Tag: chitra ramkrishna

  • ಇಡಿ ಬಂಧನದಲ್ಲಿ NSE ಮಾಜಿ ಸಿಇಒ ಚಿತ್ರಾ

    ಇಡಿ ಬಂಧನದಲ್ಲಿ NSE ಮಾಜಿ ಸಿಇಒ ಚಿತ್ರಾ

    ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯದ(ಎನ್‌ಎಸ್‌ಇ) ವಂಚನೆ ಪ್ರಕರಣದಲ್ಲಿ ಎನ್‌ಎಸ್‌ಇ ಕೇಂದ್ರದ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಬಂಧಿಸಿದೆ.

    ಇಂದು ಮುಂಜಾನೆ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ದೆಹಲಿ ನ್ಯಾಯಾಲಯ ಇದೀಗ ಚಿತ್ರಾ ರಾಮಕೃಷ್ಣ ಅವರನ್ನು 4 ದಿನಗಳ ಇಡಿ ಕಸ್ಟಡಿಗೆ ಕಳುಹಿಸಿದೆ. ಇದನ್ನೂ ಓದಿ: “ದಿವ್ಯ ಕಾಶಿ – ಭವ್ಯ ಕಾಶಿ”ಯನ್ನು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ: ಬೊಮ್ಮಾಯಿ

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ, ನಾರಾಯಣ್ ಹಾಗೂ ಚಿತ್ರಾ ರಾಮಕೃಷ್ಣ ವಿರುದ್ಧ ಇಡಿ ಪ್ರಕರಣ ದಾಖಲಿಸಿಕೊಂಡಿದೆ. ಇದನ್ನೂ ಓದಿ: ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಹಂದಿಗೆ ಎರಡು ವರ್ಷ ಜೈಲು ಶಿಕ್ಷೆ

    ಚಿತ್ರಾ ಅವರು ಸಂಸ್ಥೆಯ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂಸ್ಥೆಯ ರಚನೆ, ಲಾಭಾಂಶ ಮಾಹಿತಿ, ಆರ್ಥಿಕ ಫಲಿತಾಂಶ, ಮಾನವ ಸಂಪನ್ಮೂಲ ನೀತಿ, ಸಮಸ್ಯೆ ಹೀಗೆ ಎಲ್ಲಾ ಗೌಪ್ಯ ವಿಚಾರಗಳನ್ನು ಅಪರಿಚಿತ ವ್ಯಕ್ತಿಯೊಡನೆ ಇ-ಮೇಲ್ ಮುಖಾಂತರ ಹಂಚಿಕೊಂಡಿದ್ದಾರೆ ಎಂಬ ಆರೋಪ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಚಿತ್ರಾ ರಾಮಕೃಷ್ಣಗೆ 14 ದಿನ ನ್ಯಾಯಾಂಗ ಬಂಧನ- ಮನೆ ಊಟ ಇಲ್ಲ

    ಚಿತ್ರಾ ರಾಮಕೃಷ್ಣಗೆ 14 ದಿನ ನ್ಯಾಯಾಂಗ ಬಂಧನ- ಮನೆ ಊಟ ಇಲ್ಲ

    ನವದೆಹಲಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ)ಯ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರಿಗೆ ದೆಹಲಿ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.

    ಚಿತ್ರಾ ರಾಮಕೃಷ್ಣ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಈ ಅವಧಿಯಲ್ಲಿ ಅವರಿಗೆ ಮನೆಯ ಊಟವನ್ನು ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಪಂಡಿತರಿಗಿಂತ ಹೆಚ್ಚಾಗಿ ಮುಸ್ಲಿಮರು ಕಾಶ್ಮೀರದಲ್ಲಿ ಹತ್ಯೆಯಾಗಿದ್ದಾರೆ: ಕೇರಳ ಕಾಂಗ್ರೆಸ್‌

