ಬಾಂಗ್ಲಾದೇಶ: ಇಲ್ಲಿನ ರಾಜಧಾನಿಯಲ್ಲಿ ಹಿಂದೂಗಳನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಿದಕ್ಕೆ ಬಂಧಿಸಲಾಗಿದ್ದ ಇಸ್ಕಾನ್ ಸಂಸ್ಥೆಯ ಮಾಜಿ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ (Chinmoy Krishna Das) ಅವರಿಗೆ ಬಾಂಗ್ಲಾದ ಚಿತ್ತಗಾಂಗ್ ಹೈಕೋರ್ಟ್ (Chittagong HighCourt) 5 ತಿಂಗಳ ಬಳಿಕ ಜಾಮೀನು ನೀಡಿದೆ.
ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಯಾರು?
ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರು ಹಿಂದೂ ಸಂಘಟನೆಯಾದ ಇಸ್ಕಾನ್ ಸಂಸ್ಥಾಪಕರಲ್ಲಿ ಒಬ್ಬರು ಮತ್ತು ಬಾಂಗ್ಲಾದೇಶದ (Bangladesh) ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲರಾಗಿದ್ದರು. ಸನಾತನ ಜಾಗರಣ್ ಮಂಚ್, ಬಾಂಗ್ಲಾದೇಶ ಸನಾತನ ಜಾಗರಣ ಮಂಚ್ ವಕ್ತಾರರು ಮತ್ತು ಪುಂಡರೀಕ್ ಧಾಮದ ಪ್ರಾಂಶುಪಾಲರಾಗಿದ್ದರು. ಇದನ್ನೂ ಓದಿ: ಪಾಕ್ ವಿರುದ್ಧ ಜಲಯುದ್ಧ – ಚೆನಾಬ್ ನದಿಯ ನೀರಿನ ಮಟ್ಟ ಭಾರೀ ಇಳಿಕೆ
ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಬಗ್ಗೆ ಚಿನ್ಮಯ್ ಕೃಷ್ಣದಾಸ್ ಅವರು ಧ್ವನಿ ಎತ್ತಿದ್ದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿದ ನಂತರ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ನಡೆಯುತ್ತಿತ್ತು. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ತಡೆಯಲು ವಿಫಲವಾಗಿದೆ ಎಂದು ಟೀಕಿಸಿದ್ದರು.
ಢಾಕಾ: ಬಾಂಗ್ಲಾದೇಶದಲ್ಲಿ ಇಸ್ಕಾನ್ (ISKCON) ಮೇಲಿನ ಸರ್ಕಾರದ ಪ್ರಹಾರ ಮುಂದುವರಿದಿದೆ. ಇತ್ತೀಚೆಗಷ್ಟೇ ಇಸ್ಕಾನ್‌ನ ಮೂವರು ಸನ್ಯಾಸಿಗಳನ್ನು ಬಂಧಿಸಿ, 17 ಮಂದಿಯ ಬ್ಯಾಂಕ್ ಖಾತೆಗಳನ್ನ (Bank Account) ಫ್ರೀಜ್ ಮಾಡಿತ್ತು. ಇದೀಗ ಇಸ್ಕಾನ್‌ನ 50ಕ್ಕೂ ಹೆಚ್ಚು ಸದಸ್ಯರು ಭಾರತಕ್ಕೆ ತೆರಳದಂತೆ ತಡೆಹಿಡಿದಿದೆ ಎಂದು ವರದಿಯಾಗಿದೆ.
