ ನಾಯಕನನ್ನು ಸೋಲಿಸಲು ಹರಕೆ-  ಮೊಣಕಾಲಿನಲ್ಲೇ ತಿರುಪತಿ ಬೆಟ್ಟ ಹತ್ತಿದ BJP ಮುಖಂಡ

    ಕಾಂಗ್ರೆಸ್ ನಾಯಕನನ್ನು ಸೋಲಿಸಲು ಹರಕೆ- ಮೊಣಕಾಲಿನಲ್ಲೇ ತಿರುಪತಿ ಬೆಟ್ಟ ಹತ್ತಿದ BJP ಮುಖಂಡ

    ಕಲಬುರಗಿ: ಜಿಲ್ಲೆಯ ಚಿತ್ತಾಪುರ (Chittapur) ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಕ್ಷ ಅರಳಿಸಲು ಬಿಜೆಪಿ (BJP) ಮುಖಂಡ ಮಣಿಕಂಠ ರಾಠೋಡ್‌ ತಿರುಪತಿ ತಿಮ್ಮಪ್ಪನ (Tirupati Temple) ಮೆಟ್ಟಿಲುಗಳನ್ನು ಮೊಣಕಾಲಿನಿಂದ ಹತ್ತಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

    ತಿರುಪತಿ ತಿಮ್ಮಪ್ಪನ ಸಪ್ತಗಿರಿ ಬೆಟ್ಟವನ್ನು ಮೊಣಕಾಲಿನಿಂದ ಹತ್ತಿ ವಿಶೇಷ ಪೂಜೆ ಸಲ್ಲಿಸಿ, ಶತಾಯಗತಾಯವಾಗಿ ಕಾಂಗ್ರೆಸ್ (Congress) ಪಕ್ಷವನ್ನು ಕೆಡವಲು ತಮ್ಮ ಹರಕೆಯನ್ನು ಸಲ್ಲಿಸಿದರು. ಜೊತೆಗೆ ಕ್ಷೇತ್ರದ ಜನರ ಒಳಿತಿಗಾಗಿ ತಾಲೂಕಿನಲ್ಲಿ ಸುಖ ಸಮೃದ್ಧಿ ನೆಲೆಸಲಿ. ಚಿತ್ತಾಪುರ ತಾಲೂಕಿನ ಜನರಿಗೆ ಯಾವುದೇ ರೀತಿಯ ಕಷ್ಟಕಾರ್ಪಣ್ಯಗಳು ಬರದಂತೆ, ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮಣಿಕಂಠ ರಾಠೋಡ್ ಅವರು ಮೊಣಕಾಲಿನ ಮೂಲಕ ಪಾದಯಾತ್ರೆ ಮಾಡುವ ಮೂಲಕ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾರ್ಥಿಸಿಕೊಂಡರು. ಇದನ್ನೂ ಓದಿ: ಈ ದೇಶದ ಗೃಹ ಸಚಿವರ ವಿರುದ್ಧವೇ ಮರ್ಡರ್ ಕೇಸ್ ಇದೆ – ಸಿದ್ದರಾಮಯ್ಯ

    ಇನ್ನೂ ಚಿತ್ತಾಪುರ ಕ್ಷೇತ್ರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಸೋಲಿಸುವುದೊಂದೆ ನಮ್ಮ ಗುರಿಯಾಗಿದೆ ಎಂದು ಬಿಜೆಪಿ ಹೇಳಿದ ಬೆನ್ನಲ್ಲೇ, ಮುಖಂಡ ಮಣಿಕಂಠ ರಾಠೋಡ್‌ ಅವರು ತಿಮ್ಮಪ್ಪನ ಬಳಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆ‌ ಹೊರಟ ಬೀದಿನಾಯಿ

    Live Tv
    [brid partner=56869869 player=32851 video=960834 autoplay=true]

  • ಕಲಬುರಗಿಯಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು

    ಕಲಬುರಗಿಯಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು

    ಕಲಬುರಗಿ: ಶೇಂಗಾ ಬಿತ್ತನೆ ಬೀಜದ ಕೊರತೆ ಹಿನ್ನೆಲೆಯಲ್ಲಿ ಬೀಜ ಖರೀದಿಗಾಗಿ ರೈತರು ನೂಕುನುಗ್ಗಲು ನಡೆಸಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ನಾಲವಾರದಲ್ಲಿ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಬೀಜ ಖರೀದಿಗಾಗಿ ಮುಗಿಬಿದ್ದರು. ಅಲ್ಲದೆ ಅಧಿಕಾರಿಗಳಿಗೆ ಜಮೀನಿನ ದಾಖಲೆ ನೀಡಿ ಬೀಜ ಖರೀದಿಗೆ ಮುಂದಾದ ಪ್ರಸಂಗ ನಡೆದಿದೆ. ಹಿಂಗಾರಿನ ಬೆಳೆಯಾದ ಶೇಂಗಾಕ್ಕೆ, ಬಿತ್ತನೆ ಬೀಜ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ನೂಕು ನುಗ್ಗಲು ನಡೆದಿದೆ. ಇನ್ನು ಜಿಲ್ಲೆಗೆ ಬೇಕಾದ ಬಿತ್ತನೆ ಬೀಜದಲ್ಲಿ ಕೇವಲ ಅರ್ಧದಷ್ಟು ಬೀಜ ಮಾತ್ರ ಸರ್ಕಾರ ಪೂರೈಕೆ ಮಾಡಿದೆ. ಹೀಗಾಗಿ ರೈತರಿಗೆ ಸಮರ್ಪಕವಾಗಿ ಬೀಜ ಸಿಗದಂತಾಗಿದೆ. ಇದನ್ನೂ ಓದಿ: ಟೀಚರ್ ಆದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

    ಮುಂಗಾರು ಕೈ ಕೊಟ್ಟ ರೈತರಿಗೆ ಹಿಂಗಾರು ಬೀಜದ ಕೊರತೆಯುಂಟಾಗಿದೆ. ಸದ್ಯ ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಿಪರಿತ ಮಳೆಯ ಹಿನ್ನೆಲೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹೀಗಾಗಿ ಹಿಂಗಾರು ಬೆಳೆಯಲ್ಲದರೂ ಒಂದಿಷ್ಟು ಹಣ ಸಂಪದಾನೆ ಮಾಡಲು ಅನ್ನದಾತರು ಪರದಾಡುತ್ತಿದ್ದಾರೆ. ಆದರೆ ಸೂಕ್ತ ಸಮಯದಲ್ಲಿ ಬೀಜ ಸಿಗದ ಹಿನ್ನೆಲೆ ರೈತರಿಗೆ ಒಂದರ ಮೇಲೆ ಒಂದು ಹೊಡೆತ ಬಿದ್ದಂತಾಗಿದೆ. ಹಿಂಗಾರು ಬಿತ್ತನೆಗೆ ಸಿದ್ಧಗೊಂಡಿದ್ದ ರೈತರು ಸದ್ಯ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರದ ಮುಂದೆ ಕಾಯುವಂತಾಗಿದೆ. ಇದನ್ನೂ ಓದಿ: ದತ್ತಪೀಠಕ್ಕೆ ಮೌಲ್ವಿ ನೇಮಕ ರದ್ದು