Tag: chips

  • ಚಹಾದೊಂದಿಗೆ ಆನಂದಿಸಿ ಹಾಗಲಕಾಯಿ ಫ್ರೈ

    ಚಹಾದೊಂದಿಗೆ ಆನಂದಿಸಿ ಹಾಗಲಕಾಯಿ ಫ್ರೈ

    ಹಿಯಾದ ಹಾಗಲಕಾಯಿಯ ಅಡುಗೆಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಅತ್ಯಂತ ಆರೋಗ್ಯಕರ ತರಕಾರಿ ಪಟ್ಟಿಯಲ್ಲಿ ಇದು ಸೇರುತ್ತದೆ. ಮನೆಯ ಎಲ್ಲಾ ಸದಸ್ಯರಿಗೂ ಹಾಗಲಕಾಯಿಯ ಅಡುಗೆಯನ್ನು ಮಾಡಿ ಬಡಿಸುವುದು ಗೃಹಿಣಿಯರಿಗೆ ಒಂದು ಸವಾಲಾಗಿಯೇ ಉಳಿದಿದೆ. ಆದರೆ ಇಂದು ನಾವು ತೋರಿಸುತ್ತಿರುವ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿದರೆ, ಎಂತಹ ಹಾಗಲಕಾಯಿ ದ್ವೇಷಿಗಳೂ ಅದನ್ನು ಇಷ್ಟಪಡುತ್ತಾರೆ.

    ಬೇಕಾಗುವ ಪದಾರ್ಥಗಳು:
    * ಹಾಗಲಕಾಯಿ – 2
    * ಕಾರ್ನ್ ಫ್ಲೋರ್ – 1 ಟೀಸ್ಪೂನ್
    * ಕಡಲೆ ಹಿಟ್ಟು – 1
    * ಅರಿಶಿನ – ಅರ್ಧ ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ಅಕ್ಕಿ ಹಿಟ್ಟು – 1 ಟೀಸ್ಪೂನ್
    * ಆಮ್ಚೂರ್ ಪುಡಿ – 1 ಟೀಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು

    ಮಾಡುವ ವಿಧಾನ:

    * ಮೊದಲಿಗೆ ಹಾಗಲಕಾಯಿಯನ್ನು ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ.
    * ಕತ್ತರಿಸಿದ ಹಾಗಲಕಾಯಿಗೆ ಕಾರ್ನ್ ಫ್ಲೋರ್, ಕಡಲೆ ಹಿಟ್ಟು, ಅಕ್ಕಿಹಿಟ್ಟು, ಅರಿಶಿನ, ಮೆಣಸಿನ ಪುಡಿ, ಆಮ್ಚೂರ್ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ.
    * ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಸ್ವಲ್ಪ ಸ್ವಲ್ಪವೇ ಹಾಗಲಕಾಯಿ ಮಿಶ್ರಣವನ್ನು ಎಣ್ಣೆಗೆ ಹಾಕಿ ಕರಿಯಿರಿ.
    * ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿ.

    – ಗರಿಗರಿಯಾದ ಹಾಗಲಕಾಯಿ ಫ್ರೈ ತಯಾರಾಗಿದ್ದು, ಇದನ್ನು ಟೀ ಟೈಮ್ ಅಥವಾ ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಬಹುದು.

    Live Tv

  • ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ 28 ಬಾರಿ ಚಿನ್ನ ಗೆದ್ದ ಪ್ಯಾರಾಶೂಟರ್..!

    ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ 28 ಬಾರಿ ಚಿನ್ನ ಗೆದ್ದ ಪ್ಯಾರಾಶೂಟರ್..!

    ಡೆಹ್ರಾಡೂನ್: ಭಾರತ ಪರ 28 ಬಾರಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ದೇಶದ ಮೊದಲ ಪ್ಯಾರಾಶೂಟರ್ ದಿಲ್ರಾಜ್ ಕೌರ್ ಇದೀಗ ತನ್ನ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಬಿಸ್ಕತ್, ಚಿಪ್ಸ್ ಮಾರಾಟ ಮಾಡುವಂತಹ ಪರಿಸ್ಥಿತಿ ಬಂದಿದೆ.

