Tag: Chitradurga Police

  • ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ರಹಸ್ಯ ಬಯಲು – ಪ್ರಿಯತಮನಿಂದಲೇ ಸ್ಕೆಚ್‌; ಮರ್ಮ ಅರಿಯದೇ ಹೊರಟಿದ್ದಳು ಮುಗ್ಧೆ

    ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ರಹಸ್ಯ ಬಯಲು – ಪ್ರಿಯತಮನಿಂದಲೇ ಸ್ಕೆಚ್‌; ಮರ್ಮ ಅರಿಯದೇ ಹೊರಟಿದ್ದಳು ಮುಗ್ಧೆ

    ಚಿತ್ರದುರ್ಗ: ಪ್ರೀತಿಗಾಗಿ ಜೀವಬಿಟ್ಟ ಅಮರ ಪ್ರೇಮಿಗಳನ್ನು ನೋಡಿದ್ದೇವೆ. ಆದ್ರೆ‌, ಚಿತ್ರದುರ್ಗದ ವಿದ್ಯಾರ್ಥಿನಿ (Chitradurga Stundet) ವರ್ಷಿತಾ ಕೊಲೆಕೇಸಲ್ಲಿ ಪ್ರಿಯತಮನೇ ವಿಲನ್ ಆಗಿದ್ದು, ಕಿರಾತಕ ಚೇತನ್ ಪ್ರೀ ಪ್ಲ್ಯಾನ್ ಮರ್ಡರ್ ರಹಸ್ಯ ಸಿಸಿಟಿವಿ‌ಯಲ್ಲಿ ಸೆರೆಯಾಗಿದೆ.

    ಆಗಸ್ಟ್ 14 ರಂದು ಪ್ರಕರಣ‌ನಡೆದಿದ್ದು, ಆಗಸ್ಟ್ 19 ರಂದು ಅರೆಬರೆ ಸುಟ್ಟ ಸ್ಥಿತಿಯಲ್ಲಿ ವರ್ಷಿತಾ (19)ಳ ಮೃತದೇಹ ಚಿತ್ರದುರ್ಗ ತಾಲ್ಲೂಕಿನ ಗೋನೂರು‌ಬಳಿ ಪತ್ತೆಯಾಗಿತ್ತು. ಇದಕ್ಕೂ ಮುನ್ನ ರಸ್ತೆ ಬದಿಯ ಖಾಸಗಿ ಹೋಟೆಲ್‌ಗೆ (Private Hotel) ಆಗಮಿಸಿದ್ದ ಪ್ರಯಾಣಿಕರು, ಮೂತ್ರವಿಸರ್ಜನೆಗೆ ರಸ್ತೆಬದಿಗೆ ಬಂದಿದ್ದರು. ಈ ವೇಳೆ ಮೃತದೇಹ ಕಂಡು ಹೋಟೆಲ್ ವ್ಯವಸ್ಥಾಪಕರಿಗೆ ‌‌ತಿಳಿಸಿದ್ದರು. ಇದನ್ನೂ ಓದಿ: ಚಿತ್ರದುರ್ಗ | ಅಪರಿಚಿತ ಶವ ಪತ್ತೆ ಕೇಸ್‌ – ಯುವತಿಯ ಗುರುತು ಪತ್ತೆ, ಅತ್ಯಾಚಾರ ಎಸಗಿ ಕೊಲೆ ಶಂಕೆ

    Student Death

    ಆಗ ಎಚ್ಚೆತ್ತ ಹೋಟೆಲ್‌ ವ್ಯವಸ್ಥಾಪಕರು, ಚಿತ್ರದುರ್ಗ ಗ್ರಾಮಾಂತರ ಠಾಣೆಗೆ (Chitradurga Rural Police) ದೂರು ನೀಡಿದ್ದು, ಈ ಪ್ರಕರಣದ‌ ಬೆನ್ನತ್ತಿದ ಪೊಲೀಸರು ಪ್ರಿಯತಮ ಚೇತನ್‌ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ನಿನ್ನೆಯೇ ಚೇತನ್ ತನ್ನ ತಪ್ಪನ್ನು ಪೊಲೀಸರ ಬಳಿ ಒಪ್ಪಿಕೊಂಡಿದ್ದ‌ನು. ಈ ಬಗ್ಗೆ ʻಪಬ್ಲಿಕ್ ಟಿವಿʼ ಮೊದಲು ವರದಿ ಬಿತ್ತರಗೊಳಿಸಿತ್ತು. ಇದನ್ನೂ ಓದಿ: ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ

    ಈಗ ಕೊಲೆಯಾಗಿರೊ ವಿದ್ಯಾರ್ಥಿನಿ ವರ್ಷಿತಾ ಜೊತೆ ಚೇತನ್ ಇದ್ದಂತಹ ಕೊನೇ ಕ್ಷಣದ ಸಿಸಿಟಿವಿ ದೃಶ್ಯ ಕೂಡ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ವರ್ಷಿತಾಳನ್ನ ಕೊಲ್ಲಲು ಸ್ಕೆಚ್ ಹಾಕಿದ್ದ ಚೇತನ್ ಚಿತ್ರದುರ್ಗ ನಗರದ ತುರುವನೂರು‌ ರಸ್ತೆಯಲ್ಲಿನ ಖಾಸಗಿ ಪೆಟ್ರೋಲ್ ಬಂಕ್‌ನಲ್ಲಿ 2 ಬಾರಿ ಪೆಟ್ರೋಲ್ ಖರೀದಿಸಿದ್ದು, ಬಳಿಕ ವರ್ಷಿತಾಳನ್ನ ಕರೆದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನ್ಯಾಯಾಂಗ, ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ: ಸುಪ್ರೀಂ ತೀರ್ಪಿಗೆ ರೇಣುಕಾಸ್ವಾಮಿ ತಂದೆ ಸಂತಸ 

    ಇನ್ನೂ ಪ್ರಿಯಕರ ಪೆಟ್ರೋಲ್‌ ಬಾಟಲಿಯನ್ನ ತನ್ನ ಪ್ಯಾಂಟ್‌ ಜೇಬಿನಲ್ಲೇ ಇರಿಸಿಕೊಂಡಿದ್ದ, ಇದರ ಮರ್ಮ ಅರಿಯದ ಮುಗ್ಧೆ ವರ್ಷಿತಾ, ಅವನ ಬಣ್ಣದ ಮಾತಿಗೆ ಮರಳಾಗಿ, ಹಿಂಬಾಲಿಸುತ್ತಾ ನಡೆದುಕೊಂಡೇ ಹೋಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಾದ ಬಳಿಕ ಆಗಸ್ಟ್‌ 18ರಂದು ಸಂಜೆ 4 ಗಂಟೆ ಸುಮಾರಿಗೆ ಆಕೆಯನ್ನ ಚಿತ್ರದುರ್ಗ ತಾಲ್ಲೂಕಿನ ಗೋನೂರು ಬಳಿಯ ನಿರ್ಜನ ಪ್ರದೇಶಕ್ಕೆ ಕಿರಾತಕ ಚೇತನ್‌ ಕರೆದೊಯ್ದಿದ್ದಾನೆ. ಆಕೆಯನ್ನ ಮನಬಂದಂತೆ ಥಳಿಸಿದ್ದಾನೆ. ಉಸಿರುಗಟ್ಟಿಸಿ ವರ್ಷಿತಾಳನ್ನ ಹತ್ಯೆಗೈದು, ಪೆಟ್ರೋಲ್‌ ಸುರಿದು ಸುಟ್ಟಿದ್ದಾನೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

    ಹೀಗಾಗಿ ಆರೋಪಿ ಚೇತನ್‌ನ ಜಾಡು ಹಿಡಿದು ಖಾಕಿಯಿಂದ ತನಿಖೆ ಮುಂದುವರೆದಿದೆ. ಚಿತ್ರದುರ್ಗ ಡಿವೈಎಸ್ಪಿ ಪಿ.ದಿನಕರ್, ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್, ಪಿಎಸ್ ಐ ಸುರೇಶ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಇದನ್ನೂ ಓದಿ: Chitradurga | ಕೆಆರ್ ಹಳ್ಳಿ ಗೇಟ್ ಬಳಿ ಟ್ರಾಫಿಕ್ ಜಾಮ್ – 5 ಕಿ.ಮೀ ದೂರದವರೆಗೂ ನಿಂತ ವಾಹನಗಳು

  • ಚಿತ್ರದುರ್ಗ | ಅಪರಿಚಿತ ಶವ ಪತ್ತೆ ಕೇಸ್‌ – ಯುವತಿಯ ಗುರುತು ಪತ್ತೆ, ಅತ್ಯಾಚಾರ ಎಸಗಿ ಕೊಲೆ ಶಂಕೆ

    ಚಿತ್ರದುರ್ಗ | ಅಪರಿಚಿತ ಶವ ಪತ್ತೆ ಕೇಸ್‌ – ಯುವತಿಯ ಗುರುತು ಪತ್ತೆ, ಅತ್ಯಾಚಾರ ಎಸಗಿ ಕೊಲೆ ಶಂಕೆ

    ಚಿತ್ರದುರ್ಗ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 48ರ (NH 48) ಬಳಿ ಸಿಕ್ಕ ಅಪರಿಚಿತ ಶವದ ಗುರುತು ಪತ್ತೆ ಮಾಡಲಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಕೊಲೆಯಾದ ಯುವತಿಯನ್ನ ಚಿತ್ರದುರ್ಗದ (Chitradurga) ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ವರ್ಷಿತಾ (19) ಎಂದು ಗುರುತಿಸಲಾಗಿದೆ. ಈಕೆ ಸರ್ಕಾರಿ ಪದವಿ ಕಾಲೇಜಿನ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳೆಂದು ತಿಳಿದುಬಂದಿದೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ (Police Investigation) ಶುರು ಮಾಡಿದ್ದಾರೆ.

