Tag: Chiru Sarja

  • ಅಣ್ಣನ ಸಮಾಧಿ ಮೇಲೆ ಮಗಳನ್ನು ಆಟವಾಡಿಸಿದ ಧ್ರುವ ಸರ್ಜಾ

    ಅಣ್ಣನ ಸಮಾಧಿ ಮೇಲೆ ಮಗಳನ್ನು ಆಟವಾಡಿಸಿದ ಧ್ರುವ ಸರ್ಜಾ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರು ಅಣ್ಣ ಚಿರು ಸರ್ಜಾ (Chiru Sarja) ಸಮಾಧಿ ಪಕ್ಕ ಮಲಗಿರುವ ವಿಡಿಯೋವೊಂದು ಇತ್ತೀಚಿಗೆ ವೈರಲ್ ಆಗಿತ್ತು. ಈ ಬೆನ್ನಲ್ಲೇ ಮತ್ತೊಂದು ವಿಶೇಷ ವಿಡಿಯೋವೊಂದನ್ನ ಸ್ವತಃ ಧ್ರುವ ಸರ್ಜಾ ಶೇರ್ ಮಾಡಿದ್ದಾರೆ. ಅಣ್ಣನ ಸಮಾಧಿ ಮೇಲೆ ಮಗಳನ್ನು (Daughter) ಆಟವಾಡಿಸುತ್ತಿರುವ ವಿಡಿಯೋವನ್ನ ಸೋಶಿಯಲ್‌ ಮೀಡಿಯಾದಲ್ಲಿ ಶೇರ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಿಚ್ಚನ 50ನೇ ಚಿತ್ರಕ್ಕೆ ‘ಕಾಂತಾರ’ ಹೀರೋ ಆ್ಯಕ್ಷನ್ ಕಟ್

    ಚಿರು ಸರ್ಜಾ ಅಗಲಿ 3 ವರ್ಷಗಳು ಕಳೆದಿದೆ. ಅಣ್ಣ ಅಗಲಿಕೆಯ ನೋವು ಇನ್ನೂ ಧ್ರುವಗೆ ಮಾಸಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅಣ್ಣನ ಸಮಾಧಿ ಮೇಲೆ ಮುದ್ದು ಮಗಳನ್ನ ಧ್ರುವ ಆಟ ಆಡಿಸುತ್ತಾ ಇರುವ ವಿಡಿಯೋ ಮನ ಕಲಕುವಂತಿದೆ. ವಿಡಿಯೋ ನೋಡಿ ಖುಷಿ ಪಡಬೇಕಾ? ವಿಧಿಯಾಟಕ್ಕೆ ಹಿಡಿ ಶಾಪ ಹಾಕಬೇಕಾ ಅಂತಿದ್ದಾರೆ ಅಭಿಮಾನಿಗಳು.

    ಧ್ರುವ ಪತ್ನಿ ಪ್ರೇರಣಾ (Prerana) ಸೀಮಂತ ಶಾಸ್ತ್ರ (Baby Shower) ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ಆಗ ಮಗಳಿಗೆ ಪ್ರೇರಣಾ ಚಿರು ಫೋಟೋವನ್ನ ತೋರಿಸಿ ಮಾತನಾಡುತ್ತಿದ್ದರು. ಅಂದಿನ ಆ ದೃಶ್ಯ ಕೂಡ ಸಖತ್ ವೈರಲ್ ಆಗಿತ್ತು.

    ಅಕ್ಟೋಬರ್ 6ರಂದು ಧ್ರುವ ಸರ್ಜಾ ಹುಟ್ಟುಹಬ್ಬದಂದು ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ (Rajamartanda Film) ರಿಲೀಸ್ ಆಗುತ್ತಿದೆ. ಚಿರು- ಮೇಘನಾ ಪುತ್ರ ರಾಯನ್ (Rayan) ಕೂಡ ನಟಿಸಿದ್ದಾರೆ. ಚಿರು ಪಾತ್ರಕ್ಕೆ ಇಡೀ ಸಿನಿಮಾ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ್ಯಕ್ಷನ್ ಪ್ರಿನ್ಸ್ ಬರ್ತ್‌ಡೇಯಂದು ರಿಲೀಸ್ ಆಗಲಿದೆ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ

    ಆ್ಯಕ್ಷನ್ ಪ್ರಿನ್ಸ್ ಬರ್ತ್‌ಡೇಯಂದು ರಿಲೀಸ್ ಆಗಲಿದೆ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ

    ನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರು ಸರ್ಜಾ (Chiranjeevi Sarja) ಅವರು ನಿಧನರಾಗಿ 3 ವರ್ಷವಾಗಿದೆ. ಅವರ ಅಗಲಿಕೆಯ ನೋವು ಸರ್ಜಾ ಕುಟುಂಬ ಮತ್ತು ಫ್ಯಾನ್ಸ್‌ಗೆ ಇನ್ನೂ ಕಾಡ್ತಿದೆ. ಹೀಗಿರುವಾಗ ಚಿರು ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಹೀರೋ ಧ್ರುವ ಸರ್ಜಾ (Dhruva Sarja) ಹುಟ್ಟುಹಬ್ಬದಂದು (Birthday) ಚಿರು ಸರ್ಜಾ ನಟಿಸಿದ ಕೊನೆಯ ಸಿನಿಮಾ ರಾಜಮಾರ್ತಾಂಡ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ.

    ಅಕ್ಟೋಬರ್ 6ರಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬವಿದೆ. ತಮ್ಮನ ಹುಟ್ಟುಹಬ್ಬಂದು ಅಣ್ಣನ ಕೊನೆಯ ಸಿನಿಮಾ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ. ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಅಕ್ಟೋಬರ್ 6ರಂದು ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಹಾಗೂ ನಿರ್ದೇಶಕರು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ:ಇಂಟರ್‌ನೆಟ್ ಬೆಂಕಿ ಹಚ್ಚಿದ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋಸ್

    ಚಿರಂಜೀವಿ ಸರ್ಜಾ ಅಗಲುವ ಮುನ್ನ ‘ರಾಜಮಾರ್ತಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದ್ದರೂ, ಇನ್ನೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿಯಿತ್ತು. ಅಲ್ಲದೆ ಡಬ್ಬಿಂಗ್ ಕೂಡ ಆಗಿರಲಿಲ್ಲ. ಚಿರು ಅಗಲಿದ ಬಳಿಕ ಉಳಿಸಿ ಹೋದ ಕೆಲಸಗಳನ್ನು ತಾನು ಪೂರ್ಣಗೊಳಿಸುವುದಾಗಿ ಧ್ರುವ ಹೇಳಿದ್ದರು. ಅದರಂತೆಯೇ ಚಿರು ದೃಶ್ಯಗಳಿಗೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿಕೊಟ್ಟಿದ್ದರು. ಇದನ್ನೂ ಓದಿ:ಇಂಟರ್‌ನೆಟ್ ಬೆಂಕಿ ಹಚ್ಚಿದ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋಸ್

    ‘ರಾಜಮಾರ್ತಾಂಡ’ (Rajamartanda) ಒಂದು ಮಾಸ್ ಸಿನಿಮಾ. ಚಿರಂಜೀವಿ ಸರ್ಜಾ ಈ ಸಿನಿಮಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಧ್ವನಿಯಲ್ಲಿ ಚಿರು ನಟನೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಈಗ ಅಭಿಮಾನಿಗಳ ಪಾಲಿಗೆ ಒಲಿದು ಬಂದಿದೆ. ಚಿರುಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ ನಟಿಸಿದ್ದಾರೆ.