    ದಿಲ್ರಾಚ್ ಕೌರ್ 2005ರಲ್ಲಿ ಪ್ರಾರಂಭಿಸಿದ ತನ್ನ ಕ್ರೀಡಾ ಜೀವನದಲ್ಲಿ 15 ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿ ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ್ದರು. ಬಳಿಕ ಇದೀಗ ಜೀವನ ನಿರ್ವಹಣೆಗಾಗಿ ಉತ್ತರಾಖಂಡದ ಡೆಹ್ರಾಡೂನ್, ಗಾಂಧಿ ಪಾರ್ಕ್ ಬಳಿ ಬಿಸ್ಕತ್ ಮತ್ತು ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ದಿಲ್ರಾಜ್ ಕೌರ್, ನಾನು ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ಯಾರಾಶೂಟರ್ ಆಗಿ ದೇಶಕ್ಕಾಗಿ ಈವರೆಗೆ 28 ಚಿನ್ನದ ಪದಕ, 8 ಬೆಳ್ಳಿ ಪದಕ, ಮತ್ತು 3 ಕಂಚಿನ ಪದಕ ಪಡೆದಿದ್ದೇನೆ. ಆದರೂ ನನಗೆ ಇದೀಗ ಜೀವನ ನಿರ್ವಹಣೆಗೆ ಕಷ್ಟಪಡುವಂತಹ ಪರಿಸ್ಥಿತಿ ಇದೆ. ಹಾಗಾಗಿ ಇಲ್ಲಿ ಬಿಸ್ಕತ್ ಚಿಪ್ಸ್ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

    https://twitter.com/shubham_jain999/status/1407302791429705728

    ಈ ಬಗ್ಗೆ ರಾಜ್ಯದ ಪ್ಯಾರಾಶೂಟಿಂಗ್ ಕ್ರೀಡಾ ಇಲಾಖೆಯೊಂದಿಗೆ ತಿಳಿಸಿದಾಗ ನನಗೆ ಯಾವುದೇ ನೆರವು ಸಿಕ್ಕಿಲ್ಲ. ನಾನು ನನ್ನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ನನಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಮನವಿ ಮಾಡಿಕೊಂಡಿದ್ದೆ ಈವರೆಗೆ ಯಾವುದೇ ಕೆಲಸ ಸಿಕ್ಕಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಪೋಷಕರೇ.. ಮಕ್ಕಳಿಗೆ ಚಿಪ್ಸ್ ಕೊಡಿಸುವ ಮುನ್ನ ಹುಷಾರ್!

    ಪೋಷಕರೇ.. ಮಕ್ಕಳಿಗೆ ಚಿಪ್ಸ್ ಕೊಡಿಸುವ ಮುನ್ನ ಹುಷಾರ್!

    ರಾಯಚೂರು: ಪೋಷಕರೇ ನಿಮ್ಮ ಮಕ್ಕಳಿಗೆ ಬೇಕರಿ ತಿನಿಸುಗಳನ್ನು ಕೊಡುವ ಮೊದಲು ಹುಷಾರಾಗಿರಿ. ಯಾಕಂದ್ರೆ ತಂದೆಯೊಬ್ಬರು ತನ್ನ ಮಗಳಿಗೆ ಚಿಪ್ಸ್ ಕೊಡಿಸಿದಾಗ ಆ ಪ್ಯಾಕೆಟ್‍ನಲ್ಲಿ ಹುಳ ಕಂಡುಬಂದ ಘಟನೆ ರಾಯಚೂರಿನಲ್ಲಿ ನಡೆದಿದೆ.

    ಜಿಲ್ಲೆಯ ಯದ್ಲಾಪುರ ಗ್ರಾಮದಲ್ಲಿ ಮಗಳಿಗೆ ಕೊಡಿಸಿದ ಯುರೋ ಕಂಪೆನಿ ಚಿಪ್ಸ್ ಪ್ಯಾಕೆಟ್ ನಲ್ಲಿ ಹುಳ ಕಂಡು ಪೋಷಕರು ದಂಗಾಗಿದ್ದಾರೆ. ಮಗಳು ಶಾಲೆಗೆ ಹೋಗಲು ಅಳುತ್ತಿದ್ದಾಳೆ ಅಂತ ರಮಿಸಲು ಕೊಡಿಸಿದ ಚಿಪ್ಸ್ ನಲ್ಲಿ ಹುಳ ಕಂಡುಬಂದಿದೆ.

