Tag: Chirotsava

  • ಸಿನಿಮಾ ರಂಗದ ಕುರಿತು ಡಾಲಿ ಧನಂಜಯ್ ಬೇಡಿಕೆ: ಅಸ್ತು ಅಂದ್ರು ಸಿಎಂ ಸಿದ್ದರಾಮಯ್ಯ

    ಸಿನಿಮಾ ರಂಗದ ಕುರಿತು ಡಾಲಿ ಧನಂಜಯ್ ಬೇಡಿಕೆ: ಅಸ್ತು ಅಂದ್ರು ಸಿಎಂ ಸಿದ್ದರಾಮಯ್ಯ

    ನಿನ್ನೆ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (Chirotsava) ಅದ್ದೂರಿ ಚಾಲನೆ ಸಿಕ್ಕಿದೆ. ಈ ಬಾರಿ ಬೆಂಗಳೂರು ಚಿತ್ರೋತ್ಸವಕ್ಕೆ ನಟ ಡಾಲಿ ಧನಂಜಯ್ ಅವರನ್ನು ಈ ಬಾರಿಯ ಚಿತ್ರೋತ್ಸವಕ್ಕೆ ರಾಯಭಾರಿಯಾಗಿ ಸರ್ಕಾರ ಘೋಷಿಸಿದೆ. ಡಾಲಿ ಧನಂಜಯ್ (Dolly Dhananjay) ಅವರನ್ನು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನೇಮಕ ಮಾಡಿರುವುದು ಅವರ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಖುಷಿ ತಂದಿದೆ.

    ವಿಧಾನಸೌಧದ ಮುಂಭಾಗದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಅಂತರರಾಷ್ಟ್ರೀಯ  ಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ ನೀಡಿದರು. ಸಿಎಂ ಸಿದ್ದರಾಮಯ್ಯ (Siddaramaiah) ಅವರ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ, ಸಾಧು ಕೋಕಿಲ, ಆರಾಧನಾ ಸೇರಿದಂತೆ ಅನೇಕ ಸಿನಿ ಗಣ್ಯರು ಉಪಸ್ಥಿತರಿದ್ದರು. ಈ ಬಾರಿ ಚಿತ್ರೋತ್ಸವಕ್ಕೆ   ರಾಯಭಾರಿಯಾಗಿ ಆಯ್ಕೆಯಾಗಿರುವ ಡಾಲಿ ಧನಂಜಯ ಮಾತನಾಡಿ ಚಿತ್ರೋದ್ಯಮದ ಪರವಾಗಿ ಒಂದಿಷ್ಟು ಬೇಡಿಕೆಗಳನ್ನು ಸಿಎಂ ಮುಂದಿಟ್ಟರು.

    ‘ಕೊರೊನಾ ಬಳಿಕ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ, ಇದರ ಜೊತೆಗೆ ಪ್ರಶಸ್ತಿ ಕೂಡ ನಿಂತಿದೆ. ಕಲಾವಿದರಿಗೆ ಪ್ರೋತ್ಸಾಹ ಕೂಡ ತುಂಬಾ ಮುಖ್ಯ. ಕಾಂತರ, ಕೆಜಿಎಫ್ ಅಂತಹ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಇದರ ಜೊತೆಗೆ ಸರ್ಕಾರದ ಪ್ರೋತ್ಸಾಹ ಕೂಡ ತುಂಬಾ ಮುಖ್ಯ. ಸದ್ಯ ನಿಂತಿರುವ ಪ್ರಶಸ್ತಿ ಮತ್ತು ಸಬ್ಸಿಡಿಯನ್ನು ಮುಂದುವರಿಸಬೇಕೆಂದು ಚಿತ್ರರಂಗದ ಪರವಾಗಿ ನಾನು ಸಿಎಂ ಬಳಿ ಕೇಳಿಕೊಳ್ಳುತ್ತಿದ್ದೇನೆ’ ಎಂದರು.

    ಧನಂಜಯ್ ಮಾತುಗಳಿಗೆ ಸಿಎಂ ಸಿದ್ದರಾಮಯ್ಯ ಅಲ್ಲೇ ಸಮ್ಮತಿ ಸೂಚಿಸಿದರು. ಚಿತ್ರೋತ್ಸವ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ಚಿತ್ರೋತ್ಸವಕ್ಕೆ ಸರ್ಕಾರ ಎಲ್ಲಾ ರೀತಿಯ ಸಹಾಯವನ್ನು ನೀಡಿದೆ, ಮುಂದೆಯೂ ಸಹ ಚಿತ್ರರಂಗಕ್ಕೆ ಎಲ್ಲಾ ರೀತಿಯ ಸಹಾಯವನ್ನು ಮಾಡಲಿದೆ. ಕನ್ನಡ ಚಿತ್ರರಂಗಕ್ಕೆ ಎಲ್ಲಾ ರೀತಿಯ ಬೆಂಬಲ, ಹಣಕಾಸಿನ ಸಹಕಾರವನ್ನು ಕೊಡುತ್ತೇನೆ. 2019 ರಿಂದ ಚಲನಚಿತ್ರ ಪ್ರಶಸ್ತಿಗಳನ್ನು ಕೊಟ್ಟಿಲ್ಲ. ಈಗ ನಾನು ಕಮಿಟಿಗಳನ್ನು ಮಾಡಿದ್ದೇನೆ. ಆ ಕಮಿಟಿ ವರದಿ ಕೊಟ್ಟ ತಕ್ಷಣ ಎಲ್ಲಾ ವರ್ಷದ ಪ್ರಶಸ್ತಿಗಳನ್ನು ಕೊಡುತ್ತೇವೆ’ ಎಂದರು.

    ಉದ್ಘಾಟನೆಯಾದ ಚಲನಚಿತ್ರೋತ್ಸವ ಮಾರ್ಚ್​ 7 ರವರೆಗೆ ನಡೆಯಲಿದೆ. ಈ ಬಾರಿ 50ಕ್ಕೂ ಹೆಚ್ಚು ರಾಷ್ಟ್ರಗಳಿಂದ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾದ ಸಿನಿಮಾಗಳೂ ಸೇರಿದಂತೆ 200ಕ್ಕೂ ಹೆಚ್ಚು ಚಲನಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ.

  • ಇಂದಿನಿಂದ ಬೆಂಗಳೂರು ಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ ಚಾಲನೆ

    ಇಂದಿನಿಂದ ಬೆಂಗಳೂರು ಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ ಚಾಲನೆ

    ಇಂದಿನಿಂದ ನಡೆಯಲಿರುವ ಬೆಂಗಳೂರು (Bangalore) 15ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು (Chirotsava) ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಂಜೆ 5ಕ್ಕೆ  ಸಿಎಂ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಸಿಂಹಾಸನ, ಸಾಮ್ಮಾ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮುಂತಾದ ಚಿತ್ರಗಳ ಖ್ಯಾತಿಯ ಡಾ.ಜಬ್ಬಾರ್ ಪಟೇಲ್, ಖ್ಯಾತ ನಟರಾದ ಶಿವರಾಜ್ ಕುಮಾರ್, ಇತ್ತೀಚೆಗೆ ವಿಶಾಲ್ ಭಾರದ್ವಾಜ್ ನಿರ್ದೇಶನದ “ಖುಫಿಯಾ” ಚಿತ್ರದಲ್ಲಿ ನಟಿಸಿದ ಬಾಂಗ್ಲಾದೇಶದ ಖ್ಯಾತ ನಟಿ ಅಜಮೇರಿ ಬಂದೋನ್, ಜೆಕ್ ರಿಪಬ್ಲಿಕ್‌ನ ಚಲನಚಿತ್ರ ಶಿಕ್ಷಣ ತಜ್ಞೆ, ವಿಮರ್ಶಕಿ ವಿಯರಾ ಲ್ಯಾಂಗರೋವಾ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ.  ಮೂರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರಿಂದ ಉದ್ಘಾಟನೆಗೆ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಘಾಟನಾ ಚಿತ್ರವಾಗಿ ಸ್ವಿಸ್ ಚಲನಚಿತ್ರ, ಪೀಟರ್ ಲೂಸಿ ನಿರ್ದೇಶನದ, 88 ನಿಮಿಷಗಳ ಅವಧಿಯ ‘ಬೋಂಜೂರ್ ಸ್ವಿಟ್ಸರ್ಲೆಂಡ್’ ಪ್ರದರ್ಶನವಾಗಲಿದೆ. ಕನ್ನಡ ಭಾರತೀಯ ಮತ್ತು ಏಷ್ಯನ್ ಸಿನಿಮಾಗಳಲ್ಲಿ ಸ್ಪರ್ಧಾತ್ಮಕ ವಿಭಾಗಗಳು, ಸಮಕಾಲೀನ ವಿಶ್ವ ಸಿನೆಮಾ, ದೇಶಕೇಂದ್ರಿ, ವಿಮರ್ಶಕರ ವಾರ, ಪುನರ್ವಲೋಕನ, ವಿಷಯಾಧಾರಿತ ಸಾಕ್ಷ್ಯಚಿತ್ರ ವಿಭಾಗ, ಜೀವನಚರಿತ್ರೆ, ಸ್ಮರಣೆ, ಗೌರವ, ಮಹಿಳಾ ಶಕ್ತಿ, ಹೀಗೆ ವಿವಿಧ ವಿಭಾಗಗಳಲ್ಲಿ 50 ಕ್ಕೂ ಹೆಚ್ಚು ದೇಶಗಳ. 180 ಚಲನಚಿತ್ರಗಳು ಈ ಉತ್ಸವದಲ್ಲಿ ಪ್ರದರ್ಶನವಾಗಲಿವೆ.

    ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮತ್ತು ಕರ್ನಾಟಕದ 50 ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಏಷ್ಯನ್ ಸಿನಿಮಾ ಸ್ಪರ್ಧೆಗೆ ಅಂತಾರಾಷ್ಟ್ರೀಯ ತೀರ್ಪುಗಾರರು, ಭಾರತೀಯ ಸಿನಿಮಾ ಸ್ಪರ್ಧೆಗಾಗಿ ಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು ಮತ್ತು ರಾಷ್ಟ್ರೀಯ ತೀರ್ಪುಗಾರರು ಕನ್ನಡ ಸಿನಿಮಾ ಸ್ಪರ್ಧೆಗಾಗಿ ಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು ಮತ್ತು ರಾಷ್ಟ್ರೀಯ ತೀರ್ಪುಗಾರರು ಸೇರಿದಂತೆ ಚಿತ್ರೋತ್ಸವದಲ್ಲಿ ಐದು ತೀರ್ಪುಗಾರ ತಂಡಗಳಿರುತ್ತವೆ. ವಿದೇಶದಿಂದ ದೃಢಪಡಿಸಿದ ಅಂತಾರಾರಾಷ್ಟ್ರೀಯ ತೀರ್ಪುಗಾರರ ಸದಸ್ಯರಲ್ಲಿ ರಷ್ಯಾದಿಂದ ನೀನಾ ಕೊಚೆಲೆವಾ, ಸ್ಪೇನ್‌ನ ರೊಸಾನ್ನಾ ಜಿ ಅಲೋನ್ಸೆ, ಬಾಂಗ್ಲಾದೇಶದ ಆರಿ ಹಕ್ ಬಾಂಧೋನ್, ಯುಕೆಯಿಂದ ಕ್ಯಾರಿ ರಾಜಿಂದರ್ ಸಾಹಿ, ಫ್ಲೋವಾಕಿಯಾದ ವೈರಾ ಲಾಂಗರೋವಾ, ತೈವಾನ್‌ನಿಂದ ಹ್ಯಾನ್ ಟಿಯೆನ್, ಆಸ್ಟ್ರೇಲಿಯಾದಿಂದ ಮ್ಯಾಕ್ಸಿ ವಿಲಿಯಮ್ಮನ್ ಮತ್ತು ಬಿಲ್ಲೇರಿಯಾದ ಆಂಡೋನಿಕಾ ಮಾರ್ಟೂನೊವಾ ಸೇರಿದ್ದಾರೆ. ರಾಷ್ಟ್ರೀಯ ತೀರ್ಪುಗಾರರ ಸದಸ್ಯರಲ್ಲಿ ಒರಿಸ್ಸಾದಿಂದ ವಿಜಯಾ ಜೆನಾ, ಮಣಿಪುರದಿಂದ ಮೇಘಚಂದ್ರ ಕೊಂಗ್ರಾಮ್, ಕೊಲ್ನೋತಾದಿಂದ ಶೇಖರ್ ದಾಸ್, ಮಹಾರಾಷ್ಟ್ರದಿಂದ ಸಂಜಯ್ ಕೃಷ್ಣಾಜಿ ಪಾಟೀಲ್, ಅಸ್ಸಾಂನಿಂದ ಜಾದುಮೋನಿ ದತ್ತಾ ಸೇರಿದ್ದಾರೆ. ಇವರೆಲ್ಲ ಹೆಸರಾಂತ ನಿರ್ದೇಶಕರು ಇಲ್ಲವೇ ವಿಮರ್ಶಕರು. ಸ್ಥಳೀಯ ಚಿತ್ರನಿರ್ದೇಶಕರು, ವಿಮರ್ಶಕರು, ಪತ್ರಕರ್ತರು ಕೆಲವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ತೀರ್ಪುಗಾರ ತಂಡದ ಭಾಗವಾಗಿರುತ್ತಾರೆ.

    ಕನ್ನಡ ಜನಪ್ರಿಯ ಮನರಂಜನಾ ಚಲನಚಿತ್ರಗಳ ವಿಭಾಗದಲ್ಲಿ 11 ಚಿತ್ರಗಳಿವೆ. ದೇಶ ಕೇಂದ್ರಿತ ವಿಭಾಗದಲ್ಲಿ ನಿರ್ದಿಷ್ಟ ದೇಶದಿಂದ ಸಮಕಾಲೀನ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು, ಈ ಬಾರಿ ಜರ್ಮನಿಯ ಸಿನಿಮಾಗಳ ಮೇಲೆ ಗಮನ ಹರಿಸಲಾಗಿದೆ. ಅದ್ಭುತ ಬಾರತ ನಮ್ಮ ಉತ್ಸವದ ಅನನ್ಯ ವಿಭಾಗ. ಇದರಲ್ಲಿ ಭಾರತದ ಕಡಿಮೆ ತಿಳಿದಿರುವ ಭಾಷೆಗಳಲ್ಲಿ ತಯಾರಾದ ಚಿತ್ರಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತದೆ. ಈ ಆವೃತ್ತಿಯಲ್ಲಿ ತುಳು, ಕೊಡವ, ಬಂಜಾರ, ಅರೆಬಾಷೆ, ಮಾರ್ಕೋಡಿ, ಗಾಲೊ, ರಾಭ, ಸಂತಾಲಿ, ತಾಯಿಫಾಕೆ, ಭಾಷೆಗಳ 9 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪುನರವಲೋಕನ ವಿಭಾಗಕ್ಕೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಮೃಣಾಲ್ ಸೇನ್ ಮತ್ತು ಇರಾನಿನ ಚಲನಚಿತ್ರ ನಿರ್ಮಾಪಕ ಅಬ್ಬಾಸ್ ಕೈರೋಸ್ಟೋಮಿ ಅವರನ್ನು ಆಯ್ಕೆ ಮಾಡಿದ್ದು, ಅವರ ಆಯ್ದ ಚಿತ್ರಗಳು ಈ ವಿಭಾಗದಲ್ಲಿ ಪ್ರದರ್ಶನ ಕಾಣಲಿವೆ.

    ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಸಂಗೀತ ಸಂಯೋಜಕ ವಿಜಯಭಾಸ್ಕರ್ ಶತಮಾನೋತ್ಸವ ಸ್ಮರಣೆಯಾಗಿ ಅವರ ಒಂದೆರಡು ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು. ಅವರು ಸಿನಿಮಾ ಸಂಗೀತಕ್ಕೆ ನೀಡಿದ ಕೊಡುಗೆಯ ಕುರಿತು ವಿಶೇಷ ಪ್ರಸ್ತುತಿ ಇರುತ್ತದೆ. ಛಾಯಾಗ್ರಾಹಕ ಎನ್ ಜಿ ರಾವ್ ಅವರ ಚಿತ್ರವೊಂದನ್ನು ಪ್ರದರ್ಶಿಸುವ ಮೂಲಕ ಅವರಿಗೆ ಶತಮಾನೋತ್ಸವದ ಗೌರವವನ್ನು ಸಲ್ಲಿಸಲಾಗುವುದು. ಕಳೆದವರ್ಷ ನಮ್ಮನ್ನು ಅಗಲಿದ ಹೆಸರಾಂತ ತಾರೆ, ನಿರ್ಮಾಪಕಿ ಲೀಲಾವತಿ, ನಿರ್ದೇಶಕರಾದ ಭಗವಾನ್, ಸಿ.ವಿ. ಶಿವಶಂಕರ್ ಮತ್ತು ಗಾಯಕಿ ವಾಣಿ ಜಯರಾಂ ಗೌರವಾರ್ಥ ಅವರ ಚಲನಚಿತ್ರ ಪ್ರದರ್ಶನ ಇದೆ. 15 ಗಂಟೆಗಳ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳ ವಿಭಾಗವು ಮಾನವ ಘನತೆ ಸಾಮಾಜಿಕ ನ್ಯಾಯ, ಪರಿಸರ ಕಾಳಜಿಗಳು ಮತ್ತು ಲಿಂಗ ಅಸಮಾನತೆಗಳನ್ನು ಸರಿಪಡಿಸುವ ಕಾಳಜಿಯ ಚಲನಚಿತ್ರಗಳ ಮೇಲೆ ವಿಶೇಷ ಗಮನವನ್ನು ಹೊಂದಿದೆ.

