Tag: Chintamani Police

  • ಜಗಳವಾಡಿಕೊಂಡು ತವರು ಮನೆ ಸೇರಿದ್ದ ಹೆಂಡತಿ – ಅತ್ತೆಯನ್ನೇ ಕೊಂದು ಅಳಿಯ ಎಸ್ಕೇಪ್‌

    ಜಗಳವಾಡಿಕೊಂಡು ತವರು ಮನೆ ಸೇರಿದ್ದ ಹೆಂಡತಿ – ಅತ್ತೆಯನ್ನೇ ಕೊಂದು ಅಳಿಯ ಎಸ್ಕೇಪ್‌

    ಚಿಕ್ಕಬಳ್ಳಾಪುರ: ಗಂಡನೊಂದಿಗೆ ಜಗಳವಾಡಿಕೊಂಡು ಹೆಂಡತಿ ತವರು ಮನೆ ಸೇರಿದ್ದಕ್ಕೆ ಆಕ್ರೋಶಗೊಂಡ ಪತಿ, ಹೆಂಡತಿಯನ್ನ ಕರೆತರಲು ತವರು ಮನೆಗೆ ಬಂದಿದ್ದಾನೆ. ಈ ವೇಳೆ ನಡೆದ ಜಗಳದಲ್ಲಿ ಅಳಿಯ ಅತ್ತೆ ಹಾಗೂ ಮಾವನ ಮೇಲೆ ಮಚ್ಚಿನಿಂದ ಆಟ್ಯಾಕ್ ಮಾಡಿದ್ದಾನೆ. ಘಟನೆಯಲ್ಲಿ ಅತ್ತೆ ಸಾವನ್ನಪ್ಪಿದ್ದು ಮಾವ ಆಸ್ಪತ್ರೆಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಿಂಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಅಂದಹಾಗೆ 43 ವರ್ಷದ ಕವಿತಮ್ಮ ಮೃತ ಹೆಂಗಸು ಹಾಗೂ ಆರೋಪಿಯ ಅತ್ತೆ. 25 ವರ್ಷದ ಚಂದ್ರು ಕೊಲೆ ಮಾಡಿರುವ ಅಳಿಯ. ಇನ್ನೂ ಘಟನೆಯಲ್ಲಿ ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡಿರುವ ಮಾವ ಈಶ್ವರಪ್ಪ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ (Chintamani Hospital) ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಅವ್ರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಪ್ರದೀಪ್ ಈಶ್ವರ್

    ಆಸಲಿಗೆ ಈಶ್ವರಪ್ಪ ತನ್ನ ಸಹೋದರಿ ಯಶೋಧಮ್ಮ ಪುತ್ರ ಚಂದ್ರುವಿಗೆ ತನ್ನ ಮಗಳು ಮಮತಾಳನ್ನ ಕೊಟ್ಟು ಮದುವೆ ಮಾಡಿಸಿದ್ದರು. ಆದ್ರೆ ಇಬ್ಬರ ನಡುವೆ ಆಸ್ತಿ ವಿವಾದ ಇದ್ದರಿಂದ ಮಮತಾಳಿಗೆ ಗಂಡ ಚಂದ್ರು ಹಾಗೂ ಆಕೆಯ ಆತ್ತೆ ಯಶೋಧಮ್ಮ ಕಿರುಕುಳ ಕೊಡುತ್ತಿದ್ದರಂತೆ. ಇದರಿಂದ ಮನನೊಂದ ಮಮತಾ 10 ದಿನಗಳ ಹಿಂದೆ ತವರು ಮನೆಗೆ ವಾಪಸ್ಸಾಗಿದ್ದಳು. ಇದನ್ನೂ ಓದಿ: ಗಾಂಧಿ ಜಯಂತಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಗಾಂಧಿ ಭವನ ಲೋಕಾರ್ಪಣೆಗೆ ಸಕಲ ಸಿದ್ಧತೆ