    ಗುರುತು ಪತ್ತೆಯಾದ ಬೆನ್ನಲ್ಲೇ ವರ್ಷಿತಾ ಸಂಪರ್ಕದಲ್ಲಿದ್ದ ಯುವಕ ಚೇತನ್‌ ಅನ್ನೂ ವಿಚಾರಣೆ ನಡೆಸಲಾಗುತ್ತಿದೆ. ಚೇತನ್‌ಗೆ ಕ್ಯಾನ್ಸರ್ 3ನೇ ಹಂತದಲ್ಲಿರುವ ಬಗ್ಗೆ ಮಾಹಿತಿ ಇದೆ. ಇದನ್ನೂ ಓದಿ: 12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್‌ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!

    ಗುರುತು ಪತ್ತೆಯಾಗಿದ್ದು ಹೇಗೆ?
    ಪೊಲೀಸರ ತನಿಖೆ ವೇಳೆ ಯುವತಿಯ ಕೈ ಮೇಲಿನ ಟ್ಯಾಟುನಿಂದ ಗುರುತುಪತ್ತೆಯಾಗಿದೆ. ಯುವತಿಯ ಹತ್ಯೆ ಖಂಡಿಸಿ ಎಬಿವಿಪಿ ಸಂಘಟನೆ ಪ್ರತಿಭಟನೆಗೆ ಕರೆ ನೀಡಿದ್ದು ಹಾಗೂ ಕಾಲೇಜು ಬಂದ್‌ಗೆ ಒತ್ತಾಯಿಸಿದೆ. ಇಂದು ಡಿಸಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಲಿದ್ದು, ಕುಟುಂಬಸ್ಥರು, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಮಳೆಯೋ ಮಳೆ – ಸಕಲೇಶಪುರದಲ್ಲಿ ಭೂಕುಸಿತ, ಅವಾಂತರ

  • ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯ ಎಕ್ಸ್ ಖಾತೆ ಹ್ಯಾಕ್

    ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯ ಎಕ್ಸ್ ಖಾತೆ ಹ್ಯಾಕ್

    ಚಿತ್ರದುರ್ಗ: ಪೊಲೀಸ್ ಇಲಾಖೆಯ (Police Department) ಎಕ್ಸ್ ಖಾತೆಯನ್ನೇ ಖದೀಮರು ಹ್ಯಾಕ್ (Hack) ಮಾಡಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ಬೆಳಕಿಗೆ ಬಂದಿದೆ.

    ಜಿಲ್ಲಾ ಪೊಲೀಸ್ ಅಕೌಂಟ್ ಹ್ಯಾಕ್ ಮಾಡಿರುವ ಖದೀಮರು, ಬಿಟ್ ಕಾಯಿನ್ ಬಗ್ಗೆ ಜಾಹೀರಾತು ಪ್ರಕಟಿಸಿದ್ದಾರೆ. ಹೀಗಾಗಿ ಅಲರ್ಟ್ ಆದ ಪೊಲೀಸ್ ಇಲಾಖೆ, ಖಾತೆಯನ್ನು ಸ್ಥಗಿತಗೊಳಿಸಿ ಪರಿಶೀಲನೆ ನಡೆಸಿದೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ. ಇದನ್ನೂ ಓದಿ: ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ – ಜನರಲ್ಲಿ ಆತಂಕ

    ಪರಿಶೀಲನೆ ಬಳಿಕ ಪುನಃ ಎಕ್ಸ್ ಖಾತೆಯನ್ನು ಸಕ್ರಿಯಗೊಳಿಸಿದ್ದು, ಎಕ್ಸ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಕ್ ಮಾಹಿತಿಯನ್ನು ಜನರ ಜಾಗೃತಿಗಾಗಿ ಶೇರ್ ಮಾಡಿದೆ. ಇದನ್ನೂ ಓದಿ: ಹೆಚ್‌ಡಿಕೆಯೇ ಕಾರು ಬೇಡ ಎಂದಿದ್ರು: ಚಲುವರಾಯಸ್ವಾಮಿ ಬಾಂಬ್‌ | ಏನಿದು ಕಾರ್‌ ಕಿರಿಕ್‌?

    ಇನ್ನು ಸೈಬರ್ ಕ್ರೈಂಬಗ್ಗೆ ಜಿಲ್ಲೆಯಾದ್ಯಂತ ವಿಶೇಷ ಜಾಗೃತಿ ಮೂಡಿಸುತ್ತಿರುವ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ನಿರಂತರವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಎನ್‌ಕೌಂಟರ್‌ಗೆ ಬೆಚ್ಚಿದ ನಕ್ಸಲರು – ಸದ್ಯದಲ್ಲೇ 6 ಜನ ಶರಣಾಗತಿ ಸಾಧ್ಯತೆ