    ಸಂಕಲನ, ಛಾಯಾಗ್ರಹಣ, ಕಲೆ ಮತ್ತು ನಿರ್ಮಾಣ ವಿನ್ಯಾಸ, ಸಂಗೀತ, ಭಾರತೀಯ ಸಿನಿಮಾದಲ್ಲಿ ಸಾಂವಿಧಾನಿಕ ಮೌಲ್ಯಗಳು, ಚಲನಚಿತ್ರ ವಿಮರ್ಶೆ, ಚಲನಚಿತ್ರ ಸಹ ನಿರ್ಮಾಣ ಮತ್ತು ಮಾರುಕಟ್ಟೆ ಸಾಧ್ಯತೆಗಳು, ಲಿಂಗ ಸಂವೇದನೆ, ಚಲನಚಿತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಭಾವದ ಕುರಿತು ಮಾತುಕತೆಗಳು, ವಿಚಾರಸಂಕಿರಣಗಳು, ಕಾರ್ಯಾಗಾರಗಳು, ತಜ್ಞರಿಂದ ಉಪನ್ಯಾಸ, ಸಂವಾದ ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಒಳಗೊಂಡಿವೆ. ಬೇರೆ ದೇಶಗಳ ತೀರ್ಪುಗಾರರು, ವಿದೇಶದಿಂದ ಮತ್ತು ಭಾರತದ ಇತರ ಭಾಗಗಳ ಚಲನಚಿತ್ರ ತಯಾರಕರು, ವಿಮರ್ಶಕರು/ಪತ್ರಕರ್ತರು, ಚಲನಚಿತ್ರೋತ್ಸವ ಪ್ರತಿನಿಧಿಗಳು, ಪ್ರೋಗ್ರಾಮರ್‌ಗಳು, ಸಲಹೆಗಾರರು ಮೊದಲಾದವರು ಅತಿಥಿಗಳಾಗಿ ಬರಲಿದ್ದಾರೆ. ವಿದೇಶದಿಂದ ಸುಮಾರು 20 ಮಂದಿ ಸೇರಿದಂತೆ ಸುಮಾರು 70 ಅತಿಥಿಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಶ್ರೀಲಂಕಾ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇರಾನ್, ಉಜೇಕಿಸ್ತಾನ್, ಜೆಕ್ ರಿಪಬ್ಲಿಕ್, ಯುಕೆ, ಬಲ್ಲೇರಿಯಾ, ತೈವಾನ್, ಸ್ಪೇನ್, ಜರ್ಮನಿ ಮತ್ತು ರಷ್ಯಾವನ್ನು ಪ್ರತಿನಿಧಿಗಳು, ಸ್ಥಳೀಯ ಚಲನಚಿತ್ರ ಮತ್ತು ಸಾಂಸ್ಕೃತಿಕ ಮಂದಿ, ಬೆಂಗಳೂರಿನಲ್ಲಿರುವ ವಿದೇಶಿ ಸಂಸ್ಥೆಗಳ ಪ್ರತಿನಿಧಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿ ಪ್ರದಾನದೊಂದಿಗೆ ಸಮಾರೋಪ ಸಮಾರಂಭವು, ಮಾರ್ಚ್ 7, 2024, ಗುರುವಾರದಂದು ವಿಧಾನಸೌಧದ ಬ್ಯಾಂಕೈಟ್ ಹಾಲ್‌ನಲ್ಲಿ ನಡೆಯಲಿದೆ.

  • ಫೆ.29ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

    ಫೆ.29ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

    15ನೇ ಬೆಂಗಳೂರು (Bangalore) ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು (Chirotsava) ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಫೆಬ್ರವರಿ 29, 2024ರಂದು ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳು, ಗೌರವಾನ್ವಿತ ಅತಿಥಿಗಳು ಮತ್ತು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಿದ್ದಾರೆ. ಸಿಂಹಾಸನ, ಸಾಮ್ಮಾ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮುಂತಾದ ಚಿತ್ರಗಳ ಖ್ಯಾತಿಯ ಡಾ.ಜಬ್ಬಾರ್ ಪಟೇಲ್, ಖ್ಯಾತ ನಟರಾದ ಶಿವರಾಜ್ ಕುಮಾರ್, ಇತ್ತೀಚೆಗೆ ವಿಶಾಲ್ ಭಾರದ್ವಾಜ್ ನಿರ್ದೇಶನದ “ಖುಫಿಯಾ” ಚಿತ್ರದಲ್ಲಿ ನಟಿಸಿದ ಬಾಂಗ್ಲಾದೇಶದ ಖ್ಯಾತ ನಟಿ ಅಜಮೇರಿ ಬಂದೋನ್, ಜೆಕ್ ರಿಪಬ್ಲಿಕ್‌ನ ಚಲನಚಿತ್ರ ಶಿಕ್ಷಣ ತಜ್ಞೆ, ವಿಮರ್ಶಕಿ ವಿಯರಾ ಲ್ಯಾಂಗರೋವಾ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ.  ಮೂರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರಿಂದ ಉದ್ಘಾಟನೆಗೆ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಘಾಟನಾ ಚಿತ್ರವಾಗಿ ಸ್ವಿಸ್ ಚಲನಚಿತ್ರ, ಪೀಟರ್ ಲೂಸಿ ನಿರ್ದೇಶನದ, 88 ನಿಮಿಷಗಳ ಅವಧಿಯ ‘ಬೋಂಜೂರ್ ಸ್ವಿಟ್ಸರ್ಲೆಂಡ್’ ಪ್ರದರ್ಶನವಾಗಲಿದೆ. ಕನ್ನಡ ಭಾರತೀಯ ಮತ್ತು ಏಷ್ಯನ್ ಸಿನಿಮಾಗಳಲ್ಲಿ ಸ್ಪರ್ಧಾತ್ಮಕ ವಿಭಾಗಗಳು, ಸಮಕಾಲೀನ ವಿಶ್ವ ಸಿನೆಮಾ, ದೇಶಕೇಂದ್ರಿ, ವಿಮರ್ಶಕರ ವಾರ, ಪುನರ್ವಲೋಕನ, ವಿಷಯಾಧಾರಿತ ಸಾಕ್ಷ್ಯಚಿತ್ರ ವಿಭಾಗ, ಜೀವನಚರಿತ್ರೆ, ಸ್ಮರಣೆ, ಗೌರವ, ಮಹಿಳಾ ಶಕ್ತಿ, ಹೀಗೆ ವಿವಿಧ ವಿಭಾಗಗಳಲ್ಲಿ 50 ಕ್ಕೂ ಹೆಚ್ಚು ದೇಶಗಳ. 180 ಚಲನಚಿತ್ರಗಳು ಈ ಉತ್ಸವದಲ್ಲಿ ಪ್ರದರ್ಶನವಾಗಲಿವೆ.

    ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮತ್ತು ಕರ್ನಾಟಕದ 50 ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಏಷ್ಯನ್ ಸಿನಿಮಾ ಸ್ಪರ್ಧೆಗೆ ಅಂತಾರಾಷ್ಟ್ರೀಯ ತೀರ್ಪುಗಾರರು, ಭಾರತೀಯ ಸಿನಿಮಾ ಸ್ಪರ್ಧೆಗಾಗಿ ಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು ಮತ್ತು ರಾಷ್ಟ್ರೀಯ ತೀರ್ಪುಗಾರರು ಕನ್ನಡ ಸಿನಿಮಾ ಸ್ಪರ್ಧೆಗಾಗಿ ಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು ಮತ್ತು ರಾಷ್ಟ್ರೀಯ ತೀರ್ಪುಗಾರರು ಸೇರಿದಂತೆ ಚಿತ್ರೋತ್ಸವದಲ್ಲಿ ಐದು ತೀರ್ಪುಗಾರ ತಂಡಗಳಿರುತ್ತವೆ. ವಿದೇಶದಿಂದ ದೃಢಪಡಿಸಿದ ಅಂತಾರಾರಾಷ್ಟ್ರೀಯ ತೀರ್ಪುಗಾರರ ಸದಸ್ಯರಲ್ಲಿ ರಷ್ಯಾದಿಂದ ನೀನಾ ಕೊಚೆಲೆವಾ, ಸ್ಪೇನ್‌ನ ರೊಸಾನ್ನಾ ಜಿ ಅಲೋನ್ಸೆ, ಬಾಂಗ್ಲಾದೇಶದ ಆರಿ ಹಕ್ ಬಾಂಧೋನ್, ಯುಕೆಯಿಂದ ಕ್ಯಾರಿ ರಾಜಿಂದರ್ ಸಾಹಿ, ಫ್ಲೋವಾಕಿಯಾದ ವೈರಾ ಲಾಂಗರೋವಾ, ತೈವಾನ್‌ನಿಂದ ಹ್ಯಾನ್ ಟಿಯೆನ್, ಆಸ್ಟ್ರೇಲಿಯಾದಿಂದ ಮ್ಯಾಕ್ಸಿ ವಿಲಿಯಮ್ಮನ್ ಮತ್ತು ಬಿಲ್ಲೇರಿಯಾದ ಆಂಡೋನಿಕಾ ಮಾರ್ಟೂನೊವಾ ಸೇರಿದ್ದಾರೆ. ರಾಷ್ಟ್ರೀಯ ತೀರ್ಪುಗಾರರ ಸದಸ್ಯರಲ್ಲಿ ಒರಿಸ್ಸಾದಿಂದ ವಿಜಯಾ ಜೆನಾ, ಮಣಿಪುರದಿಂದ ಮೇಘಚಂದ್ರ ಕೊಂಗ್ರಾಮ್, ಕೊಲ್ನೋತಾದಿಂದ ಶೇಖರ್ ದಾಸ್, ಮಹಾರಾಷ್ಟ್ರದಿಂದ ಸಂಜಯ್ ಕೃಷ್ಣಾಜಿ ಪಾಟೀಲ್, ಅಸ್ಸಾಂನಿಂದ ಜಾದುಮೋನಿ ದತ್ತಾ ಸೇರಿದ್ದಾರೆ. ಇವರೆಲ್ಲ ಹೆಸರಾಂತ ನಿರ್ದೇಶಕರು ಇಲ್ಲವೇ ವಿಮರ್ಶಕರು. ಸ್ಥಳೀಯ ಚಿತ್ರನಿರ್ದೇಶಕರು, ವಿಮರ್ಶಕರು, ಪತ್ರಕರ್ತರು ಕೆಲವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ತೀರ್ಪುಗಾರ ತಂಡದ ಭಾಗವಾಗಿರುತ್ತಾರೆ.

    ಕನ್ನಡ ಜನಪ್ರಿಯ ಮನರಂಜನಾ ಚಲನಚಿತ್ರಗಳ ವಿಭಾಗದಲ್ಲಿ 11 ಚಿತ್ರಗಳಿವೆ. ದೇಶ ಕೇಂದ್ರಿತ ವಿಭಾಗದಲ್ಲಿ ನಿರ್ದಿಷ್ಟ ದೇಶದಿಂದ ಸಮಕಾಲೀನ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು, ಈ ಬಾರಿ ಜರ್ಮನಿಯ ಸಿನಿಮಾಗಳ ಮೇಲೆ ಗಮನ ಹರಿಸಲಾಗಿದೆ. ಅದ್ಭುತ ಬಾರತ ನಮ್ಮ ಉತ್ಸವದ ಅನನ್ಯ ವಿಭಾಗ. ಇದರಲ್ಲಿ ಭಾರತದ ಕಡಿಮೆ ತಿಳಿದಿರುವ ಭಾಷೆಗಳಲ್ಲಿ ತಯಾರಾದ ಚಿತ್ರಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತದೆ. ಈ ಆವೃತ್ತಿಯಲ್ಲಿ ತುಳು, ಕೊಡವ, ಬಂಜಾರ, ಅರೆಬಾಷೆ, ಮಾರ್ಕೋಡಿ, ಗಾಲೊ, ರಾಭ, ಸಂತಾಲಿ, ತಾಯಿಫಾಕೆ, ಭಾಷೆಗಳ 9 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪುನರವಲೋಕನ ವಿಭಾಗಕ್ಕೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಮೃಣಾಲ್ ಸೇನ್ ಮತ್ತು ಇರಾನಿನ ಚಲನಚಿತ್ರ ನಿರ್ಮಾಪಕ ಅಬ್ಬಾಸ್ ಕೈರೋಸ್ಟೋಮಿ ಅವರನ್ನು ಆಯ್ಕೆ ಮಾಡಿದ್ದು, ಅವರ ಆಯ್ದ ಚಿತ್ರಗಳು ಈ ವಿಭಾಗದಲ್ಲಿ ಪ್ರದರ್ಶನ ಕಾಣಲಿವೆ.

    ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಸಂಗೀತ ಸಂಯೋಜಕ ವಿಜಯಭಾಸ್ಕರ್ ಶತಮಾನೋತ್ಸವ ಸ್ಮರಣೆಯಾಗಿ ಅವರ ಒಂದೆರಡು ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು. ಅವರು ಸಿನಿಮಾ ಸಂಗೀತಕ್ಕೆ ನೀಡಿದ ಕೊಡುಗೆಯ ಕುರಿತು ವಿಶೇಷ ಪ್ರಸ್ತುತಿ ಇರುತ್ತದೆ. ಛಾಯಾಗ್ರಾಹಕ ಎನ್ ಜಿ ರಾವ್ ಅವರ ಚಿತ್ರವೊಂದನ್ನು ಪ್ರದರ್ಶಿಸುವ ಮೂಲಕ ಅವರಿಗೆ ಶತಮಾನೋತ್ಸವದ ಗೌರವವನ್ನು ಸಲ್ಲಿಸಲಾಗುವುದು. ಕಳೆದವರ್ಷ ನಮ್ಮನ್ನು ಅಗಲಿದ ಹೆಸರಾಂತ ತಾರೆ, ನಿರ್ಮಾಪಕಿ ಲೀಲಾವತಿ, ನಿರ್ದೇಶಕರಾದ ಭಗವಾನ್, ಸಿ.ವಿ. ಶಿವಶಂಕರ್ ಮತ್ತು ಗಾಯಕಿ ವಾಣಿ ಜಯರಾಂ ಗೌರವಾರ್ಥ ಅವರ ಚಲನಚಿತ್ರ ಪ್ರದರ್ಶನ ಇದೆ. 15 ಗಂಟೆಗಳ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳ ವಿಭಾಗವು ಮಾನವ ಘನತೆ ಸಾಮಾಜಿಕ ನ್ಯಾಯ, ಪರಿಸರ ಕಾಳಜಿಗಳು ಮತ್ತು ಲಿಂಗ ಅಸಮಾನತೆಗಳನ್ನು ಸರಿಪಡಿಸುವ ಕಾಳಜಿಯ ಚಲನಚಿತ್ರಗಳ ಮೇಲೆ ವಿಶೇಷ ಗಮನವನ್ನು ಹೊಂದಿದೆ.