ಸುಮಾರು 54 ಇಸ್ಕಾನ್ ಸದಸ್ಯರು ಶನಿವಾರ ತಡರಾತ್ರಿ ಮತ್ತು ಭಾನುವಾರ ಬೆಳಗ್ಗೆ ಬೆನಪೋಲ್ ಗಡಿಭಾಗಕ್ಕೆ ಆಗಮಿಸಿದ್ದರು. ಧಾರ್ಮಿಕ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಭಾರತಕ್ಕೆ ತೆರಳಲು ಗಂಟೆಗಟ್ಟಲೆ ಕಾದು ಕುಳಿತಿದ್ದರು. ಬಳಿಕ ಗಡಿ ಭದ್ರತಾ ಅಧಿಕಾರಿಗಳು ಅವರ ಪ್ರಯಾಣಕ್ಕೆ ಅನುಮತಿಯಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಬಾಂಗ್ಲಾದೇಶವು ಇಸ್ಕಾನ್ ಸಂಘಟನೆಯನ್ನ ಗುರಿಯಾಗಿಸಿಕೊಂಡು ಪ್ರಮುಖರನ್ನ ಬಂಧಿಸುವುದು, ಗಡಿ ದಾಟದಂತೆ ತಡೆಹಿಡಿಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಚಿನ್ಮೊಯ್ ಕೃಷ್ಣ ದಾಸ್ ಬಂಧನ
ಚಿತ್ತೋಗ್ರಾಮ್‌ನ ನ್ಯೂ ಮಾರ್ಕೆಟ್ ಪ್ರದೇಶದಲ್ಲಿ ಹಿಂದೂ ಸಮುದಾಯದ ರ‍್ಯಾಲಿ ಸಂದರ್ಭದಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿ ಕೃಷ್ಣ ದಾಸ್ ಸೇರಿದಂತೆ 19 ಮಂದಿ ವಿರುದ್ಧ ಅ. 30ರಂದು ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಆ ಬಳಿಕ ಕೃಷ್ಣದಾಸ್ ಭೇಟಿಗೆ ತೆರಳಿದ್ದ ಇತರ ಸ್ವಾಮೀಜಿಗಳನ್ನು ಬಂಧಿಸಲಾಗಿತ್ತು.
ಢಾಕಾ: ದೇಶದ್ರೋಹ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಇಸ್ಕಾನ್‌ನ (ISKCON) ಮಾಜಿ ಸದಸ್ಯ ಚಿನ್ಮಯ್ ಕೃಷ್ಣ ದಾಸ್ (Chinmoy Krishna Das) ಅವರನ್ನು ಭೇಟಿಗೆ ತೆರಳಿದ್ದ ಅರ್ಚಕರೊಬ್ಬರನ್ನು ಬಾಂಗ್ಲಾದೇಶದ (Bangladesh) ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಅರ್ಚಕರನ್ನು ಶ್ಯಾಮ್ ದಾಸ್ ಪ್ರಭು (Sri Shyam Das Prabhu) ಎಂದು ಗುರುತಿಸಲಾಗಿದೆ. ಯಾವುದೇ ಅಧಿಕೃತ ವಾರಂಟ್ ಇಲ್ಲದೆ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಇಸ್ಕಾನ್‌ನ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧರಾಮ್ ದಾಸ್ ಅವರು, ಅರ್ಚಕರ ಬಂಧನದ ಕುರಿತು ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬ ಬ್ರಹ್ಮಚಾರಿ ಶ್ರೀ ಶ್ಯಾಮ್ ದಾಸ್ ಪ್ರಭು ಅವರನ್ನು ಇಂದು ಚಟ್ಟೋಗ್ರಾಮ್ ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಬಾಂಗ್ಲಾದೇಶದದಲ್ಲಿ ಇಸ್ಕಾನ್ ಮಾಜಿ ಸದಸ್ಯ ಚಿನ್ಮಯ್ ಕೃಷ್ಣ ದಾಸ್ ಅವರನ್ನು ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಂಧಿಸಲಾಗಿತ್ತು. ಅವರ ಬಂಧನವು ರಾಜಧಾನಿ ಢಾಕಾ ಮತ್ತು ಚಟ್ಟೋಗ್ರಾಮ್ ಸೇರಿದಂತೆ ಬಾಂಗ್ಲಾದೇಶದ ವಿವಿಧ ಸ್ಥಳಗಳಲ್ಲಿ ಹಿಂದೂಗಳ ಪ್ರತಿಭಟನೆಗೆ ಕಾರಣವಾಗಿದೆ.
