Tag: Chinnaswamy Stampede

  • ಚಿನ್ನಸ್ವಾಮಿ ಕಾಲ್ತುಳಿತ ದುರಂತ – ಬೆಂಗಳೂರಿನಿಂದ ಪಂದ್ಯಗಳು ಸ್ಥಳಾಂತರ

    ಚಿನ್ನಸ್ವಾಮಿ ಕಾಲ್ತುಳಿತ ದುರಂತ – ಬೆಂಗಳೂರಿನಿಂದ ಪಂದ್ಯಗಳು ಸ್ಥಳಾಂತರ

    ಬೆಂಗಳೂರು: ಜೂನ್ 4ರಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತ (Chinnaswamy Stampede) ದುರಂತದ ಪರಿಣಾಮ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನ ಬಿಸಿಸಿಐ (BCCI) ಬೇರೆಡೆ ಸ್ಥಳಾಂತರ ಮಾಡಿದೆ. ದುರಂತದ ಬಳಿಕ ಬಿಸಿಸಿಐ ಪಂದ್ಯಗಳ ಸ್ಥಳಾಂತರಕ್ಕೆ ಮುಂದಾಗಿದೆ.

    ನವೆಂಬರ್ 13 ರಿಂದ 19ರವರೆಗೆ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಭಾರತ ಎ ಮತ್ತು ಸೌಥ್ ಆಫ್ರಿಕಾ ಎ ನಡುವಣ ಪಂದ್ಯಗಳ ಆಯೋಜನೆ ಮಾಡಲಾಗಿತ್ತು. ಆದರೆ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ದುರಂತ ಬಳಿಕ ಬಿಸಿಸಿಐ ಬೆಂಗಳೂರಿನಿಂದ ರಾಜ್ ಕೋಟ್‌ಗೆ ಪಂದ್ಯಗಳನ್ನು ಸ್ಥಳಾಂತರ ಮಾಡಿದೆ. ಇದನ್ನೂ ಓದಿ:  Assam | 45 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ನಾಲ್ವರು ಅರೆಸ್ಟ್

    ನವೆಂಬರ್‌ನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಬೇಕಿತ್ತು. ಆದರೆ ಈಗ ಬೆಂಗಳೂರಿನಿಂದ ರಾಜ್ ಕೋಟ್‌ಗೆ ಪಂದ್ಯಗಳು ಸ್ಥಳಾಂತರ ಆಗಿದ್ದು, ಈ ಬಗ್ಗೆ ನಿರ್ದಿಷ್ಟ ಕಾರಣ ನೀಡದ ಬಿಸಿಸಿಐ, ಪಂದ್ಯ ಸ್ಥಳಾಂತರ ಬಗ್ಗೆಯಷ್ಟೇ ಮಾಹಿತಿ ನೀಡಿದೆ. ಇದನ್ನೂ ಓದಿ: ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – ಪಾರಾಗಲು ಮಹಡಿಯಿಂದ ಹಾರಿದ ಜನ

  • ಸಿದ್ದರಾಮಯ್ಯ ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕಿಡಿ

    ಸಿದ್ದರಾಮಯ್ಯ ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕಿಡಿ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಕಾರ್ಯಕ್ರಮಕ್ಕೂ, ಕಾಲ್ತುಳಿತಕ್ಕೂ (Stampede) ನಮಗೂ ಸಂಬಂಧವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಕಿಡಿಕಾರಿರುವ ಅವರು, ಸಿಎಂ ಹೇಳಿಕೆ ಖಂಡಿಸಿದ್ದಾರೆ.

    ಎಕ್ಸ್‌ನಲ್ಲಿ ಏನಿದೆ?
    ಆರ್‌ಸಿಬಿಯ (RCB) ಗೆಲುವಿಗಾಗಿ ಎರಡು ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿತ್ತು. ಒಂದು ವಿಐಪಿಗಳಿಗಾಗಿ ವಿಧಾನಸೌಧದಲ್ಲಿ, ಇನ್ನೊಂದು ಜನಸಾಮಾನ್ಯರಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ. ಇದನ್ನೂ ಓದಿ: ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

    11 ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದಾಗ, ಸಚಿವರ ಕುಟುಂಬಗಳು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು. ಆದರೂ ಕೂಡ ಮುಖ್ಯಮಂತ್ರಿಗಳ ಪ್ರತಿಕ್ರಿಯೆ? ಅದು ನಮ್ಮ ಕಾರ್ಯಕ್ರಮವಾಗಿರಲಿಲ್ಲ. ಕ್ರೀಡಾಂಗಣವು ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿದೆ. ಅದು ಪಾಕಿಸ್ತಾನವಲ್ಲ. ಇದು ನಿಮ್ಮ ರಾಜ್ಯ, ನಿಮ್ಮ ನಗರ, ನಿಮ್ಮ ಜನರು. ನೀವು ರಾಜ್ಯವನ್ನು ಮುನ್ನಡೆಸಲು ಆಯ್ಕೆಯಾದವರು, ಕಾರ್ಯಕ್ರಮದಲ್ಲಿ ಅತಿಥಿಯಂತೆ ವರ್ತಿಸುವುದನ್ನು ಮೊದಲು ನಿಲ್ಲಿಸಿ. ಇದನ್ನೂ ಓದಿ: ಕಾಲ್ತುಳಿತ ಕೇಸ್ – ಹೈಕಮಾಂಡ್ ಬುಲಾವ್, ದೆಹಲಿಗೆ ತೆರಳಿದ ಸಿಎಂ, ಡಿಸಿಎಂ

    ಫೋಟೋ-ಶೋಗಳಿಗಾಗಿ ನಿಮ್ಮನ್ನು ನೇಮಿಸಲಾಗಿಲ್ಲ. ಜನರ ಜೀವಗಳನ್ನು ರಕ್ಷಿಸಲು ನಿಮ್ಮನ್ನು ನೇಮಿಸಲಾಗಿದೆ. ಆದರೆ ನೀವು ಮಾತ್ರ ಜನರ ಜೀವಗಳನ್ನು ರಕ್ಷಿಸಲು ವಿಫಲರಾಗಿದ್ದಿರಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿ ದುರಂತ – 6 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

  • ಕಾಲ್ತುಳಿತ ಕೇಸ್ – ಹೈಕಮಾಂಡ್ ಬುಲಾವ್, ದೆಹಲಿಗೆ ತೆರಳಿದ ಸಿಎಂ, ಡಿಸಿಎಂ

    ಕಾಲ್ತುಳಿತ ಕೇಸ್ – ಹೈಕಮಾಂಡ್ ಬುಲಾವ್, ದೆಹಲಿಗೆ ತೆರಳಿದ ಸಿಎಂ, ಡಿಸಿಎಂ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣ ಸಂಬಂಧ ಹೈಕಮಾಂಡ್ ಬುಲಾವ್ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (Sisddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ತೆರಳಿದ್ದಾರೆ.

    ಹೈಕಮಾಂಡ್ ಬುಲಾವ್ ಹಿನ್ನೆಲೆ ಡಿಕೆಶಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತಮ್ಮ ನಿವಾಸದಿಂದ ತೆರಳಿದ್ದಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಕೂಡ ಕಾವೇರಿ ನಿವಾಸದಿಂದ ದೆಹಲಿ ಕಡೆ ಪಯಣ ಬೆಳೆಸಿದ್ದಾರೆ. ಒಟ್ಟಿಗೆ ಒಂದೇ ವಿಮಾನದಲ್ಲಿ ಸಿಎಂ ಹಾಗೂ ಡಿಕೆಶಿ ದೆಹಲಿಗೆ ತೆರಳಿದ್ದಾರೆ. ಇದನ್ನೂ ಓದಿ: ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿ ದುರಂತ – 6 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

    ದೆಹಲಿಗೆ ತೆರಳಿರುವ ಸಿಎಂ ಹಾಗೂ ಡಿಸಿಎಂ ಜಂಟಿಯಾಗಿ ರಾಹುಲ್ ಗಾಂಧಿಯನ್ನು ಭೇಟಿಯಾಗಲಿದ್ದಾರೆ. ಬೆಳಗ್ಗೆ 11 ಗಂಟೆಗೆ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಸಮಯ ನಿಗದಿಪಡಿಸಲಾಗಿದೆ. ಭೇಟಿ ವೇಳೆ ಸಿಎಂ ಹಾಗೂ ಡಿಸಿಎಂ ಜಂಟಿಯಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಂಟಾದ ಕಾಲ್ತುಳಿತದ ಬಗ್ಗೆ ವರದಿ ನೀಡಲಿದ್ದಾರೆ. ಇದನ್ನೂ ಓದಿ: Bengaluru | ಸರಣಿ ಅಪಘಾತದಲ್ಲಿ ಮಹಿಳೆ ಸಾವು

  • ಕಾಲ್ತುಳಿತ ಸಂಭವಿಸಿದಾಗ ನಮ್ಮನ್ನ ರಕ್ಷಿಸಿಕೊಳ್ಳೋದು ಹೇಗೆ? – ಈ ಸಣ್ಣ ತಂತ್ರವೂ ಅಮೂಲ್ಯವಾದ ಜೀವ ಉಳಿಸುತ್ತೆ

    ಕಾಲ್ತುಳಿತ ಸಂಭವಿಸಿದಾಗ ನಮ್ಮನ್ನ ರಕ್ಷಿಸಿಕೊಳ್ಳೋದು ಹೇಗೆ? – ಈ ಸಣ್ಣ ತಂತ್ರವೂ ಅಮೂಲ್ಯವಾದ ಜೀವ ಉಳಿಸುತ್ತೆ

    ಅತಿರೇಖದ ಅಭಿಮಾನ ಎಂತಹ ಅನಾಹುತಕ್ಕೀಡುಮಾಡುತ್ತದೆ ಅನ್ನೋದಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಐಪಿಎಲ್‌ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣವೇ (Stampede Case) ಸ್ಪಷ್ಟ ನಿದರ್ಶನ.

    ಹೌದು. 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಜೆಂಜರ್ಸ್‌ ಬೆಂಗಳೂರು ತಂಡ ಅಭಿಮಾನಿಗಳ ನಿರೀಕ್ಷೆಯಂತೆ ಟ್ರೋಫಿ ಎತ್ತಿ ಹಿಡಿಯಿತು. ಆ ದಿನ ಇಡೀ ರಾತ್ರಿ ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೇಳುತ್ತಿದ್ದರು. ಕೆಲವರಂತೂ ಹುಚ್ಚೆದ್ದು ಕುಣಿಯುತ್ತಿದ್ದರು, ಆದ್ರೆ ಅಭಿಮಾನಿಗಳ ಈ ಖುಷಿ ಒಂದು ದಿನವೂ ಉಳಿಯಲಿಲ್ಲ. ಆರ್‌ಸಿಬಿ ತಂಡವನ್ನು ಸನ್ಮಾನಿಸುವ ಸಂಭ್ರಮಾಚರಣೆ ಕಾರ್ಯಕ್ರಮವು ಸೂತಕವಾಗಿ ಪರಿವರ್ತನೆಯಯಾಗಿದ್ದಂತೂ ದುರದೃಷ್ಟಕರ. ಏಕೆಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಸುಮಾರು 65 ಮಂದಿ ಗಾಯಗೊಂಡಿರುವುದು ಐಪಿಎಲ್‌ (IPL) ಇತಿಹಾಸದಲ್ಲೇ ಘನಘೋರ ದುರಂತ. ಅಷ್ಟೇ ಅಲ್ಲ, ಬೆಂಗಳೂರಿನ ಕಾಲ್ತುಳಿತ ಭಾರತದ ಕ್ರೀಡಾಂಗಣಗಳಲ್ಲಿ ಸಂಭವಿಸಿದ ಅತಿದೊಡ್ಡ ದುರಂತ ಕೂಡ ಆಗಿದೆ.

    ದುರಂತ ಸಂಭವಿಸುತ್ತಿದ್ದಂತೆ ಸುತ್ತಮುತ್ತಲಿನ ಮೆಟ್ರೋ ನಿಲ್ದಾಣಗಳಲ್ಲೂ ಸಹ ಜನದಟ್ಟಣೆಯಿಂದ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿತ್ತು. ಹೀಗಾಗಿ ಕೆಲ ನಿಲ್ದಾಣಗಳನ್ನು ಕೆಲಹೊತ್ತು ಬಂದ್‌ ಮಾಡಿ ದಟ್ಟಣೆ ನಿಯಂತ್ರಿಸುವ ಪ್ರಯತ್ನವನ್ನೂ ಮಾಡಲಾಯಿತು. ಅಷ್ಟರಲ್ಲಾಗಲೇ 11 ಹೆಣಗಳು ಬಿದ್ದಿದ್ದವು. ಆದ್ರೆ ಈ ಪ್ರಕರಣ ಇಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ನಡುವೆ ಇಂತಹ ಅನಾಹುತಗಳು ಸಂಭವಿಸುವ ವೇಳೆ ನಮ್ಮನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನೋದರ ಕುರಿತು ತಜ್ಞರು ಒಂದಿಷ್ಟು ಸಲಹೆಗಳನ್ನ ನೀಡಿದ್ದಾರೆ. ವಿಡಿಯೋವನ್ನೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

    ಸಾಮಾನ್ಯವಾಗಿ 1 ಸ್ಕ್ವೇರ್‌ ಮೀಟರ್‌ನಲ್ಲಿ ಒಬ್ಬರು ನಿಲ್ಲುವುದು ಉತ್ತಮ, ಹೆಚ್ಚೆಂದರೆ 5 ಜನ ನಿಲ್ಲಬಹುದು. ಹೀಗೆ ಮಾಡಿದಾಗ ಪರಸ್ಪರ ಉಸಿರಾಟಕ್ಕೂ ಯಾವುದೇ ತೊಂದರೆ ಇರೋದಿಲ್ಲ ಎನ್ನುತ್ತಾರೆ ತಜ್ಞರು. ಆದ್ರೆ ಐಪಿಎಲ್‌ ಇನ್ನಿತರ ಅದ್ಧೂರಿ ಸಮಾರಂಭಗಳಲ್ಲಿ ಕೆಲ ಮುನ್ನೆಚ್ಚರಿಕೆ ಅನುಸರಿಸುವುದು ಕಾಲ್ತುಳಿತವನ್ನು ತಡೆಯುತ್ತವೆ. ಜೊತೆಗೆ ಕಾಲ್ತುಳಿತ ಸಂಭವಿಸಿದ್ರೂ, ಪ್ರಾಣಾಪಾಯದಿಂದಂತೂ ಪಾರಾಬಹುದು. ಇದನ್ನ ವಿಡಿಯೋ ಸಮೇತ ತಜ್ಞರು ಸಾಕ್ಷ್ಯ ನೀಡಿದ್ದಾರೆ. ಅದೇನೆಂಬುದನ್ನಿಲ್ಲಿ ನೋಡೋಣ..

    ಕಾಲ್ತುಳಿತದ ಸಂದರ್ಭದಲ್ಲಿ ಜನ ಪರಸ್ಪರ ತಳ್ಳುವುದು, ಒಬ್ಬರ ಮೇಲೊಬ್ಬರು ಹತ್ತುವುದು ನಡೆಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಎಕ್ಸಿಟ್‌ ಗೇಟ್‌ಗಳನ್ನು ನಿರ್ಬಂಧಿಸಿದಾಗ ಅಪಘಾತಗಳ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳೂ ಇರುತ್ತವೆ. ಹೀಗಾದಾಗ ಉಸಿರುಗಟ್ಟುವಿಕೆ, ತೀವ್ರ ಒತ್ತಡ ಉಂಟಾಗುತ್ತದೆ, ಇದರಿಂದ ಹೃದಯ ಮತ್ತು ಶ್ವಾಸಕೋಶದ ಮೇಲೆ ಹೆಚ್ಚಿನ ಒತ್ತಡಿಂದ ಪ್ರಾಣಹಾನಿ ಸಹ ಸಂಭವಿಸಬಹುದು. ಇಂತಹ ಅಪಾಯಗಳಿಂದ ಪಾರಾಗಲು ಒಂದಿಷ್ಟು ಉಪಾಯಗಳನ್ನು ತಜ್ಞರು ತಿಳಿಸಿಕೊಟ್ಟಿದ್ದಾರೆ.

    ಸುರಕ್ಷಿತವಾಗಲು ಏನು ಮಾಡಬೇಕು?
    ಕಾಲ್ತುಳಿದ ಸಂದರ್ಭದಲ್ಲಿ ದೇಹದ ಸೂಕ್ಷ್ಮ ಅಂಗಗಳು, ಹೃದಯ, ಶ್ವಾಸಕೋಶದ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ಳಲು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕಾಲ್ತುಳಿತ ಸಂಭವಿಸುವ ಸಾಧ್ಯತೆಗಳು ತಿಳಿಯುತ್ತಿದ್ದಂತೆ ಒಂದು ಕಾಲು ಮುಂದಿಟ್ಟು ʻಬಾಕ್ಸರ್‌ ಭಂಗಿʼಯಲ್ಲಿ ನಿಲ್ಲಬೇಕು. ಇದು ಮುಂಭಾಗದ ವ್ಯಕ್ತಿಯಿಂದ ಶ್ವಾಸಕೋಶಕ್ಕೆ ಅಂತರ ನೀಡಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಹಿಂಭಾಗದಿಂದ ಒತ್ತಡ ತಡೆಯುವ ಶಕ್ತಿ ಕೊಡುತ್ತದೆ. ದೇಹದ ಯಾವುದೇ ಅಂಗಗಳಿಗೂ ಇದರಿಂದ ಹಾನಿಯಾಗುವುದಿಲ್ಲ.

    ಕೆಳಗೆ ಬಿದ್ದರೆ ಏನು ಗತಿ?
    ಒಂದು ವೇಳೆ ಮಿತಿಮೀರಿದ ಒತ್ತಡದಿಂದ ಕೆಳಗೆ ಬಿದ್ದರೆ ಒಂದು ಬದಿಯಾದಂತೆ ಮಲಗಬೇಕು. ತಲೆಯ ಭಾಗವನ್ನು ಕೈಗಳಿಂದ ಮುಚ್ಚಿಕೊಂಡು ʻಸಿʼ ಆಕಾರದಲ್ಲಿ ಮಲಗಬೇಕು. ಇದು ತಲೆಯನ್ನು ಅಪಾಯಕ್ಕೆ ಸಿಲುಕದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಸಣ್ಣಪುಟ್ಟ ಗಾಯಗಳು ಸಂಭವಿಸಿದ್ರೂ, ಗಂಭೀರ ಗಾಯ ಮತ್ತು ಪ್ರಾಣಹಾನಿಯಂತಹ ಅಪಾಯಗಳಿಂದ ದೂರ ಮಾಡುತ್ತದೆ. ಜೊತೆಗೆ ಶ್ವಾಸಕೋಶ ಮತ್ತು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೇ, ದೇಹದ ಪ್ರಮುಖ ಅಂಗಗಳಿಗೆ ಪೆಟ್ಟಾಗುವುದನ್ನೂ ತಪ್ಪಿಸುತ್ತದೆ ಎನ್ನುತ್ತಾರೆ ತಜ್ಞರು.

    ಕಳೆದ ವರ್ಷ ಜುಲೈ 2 ರಂದು ಹತ್ರಾಸ್‌ನಲ್ಲಿ ನಡೆದ ಸತ್ಸಂಗದ ಸಂದರ್ಭದಲ್ಲಿಯೂ ಇದೇ ರೀತಿಯ ಘಟನೆ ಸಂಭವಿಸಿತ್ತು. ಅಲ್ಲಿ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದರು, ಅವರಲ್ಲಿ 110ಕ್ಕೂ ಹೆಚ್ಚು ಮಹಿಳೆಯರೇ ಇದ್ದರು.

    ಇನ್ನೂ ಕ್ರೀಡಾ ಕಾಲ್ತುಳಿತ ಪ್ರಕರಣ ಸಂಭವಿಸಿರುವುದು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ಒಮ್ಮೆ ಕ್ರೀಡಾ ಇತಿಹಾಸವನ್ನು ನೋಡಿದಾಗ, ಇಂಥ ಹತ್ತಾರು ಕಾಲ್ತುಳಿತ ವಿದ್ಯಮಾನಗಳು ಜಗತ್ತಿನಲ್ಲಿದಾಖಲಾಗಿವೆ. ಈ ಪೈಕಿ ಎಲ್ಲವೂ ಫುಟ್ಬಾಲ್‌ ಕ್ರೀಡಾಂಗಣಗಳಲ್ಲೇ ಘಟಿಸಿವೆ. ಇಂಥ ಅವಘಡಗಳ ನಂತರ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಾಮರ್ಥ್ಯ ಕುಸಿದಿದೆ. ಅವುಗಳಲ್ಲಿ ಪ್ರಮುಖ ಸಂಗತಿಗತ್ತ ಒಮ್ಮೆ ಚಿತ್ತ ಹಾಯಿಸೋಣ…

    1. ಅಂಪೈರ್‌ ತೀರ್ಪಿನಿಂದ ಸಿಡಿದ ಆಕ್ರೋಶಕ್ಕೆ 328 ಜೀವಗಳು ಬಲಿ
    1964ರ ಮೇ 24ರಂದು ಪೆರುವಿನಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಫುಟ್ಬಾಲ್‌ ಅರ್ಹತಾ ಸುತ್ತಿನ ಪಂದ್ಯ ನಡೆಯುತ್ತಿತ್ತು. ಪೆರುವಿನ ಲಿಮಾ ನಗರದಲ್ಲಿ ಅರ್ಜೆಂಟೀನಾ ಮತ್ತು ಪೆರು ನಡುವೆ ರೋಚಕ ಹಣಾಹಣಿ ನಡೆಯುತ್ತಿತ್ತು. ಪಂದ್ಯದಲ್ಲಿ, ಪೆರುವಿಯನ್‌ ಆಟಗಾರರು ಕೊನೆಯ ನಿಮಿಷಗಳಲ್ಲಿಗೋಲು ಬಾರಿಸಿದರು. ಆದರೆ, ರೆಫರಿ ಅದನ್ನು ‘ಅಕ್ರಮ’ ಎಂದು ತೀರ್ಪಿತ್ತು, ಆತಿಥೇಯ ತಂಡಕ್ಕೆ ಗೋಲನ್ನೇ ನೀಡಲಿಲ್ಲ. ರೆಫರಿಯ ನಿರ್ಧಾರದಿಂದ ಕೋಪಗೊಂಡ ಅಭಿಮಾನಿಗಳು ಹಿಂಸಾಚಾರಕ್ಕಿಳಿದರು. ಪೊಲೀಸರು ಮತ್ತು ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಎಷ್ಟೇ ಯತ್ನಿಸಿದರೂ, ಅಭಿಮಾನಿಗಳ ಆಕ್ರೋಶ ತಡೆಯಲಾಗಲಿಲ್ಲ. ಈ ದುರ್ಘಟನೆಯಲ್ಲಿ2 ಪೊಲೀಸರು ಸೇರಿದಂತೆ 328 ಜನರು ಸಾವನ್ನಪ್ಪಿದರು. ಇದು ಕ್ರೀಡಾ ಜಗತ್ತಿನ ಅತಿಘೋರ ದುರಂತ.

    2. ಇಡೋನೇಷ್ಯಾದಲ್ಲಿ ನೆಚ್ಚಿನ ತಂಡ ಸೋತಾಗ… 174 ಜೀವ ಬಲಿ
    ಇಂಡೋನೇಷ್ಯಾದ ಕಂಜುರುಹಾನ್‌ ಕ್ರೀಡಾಂಗಣದಲ್ಲಿಅರೆಮಾ ಕ್ಲಬ್‌ ಮತ್ತು ಪರ್ಸೆಬಯಾ ಸುರಬಯಾ ನಡುವೆ ಫುಟ್ಬಾಲ್‌ ಪಂದ್ಯ. 42,000 ಪ್ರೇಕ್ಷಕರ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿಹೆಚ್ಚಿನ ಅಭಿಮಾನಿಗಳು ಅರೆಮಾ ಕ್ಲಬ್‌ಗೆ ಬೆಂಬಲಿಗರು. ಆದರೆ, ಪರ್ಸೆಬಯಾ ತಂಡವು 3-2 ಅಂತರದಿಂದ ಅರೆಮಾ ಕ್ಲಬ್‌ ಅನ್ನು ಸೋಲಿಸಿತು. 2 ದಶಕಗಳಲ್ಲಿಅರೆಮಾವು ಪರ್ಸೆಬಯಾ ವಿರುದ್ಧ ಸೋತಿದ್ದು ಅದೇ ಮೊದಲು. ಇದನ್ನು ಸಹಿಸದ ಅಭಿಮಾನಿಗಳು ಮೈದಾನ ಪ್ರವೇಶಿಸಿದರು. ಅವರು ಪರ್ಸೆಬಯಾ ಆಟಗಾರರು ಮತ್ತು ಅಧಿಕಾರಿಗಳ ಮೇಲೆ ಬಾಟಲಿಗಳನ್ನು ಎಸೆಯತೊಡಗಿದರು. ಪರಿಸ್ಥಿತಿ ನಿಯಂತ್ರಿಸಲು, ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಅಭಿಮಾನಿಗಳು ಭಯಭೀತರಾಗಿ ಎಕ್ಸಿಟ್‌ ಗೇಟ್‌ನತ್ತ ಓಡಿದಾಗ ಭಯಾನಕ ಕಾಲ್ತುಳಿತ ಸಂಭವಿಸಿತು. ಸಾಲದ್ದಕ್ಕೆ, ರೊಚ್ಚಿಗೆದ್ದ ಅಭಿಮಾನಿಗಳು ಮೈದಾನದ ಹೊರಗೆ 5 ಪೊಲೀಸ್‌ ಕಾರುಗಳಿಗೆ ಬೆಂಕಿ ಹಚ್ಚಿದರು. ಕಾಲ್ತುಳಿತದಿಂದ ಅಲ್ಲೇ ಜೀವಬಿಟ್ಟವರು 174 ಮಂದಿ.