    ಈ ಸಿನಿಮಾದ ಮೂಲಕ ಚಿರು ಸರ್ಜಾ- ಮೇಘನಾ ರಾಜ್ (Meghana Raj) ಪುತ್ರ ರಾಯನ್ (Rayan) ಕೂಡ ಪರಿಚಯ ಆಗುತ್ತಿದ್ದಾರೆ. ಈ ಬಗ್ಗೆ ನಟಿ ಮೇಘನಾ ಅವರೇ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿರು ಸಿನಿಮಾ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ

    ಚಿರು ಸಿನಿಮಾ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ

    ನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಚಿರು ಸರ್ಜಾ 2020ರಲ್ಲಿ ಅಗಲಿದ್ದರು. ಅವರು ನಟಿಸಿರುವ ಕೊನೆಯ ಸಿನಿಮಾ `ರಾಜಮಾರ್ತಾಂಡ’ (Rajamarthanda) ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ಚಿರು ಕೊನೆ ಚಿತ್ರಕ್ಕೆ ಡಬ್ಬಿಂಗ್ ಮಾಡುವ ಮೂಲಕ ಧ್ರುವ ಸರ್ಜಾ (Druva sarja) ಸಾಥ್ ನೀಡಿದ್ದಾರೆ. ಚಿರು ನಟಿಸಿರುವ ಸಿನಿಮಾ ಮೇಲೆ ಧ್ರುವಾಗಿರುವ ಪ್ರೀತಿ, ಕಮೀಟ್‌ಮೆಂಟ್ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಚಿರು ಸಿನಿಮಾ ಬಗ್ಗೆ ಧ್ರುವಾ ಸರ್ಜಾ  ಮೌನ ಮುರಿದಿದ್ದಾರೆ.

    ಚಿರು ಕಡೆಯ ಸಿನಿಮಾ `ರಾಜಮಾರ್ತಾಂಡ’ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಹೀಗಿರುವಾಗ ಚಿರು ನಿಧನದ ಮುನ್ನ ಈ ಚಿತ್ರ ಕಂಪ್ಲೀಟ್ ಆಗಿತ್ತು. ಚಿರು ಪಾತ್ರದ ಡಬ್ಬಿಂಗ್ ಒಂದೇ ಬಾಕಿಯಿತ್ತು. ಅದರ ಜವಾಬ್ದಾರಿಯನ್ನ ಧ್ರುವ ಸರ್ಜಾ ಹೊತ್ತಿದ್ದಾರೆ. ಅಣ್ಣನ ಸಿನಿಮಾವೆಂದು ಪ್ರೀತಿಯಿಂದ ಡಬ್ಬಿಂಗ್ ಮಾಡಿ ಕೊಡ್ತಿದ್ದಾರೆ. ಈ ಬಗ್ಗೆ ಪ್ರಥಮ್ ಕೂಡ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ನನ್ನ- ಮಹೇಶ್ ಬಾಬು ನಡುವಿನ ಜಗಳಕ್ಕೆ ಕಾರಣ ಯಾರು ಎಂದು ಬಿಚ್ಚಿಟ್ಟ ನಮ್ರತಾ ಶಿರೋಡ್ಕರ್