ಚಿನ್ಮಯ್ ಕೃಷ್ಣ ದಾಸ್ ಅವರನ್ನು ಬಿಡುಗಡೆ ಮಾಡಲು ಒತ್ತಾಯಿಸಿ ನಡೆದ ಪ್ರತಿಭಟನೆ (Protest) ವೇಳೆ ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಇನ್ನೂ ಕೃಷ್ಣದಾಸ್ ಅವರಿಗೆ ಚಟ್ಟೋಗ್ರಾಮ್ ನ್ಯಾಯಾಲಯ ಮಂಗಳವಾರ ಜಾಮೀನು ನಿರಾಕರಿಸಿತ್ತು.
ಢಾಕಾ: ಇಸ್ಕಾನ್‌ನ ಚಿನ್ಮಯ್ ಕೃಷ್ಣ ದಾಸ್ (Chinmoy Krishna Das) ಅವರನ್ನು ಅನ್ಯಾಯವಾಗಿ ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ (Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಇಸ್ಕಾನ್‌ನ ಪ್ರಮುಖ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಬಂಧಿಸಿದ ವಿಚಾರ ಖಂಡಿಸಿ ಶೇಖ್ ಹಸೀನಾ ( Sheikh Hasina) ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಚಿನ್ಮಯ್ ಕೃಷ್ಣರನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 4ನೇ ಬಾರಿ ಜಾರ್ಖಂಡ್ ಸಿಎಂ ಆಗಿ ಹೇಮತ್ ಸೊರೆನ್ ಪ್ರಮಾಣವಚನ – INDIA ನಾಯಕರು ಭಾಗಿ
আওয়ামী লীগ সভানেত্রী বঙ্গবন্ধুকন্যা শেখ হাসিনার বিবৃতিঃ
চট্টগ্রামে একজন আইনজীবীকে হত্যা করা হয়েছে, এই হত্যার তীব্র প্রতিবাদ জানাচ্ছি। এই হত্যাকাণ্ডের সঙ্গে যারা জড়িত তাদেরকে খুঁজে বের করে দ্রুত শাস্তি দিতে হবে। এই ঘটনার মধ্য দিয়ে চরমভাবে মানবাধিকার লঙ্ঘিত হয়েছে। একজন… pic.twitter.com/b7yjlyj9Et
ಟ್ವೀಟ್‌ನಲ್ಲಿ ಏನಿದೆ?
ಸನಾತನ ಧರ್ಮ ಸಮುದಾಯದ ಉನ್ನತ ನಾಯಕನನ್ನು ಅನ್ಯಾಯವಾಗಿ ಬಂಧಿಸಲಾಗಿದೆ. ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಚಿತ್ತಗಾಂಗ್‌ನಲ್ಲಿ ದೇವಾಲಯಗಳನ್ನು ಸುಟ್ಟಿದ್ದಾರೆ. ಈ ಹಿಂದೆ ಅಹ್ಮದೀಯ ಸಮುದಾಯದ ಮಸೀದಿಗಳು, ದೇವಾಲಯ, ಚರ್ಚ್, ಮಠಗಳು ಮತ್ತು ಮನೆಗಳ ಮೇಲೆ ದಾಳಿ ಮಾಡಿ ಎಲ್ಲವನ್ನೂ ಧ್ವಂಸ ಮಾಡಲಾಗಿದೆ. ಎಲ್ಲಾ ಸಮುದಾಯದ ಜನರ ಜೀವನ ಮತ್ತು ಆಸ್ತಿಯ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ
– ಹಲವು ತಿಂಗಳ ಹಿಂದೆಯೇ ಇಸ್ಕಾನ್‌ನ ಎಲ್ಲಾ ಸ್ಥಾನಗಳಿಂದ ಚಿನ್ಮಯ್ ವಜಾ ಎಂದು ಸ್ಪಷ್ಟನೆ
ಢಾಕಾ: ಬಾಂಗ್ಲಾ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಸಂತ ಚಿನ್ಮಯ್ ಕೃಷ್ಣದಾಸ್ ಅವರಿಂದ ಇಸ್ಕಾನ್ ಅಂತರ ಕಾಯ್ದುಕೊಂಡಿದೆ. ಚಿನ್ಮಯ್ ಅವರ ನಡಾವಳಿಗೂ ಇಸ್ಕಾನ್ (ISKCON) ಸಂಸ್ಥೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ತಿಂಗಳ ಆರಂಭದಲ್ಲಿ ಬಂಧಿತರಾದ ಚಿನ್ಮಯ್ ಕೃಷ್ಣದಾಸ್ ಅವರ ಚಟುವಟಿಕೆಗಳಲ್ಲಿ ಇಸ್ಕಾನ್ ಯಾವುದೇ ಜವಾಬ್ದಾರರಲ್ಲ ಎಂದು ಚಾರು ಚಂದ್ರದಾಸ್ ಅವರು ತಿಳಿಸಿದ್ದಾರೆ.
ಹಲವು ತಿಂಗಳ ಹಿಂದೆಯೇ ಪ್ರಬಾರತಕ್ ಶ್ರೀಕೃಷ್ಣ ಮಂದಿರದ ಮುಖ್ಯಸ್ಥ ಗೌರಂಗ್ ದಾಸ್ ಮತ್ತು ಚಿತ್ತಗಾಂಗ್‌ನ ಶ್ರೀ ಪುಂಡರೀಕ್ ಧಾಮದ ಮುಖ್ಯಸ್ಥ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಶಿಸ್ತು ಉಲ್ಲಂಘನೆಯ ಕಾರಣದಿಂದ ಇಸ್ಕಾನ್‌ನ ಎಲ್ಲಾ ಸಾಂಸ್ಥಿಕ ಚಟುವಟಿಕೆಗಳಿಂದ ತೆಗೆದುಹಾಕಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ವಕೀಲ ಸೈಫುಲ್ ಇಸ್ಲಾಂ ಅಲಿಫ್ ಅವರ ಸಾವಿಗೂ ಮತ್ತು ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಧ್ವನಿಯಾಗಿದ್ದ ಇಸ್ಕಾನ್‌ನ ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್
ಇಸ್ಕಾನ್ ಬಾಂಗ್ಲಾದೇಶದಲ್ಲಿ ಎಂದಿಗೂ ಕೋಮು ಅಥವಾ ಸಂಘರ್ಷ ಪೀಡಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಮಾತ್ರ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಇಸ್ಕಾನ್ ಮೇಲೆ ನಿಷೇಧ ಹೇರುವ ಮನವಿಯನ್ನು ಢಾಕಾ ಹೈಕೋರ್ಟ್ ವಜಾಗೊಳಿಸಿದೆ. ಈ ಬೆನ್ನಲ್ಲೇ ಚಾರು ಚಂದ್ರದಾಸ್ ಅವರು ಸ್ಪಷ್ಟನೆ ನೀಡಿದ್ದಾರೆ.
ಅಕ್ಟೋಬರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜದ ಮೇಲೆ ಕೇಸರಿ ಧ್ವಜವನ್ನು ಹಾರಿಸಿದ್ದಕ್ಕಾಗಿ ಎಂಡಿ ಫಿರೋಜ್ ಖಾನ್ ಮತ್ತು ಇತರ 18 ಜನರ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಚಿನ್ಮಯ್ ಕೃಷ್ಣದಾಸ್ ಅವರನ್ನು ಸೋಮವಾರ ಬಂಧಿಸಲಾಗಿತ್ತು.