    ಎಕ್ಸ್ ಪೈರಿ ಡೇಟ್‍ಗಿಂತ ಮೊದಲೇ ಪ್ಯಾಕೆಟ್ ನಲ್ಲಿ ಚಿಪ್ಸ್ ಹಾಳಾಗಿದೆ. ಆತಂಕಗೊಂಡ ಪಾಲಕರು ಮುಂಜಾಗೃತವಾಗಿ ಚಿಪ್ಸ್ ತಿಂದ ಮಗುವನ್ನು ವೈದ್ಯರಿಗೆ ತೋರಿಸಿದ್ದಾರೆ.

  • ಇಲಿ ವಿಷ ಹಾಕಿದ ಚಿಪ್ಸ್ ಕೊಟ್ಟು 4 ವರ್ಷದ ಮಗು ಸಾಯಿಸಿದ್ಳು ಆಶಾ ಕಾರ್ಯಕರ್ತೆ!

    ಇಲಿ ವಿಷ ಹಾಕಿದ ಚಿಪ್ಸ್ ಕೊಟ್ಟು 4 ವರ್ಷದ ಮಗು ಸಾಯಿಸಿದ್ಳು ಆಶಾ ಕಾರ್ಯಕರ್ತೆ!

    ಓಂಗೋಲ್: ಆಶಾ ಕಾರ್ಯಕರ್ತೆಯೊಬ್ಬಳು ವಿಷಪೂರಿತ ಚಿಪ್ಸ್ ನೀಡಿ 4 ವರ್ಷದ ಬಾಲಕನ್ನು ಸಾಯಿಸಿದ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಚೀಮಕುರ್ತಿಯಲ್ಲಿ ನಡೆದಿದೆ.

    4 ವರ್ಷದ ಧನಂಜಯ್ ಮೃತಪಟ್ಟ ಮಗು. ಪೋಷಕರು ಕೆಲಸಕ್ಕೆ ಹೋಗಿದ್ದಾಗ ಆಟವಾಡಲೆಂದು ಧನಂಜಯ್ ಆಶಾ ಕೇಂದ್ರಕ್ಕೆ ಹೋಗಿದ್ದ. ಆದರೆ ಅಲ್ಲಿದ್ದ ಆಶಾ ಕಾರ್ಯಕರ್ತೆ ಜ್ಯೋತಿ ಇಲಿಗಳನ್ನು ಸಾಯಿಸಲೆಂದು ತಂದಿದ್ದ ಇಲಿವಿಷ ಸೇರಿಸಿ ಚಿಪ್ಸ್ ನೀಡಿದ್ದಾಳೆ. ಧನಂಜಯ್ ವಿಷದ ವಾಸನೆ ಬರುತ್ತಿದೆ ಎಂದು ಹೇಳಿದರೂ ಜ್ಯೋತಿ ಒತ್ತಾಯಪೂರ್ವಕವಾಗಿ ಚಿಪ್ಸ್ ತಿನ್ನಿಸಿದ್ದಾಳೆ ಎಂದು ಕೇಂದ್ರದಲ್ಲಿದ್ದ ಮಕ್ಕಳು ಹೇಳಿದ್ದಾರೆ.

     

    ನಾವು ಕೂಡಾ ಚಿಪ್ಸ್ ಬೇಕು ಎಂದು ಕೇಳಿದ್ದೆವು. ಆದರೆ ಜ್ಯೋತಿ ಮ್ಯಾಡಂ ನಮಗೆ ಚಿಪ್ಸ್ ನೀಡಲು ನಿರಾಕರಿಸಿದರು. ಇದನ್ನು ನೀವು ತಿನ್ನುವಂತಿಲ್ಲ ಎಂದು ಹೇಳಿದ್ದರು ಎಂದು ಮಕ್ಕಳು ಹೇಳಿದ್ದಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಹೇಳಿದ್ದಾರೆ.

    ಧನಂಜಯ್ ಸೋದರ ತರುಣ್ ಕೂಡಾ ಕಳೆದ ವರ್ಷ ಇದೇ ರೀತಿ ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ತರುಣ್ ಸಾವಿನಲ್ಲಿ ಜ್ಯೋತಿ ಕೈವಾಡವಿತ್ತಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.