    3. ಭಾರತದ ಮೊದಲ ಕ್ರೀಡಾ ಕಾಲ್ತುಳಿತಕ್ಕೆ 16 ಮಂದಿ ಸಾವು
    ಭಾರತದಲ್ಲಿ ಮೊದಲ ಕ್ರೀಡಾ ಕಾಲ್ತುಳಿತ ಸಂಭವಿಸಿದ್ದು 1980ರಲ್ಲಿ. ಕೋಲ್ಕತ್ತಾದಲ್ಲಿ ಮೋಹನ್‌ ಬಗಾನ್‌ ಮತ್ತು ಈಸ್ವ್‌ ಬೆಂಗಾಲ್‌ ನಡುವೆ ಫುಟ್ಬಾಲ್‌ ಪಂದ್ಯ ನಡೆಯುತ್ತಿತ್ತು. ಎರಡೂ ತಂಡಗಳ ಸಾವಿರಾರು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಕಿಕ್ಕಿರಿದಿದ್ದರು. ಈಸ್ಟ್‌ ಬೆಂಗಾಲ್‌ ಡಿಫೆಂಡರ್‌ ದಿಲೀಪ್‌ ಪಾಲಿತ್‌ ಅವರು ಮೋಹನ್‌ ಬಗಾನ್‌ ತಂಡದ ಬಿಡೇಶ್‌ ಬಸು ಅವರನ್ನು ಕೆಳಕ್ಕುರುಳಿಸಿದರು. ಇಬ್ಬರ ನಡುವೆ ಜಗಳ ಶುರುವಾಯಿತು. ರೆಫರಿ ಕೈಯಿಂದಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಆಗ ರೊಚ್ಚಿಗೆದ್ದ ಪ್ರೇಕ್ಷಕರು ಬಾಟಲಿ, ಕಲ್ಲುಗಳನ್ನು ಎಸೆಯತೊಡಗಿದರು. ಇದರಿಂದ ಇತರ ಪ್ರೇಕ್ಷಕರಲ್ಲಿ ಭೀತಿಯುಂಟಾಗಿ ಕಾಲ್ಕೀಳಲು ಪ್ರಾರಂಭಿಸಿದ್ರು ಈ ವೇಳೆ ಕಾಲ್ತುಳಿತ ಸಂಭವಿಸಿ, 16 ಮಂದಿ ಪ್ರಾಣ ಬಿಟ್ಟರು.

    4. ಪ್ರೇಕ್ಷಕರಿಗೆ ನಿಂತಲ್ಲೇ ನರಕ – 126 ಮಂದಿ ಸಾವು
    2001ರ ಮೇ 9ರಂದು ಅಕ್ರಾದ ಓಹೆನೆ ಯಾನ್‌ ಕ್ರೀಡಾಂಗಣದಲ್ಲಿ ಹಾರ್ಟ್ಸ್ ಆಫ್‌ ಓಕ್‌ ಮತ್ತು ಅಸಾಂಟೆ ಕೊಟೊಕೊ ನಡುವೆ ಫುಟ್ಬಾಲ್‌ ಪಂದ್ಯ ನಡೆಯುತ್ತಿತ್ತು. ಓಕ್‌ ತಂಡವು ಪಂದ್ಯವನ್ನು 2-1 ಅಂತರದಿಂದ ಗೆದ್ದಾಗ, ಉದ್ರಿಕ್ತಗೊಂಡ ಕೊಟೊಕೊ ಅಭಿಮಾನಿಗಳು ಮೈದಾನಕ್ಕೆ ಬಾಟಲಿಗಳನ್ನು ಎಸೆಯತೊಡಗಿದರು. ಪೊಲೀಸರು ಅಶ್ರುವಾಯು ಪ್ರಯೋಗಿಸಿದಾಗ, ದಿಕ್ಕಾಪಾಲಾಗಿ ಓಡಿದ ಅಭಿಮಾನಿಗಳಿಂದ ನೂಕುನುಗ್ಗಲು ಸೃಷ್ಟಿಯಾಯಿತು. ಎಲ್ಲರೂ ನಿರ್ಗಮನ ದ್ವಾರದತ್ತ ಓಡತೊಡಗಿದರು. ಆದರೆ, ಹೊರಗೆ ಹೋಗುವ ಗೇಟ್‌ಗಳು ಮುಚ್ಚಿದ್ದರಿಂದಾಗಿ ಪ್ರೇಕ್ಷಕರು ತಬ್ಬಿಬ್ಬಾದರು. ಈ ವೇಳೆ ಸಂಭವಿಸಿದ ಕಾಲ್ತುಳಿತ 126 ಜೀವಗಳನ್ನು ಬಲಿ ಪಡೆದಿತ್ತು.

    5. ಗೇಟ್‌ ತೆರೆದಾಗ ಒಬ್ಬರ ಮೇಲೊಬ್ಬರು ಬಿದ್ದರು – 96 ಮಂದಿ ಪ್ರಾಣಬಿಟ್ಟರು
    1989ರ ಏಪ್ರಿಲ್‌ 15ರಂದು ಇಂಗ್ಲೆಂಡ್‌ನ ಶೆಫೀಲ್ಡ್‌ನ ಹಿಲ್ಸ್‌ಬರೋ ಕ್ರೀಡಾಂಗಣದಲ್ಲಿ ಲಿವರ್‌ಪೂಲ್‌ ಮತ್ತು ನಾಟಿಂಗ್‌ಹ್ಯಾಮ್ ನಡುವೆ ಎಫ್‌ಎ ಕಪ್‌ ಸೆಮಿಫೈನಲ್‌ ಪಂದ್ಯ ನಡೆಯಬೇಕಿತ್ತು. ನಿರೀಕ್ಷೆಗಿಂತ ಹೆಚ್ಚಿನ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂಗೆ ಆಗಮಿಸಿದ್ದರು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಇಷ್ಟು ದಿನ ಮುಚ್ಚಿದ್ದ ‘ಗೇಟ್‌-ಸಿ’ ತೆರೆಯಲು ಮುಂದಾದರು. ಈ ವಿಷಯ ತಿಳಿದ ತಕ್ಷಣವೇ ಪ್ರೇಕ್ಷಕರು ಒಂದೆಡೆಯಿಂದ ಗೇಟ್‌ ಸಿಯತ್ತ ಓಡಿದರು. ಈ ವೇಳೆ ಕಾಲ್ತುಳಿತ ಸಂಭವಿಸಿ, 96 ಜನ ಮೃತಪಟ್ಟು, 766 ಮಂದಿ ಗಾಯಗೊಂಡರು. ಸೆಮಿಫೈನಲ್‌ ಪಂದ್ಯ ರದ್ದಾಯಿತು. ಕೊನೆಗೆ ಆ ಪಂದ್ಯವನ್ನು ಮರುವರ್ಷ ಅಂದ್ರೆ 1990ರಲ್ಲಿ ನಡೆಸಲಾಯಿತು.

  • ಸಿಐಡಿಗೆ ವರ್ಗಾವಣೆಯಾದ್ರೆ ಸಿಸಿಬಿ ಬಂಧಿಸಿದ್ದು ಹೇಗೆ? ಸಿಎಂ ಆದೇಶದಂತೆ ಸೋಸಲೆ ಬಂಧನ: ಹಲವು ಲೋಪಗಳನ್ನು ಉಲ್ಲೇಖಿಸಿ ವಾದ

    ಸಿಐಡಿಗೆ ವರ್ಗಾವಣೆಯಾದ್ರೆ ಸಿಸಿಬಿ ಬಂಧಿಸಿದ್ದು ಹೇಗೆ? ಸಿಎಂ ಆದೇಶದಂತೆ ಸೋಸಲೆ ಬಂಧನ: ಹಲವು ಲೋಪಗಳನ್ನು ಉಲ್ಲೇಖಿಸಿ ವಾದ

    – ಬೆಳಗ್ಗೆ ಎಫ್‌ಐಆರ್‌ ದಾಖಲಾದರೂ ಬಂಧನ ಮಾಡಿಲ್ಲ ಯಾಕೆ?
    – ರಾತ್ರಿ ಸುದ್ದಿಗೋಷ್ಠಿ ನಡೆಸಿ ಬಂಧನಕ್ಕೆ ಸಿಎಂ ಆದೇಶ

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಆದೇಶದ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಮಾರ್ಕೆಟಿಂಗ್ ಮತ್ತು ಆದಾಯ ವಿಭಾಗದ ಮುಖ್ಯಸ್ಥರಾಗಿರುವ ನಿಖಿಲ್ ಸೋಸಲೆ (Nikhil Sosale) ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವಕೀಲರು ವಾದ ಮಂಡಿಸಿದ್ದಾರೆ.

    ಇಂದು ಹೈಕೋರ್ಟ್‌ನಲ್ಲಿ (High Court) ಪತಿ ನಿಖಿಲ್‌ ಸೋಸಲೆ ಅಕ್ರಮ ಬಂಧನ ಪ್ರಶ್ನಿಸಿ ಪತ್ನಿ ಮಾಳವಿಕಾ ನಾಯ್ಕ್‌ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರಿಂದ ಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿದರು.

    ವಕೀಲರ ವಾದ ಏನಿತ್ತು?
    ಈಗಾಗಲೇ ಸ್ವಯಂ ಪ್ರೇರಿತರಾಗಿ ಹೈಕೋರ್ಟ್‌ ದೂರು ದಾಖಲಿಸಿದೆ. ಕಾಲ್ತುಳಿತ ಪ್ರಕರಣ ಸಂಬಂಧ ಜೂನ್‌ 5ರ ಬೆಳಗ್ಗೆ ಕಬ್ಬನ್‌ ಪಾರ್ಕ್‌ ಪೊಲೀಸರು (Cubbon Park Police) ಎಫ್‌ಐಆರ್‌ ದಾಖಲಿಸುತ್ತಾರೆ. ಎಫ್‌ಐಆರ್‌ನಲ್ಲಿ ಯಾರ ಹೆಸರನ್ನು ಉಲ್ಲೇಖಿಸುವುದಿಲ್ಲ. ಇದನ್ನೂ ಓದಿ: ಮುಂಬೈ ವಿಕ್ಟರಿ ಪರೇಡ್‌ ಉಲ್ಲೇಖಿಸಿ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದ ಡಿಎನ್‌ಎ

    ಆಂಧ್ರಪ್ರದೇಶದಲ್ಲಿ ದೇವಸ್ಥಾನದ ಗೋಡೆ ಕುಸಿದು ಕಾಲ್ತುಳಿತವಾಗಿತ್ತು. ನ್ಯಾಯಾಂಗ ತನಿಖೆ ನಡೆಸಿ ಕಾರಣ ತಿಳಿಯಲಾಗಿತ್ತು. ನಂತರ ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈ ಕೇಸ್ ನಲ್ಲಿ ಘಟನೆಯ ಮರುದಿನವೇ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪಿಐಎಲ್ ದಾಖಲಿಸಿಕೊಂಡ ಬಳಿಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಡಿಎನ್‌ಎ, ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇಡೀ ಘಟನೆಗೆ ಈ ಮೂರು ಸಂಸ್ಥೆಗಳ ವೈಫಲ್ಯ ಆರೋಪಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.

    ಜೂನ್‌ 5 ರ ಮಧ್ಯಾಹ್ನ 2:30ಕ್ಕೆ ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗುತ್ತದೆ. ರಾತ್ರಿ ಸಿದ್ದರಾಮಯ್ಯನವರು ಸುದ್ದಿಗೋಷ್ಠಿ ನಡೆಸಿದ ಬಳಿಕ ಆರೋಪಿಗಳನ್ನು ಬಂಧನ ಮಾಡುವಂತೆ ಸೂಚಿಸುತ್ತಾರೆ. ಈ ಆದೇಶದ ನಂತರ ಸಿಐಡಿಯವರು ಜೂನ್‌ 6ರ ಬೆಳಗ್ಗೆ4:30ಕ್ಕೆ ಬಂಧನ ಮಾಡಿ ಕಬ್ಬನ್‌ ಪಾರ್ಕ್‌ ಪೊಲೀಸರಿಗೆ ಒಪ್ಪಿಸುತ್ತಾರೆ. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧನ ಮಾಡಿದ್ದು ಹೇಗೆ? ಇದು ಸಿಐಡಿಗೆ ವರ್ಗಾವಣೆಯಾದ ಪ್ರಕರಣ ಎಂದು ಹೇಳುತ್ತಾರೆ. ಆದರೆ ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರಿಗೆ ಒಪ್ಪಿಸಿದ್ದರಿಂದ ಪ್ರಕರಣ ಇನ್ನೂ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಇದೆ ಎಂದೇ ಭಾವಿಸಬೇಕಾಗುತ್ತದೆ.

     

    ಬಂಧನ ಮೆಮೊ, ಸೂಚನೆ, ಬಂಧನಕ್ಕೆ ಕಾರಣಗಳನ್ನು ನೀಡದೇ ಸಿಸಿಬಿ ಸೋಸಲೆ ಅವರನ್ನು ಬಂಧಿಸಿದೆ. ಬೆಳಗ್ಗೆ ಪ್ರಕರಣ ದಾಖಲಾದ ನಂತರ ರಾತ್ರಿಯವರೆಗೆ ಬಂಧನ ಮಾಡದ ಪೊಲೀಸರು ಸಿದ್ದರಾಮಯ್ಯನವರ ಆದೇಶದ ನಂತರವೇ ಬಂಧನ ಮಾಡಿದ್ದಾರೆ. ಕಾನೂನಿನಡಿಯಲ್ಲಿ ಕಡ್ಡಾಯವಾಗಿ ನೀಡಬೇಕಾದ ಯಾವುದೇ ದಾಖಲೆಯನ್ನು ನೀಡದಿದ್ದರೆ, ಬಂಧನವು ಕಾನೂನುಬಾಹಿರ. ಡಿಕೆ ಬಸು ಅವರ ಪ್ರಕರಣದ ಪ್ರಕಾರ ನಿಖಿಲ್ ಸೋಸಲೆ ಬಂಧನ ಕಾನೂನು ಬಾಹಿರ. ಇದನ್ನೂ ಓದಿ: ಸರ್ಕಾರದ ವೈಫಲ್ಯದಿಂದ ಕಾಲ್ತುಳಿತ, ಪತಿ ಯಾವುದೇ ತಪ್ಪು ಮಾಡಿಲ್ಲ: ಕೋರ್ಟ್‌ ಮೊರೆ ಹೋದ ನಿಖಿಲ್‌ ಸೋಸಲೆ ಪತ್ನಿ

    ಸೋಸಲೆಯನ್ನು ಬಂಧಿಸಲೆಂದೇ ವಿಮಾನ ನಿಲ್ದಾಣಕ್ಕೆ ಪೊಲೀಸರು ಬಂದಿದ್ದರು. ಬಂಧನ ಮಾಡುವಾಗ ಜೊತೆಯಲ್ಲಿ ಪತ್ನಿ ಮತ್ತು 2 ವರ್ಷದ ಮಗು ಇತ್ತು. ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸುವ ಮೊದಲೇ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಮಾತ್ರ ಬಂಧನ ಮಾಡಲಾಗಿದೆ. ಇದು ಸಂವಿಧಾನದ 21ನೇ ವಿಧಿಯ ಸ್ಪಷ್ಟವಾದ ಉಲ್ಲಂಘನೆ.

    ತನಿಖಾಧಿಕಾರಿಯೇ ಬಂಧನವನ್ನು ನಿರ್ಧರಿಸಬೇಕು ಹೊರತು ಇಲ್ಲಿ ಯಾರೂ ಮಧ್ಯಪ್ರದೇಶ ಮಾಡುವಂತಿಲ್ಲ. ಮುಖ್ಯಮಂತ್ರಿಗಳು ತನಿಖೆ ಮಾಡಿ ಎಂದು ಹೇಳಬಹುದಿತ್ತು. ತನಿಖಾಧಿಕಾರಿ ಹೊರತುಪಡಿಸಿ ಬೇರೆ ಯಾರೂ ‘ಬಂಧನ‘ ಪದವನ್ನು ಬಳಸುವಂತಿಲ್ಲ. ಈ ಸಂಬಂಧ ಸುಪ್ರೀಂಕೋರ್ಟ್‌ನಿಂದ ಸ್ಪಷ್ಟವಾದ ನಿರ್ದೇಶನವಿದೆ ಎಂದು ಹೇಳಿದರು.

     

    ವಕೀಲ ಸಂದೇಶ್‌ ಚೌಟ ವಾದ ಮಂಡನೆ ಮಾಡುವಾಗ ಅಡ್ವೋಕೇಟ್‌ ಜನರಲ್‌ ಶಶಿ ಕಿರಣ್‌ ಶೆಟ್ಟಿ ಹಲವಾರು ಬಾರಿ ಪ್ರಬಲವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಜಡ್ಜ್‌ ಅನುಮತಿ ನೀಡದೇ ಈಗ ಇವರು ವಾದ ಮಂಡಿಸಲಿ. ಇವರ ವಾದ ಮಗಿದ ಬಳಿಕ ವಾದ ಮಾಡಿ ಎಂದು ಸೂಚಿಸಿದರು.

    ಕೊನೆಯಲ್ಲಿ ನ್ಯಾ. ಕೃಷ್ಣಕುಮಾರ್ ಅವರು ಸಿಎಂ ಪತ್ರಿಕಾಗೋಷ್ಠಿಯಲ್ಲಿ ಆರೋಪಿಗಳನ್ನು ಬಂಧಿಸಬೇಕು ಎಂದು ಹೇಳಿದ್ದಾರಾ? ಅವರು ‘ಆರೋಪಿ’ ಎಂಬ ಪದ ಬಳಸಿದ್ದಾರೆಯೇ ಎಂದು ಎಜಿಗೆ ಪ್ರಶ್ನಿಸಿದರು. ಈ ಪ್ರಶ್ನೆಗೆ ಎಜಿ, ನಾನು ಪರಿಶೀಲಿಸಿ ತಿಳಿಸುತ್ತೇನೆ ಎಂದು ಉತ್ತರಿಸಿದರು.

    ನಂತರ ಜಡ್ಜ್‌ ಸಿಸಿಬಿ ಬಂಧನ ಮಾಡಿದ್ಯಾ? ಬಂಧನ ಮಾಡಿದ್ದರೆ ಯಾವ ಅಧಿಕಾರದ ಅಡಿಯಲ್ಲಿ ಬಂಧಿಸಿದೆ ಎಂದು ಪ್ರಶ್ನಿಸಿ ಮುಂದಿನ ವಿಚಾರಣೆಯನ್ನು ಮಂಗಳವಾರ ಬೆಳಗ್ಗೆ 10:30ಕ್ಕೆ ಮುಂದೂಡಿದರು.

  • ಸರ್ಕಾರಕ್ಕೂ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೂ ಸಂಬಂಧವಿಲ್ಲ- ಹೆಚ್.ಕೆ.ಪಾಟೀಲ್

    ಸರ್ಕಾರಕ್ಕೂ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೂ ಸಂಬಂಧವಿಲ್ಲ- ಹೆಚ್.ಕೆ.ಪಾಟೀಲ್

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣಕ್ಕೂ, ಅದೇ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೂ ಹಾಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ (HK Patil) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೂ ಹಾಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸಿಎಂ ಹೇಳಿರುವುದು ಸರಿಯಿದೆ. ಅಲ್ಲಿನ ಕಾರ್ಯಕ್ರಮವನ್ನು ಸರ್ಕಾರದ ಜೊತೆ ಕೂಡಿಸುವುದು ಸರಿಯಲ್ಲ ಎಂದರು.ಇದನ್ನೂ ಓದಿ: ನೀವು ರಾಜ್ಯದ ಮುಖ್ಯಮಂತ್ರಿಗಳೋ or ವಿಧಾನಸೌಧ ಮೆಟ್ಟಿಲುಗಳ ಮುಖ್ಯಮಂತ್ರಿಗಳೋ: ಸಿದ್ದರಾಮಯ್ಯಗೆ ಹೆಚ್‌ಡಿಕೆ ಟಾಂಗ್‌

    ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹೈಕಮಾಂಡ್‌ಗೆ ವರದಿ ನೀಡುತ್ತೇವೆ. ತನಿಖೆ ಆದಷ್ಟು ಬೇಗ ಮುಗಿಯಲಿದೆ. ಇನ್ನೂ ವಿಧಾನಸೌಧದ ಡಿಸಿಪಿ ಬರೆದ ಪತ್ರದ ಬಗ್ಗೆ ಈಗ ನಾನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ತನಿಖೆ ನಡೆಯುತ್ತಿದೆ. ತನಿಖಾ ಹಂತದಲ್ಲಿ ಮಾತಾಡುವುದು ಸರಿಯಲ್ಲ. ನಾಳೆಯೊಳಗೆ ಕೋರ್ಟ್‌ಗೆ ವರದಿ ನೀಡುತ್ತೇವೆ. ಕೋರ್ಟ್ ಯಾವ್ಯಾವ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಅವುಗಳನ್ನು ಪರಿಗಣಿಸಲಿದೆ ಎಂದು ತಿಳಿಸಿದರು.

    ಘಟನೆ ಆದ ಕೂಡಲೇ ಸಿಎಂ, ಡಿಸಿಎಂ ಆಸ್ಪತ್ರೆ ಮತ್ತು ಘಟನಾ ಸ್ಥಳಕ್ಕೆ ಹೋಗಿದ್ದರು. ತಕ್ಷಣವೇ ಸರ್ಕಾರ ಸ್ಪಂದಿಸಿದೆ. ಕ್ಯಾಬಿನೆಟ್‌ನಲ್ಲೂ ತನಿಖೆ ಆಗಬೇಕು ಎಂದು ಆದೇಶಿಸಿದ್ದೇವೆ. ಸರ್ಕಾರ ಪರಿಹಾರವನ್ನು ಕೂಡ ಜಾಸ್ತಿ ಮಾಡಿದೆ. ಹೀಗಾಗಿ ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದರು.ಇದನ್ನೂ ಓದಿ: ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಡಿಸಿ ನೋಟಿಸ್ – ತನಿಖೆಗೆ ಹಾಜರಾಗುವಂತೆ 45 ಮಂದಿಗೆ ಸೂಚನೆ

  • ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ತನಿಖಾ ಆಯೋಗದ ಮುಂದೆ ಮಾಹಿತಿ ಕೊಡ್ತೀವಿ – ಪರಮೇಶ್ವರ್

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ತನಿಖಾ ಆಯೋಗದ ಮುಂದೆ ಮಾಹಿತಿ ಕೊಡ್ತೀವಿ – ಪರಮೇಶ್ವರ್

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣದ ಬಗ್ಗೆ ತನಿಖಾ ಆಯೋಗದ ಮುಂದೆ ಮಾಹಿತಿ ಕೊಡುವುದಾಗಿ ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡಬೇಡಿ ಎಂದು ಪೊಲೀಸರು ಪತ್ರ ಬರೆದಿದ್ದರೂ ಕಾರ್ಯಕ್ರಮ ಮಾಡಿರುವ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಈಗ ಯಾವುದರ ಬಗ್ಗೆಯೂ ಮಾತನಾಡಲ್ಲ. ನ್ಯಾ.ಮೈಕಲ್ ಕುನ್ಹಾ ನೇತೃತ್ವದ ಆಯೋಗಕ್ಕೆ ತನಿಖೆಗೆ ವಹಿಸಿದ್ದೇವೆ. ಅವರು ತನಿಖೆ ಮಾಡಿ ವರದಿ ಕೊಡಲಿ. ತನಿಖೆ ಆಗೋವರೆಗೂ ನಾವು ಯಾರು ಏನೂ ಮಾತಾಡಲ್ಲ. ಈಗ ಹೇಳಿಕೆ ಕೊಟ್ಟರೆ ಅದು ಸರಿ ಹೋಗಲ್ಲ. ಅದಕ್ಕೋಸ್ಕರ ನಾನು ಈ ಬಗ್ಗೆ ಮಾತಾಡಲ್ಲ ಎಂದರು. ಇದನ್ನೂ ಓದಿ: Kerala | ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿಗೆ ಬೆಂಕಿ

    ನಮ್ಮ ಬಳಿ ಎಲ್ಲಾ ಮಾಹಿತಿ ಇದೆ. ಅದನ್ನು ತನಿಖಾ ಸಂಸ್ಥೆಗೆ ಮಾಹಿತಿ ಕೊಡುತ್ತೇವೆ. ತನಿಖಾ ತಂಡದವರು ಏನೇ ಪ್ರಶ್ನೆ ಕೇಳಿದರೂ ಏನೇ ಮಾಹಿತಿ ಕೇಳಿದರೂ ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಏರ್‌ಫೋರ್ಸ್‌ ಒನ್‌ ಮೆಟ್ಟಿಲ ಮೇಲೆ ಎಡವಿ ಬಿದ್ದ ಟ್ರಂಪ್‌ – ಎಲ್ರೂ ಕಾಲೆಳಿತದೆ ಕಾಲ ಎಂದ ನೆಟ್ಟಿಗರು!

    ಪರಮೇಶ್ವರ್ ಓವರ್ ಟೇಕ್ ಮಾಡಿ ಕಾರ್ಯಕ್ರಮ ಮಾಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತು ಏನು ಹೇಳಲ್ಲ. ತನಿಖೆಯಲ್ಲಿ ಅದನ್ನು ಕೇಳಿದ್ರೆ ಹೇಳುತ್ತೇನೆ. ಈಗ ನಾನು ಹೇಳಿದರೆ ತನಿಖೆಯ ದಿಕ್ಕು ಬೇರೆ ಕಡೆ ಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಸೊನ್ನೆ ಅಂಕ: ಸಿದ್ದರಾಮಯ್ಯ

    ಚಿನ್ನಸ್ವಾಮಿ ಘಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನನ್ನ ಜೊತೆ ಮಾತಾಡಿಲ್ಲ. ರಾಹುಲ್ ಗಾಂಧಿ ಮಾತಾಡಿದ್ದಾರೆ ಅನ್ನೋದು ಸತ್ಯಕ್ಕೆ ದೂರವಾದ ಮಾತು. ದೆಹಲಿಗೆ ಕರೆದಿದ್ದಾರೆ ಅನ್ನೋದು ಸುಳ್ಳು. ಯಾರು ಕರೆದಿಲ್ಲ. ನಮ್ಮ ಹೈಕಮಾಂಡ್ ನಾಯಕರು ದೂರವಾಣಿ ಮೂಲಕ ಏನಾಗಿದೆ ಎಂದು ಕೇಳುತ್ತಾರೆ. ನಾನು ಅದಕ್ಕೆ ಮಾಹಿತಿ ಕೊಟ್ಟಿದ್ದೇನೆ. ಆದರೆ ನನಗೆ ಯಾರು ದೆಹಲಿಗೆ ಕರೆದಿಲ್ಲ. ಫೋನ್‌ನಲ್ಲಿ ಮಾತಾಡಿದ್ದೇನೆ. ಇರುವ ಮಾಹಿತಿ ಹೇಳಿದ್ದೇನೆ. ಅವರಿಗೂ ಪಕ್ಷ ಹೇಗೆ ಆಡಳಿತ ಮಾಡುತ್ತದೆ ಎಂಬ ಆತಂಕ ಇರುತ್ತದೆ. ಹೀಗಾಗಿ ಸಿಎಂ, ಡಿಸಿಎಂ, ನನಗೆ ಕೇಳುತ್ತಾರೆ, ಮಾಹಿತಿ ಪಡೆಯುತ್ತಾರೆ ಎಂದರು. ಇದನ್ನೂ ಓದಿ: ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

  • ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಡಿಸಿ ನೋಟಿಸ್ – ತನಿಖೆಗೆ ಹಾಜರಾಗುವಂತೆ 45 ಮಂದಿಗೆ ಸೂಚನೆ

    ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಡಿಸಿ ನೋಟಿಸ್ – ತನಿಖೆಗೆ ಹಾಜರಾಗುವಂತೆ 45 ಮಂದಿಗೆ ಸೂಚನೆ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣದ ಕುರಿತು ಜಿಲ್ಲಾಧಿಕಾರಿ ಜಗದೀಶ್.ಜಿ ನೇತೃತ್ವದಲ್ಲಿ ನಡೆಯುತ್ತಿರುವ ಮ್ಯಾಜಿಸ್ಟ್ರೇಟ್ ತನಿಖೆಯನ್ನ ಚುರುಕುಗೊಳಿಸಲಾಗಿದೆ. ದುರಂತ ನಡೆದಿರೋ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿರೋ ಜಿಲ್ಲಾಧಿಕಾರಿ, ಘಟನೆಯಲ್ಲಿ ಗಾಯಗೊಂಡವರಿಗೆ ನೋಟಿಸ್ (Notice) ಜಾರಿ ಮಾಡಿದ್ದಾರೆ.

    ಆರ್‌ಸಿಬಿ (RCB) ವಿಜಯೋತ್ಸವದ ಅಭಿನಂದನಾ ಸಮಾರಂಭದ ವೇಳೆ ಚಿನ್ನಸ್ವಾಮಿ ಮೈದಾನದ ಬಳಿ ಕಾಲ್ತುಳಿತಕ್ಕೆ ಒಳಗಾಗಿ 11 ಮಂದಿ ಮೃತಪಟ್ಟಿದ್ದರು. ದುರಂತದಲ್ಲಿ 45 ಮಂದಿ ಗಾಯಗೊಂಡಿದ್ದರು. ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಸರ್ಕಾರ ಆದೇಶ ಮಾಡಿತ್ತು. 15 ದಿನದೊಳಗೆ ವರದಿ ಸಲ್ಲಿಸಲು ಸರ್ಕಾರದ ಸೂಚನೆ ಕೊಟ್ಟಿರುವ ಕಾರಣ ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿ ಜಗದೀಶ್ ವೇಗ ನೀಡಿದ್ದಾರೆ. ಜೂನ್ 11ರಂದು ಹಾಜರಾಗಿ ಹೇಳಿಕೆ ನೀಡುವಂತೆ ಗಾಯಾಳುಗಳಿಗೆ ಜಿಲ್ಲಾಧಿಕಾರಿ ಜಗದೀಶ್ ನೋಟಿಸ್ ಜಾರಿ ಮಾಡಿದ್ದಾರೆ. ಬೆಳಗ್ಗೆ 11 ರಿಂದ 1:30ರೊಳಗೆ ಬಂದು ಹೇಳಿಕೆ ನೀಡುವಂತೆ ಡಿಸಿ ನೋಟಿಸ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಗಾಯಾಳುಗಳಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಂಭಾಗಣದಲ್ಲಿ ಹೇಳಿಕೆ ದಾಖಲಿಸಲಾಗುವುದಾಗಿ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಸಿದ್ಧವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್

    ಗಾಯಾಳುಗಳ ಹೇಳಿಕೆ ದಾಖಲಿಸಿದ ನಂತರ ಮೃತರ ಕುಟುಂಬಸ್ಥರ ಹಾಗೂ 13ನೇ ತಾರೀಕು ಸಾರ್ವಜನಿಕರು ಅಂದರೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ಪಡೆಯಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಈಗಾಲೇ ದುರಂತ ನಡೆದ ದಿನ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಗಳ ಮಾಹಿತಿ ನೀಡುವಂತೆ ಪೊಲೀಸ್ ಕಮಿಷನರ್‌ಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದು, ಕೊನೆಯದಾಗಿ ಪೊಲೀಸರ ಹೇಳಿಕೆ ದಾಖಲಿಸಿ ಸರ್ಕಾರ ನೀಡಿರುವ ಅವಧಿ ಒಳಗಾಗಿ ಘಟನೆಯ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ಹಾಸನ| ನೀರಿನ ತೊಟ್ಟಿಯಲ್ಲಿ ಮುಳುಗಿಸಿ 6 ವರ್ಷದ ಮಗಳನ್ನೇ ಕೊಂದ ತಾಯಿ

  • ಚಿನ್ನಸ್ವಾಮಿ ಕಾಲ್ತುಳಿತ | ಮೃತ ಪ್ರಜ್ವಲ್, ಶ್ರವಣ್ ನಿವಾಸಕ್ಕೆ ಸಚಿವ ಎಂ.ಸಿ ಸುಧಾಕರ್ ಭೇಟಿ

    ಚಿನ್ನಸ್ವಾಮಿ ಕಾಲ್ತುಳಿತ | ಮೃತ ಪ್ರಜ್ವಲ್, ಶ್ರವಣ್ ನಿವಾಸಕ್ಕೆ ಸಚಿವ ಎಂ.ಸಿ ಸುಧಾಕರ್ ಭೇಟಿ

    ಚಿಕ್ಕಬಳ್ಳಾಪುರ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ವೇಳೆ ಸಾವನ್ನಪ್ಪಿದ ಮೃತ ಪ್ರಜ್ವಲ್ ಹಾಗೂ ಶ್ರವಣ್ ನಿವಾಸಕ್ಕೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ ಸುಧಾಕರ್ (MC Sudhakar) ಭೇಟಿ ನೀಡಿದರು.

    ಚಿಕ್ಕಬಳ್ಳಾಪುರ Chikkaballapura) ಜಿಲ್ಲೆಯ ಚಿಂತಾಮಣಿಯ ಕುರಟಹಳ್ಳಿ ಗ್ರಾಮದ ಶ್ರವಣ್ ನಿವಾಸಕ್ಕೆ ಭೇಟಿ ಮಾಡಿ, ತಂದೆ, ತಾಯಿ ಹಾಗೂ ತಾತನ ಜೊತೆ ಮಾತುಕತೆ ನಡೆಸಿ ಸ್ವಾಂತನ ಹೇಳಿದರು. ಬಳಿಕ ಗೋಪಲ್ಲಿಯ ಮೃತ ಪ್ರಜ್ವಲ್ ತಂದೆ ಗಣೇಶ್, ತಾಯಿ ಪವಿತ್ರಾ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಇದನ್ನೂ ಓದಿ: ಕಾಲ್ತುಳಿತ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ: ಎಂ.ಸಿ ಸುಧಾಕರ್

    ನಂತರ ಘಟನೆ ಬಗ್ಗೆ ಮಾತನಾಡಿದ ಅವರು, ಘಟನೆಯ ದಿನ ಆಟಗಾರರ ಬಸ್‌ಗೆ ಅಭಿಮಾನಿಗಳು ಅಡ್ಡಗಟ್ಟಿದ್ದರು. ಇದರಿಂದ ನಿಗದಿತ ಸಮಯಕ್ಕೆ ಆಟಗಾರು ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಹೀಗಾಗಿ ಕಾಲವ್ಯಯವಾಗುತ್ತಾ ತಡವಾಗಿಯೇ ಕಾರ್ಯಕ್ರಮ ಆರಂಭಗೊಂಡಿತು. ಅಭಿಮಾನಿ ಸಾಗರವೇ ಹರಿದುಬಂದಿತ್ತು ಎಂದರು.

    ಘಟನೆ ಬಗ್ಗೆ ತನಿಖೆ ಆಗಲಿ. ಸಾವು-ನೋವಿನಿಂದಾಗಿ ಬಹಳ ನೋವನ್ನುಂಟು ಮಾಡಿದೆ. ಜೊತೆಗೆ ಸಿಎಂ ಬಹಳಷ್ಟು ಕುಂದು ಬಿಟ್ಟಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಎಂಗೆ ಮನಸ್ಸಿಲ್ಲ. ಸಿಐಡಿ ತನಿಖೆ ಜೊತೆ ನ್ಯಾಯಾಂಗ ತನಿಖೆ ಸಹ ನಡೆಯಲಿದೆ. ಅಧಿಕಾರಿಗಳ ಅಮಾನತು ಕೂಡ ಆಗಿದೆ. ಡಿಎನ್‌ಎ, ಆರ್‌ಸಿಬಿ ಹಾಗೂ ಕೆಎಸ್‌ಸಿಇ ಮೇಲೂ ಕ್ರಮ ಆಗಿದೆ. ಸಂಪೂರ್ಣ ತನಿಖೆ ನಂತರ ಲೋಪ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ತೀವಿ ಎಂದು ತಿಳಿಸಿದರು.ಇದನ್ನೂ ಓದಿ: ಹಾಸನ | ಬಿರುಗಾಳಿ ಸಹಿತ ಧಾರಾಕಾರ ಮಳೆ – ರೈತರ ಮೊಗದಲ್ಲಿ ಮಂದಹಾಸ

  • ಪೊಲೀಸರದ್ದೇ ತಪ್ಪು, ಸರ್ಕಾರಕ್ಕೆ ಯಾಕೆ ಮುಜುಗರ ಆಗ್ಬೇಕು: ಸಿದ್ದರಾಮಯ್ಯ ಪ್ರಶ್ನೆ

    ಪೊಲೀಸರದ್ದೇ ತಪ್ಪು, ಸರ್ಕಾರಕ್ಕೆ ಯಾಕೆ ಮುಜುಗರ ಆಗ್ಬೇಕು: ಸಿದ್ದರಾಮಯ್ಯ ಪ್ರಶ್ನೆ

    ಮೈಸೂರು: ಸರ್ಕಾರ ತಪ್ಪೇ ಮಾಡಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪೊಲೀಸರು ತಪ್ಪು ಮಾಡಿದ್ದಾರೆ. ಸರ್ಕಾರಕ್ಕೆ ಯಾಕೆ ಮುಜುಗರ ಆಗಬೇಕು ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ (CM Siddaramaiah) ತಿರುಗೇಟು ನೀಡಿದ್ದಾರೆ.

    ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ (Chinnaswamy Stampede Case) ಸಂಬಂಧಿಸಿದಂತೆ ಮಾಧ್ಯಮಗಳು ಹಲವು ಪ್ರಶ್ನೆಗಳನ್ನು ಕೇಳಿದವು.

     

    ಈ ವೇಳೆ ಮಾತನಾಡಿದ ಸಿಎಂ, ಕಾಲ್ತುಳಿತ ಪ್ರಕರಣದದಲ್ಲಿ ಪೊಲೀಸರಿಂದಲೇ ತಪ್ಪು ನಡೆದಿದೆ. ನನಗೆ ಬಂದೋಬಸ್ತ್ ಮಾಡಿದ್ದೇವೆ ಎಂದು ತಿಳಿಸಬೇಕಾದವರು ಯಾರು? ನಗರ ಪೊಲೀಸ್‌ ಆಯುಕ್ತರು ಸರ್ಕಾರಕ್ಕೆ ಏನಾದ್ರೂ ತಿಳಿಸಬೇಕಲ್ವಾ? ಸರ್ಕಾರದ ಮುಖ್ಯ ಕಾರ್ಯದರ್ಶಿಗಾದ್ರೂ ತಿಳಿಸಬೇಕಲ್ವಾ? ಗೃಹ ಸಚಿವರಿಗೂ ಗೊತ್ತಿಲ್ಲ. ನನಗೂ ತಿಳಿಸಿಲ್ಲ. ಈ ದುರಂತದಲ್ಲಿ ಪೊಲೀಸರೇ ತಪ್ಪಿತಸ್ಥರು ಎಂದು ಹೇಳಿದರು.

    ಸಂಜೆ 3:50ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಆದರೆ ನನಗೆ ಗೊತ್ತಾಗಿದ್ದು ಸಂಜೆ 5:45ಕ್ಕೆ. ಅಲ್ಲಿಯವರೆಗೆ ನನಗೆ ಏನು ನಡೆದಿದೆ ಎನ್ನುವುದೇ ಗೊತ್ತಾಗಿಲ್ಲ. ಇಲ್ಲಿ ಯಾರು ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ತಗೆದುಕೊಂಡಿದ್ದೇವೆ. ವಿಧಾನ ಸೌಧದಲ್ಲಿ ಯಾವುದೇ ದುರಂತ ಸಂಭವಿಸಿಲ್ಲ. ಸ್ಟೇಡಿಯಂನಲ್ಲಿ ನಡೆದ ದುರಂತಕ್ಕೆ ಬೆಂಗಳೂರು ನಗರ ಪೊಲೀಸರನ್ನು ಮಾತ್ರ ಅಲ್ಲ, ಡಿಸಿಪಿ, ಎಸಿಪಿ, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರು.

    ಅಧಿಕಾರಿಗಳ ತಪ್ಪಿನಿಂದ ಈ ಘಟನೆ ನಡೆದಿದೆ. ವೈಯಕ್ತಿಕವಾಗಿ ನನಗೆ ಇಡೀ ಸರಕಾರಕ್ಕೆ ಈ ಘಟನೆಯಿಂದ ನೋವಾಗಿದೆ. ನನ್ನ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರನ್ನು ತೆಗೆದು ಹಾಕಿದ್ದೇವೆ. ತಪ್ಪು ಮಾಡಿದ್ದರೆ ಕಪ್ಪು ಚುಕ್ಕೆ ಬರುತ್ತಿತ್ತು. ನಾವು ತಪ್ಪೇ ಮಾಡೇ ಇಲ್ಲ. ಹೀಗಾಗಿ ನಮಗೆ ಯಾವುದೇ ಕಪ್ಪುಚುಕ್ಕೆ ಇಲ್ಲ ಎಂದರು.