    ಸಾಮಾಜಿಕ ಜಾಲಾ ತಾಣ ಸೇರಿದಂತೆ ಶಾಲಾ ಕಾಲೇಜುಗಳಲ್ಲೂ ಅಪರಾಧ ತಡೆ ಹಾಗು ಸೈಬರ್ ಕ್ರೈಂ ಬಗ್ಗೆ ಜಾಗೃತಿ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಈ ರೀತಿ ಪೊಲೀಸ್ ಇಲಾಖೆಯ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಿರೋದು ದುರಂತವೇ ಸರಿ.‌ ಇದನ್ನೂ ಓದಿ: ಜನ ಕೋವಿಡ್‌ ವಿರುದ್ಧ ಹೋರಾಡುತ್ತಿರುವಾಗ ʻಶೀಷ್‌ ಮಹಲ್‌ʼ ನವೀಕರಣ – ಮೋದಿ ಮತ್ತೆ ಕಿಡಿ

  • 20ರ ಯುವತಿಯನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ 40 ವರ್ಷದ ವ್ಯಕ್ತಿಯ ಕೊಲೆ – 6 ಮಂದಿ ಅರೆಸ್ಟ್‌

    20ರ ಯುವತಿಯನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ 40 ವರ್ಷದ ವ್ಯಕ್ತಿಯ ಕೊಲೆ – 6 ಮಂದಿ ಅರೆಸ್ಟ್‌

    ಚಿತ್ರದುರ್ಗ: ಆತ ಮದ್ವೆಯಾಗಿ (Marriage) ಸುಖಿ ಸಂಸಾರ ನಡೆಸಬೇಕೆಂಬ ಕನಸು ಕಂಡವನು. ಆದ್ರೆ ಎರಡು ಮದ್ವೆಯಾದ್ರೂ ಪತ್ನಿಯರೊಂದಿಗೆ ಸಂಸಾರ ಮಾಡುವ ಭಾಗ್ಯ ಮಾತ್ರ ಸಿಗಲಾರದೇ ಕೊಲೆಯಾಗಿದ್ದಾನೆ. ಚಿತ್ರದುರ್ಗ (Chitradurga) ತಾಲ್ಲೂಕಿನ ಕೋಣನೂರು ಗ್ರಾಮದ ಮಂಜುನಾಥ (40)ನೇ ಕೊಲೆಯಾದ ದುರ್ದೈವಿ. ಕೊಲೆ ಪ್ರಕರಣ ಸಂಬಂಧ ಭರಮಸಾಗರ ಠಾಣೆ ಪೊಲೀಸರು 6 ಆರೋಪಿಗಳನ್ನ ಬಂಧಿಸಿದ್ದಾರೆ.

    ಕಾವ್ಯ, ದಿವ್ಯ, ಶಂಕರಮ್ಮ, ಬಸವರಾಜ, ಪ್ರಸನ್ನ, ಹರ್ಷ ಬಂಧಿತ ಆರೋಪಿಗಳು. ಒಟ್ಟಾರೆ ಓಈ ಪ್ರಕರಣದಲ್ಲಿ 20 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಮಂಜುನಾಥ್‌ ಪೋಷಕರಿಗೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದರೆ.  ಮಂಜುನಾಥ ಕೊಲೆಯಾಗುತ್ತಿದ್ದಂತೆ ಯುವತಿಯೊಂದಿಗೆ ನಡೆಸಿದ ಆಡಿಯೋ ಸಂಭಾಷಣೆ ವೈರಲ್‌ ಆಗಿದೆ. ಇದನ್ನೂ ಓದಿ: ನವಜಾತ ಶಿಶುಗಳ ಮರಣ ಪ್ರಮಾಣ ಏರಿಕೆ – ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಸಚಿವರ ಖಡಕ್ ಸೂಚನೆ

    ಈತನು ಕಳೆದ ಐದು ವರ್ಷಗಳ ಹಿಂದೆ ಮಡಿವಾಳ ಜನಾಂಗದ ಶಿಲ್ಪ ಎಂಬ ಯುವತಿಯನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿ ಆಕೆಯನ್ನು ವಂಚಿಸಿದ್ದನು. ಆಗ ಮನನೊಂದ ಶಿಲ್ಪ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಆ ಕೇಸಲ್ಲಿ ಜೈಲು ಸೇರಿದ್ದ ಮಂಜುನಾಥನು (ಲಿಂಗಾಯತ) ಸ್ವಜಾತಿಯ ಮತ್ತೋರ್ವ ಯುವತಿಯನ್ನು ಪ್ರೀತಿಸಿ ಕಳೆದ 20 ದಿನಗಳ ಹಿಂದೆಯಷ್ಟೇ ನಾಯಕನಹಟ್ಟಿಯ ಹೊಸಗುಡ್ಡದದೇಗುಲದಲ್ಲಿ ಮದ್ವೆಯಾಗಿದ್ದನು. ಆದ್ರೆ ಇವರಿಬ್ಬರ ಮದ್ಯೆ ತೀವ್ರ ವಯಸ್ಸಿನ ಅಂತರವಿದ್ದು, ಜೈಲಿಂದ ಬಂದಿದ್ದ ಮಂಜುನಾಥನಿಗೆ ತಮ್ಮ ಮಗಳನ್ಮು ವಿವಾಹ ಮಾಡಿಕೊಡಲು ಒಪ್ಪದ (ರಕ್ಷಿತಾ 20) ಕುಟುಂಬಸ್ಥರು ರಾಜಿಪಂಚಾಯ್ತಿಗೆ ಮುಂದಾಗಿದ್ದು, ಶೀಘ್ರದಲ್ಲೇ ಎಲ್ಲರ ಸಮ್ಮುಖದಲ್ಲಿ ಮದ್ವೆ ಮಾಡಿಕೊಡುವುದಾಗಿ ನಂಬಿಸಿ, ಯುವತಿಯನ್ನು ಮನೆಗೆ ಕರೆದೊಯ್ದಿದ್ದರು. ಸಂಬಂಧಿಕರ ಊರಲ್ಲಿದ್ದ ಮಂಜುನಾಥ್‌ ಬುಧವಾರ ಗ್ರಾಮಕ್ಕೆ ಆಗಮಿಸಿದ್ದನು. ಈ ವೇಳೆ ಹುಡುಗಿಯ ಸಂಬಂಧಿಕರು ಸೇರಿದ 20 ಜನರ ಗುಂಪು ಏಕಾಎಕಿ ದಾಳಿ ನಡೆಸಿದೆ. ಕೋಲು, ಕಣಿಗೆ, ಮತ್ತು ರಾಡಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಈ ವೇಳೆ ಮಂಜುನಾಥನ ತಂದೆ ಚಂದ್ರಪ್ಪ, ತಾಯಿ ಅನಸೂಯ ಮೇಲೂ ಹಲ್ಲೆಯಾಗಿದೆ.

    ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ಘಟನಾ ಸ್ಥಳ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇದೀಗ ಮಂಜುನಾಥ್‌ ಸಾವಿನ ಬಳಿಕ ಯುವತಿಯೊಂದಿಗೆ ಮಾತನಾಡಿದ ಆಡಿಯೋ ಸಂಭಾಷಣೆ ವೈರಲ್‌ ಆಗಿದೆ. ಇದನ್ನೂ ಓದಿ: ಆರ್ಥಿಕ ಸಮಸ್ಯೆಯಿಂದ 40,000ಕ್ಕೆ 4 ವರ್ಷದ ಹೆಣ್ಣುಮಗು ಮಾರಾಟ – ಪೋಷಕರು ಸೇರಿ 6 ಮಂದಿ ಅರೆಸ್ಟ್‌

    ಆಡಿಯೋ ರಹಸ್ಯ ಏನು?

    ರಕ್ಷಿತಾ: ನನಗೆ ನೀನು ಬೇಕು
    ಮಂಜುನಾಥ್: ನಾನು ನಿನಗೆ ಸಿಗಲ್ಲ
    ರಕ್ಷಿತಾ: ಯಾರೂ ನನಗೆ ಬೇಡ, ನನಗೆ ನೀನು ಬೇಕು
    ಮಂಜುನಾಥ್: ಆಯ್ತು ಏನ್ ಮಾಡಲಿ…?
    ರಕ್ಷಿತಾ: ನಿನ್ನ ಬಿಟ್ಟು ಒಂದು ಕ್ಷಣ ಇರೋಕೆ ಆಗಲ್ಲ…
    ಮಂಜುನಾಥ್: ನಾನ್ ಮಾಡಿರೋದೆಲ್ಲಾ ನಿನಗೆ ಗೊತ್ತಿದ್ರು ನಾನೇ ಬೇಕು ಅಂತಿಯಲ್ಲ
    ರಕ್ಷಿತಾ: ನನ್ನನ್ನು ಕರ್ಕೊಂಡ್ ಹೋಗು ಬಾ
    ರಕ್ಷಿತಾ: ನಿನ್ನ ಬಿಟ್ಟ ಕ್ಷಣ ಇರೋಕ್ ಆಗಲ್ಲ… ನನಗೆ ನೀನು ಬೇಕು
    ಮಂಜುನಾಥ್: ಊರಲ್ಲೆಲ್ಲಾ ಥೂ ಅಂತ ಉಗುಳಿದ್ರು ನಿನಗೆ ನಾನೇ ಬೇಕಲ್ಲ ಯಾಕೆ..?
    ರಕ್ಷಿತಾ: ಜನ ಸಾವಿರ ಮಾತಾಡಲಿ. ನನಗೆ ನೀನು ಬೇಕು
    ಮಂಜುನಾಥ್: ಇವೆಲ್ಲಾ ತೊಂದರೆ ನನಗೆ ಬೇಡ
    ಮಂಜುನಾಥ್: ನಾನು ಅನುಭವಿಸಿರೋದೆ ಸಾಕು. ನನ್ನ ಕೇಸ್ ಇನ್ನೂ ಕೋರ್ಟ್ನಲ್ಲಿದೆ
    ರಕ್ಷಿತಾ: ನೀನು ಇಲ್ಲ ಅಂದ್ರೆ ದೇವರಾಣೆ ನಾನು ಬದುಕಿರಲ್ಲ.
    ಮಂಜುನಾಥ್: ಅವರೆಲ್ಲಾ ಅಷ್ಟು ಜನ ಇದ್ದಾರೆ…ಅವರಿಗೆ ಉತ್ತರ ಕೊಡೋಕ್ ಆಗಲ್ಲ, ನಾನು ಇರೋದು ಒಬ್ಬನೇ
    ರಕ್ಷಿತಾ: ಏನು ಬೇಕಾದ್ರು ಮಾಡಲಿ ನಾವು ಹೋಗೋಣ ಬಾ, ನನಗೆ ನೀನು ಬೇಕು, ನೀನಿಲ್ಲ ಅಂದ್ರೆ ಏನಾದ್ರು ಕುಡಿದು ಸತ್ತೋಗ್ತೀನಿ
    ಮಂಜುನಾಥ್: ಆತರಹ ಏನೂ ಮಾಡೋಕೆ ಹೋಗಬೇಡ…ನಾನು ಬರ್ತಿನಿ