    ಸಂಕಲನ, ಛಾಯಾಗ್ರಹಣ, ಕಲೆ ಮತ್ತು ನಿರ್ಮಾಣ ವಿನ್ಯಾಸ, ಸಂಗೀತ, ಭಾರತೀಯ ಸಿನಿಮಾದಲ್ಲಿ ಸಾಂವಿಧಾನಿಕ ಮೌಲ್ಯಗಳು, ಚಲನಚಿತ್ರ ವಿಮರ್ಶೆ, ಚಲನಚಿತ್ರ ಸಹ ನಿರ್ಮಾಣ ಮತ್ತು ಮಾರುಕಟ್ಟೆ ಸಾಧ್ಯತೆಗಳು, ಲಿಂಗ ಸಂವೇದನೆ, ಚಲನಚಿತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಭಾವದ ಕುರಿತು ಮಾತುಕತೆಗಳು, ವಿಚಾರಸಂಕಿರಣಗಳು, ಕಾರ್ಯಾಗಾರಗಳು, ತಜ್ಞರಿಂದ ಉಪನ್ಯಾಸ, ಸಂವಾದ ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಒಳಗೊಂಡಿವೆ. ಬೇರೆ ದೇಶಗಳ ತೀರ್ಪುಗಾರರು, ವಿದೇಶದಿಂದ ಮತ್ತು ಭಾರತದ ಇತರ ಭಾಗಗಳ ಚಲನಚಿತ್ರ ತಯಾರಕರು, ವಿಮರ್ಶಕರು/ಪತ್ರಕರ್ತರು, ಚಲನಚಿತ್ರೋತ್ಸವ ಪ್ರತಿನಿಧಿಗಳು, ಪ್ರೋಗ್ರಾಮರ್‌ಗಳು, ಸಲಹೆಗಾರರು ಮೊದಲಾದವರು ಅತಿಥಿಗಳಾಗಿ ಬರಲಿದ್ದಾರೆ. ವಿದೇಶದಿಂದ ಸುಮಾರು 20 ಮಂದಿ ಸೇರಿದಂತೆ ಸುಮಾರು 70 ಅತಿಥಿಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಶ್ರೀಲಂಕಾ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇರಾನ್, ಉಜೇಕಿಸ್ತಾನ್, ಜೆಕ್ ರಿಪಬ್ಲಿಕ್, ಯುಕೆ, ಬಲ್ಲೇರಿಯಾ, ತೈವಾನ್, ಸ್ಪೇನ್, ಜರ್ಮನಿ ಮತ್ತು ರಷ್ಯಾವನ್ನು ಪ್ರತಿನಿಧಿಗಳು, ಸ್ಥಳೀಯ ಚಲನಚಿತ್ರ ಮತ್ತು ಸಾಂಸ್ಕೃತಿಕ ಮಂದಿ, ಬೆಂಗಳೂರಿನಲ್ಲಿರುವ ವಿದೇಶಿ ಸಂಸ್ಥೆಗಳ ಪ್ರತಿನಿಧಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿ ಪ್ರದಾನದೊಂದಿಗೆ ಸಮಾರೋಪ ಸಮಾರಂಭವು, ಮಾರ್ಚ್ 7, 2024, ಗುರುವಾರದಂದು ವಿಧಾನಸೌಧದ ಬ್ಯಾಂಕೈಟ್ ಹಾಲ್‌ನಲ್ಲಿ ನಡೆಯಲಿದೆ.

  • ‘ಪುಷ್ಪ 2’ ಶೂಟಿಂಗ್ ಮಧ್ಯ ಬರ್ಲಿನ್ ವಿಮಾನ ಹತ್ತಿದ ಅಲ್ಲು ಅರ್ಜುನ್

    ‘ಪುಷ್ಪ 2’ ಶೂಟಿಂಗ್ ಮಧ್ಯ ಬರ್ಲಿನ್ ವಿಮಾನ ಹತ್ತಿದ ಅಲ್ಲು ಅರ್ಜುನ್

    ಲ್ಲು ಅರ್ಜುನ್ (Allu Arjun) ಸದ್ಯ ಬರ್ಲಿನ್ (Berlin) ವಿಮಾನ ಏರಿದ್ದಾರೆ. ಪುಷ್ಪ 2 ಸಿನಿಮಾದ ಶೂಟಿಂಗ್ ನಡೆಯುತ್ತಿದ್ದರೂ, ಈ ನಡುವೆ ಅವರು ಬರ್ಲಿನ್ ದೇಶಕ್ಕೆ ಹಾರಿದ್ದಾರೆ. ಆಗಸ್ಟ್ 15ಕ್ಕೆ ಪುಷ್ಪ 2 ಸಿನಿಮಾ ರಿಲೀಸ್ ಆಗುತ್ತಿದ್ದರೂ, ಇನ್ನೂ ಶೂಟಿಂಗ್ ಬಾಕಿ ಉಳಿದುಕೊಂಡಿದ್ದರೂ, ಏಕಾಏಕಿ ಅಲ್ಲು ವಿದೇಶಕ್ಕೆ ಹಾರಿದ್ದಕ್ಕೆ ಕಾರಣವಿದೆ.

    ಸದ್ಯ ಬರ್ಲಿನ್ ನಲ್ಲಿ 74ನೇ ಬರ್ಲಿನ್ ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯುತ್ತಿದೆ. ಚಿತ್ರೋತ್ಸವದಲ್ಲಿ (Chirotsava) ಭಾಗಿ ಆಗುವುದಕ್ಕಾಗಿ ಭಾರತದಿಂದ ಕೆಲ ಕಲಾವಿದರು ಪ್ರಯಾಣ ಬೆಳೆಸಿದ್ದಾರೆ. ಅದರಲ್ಲೂ ಅಲ್ಲು ಕೂಡ ಒಬ್ಬರು. ಹೈದಾರಾಬಾದ್ ಏರ್ ಪೋರ್ಟ್ ನಿಂದ ಅಲ್ಲು ಪ್ರಯಾಣ ಶುರು ಮಾಡಿದ್ದಾರೆ.

    ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿ ಆಗುವುದು ಪ್ರತಿಷ್ಠಿತ ಗೌರವ. ಆ ಗೌರವ ಸಿಗೋದು ತೀರಾ ಅಪರೂಪ. ಅದರಲ್ಲೂ ಭಾರತದಿಂದ ಅನೇಕರಿಗೆ ಇಂಥದ್ದೊಂದು ಗೌರವ ಪ್ರಾಪ್ತಿಯಾಗಿದೆ. ಈ ಬಾರಿ ಆ ಪಟ್ಟಿಯಲ್ಲಿ ಅಲ್ಲು ಕೂಡ ಇದ್ದಾರೆ. ಹಾಗಾಗಿ ಅವರು ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ.

    ಪುಷ್ಪ 2 ಸಿನಿಮಾದ ಮತ್ತಷ್ಟು ದೃಶ್ಯಗಳು ಚಿತ್ರೀಕರಣ ಆಗಬೇಕು. ಐಟಂ ಡಾನ್ಸ್ ಕೂಡ ಶೂಟ್ ಆಗಬೇಕಿದೆಯಂತೆ. ಅದಕ್ಕಾಗಿ ನಾನಾ ಕಲಾವಿದರ ಹೆಸರು ಕೂಡ ಕೇಳಿ ಬಂದಿದೆ. ಅಲ್ಲು ವಾಪಸ್ಸಾದ ನಂತರ ಶೂಟಿಂಗ್ ಮುಂದುವರೆಯಲಿದೆ.

  • ಫೆ.29 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ

    ಫೆ.29 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ  ಇಂದು ನಡೆದ ಬೆಂಗಳೂರು (Bangalore) ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿ ಫೆಬ್ರವರಿ 29 ರಿಂದ ಮಾರ್ಚ್ 7 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು  ಏರ್ಪಡಿಸಲು  ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಜರುಗಿದ ಸಂಘಟನಾ ಸಮಿತಿ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.

    ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 15 ನೇ ಆವೃತ್ತಿಯನ್ನು ಫೆಬ್ರವರಿ  29 ರ ಸಂಜೆ ಉದ್ಘಾಟನೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಲಾಗಿದೆ ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ದೇಶವಿದೇಶಗಳಲ್ಲಿ ಮನ್ನಣೆ  ಪಡೆದಿರುವ ಚಿತ್ರೋತ್ಸವವಾಗಿದ್ದು, ವಿದೇಶಿ ಚಿತ್ರಗಳನ್ನು  ಪ್ರದರ್ಶೀಸಲಾಗುವುದಲ್ಲದೆ,  ಕನ್ನಡ ಸೇರಿದಂತೆ  ದೇಶದ ವಿವಿಧ ಭಾಷಾ ಚಿತ್ರಗಳನ್ನು ಪ್ರದರ್ಶಿಸಲಾಗುವುದು.  ಮಾರ್ಚ್ 7 ರಂದು ಸಮಾರೋಪ ಸಮಾರಂಭ ನಡೆಯಲಿದ್ದು  ಅಂದು  ರಾಜ್ಯಪಾಲರು ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.

    ಸಂಘಟನಾ ಸಮಿತಿ ಸಭೆಯ ಜೊತೆಗೆ ಕೋರ್ ಸಮಿತಿಯೂ ರಚನೆಯಾಗಿದ್ದು, ಸಮಾರಂಭ ಯಾವ ರೀತಿ ಏರ್ಪಡಿಸಬೇಕೆಂದು ತೀರ್ಮಾನವಾಗುತ್ತದೆ. ಕೋಮುವಾದದ, ಶಾಂತಿ, ಸಮಾನತೆ, ಲಿಂಗ ಸಮಾನತೆ, ಸೌಹಾರ್ದತೆ, ಮಾನವೀಯತೆಯ ಸಂದೇಶಗಳು ಸಮಾಜಕ್ಕೆ ತಲುಪಬೇಕು. ಬಹುತ್ವಕ್ಕೆ ಹೆಚ್ಚು ಒತ್ತು ಕೊಡುವ ರೀತಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ಒದಗಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಹಿಂದೆ ವಿಧಾನಸೌಧದ ಮುಂಭಾಗದಲ್ಲಿಯೇ ಅಂತರರಾಷ್ಟ್ರಿಯ ಚಲನಚಿತ್ರೋತ್ಸವದ ಉದ್ಘಾಟನೆಯಾಗುತ್ತಿತ್ತು. ದೇಶವಿದೇಶದ ಸಿನಿರಂಗದ ಪ್ರಖ್ಯಾತ ಕಲಾವಿದರನ್ನು ಕರೆಸಲಾಗುತ್ತಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದ್ದು, ಅಂತರರಾಷ್ಟ್ರಿಯ ಚಲನಚಿತ್ರೋತ್ಸವವನ್ನು ಯ ಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.

