Tag: Chinnaiah

  • ‘ಹಣದ ಆಸೆಗೆ ಬಲಿಯಾಗಿದ್ದೇನೆ, ದಯಾಮಾಡಿ ಬಚಾವ್ ಮಾಡಿ’ – ಸುಂದರ ಗೌಡರ ಕಾಲಿಗೆ ಬಿದ್ದು ಗೋಗರೆದಿದ್ದ ಚಿನ್ನಯ್ಯ

    ‘ಹಣದ ಆಸೆಗೆ ಬಲಿಯಾಗಿದ್ದೇನೆ, ದಯಾಮಾಡಿ ಬಚಾವ್ ಮಾಡಿ’ – ಸುಂದರ ಗೌಡರ ಕಾಲಿಗೆ ಬಿದ್ದು ಗೋಗರೆದಿದ್ದ ಚಿನ್ನಯ್ಯ

    ಮಂಗಳೂರು: ಹಣದ ಆಸೆಗಾಗಿ ಷಡ್ಯಂತ್ರಕ್ಕೆ ಒಳಗಾದೆ ಎಂದು ಚಿನ್ನಯ್ಯ (Chinnaiah) ಎಸ್‌ಐಟಿ (SIT) ಕಚೇರಿಯಲ್ಲೇ ನನ್ನ ಕಾಲಿಗೆ ಬಿದ್ದಿದ್ದ ಎಂದು ನೇತ್ರಾವತಿ ಸ್ನಾನಘಟ್ಟದ ಮಾಹಿತಿ ಕೇಂದ್ರದಲ್ಲಿ ಮೇಲ್ವಿಚಾರಕರಾಗಿದ್ದ ಸುಂದರ ಗೌಡ (Sundar Gowda) ಬಜಿಲ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಾನು 1996ರಿಂದ 2000ದ ತನಕ ನೇತ್ರಾವತಿ ಸ್ನಾನ ಘಟ್ಟದ ಮಾಹಿತಿ ಕೇಂದ್ರದಲ್ಲಿ ಮೇಲ್ವಿಚಾರಕನಾಗಿದ್ದೆ. ಆ ಸಂದರ್ಭದಲ್ಲಿ ಚಿನ್ನಯ್ಯ, ಅಕ್ಕ, ಅಣ್ಣ, ಬಾವ, ಅತ್ತಿಗೆ ಎಲ್ಲರೂ ಶುಚಿತ್ವದ ಕೆಲಸ ಮಾಡುತ್ತಿದ್ದರು. ಶುಚಿತ್ವ ಕೆಲಸಕ್ಕೆಂದೇ ಆತನನ್ನು ನೇಮಕ ಮಾಡಿದ್ದು, ಅದನ್ನೇ ಮಾಡುತ್ತಿದ್ದ. ಚಿನ್ನಯ್ಯ ಹೇಳಿದ್ದು ಎಲ್ಲವೂ ಸತ್ಯಕ್ಕೆ ದೂರವಾದ ವಿಚಾರ. ಕ್ಷೇತ್ರದ ಹೆಸರು ಹಾಳು ಮಾಡಬೇಕು, ಷಡ್ಯಂತ್ರ ಮಾಡಬೇಕು ಎಂಬುದೇ ಆತನ ಉದ್ದೇಶವಾಗಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಎಸ್‌ಐಟಿ ತನಿಖೆಗೆ ವೀರೇಂದ್ರ ಹೆಗಡೆ ಸ್ವಾಗತ: ನಾವು ಯಾವಾಗಲೂ ಒಳ್ಳೆಯದನ್ನೇ ಮಾಡೋದು ಎಂದ ಸಿಎಂ

    ನೇತ್ರಾವತಿ ನದಿಯಲ್ಲಿ ಶವ ತೇಲುತ್ತಾ ಬಂದರೆ ನಾವು ಅದನ್ನ ಹೂತು ಹಾಕುವ ಕೆಲಸ ಮಾಡೋದಿಲ್ಲ. ಏನಿದ್ರೂ ಪೊಲೀಸರಿಗೆ ತಿಳಿಸಿ ಆಸ್ಪತ್ರೆಗೆ ಸಾಗಿಸುತ್ತಿದ್ದೆವು. ಆತ ಮೃತದೇಹವನ್ನ ಕಾರಿಗೆ ಶಿಫ್ಟ್ ಮಾಡುವ, ಪೊಲೀಸರ ಜೊತೆ ಆಸ್ಪತ್ರೆಗೆ ಹೋಗುವ ಕೆಲಸ ಮಾಡುತ್ತಿದ್ದ. ಒಂದೇ ಒಂದು ಶವ ಹೂತಾಕುವ ಕೆಲಸ ಆತ ಮಾಡಿಲ್ಲ. ಎಸ್‌ಐಟಿ ಅಧಿಕಾರಿಗಳು ನನ್ನನ್ನು ಕರೆದಿದ್ದರು. ನಿಮ್ಮ ಮೇಲೆ ಆರೋಪಿ ಚಿನ್ನಯ್ಯ ಅಪವಾದ ಹಾಕಿದ್ದಾನೆ ಎಂದಿದ್ದರು. ಆತ ಶವ ಹೂತಿಟ್ಟ ವಿಚಾರದಲ್ಲಿ ನನ್ನ ಮೇಲೆ ಅಪವಾದ ಹಾಕಿದ್ದ. ಎರಡನೇ ಬಾರಿ ವಿಚಾರಣೆಗೆ ಚಿನ್ನಯ್ಯ ಹಾಗೂ ನನ್ನನ್ನು ಒಟ್ಟಿಗೆ ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ ನಾನು ಷಡ್ಯಂತ್ರಕ್ಕೆ ಬಲಿಯಾಗಿದ್ದೇನೆ, ನಾನು ದುಡ್ಡಿನ ಆಸೆಗೆ ಇದೆಲ್ಲವನ್ನೂ ಮಾಡಿದ್ದು, ನನ್ನದು ತಪ್ಪಾಯ್ತು, ನನ್ನನ್ನು ಬಚಾವ್ ಮಾಡಿ ಎಂದು ಕಾಲಿಗೆ ಬಿದ್ದಿದ್ದ ಎಂದರು. ಇದನ್ನೂ ಓದಿ: ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