    ನಿನ್ನೆ ಚಿರಂಜೀವಿ ಸರ್ಜಾ ಅಣ್ಣವ್ರ `ರಾಜಮಾರ್ತಾಂಡ’ ಸಿನಿಮಾ ಡಬ್ಬಿಂಗ್ ಟೈಂ ಇದು. ಮಧ್ಯಾಹ್ನ ಊಟಕ್ಕೆ ಬನ್ನಿ ಸಿಗೋಣ ಅಂತ ಹೇಳಿದವರು ಡಬ್ಬಿಂಗ್ ಥಿಯೇಟರ್‌ನಿಂದ ಹೊರ ಬಂದಾಗ ರಾತ್ರಿ 7ಗಂಟೆ ಆಗಿತ್ತು. ಡಬ್ಬಿಂಗ್ ಮುಗೀತಾ ಎಂದು ಕೇಳಿದಕ್ಕೆ ನಮ್ ಹೀರೋ ಧ್ರುವ ಸರ್ಜಾ ಹೇಳಿದಿಷ್ಟು. ಇಲ್ಲ ಇನ್ನೊಂದೆರಡು ದಿನ ಇದೆ ಮಾಡಿ ಮುಗಿಸುತ್ತೀನಿ. ಅಣ್ಣ ಇಲ್ಲ ಅಂದಾಗ ಹೇಗೇಗೋ ಮಾಡೋಕಾಗಲ್ಲ.ಕೆಲಸ ಒಪ್ಪಿಕೊಂಡ ಮೇಲೆ ಚೆನ್ನಾಗಿ ಮಾಡ್ಬೇಕು ಬ್ರೋ, ಲೇಟಾದ್ರೂ ನೀಟಾಗಿ ಮಾಡೋಣ ಅಂದಿದ್ದರು ಪ್ರತಿ ದೃಶ್ಯಕ್ಕೂ ಜೀವ ತುಂಬಿದ್ದಕ್ಕೆ ಸಾಕ್ಷಿಯಾಗಿತ್ತು. ಮೂವರು ಹಿರಿಯರನ್ನು ಧ್ರುವ ಅವ್ರಿಗೆ ಪರಿಚಯ ಮಾಡೋಣ ಅಂತ ಕರೆದುಕೊಂಡು ಹೋಗಿದ್ದೆ. ಅದ್ರಲ್ಲಿ ಒಬ್ಬರು ಹಿರಿಯರು ಹೇಳಿದ್ದಿಷ್ಟು. ಪ್ರಥಮ್, ಧ್ರುವ ಸರ್ಜಾ ಅವ್ರು ಒಬ್ಬ ಗೆದ್ದರೆ ಕನಿಷ್ಟ ಸಾವಿರ ಜನ ನೆಮ್ಮದಿಯಾಗಿ ಊಟ ಮಾಡುತ್ತಾರೆ ಅಂತ. ಹೀಗಾಗಿ ನಮ್ಮ ಮೀಟಿಂಗ್ ಇನ್ನೊಂದು ದಿನಕ್ಕೆ ಪೋಸ್ಟ್ ಪೋನ್ ಆಯ್ತು. ಈ ಸ್ಪೆಷಲ್ ಅರ್ಪಣೆ ಚಿರು ಅಣ್ಣನಿಗೆ ಧ್ರುವ ಅವರಿಂದ’ ಎಂದು ಒಳ್ಳೆ ಹುಡುಗ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಪ್ರಥಮ್ ಪೋಸ್ಟ್ ನೋಡಿದ ಬಳಿಕ ಅಭಿಮಾನಿಗಳು, ಅಣ್ಣ ಚಿರು ಮೇಲೆ ಧ್ರುವಾಗಿರುವ ಪ್ರೀತಿ ಕಂಡು ಫಿದಾ ಆಗಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಇಂದು ಚಿರಂಜೀವಿ ಸರ್ಜಾ ಪುಣ್ಯಸ್ಮರಣೆ- ಕುಟುಂಬಸ್ಥರಿಂದ ಪೂಜೆ

    ಇಂದು ಚಿರಂಜೀವಿ ಸರ್ಜಾ ಪುಣ್ಯಸ್ಮರಣೆ- ಕುಟುಂಬಸ್ಥರಿಂದ ಪೂಜೆ

    ಬೆಂಗಳೂರು: ಸ್ಯಾಂಡಲ್‍ವುಡ್ ಯುವ ಸಾಮ್ರಾಟ್ ಚಿರು ಸರ್ಜಾ ಅಗಲಿಕೆಗೆ ಒಂದು ವರ್ಷವಾಗಿದೆ. ಚಿರು ಸರ್ಜಾ ಪುಣ್ಯ ಸ್ಮರಣಾರ್ಥಕವಾಗಿ ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

    ಚಿರು ಸರ್ಜಾ ಕಳೆದ ವರ್ಷ ಜೂನ್ 7 ರಂದು ಚಿರು ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ ಚಿರು ಸರ್ಜಾ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಂದ ದೂರವಾಗಿದ್ದಾರೆ. ಅವರು ನಮ್ಮನ್ನು ಅಗಲಿ ಸರಿಸುಮಾರು ಒಂದು ವರ್ಷವಾಗಿದೆ. ಚಿರು ಸರ್ಜಾ ಪುಣ್ಯ ಸ್ಮರಣಾರ್ಥಕವಾಗಿ ಇಂದು ಕುಟುಂಬಸ್ಥರು ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪ ಚಿರುವನ್ನು ಗುರುತಿಸುತ್ತಿರೋ ನನ್ನ ಮಗನನ್ನು ನೋಡಲು ಹೆಮ್ಮೆಯಾಗ್ತಿದೆ: ಮೇಘನಾ