ಢಾಕಾ/ನವದೆಹಲಿ: ಬಾಂಗ್ಲಾದೇಶದ ಇಸ್ಲಾಂ ಮೂಲಭೂತವಾದಿ ಸರ್ಕಾರದ ಹಿಂದೂ (Hindu) ದ್ವೇಷ ರಾಜಕೀಯ ಮಿತಿ ಮೀರುತ್ತಿದೆ. ಹಿಂದೂ ಪ್ರಜೆಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದೆ.
ಬಾಂಗ್ಲಾ ರಾಷ್ಟ್ರಧ್ವಜಕ್ಕೆ (Bangladesh National Flag) ಅಪಮಾನ ಎಸಗಿದ ಆರೋಪದ ಮೇಲೆ ಮಂಗಳವಾರ ಇಸ್ಕಾನ್ (ISKCON) ಸಂತ ಚಿನ್ಮಯ್ ಕೃಷ್ಣದಾಸ್‌ರನ್ನು (Chinmoy Krishna Das) ಬಂಧಿಸಿದ್ದ ಪೊಲೀಸರು ದೇಶದ್ರೋಹದ (Sedition) ಕೇಸ್ ದಾಖಲಿಸಿದ್ದಾರೆ. ಕೋರ್ಟ್ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಚಿನ್ಮಯ್ ಕೃಷ್ಣದಾಸ್ ಬಂಧನಕ ಖಂಡಿಸಿ ಬಾಂಗ್ಲಾ ಹಿಂದೂಗಳು ದೊಡ್ಡಮಟ್ಟದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೊತ್ತಲ್ಲೇ ಮಹತ್ವದ ಬೆಳವಣಿಗೆ ಘಟಿಸಿದೆ. ಇಸ್ಕಾನ್ ಸಂಸ್ಥೆಯನ್ನು ನಿಷೇಧಿಸಲು ಬಾಂಗ್ಲಾ ಸರ್ಕಾರ ಚಿಂತನೆ ನಡೆಸಿದೆ. ಇಸ್ಕಾನ್ ಸಂಸ್ಥೆ ಒಂದು ಧಾರ್ಮಿಕ ಮೂಲಭೂತವಾದಿ ಸಂಘಟನೆಯಾಗಿದ್ದು, ಇದು ದೇಶಕ್ಕೆ ಅಪಾಯಕಾರಿಯಾಗಿದೆ. ಇದನ್ನು ನಿಷೇಧಿಸಿ ಎಂದು ಕೋರಿ ಢಾಕಾ ಹೈಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆ ಆಗಿದೆ. ಇದನ್ನೂ ಓದಿ: ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಮೊಹಮ್ಮದ್ ಅಸದುಜ್ಜಮಾನ್ ಕೂಡ, ಇಸ್ಕಾನ್‌ಗೆ ಧಾರ್ಮಿಕ ಮೂಲಭೂತವಾದಿ ಸಂಸ್ಥೆ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಇಸ್ಕಾನ್ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ಶುರುವಾಗಿವೆ ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು.
ಈ ವೇಳೆ ಇಸ್ಕಾನ್ ಸಂಸ್ಥೆಯ ವಿರುದ್ಧ ಸರ್ಕಾರ ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ನಾಳೆಯೊಳಗೆ ವರದಿ ನೀಡಿ ಬಾಂಗ್ಲಾ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿತು. ಬಾಂಗ್ಲಾ ದೇಶದ ನಡೆ ಅಲ್ಲಿನ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.
ಚಿನ್ಮಯ್ ಕೃಷ್ಣದಾಸ್ ಬಿಡುಗಡೆಗೆ ಆಗ್ರಹಿಸಿ ಇಸ್ಕಾನ್ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಬಾಂಗ್ಲಾ ದೇಶವನ್ನು ತಡೆಯುವಂತೆ ಒತ್ತಾಯಿಸಿ ಕೋಲ್ಕತ್ತಾದಲ್ಲಿ ಇಸ್ಕಾನ್ ಸಂಸ್ಥೆ ಪ್ರತಿಭಟನೆ ನಡೆಸಿದೆ. ಚಿನ್ಮಯ್ ಬಿಡುಗಡೆಗಾಗಿ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿದೆ.