  • ಮೆಟ್ರೋ, ಡಿಆರ್‌ಡಿಒ ಬ್ಲಾಸ್ಟ್‌ ಮಾಡ್ತೀನಿ ಅಂದಿದ್ದ ಯುವಕನ ಮತ್ತೊಂದು ವೀಡಿಯೋ ರಿಲೀಸ್‌

    ಮೆಟ್ರೋ, ಡಿಆರ್‌ಡಿಒ ಬ್ಲಾಸ್ಟ್‌ ಮಾಡ್ತೀನಿ ಅಂದಿದ್ದ ಯುವಕನ ಮತ್ತೊಂದು ವೀಡಿಯೋ ರಿಲೀಸ್‌

    – ತನ್ನನ್ನ ಬಂಧಿಸಿದ್ರೆ ಡಿಬಾಸ್‌ ಪಕ್ಕದ ಸೆಲ್‌ಗೆ ಹಾಕಿ ಎಂದಿದ್ದ ಯುವಕ

    ಚಿತ್ರದುರ್ಗ: ಕೆಲ ದಿನಗಳ ಹಿಂದೆಯಷ್ಟೇ ಎಲೆಕ್ಟ್ರಿಕಲ್‌ ವೈರಿಂಗ್ (Electrical wiring) ಮೂಲಕ ಮೆಟ್ರೋ, ಡಿಆರ್‌ಡಿಓ, ಐಐಎಸ್‌ಸಿ ಬ್ಲಾಸ್ಟ್‌ ಮಾಡುತ್ತೇನೆಂದು ವೀಡಿಯೋ ಹರಿಬಿಟ್ಟಿದ್ದ ಚಳ್ಳಕೆರೆ ಯುವಕನ ಮತ್ತೊಂದು ವೀಡಿಯೋ ಬಿಡುಗಡೆಯಾಗಿದೆ. ಅಜ್ಞಾತ ಸ್ಥಳದಿಂದ ಬಿಡುಗಡೆ ಮಾಡಲಾದ ವೀಡಿಯೋದಲ್ಲಿ (Namma Metro) ಯುವಕ ಕ್ಷಮೆ ಕೇಳಿದ್ದಾನೆ.

    ಏನಿದು ಪ್ರಕರಣ?
    ಕೆಲ ದಿನಗಳ ಹಿಂದೆಯಷ್ಟೇ ಚಳ್ಳಕೆರೆಯ ಪೃಥ್ವಿರಾಜ್ ಎಂಬಾತ ಮೆಟ್ರೋ, ಡಿಆರ್‌ಡಿಓ, ಐಐಎಸ್‌ಸಿ ಬ್ಲಾಸ್ಟ್‌ ಮಾಡುವುದಾಗಿ ಬೆದರಿಕೆ ಹಾಕಿ ವೀಡಿಯೋ ಹರಿಬಿಟ್ಟಿದ್ದ. ಈ ಬೆನ್ನಲ್ಲೇ ಪೊಲೀಸರು ಆತನನ್ನ ವಶಕ್ಕೆ ಪಡೆದುಕೊಂಡಿದ್ದರು. ಡಿವೈಎಸ್ಪಿ ರಾಜಣ್ಣ ಅವರು ಪೃಥ್ವಿರಾಜ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ; ಸಂಸತ್‌ನಲ್ಲಿ ಧ್ವನಿ ಎತ್ತಿದ ಕಾಗೇರಿ

    ಬ್ಲಾಸ್ಟ್‌ ವೀಡಿಯೋ ಹರಿಬಿಟ್ಟಿದ್ದೇಕೆ ಎಂದು ವಿಚಾರಿಸಿದಾಗ ಆತನ ತಾಯಿ ಕೆಲ ದಿನಗಳಿಂದ ಸಂಪರ್ಕಕ್ಕೆ ಬಂದಿರಲಿಲ್ಲ. ಅಮ್ಮನ ನಾಪತ್ತೆ ಕೇಸ್ ದಾಖಲಿಸಲು ಹೋದಾಗ ಪೊಲೀಸರು ಸ್ಪಂದಿಸಿಲ್ಲ. ನಾನು ಊರಿಗೆ ಬಂದಾಗ ಅಮ್ಮ ವಿಷಯ ಹೇಳಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಪೊಲೀಸರು ನನ್ನ ತಾಯಿಯ ಮುಂದೆಯೇ ಥಳಿಸಿದ್ದರು. ನನ್ನ ತಾಯಿ ಕಣ್ಣೀರು ನೋಡಲಾಗದೇ ಕೋಪದಲ್ಲಿ ಆ ಮಾತು ಹೇಳಿ ವಿಡಿಯೋ ಮಾಡಿ ಬಿಟ್ಟಿದ್ದೆ. ಇದನ್ನೂ ಓದಿ: Wayanad Landslide| 6 ತಿಂಗಳ ಹಿಂದೆ ಗೃಹಪ್ರವೇಶ, ಈಗ ಆ ಮನೆ ಸಮೇತ ಜಲ ಸಮಾಧಿ!