     

    View this post on Instagram

     

    A post shared by Meghana Raj Sarja (@megsraj)

    ಕನಕಪುರ ರಸ್ತೆಯ ನಲಗುಳಿ ಬಳಿ ಸಹೋದರ ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ಅಂತ್ಯ ಕ್ರಿಯೆ ಮಾಡಲಾಗಿದೆ. ಇಂದು ಧ್ರುವ ಸರ್ಜಾ ಕುಟುಂಬ ಹಾಗೂ ಚಿರು ಪತ್ನಿ ಮೇಘನಾ ಕುಟುಂಬ ಸ್ಥಳಕ್ಕೆ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ. ಚಿರು ಅಗಲಿಕೆಯ ನೋವಲ್ಲಿ ಕುಟುಂಬ ಜೂನಿಯರ್ ಚಿರುವಿನ ನಗುವನ್ನು ನೋಡುತ್ತಾ ಒಂದು ವರ್ಷ ಕಳೆದಿದೆ. ಧ್ರುವ ಸರ್ಜಾ, ಮೇಘನಾ ಪುತ್ರ ಹಾಗೂ ಸುಂದರ್ ರಾಜ್, ಪ್ರಮಿಳಾ ಜೋಷಾಯ್ ಹಾಗೂ ಚಿರು ಕುಟುಂಬಸ್ಥರು ಕನಕಪುರ ರಸ್ತೆಯ ಕಗ್ಗಲಿಪುರದ ನೆಲಗುಳಿಯ ಬೃಂದಾವನ ಫಾರ್ಮ್ ಹೌಸ್‍ನಲ್ಲಿರುವ ಚಿರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ರಾಧಿಕಾ ಪಂಡಿತ್

    ಚಿರಂಜೀವಿ ಸರ್ಜಾ ನಿಧನರಾದಾಗಿನಿಂದಲೂ ಮೇಘನಾ ರಾಜ್ ಮತ್ತು ಅವರ ಕುಟುಂಬ ಜ್ಯೂನಿಯರ್ ಸರ್ಜಾ ಅವರನ್ನು ನೋಡುತ್ತಾ ಸ್ಟ್ರಾಂಗ್ ಆಗಿ ನಗುಮಖದಿಂದಲೇ ಇತ್ತು. ತಮ್ಮ ಪುಟ್ಟ ಮಗನ ಸಂತೋಷದ ಫೋಟೋಗಳನ್ನು ಮತ್ತು ಚಿರಂಜೀವಿ ಅವರ ನೆನಪುಗಳನ್ನು ಮೇಘನಾ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಚಿರಂಜೀವಿ ಸರ್ಜಾ ಅವರು ನಮ್ಮನ್ನು ಅಗಲಿ ಒಂದು ವರ್ಷ ಆಗಿರುವ ನೆನಪಿಗೆ ಇಬ್ಬರು ಒಟ್ಟಿಗೆ ಇರುವ ಸುಂದರವಾದ ಕ್ಯಾಂಡಿಡ್ ಫೋಟೋವನ್ನು ಹಂಚಿಕೊಂಡಿದ್ದು, “ಯುಎಸ್ ಮೈನ್” ಎಂದು ಶೀರ್ಷಿಕೆ ನೀಡಿದ್ದಾರೆ. ಇದನ್ನೂ ಓದಿ: ನೀನು ದೇವರಮನೆಗೆ ಹೋಗಿ ವರುಷವಾಯ್ತು: ಮೇಘನಾ ರಾಜ್ ಸರ್ಜಾ