  • ‘ತಾರಿಣಿ’ಗೆ ಅಯೋಧ್ಯ ಚಿತ್ರೋತ್ಸವ ಪ್ರಶಸ್ತಿ

    ‘ತಾರಿಣಿ’ಗೆ ಅಯೋಧ್ಯ ಚಿತ್ರೋತ್ಸವ ಪ್ರಶಸ್ತಿ

    ಯೋಧ್ಯದಲ್ಲಿ ನಡೆಯುವ ಪ್ರತಿಷ್ಟಿತ ಅಯೋಧ್ಯ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ‘ತಾರಿಣಿ’ (Tarini) ಚಿತ್ರ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಸಾಮಾಜಿಕ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಈಗಾಗಲೇ ಈ ಚಿತ್ರ ಹಲವಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಬಂಡವಾಳವನ್ನೂ ಹೂಡಿದ್ದಾರೆ. ಕಥೆ, ಚಿತ್ರಕಥೆ , ಸಂಭಾಷಣೆ ಬರೆದು ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿದ್ದಾರೆ.

    ಈ ಕಥೆ ಗರ್ಭಿಣಿ ಹೆಂಗಸಿನ ಕಥೆಯಾಧಾರಿತ ಚಿತ್ರವಾಗಿರುವುದರಿಂದ ನಾಯಕಿ ಮಮತಾ ರಾಹುತ್ ಗರ್ಭಿಣಿ ಪಾತ್ರಕ್ಕೆ ನೈಜ ಗರ್ಭಿಣಿಯಾಗೇ ಮನೋಜ್ಞವಾಗಿ ಅಭಿನಯಿಸಿದ್ದಾರೆ.   ಆಗಷ್ಟೇ ಹುಟ್ಟಿದ ಮಮತಾ ರಾಹುತ್ ಮಗುವಿನ ದೃಶ್ಯಗಳೂ ‘ತಾರಿಣಿ’ ಚಿತ್ರದಲ್ಲಿರುವುದು ವಿಶೇಷ ಎಂದು ನಿರ್ದೇಶಕರು ತಿಳಿಸಿದ್ದಾರೆ. ಈಗಾಗಲೇ ಲಂಡನ್ ಇಂಡಿಪೆಂಡೆಂಟ್‌ ಫಿಲ್ಮ್‌ ಅವಾರ್ಡ್ಸ್, ಗ್ಲೋಬಲ್ ತಾಜ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಮೋಕ್ಖೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಇಂಡೋಗ್ಮಾ ಫಿಲ್ಮ್ ಫೆಸ್ಟಿವಲ್, ಮುಂಬೈ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್, ಬಾಲಿವುಡ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಜೊತೆಗೆ ಆಂಧ್ರಪ್ರದೇಶದಲ್ಲಿ ನಡೆಯುವ ವಿಂಧ್ಯಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ರಾಜಸ್ಥಾನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಈ ಚಿತ್ರ ಆಯ್ಕೆಯಾಗಿ ಮುಂದಿನ ವಾರ ಪ್ರದರ್ಶನಕ್ಕೆ ರೆಡಿಯಾಗಿದೆ. ಫ್ರಾನ್ಸ್ ನ ಗೋಲ್ಡ್ ಫ್ಲಾಷ್ ಇಂಟರ್‌ನ್ಯಾಷನಲ್ ಫೆಸ್ಟಿವಲ್ ನಲ್ಲಿ ಅಫಿಷಿಯಲ್ ಸೆಲೆಕ್ಷನ್ ಆಗಿದೆ. ಉಳಿದಂತೆ ಇನ್ನೂ ಹಲವಾರು ಚಿತ್ರೋತ್ಸವಗಳಿಗೆ ತಾರಿಣಿ ಚಿತ್ರವನ್ನು ಕಳುಹಿಸಲಾಗಿದೆ ಎಲ್ಲಾ ಕಡೆಯಲ್ಲೂ ಪ್ರದರ್ಶನಗೊಂಡು ಪ್ರಶಸ್ತಿ ಗೆಲ್ಲುವ ನಂಬಿಕೆ ಇದೆ ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈಗೊಂದು ತಿಂಗಳಿಂದಲೂ ನಮ್ಮ ಕರ್ನಾಟಕದಲ್ಲಿ ‘ಹೆಣ್ಣು ಭ್ರೂಣ ಹತ್ಯೆ’ ಕುರಿತಾದ ವಿಷಯಗಳು ಎಲ್ಲಾಕಡೆ ಪ್ರಚಲಿತವಾಗಿ ಕರುಳ ಬಳ್ಳಿಗೆ ಕೊಳ್ಳಿ ಇಡುವ ಕೆಲಸಗಳು ನಿರಂತರವಾಗಿ ನಡೆದು ಈಗ ಅದು ಬಹಿರಂಗವಾಗಿದ್ದು ಎಲ್ಲರಿಗು ಕೋಪ ಮತ್ತು ಕಣ್ಣೀರು ಬರಿಸುವ ಸುದ್ದಿಯಾಗಿ ಹೊರಹೊಮ್ಮಿತ್ತು. ನಾವು ಇದೇ ವಿಷಯವನ್ನು ಕೇಂದ್ರೀಕರಿಸಿ ಸರ್ಕಾರದ ಮತ್ತು ಸ್ವಸ್ತ ನಾಗರೀಕ ಸಮಾಜದ ಪ್ರತಿನಿಧಿಯಾಗಿ ಭವಿಷ್ಯದ ಹಿತಚಿಂತನೆಯಿಂದ ಈ ಕಥೆಯನ್ನು ಸಿದ್ದಪಡಿಸಿದ್ದೇವೆ,  ಖಂಡಿತ ಇದೊಂದು ಉತ್ತಮ ಚಿತ್ರವಾಗಿ ಎಲ್ಲರ ಗಮನಸೆಳೆದು ಯಶಸ್ವಿಯಾಗುತ್ತದೆ. ಇಂತಹ ವಿಭಿನ್ನ ಪ್ರಯತ್ನಕ್ಕೆ ಕನ್ನಡಿಗರು ಯಾವತ್ತೂ ಕೈಜೋಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ ಚಿತ್ರತಂಡ.

    ನಾಯಕನಾಗಿ ರೋಹಿತ್ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಅಭಿನಯಿಸಿದ್ದಾರೆ. ಮುಖ್ಯಪಾತ್ರದಲ್ಲಿ ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ವಿಜಯಲಕ್ಷ್ಮಿ, ಪ್ರಮಿಳಾ ಸುಬ್ರಹ್ಮಣ್ಯ, ಸನ್ನಿ, ಶೀಬಾ, ದೀಪಿಕಾ  ಗೌಡ, ಕವಿತ ಕಂಬಾರ್, ಮಟಿಲ್ಢಾ ಡಿಸೋಜಾ,ತೇಜಸ್ವಿನಿ, ಅರ್ಚನ ಗಾಯಕ್ವಾಡ್, ಮಂಜು ನಂಜನಗೂಡು, ರಘು ಸಮರ್ಥ್, ಪ್ರಿನ್ಸ್ ಜಿತಿನ್ ಕೋಟ್ಯಾನ್, ಬೇಬಿ ರಿಧಿ, ಬೇಬಿ ನಿಶಿತಾ,ಚೈತ್ರ, ಶ್ವೇತ ಮುಂತಾದವರು ಅಭಿನಯಿಸಿದ್ದಾರೆ.  ಈ ಚಿತ್ರಕ್ಕೆಅನಂತ್ ಆರ್ಯನ್ ಸಂಗೀತ ಸಂಯೋಜಿದರೆ, ದೀಪಕ್ ಸಂಕಲನ, ಕಲೆ  ಬಸವರಾಜ್ ಆಚಾರ್ಯ, ಡಿ.ಐ ಕೆಲಸವನ್ನು ನಿಖಿಲ್ ಕಾರಿಯಪ್ಪ ನಿರ್ವಹಿಸಿದ್ದಾರೆ.