    ಮಂಗಳವಾರವಷ್ಟೇ (ಅ.8) ಮಮತಾಳನ್ನ ಕರೆದುಕೊಂಡು ಹೋಗಲು ಚಂದ್ರು ಆಕೆಯ ತವರು ಮನೆಗೆ ಬಂದಿದ್ದಾರೆ. ಈ ವೇಳೆ ತನ್ನ ಹೆಂಡತಿಯನ್ನು ಜೊತೆಗೆ ಕಳುಹಿಸಿಕೊಡುವಂತೆ ಅತ್ತೆ ಮಾವನನ್ನ ಕೇಳಿದ್ದಾನೆ. ಜೊತೆಗೆ ಆಸ್ತಿಯನ್ನು ಭಾಗ ಕೊಡುವಂತೆಯೂ ಕೇಳಿದ್ದನಂತೆ. ಈ ವೇಳೆ ಮಾತಿಗೆ ಮಾತು ಬೆಳೆದು ಅಳಿಯ ಚಂದ್ರು ಮಚ್ಚಿನಿಂದ ಅತ್ತೆ-ಮಾವನ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭಿರವಾಗಿ ಗಾಯಗೊಂಡಿದ್ದ ಅತ್ತೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಅತ್ತೆಯ ಮೇಲೆ ಹಲ್ಲೆ ತಡೆಯಲು ಹೋದ ಮಾವ ಈಶ್ವರಪ್ಪ ತಲೆಗೂ ಗಂಭೀರವಾದ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಘಟನೆ ನಂತರ ಆರೋಪಿ ಅಳಿಯ ಚಂದ್ರು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಮೃತ ಯಶೋಧಮ್ಮ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಇಂಡಿಗೋ ಏರ್‌ಲೈನ್ಸ್‌ನಲ್ಲಿ ಸರ್ವರ್‌ ಸಮಸ್ಯೆ; ಚೆಕ್-ಇನ್‌, ಫ್ಲೈಟ್ ಕಾರ್ಯಾಚರಣೆಯಲ್ಲಿ ತೊಂದರೆ 

  • ಕಳ್ಳರ ಗ್ಯಾಂಗ್ ಅರೆಸ್ಟ್ – 21 ಲಕ್ಷ ಮೌಲ್ಯದ ಶ್ರೀಗಂಧ ವಶ

    ಕಳ್ಳರ ಗ್ಯಾಂಗ್ ಅರೆಸ್ಟ್ – 21 ಲಕ್ಷ ಮೌಲ್ಯದ ಶ್ರೀಗಂಧ ವಶ

    ಚಿಕ್ಕಬಳ್ಳಾಪುರ: ಶ್ರೀಗಂಧ ಬೆಳೆಗಾರರಿಗೆ ಕಂಟಕವಾಗಿದ್ದ ಕಳ್ಳರ ಗುಂಪಿನ ಸದಸ್ಯರನ್ನು ಚಿಂತಾಮಣಿ ಪೊಲೀಸರು ಬಂಧಿಸಿದ್ದು, ಕಳ್ಳರ ಬಳಿಯಿದ್ದ 21 ಲಕ್ಷ ಮೌಲ್ಯದ ಶ್ರೀಗಂಧವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಲಾಭದಾಯಕ ಶ್ರೀಗಂಧದ ಮರಗಳನ್ನು ಬೆಳೆಸಿ ನಾಲ್ಕು ಕಾಸು ನೋಡೋಣ ಎಂದು ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯ ರೈತರು, ಹಗಲು ರಾತ್ರಿ ಕಷ್ಟಪಟ್ಟು ಶ್ರೀಗಂಧದ ಮರಗಳನ್ನು ಬೆಳೆಸುತ್ತಾರೆ. ಆದರೆ ರಾತ್ರೋರಾತ್ರಿ ಶ್ರೀಗಂಧದ ತೋಟಕ್ಕೆ ನುಗ್ಗುತ್ತಿದ್ದ ಕಳ್ಳರ ಗ್ಯಾಂಗ್, ರೈತರು ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗ್ತಿದ್ರು. ಆದ್ರೆ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪೊಲೀಸರು ಕಳ್ಳರ ಹಿಂದೆ ಬಿದ್ದು, 7 ಜನರ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಸಕಲ ಸೌಲಭ್ಯಗಳಿರುವ ನವಬೆಂಗಳೂರು ನಿರ್ಮಾಣಕ್ಕೆ ನೀಲನಕ್ಷೆ: ಸಿಎಂ

