Tag: Chitra Santhe

  • ಚಿತ್ರಸಂತೆಗೆ ಚಾಲನೆ – ಮನೆಗೊಂದು ಕಲಾಕೃತಿ ಇರಬೇಕು: ಸಿಎಂ

    ಚಿತ್ರಸಂತೆಗೆ ಚಾಲನೆ – ಮನೆಗೊಂದು ಕಲಾಕೃತಿ ಇರಬೇಕು: ಸಿಎಂ

    – ಕಲಾಕೃತಿ ಕೊಂಡು ಕಲಾವಿದರನ್ನು ಬೆಂಬಲಿಸಿ ಎಂದ ಸಿದ್ದರಾಮಯ್ಯ

    ಬೆಂಗಳೂರು: ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರಸಂತೆ (Chitra Santhe) ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರೆ ನೀಡಿದರು.

    ಅವರು ಇಂದು ಬೆಂಗಳೂರಿನ (Bengaluru) ಕುಮಾರ ಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಆಯೋಜಿಸಲಾಗಿದ್ದ 22 ನೇ ಚಿತ್ರಸಂತೆಯನ್ನು ಉದ್ಘಾಟನೆ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: Photo Gallery: ಬೆಂಗಳೂರಲ್ಲಿ ಚಿತ್ರಸಂತೆ – ಕಲಾಸಕ್ತರನ್ನು ಕೈಬೀಸಿ ಕರೆಯುತ್ತಿವೆ ಕಲಾಕೃತಿಗಳು..

    ಏಳನೇ ಬಾರಿ ಚಿತ್ರಸಂತೆ ಉದ್ಘಾಟಿಸುತ್ತಿದ್ದು, ರಾಜ್ಯದ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಚಿತ್ರದ ಮೂಲಕ ರಾಜ್ಯ ಮತ್ತು ಜಗತ್ತಿಗೆ ತಿಳಿಸಬೇಕೆಂಬ ಪ್ರಯತ್ನವನ್ನು ಚಿತ್ರ ಕಲಾ ಪರಿಷತ್ತು ಮಾಡುತ್ತಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಚಿತ್ರಸಂತೆ ಆಯೋಜಿಸಿದ್ದ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು.

    ಚಿತ್ರಸಂತೆಯಲ್ಲಿ 22 ರಾಜ್ಯಗಳ ಕಲಾವಿದರು ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಜಗತ್ತಿನ ಯಾವ ಭಾಗದಲ್ಲಿಯೂ ಚಿತ್ರಸಂತೆ ನಡೆಯುವುದನ್ನು ನಾನು ನೋಡಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಚಿತ್ರನಟ ನಡೆಯುವುದು ಹೆಮ್ಮೆಯ ಸಂಗತಿ ಎಂದರು. ಇದನ್ನೂ ಓದಿ: ಕಲಾಹಬ್ಬ 22ನೇ ಚಿತ್ರಸಂತೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

    ಕಲಾವಿದರಿಗೆ ವೇದಿಕೆ
    ಅನೇಕ ಚಿತ್ರಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆಯನ್ನು ಪ್ರದರ್ಶಿಸಿ ಆಸಕ್ತರಿಗೆ ಕೊಳ್ಳುವ ಅವಕಾಶವನ್ನೂ ಚಿತ್ರದಂತೆ ಒದಗಿಸುತ್ತಿದೆ. ಒಂದು ದಿನಕ್ಕೆ ನಾಲ್ಕು ಲಕ್ಷ ಜನರು ಭೇಟಿ ನೀಡುತ್ತಾರೆ. ಬೆಂಗಳೂರಿಗೆ ಇದೊಂದು ಸುವರ್ಣಾವಕಾಶ ಎಂದರು.

    ಚಿತ್ರಸಂತೆ ಮಹಿಳೆಯರಿಗೆ ಸಮರ್ಪಿತ
    ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣುಮಕ್ಕಳಿಗೆ ಸಮರ್ಪಣೆ ಮಾಡಿರುವುದು ವಿಶೇಷ. ಹೆಣ್ಣುಮಕ್ಕಳ ಪರವಾಗಿ ಕೆಲಸ ಮಾಡಿದ ಮಹಾತ್ಮಾ ಗಾಂಧಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಯಶೋಧರಮ್ಮ ದಾಸಪ್ಪ, ದತ್ತಮ್ಮ ಮೊದಲಾದವರ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಒಬ್ಬ ಪುರುಷನಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತಾಗುತ್ತದೆ. ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವೇ ಕಲಿತಂತಾಗುತ್ತದೆ ಎಂದರು. ಇದನ್ನೂ ಓದಿ: ಇದು ಮೋಸದ ಸರ್ಕಾರ: ಬಸ್‌ ಟಿಕೆಟ್‌ ದರ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶ

    ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಹಾಗೂ ಗೃಹಲಕ್ಷ್ಮೀ ಯೋಜನೆ
    ಹೆಣ್ಣುಮಕ್ಕಳು ಶೋಷಣೆ, ತಾರತಮ್ಯ, ಅನ್ಯಾಯಕ್ಕೆ ಒಳಗಾದವರು. ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರನ್ನಾಗಿಸಲು ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.

    ಸಾವಿರ ಪದಗಳಿಗಿಂತಲೂ ಚಿತ್ರವೊಂದು ಪ್ರಭಾವಶಾಲಿ
    ಸಂವಿಧಾನದ ಪೀಠಿಕೆಯನ್ನು ಕೂಡ ಇಲ್ಲಿ ಪ್ರದರ್ಶಿಸಲಾಗಿದ್ದು, ಸಮಾಜದ ಎಲ್ಲಾ ವರ್ಗದ ಜನರನ್ನೂ ಪ್ರತಿನಿಧಿಸುತ್ತಿದೆ. ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಪ್ರಭಾವಶಾಲಿಯಾಗಿದೆ. ಚಿತ್ರದ ಮೂಲಕ ಜನಜೀವನ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಬಹುದಾಗಿದೆ. ಚಿತ್ರಕಲಾ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

  • Photo Gallery: ಬೆಂಗಳೂರಲ್ಲಿ ಚಿತ್ರಸಂತೆ – ಕಲಾಸಕ್ತರನ್ನು ಕೈಬೀಸಿ ಕರೆಯುತ್ತಿವೆ ಕಲಾಕೃತಿಗಳು..

    Photo Gallery: ಬೆಂಗಳೂರಲ್ಲಿ ಚಿತ್ರಸಂತೆ – ಕಲಾಸಕ್ತರನ್ನು ಕೈಬೀಸಿ ಕರೆಯುತ್ತಿವೆ ಕಲಾಕೃತಿಗಳು..

    ಬೆಂಗಳೂರಲ್ಲಿ ಕಲಾಹಬ್ಬ 22ನೇ ಚಿತ್ರಸಂತೆ ಮೇಳೈಸಿದೆ. ನಗರದ ಕುಮಾರಕೃಪಾ ರಸ್ತೆಯಲ್ಲಿ ಆಯೋಜಿಸಿರುವ ಚಿತ್ರಸಂತೆಗೆ ಭಾನುವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ಬಾರಿ ಹೆಣ್ಣು ಮಗುವಿಗೆ ಚಿತ್ರಸಂತೆಯನ್ನು ಸಮರ್ಪಿಸಲಾಗಿದೆ. ಕಲಾಸಕ್ತರನ್ನು ವಿವಿಧ ಬಗೆಯ ಕಲಾಕೃತಿಗಳು ಕೈಬೀಸಿ ಕರೆಯುತ್ತಿವೆ.

  • ಕಲಾಹಬ್ಬ 22ನೇ ಚಿತ್ರಸಂತೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

    ಕಲಾಹಬ್ಬ 22ನೇ ಚಿತ್ರಸಂತೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

    ಬೆಂಗಳೂರು: ಕಲಾಹಬ್ಬ 22ನೇ ಚಿತ್ರಸಂತೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಭಾನುವಾರ ಚಾಲನೆ ನೀಡಿದರು. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಲಕ್ಷಾಂತರ ಕಲಾಕೃತಿಗಳ ಪ್ರದರ್ಶನ ಮೂಲಕ ಕಲಾವಿದರು, ಕಲಾಸಕ್ತರು, ಕಲಾರಸಿಕರಿಗೆ ಚಿತ್ರಸಂತೆ (Chitra Santhe) ಕೈಬೀಸಿ ಕರೆಯುತ್ತಿದೆ.

    ಈ ಬಾರಿ ಹೆಣ್ಣು ಮಗುವಿಗೆ ಚಿತ್ರಸಂತೆ ಸಮರ್ಪಿಸಲಾಗಿದೆ. ಚಿತ್ರಕಲಾ ಪರಿಷತ್‌ನ ಪ್ರವೇಶ ದ್ವಾರದಲ್ಲಿ 35 ಅಡಿ ಎತ್ತರದ ಕಲಾಕೃತಿ ನಿರ್ಮಿಸಲಾಗಿದೆ. ಬೆಳಗ್ಗೆ 6 ಕ್ಕೆ ಆರಂಭವಾಗಿರುವ ಚಿತ್ರಸಂತೆ ರಾತ್ರಿ 9 ರವರೆಗೂ ನಡೆಯಲಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಸಾವಿರಾರು ಕಲಾವಿದರು ತಮ್ಮ ಕಲಾ ಪ್ರತಿಭೆಯನ್ನು ಅರಳಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆ ಯಾತ್ರೆಯಲ್ಲಿ ಮಸೀದಿ ಭೇಟಿ ಬೇಡ: ಬಿಜೆಪಿ ಶಾಸಕ ರಾಜಾ ಸಿಂಗ್‌

    ಪೆನ್ಸಿಲ್ ಸ್ಕೆಚ್‌ನಿಂದ ಹಿಡಿದು ತೈಲವರ್ಣ, ಜಲವರ್ಣ, ಆಕ್ರೋಲಿಕ್, ಮೈಸೂರು ಶೈಲಿ, ರಾಜಸ್ಥಾನಿ ಶೈಲಿ, ಆಕ್ರೋಲಿಕ್, ಪಾರಂಪರಿಕ, ಆಧುನಿಕ ಪ್ರಕಾರಗಳ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಕನಿಷ್ಟ 100 ರೂ.ನಿಂದ ಮೂರ್ನಾಲ್ಕು ಲಕ್ಷ ರೂ. ವರೆಗೂ ಕಲಾಕೃತಿಗಳನ್ನು ಮಾರಾಟ ಮಾಡಲಾಗ್ತಿದೆ.

    ಬೇರೆ ಬೇರೆಯ ರಾಜ್ಯಗಳ ಮೂರೂವರೆ ಸಾವಿರಕ್ಕೂ ಹೆಚ್ಚು ಕಲಾವಿದರು ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಬಾರಿ‌ ನಾಲ್ಕು ಲಕ್ಷ ಕಲಾಸಕ್ತರ ಭೇಟಿ ನಿರೀಕ್ಷೆ ಮಾಡಲಾಗಿದೆ. ಇದನ್ನೂ ಓದಿ: ಇದು ಮೋಸದ ಸರ್ಕಾರ: ಬಸ್‌ ಟಿಕೆಟ್‌ ದರ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