  • ಗೋವಾ ಚಿತ್ರೋತ್ಸವ: ಗಾಲಾ ಪ್ರೀಮಿಯರ್ ನಲ್ಲಿ ‘ಗ್ರೇ ಗೇಮ್ಸ್’ ಪ್ರದರ್ಶನ

    ಗೋವಾ ಚಿತ್ರೋತ್ಸವ: ಗಾಲಾ ಪ್ರೀಮಿಯರ್ ನಲ್ಲಿ ‘ಗ್ರೇ ಗೇಮ್ಸ್’ ಪ್ರದರ್ಶನ

    ವಿಜಯ್‍ ರಾಘವೇಂದ್ರ ಅಭಿನಯದ ‘ಗ್ರೇ ಗೇಮ್ಸ್’ (Gray Games) ಚಿತ್ರವು ಇತ್ತೀಚೆಗಷ್ಟೇ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (Chirotsava) (IFFI) ರೆಡ್ ಕಾರ್ಪೆಟ್‍ ಗಾಲಾ ಪ್ರೀಮಿಯರ್ ವಿಭಾಗದಲ್ಲಿ ಪ್ರದರ್ಶನವಾಗಿದೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಗಂಗಾಧರ್ ಸಾಲಿಮಠ (Gangadhar Salimath) ನಿರ್ದೇಶನದ ಈ ಚಿತ್ರಕ್ಕೆ ನೆರೆದಿದ್ದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ ಒಳ್ಳೆಯ ವಿಮರ್ಶೆಗಳು ಸಿಕ್ಕಿವೆ.

    ಮೆಟಾವರ್ಸ್ ಮತ್ತು ಆನ್‍ಲೈನ್‍ ಗೇಮಿಂಗ್‍ ವೈಷಮ್ಯದ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ‘ಗ್ರೇ ಗೇಮ್ಸ್’ ಚಿತ್ರದಲ್ಲಿ ವಿಜಯ್‍ ರಾಘವೇಂದ್ರ (Vijaya Raghavendra) ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಭಾವನಾ ರಾವ್ ಪೊಲೀಸ್‍ ಅಧಿಕಾರಿಯಾಗಿ ನಟಿಸಿದ್ದಾರೆ. ಶ್ರುತಿ ಪ್ರಕಾಶ್‍ ಈ ಚಿತ್ರದಲ್ಲಿ ಒಬ್ಬ ನಟಿಯಾಗಿ ಅಭಿನಯಿಸಿದ್ದು, ಈ ಚಿತ್ರದ ಮೂಲಕ ವಿಜಯ್‍ ರಾಘವೇಂದ್ರ ಅವರ ಅಕ್ಕನ ಮಗ ಜೈ, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದರ ಜೊತೆಗೆ, ಇಲ್ಲಿ ಒಬ್ಬ ಗೇಮರ್ ಆಗಿ ಕಾಣಿಸಿಕೊಂಡಿದ್ದಾರೆ.

    ಗೋವಾ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನವಾಗಿದ್ದರ ಕುರಿತು ಸಂತೋಷ ವ್ಯಕ್ತಪಡಿಸಿರುವ ನಿರ್ದೇಶಕ ಗಂಗಾಧರ್ ಸಾಲಿಮಠ್‍, ‘ಚಿತ್ರೋತ್ಸವದಲ್ಲಿ ನಮ್ಮ ಚಿತ್ರಕ್ಕೆ ಸಿಕ್ಕ ಪ್ರೋತ್ಸಾಹ ಮತ್ತು ವಿಮರ್ಶೆಗಳಿಂದ ನಿಜಕ್ಕೂ ಹೃದಯ ತುಂಬಿಬಂದಿದೆ.  ಇಂಥದ್ದೊಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಅವಕಾಶ ಸಿಕ್ಕಿದ್ದು ಅತ್ಯಂತ ಗೌರವದ ವಿಷಯ. ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಡ್ರಾಮಾ ಚಿತ್ರವಾಗಿದ್ದು, ವರ್ಚ್ಯುಯಲ್‍ ಮತ್ತು ನೈಜತೆ ನಡುವೆ ಯಾವುದು ಸರಿ, ಯಾವುದು ತಪ್ಪು ಎಂಬ ನಮ್ಮ ದೃಷ್ಟಿಕೋನದ ಕುರಿತು ಸವಾಲು ಎಸೆಯುವಂತಿದೆ’ ಎನ್ನುತ್ತಾರೆ.

    ನಿರ್ಮಾಪಕ ಆನಂದ್‍ ಎಚ್‍. ಮುಗುದ್‍ ಮಾತನಾಡಿ, ‘ನಮ್ಮ ಚಿತ್ರವನ್ನು ನೋಡಿ ಅತ್ಯುತ್ತಮ ವಿಮರ್ಶೆಗಳನ್ನು ನೀಡಿದ ಪ್ರೇಕ್ಷಕರಿಗೆ ಧನ್ಯವಾದಗಳು. ಇದು ನಮ್ಮ ತಂಡದ ಶ್ರದ್ಧೆ ಮತ್ತು ಒಳ್ಳೆಯ ಚಿತ್ರ ನೀಡಬೇಕೆನ್ನುವ ಬದ್ಧತೆಗೆ ಸಿಕ್ಕ ಗೌರವ’ ಎಂದು ಹೇಳುತ್ತಾರೆ. ‘ಗ್ರೇ ಗೇಮ್ಸ್’ ಚಿತ್ರಕ್ಕೆ ಸರೀಶ್‍ ಗ್ರಾಮಪುರೋಹಿತ್‍, ಅರವಿಂದ್‍ ಜೋಷಿ ಮತ್ತು ಡೋಲೇಶ್ವರ್ ರಾಜ್‍ ಸುಂಕು ಸಹನಿರ್ಮಾಪಕರಾಗಿದ್ದು, ಚಿತ್ರವು ಫೆಬ್ರವರಿ 2024ಕ್ಕೆ ಬಿಡುಗಡೆ ಆಗಲಿದೆ.

  • ಗೋವಾ ಚಿತ್ರೋತ್ಸವ: ರೆಡ್ ಕಾರ್ಪೆಟ್ ಗಾಲಾ ಪ್ರೀಮಿಯರ್ ಗೆ  ‘ಗ್ರೇ ಗೇಮ್ಸ್’ ಚಿತ್ರ

    ಗೋವಾ ಚಿತ್ರೋತ್ಸವ: ರೆಡ್ ಕಾರ್ಪೆಟ್ ಗಾಲಾ ಪ್ರೀಮಿಯರ್ ಗೆ ‘ಗ್ರೇ ಗೇಮ್ಸ್’ ಚಿತ್ರ

    ಗೋವಾ (Goa) ಸರ್ಕಾರ, ಎಂಟರ್ ಟೈನ್‍ಮೆಂಟ್‍ ಸೊಸೈಟಿ ಆಫ್‍ ಗೋವಾ ಮತ್ತು ಎನ್‍.ಎಫ್‍.ಡಿ.ಸಿ ಇಂಡಿಯಾ ಜಂಟಿಯಾಗಿ ಗೋವಾದ ಪಣಜಿಯಲ್ಲಿ ಆಯೋಜಿಸಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (Chirotsava) (IFFI) ಕನ್ನಡದ ‘ದಿ ಗ್ರೇ ಗೇಮ್ಸ್’ ಚಿತ್ರ ಆಯ್ಕೆಯಾಗಿದೆ. ವಿಜಯ್‍ ರಾಘವೇಂದ್ರ, ಭಾವನಾ ರಾವ್‍, ಶ್ರುತಿ ಪ್ರಕಾಶ್‍, ಅಪರ್ಣ ವಸ್ತಾರೆ, ಜೈ ಮುಂತಾದವರು ನಟಿಸಿರುವ ಈ ಚಿತ್ರವನ್ನು ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಗಂಗಾಧರ್ ಸಾಲಿಮಠ್‍ ನಿರ್ದೇಶನ ಮಾಡಿದ್ದಾರೆ.

    ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ‘ಗ್ರೇ ಗೇಮ್ಸ್’ (Gray Games) ಚಿತ್ರವು ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸವದ ‘ರೆಡ್‍ ಕಾರ್ಪೆಟ್‍ ಗಾಲ ಪ್ರೀಮಿಯರ್‍’ ವಿಭಾಗದಡಿ ಮೊದಲ ಪ್ರದರ್ಶನ ಕಾಣುತ್ತಿದೆ. ಈ ವಿಭಾಗದಲ್ಲಿ ಭಾರತದ ಹಲವು ಚಿತ್ರಗಳು ಪ್ರೀಮಿಯರ್ ಆಗುತ್ತಿದ್ದು, ಈ ಪೈಕಿ ಕನ್ನಡದ ‘ದಿ ಗ್ರೇ ಗೇಮ್ಸ್’ ಸಹ ಒಂದಾಗಿರುವುದು ವಿಶೇಷ.