    ಕನ್ನಡ ಚಲನಚಿತ್ರೋದ್ಯಮದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾದ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ 2020ರ ಜೂನ್ 7ರಂದು ನಿಧನರಾದರು. ಚಿರಂಜೀವಿ ಸರ್ಜಾ ನಿಧನಕ್ಕೆ ಅವರ ಕುಟುಂಬ ಮಾತ್ರವಲ್ಲದೇ ಅವರ ಅಭಿಮಾನಿ ಬಳಗವೇ ಕಣ್ಣೀರು ಹಾಕಿತ್ತು. ಚಿರು ಅಣ್ಣ ಪ್ರೀತಿಯಲ್ಲಿ ಗುಣವಂತ, ನಗುವಿನಲ್ಲಿ ಶ್ರೀಮಂತ ಅಭಿಮಾನಿಗಳ ಮನಸ್ಸಲ್ಲಿ ಎಂದಿಗೂ ಜೀವಂತ ಮಿಸ್ ಯು ಚಿರು ಅಣ್ಣ ಎಂದೆಲ್ಲಾ ಅಭಿಮಾನಿಗಳು ಮೇಘನಾ ಶೇರ್ ಮಾಡಿರುವ ಫೋಟೋಗಳಿಗೆ ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಚಿರುವಿನ ಕೊನೆಯ ದಿನ ನಡೆದಿದ್ದು ಏನು? – ಬಹಿರಂಗ ಪಡಿಸಿದ ಮೇಘನಾ

  • ಐ ಲವ್ ಯೂ, ಮರಳಿ ಬಾ ಚಿರು : ಮೇಘನಾ ರಾಜ್

    ಐ ಲವ್ ಯೂ, ಮರಳಿ ಬಾ ಚಿರು : ಮೇಘನಾ ರಾಜ್

    ಬೆಂಗಳೂರು: ಎರಡು ದಿನದ ಹಿಂದಷ್ಟೇ ಮಗುವಿಗೆ ಆರು ತಿಂಗಳು ತುಂಬಿದ ಸಂಭ್ರಮದ ಫೋಟೋವನ್ನು ಮೇಘನಾ ಹಂಚಿಕೊಂಡಿದ್ದರು. ಇದೀಗ ತಮ್ಮ ಪತಿಯನ್ನು ನೆನೆದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

    ಸ್ಯಾಂಡಲ್‍ವುಡ್‍ನ ಮುದ್ದಾದ ಜೋಡಿ ಮೇಘನಾ-ಚಿರಂಜೀವಿ ಸರ್ಜಾ ಮೇಲೆ ಅದ್ಯಾವ ದೇವರ ಕಣ್ಣು ಬಿತ್ತು ಗೊತ್ತಿಲ್ಲ. ಚಿರು ಎಲ್ಲರಿಂದ ದೂರಾದರು. ಸಾಮಾಜಿಕ ಜಾಲತಾಣದಲ್ಲಿ ಚಿರು ಜೊತೆಗಿನ ಫೋಟೋವನ್ನು ಹಂಚಿಕೊಂಡು ಭಾವನಾತ್ಮಕ ಸಂದೇಶವನ್ನು ಎರಡೇ ಪದಗಳಲ್ಲಿ ಬರೆದಿದ್ದಾರೆ. ಐ ಲವ್ ಯೂ! ಮರಳಿ ಬಾ ಎಂದು ಬರೆದುಕೊಂಡು ಚಿರು ಜೊತೆಗೆ ಇದ್ದ ಫೋಟೋವನ್ನು ಮೇಘನಾ ಹಂಚಿಕೊಂಡಿದ್ದಾರೆ. ಅವರ ಸಂದೇಶ ಅಭಿಮಾನಿಗಳ ಕಣ್ಣು ಒದ್ದೆಯಾಗುವಂತೆ ಮಾಡಿದೆ.

     

    View this post on Instagram

     

    A post shared by Meghana Raj Sarja (@megsraj)

    ಕಳೆದ ಜೂನ್‍ನಲ್ಲಿ ಚಿರುವನ್ನು ಕಳೆದುಕೊಂಡ ಬಳಿಕ ತಮ್ಮ ಮಗುವಿನ ಬಗ್ಗೆ ಇದೇ ರೀತಿ ಭಾವನಾತ್ಮಕವಾಗಿ ಮೇಘನಾ ಚಿರುಗೆ ಪತ್ರ ಬರೆದಿದ್ದರು. ಈ ಮಗುವೇ ನಿಮ್ಮ ಪ್ರೀತಿಯ ಸಂಕೇತದ ಅತ್ಯಮೂಲ್ಯ ಕೊಡುಗೆಯಾಗಿದೆ. ನಿಮ್ಮ ಈ ಅದ್ಬುತ ಉಡುಗೊರೆಗೆ ನಾನು ಸದಾ ಚಿರಋಣಿ. ನಿಮ್ಮನ್ನು ಮತ್ತೆ ಮಗುವಿನ ರೂಪದಲ್ಲಿ ಜಗತ್ತಿಗೆ ಕರೆತರಲು ಕಾಯುತ್ತಿದ್ದು, ನಿಮ್ಮ ಬೆರಳು ಹಿಡಿಯಲು ಕಾಯುತ್ತಿದ್ದೇನೆ ಎಂದಿದ್ದರು.

     

    View this post on Instagram

     

    A post shared by Meghana Raj Sarja (@megsraj)

    ಚಿರು ದೂರವಗಿರುವ ದುಃಖವನ್ನು ಮರೆಸಲು ಜ್ಯೂನಿಯರ್ ಚಿರಂಜೀವಿ ಎಂದೇ ಅಭಿಮಾನಿಗಳು ಚಿರು ಮಗನನ್ನುಕರೆಯುತ್ತಾರೆ. ಮೇಘನಾ ಚಿರು ದೂರವಾಗಿರುವ ಕುರಿತು ನೆನೆಪಿಸಿಕೊಂಡಿದ್ದಾರೆ. ಮರಳಿ ಬಾ… ಎನ್ನುವ ಪ್ರೀತಿಯ ಸಂದೇಶ ಅತ್ಯಂತ ಭಾವನಾತ್ಮಕವಾಗಿದೆ.

  • ಚಿರು ಸರ್ಜಾ ಈಗ ಸಖತ್ ಬ್ಯುಸಿ

    ಚಿರು ಸರ್ಜಾ ಈಗ ಸಖತ್ ಬ್ಯುಸಿ

    ಬೆಂಗಳೂರು: ಬಹುಶಃ ಕನ್ನಡ ಚಿತ್ರರಂಗದ ಬೇರಾವ ಸ್ಟಾರ್ ಗಳೂ ಇಲ್ಲದಷ್ಟು ಬ್ಯುಸಿ ಇರೋ ನಟ ಅಂದರೆ ಅದು ಚಿರಂಜೀವಿ ಸರ್ಜಾ. ಈಗಷ್ಟೇ ಸಿಂಗ ಸಿನಿಮಾದ ಹಾಡಿಗಾಗಿ ಬ್ಯಾಂಕಾಕ್ ಗೆ ಹೋಗಿ ಬಂದಿದ್ದಾರೆ. ರಾಜಮಾರ್ತಾಂಡ, ರಣಮ್, ಆಧ್ಯ, ಜುಗಾರಿ ಕ್ರಾಸ್ ಮತ್ತು ಖಾಕಿ ಸದ್ಯ ಚಿರು ನಟಿಸುತ್ತಿರುವ ಚಿತ್ರಗಳು. ಬ್ಯಾಕ್ ಟು ಬ್ಯಾಕ್ ಕಾಲ್ ಶೀಟ್ ಗಳನ್ನು ಕೊಟ್ಟು ಒಂದು ದಿನ ಕೂಡಾ ಪುರುಸೊತ್ತಿಲ್ಲದೆ ಚಿರು ಸಿನಿಮಾ ಚಿತ್ರೀಕರಣಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಅನೌನ್ಸ್ ಆಗಿ ಚಿತ್ರೀಕರಣಗೊಳ್ಳುತ್ತಿರುವ ಸಿನಿಮಾಗಳೇ ಆರಕ್ಕಿಂತಾ ಹೆಚ್ಚಿವೆ. ಇದರ ಜೊತೆಗೆ ಧೈರ್ಯಂ ಖ್ಯಾತಿಯ ಶಿವ ತೇಜಸ್ ನಿರ್ದೇಶನದ ಸಿನಿಮಾ ಮತ್ತು ಅನಿಲ್ ಮಂಡ್ಯ ನಿರ್ದೇಶನದ ಚಿತ್ರಗಳೂ ಕ್ಯೂನಲ್ಲಿ ನಿಂತಿವೆ.