ದೇಶದ್ರೋಹದ ಕೇಸ್ ಯಾಕೆ?
ಚಿತ್ತಗಾಂಗ್‌ನಲ್ಲಿ ವ್ಯಾಪಾರಿ ಓಸ್ಮಾನ್ ಆಲಿ ಎಂಬಾತ ಇಸ್ಕಾನ್ ನಿಷೇಧಿಸಿ ಎಂದು ಪೋಸ್ಟ್ ಹಾಕಿದ್ದ.ಇದಕ್ಕೆ ಇಸ್ಕಾನ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂಗಡಿ ಮುಂದೆ ನಡೆಯುತ್ತಿದ್ದ ಪ್ರತಿಭಟನೆ ಘರ್ಷಣೆಗೆ ತಿರುಗಿದೆ. ಘರ್ಷಣೆ ವೇಳೆ ಕಲ್ಲು ತೂರಾಟ, ಜೈಶ್ರೀರಾಮ್ ಘೋಷಣೆ ವೇಳೆ ಆಸಿಡ್ ದಾಳಿಯಾಗಿದೆ. ಈ ಘರ್ಷಣೆಯಲ್ಲಿ 14 ಪೊಲೀಸರು ಗಾಯಗಳಾಗಿತ್ತು. ಆಲಿ ಅಂಗಡಿ ಧ್ವಂಸವಾಗಿತ್ತು. ಆರೋಪಿ ಓಸ್ಮಾನ್ ಆಲಿ ಸೇರಿ 82 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಚಿತ್ತಗಾಂಗ್‌ನಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಕೇಸರಿ ಧ್ವಜ ಹಾರಿಸಲಾಗಿತ್ತು. ಈ ಕಾರಣಕ್ಕೆ ಪ್ರತಿಭಟನೆಯ ಉಸ್ತುವಾರಿ ಹೊತ್ತಿದ್ದ ಇಸ್ಕಾನ್ ಸಂತ ಚಿನ್ಮಯ್ ಕೃಷ್ಣದಾಸ್ ಸೇರಿ 18 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಚಿನ್ಮಯ್ ಕೃಷ್ಣದಾಸ್ ಯಾರು?
38 ವರ್ಷದ ಕೃಷ್ಣದಾಸ್ ಬಾಂಗ್ಲಾದ ಚಿತ್ತಗಾಂಗ್ ಮೂಲದವರು. ಬಾಲ್ಯದಿಂದಲೇ ಧಾರ್ಮಿಕ ಭಾಷಣಗಳಿಗೆ ಫೇಮಸ್ ಆಗಿದ್ದ ಇವರು ಶಿಶುಭಕ್ತ ಎಂದೇ ಜನಪ್ರಿಯರಾಗಿದ್ದರು.
2007ರಿಂದ ಪುಂಡರಿಕ್ ಧಾಮ್ ಅಧ್ಯಕ್ಷ ಮತ್ತು 2016ರಿಂದ ಇಸ್ಕಾನ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೇಖ್ ಹಸೀನಾ ಪಲಾಯನದ ನಂತರ ದೇಗುಲಗಳ ಮೇಲೆ ದಾಳಿ ನಡೆದ ಬಳಿಕ ಆಗಸ್ಟ್‌ನಲ್ಲಿ ಸನಾತನ ಜಾಗರಣ ಮಂಚ್ ಹೆಸರಿನ ಸಂಘಟನೆ ರಚನೆಯಾಗಿತ್ತು. ಕೃಷ್ಣದಾಸ್ ಈ ಸಂಘಟನೆಯ ವಕ್ತಾರರಾಗಿದ್ದಾರೆ.