    ನಗೆ ಎಲೆಕ್ಟ್ರಿಕಲ್ ಕೆಲಸ ಮಾತ್ರ ಗೊತ್ತಿದೆ. ಹಾಗಾಗಿ ಎಲೆಕ್ಟ್ರಿಕಲ್ ವೈರಿಂಗ್ ಮೂಲಕ ಬ್ಲಾಸ್ಟ್ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದೆ. ಕೋಪದಲ್ಲಿ ಹೇಳಿದ್ದೇನೆಯೇ ಹೊರತು, ನಿಜಕ್ಕೂ ಬ್ಲಾಸ್ಟ್‌ ಮಾಡುವ ಉದ್ದೇಶ ಇಲ್ಲ. ಆ ರೀತಿ ಯಾವತ್ತಿಗೂ ಯೋಚನೆಯೂ ಮಾಡಿಲ್ಲ ಎಂದು ಕ್ಷಮೆ ಕೇಳಿದ ವೀಡಿಯೋವನ್ನು ಬಿಡುಗಡೆ ಮಾಡಿದ್ದಾನೆ. ಇದರಿಂದ ಎಚ್ಚರಿಕೆ ನೀಡಿದ್ದ ಪೊಲೀಸರು ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಮುಂದಿನ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆಂದು ಪೃಥ್ವಿರಾಜ್‌ ಹೇಳಿದ್ದಾನೆ. ಇದಕ್ಕೂ ಮುನ್ನ ತನ್ನನ್ನು ಬಂಧಿಸಿದ್ರೆ ನಟ ದರ್ಶನ್‌ ಇರುವ ಪಕ್ಕದ ಸೆಲ್‌ಗೆ ಹಾಕಿ ಎಂದು ಕೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

  • ಗೋವಾದಲ್ಲಿ ಹೆತ್ತ ಮಗುವನ್ನೇ ಹತ್ಯೆಗೈದ ಬೆಂಗ್ಳೂರಿನ CEO – ಸೂಟ್‌ಕೇಸ್‌ನಲ್ಲಿ ಶವವಿಟ್ಕೊಂಡು ಹೋಗುವಾಗ ಅರೆಸ್ಟ್

    ಗೋವಾದಲ್ಲಿ ಹೆತ್ತ ಮಗುವನ್ನೇ ಹತ್ಯೆಗೈದ ಬೆಂಗ್ಳೂರಿನ CEO – ಸೂಟ್‌ಕೇಸ್‌ನಲ್ಲಿ ಶವವಿಟ್ಕೊಂಡು ಹೋಗುವಾಗ ಅರೆಸ್ಟ್

    ಚಿತ್ರದುರ್ಗ: ಸ್ವಂತ ಮಗುವನ್ನೇ ಹತ್ಯೆಗೈದು ಸೂಟ್‌ಕೇಸ್‌ನಲ್ಲಿ ಶವವಿಟ್ಟುಕೊಂಡು ತೆರಳುತ್ತಿದ್ದ‌ ಮಹಿಳೆಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಠಾಣೆ ಪೊಲೀಸರು (Chitradurga Police Station) ಬಂಧಿಸಿರುವ ಘಟನೆ ನಡೆದಿದೆ.

    ಗೋವಾದಿಂದ ಬೆಂಗಳೂರಿಗೆ (Goa To Bengaluru) ತೆರಳುತ್ತಿದ್ದ ಸ್ಟಾರ್ಟ್‌ಅಪ್ ಫೌಂಡರ್ ಮತ್ತು ಸಿಇಓ ಸುಚನಾ ಸೇಠ್ (Suchana Seth) ವಿರುದ್ಧ ಗೋವಾದ ಹೋಟೆಲ್‌ನಲ್ಲಿ ಮಗುವನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿತ್ತು. ಸುಚನಾ ಸೇಠ್ ಅವರು ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದರು. ಸೋಮವಾರ ಹೋಟೆಲ್ ತೊರೆಯುವಾಗ ಒಬ್ಬಂಟಿಯಾಗಿದ್ದರು. ತಾನು ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಯನ್ನ ಕೇಳಿದ್ದಾಳೆ. ಅವರು ವಿಮಾನ ಸೌಲಭ್ಯ ಇರುವ ಸಲಹೆ ನೀಡಿದರೂ ಟ್ಯಾಕ್ಸಿ (Taxi) ತೆಗೆದುಕೊಳ್ಳುವಂತೆ ಆಕೆ ಒತ್ತಾಯಿಸಿದ್ದಾಳೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