    ಎಲ್ಲ ಕೆಲಸ ಚೆನ್ನಾಗಿ ಮಾಡುತ್ತಿದ್ದ, ಆತನಿಗೆ ಎಲ್ಲವೂ ಕ್ಷೇತ್ರದಿಂದ ಕೊಡಲಾಗಿತ್ತು. ಊಟ, ವಸತಿ, ಸಂಬಳ ಎಲ್ಲವೂ ಆತನಿಗೆ ನೀಡಲಾಗುತ್ತಿತ್ತು. ಊರಿಗೆ ಹೋಗುವ ಖರ್ಚನ್ನು ಕೂಡ ಕ್ಷೇತ್ರ ನೀಡುತ್ತಿತ್ತು. ಕ್ಷೇತ್ರವನ್ನು ಮಲಿನ ಮಾಡಬೇಕು, ಪೂಜ್ಯರಿಗೆ ಕಳಂಕ ತರುವ ಉದ್ದೇಶದಿಂದ ಗ್ಯಾಂಗ್ ಮಾಡಿದ ಷಡ್ಯಂತ್ರಕ್ಕೆ ಆತ ಬಲಿಯಾಗಿದ್ದಾನೆ. ಈಗ ಸತ್ಯ ದರ್ಶನ ಹೊರಗೆ ಬರುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: Andhra Pradesh | ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

  • ಧರ್ಮಸ್ಥಳ ಕೇಸ್‌ | ರಾಜ್ಯ ಸರ್ಕಾರವನ್ನೇ ಯಾಮಾರಿಸಿದ ʻಬುರುಡೆʼ ಗ್ಯಾಂಗ್ – ಸುಪ್ರೀಂ ಆದೇಶ ಮುಚ್ಚಿಟ್ಟು ಮಹಾ ಮೋಸ

    ಧರ್ಮಸ್ಥಳ ಕೇಸ್‌ | ರಾಜ್ಯ ಸರ್ಕಾರವನ್ನೇ ಯಾಮಾರಿಸಿದ ʻಬುರುಡೆʼ ಗ್ಯಾಂಗ್ – ಸುಪ್ರೀಂ ಆದೇಶ ಮುಚ್ಚಿಟ್ಟು ಮಹಾ ಮೋಸ

    ಬೆಂಗಳೂರು/ನವದೆಹಲಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ (Dharmasthala Mass Burials Case) ಸಂಬಂಧಿಸಿದಂತೆ ಬುರುಡೆ ಗ್ಯಾಂಗ್‌ನ ಮತ್ತೊಂದು ಮುಖವಾಡ ಕಳಚಿಬಿದ್ದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದ ಗ್ಯಾಂಗ್‌, ತಮಗಾದ ಹಿನ್ನಡೆಯನ್ನು ಮುಚ್ಚಿಟ್ಟು ದಕ್ಷಿಣ ಕನ್ನಡ (Dakshina Kannada) ಎಸ್ಪಿಗೆ ದೂರು ನೀಡಿದ್ದ ಸತ್ಯ ಈಗ ಬಟಾಬಯಲಾಗಿದೆ.

    ಸುಪ್ರೀಂ (Supreme Court) ಆದೇಶವನ್ನ ಮುಚ್ಚಿಚ್ಚು ರಾಜ್ಯ ಸರ್ಕಾರವನ್ನೇ (Karnataka Government) ಈ ಬುರುಡೆ ಗ್ಯಾಂಗ್‌ ಯಾಮಾರಿಸಿತ್ತು. ಅರ್ಜಿ ವಜಾಗೊಂಡಿದ್ದರೂ ಎಸ್‌ಐಟಿ ರಚನೆ ಮಾಡಿಸಿಕೊಂಡು ತನಿಖೆ ಮಾಡಿಸಿತ್ತು ಅನ್ನೋ ರಹಸ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗಡಿಪಾರು ಆದೇಶ ಬಳಿಕ ತಿಮರೋಡಿ ಅಜ್ಞಾತ – ಇತ್ತ ಚಿನ್ನಯ್ಯನ 15, 16ನೇ ವಿಡಿಯೋ ರಿಲೀಸ್

    ಸುಪ್ರೀಂ ಕೋರ್ಟ್ ಆದೇಶ ಮುಚ್ಚಿಟ್ಟು ಮೋಸ
    ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡುವುದಕ್ಕೆ ಮುನ್ನವೇ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್‌ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದ್ರೆ ಮೇ 5ರಂದು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ನ್ಯಾ.ಸತೀಶ್ ಚಂದ್ರ ನೇತೃತ್ವದ ಪೀಠ ಅರ್ಜಿ ವಜಾ ಮಾಡಿತ್ತು. ಆದ್ರೂ ಇದನ್ನ ಮುಚ್ಚಿಟ್ಟು ಬುರುಡೆ ಗ್ಯಾಂಗ್‌ ಬೆಳ್ತಂಗಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಎಸ್ಪಿಗೂ ದೂರು ನೀಡಲಾಗಿತ್ತು. ಇದನ್ನೂ ಓದಿ: ತಿಮರೋಡಿ ಬಳಿಗೆ ನಮ್ಮನ್ನ ಕರೆದುಕೊಂಡು ಹೋಗಿದ್ದೇ ಸೌಜನ್ಯ ಮಾವ: ಚಿನ್ನಯ್ಯನ 2ನೇ ಪತ್ನಿ ಬಾಂಬ್‌

    ಎಸ್‌ಐಟಿ ರಚನೆ ಮಾಡುವಂತೆ ಅರ್ಜಿ ಸಲ್ಲಿಸಿದ್ದ ಗ್ಯಾಂಗ್‌
    ಕಳೆದ ಏಪ್ರಿಲ್‌ 30 ರಂದು ಧರ್ಮಸ್ಥಳ ಪ್ರಕರಣದ ಕುರಿತು ಎಸ್‌ಐಟಿ ರಚನೆ ಮಾಡುವಂತೆ ಒತ್ತಾಯಿಸಿ ಬುರುಡೆ ಗ್ಯಾಂಗ್‌ ಅರ್ಜಿ ಸಲ್ಲಿಕೆ ಮಾಡಿತ್ತು. ಆದ್ರೆ ಮೇ 5ರಂದೇ ಸುಪ್ರೀಂ ಕೋರ್ಟ್‌ ಬುರುಡೆ ಗ್ಯಾಂಗ್‌ಗೆ ಛೀಮಾರಿ ಹಾಕಿ ಅರ್ಜಿ ವಜಾಗೊಳಿಸಿತ್ತು. ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ, ವೈಯಕ್ತಿಕ ಹಿತಾಸಕ್ತಿ ಕಾಣಿಸುತ್ತಿದೆ. ಇದು ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್ ಎಂದು ಬುರುಡೆ ಗ್ಯಾಂಗ್‌ಗೆ ತಪರಾಕಿ ಹಾಕಿತ್ತು. ನಾಚಿಕೆ ಮಾನಾ ಮರ್ಯಾದೆ ಎಲ್ಲವನ್ನೂ ಬಿಟ್ಟು ಬಂದು ದೂರು ನೀಡಿದ್ದೀರಿ ಎಂದು ಗ್ಯಾಂಗನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಸಾರಾಸಗಟಾಗಿ ಅರ್ಜಿಯನ್ನ ತಿರಸ್ಕರಿಸಿತ್ತು.

    ಇದೆಲ್ಲವನ್ನೂ ಮುಚ್ಚಿಟ್ಟಿದ್ದ ಬುರುಡೆ ಗ್ಯಾಂಗ್‌ ಬೆಳ್ತಂಗಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಬಳಿಕ ಎಸ್ಪಿಗೂ ದೂರು ನೀಡಿ ಪ್ರಕರಣ ಮುನ್ನೆಲೆಗೆ ತಂದಿದೆ ಅನ್ನೋದು ಈಗ ಬಯಲಾಗಿದೆ. ಇದನ್ನೂ ಓದಿ: ಚಿನ್ನಯ್ಯನ ಜೊತೆ ಮಾತನಾಡಿದ್ದ ಪಾರ್ಟ್-2 ವಿಡಿಯೋ ರಿಲೀಸ್ – ಆರೋಪದಿಂದ ಪಾರಾಗಲು ಬುರುಡೆ ಗ್ಯಾಂಗ್‌ ಪ್ಲ್ಯಾನ್‌?

  • ಧರ್ಮಸ್ಥಳ ಬುರುಡೆ ಪ್ರಕರಣ – ಇಂದು ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾನೆ ಚಿನ್ನಯ್ಯ

    ಧರ್ಮಸ್ಥಳ ಬುರುಡೆ ಪ್ರಕರಣ – ಇಂದು ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾನೆ ಚಿನ್ನಯ್ಯ

    – ಧರ್ಮಸ್ಥಳ ಕೇಸ್ ಎಸ್‌ಐಟಿ ಬದಲು ಸಿಐಡಿ ತನಿಖೆ?

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ (Dharmasthala Mass Burials) ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸರಣಿ ವೀಡಿಯೋಗಳನ್ನು ಬಿಡುಗಡೆ ಮಾಡುತ್ತಿರುವುದರ ನಡುವೆ, ಬುರುಡೆ ಚಿನ್ನಯ್ಯನನ್ನು (Mask Man Chinnaiah) ಇಂದು ಮತ್ತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್‌ಐಟಿ (SIT) ಹಾಜರುಪಡಿಸಲಿದೆ. ಈ ನಡುವೆ ಮಹೇಶ್ ಶೆಟ್ಟಿ ತಿಮರೋಡಿಗೆ ಪೊಲೀಸರು ಮೂರನೇ ನೋಟಿಸ್ ಸರ್ವ್ ಮಾಡಲು ಸಿದ್ಧತೆ ನಡೆಸಿದ್ದಾರೆ. ನಿರೀಕ್ಷಣಾ ಜಾಮೀನಿಗಾಗಿ ತಿಮರೋಡಿ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

    ಧರ್ಮಸ್ಥಳದ ಬುರುಡೆ ಗ್ಯಾಂಗ್‌ನ ಎಸ್‌ಐಟಿ ತನಿಖೆ ಸಾವಧಾನವಾಗಿ ಸಾಗಿದೆ. ಪಿನ್ ಟು ಪಿನ್ ಮಾಹಿತಿಗಳನ್ನು ಕಲೆ ಹಾಕುತ್ತಿರುವ ಪೊಲೀಸರು, ಬುರುಡೆ ಚಿನ್ನಯ್ಯನನ್ನು ಮತ್ತೆ ಕೋರ್ಟ್‌ಗೆ ಇಂದು ಹಾಜರುಪಡಿಸಲಿದ್ದಾರೆ. ಹೆಚ್ಚುವರಿ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸುವ ಕಾರ್ಯ ನಡೆಯಲಿದೆ. ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನನ್ನು ಈಗಾಗಲೇ ಒಂದು ಬಾರಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಕರೆ ತಂದಿದ್ದು, ಇಂದು ಹೇಳಿಕೆ ದಾಖಲಿಸಲು ನ್ಯಾಯಾಧೀಶರು ಅನುಮತಿ ನೀಡಿದ್ದರು. ಹೀಗಾಗಿ ಮತ್ತೆ ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ನನ್ನು ಕರೆ ತಂದು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಇದನ್ನೂ ಓದಿ: ಚಿನ್ನದ ಮಾಂಗಲ್ಯ ಸರದ ಆಸೆಗೆ ಮಾವನ ಮಗಳ ಕೊಲೆ – ಸತ್ಯ ಹೊರಬರುತ್ತಿದ್ದಂತೆ ಆರೋಪಿ ಆತ್ಮಹತ್ಯೆ

    ಇನ್ನು ಬುರುಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಬಂಗ್ಲೆಗುಡ್ಡ ತಲೆಬುರೆಡೆ, ಮೂಳೆಗಳು ಪತ್ತೆ ಕೇಸ್ ಎಸ್‌ಐಟಿ ತನಿಖೆ ಬದಲು ಸಿಐಡಿ ತನಿಖೆಗೆ ಹಸ್ತಾಂತರಿಸಲು ಸರ್ಕಾರ ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಇದೇ ಗುರುವಾರ ರಾಜ್ಯ ಸರ್ಕಾರದಿಂದ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಶವಗಳ ಹೂತಿಟ್ಟ ಪ್ರಕರಣಗಳು ಮಾತ್ರ ಎಸ್‌ಐಟಿ ತನಿಖೆ ವ್ಯಾಪ್ತಿಯಲ್ಲಿ ಇರಲಿದೆ. ಷಡ್ಯಂತ್ರ ನಡೆದಿದೆ ಎಂದು ಕ್ರಿಮಿನಲ್ ಪಿತೂರಿ ನಡೆದಿರುವ ಬಗ್ಗೆ ಸರ್ಕಾರಕ್ಕೆ ಮೌಖಿಕ ವರದಿ ಕೊಟ್ಟಿದೆ ಎನ್ನಲಾಗಿದೆ. ಇನ್ನು ಎಸ್‌ಐಟಿ ಮಾಹಿತಿ ಮೇರೆಗೆ ಉಳಿದ ತನಿಖೆಯನ್ನ ಸಿಐಡಿಗೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ವಿಚಾರಣೆಗೆ ಹಾಜರಾಗದ ವಿಜಯಲಕ್ಷ್ಮಿ – ಸಿ ರಿಪೋರ್ಟ್‌ ಸಲ್ಲಿಕೆಗೆ ಪೊಲೀಸರ ಚಿಂತನೆ

    ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ತಪಾಸಣೆ ನಡೆಸಿದಾಗ ಪೊಲೀಸರು ತಲ್ವಾರ್ ಬಂದೂಕು ಸೇರಿದಂತೆ ಹಲವಾರು ವಸ್ತುಗಳು ವಶಕ್ಕೆ ಪಡೆದಿದ್ದರು. ಈ ವಿಚಾರಣೆಗೆ ಈಗಾಗಲೇ ಎರಡು ಬಾರಿ ನೋಟಿಸನ್ನು ಕೊಡಲಾಗಿದೆ. ಎರಡು ನೋಟಿಸ್‌ಗೆ ಕ್ಯಾರೇ ಎನ್ನದ ತಿಮರೋಡಿ ಬೇಲ್‌ಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ನಡುವೆ ಪೊಲೀಸರು 3ನೇ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮೂರನೇ ನೋಟಿಸ್‌ಗೆ ಉತ್ತರಿಸದಿದ್ದರೆ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarody) ಮತ್ತೆ ಬಂಧನವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – 9 ಬಾರಿ ಚಾಕು ಇರಿದು ಲಿವ್ ಇನ್ ಗೆಳತಿಯ ಕೊಂದ ಪ್ರಿಯಕರ

    ಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿಯ ವಿಚಾರಣೆ ನಡೆದಿಲ್ಲ. ಬುರುಡೆ ಗ್ಯಾಂಗ್‌ನಲ್ಲಿ ತಾನಿಲ್ಲ ಎಂದು ಬಿಂಬಿಸಲು ಹೊರಟಿರುವ ಮಹೇಶ್ ಶೆಟ್ಟಿ ಈಗಾಗಲೇ ಸಾಲು ಸಾಲು ವೀಡಿಯೋಗಳನ್ನು ಹರಿಬಿಟ್ಟಿದ್ದಾರೆ.‌ ಇದನ್ನೂ ಓದಿ: ಧಾರವಾಡ | ಯೂಟ್ಯೂಬರ್‌ ಮುಕಳೆಪ್ಪನ ಪತ್ನಿ ಪೊಲೀಸರ ವಶಕ್ಕೆ – ಶಕ್ತಿ ಸದನ ಕೇಂದ್ರಕ್ಕೆ ರವಾನೆ

  • ತಿಮರೋಡಿ ಬಳಿಗೆ ನಮ್ಮನ್ನ ಕರೆದುಕೊಂಡು ಹೋಗಿದ್ದೇ ಸೌಜನ್ಯ ಮಾವ: ಚಿನ್ನಯ್ಯನ 2ನೇ ಪತ್ನಿ ಬಾಂಬ್‌

    ತಿಮರೋಡಿ ಬಳಿಗೆ ನಮ್ಮನ್ನ ಕರೆದುಕೊಂಡು ಹೋಗಿದ್ದೇ ಸೌಜನ್ಯ ಮಾವ: ಚಿನ್ನಯ್ಯನ 2ನೇ ಪತ್ನಿ ಬಾಂಬ್‌

    – ಮುಂದೆ ತಾನಾಸಿ, ಚಿನ್ನಯ್ಯ ಅಕ್ಕನ ವಿಡಿಯೋ ಕೂಡ ವೈರಲ್ ಮಾಡ್ತಾರೆ; ಕಳವಳ

    ಚಾಮರಾಜನಗರ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ಆರಂಭದಿಂದಲೂ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಶುಕ್ರವಾರ (ಸೆ.19) ಮಹೇಶ್‌ಶೆಟ್ಟಿ ತಿಮರೋಡಿ ಆರೋಪಿ ಚಿನ್ನಯ್ಯನ ಜೊತೆ ಮಾತನಾಡಿದ್ದ ಒಂದು ವರ್ಷದ ಹಿಂದಿನ ವಿಡಿಯೋವೊಂದು ರಿಲೀಸ್‌ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ಚಿನ್ನಯ್ಯನ 2ನೇ ಪತ್ನಿ ಹೊಸ ಬಾಂಬ್‌ ಸಿಡಿಸಿದ್ದಾರೆ. ವಿಠಲ ಗೌಡನೇ ನಮ್ಮನ್ನ ತಿಮರೋಡಿ (Mahesh Shetty Thimarody) ಮನೆಗೆ ಕರೆದುಕೊಂಡು ಹೋಗಿದ್ದು ಅಂತ ಹೇಳಿದ್ದಾರೆ.

    Dharmasthala Chinnaiah

    ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ 2ನೇ ಪತ್ನಿ ಮಲ್ಲಿಕಾ, ವಿಠಲ ಗೌಡನೇ (Vittal Gowda) ನಮ್ಮನ್ನ ತಿಮರೋಡಿ ಬಳಿ ಕರೆದುಕೊಂಡು ಹೋಗಿದ್ದು. ನಾನು ಹೋದಾಗ ತಿಮರೋಡಿ ಮನೆ ಇದು ಅಂತ ಗೊತ್ತಿರಲಿಲ್ಲ. ಸ್ವಲ್ಪ ಕೆಲಸ ಉಂಟು ಅಂತ ವಿಠಲ ಕರೆದುಕೊಂಡ ಹೋದ. ಬುರುಡೆಯನ್ನು ತಮಿಳುನಾಡು, ಕೇರಳ, ಬೆಂಗಳೂರು, ದೆಹಲಿ ಅಂತ ಹೇಳ್ತಿದ್ದರು ಅಂತ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವರ್ಷದ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಮಾತುಕತೆ – ಸ್ಫೋಟಕ ವಿಡಿಯೋ ರಿಲೀಸ್‌

    ಸೌಜನ್ಯ ಮಾವ ಬುರುಡೆ ಎತ್ತಿಕೊಂಡು ಗಿರೀಶ್ ಮಟ್ಟಣ್ಣನವರ್ ಮನೆಯಲ್ಲಿ ಮಡಗಿದ್ದರಂತೆ. ತಿಮರೋಡಿ ಆವತ್ತು ಕೆಲಸದವರ ರೀತಿ ಇದ್ದರು. ಛೆಂಬರ್ ಕೆಲಸವಿದೆ ಬನ್ನಿ ಅಂತಾ ಕರೆದುಕೊಂಡು ಹೋಗಿ ತಿಮರೋಡಿ ಮನೆಯಲ್ಲಿ ಬಿಟ್ಟರು. ಅಲ್ಲಿ ಟೀ ಕುಡಿದ್ವಿ. ಮದ್ವೆ ಆಗಿ ಎಷ್ಟು ವರ್ಷ ಆಯ್ತಮ್ಮಾ ಅಂತ ಕೇಳಿದ್ರು, 4 ವರ್ಷ ಆಯ್ತು ಅಂತ ಹೇಳಿದ್ದೆ. ಒಟ್ಟಿನಲ್ಲಿ ಈ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವುದೇ ಈ ಗ್ಯಾಂಗ್ ಉದ್ದೇಶವಾಗಿತ್ತು. ಇದೀಗ ನಮ್ಮ ವಿಡಿಯೋ ವೈರಲ್ ಮಾಡಿದ್ದಾರೆ. ಮುಂದೆ ತಾನಾಸಿ ಹಾಗೂ ಚಿನ್ನಯ್ಯ (Chinnaiah) ಅಕ್ಕನ ವಿಡಿಯೋ ಕೂಡ ವೈರಲ್ ಮಾಡ್ತಾರೆ. ನನ್ನ ಗಂಡನನ್ನು ಈ ಪ್ರಕರಣದಲ್ಲಿ ಸಿಕ್ಕಿಸುವ ಪ್ಲ್ಯಾನ್‌ ಮಾಡಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ ಮಲ್ಲಿಕಾ.

    ನಾನು ಮಾತನಾಡದಂತೆ ಎಸ್‌ಐಟಿ ಅಧಿಕಾರಿಗಳು ಸೂಚಿಸಿದ್ದಾರೆ. ನನ್ನ ಗಂಡ ಚಿನ್ನಯ್ಯನನ್ನು ನೋಡಲೂ ಹೋಗುವುದಿಲ್ಲ. ಅವರು ಮೊದಲೇ ನೀನೂ ಬರಬಾರದು ಅಂತ ಹೇಳಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನಯ್ಯನ ಜೊತೆ ಮಾತನಾಡಿದ್ದ ಪಾರ್ಟ್-2 ವಿಡಿಯೋ ರಿಲೀಸ್ – ಆರೋಪದಿಂದ ಪಾರಾಗಲು ಬುರುಡೆ ಗ್ಯಾಂಗ್‌ ಪ್ಲ್ಯಾನ್‌?

  • ವರ್ಷದ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಮಾತುಕತೆ – ಸ್ಫೋಟಕ ವಿಡಿಯೋ ರಿಲೀಸ್‌

    ವರ್ಷದ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಮಾತುಕತೆ – ಸ್ಫೋಟಕ ವಿಡಿಯೋ ರಿಲೀಸ್‌

    – ಬುರುಡೆ ಷಡ್ಯಂತ್ರದ ಹಿಂದಿನ ರಹಸ್ಯ ಬಯಲಾಯ್ತಾ..?
    – 2 ವರ್ಷಗಳ ಹಿಂದೆಯೇ ಧರ್ಮಸ್ಥಳಕ್ಕೆ ಬಂದಿದ್ದ ಚಿನ್ನಯ್ಯ

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರೋಪಿ ಚಿನ್ನಯ್ಯ ಜೊತೆ ಮಹೇಶ್‌ಶೆಟ್ಟಿ ತಿಮರೋಡಿ (Mahesh Shetty thimarody) ಭೇಟಿಯಾದ ವಿಡಿಯೋ ಬಹಿರಂಗಗೊಂಡಿದೆ.

    ತಿಮರೋಡಿ ಮನೆಯಲ್ಲಿ ವರ್ಷದ ಹಿಂದೆ ಭೇಟಿಯಾಗಿದ್ದ ವಿಡಿಯೋ ಇದಾಗಿದೆ. ತಿಮರೋಡಿ ಭೇಟಿ ವೇಳೆ ಹೆಣಗಳ ಹೂತ ಬಗ್ಗೆ ಚಿನ್ನಯ್ಯ (Chinnaiah) ಹೇಳಿದ್ದಾನೆ. ಗುಂಡಿ ತೆಗೆದು ಹೆಣ ಹೂಳುತ್ತಿದ್ದೆ. ನೇತ್ರಾವತಿ ಸ್ನಾನಘಟ್ಟ ಸರ್ಕಾರಿ ಜಾಗ ಎಂದವರಿಗೆ ರಕ್ತ ಬರೋ ಹಾಗೆ ನನ್ನ ಹತ್ತಿರ ಹೊಡೆಸುತ್ತಿದ್ದರು. ಒಂದು ಹೆಣವನ್ನು ಹೂಳುವಾಗ ಡಾಕ್ಟರ್ ಬರದೇ ಕಂಪೌಂಡರ್‌ ಪೋಸ್ಟ್ ಮಾರ್ಟಮ್ ಮಾಡಿದ್ದ ಎಂದಿದ್ದಾನೆ. ಇದನ್ನೂ ಓದಿ: ದಿಶಾ ಪಟಾನಿ ಮನೆ ಮುಂದೆ ಗುಂಡಿನ ದಾಳಿ – ಆರೋಪಿಗೆ ಗುಂಡೇಟು ನೀಡಿ ಬಂಧಿಸಿದ ಪೊಲೀಸರು

    ಸೌಜನ್ಯ ಅತ್ಯಾಚಾರ ಕೊಲೆ ವಿಚಾರ ನಾವು ಬೇರೆ ಕಡೆ ಮಾತನಾಡುತ್ತೇವೆ ಅಂತಾ ನಮ್ಮನ್ನು ಜಾಗ ಖಾಲಿ ಮಾಡಿಸಿದ್ರು. ಅಲ್ಲದೇ ಧರ್ಮಸ್ಥಳದವರು 3.5 ಲಕ್ಷ ಹಣ ಕೊಡಬೇಕಿತ್ತು. 500ರ ನೋಟಿನ 5 ಕಟ್ಟು ತಂದು ಅದರಲ್ಲಿ ಸ್ವಲ್ಪ ಮಾತ್ರ ಕೊಟ್ಟು ಜಾಗ ಖಾಲಿ ಮಾಡಿಸಿದ್ರು. ತುಂಬಾ ಅನ್ಯಾಯ ಮಾಡಿದ್ರು ಅಂತಾ ತಿಮರೋಡಿ ಬಳಿ ಚಿನ್ನಯ್ಯ ಹೇಳಿಕೊಂಡಿದ್ದ. 2023ರ ಆಗಸ್ಟ್‌ನಲ್ಲಿ ಇಷ್ಟೆಲ್ಲ ಮಾತುಕತೆ ನಡೆದಿತ್ತು ಎಂಬ ಸತ್ಯವನ್ನು ವಿಡಿಯೋ ಬಯಲು ಮಾಡಿದೆ.

    2 ವರ್ಷಗಳ ಹಿಂದೆಯೇ ಧರ್ಮಸ್ಥಳಕ್ಕೆ ಬಂದಿದ್ದ ಚಿನ್ನಯ್ಯ
    ಇನ್ನೂ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಗೆ ನೀಡಲು ಬಂದಿದ್ದ ಚಿನ್ನಯ್ಯನ ಬಳಿ ಸ್ಫೋಟಕ ಮಾಹಿತಿ ಬಹಿರಂಗ ಆಗಿದೆ. ಚಿನ್ನಯ್ಯ ಧರ್ಮಸ್ಥಳಕ್ಕೆ ತಿಂಗಳ ಹಿಂದಷ್ಟೇ ಬಂದಿಲ್ಲ. ಎರಡು ವರ್ಷದ ಹಿಂದೆಯೇ ಬಂದಿದ್ದ ಎನ್ನಲಾಗಿದೆ. ಇದಕ್ಕೆ ನಿರಂತರವಾಗಿ ಎರಡು ವರ್ಷದಿಂದ ಪ್ಲಾನ್ ನಡೆಸಲಾಗಿತ್ತು ಅಂತ ಸ್ಪಷ್ಟವಾದ ಮಾಹಿತಿ ಸಿಕ್ಕಿದೆ. ಚಿನ್ನಯ್ಯ ಎರಡು ವರ್ಷದ ಹಿಂದೆ ಬಂದಿದ್ದಾನೆ ಅನ್ನೋದಕ್ಕೆ ಟೆಕ್ನಿಕಲ್ ಎವಿಡೆನ್ಸ್ ಜೊತೆಗೆ ಚಿನ್ನಯ್ಯ ತಪ್ಪೊಪ್ಪಿಗೆಯೂ ಸಹ ಪ್ರಕರಣಕ್ಕೆ ಬಲವಾದ ಸಾಕ್ಷ್ಯ ಸಿಕ್ಕಿದೆ.

    ಅದೇ ಗ್ಯಾಂಗ್ ಜೊತೆಯಲ್ಲಿಯೇ ವಾಸವಿದ್ದ ಅನ್ನೋದು ತನಿಖೆಯಲ್ಲಿ ಬಹಿರಂಗ ಆಗಿದೆ. ಇತ್ತ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ತಿಮರೋಡಿ ಮನೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಸಿಕ್ಕ ಹಿನ್ನೆಲೆ ಬೆಳ್ತಂಗಡಿ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಮಹೇಶ್ ಶೆಟ್ಟಿ ಮನೆಯಲ್ಲಿ ಇಲ್ಲದ ಕಾರಣ ಉಜಿರೆಯ ಮನೆ ಗೋಡೆಗೆ ನೋಟೀಸ್ ಅಂಟಿಸಿ, ಸೆಪ್ಟೆಂಬರ್ 21ಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಬಂಗ್ಲೆಗುಡ್ಡ ರಹಸ್ಯ | 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕೊಡಗಿನ ವ್ಯಕ್ತಿಯ ಐಡಿ ಕಾರ್ಡ್‌, ವಾಕಿಂಗ್‌ ಸ್ಟಿಕ್‌ ಪತ್ತೆ

    ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಲೈಸೆನ್ಸ್ ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನು ಬೆಳ್ತಂಗಡಿ ಪೊಲೀಸರು ಪರಿಶೀಲನೆ ಮಾಡ್ತಿದ್ದಾರೆ. ಲೈಸೆನ್ಸ್ ಇಲ್ಲ ಎಂಬುದು ಖಾತ್ರಿಯಾದ್ರೆ ತಿಮರೋಡಿ ಬಂಧಿಸುವ ಸಾಧ್ಯತೆ ಇದೆ. ಈ ಮಧ್ಯೆ ಎಸ್‌ಐಟಿ ಬುಲಾವ್ ಮೇರೆಗೆ ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ವಕೀಲ ಕೇಶವ ಗೌಡ ಬೆಳಾಲು ವಿಚಾರಣೆಗೆ ಹಾಜರಾಗಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಪರ ಹಾಗೂ ಬುರುಡೆ ಕೇಸ್ ಬಗ್ಗೆ ಈ ಇಬ್ಬರು ಹಲವು ಹೇಳಿಕೆ ಕೊಟ್ಟಿದ್ದರು. ಹೀಗಾಗಿ ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಂಗ್ಲೆಗುಡ್ಡದಲ್ಲಿ ಸಿಕ್ಕ ಐದು ತಲೆ ಬುರುಡೆ, ಮೂಳೆಗಳು ಪುರುಷರದ್ದು – ಇಂದು ಎರಡನೇ ದಿನದ ಶೋಧ ಕಾರ್ಯ

  • ಧರ್ಮಸ್ಥಳ ಕೇಸ್ | ಇಂದು ಚಿನ್ನಯ್ಯನನ್ನು ಬೆಳ್ತಂಗಡಿ ಕೋರ್ಟ್‍ಗೆ ಹಾಜರುಪಡಿಸಲಿರುವ ಎಸ್‍ಐಟಿ

    ಧರ್ಮಸ್ಥಳ ಕೇಸ್ | ಇಂದು ಚಿನ್ನಯ್ಯನನ್ನು ಬೆಳ್ತಂಗಡಿ ಕೋರ್ಟ್‍ಗೆ ಹಾಜರುಪಡಿಸಲಿರುವ ಎಸ್‍ಐಟಿ

    ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ಆರೋಪಿ ಚಿನ್ನಯ್ಯನನ್ನು ಇಂದು (ಸೆ.18) ಬೆಳ್ತಂಗಡಿ ಕೋರ್ಟ್‍ಗೆ (Belthangady Court) ಪೊಲೀಸರು ಹಾಜರುಪಡಿಸಲಿದ್ದಾರೆ.

    ನ್ಯಾಯಾಧೀಶರ ಮುಂದೆ ಚಿನ್ನಯ್ಯ ಮತ್ತಷ್ಟು ಹೇಳಿಕೆ ನೀಡಲಿದ್ದಾನೆ. ಈ ಹಿಂದೆ ನೀಡಿದ್ದ ಹೇಳಿಕೆಗೆ ಹೆಚ್ಚುವರಿ ಹೇಳಿಕೆ ಸೇರ್ಪಡೆ ಪ್ರಕ್ರಿಯೆ ನಡೆಯಲಿದೆ. ಸದ್ಯ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನನ್ನು ಸೆ.6ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮತ್ತೆ ಅಸ್ಥಿಪಂಜರ ಸದ್ದು – ಬಂಗ್ಲೆಗುಡ್ಡದಲ್ಲಿ 5 ತಲೆಬುರುಡೆ, 113 ಮೂಳೆಗಳು ಪತ್ತೆ

    ಶಿವಮೊಗ್ಗ ಜೈಲಿನಿಂದ ಚಿನ್ನಯ್ಯನನ್ನು ಎಸ್‍ಐಟಿ ಅಧಿಕಾರಿಗಳು ಬೆಳಗ್ಗೆ 11:30ಕ್ಕೆ ಬೆಳ್ತಂಗಡಿ ಕೋರ್ಟ್‍ಗೆ ಹಾಜರುಪಡಿಸುವ ಸಾಧ್ಯತೆ ಇದೆ.

    ಎಸ್‌ಐಟಿ ತನಿಖೆಗೆ ಟ್ವಿಸ್ಟ್‌
    ಧರ್ಮಸ್ಥಳದ ಬುರುಡೆ ಕೇಸ್‌ನಲ್ಲಿ ಸೌಜನ್ಯ ಮಾವ ವಿಠಲಗೌಡ ಬಂಗ್ಲೆಗುಡ್ಡದಲ್ಲಿ (Banglegudde) ರಾಶಿರಾಶಿ ಕಳೇಬರ ಸಿಗುತ್ತವೆ ಎಂಬ ವೀಡಿಯೋ ಹೇಳಿಕೆ ಬೆನ್ನಲ್ಲೇ ಎಸ್‌ಐಟಿ (SIT) ತನಿಖೆಗೆ ಟ್ವಿಸ್ಟ್ ಸಿಕ್ಕಿದೆ.

    ನೇತ್ರಾವತಿ ನದಿ (Nethravathi River) ದಡದ ಬಂಗ್ಲೆಗುಡ್ಡಕ್ಕೆ ಎಸ್‌ಐಟಿ ಎಂಟ್ರಿ ಕೊಟ್ಟಿದೆ. ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸುಮಾರು 7 ಗಂಟೆಗಳ ಕಾಲ ಮಹಜರು ನಡೆಯಿತು. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಸೋಕೋ ಟೀಮ್, ಕಂದಾಯ ಇಲಾಖೆ, ಪಂಚಾಯತ್ ಸಿಬ್ಬಂದಿ ಮಹಜರಿನಲ್ಲಿ ಭಾಗಿಯಾಗಿದ್ದರು. 13 ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದಲ್ಲಿ 5 ಕಡೆ ಮಹಜರು ನಡೆದಿದೆ. ಈ ವೇಳೆ 5 ತಲೆಬುರಡೆ, 113 ಮೂಳೆಗಳು ಸಿಕ್ಕಿವೆ ಎನ್ನಲಾಗಿದೆ. ಇದನ್ನೂ ಓದಿ: ತಿಮರೋಡಿ ವಿರುದ್ಧ ಎಸ್‌ಐಟಿಯಿಂದ ಆರ್ಮ್ಸ್ ಆಕ್ಟ್ ಅಡಿ ಕೇಸ್‌ ದಾಖಲು