    ಸಾಲದೆಂಬಂತೆ ತರುಣ್ ಶಿವಪ್ಪ ನಿರ್ಮಾಣದ ಸಿನಿಮಾ ಕೂಡಾ ಆರಂಭಗೊಳ್ಳಲಿದೆ. ಇಷ್ಟು ಸಿನಿಮಾಗಳಲ್ಲಿ ಯಾವುದು ಮೊದಲು ಚಿತ್ರೀಕರಣ ಪೂರೈಸಿ, ಬಿಡುಗಡೆಗೆ ತಯಾರಾಗುತ್ತದೋ ಗೊತ್ತಿಲ್ಲ. ಈ ನಡುವೆ ಶಿವತೇಜಸ್ ಮತ್ತು ಅನಿಲ್ ಮಂಡ್ಯ ಸ್ಕ್ರಿಪ್ಟ್ ಕೆಲಸಗಳನ್ನೆಲ್ಲಾ ಮುಗಿಸಿ ಚಿರು ಡೇಟ್ಸ್ ಗಾಗಿ ಕಾದು ಕುಳಿತಿದ್ದಾರೆ. ಈ ಇಬ್ಬರ ಸಿನಿಮಾಗಳಲ್ಲಿ ಯಾವುದು ಮೊದಲು ಮುಹೂರ್ತ ಆಚರಿಸಿಕೊಳ್ಳುತ್ತದೋ ಎನ್ನುವ ಕುತೂಹಲ ಎಲ್ಲರದ್ದಾಗಿದೆ.

    ಚಿರು ಇಷ್ಟೊಂದು ಸಿನಿಮಾಗಳನ್ನು ಒಟ್ಟೊಟ್ಟಿಗೇ ಒಪ್ಪಿಕೊಂಡು ಬ್ಯುಸಿಯಾಗಿರೋದರ ನಡುವೆಯೇ ತಮ್ಮ ಪತ್ನಿ ಮೇಘನಾರಾಜ್ ಜೊತೆ ಹತ್ತು ದಿನಗಳ ಕಾಲ ಸ್ವಿಜರ್ ಲೆಂಡ್ ಟ್ರಿಪ್ಪಿಗೆ ಹೋಗಲು ಕೂಡಾ ಟೈಮು ಮಾಡಿಕೊಂಡಿದ್ದಾರೆ. ಇದೇ ತಿಂಗಳ ಮೂರನೇ ವಾರದ ಹೊತ್ತಿಗೆ ಚಿರು ದಂಪತಿ ಫಾರಿನ್ ಟ್ರಿಪ್ಪಿಗೆ ತೆರಳಲಿದೆ.

    ಒಟ್ಟಾರೆ ಚಿರು ಬ್ಯುಸಿಯಾಗಿರೋ ರೀತಿಯನ್ನು ನೋಡಿದರೆ ಮದುವೆಯಾದ ಮೇಲೆ ಅವರ ನಸೀಬು ಬದಲಾದಂತೆ ಕಾಣುತ್ತಿದೆ. ಯಾಕೆಂದರೆ, ವರ್ಷಕ್ಕೆ ಒಂದೋ ಎರಡೋ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದ ಚಿರು ಕೈಲೀಗ ಮುಕ್ಕಾಲು ಡಜನ್ ಸಿನಿಮಾಗಳಿವೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv