Tag: CHINTHAN jerome

  • ಕೊರೊನಾ ಲಸಿಕೆ ಪಡೆದ ಅಧಿಕಾರಿ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

    ಕೊರೊನಾ ಲಸಿಕೆ ಪಡೆದ ಅಧಿಕಾರಿ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

    ತಿರುವನಂತಪುರಂ: 32 ವರ್ಷದ ರಾಜ್ಯ ಯುವ ಆಯೋಗದ ಅಧ್ಯಕ್ಷೆ ಚಿಂತಾ ಜೆರೋಮ್ ಅವರು ಲಸಿಕೆ ಪಡೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೇರಳದಲ್ಲಿ ಲಸಿಕೆ ಕೊರತೆಯಿಂದಾಗಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲು ರಾಜ್ಯ ಮುಂದಾಗಿಲ್ಲ. ಆದರೆ 32 ವರ್ಷದ ಚಿಂತಾ ಜೆರೂಮ್ ಮಾತ್ರ ಹಿಂಬಾಗಿಲಿನಿಂದ ಲಸಿಕೆ ಪಡೆದ ಫಲಾನುಭವಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    A post shared by Chintha Jerome (@chintha_jerome)

    ಈ ಸಂಬಂಧ ಕೊಲ್ಲಂನ ವಕೀಲ ಬೋರಿಸ್ ಪೌಲ್, ಜೆರೂಮ್ ವಿರುದ್ಧ ಸಿಎಂಗೆ ದೂರು ನೀಡಿದ್ದು, ಚಿಂತಾ ಲಸಿಕೆ ಪಡೆಯುತ್ತಿರುವ ಫೋಟೋಗಳನ್ನು ಲಕೋಟೆಯಲ್ಲಿ ಕಳುಹಿಸಿದ್ದಾರೆ. ಈ ದೂರು ಸಂಬಂಧ ಮುಖ್ಯಮಂತ್ರಿ ಕಚೇರಿ ಪೌಲ್ ಪತ್ರಕ್ಕೆ ಪ್ರತಿಕ್ರಿಯೆಸಿದ್ದು ಸೂಕ್ತ ಕ್ರಮಕೈಗೊಳ್ಳಲು ದೂರನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ.