Tag: Chinnaswamy Stadium Stampede

  • ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ನಾಲ್ವರು ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ರದ್ದು

    ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ನಾಲ್ವರು ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ರದ್ದು

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ದುರಂತ (Chinnaswamy Stadium Stampede) ಸಂಬಂಧ ಪೊಲೀಸ್ (Police) ಅಧಿಕಾರಿಗಳ ಅಮಾನತು (Suspension) ಆದೇಶವನ್ನು ಸರ್ಕಾರ 52 ದಿನಗಳ ನಂತರ ಹಿಂದಕ್ಕೆ ಪಡೆದಿದೆ.

    ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆಗಿದ್ದ ವಿಕಾಸ್‌ ಕುಮಾರ್ ಒಬ್ಬರನ್ನು ಬಿಟ್ಟು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಡಿಸಿಪಿ ಶೇಖರ್, ಎಸಿಪಿ ಎಚ್.ಟಿ.ಬಾಲಕೃಷ್ಣ ಹಾಗೂ ಕಬ್ಬನ್‌ ಪಾರ್ಕ್ ಠಾಣೆಯ ಇನ್‌ಸ್ಪೆಕ್ಟರ್‌ ಗಿರೀಶ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.  ಇದನ್ನೂ ಓದಿ: 72 ಕೋಟಿ ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದಿಟ್ಟ ಅಭಿಮಾನಿ

     

    ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಮೈಕಲ್ ಡಿ ಕುನ್ಹಾ, ಜಿಲ್ಲಾಧಿಕಾರಿಗಳ ಮ್ಯಾಜಿಸ್ಟ್ರೇಟ್‌ ತನಿಖೆ ಪೂರ್ಣಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಸರ್ಕಾರ ತನ್ನ ಅಮಾನತು ನಿರ್ಧಾರವನ್ನು ಹಿಂದಕ್ಕೆ ಪಡೆದಿದೆ. ನಿಯಾಮವಳಿ ಪ್ರಕಾರ ಅಮಾನತು ಆದೇಶ ರದ್ದುಗೊಳಿಸಿ ನಾಲ್ವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ನಾವೆಷ್ಟು ಪಾಕಿಸ್ತಾನಿ ವಿಮಾನಗಳನ್ನ ಹೊಡೆದಿದ್ದೇವೆ ಅಂತ ಯಾರೊಬ್ಬರೂ ಕೇಳಲಿಲ್ಲ – ಸಂಸತ್‌ನಲ್ಲಿ ರಾಜನಾಥ್‌ ಸಿಂಗ್‌ ಬೇಸರ

    ಕರ್ತವ್ಯಲೋಪದ ಅಡಿಯಲ್ಲಿ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಸ್‌ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ರದ್ದುಗೊಳಿಸಿತ್ತು. ಅರ್ಜಿದಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುನಃ ನೇಮಕ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಆದೇಶಿಸಿತ್ತು. ಈ ಆದೇಶವನ್ನು ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಪ್ರಕರಣ ಹೈಕೋರ್ಟ್‌ನಲ್ಲಿ ಇರುವ ಕಾರಣ ಇವರ ಅಮಾನತು ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿಲ್ಲ.

    ಈ ಹಿಂದೆ ಸಿಎಟಿ ಆದೇಶ ಪ್ರಶ್ನಿಸಿ  ಅರ್ಜಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಸರ್ಕಾರಿ ಪರ ವಕೀಲರಿಗೆ ಹೈಕೋರ್ಟ್‌ , ಆ.1 ರ ಒಳಗೆ ಅಧಿಕಾರಿಗಳ ವಿರುದ್ಧ ಅಮಾನತು ಆದೇಶಕ್ಕೆ ಸಂಬಂಧಪಟ್ಟಂತೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು. ಇಲ್ಲದಿದ್ದರೆ ಪ್ರತ್ಯೇಕ ಆದೇಶ ಮಾಡುವುದಾಗಿ ಕೋರ್ಟ್‌ ಎಚ್ಚರಿಕೆ ನೀಡಿತ್ತು.

  • ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಪೊಲೀಸರ ವಿರುದ್ಧ ಎಫ್‌ಐಆರ್‌ಗೆ ಶಿಫಾರಸು

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಪೊಲೀಸರ ವಿರುದ್ಧ ಎಫ್‌ಐಆರ್‌ಗೆ ಶಿಫಾರಸು

    – ಸರ್ಕಾರಕ್ಕೆ ನ್ಯಾ. ಮೈಕಲ್ ಕುನ್ಹಾ ಸಲ್ಲಿಸಿದ ವರದಿಯಲ್ಲಿ ಸ್ಫೋಟಕ ಅಂಶ ಬಯಲು

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿರುವ ಪ್ರಕರಣ ಸಂಬಂಧ ಸರ್ಕಾರಕ್ಕೆ ಸಲ್ಲಿಸಿದ ನ್ಯಾ. ಮೈಕಲ್ ಕುನ್ಹಾ ((Michael Cunha) ಅವರ ವರದಿಯಲ್ಲಿ ಮತ್ತಷ್ಟು ಸ್ಫೋಟಕ ಅಂಶ ಬಹಿರಂಗವಾಗಿದೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ (Chinnaswamy Stadium Stampede) ಪ್ರಕರಣ ಸಂಬಂಧ ಕರ್ತವ್ಯ ಲೋಪ ಮಾಡಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸು ಮಾಡಿದೆ. ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ಮತ್ತು ಪೊಲೀಸರ ವಿರುದ್ಧ ದಂಡನೀಯ ಪ್ರಕರಣ ದಾಖಲು ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ದುಪ್ಪಟ್ಟು ಹಣ ವಸೂಲಿ – ಒಂದೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಆಟೋ ಸೀಜ್

    ಘಟನೆಗೆ ಕೆಎಸ್‌ಸಿಎ, ಡಿಎನ್‌ಎ, ಆರ್‌ಸಿಬಿ ಹಾಗೂ ಪೊಲೀಸರು ನೇರ ಹೊಣೆಯಾಗಿದ್ದಾರೆ. ಕಾರ್ಯಕ್ರಮ ನಡೆಸುವುದು ಅಸಾಧ್ಯವೆಂದು ಗೊತ್ತಿದ್ದರೂ ಎಲ್ಲರೂ ಶಾಮೀಲಾಗಿ ಕಾರ್ಯಕ್ರಮ ನಡೆಸಿದರು. ಈ ಎಲ್ಲರ ಕರ್ತವ್ಯ ಲೋಪ, ನಿರ್ಲಕ್ಷ್ಯತನದ ಪರಮಾವಧಿ ಎದ್ದು ಕಾಣುತ್ತಿದೆ. ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ವೈಟ್‌ ಡ್ರೆಸ್‌ನಲ್ಲಿ ಚೈತ್ರಾ ಬ್ರೈಟ್‌ – ಚುಮು ಚುಮು ಚಳಿಯಲ್ಲಿ ಪಡ್ಡೆಗಳ ಮೈಬಿಸಿ ಹೆಚ್ಚಿಸಿದ ನಟಿಯ ಲುಕ್

    ಅಲ್ಲದೇ ಕ್ರೀಡಾಂಗಣದ ಒಳಗೆ 79 ಪೊಲೀಸರು ಮಾತ್ರ ಇದ್ದರು. ಹೊರಗೆ ಪೊಲೀಸರು ಇರಲಿಲ್ಲ. ತುರ್ತು ವಾಹನ, ಅಂಬುಲೆನ್ಸ್ ವ್ಯವಸ್ಥೆ ಅಪೂರ್ಣವಾಗಿತ್ತು. 3:25ಕ್ಕೆ ಕಾಲ್ತುಳಿತ ಸಂಭವಿಸಿದ್ದರೂ. 5:30ರವರೆಗೆ ಪೊಲೀಸ್ ಕಮಿಷನರ್‌ಗೆ ಮಾಹಿತಿ ಇಲ್ಲ. 4 ಗಂಟೆಗೆ ಜಂಟಿ ಪೊಲೀಸ್ ಅಯುಕ್ತರು ಕ್ರೀಡಾಂಗಣಕ್ಕೆ ಬಂದಿದ್ದರು.

    ಈ ವರದಿಯನ್ನು ಸರ್ಕಾರದ ಸಚಿವ ಸಂಪುಟ ಅಂಗೀಕರಿಸಿದರೆ ದಾಖಲಾಗಿರುವ ಪ್ರಕರಣದಲ್ಲಿ ಈ ಅಧಿಕಾರಿಗಳನ್ನು ಆರೋಪಿಗಳಾಗಿ ಸೇರಿಸುವುದು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಮಾಡಿದ್ದು ಸರಿಯಲ್ಲ. ಗೇಟ್‌ಗಳು ಅತ್ಯಂತ ಚಿಕ್ಕದಾಗಿತ್ತು. ಕ್ರೀಡಾಂಗಣದಲ್ಲಿ ಫೈರ್ ಸೇಫ್ಟಿ ವ್ಯವಸ್ಥೆ ಇರಲಿಲ್ಲ. 1,650 ಪೊಲೀಸ್ ಅಧಿಕಾರಿಗಳು ಭದ್ರತೆಗೆ ನಿಯೋಜನೆ ಆಗಿತ್ತು ಎಂಬುದು ಸುಳ್ಳು. 800ಕ್ಕಿಂತ ಕಡಿಮೆ ಜನರ ಭದ್ರತೆಗೆ ನಿಯೋಜನೆ ಆಗಿದ್ದರು ಎಂದು ವರದಿಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: Uttara Kannada | ದಟ್ಟ ಅರಣ್ಯದ ಗುಹೆಯಲ್ಲಿ ಚಿಕ್ಕ ಮಕ್ಕಳೊಂದಿಗೆ ವಾಸ – ರಷ್ಯಾ ಮೂಲದ ವಿದೇಶಿ ಮಹಿಳೆಯ ರಕ್ಷಣೆ

    ಸಂಜೆ 5:30ರ ಬಳಿಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ. 5:30ಕ್ಕೆ ವಿಧಾನಸೌಧದ ಬಳಿಯ ಕಾರ್ಯಕ್ರಮ ಮುಗಿದಿದೆ. ವಿಧಾನಸೌಧದ ಬಳಿ ಇದ್ದ ಜನ ಸ್ಟೇಡಿಯಂ ಬಳಿ ಬಂದಿಲ್ಲ. ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಹಾಗೂ ಪೊಲೀಸರ ವಿರುದ್ಧ ಎಫ್‌ಐಆರ್‌ಗೆ ಕುನ್ಹಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

  • ಕೊಹ್ಲಿಗಾಗಿ ಆರ್‌ಸಿಬಿಯ ಆತುರವೇ ಕಾಲ್ತುಳಿತಕ್ಕೆ ಕಾರಣ – ಸಿಐಡಿ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲು

    ಕೊಹ್ಲಿಗಾಗಿ ಆರ್‌ಸಿಬಿಯ ಆತುರವೇ ಕಾಲ್ತುಳಿತಕ್ಕೆ ಕಾರಣ – ಸಿಐಡಿ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲು

    – ಕೊಹ್ಲಿ ಆಪ್ತ ನಿಖಿಲ್ ಸೋಸಲೆಯಿಂದ ವಿಜಯೋತ್ಸವಕ್ಕೆ ಒತ್ತಡ
    – ಕಾಲ್ತುಳಿತದ ವೇಳೆ ಗೇಟ್‌ಗಳ ಬಳಿ ಪೊಲೀಸರೇ ಇರಲಿಲ್ಲ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸಂಬಂಧ ಸಿಐಡಿ ಬಹುತೇಕ ತನಿಖೆ ಮುಗಿಸಿದ್ದು, ವಿರಾಟ್ ಕೊಹ್ಲಿಗಾಗಿ ಆರ್‌ಸಿಬಿ (RCB) ಮ್ಯಾನೇಜ್‌ಮೆಂಟ್ ತೆಗೆದುಕೊಂಡ ಆತುರದ ನಿರ್ಧಾರವೇ 11 ಜನರ ಸಾವಿಗೆ ಕಾರಣ ಎಂದು ವರದಿ ಸಿದ್ಧಪಡಿಸಿದೆ.

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stampede) ಉಂಟಾದ ಕಾಲ್ತುಳಿತ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಎಫ್‌ಐಆರ್‌ಗಳ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಕಾಲ್ತುಳಿತಕ್ಕೆ ಕಾರಣವಾದ ಅಂಶಗಳನ್ನ ಪತ್ತೆ ಮಾಡಿದೆ. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅರ್ಧನಾರೇಶ್ವರರನ್ನ ಹುಡುಕಿಕೊಳ್ಳಲಿ: ಹರಿಪ್ರಸಾದ್

    ಸಾವಿರಾರು ವಿಡಿಯೋಗಳು, ಸಿಸಿಟಿವಿ ಕ್ಯಾಮೆರಾ, ಚಿನ್ನಸ್ವಾಮಿ ಸ್ಟೇಡಿಯಂನ 13 ಗೇಟ್‌ಗಳಲ್ಲಿ ಅವ್ಯವಸ್ಥೆ, ಪೊಲೀಸರ ನಿಯೋಜನೆ, ನೂಕುನುಗ್ಗಲು ಉಂಟಾಗಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಿ, ಸಿಐಡಿ ವರದಿ ಸಿದ್ಧಪಡಿಸಿದೆ. ಇದನ್ನೂ ಓದಿ: ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

    ವರದಿಯಲ್ಲೇನಿದೆ?
    ಆರ್‌ಸಿಬಿ ಸಿಇಓ ರಾಜೇಶ್ ಮೆನನ್, ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆಯಿಂದ ಕಾರ್ಯಕ್ರಮ ಆಯೋಜನೆ ನಿರ್ಧಾರ ಮಾಡಲಾಗಿತ್ತು. ವಿರಾಟ್ ಕೊಹ್ಲಿಯ (Virat Kohli) ಕಾರಣ ಕೊಟ್ಟು ಕೊಹ್ಲಿ ಆಪ್ತ ನಿಖಿಲ್ ಸೋಸ್ಲೆ ಕೆಎಸ್‌ಸಿಎ ಮೇಲೆ ಅತಿಯಾದ ಒತ್ತಡ ಹಾಕಿ ಕಾರ್ಯಕ್ರಮ ಆಯೋಜಿಸಿದ್ದರು.

    ಕಾರ್ಯಕ್ರಮ ಮುಂದೂಡಿಕೆ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಕೆಎಸ್‌ಸಿಎ ಅಭಿಪ್ರಾಯ ನೀಡಿತ್ತು. ಆದರೆ ಕೊಹ್ಲಿ ಕಾರಣ ಹೇಳಿ ನಾಳೆಯೇ ಕಾರ್ಯಕ್ರಮ ಆಯೋಜನೆ ಆಗಬೇಕು ಎಂದು ನಿಖಿಲ್ ಸೋಸಲೆ ಒತ್ತಡ ಹಾಕಿದ್ದರು. ಕೊಹ್ಲಿ ಯುಕೆಗೆ ಹೋಗಬೇಕು. ಮುಂದೂಡಿದರೆ ಕೊಹ್ಲಿ ಬರುವುದಿಲ್ಲ ಎಂದಿದ್ದರು. ನಿಖಿಲ್ ಸೋಸಲೆ ಒತ್ತಡಕ್ಕೆ ಕಾರ್ಯಕ್ರಮ ಆಯೋಜನೆ ನಡೆದಿತ್ತು. ಇದನ್ನೂ ಓದಿ: ಹಿಮಾಚಲದಲ್ಲಿ ಮೇಘಸ್ಫೋಟ| ಮಧ್ಯರಾತ್ರಿ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ

    ಟಿಕೆಟ್ ಗೊಂದಲ, ಟ್ವೀಟ್ ಹಿಂದೆಯೂ ನಿಖಿಲ್ ಸೋಸಲೆ ಕಾರಣ. ಟ್ವೀಟ್‌ನಿಂದಲೇ ಸಾಕಷ್ಟು ಜನ ಸೇರಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೇ ಫ್ರೀ ಟಿಕೆಟ್ ಅನೌನ್ಸ್ ಮಾಡಿದ್ದರಿಂದಲೇ ಜನ ಹೆಚ್ಚು ಸೇರಿದ್ದರು.

    ಪೊಲೀಸ್ ಬಂದೋಬಸ್ತ್ನಲ್ಲಿ ಎಡವಟ್ಟಾಗಿತ್ತು. ಕಾಲ್ತುಳಿತದ ವೇಳೆ ಗೇಟ್‌ಗಳ ಬಳಿ ಪೊಲೀಸರೇ ಇರಲಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಹೆಚ್ಚಿನ ಬಂದೋಬಸ್ತ್ ಆಗಿರಲಿಲ್ಲ. ವಿಧಾನಸೌಧದ ಬಳಿಯೇ ಪೊಲೀಸ್ ಇಲಾಖೆ ಹೆಚ್ಚು ಗಮನಹರಿಸಿತ್ತು. ಇದನ್ನೂ ಓದಿ: ಬಹುಭಾಷಾ ನಟ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ: ಪ್ರಕಾಶ್ ರೈಗೆ ಕುಟುಕಿದ ಎಂಬಿ ಪಾಟೀಲ್‌

    ಸ್ಟೇಡಿಯಂ ಬಂದೋಬಸ್ತ್ ಬಗ್ಗೆ ಪೊಲೀಸ್ ಅಧಿಕಾರಿಗಳು ನಿಯೋಜನೆ ಬಗ್ಗೆ ರೋಲ್‌ಕಾಲ್ ಆಗಿರಲಿಲ್ಲ. ಕೆಎಸ್‌ಆರ್‌ಪಿ ಸಿಬ್ಬಂದಿಗೂ ಸರಿಯಾದ ಸಂದೇಶ ನೀಡಿರಲಿಲ್ಲ. ಐಪಿಎಲ್ ಮ್ಯಾಚ್ ವೇಳೆಯಂತೆಯೇ ಕೆಎಸ್‌ಆರ್‌ಪಿಗೆ ಸಂದೇಶ ನೀಡಲಾಗಿತ್ತು. ಲಕ್ಷಾಂತರ ಜನ ಸೇರುತ್ತಾರೆ. ಸಿಬ್ಬಂದಿ ಗಸ್ತು ಹಾಗೂ ಬಂದೋಬಸ್ತ್ ಬಗ್ಗೆ ಕೆಎಸ್‌ಆರ್‌ಪಿ ಸಿಬ್ಬಂದಿಗೂ ಸೂಚನೆ ನೀಡಿರಲಿಲ್ಲ ಎಂದು ಸಿಐಡಿ ವರದಿಯಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ – ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ

    ಸದ್ಯ ಈ ಎಲ್ಲಾ ಅಂಶಗಳನ್ನ ಸಿಐಡಿ ವರದಿಯಲ್ಲಿ ದಾಖಲಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಉಳಿದ ತನಿಖೆ ಮುಗಿಸಿ ಕೋರ್ಟ್‌ಗೆ ವರದಿ ಸಲ್ಲಿಸಲಿದೆ.

  • ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಸರ್ಕಾರದ ತನಿಖೆ ಮೇಲೆ ಯಾರಿಗೂ ನಂಬಿಕೆ ಇಲ್ಲ: ಅಶೋಕ್

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಸರ್ಕಾರದ ತನಿಖೆ ಮೇಲೆ ಯಾರಿಗೂ ನಂಬಿಕೆ ಇಲ್ಲ: ಅಶೋಕ್

    – ಸರ್ಕಾರದ ತಪ್ಪಿಲ್ಲದಿದ್ರೆ 3 ದಿನದ ಅಧಿವೇಶನ ಕರೆಯಲಿ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ (Chinnaswamy Stampede) ಹೈಕೋರ್ಟ್ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಿಸಿಕೊಂಡಿದೆ ಎಂದರೆ, ಸರ್ಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡಿಲ್ಲದಿದ್ದರೆ ಸರಿಯಾಗಿ ತನಿಖೆ ನಡೆಸಬೇಕಿತ್ತು. ಈಗ ಹೈಕೋರ್ಟ್ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಿಸಿಕೊಂಡಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದರೆ, ಕೋರ್ಟ್ ಸರ್ಕಾರವನ್ನು ನಂಬುತ್ತಿಲ್ಲ ಎಂದರ್ಥ. ಸತ್ತಿರುವ 11 ಜನರ ಕುಟುಂಬದವರನ್ನೇ ಕೇಳಿ ತನಿಖೆಗೆ ನೀಡಬಹುದಿತ್ತು. ಮೊದಲು ಜಿಲ್ಲಾಧಿಕಾರಿ, ಆ ನಂತರ ನಿವೃತ್ತ ನ್ಯಾಯಾಧೀಶರು, ಆ ಬಳಿಕ ಎಸ್‌ಐಟಿ ತನಿಖೆ ಎಂದು ಹೇಳಿದ್ದಾರೆ. ಯಾವುದರಲ್ಲೂ ಖಚಿತತೆ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಹೆಸರಿನಲ್ಲಿ ಫೋನ್‌ – ಮೊಬೈಲ್‌ ಉದ್ಯಮಕ್ಕೆ ಕಾಲಿಟ್ಟ ಟ್ರಂಪ್‌ | ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕುಟುಂಬದವರು ಕ್ರಿಕೆಟಿಗರ ಜೊತೆಗೆ ಫೋಟೋಶೂಟ್ ಮಾಡಿಕೊಂಡಿದ್ದರಿಂದಲೇ 11 ಜನರು ಮೃತರಾಗಿದ್ದಾರೆ. ಬಿಜೆಪಿ ಎಲ್ಲಾ ಬಗೆಯ ಹೋರಾಟಗಳನ್ನು ಮಾಡಿದೆ. ಇನ್ನು ಮುಂದೆಯೂ ಹೋರಾಟ ಮಾಡಲಾಗುವುದು. ಸರ್ಕಾರವೇ ಜನರನ್ನು ವಿಧಾನಸೌಧಕ್ಕೆ ಆಹ್ವಾನಿಸಿದೆ. ಹಾಗೆ ಆಹ್ವಾನ ನೀಡದೇ ಹೋಗಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ. ನಾವು ಪ್ರತಿಭಟನೆ ಮಾಡಿದಾಗ ನೂರಾರು ಪೊಲೀಸರು ಬಂದಿದ್ದರು. ಅದೇ ರೀತಿ 2 ಲಕ್ಷ ಜನರನ್ನು ನಿಯಂತ್ರಣ ಮಾಡಲು ಹೆಚ್ಚು ಪೊಲೀಸರನ್ನು ನಿಯೋಜಿಸಬೇಕಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ

    ಇದಕ್ಕಾಗಿಯೇ 3 ದಿನದ ಅಧಿವೇಶನ ಕರೆಯಲು ಆಗ್ರಹಿಸಿದ್ದೇನೆ. ಸರ್ಕಾರದ ತಪ್ಪಿಲ್ಲ ಎಂದಾದರೆ ಯಾರ ತಪ್ಪು ಎಂದು ಸರಿಯಾಗಿ ತಿಳಿಸಲಿ. ಅಕ್ಟೋಬರ್ ತಿಂಗಳಲ್ಲೇ ಈ ಸರ್ಕಾರದ ಕಥೆ ಮುಗಿಯಲಿದೆ. ಎಲ್ಲಾ ಶಾಸಕರು ನಾವೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನು 2028ಕ್ಕೆ ಇವರು ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? ಡಿ.ಕೆ ಶಿವಕುಮಾರ್ (D K Shivakumar) ಬಹಳ ಚಿಂತೆಯಲ್ಲಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ:

  • ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ: ಡಿಕೆಶಿ

    ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ: ಡಿಕೆಶಿ

    – ಬಿಜೆಪಿಯವ್ರು ಹೆಣದ ಮೇಲೆ ರಾಜಕೀಯ ಮಾಡ್ತಾರೆ ಎಂದ ಡಿಸಿಎಂ

    ಬೆಂಗಳೂರು: ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಹೇಳಿದ್ದಾರೆ.

    ಚಿನ್ನಸ್ವಾಮಿ ಕಾಲ್ತುಳಿತದ (Chinnaswamy Stampede) ವಿಚಾರವಾಗಿ ಬಿಜೆಪಿ (BJP) ಹೋರಾಟ ಮಾಡಿರೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಕೂಡ ಹೆಗಲು ಮೇಲೆ ಹೊರೋಣ. ನೋಡೋಣ ಏನಾಗುತ್ತೆ. ಹೆಣದ ಮೇಲೆ ರಾಜಕೀಯ ಬಿಟ್ಟು, ಅವ್ರೇನು ಮಾಡಿದ್ದಾರೆ? ಯಾವ ಸಾಮಾಜಿಕ ಕಾರ್ಯಕರ್ತರು ಸಹಕಾರ ನೀಡೋದಿಲ್ಲ. ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನ ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

    ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನಾವು ಅನೇಕ ಪ್ರಕರಣಗಳನ್ನು ಕೇಳುತ್ತೇವೆ. ಗಂಗಾಧರ ಪ್ರಕರಣದ ಬಗ್ಗೆ ನಾವು ಕೇಳುತ್ತೇವೆ. ನಾನು ಅಹಮದಾಬಾದ್‌ಗೆ ಹೋಗಿದ್ದೆ. ನಾನು ಕೇಂದ್ರ ಸರ್ಕಾರವನ್ನ ಯಾವತ್ತೂ ದೂಷಿಸಿಲ್ಲ. ದೇವಾಲಯದಲ್ಲಿ ಕಾಲ್ತುಳಿತ ಆಗಿದೆ. ಅನೇಕ ಕಡೆ ಕಾಲ್ತುಳಿತ ಆಗಿದೆ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಾಡೆಲ್ ಹತ್ಯೆ ಕೇಸ್ – ಗಂಡನ ಬಿಟ್ಟಿದ್ದ ರೂಪದರ್ಶಿಗೆ ನನ್ನ ಮದುವೆಯಾಗು ಅಂತ ಪೀಡಿಸ್ತಿದ್ದ 2 ಮಕ್ಕಳ ತಂದೆ

    ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರ ವಿಧಾನಸೌಧದಲ್ಲಿ ಪರಿಸರ ನಡಿಗೆ ಕಾರ್ಯಕ್ರಮವನ್ನ ಸರ್ಕಾರ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಬಹಳ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ನೀವೆಲ್ಲರೂ ನಮ್ಮ ದೇಶವನ್ನು ರಕ್ಷಣೆ ಮಾಡಲು ಬಂದಿದ್ದೀರಿ. ನಮ್ಮ ಮಕ್ಕಳು ದೊಡ್ಡ ಮಟ್ಟಕ್ಕೆ ಬೆಳೆಯಬೇಕು. ನಾವು ನಿಮ್ಮೆಲ್ಲರಿಗೂ ವಿಧಾನಸೌಧ ಪ್ರವೇಶಕ್ಕೆ ಅವಕಾಶ ಕೊಟ್ಟಿದ್ದೇವೆ. ವಿಧಾನಸೌಧಕ್ಕೆ ಭೇಟಿ ನೀಡಿ ಎಂದಿದ್ದಾರೆ. ಇದನ್ನೂ ಓದಿ: ಜೈಲು ಶಿಕ್ಷೆಗೆ ತಡೆಯಾಜ್ಞೆ ಸಿಗುತ್ತಿದ್ದಂತೆ ಅಂಜನಾದ್ರಿ ಬೆಟ್ಟದಲ್ಲಿ ಆಂಜಯೇಯ ದರ್ಶನ ಪಡೆದ ರೆಡ್ಡಿ

    ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕ್ರಾಂತಿಕಾರಿ ಹೋರಾಟ ಮಾಡಿ
    ಒಳ್ಳೆಯ ಆಲೋಚನೆಗಳಿಂದ ಭವಿಷ್ಯ ನಿರ್ಮಾಣ ಮಾಡಿಕೊಂಡು, ದೇಶಕ್ಕೆ, ರಾಜ್ಯಕ್ಕೆ ಏನು ಆಗಬೇಕು ಅನ್ನೋದನ್ನ ಚಿಂತನೆ ಮಾಡಬೇಕು. ಇವತ್ತು ಪರಿಸರ ನಾಶ ಆಗದಂತೆ ನಾವು ಹೆಜ್ಜೆ ಹಾಕಲು ಬಂದಿದ್ದೇವೆ. ಇದು ಬರೀ ಸರ್ಕಾರದ ಕಾರ್ಯಕ್ರಮ ಅಲ್ಲ, ನಿಮ್ಮ ಕಾರ್ಯಕ್ರಮವಾಗಿದೆ. ಎಲ್ಲಾ ಶಾಲೆಗಳಲ್ಲಿ ಎನ್ವಿರಾನ್ಮೆಂಟ್ ಕ್ಲಬ್ ಮಾಡಲು ಆದೇಶ ನೀಡಿದ್ದೇವೆ. ವಿದ್ಯಾಥಿಗಳು ಪರಿಸರದ ಬಗ್ಗೆ ಕ್ರಾಂತಿಕಾರಿ ಹೋರಾಟ ಮಾಡಿ ಎಂದು ಹುರಿದುಂಬಿಸಿದ್ದಾರೆ. ಇದನ್ನೂ ಓದಿ: ಇರಾನ್‌ನ 2 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದ ಇಸ್ರೇಲ್

    ಈ ವರ್ಷದ ಪರಿಸರ ದಿನದ ಮೂಲ ಸಂದೇಶ ಪ್ಲಾಸ್ಟಿಕ್ ನಿಷೇಧ ಮಾಡುವುದು. ಅಲ್ಲದೇ ನೀರು, ಗಾಳಿ ಹಾಗೂ ಪರಿಸರವನ್ನು ಕಾಪಾಡಿಕೊಳ್ಳುವುದು. ಪ್ರತಿಯೊಂದು ವಿದ್ಯಾರ್ಥಿಗಳು ಮರಗಳನ್ನು ದತ್ತು ಪಡೆದುಕೊಳ್ಳಬೇಕು. ಈಗಾಗಲೇ 50 ಸಾವಿರ ಮಕ್ಕಳು ದತ್ತು ಪಡೆದುಕೊಂಡಿದ್ದಾರೆ. ಹಸಿರು ಕಾಪಾಡಬೇಕು. ಪರಿಸರ ಇಲ್ಲ ಅಂದ್ರೆ ಏನೂ ಇಲ್ಲ ಎಂದು ಹೇಳಿದ್ದಾರೆ..

  • ಬಿಜೆಪಿಯವರಿಗೆ ಸಿಎಂ, ಡಿಸಿಎಂ ರಾಜೀನಾಮೆ ಕೇಳೋದು ಬಾಯಿ ಪಾಠ ಆಗಿದೆ: ಲಕ್ಷ್ಮಣ್‌ ಸವದಿ

    ಬಿಜೆಪಿಯವರಿಗೆ ಸಿಎಂ, ಡಿಸಿಎಂ ರಾಜೀನಾಮೆ ಕೇಳೋದು ಬಾಯಿ ಪಾಠ ಆಗಿದೆ: ಲಕ್ಷ್ಮಣ್‌ ಸವದಿ

    ಬೆಂಗಳೂರು: ಬಿಜೆಪಿಯವರು ಸಿಎಂ ಮತ್ತು ಡಿಸಿಎಂ ಅವರ ರಾಜೀನಾಮೆ ಕೇಳೋದು ಬಾಯಿ ಪಾಠ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಲಕ್ಷ್ಮಣ್‌ ಸವದಿ (Laxman Savadi) ವಾಗ್ದಾಳಿ ನಡೆಸಿದ್ದಾರೆ.

    ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣದಲ್ಲಿ ಸಿಎಂ, ಡಿಸಿಎಂ ರಾಜೀನಾಮೆಗೆ ವಿಪಕ್ಷಗಳಿಂದ ಒತ್ತಾಯ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ರಾಜೀನಾಮೆ ಬಿಟ್ಟು ಬೇರೆ ಏನು ಕೇಳಿಲ್ಲ. ಆಕ್ಸಿಡೆಂಟ್ ಆಗಲಿ ಏನೇ ಆಗಲಿ ರಾಜೀನಾಮೆ ಕೇಳ್ತಾರೆ. ಅವರು ವಿರೋಧ ಪಕ್ಷದವರಾಗಿ ಕೆಲಸ ಮಾಡ್ತಿಲ್ಲ.ಪ್ರತಿ ಪಕ್ಷ ಎಂದರೆ ಯಾವುದೇ ಸರಿ, ತಪ್ಪು ಅಂತ ವಿವೇಚನೆ ಇಟ್ಟುಕೊಂಡು ಮಾತಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ಯಾರು ಸನ್ಯಾಸಿಗಳಲ್ಲ, ಸಚಿವ ಸ್ಥಾನ ಕೊಟ್ರೆ ನಿಭಾಯಿಸುತ್ತೇನೆ: ಲಕ್ಷ್ಮಣ್ ಸವದಿ

    ಇವ್ರು ಎಲ್ಲದ್ದಕ್ಕೂ ವಿರೋಧ ಮಾಡ್ತಾರೆ. ನಾವು ಪೂರ್ವ ಅಂದರೆ ಅವರು ಪಶ್ಚಿಮ ಅಂತಾರೆ. ನಾವು ದಕ್ಷಿಣ ಅಂದರೆ ಅವರು ಉತ್ತರ ಅಂತಾರೆ. ಪ್ರತಿಯೊಂದಕ್ಕೂ ವಿರೋಧ ಮಾಡೋ ಸ್ಥಿತಿ ಬಂದಿದೆ. ಸಿಎಂ, ಡಿಸಿಎಂ ರಾಜೀನಾಮೆ ಕೇಳೋದು ರೂಢಿ ಆಗಿದೆ. ಬಾಯಿ ಪಾಠ ಮಾಡಿಕೊಂಡಿದ್ದಾರೆ. ಮಕ್ಕಳು ಕಂಠಪಾಠ ಮಾಡಿದ ರೀತಿ ರಾಜೀನಾಮೆ ಕೊಡಿ ಅಂತಿದ್ದಾರೆ. ರಾತ್ರಿ ಮಲಗೋವಾಗಲೂ ರಾಜೀನಾಮೆ ಕೊಡಿ ಬಡಬಡಾಯಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾಗೆ ದೇವರೇ ದಿಕ್ಕು – ರವೀನಾ ಟಂಡನ್

    ಲೋಪ ಅಗಿಲ್ಲ ಅಂತ ನಾವು ಹೇಳಿಲ್ಲ. ಅಚಾತುರ್ಯವಾಗಿ ಘಟನೆ ಆಗಿದೆ. ಅಷ್ಟು ಜನ ಸೇರ್ತಾರೆ ಎಂದು ಯಾರೂ ಊಹೆ ಮಾಡಿರಲಿಲ್ಲ. ನಾವು ಸಮಾವೇಶ ಮಾಡೋವಾಗ ಎಷ್ಟು ಕಷ್ಟ ಇರುತ್ತೆ. ಇದು 18 ವರ್ಷ ಆದ ಮೇಲೆ ಗೆದ್ದಿರೋದು. ಹೀಗಾಗಿ ಸಂಭ್ರಮ ಮಾಡೋಣ ಅಂತ ಜನರ ಮನಸ್ಸಿಗೆ ಬಂದಿದೆ. ಏಕಕಾಲಕ್ಕೆ ಅಷ್ಟು ಜನ ಬಂದಿದ್ದರು. ಇದೊಂದು ಆಕಸ್ಮಿಕ ದುರ್ಘಟನೆ. ಇದನ್ನ ಸಮರ್ಥ ಮಾಡಿಕೊಳ್ಳಲ್ಲ. ಇದಕ್ಕೆ ರಾಜೀನಾಮೆ ಕೇಳೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜಾತಿಗಣತಿ ಲೋಪ ಸರಿ ಮಾಡಲು ಹೊಸ ಜಾತಿಗಣತಿ: ಲಕ್ಷ್ಮಣ್ ಸವದಿ