    ಆಕೆ ಹೋಟೆಲ್‌ನಿಂದ (Hotel) ಹೊರಗೆ ಹೋದ ಬಳಿಕ ಮಗು ಇಲ್ಲದಿದ್ದನ್ನು ಸಿಬ್ಬಂದಿ ಗಮನಿಸಿದ್ದಾರೆ. ಅಲ್ಲದೇ ಆಕೆ ತಂಗಿದ್ದ ಹೋಟೆಲ್ ಶುಚಿಗೊಳಿಸಲು ಹೋದಾಗ ರಕ್ತದ ಕಲೆಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ – ಬೆಂಗ್ಳೂರು, ಮಂಡ್ಯ ಸೇರಿ ರಾಜ್ಯದ 30 ಕಡೆ ದಾಳಿ

    ನಂತರ ಗೋವಾ ಪೊಲೀಸರು ಹೋಟೆಲ್ ಸಿಬ್ಬಂದಿ ಕರೆಸಿದ್ದ ಟ್ಯಾಕ್ಸಿ ಡ್ರೈವರ್ ಸಂಪರ್ಕಿಸಿ ಆಕೆಯೊಂದಿಗೆ ಮಾತನಾಡಲು ಹೇಳಿದ್ದಾರೆ. ಆಕೆಯ ಮಗನ ಬಗ್ಗೆ ಕೇಳಿದಾಗ ಅವನು ಸ್ನೇಹಿತನೊಂದಿಗೆ ಇರುವುದಾಗಿ ಹೇಳಿಕೊಂಡಿದ್ದಳು. ಆತನ ವಿಳಾಸವನ್ನೂ ನೀಡಿದ್ದಳು. ಪೊಲೀಸರು ಆ ವಿಳಾಸವನ್ನ ಪರಿಶೀಲಿಸಿದಾಗ ನಕಲಿಯಾಗಿತ್ತು. ನಂತರ ಟ್ಯಾಕ್ಸಿ ಡ್ರೈವರ್‌ಗೆ ಹೈವೆಬಳಿ ಪೊಲೀಸರು ಕಂಡಾಕ್ಷಣ ಟ್ಯಾಕ್ಸಿ ನಿಲ್ಲಿಸುವಂತೆ ತಿಳಿಸಿದ್ದಾರೆ.

    ನಂತರ ಟ್ಯಾಕ್ಸಿ ಚಾಲಕ ರಾಷ್ಟ್ರೀಯ ಹೆದ್ದಾರಿ-4ರ ಬಳಿಯ ಐಮಂಗಲ ಠಾಣೆ ಪೊಲೀಸರಿಗೆ ಆಕೆಯನ್ನ ಒಪ್ಪಿಸಿದ್ದಾನೆ. ಬಳಿಕ ಟ್ಯಾಕ್ಸಿ ತಪಾಸಣೆ ಮಾಡಿದ ಐಮಂಗಲ ಪೊಲೀಸರಿಗೆ ಟ್ಯಾಕ್ಸಿ ಡಿಕ್ಕಿಯಲ್ಲಿದ್ದ ಸೂಟ್‌ಕೇಸ್‌ನಲ್ಲಿ ಮಗುವಿನ ಶವಪತ್ತೆಯಾಗಿದೆ. ಸದ್ಯ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸುಚನಾಳನ್ನ ಗೋವಾ ಪೊಲೀಸರಿಗೆ ಒಪ್ಪಿಸಿರುವುದಾಗಿ ಐಮಂಗಲ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯಶ್‌ ನೋಡುವ ಕಾತುರದಲ್ಲಿ ಬೈಕ್‌ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಅಭಿಮಾನಿ ಸಾವು

    ಮಾಹಿತಿ ಪ್ರಕಾರ ಸುಚನಾ ಸೇಠ್, 2021ರ AI ನೀತಿಶಾಸ್ತ್ರದಲ್ಲಿ 100 ಉತ್ತಮ ಮಹಿಳೆಯರ ಪೈಕಿ ಒಬ್ಬರು. ಡೇಟಾ ಸೈನ್ಸ್ ಮತ್ತು ಸ್ಟಾರ್ಟ್ಅಪ್ ಉದ್ಯಮಗಳಲ್ಲಿ 12 ವರ್ಷಗಳ ಅನುಭವ ಹೊಂದಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಅಶ್ಲೀಲ ಪದ ಬಳಸುತ್ತಿದ್ದ, ಖಾಸಗಿ ಅಂಗ ಮುಟ್ಟುತ್ತಿದ್ದ – ಪ್ರಾಧ್ಯಾಪಕನ ವಿರುದ್ಧ 500 ವಿದ್ಯಾರ್ಥಿನಿಯರಿಂದ ಮೋದಿ ಕಚೇರಿಗೆ ಪತ್ರ