    ಮೆಟಾವರ್ಸ್ ಮತ್ತು ಆನ್‍ಲೈನ್‍ ಗೇಮಿಂಗ್‍ ವೈಷಮ್ಯದ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ವಿಜಯ್‍ ರಾಘವೇಂದ್ರ (Vijay Raghavendra) ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಭಾವನಾ ರಾವ್ ಪೊಲೀಸ್‍ ಅಧಿಕಾರಿಯಾಗಿ ನಟಿಸಿದ್ದಾರೆ. ಶ್ರುತಿ ಪ್ರಕಾಶ್‍ ಈ ಚಿತ್ರದಲ್ಲಿ ಒಬ್ಬ ನಟಿಯಾಗಿ ಅಭಿನಯಿಸಿದ್ದು, ಈ ಚಿತ್ರದ ಮೂಲಕ ಜೈ(ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಸಹೋದರಿ ಪುತ್ರ) ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಹಲವು ರೋಚಕ ತಿರುವುಗಳಿರುವ ಈ ಚಿತ್ರ, ಅಷ್ಟೇ ಭಾವನಾತ್ಮಕವಾಗಿ ಮೂಡಿಬಂದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.

    ಗೋವಾ ಚಿತ್ರೋತ್ಸವಕ್ಕೆ ಚಿತ್ರ ಆಯ್ಕೆಯಾಗಿರುವ ಬಗ್ಗೆ ಖುಷಿ ವ್ಯಕ್ತಪಡಿಸುವ ನಿರ್ದೇಶಕ ಗಂಗಾಧರ್ ಸಾಲಿಮಠ್‍ (Gangadhar Salimath), ‘ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಡ್ರಾಮಾ ಚಿತ್ರವಾಗಿದ್ದು, ವರ್ಚ್ಯುಯಲ್‍ ಮತ್ತು ನೈಜತೆ ನಡುವೆ ಯಾವುದು ಸರಿ, ಯಾವುದು ತಪ್ಪು ಎಂಬ ನಮ್ಮ ದೃಷ್ಟಿಕೋನದ ಕುರಿತು ಸವಾಲು ಎಸೆಯುವಂತಿದೆ. ಈ ಚಿತ್ರ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಅವರ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಖಂಡಿತಾ ಇದೆ’ ಎನ್ನುತ್ತಾರೆ.

    ತಮ್ಮ ಚಿತ್ರವನ್ನು ಗುರುತಿಸಿ, ಪ್ರೀಮಿಯರ್ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿರುವ ಚಿತ್ರೋತ್ಸವ ಸಮಿತಿಗೆ ಧನ್ಯವಾದ ಸಲ್ಲಿಸುವ ನಿರ್ಮಾಪಕ ಆನಂದ್ ಎಚ್‍. ಮುಗುದ್‍, ‘ಈ ಆಯ್ಕೆಯು ನಮ್ಮ ತಂಡದ ಶ್ರದ್ಧೆ ಮತ್ತು ಅವಿರತ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದ್ದು, ಅದನ್ನು ಗುರುತಿಸಿ ನಮ್ಮ ತಂಡಕ್ಕೆ ಇಂಥದ್ದೊಂದು ಅವಕಾಶ ಕಲ್ಪಿಸಿಕೊಟ್ಟ ಆಯ್ಕೆ ಸಮಿತಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಒಂದು ಅದ್ಭುತವಾದ ಅನುಭವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ’ ಎಂದು ಹೇಳುತ್ತಾರೆ. ‘ಗ್ರೇ ಗೇಮ್ಸ್’ ಚಿತ್ರಕ್ಕೆ ಸರೀಶ್‍ ಗ್ರಾಮಪುರೋಹಿತ್‍, ಅರವಿಂದ್‍ ಜೋಷಿ ಮತ್ತು ಡೋಲೇಶ್ವರ್ ರಾಜ್‍ ಸುಂಕು ಸಹ ನಿರ್ಮಾಪಕರಾಗಿದ್ದು, ಚಿತ್ರವು ಫೆಬ್ರವರಿ 2024ಕ್ಕೆ ಬಿಡುಗಡೆ ಆಗಲಿದೆ. ಚಿತ್ರಕ್ಕೆ ವರುಣ್‍ ಡಿ.ಕೆ ಅವರ ಛಾಯಾಗ್ರಹಣವಿದೆ.

  • ಅಹಮದಾಬಾದ್ ಚಿತ್ರೋತ್ಸವಕ್ಕೆ ಬರಗೂರು ಸಿನಿಮಾ

    ಅಹಮದಾಬಾದ್ ಚಿತ್ರೋತ್ಸವಕ್ಕೆ ಬರಗೂರು ಸಿನಿಮಾ

    ಹಮದಾಬಾದ್ (Ahmedabad) ಅಂತರರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ (Chirotsava) ಬರಗೂರು ರಾಮಚಂದ್ರಪ್ಪ (Baraguru Ramachandrappa) ನಿರ್ದೇಶನದ ‘ಚಿಣ್ಣರ ಚಂದ್ರ’ (Chinnara Chandra) ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ. ಸ್ಪರ್ಧಾ ವಿಭಾಗದಲ್ಲಿ ಪ್ರವೇಶ ಪಡೆದಿದೆ.

    ಈ ಚಿತ್ರವು ಈಗಾಗಲೇ ಮೆಲ್ಬರ್ನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿ ಸ್ಪರ್ಧೆಯ ಅಂತಿಮ ಹಂತ ತಲುಪಿದೆ. ಚಿಣ್ಣರ ಚಂದ್ರ ಚಿತ್ರವು ಶಿಕ್ಷಣದ ಮಹತ್ವವನ್ನು ಸಾದರ ಪಡಿಸುತ್ತಲೇ ಸಮಾಜದಲ್ಲಿ ಸದಭಿರುಚಿ, ಸೌಹಾರ್ದತೆ ಮತ್ತು ಸಮಾನತೆ ಅಗತ್ಯ ಎಂಬುದನ್ನೂ ಮಕ್ಕಳ ಮೂಲಕ ಅಭಿವ್ಯಕ್ತ ಪಡಿಸುತ್ತದೆ. ಜೊತೆಗೆ ಜನಪದ ಕಥೆಗಳು ಮಕ್ಕಳ ಮನಸ್ಸಿನ ಭಾಗವಾಗುವುದನ್ನು ಚಿತ್ರಿಸುತ್ತದೆ.

    ಬರಗೂರರ ಅಡಗೂಲಜ್ಜಿ ಎಂಬ ಕಾದಂಬರಿಯನ್ನು ಆಧರಿಸಿರುವ ಈ ಚಿತ್ರವನ್ನು ಜಿ.ಎಸ್ ಗೋವಿಂದರಾಜು (ರಾಜಶೇಖರ್) ನಿರ್ಮಿಸಿದ್ದಾರೆ. ತಾರಾಗಣದಲ್ಲಿ ಆಕಾಂಕ್ಷ್ ಬರಗೂರ್, ನಿಕ್ಷೇಪ, ಷಡ್ಜ, ಈಶಾನ್, ಅಭಿನವ್ ನಾಗ್, ಸುಂದರರಾಜ್, ರೇಖಾ, ವತ್ಸಲ ಮೋಹನ್, ರಾಧ ರಾಮಚಂದ್ರ, ರಾಘವ, ರಾಜಪ್ಪ ದಳವಾಯಿ, ಸುಂದರರಾಜ್ ಅರಸು, ವೆಂಕಟರಾಜು, ಹಂಸ ಮುಂತಾದವರಿದ್ದಾರೆ.

    ಸಂಕಲನಕಾರರಾಗಿ ಸುರೇಶ್ ಅರಸು, ಛಾಯಾಗ್ರಾಹಕರಾಗಿ ನಾಗರಾಜ್ ಆದವಾನಿ, ಸಂಗೀತ ನಿರ್ದೇಶಕರಾಗಿ ಶಮಿತ ಮಲ್ನಾಡ್ ಕೆಲಸ ಮಾಡಿದ್ದಾರೆ. ಸಹ ನಿರ್ದೇಶಕರು ನಟರಾಜ್ ಶಿವ ಮತ್ತು ಪ್ರವೀಣ್. ಚಿಣ್ಣರ ಚಂದ್ರ ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಲ್ಲದೇ ಶಾಲಾ ಮಕ್ಕಳಿಗೆ ರಾಜ್ಯದಾದ್ಯಂತ ಪ್ರದರ್ಶಿಸುವ ಉದ್ದೇಶ ಹೊಂದಲಾಗಿದೆ.