    ವೀರಪ್ಪ ಮೊಯ್ಲಿ (Virappa Moily) ಏನು ಪತ್ರ ಬರೆದಿದ್ದಾರೆ ಗೊತ್ತಿಲ್ಲ. ಓಡೋವಾಗ ಬೀಳೋದು ಸಹಜ. ಈಗ ಸಿಎಂ ಅವರು ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಘಟನೆ ಬಗ್ಗೆ ವಿಷಾದ ಇದೆ. ಮುಂಜಾಗ್ರತಾ ತೆಗೆದುಕೊಳ್ಳೋದ್ರಲ್ಲಿ ಲೋಪ ಆಗಿದೆ. ಆ ಲೋಪ ಆಗಿರೋದಕ್ಕೆ ಸಿಎಂ, ಡಿಸಿಎಂ ರಾಜೀನಾಮೆ ಕೇಳೋದು ಸರಿಯಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉತ್ತಮ ಆಡಳಿತ ನೀಡ್ಬೇಕಾದ್ರೆ ಜನಗಣತಿ ಆಗ್ಬೇಕು, ಬಿಜೆಪಿ ಸಮೀಕ್ಷೆಯೇ ಮಾಡಿಲ್ಲ: ಹೆಚ್.ಸಿ ಮಹದೇವಪ್ಪ

    ವಿಮಾನ ದುರಂತಕ್ಕೆ ಪ್ರಧಾನಿಯವರ ರಾಜೀನಾಮೆ ಕೇಳೋಕಾಗುತ್ತಾ?
    ಗುಜರಾತ್‌ನಲ್ಲಿ ವಿಮಾನ ಅಪಘಾತ ಆಯ್ತು. 300 ಜನ ಸತ್ರು, ಪ್ರಧಾನಿಗಳ ರಾಜೀನಾಮೆ ಕೇಳಬಹುದಾ ನಾವು. ನಿಮ್ಮ ರಾಜ್ಯದಲ್ಲಿ ಘಟನೆ ಆಗಿದೆ. ಯಾಕೆ ಮೋದಿ ರಾಜೀನಾಮೆ ಕೊಡಲಿಲ್ಲ ಅಂತ ಕೇಳೋಕೆ ಆಗುತ್ತಾ? ನಾವೇನು ಪ್ರಧಾನಿಗಳ ರಾಜೀನಾಮೆ ಕೇಳಿದ್ದೀವಾ? ಇದನ್ನ ವಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

  • ಚಿನ್ನಸ್ವಾಮಿ ಕಾಲ್ತುಳಿತ ದುರಂತ; ತುರ್ತು ಅಧಿವೇಶನ ಕರೆಯಲು ಅಶೋಕ್ ಆಗ್ರಹ

    ಚಿನ್ನಸ್ವಾಮಿ ಕಾಲ್ತುಳಿತ ದುರಂತ; ತುರ್ತು ಅಧಿವೇಶನ ಕರೆಯಲು ಅಶೋಕ್ ಆಗ್ರಹ

    – ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಅಧಿವೇಶದಲ್ಲಿ ಚರ್ಚೆ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಆರ್. ಅಶೋಕ್ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಈ ದುರ್ಘಟನೆಯು ಸಾರ್ವಜನಿಕ ಸುರಕ್ಷತೆ, ಗುಂಪು ನಿಯಂತ್ರಣ, ಕ್ರೀಡಾ ಹಾಗೂ ಇತರೇ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ದುರಂತ ಜನರಲ್ಲಿ ಆತಂಕ ಮತ್ತು ಕಳವಳ ಉಂಟುಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಪುಣೆಯ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು ಕನಿಷ್ಠ 20 ಮಂದಿ ನೀರುಪಾಲು

    ಸತ್ಯ ಮರೆಮಾಚಲು 3 ರೀತಿಯ ತನಿಖೆ
    ಘಟನೆಗೆ ಸಂಬಂಧಿಸಿದಂತೆ ಆಡಳಿತದಲ್ಲಿ ಆಗಿರುವ ಲೋಪಗಳು, ಘಟನೆ ನಂತರ ಸರ್ಕಾರದ ಕ್ರಮಗಳು ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ. ಕಾಲ್ತುಳಿತಕ್ಕೆ ಕಾರಣರಾದ ಬಲಾಢ್ಯರನ್ನು ರಕ್ಷಿಸಲಾಗುತ್ತಿದೆ. ಸತ್ಯವನ್ನು ಮರೆಮಾಚಲು 3 ರೀತಿಯ ತನಿಖೆಗಳನ್ನು ಮಾಡಲಾಗುತ್ತಿದೆ. ಅಸಹಾಯಕ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ ಎಂದು ದೂರಿದ್ದಾರೆ. ಇದನ್ನೂ ಓದಿ: ಕಾಂತಾರ ಶೂಟಿಂಗ್‌ – ಯಾವುದೇ ಅವಘಡ ಸಂಭವಿಸಿಲ್ಲ: ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

    ಭವಿಷ್ಯದಲ್ಲಿ ಇಂತಹ ದುರ್ಘಟನೆಯನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ಚರ್ಚೆಯ ಅಗತ್ಯವಿದೆ. ಇದಕ್ಕಾಗಿ ಮೂರು ದಿನಗಳ ತುರ್ತು ಅಧಿವೇಶನ ಕರೆಯಬೇಕಿದೆ. ಕಾಲ್ತುಳಿತ ಘಟನೆಗೆ ಕಾರಣವಾದ ಸಂದರ್ಭಗಳ ಸಂಪೂರ್ಣ ತನಿಖೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗುಂಪು ನಿಯಂತ್ರಣ ಮತ್ತು ಸುರಕ್ಷತಾ ಕ್ರಮಗಳ ಬಲವರ್ಧನೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ವ್ಯವಸ್ಥೆ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಬೇಕಿದೆ ಎಂದು ಎಂದಿದ್ದಾರೆ. ಇದನ್ನೂ ಓದಿ: ನಮ್ಮ ತಂಟೆಗೆ ಬಂದ್ರೆ ಹಿಂದೆಂದೂ ನೋಡಿರದ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತೆ – ಇರಾನ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ಈ ತುರ್ತು ಅಧಿವೇಶನವು ರಾಜ್ಯ ಸರ್ಕಾರ ಬದ್ಧತೆಯನ್ನು ಜನರಿಗೆ ತೋರಿಸಲು ಮತ್ತು ದುರಂತದಿಂದ ಕಲಿತ ಪಾಠಗಳ ಆಧಾರದಲ್ಲಿ ಭವಿಷ್ಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗಲಿದೆ. ಹಾಗೆಯೇ ಘಟನೆಗೆ ಕಾರಣಗಳೇನು ಎಂಬುದನ್ನು ಜನತೆಗೆ ತಿಳಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

  • ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್

    ಚಿನ್ನಸ್ವಾಮಿ ಕಾಲ್ತುಳಿತ | ಕತ್ತು, ಬೆನ್ನು ತುಳ್ಕೊಂಡು ಹೋಗ್ತಿದ್ರು, ಉಸಿರಾಡೋಕೂ ಆಗ್ತಿರಲಿಲ್ಲ – ಗಾಯಾಳು ಪ್ರಶಾಂತ್

    – ಕಾಲ್ತುಳಿತದಲ್ಲಿ ನರಕಯಾತನೆಯ ಅನುಭವ ಬಿಚ್ಚಿಟ್ಟ ಪ್ರಶಾಂತ್

    ಬೆಂಗಳೂರು: ಕಾಲ್ತುಳಿತದ (Chinnaswamy Stampede) ವೇಳೆ ಕತ್ತು, ಬೆನ್ನು ತುಳಿದುಕೊಂಡು ಹೋಗುತ್ತಿದ್ದರು. ಉಸಿರಾಡೋಕೆ ತುಂಬಾ ಕಷ್ಟ ಆಗ್ತಿತ್ತು ಎಂದು ಗಾಯಾಳು ಪ್ರಶಾಂತ್ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ.

    `ಪಬ್ಲಿಕ್ ಟಿವಿ’ (PUBLiC TV) ಜೊತೆ ಮಾತನಾಡಿದ ಅವರು, ನಾನು ನನ್ನ ತಾಯಿ ಜೊತೆ ಕೋರ್ಟ್ ಕೆಲಸಕ್ಕೆಂದು ಹೋಗಿದ್ದೆ, ಆ ವೇಳೆ ಅಲ್ಲಿ ತುಂಬಾ ಜನ ಸೇರಿದ್ದರು. ಹೀಗಾಗಿ ನಾನು ನನ್ನ ತಾಯಿಯನ್ನು ಮನೆಗೆ ಕಳುಹಿಸಿದೆ. ಜನರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು, ನಾನಿರುವ ಜಾಗದಲ್ಲಿಯೇ ಇಬ್ಬರು ಸಾವನ್ನಪ್ಪಿದರು. ನಾನು ನಮ್ಮ ಮನೆಯವರಿಗೆ ಕಾಲ್ ಮಾಡಿ, ನಂಗೆ ಬರೋಕೆ ಆಗಲ್ಲ ಕ್ಷಮಿಸಿ ಬಿಡಿ ಎಂದು ಹೇಳಿದೆ.ಇದನ್ನೂ ಓದಿ: ಜೈಲಾಧಿಕಾರಿಗಳ ಜೊತೆ ಕಿರಿಕ್‌ – ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಕ್ಲಾಸ್‌

    ನಾನು ಕೆಳಗೆ ಬಿದ್ದಾಗ ನನ್ನನ್ನು ತುಳಿದುಕೊಂಡು ಹೋಗುತ್ತಿದ್ದರು. ನಾನು ಎಷ್ಟೇ ಒದ್ದಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಕತ್ತು, ಬೆನ್ನು ತುಳಿದುಕೊಂಡು ಹೋಗುತ್ತಿದ್ದರು. ಆಕ್ಸಿಜನ್ ಕೂಡ ಸಿಗುತ್ತಿರಲಿಲ್ಲ. ಉಸಿರಾಡೋಕೆ ತುಂಬಾ ಕಷ್ಟ ಆಗುತ್ತಿತ್ತು. ಎಲ್ಲರೂ ತುಳಿದುಕೊಂಡು ಹೋಗುತ್ತಿರುವಾಗ ಓರ್ವ ವ್ಯಕ್ತಿ ಬಂದು ನನ್ನನ್ನು ಖಾಲಿ ಜಾಗಕ್ಕೆ ಬಿಟ್ಟರು. ಆಗ ಸ್ವಲ್ಪ ಉಸಿರಾಡೋಕೆ ಆಯ್ತು. ಆದರೆ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾರೂ ಬರಲಿಲ್ಲ. ಬಳಿಕ ನಮ್ಮ ಮನೆಯವರೇ ನನ್ನನ್ನು ಹುಡುಕಿಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದರು. ಆಗ ನನ್ನನ್ನ ಬೌರಿಂಗ್ ಆಸ್ಪತ್ರೆಗೆ (Bowring Hospital) ದಾಖಲಿಸಿದರು. ಅಲ್ಲಿ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ. ಇವರೆಗೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ತಮ್ಮ ಕರಾಳ ಅನುಭವ ಹಂಚಿಕೊಂಡರು.

    ಕಾಲ್ತುಳಿತದ ವೇಳೆ ನಿಧಿ ಎಂಬ ಯುವತಿಯ ಮೇಲೆ ಬ್ಯಾರಿಕೇಡ್ ಬಿದ್ದಿತ್ತು. ಆದರೂ ಕೂಡ ಜನರು ಬ್ಯಾರಿಕೇಡ್‌ನ್ನು ತುಳಿದುಕೊಂಡು ಓಡಾಡುತ್ತಿದ್ದರು. ಯುವತಿ ಎಡಗೈ ಮತ್ತು ಎಡಗಾಲಿಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಸದ್ಯ ಟ್ರೀಟ್‌ಮೆಂಟ್ ಪಡೆದು ಡಿಸ್ಚಾರ್ಜ್ ಆಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಗೋವಿಂದರಾಜ್‌ ಎಸಗಿದ ತಪ್ಪನ್ನು ಜನರ ಮುಂದೆ ಹೇಳಿ – ಗಾಢ ಮೌನಕ್ಕೆ ಜಾರಿದ್ದು ಯಾಕೆ: ಸಿಎಂಗೆ ಸುನಿಲ್‌ ಕುಮಾರ್‌ ಪ್ರಶ್ನೆ

    ಏನಿದು ಪ್ರಕರಣ?
    ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) 18 ವರ್ಷಗಳ ಬಳಿಕ ಐಪಿಎಲ್ (IPL) ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಪಂಜಾಬ್ (PBKS) ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ (ಜೂ.3) ರಾತ್ರಿಯೇ ದೀಪಾವಳಿಯಂತಹ ಸಂಭ್ರಮ ಇತ್ತು. ಬುಧವಾರ (ಜೂ.4) ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.

    ಅದೇ ದಿನ ದಿಢೀರನೇ ಆರ್‌ಸಿಬಿ (RCB) ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಅಭಿಮಾನಿ ಸಾಗರವೇ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿಗಳನ್ನು ತಡೆಯಲು ಪೊಲೀಸರು ಹೈರಾಣಾಗಿ ಹೋಗಿದ್ದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ಉಂಟಾಯಿತು. ಒಬ್ಬರ ಮೇಲೋಬ್ಬರು ಬಿದ್ದು, ಉಸಿರಾಟದ ಸಮಸ್ಯೆ ಉಂಟಾಗಿ ಒಟ್ಟು 11 ಜನ ಸಾವನ್ನಪ್ಪಿದ್ದರು.ಇದನ್ನೂ ಓದಿ: ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು

  • ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು

    ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು

    ರಾಯಚೂರು: ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ (Stampede) ಪ್ರಕರಣದ ಹಿನ್ನೆಲೆ ನಾಳೆ ಜಿಲ್ಲೆಯಲ್ಲಿ ನಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

    ನಾಳೆ (ಜೂ.9) ನಗರದ ವಾಲ್‌ಕಾಟ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಪ್ರಜಾಸೌಧ ಕಟ್ಟಡದ ಅಡಿಗಲ್ಲು ಹಾಗೂ ಮುಂಗಾರು ಉತ್ಸವ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಬೇಕಿತ್ತು. ಆದರೆ ಚಿನ್ನಸ್ವಾಮಿಯಲ್ಲಿ (M.Chinnaswamy Stadium) ನಡೆದ ಕಾಲ್ತುಳಿತ ಪ್ರಕರಣದ ಹಿನ್ನೆಲೆ ಕಾರ್ಯಕ್ರಮದ ಸಿದ್ಧತೆಗಳನ್ನು ಆರಂಭದಲ್ಲೇ ಮೊಟಕುಗೊಳಿಸಲಾಗಿದೆ.ಇದನ್ನೂ ಓದಿ: ಪೊಲೀಸರಿಂದ ಸರ್ಕಾರಕ್ಕೆ ಪತ್ರ – ಪ್ರಶ್ನೆ ಕೇಳಿದ್ದಕ್ಕೆ ಉತ್ತರ ನೀಡದೇ ತೆರಳಿದ ಡಿಕೆಶಿ

    ಏನಿದು ಪ್ರಕರಣ?
    ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ (IPL Champions) ಪಟ್ಟವನ್ನೇನೋ ಅಲಂಕರಿಸಿದೆ. ಪಂಜಾಬ್ (PBKS) ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ (ಜೂ.3) ರಾತ್ರಿಯೇ ದೀಪಾವಳಿಯಂತಹ ಸಂಭ್ರಮ ಇತ್ತು. ಬುಧವಾರ (ಜೂ.4) ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.

    ಅದೇ ದಿನ ದಿಢೀರನೇ RCB ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಅಭಿಮಾನಿ ಸಾಗರವೇ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿಗಳನ್ನು ತಡೆಯಲು ಪೊಲೀಸರು ಹೈರಾಣಾಗಿ ಹೋಗಿದ್ದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ಉಂಟಾಯಿತು. ಒಬ್ಬರ ಮೇಲೋಬ್ಬರು ಬಿದ್ದು, ಉಸಿರಾಟದ ಸಮಸ್ಯೆ ಉಂಟಾಗಿ ಒಟ್ಟು 11 ಜನ ಸಾವನ್ನಪ್ಪಿದ್ದರು.ಇದನ್ನೂ ಓದಿ: ಭಾರತದ ಬಳಿಯಿರುವಂತೆ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ನಮಗೂ ಕೊಡಿ – ಅಮೆರಿಕಕ್ಕೆ ಪಾಕ್‌ ಬೇಡಿಕೆ

  • Stampede Case | ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಗೋವಿಂದ ಕಾರಜೋಳ

    Stampede Case | ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಗೋವಿಂದ ಕಾರಜೋಳ

    – ಆರ್‌ಸಿಬಿ ವಿಸ್ಕಿ ಕಂಪನಿ ಎಂದ ಬಿಜೆಪಿ ಸಂಸದ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ (Chinnaswamy Stadium Stampede) ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಕಾರಣ. ಸಿಎಂ ಸಿದ್ದರಾಮಯ್ಯ ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು ಸಂಸದ ಗೋವಿಂದ್ ಕಾರಜೋಳ (Govind Karjol) ಆಗ್ರಹಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ (BJP Office) ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ದುರಂತಕ್ಕೆ ನೇರವಾಗಿ ಸರ್ಕಾರವೇ ಕಾರಣ. RCB ವಿಸ್ಕಿ ಮಾರಾಟದ ಕಂಪನಿ. ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಇಬ್ಬರೂ ಆರ್ಥಿಕ ಅಪರಾಧಿಗಳು. ಅಂತಹ ಕಂಪನಿಗಳನ್ನು ತಲೆ ಮೇಲೆ ಎತ್ತಿಕೊಂಡು ಸಿದ್ದರಾಮಯ್ಯ (Siddaramaiah) ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

    ಅಲ್ಲದೇ ವಿಜಯೋತ್ಸವ ವಿಚಾರದಲ್ಲಿ ಆಲೋಚನೆ ಮಾಡಿ ಸರ್ಕಾರ ಮುಂದುವರಿಯಬೇಕಿತ್ತು ಅಂತ ಸರ್ಕಾರದ ವಿರುದ್ದ ಕಾರಜೋಳ ಕಿಡಿಕಾರಿದ್ದಾರೆ. ಇದನ್ನೂ ಓದಿ: 11 ಅಮಾಯಕ ಜೀವಗಳ ಬಲಿ ಪಡೆದು ಈ ಸರ್ಕಾರ ಪಾಪಕ್ಕೆ ಗುರಿಯಾಗಿದೆ: ಸೋಮಣ್ಣ

    ಏನಿದು ಪ್ರಕರಣ?
    ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ, ಆರ್‌ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ದುರಂತ ಸಂಭವಿಸಿದೆ. 10ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿ ಸೂತಕವಾಗಿ ಆಗಿಬಿಟ್ಟಿದೆ. ಪಂಜಾಬ್ ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿಯೇ ದೀಪಾವಳಿಯಂಥಹ ಸಂಭ್ರಮ ಇತ್ತು. ಇವತ್ತು ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು. ಇದನ್ನೂ ಓದಿ: ಆತುರದ ನಿರ್ಧಾರದಿಂದ ತಪ್ಪು ಮಾಡಿದ್ದೇವೆ, ತಡವಾಗಿ ವಿಜಯೋತ್ಸವ ಆಚರಣೆ ಮಾಡ್ಬೋದಿತ್ತು: ಇಕ್ಬಾಲ್ ಹುಸೇನ್

    ಇವತ್ತು ದಿಢೀರನೆ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ಸುನಾಮಿಯೇ ಸೃಷ್ಟಿ ಆಯ್ತು… ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಫ್ಯಾನ್ಸ್ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿ ಸಾಗರ ತಡೆಯಲು ಪೊಲೀಸರು ಹೈರಾಣಾಗಿ ಹೋದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸುನಾಮಿ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೀತು. ಒಬ್ಬರ ಮೇಲೋಬ್ಬರು ಬಿದ್ದರು, ಉಸಿರಾಡೋಕೂ ಕೂಡ ಸಾಧ್ಯವಾಗಲಿಲ್ಲ. ತಕ್ಷಣವೇ ಹತ್ತಿರದ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆ (ಮಲ್ಯ ರಸ್ತ್ರೆ), ಮಣಿಪಾಲ್‌ಗೆ ದಾಖಲಿಸಲಾಯಿತು. ಆದರೆ, ಬೌರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