    ದಬರಾಗನಹಳ್ಳಿಯ ನರಸಿಂಹಮೂರ್ತಿ, ಮುನಿಯಪ್ಪ, ಮುನಿರಾಜು, ಪ್ರಸನ್ನ, ಪ್ರದೀಪ್, ಕೃಷ್ಣಮೂರ್ತಿ ಹಾಗೂ ಕಟ್ಟಿಗೇನಹಳ್ಳಿಯ ಮಹಮದ್ ಇಸ್ಮಾಯಿಲ್ ಬಂಧಿತರು. ಕಳೆದ ಡಿಸೆಂಬರ್ 22 ರಂದು ಚಿಂತಾಮಣಿ ತಾಲೂಕು ಚೌಡದೇನಹಳ್ಳಿಯ ರೈತ ರಮೇಶ್ ಅವರ ಶ್ರೀಗಂಧದ ತೋಟಕ್ಕೆ ಖದೀಮರು ನುಗ್ಗಿದ್ದು, ಶ್ರೀಗಂಧದ ಮರಗಳನ್ನ ಕಟಾವು ಮಾಡಿಕೊಂಡು ಹೋಗಿದ್ರು.

    ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ರಮೇಶ್ ದೂರು ನೀಡಿದ್ದರು. ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ 03 ಜನವರಿ 2022 ರಂದು ಮಾಡಿಕೆರೆ ಕ್ರಾಸ್ ಬಳಿ ಅನುಮಾನಸ್ಪದವಾಗಿ, ಪೊಲೀಸರನ್ನು ಕಂಡು ಚಕ್ಕೆಗಳನ್ನ ಬಿಸಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಸಲಿ ಸತ್ಯ ಬಯಲಾಗಿದೆ.

    ಬಂಧಿತ ಪೊಲೀಸರ ಬಳಿ ಶ್ರೀಗಂಧ ಕಳ್ಳತನದ ಬಗ್ಗೆ ಬಾಯಿ ಬಿಟ್ಟಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗಿ ಕಳ್ಳರ ಹೆಸರನ್ನು ಹೇಳಿದ್ದಾನೆ. ಚಿಂತಾಮಣಿ ಹಾಗೂ ಶ್ರೀನಿವಾಸಪುರ ತಾಲೂಕುಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ 9 ಪ್ರಕರಣಗಳಲ್ಲಿ ಶ್ರೀಗಂಧ ಕದ್ದಿದ್ದ ಖತರ್ನಾಕ್ ಕಳ್ಳರು, ಪೊಲೀಸರು ಹಾಗೂ ರೈತರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗ್ತಿದ್ರು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಸ್ಫೋಟ – 4,246 ಪಾಸಿಟಿವ್, ಇಬ್ಬರು ಬಲಿ 

    ಆದರೆ ಈಗ ಪೊಲೀಸರು ಅತ್ಯಾಧುನಿಕ ಮೊಬೈಲ್ ತಂತ್ರಜ್ಞಾನ ಬಳಸಿ, 7 ಜನ ಶ್ರೀಗಂಧ ಕಳ್ಳರನ್ನು ಬಂಧಿಸಿದ್ದಾರೆ. ಅದು ಅಲ್ಲದೇ ಅವರಿಂದ ಒಟ್ಟು 70 ಕೆ.ಜಿ ಇನ್ನೂರು ಗ್ರಾಂ ತೂಕದ 21 ಲಕ್ಷದ 6 ಸಾವಿರ ರೂಪಾಯಿ ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.