    ರಾಮಕೃಷ್ಣ ಅವರು ತನಿಖೆಗೆ ಸಹಕರಿಸುತ್ತಿಲ್ಲ. ವಿಚಾರಣೆ ವೇಳೆ ಹಾರಿಕೆಯ ಉತ್ತರಗಳನ್ನೇ ನೀಡುತ್ತಿದ್ದಾರೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ರಾಮಕೃಷ್ಣ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ ವೇಳೆ, ಅವರಿಗೆ ಮನೆಯ ಆಹಾರ ಒದಗಿಸಲು ಅವಕಾಶ ಮಾಡಿಕೊಡಬೇಕು ಎಂದು ಆರೋಪಿ ಪರ ವಕೀಲರು ಕೇಳಿಕೊಂಡರು. ನ್ಯಾಯಾಂಗ ಬಂಧನದಲ್ಲಿರುವವರಿಗೆ ನೀಡುವ ಆಹಾರವೂ ಉತ್ತಮವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

    ನಾನು ಅನೇಕ ಬಾರಿ ಆಹಾರವನ್ನು ಸೇವಿಸಿದ್ದೇನೆ ನ್ಯಾಯಾಧೀಶರು ಹೇಳಿದರು. ಬಂಧಿತರಿಗೆ ಪ್ರಾರ್ಥನಾ ಪುಸ್ತಕ ಮತ್ತು ಮಾಸ್ಕ್‌ಗೆ ಅನುಮತಿ ನೀಡಲು ಕೇಳಲಾಯಿತು. ಅದಕ್ಕೆ ನ್ಯಾಯಾಧೀಶರು, ಅವರು ವಿಐಪಿ ಅಲ್ಲ. ವಿಐಪಿ ಕೈದಿಗಳಿಗೆ ಎಲ್ಲವೂ ಬೇಕು. ನಂತರ ಪ್ರತಿ ನಿಯಮವನ್ನೂ ಬದಲಾಯಿಸಬೇಕು. ಪ್ರತಿಯೊಬ್ಬ ಕೈದಿಯೂ ಒಂದೇ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ಹಿಮಾಲಯದ ನಿಗೂಢ ಯೋಗಿಯೊಬ್ಬರ ಆದೇಶ ಪಾಲಿಸುತ್ತಿದ್ದ ಚಿತ್ರಾ ಮತ್ತು ಎನ್‌ಎಸ್‌ಇಯ ಇತರ ಅಧಿಕಾರಿಗಳು ಸೂಕ್ಷ್ಮ ಮಾಹಿತಿಗಳನ್ನು ಕಂಪನಿಯೊಂದಕ್ಕೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.

    ಏನಿದು ಹಿಮಾಲಯ ಯೋಗಿ ಪ್ರಕರಣ? ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ನೇಮಕಾತಿಯಲ್ಲಿ ಲೋಪಗಳಿಗಾಗಿ ಚಿತ್ರಾ ರಾಮಕೃಷ್ಣ ಮತ್ತು ಇತರ ಮಾಜಿ ಅಧಿಕಾರಿಗಳಿಗೆ ಎನ್‌ಎಸ್‌ಇ ದಂಡ ವಿಧಿಸಿದೆ. ಎನ್‌ಎಸ್‌ಇ ಮತ್ತು ಅದರ ಉನ್ನತ ಅಧಿಕಾರಿಗಳು ಆನಂದ್ ಸುಬ್ರಮಣಿಯನ್ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್‌ಗೆ ಸಲಹೆಗಾರರಾಗಿ ನೇಮಕ ಮಾಡುವ ಸಂಬಂಧ ಭದ್ರತಾ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸೆಬಿ ಗಮನಿಸಿದೆ. ಸುಬ್ರಮಣಿಯನ್ ಅವರನ್ನು ನೇಮಕ ಮಾಡುವಲ್ಲಿ ಹಿಮಾಲಯದ ಯೋಗಿಯ ಪ್ರಭಾವಕ್ಕೆ ಒಳಗಾಗಿದ್ದೇನೆ ಎಂದು ಚಿತ್ರಾ ರಾಮಕೃಷ್ಣ ಹೇಳಿದ್ದಾರೆ. ಇದನ್ನೂ ಓದಿ: ಕಳಪೆ ಪ್ರದರ್ಶನದ ನಂತರವೂ ಗಾಂಧಿ ಕುಟುಂಬಕ್ಕೆ ಸೀಮಿತವಾಯ್ತು ಪಕ್ಷ: ಸುಶೀಲ್‌ ಮೋದಿ ವಾಗ್ದಾಳಿ